ಒಳ್ಳೆಯ ಸಿನಿಮಾ ಅಂದ್ರೆ ಏನ್ ಸ್ವಾಮಿ?
Team Udayavani, Aug 17, 2018, 6:00 AM IST
ಒಳ್ಳೆಯ ಸಿನಿಮಾಗಳ ಕುರಿತು ಒಬ್ಬೊಬ್ಬರಲ್ಲಿ ಒಂದೊಂದು ವ್ಯಾಖ್ಯಾನವಿರುತ್ತದೆ. ಒಳ್ಳೆಯ ಚಿತ್ರಗಳೆಂದರೆ ಸದಭಿರುಚಿಯ ಚಿತ್ರಗಳಾ? ಮನೆಮಂದಿಯಲ್ಲಾ ಕುಳಿತು ನೋಡುವಂತಹ ಸಿನಿಮಾಗಳಾ? ಪ್ರಶಸ್ತಿ ವಿಜೇತ ಚಿತ್ರಗಳಾ? ಸ್ಟಾರ್ ನಟರು ನಟಿಸಿದಂತಹ ಚಿತ್ರಗಳಾ? ಬಹಳ ಅದ್ಧೂರಿಯಾಗಿ ಮಾಡಿದ ಚಿತ್ರಗಳಾ? ಹೆಸರಾಂತ ನಿರ್ದೇಶಕರು ಮತ್ತು ತಂತ್ರಜ್ಞರು ಮಾಡಿದ ಚಿತ್ರಗಳಾ? ಸಾಕಷ್ಟು ಪ್ರಚಾರ ಪಡೆದುಕೊಂಡ ಚಿತ್ರಗಳಾ? ನೂರು ದಿನ ಪೂರೈಸಿದ ಚಿತ್ರಗಳಾ? ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವಂತಹ ಚಿತ್ರಗಳಾ? ಜನರಿಗೆ ಇಷ್ಟವಾಗುವಂತಹ ಸಿನಿಮಾಗಳಾ? ಬೇರೆ ಭಾಷೆಗಳಿಗೆ ಪೈಪೋಟಿ ಕೊಡುವಂತಹ ಚಿತ್ರಗಳಾ? …
ಹಿರಿಯ ನಿರ್ದೇಶಕರೊಬ್ಬರು ಇತ್ತೀಚೆಗೆ ಹೇಳುತ್ತಿದ್ದರು. “ಇವತ್ತು ಚಿತ್ರರಂಗದ ಪರಿಸ್ಥಿತಿ ಸಾಕಷ್ಟು ಹದಗೆಟ್ಟಿದೆ. ಇವೆಲ್ಲಾ ಸರಿ ಹೋಗಬೇಕು ಎಂದರೆ ಒಂದೇ ಪರಿಹಾರ. ಒಳ್ಳೆಯ ಸಿನಿಮಾಗಳು ಬರಬೇಕು. ಆಗಷ್ಟೇ ಚಿತ್ರರಂಗ ಉಜ್ವಲವಾಗಿ ಬೆಳೆಯುವುದಕ್ಕೆ ಸಾಧ್ಯ’ ಎನ್ನುತ್ತಿದ್ದರು ಹಿರಿಯರು.
ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಒಳ್ಳೆಯ ಸಿನಿಮಾಗಳು ಬರಬೇಕು, ಎಲ್ಲರೂ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು ಎಂಬ ಮಾತು ಸರಿ. ಆದರೆ, ಈ ಒಳ್ಳೆಯ ಸಿನಿಮಾಗಳನ್ನ ಮಾಡೋದು ಹೇಗೆ? ಇಂಥದ್ದೊಂದು ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಅಷ್ಟೇ ಅಲ್ಲ, ಒಳ್ಳೆಯ ಚಿತ್ರಗಳು ಎಂದರೆ ಏನು? ಈ ಪ್ರಶ್ನೆ ಯಾಕೆಂದರೆ, ಒಳ್ಳೆಯ ಚಿತ್ರಗಳ ಕುರಿತು ಹಲವಾರು ವ್ಯಾಖ್ಯಾನಗಳಿವೆ. ಒಳ್ಳೆಯ ಸಿನಿಮಾಗಳ ಕುರಿತು ಒಬ್ಬೊಬ್ಬರಲ್ಲಿ ಒಂದೊಂದು ವ್ಯಾಖ್ಯಾನವಿರುತ್ತದೆ. ಒಳ್ಳೆಯ ಚಿತ್ರಗಳೆಂದರೆ ಸದಭಿರುಚಿಯ ಚಿತ್ರಗಳಾ? ಮನೆಮಂದಿಯಲ್ಲಾ ಕುಳಿತು ನೋಡುವಂತಹ ಸಿನಿಮಾಗಳಾ? ಪ್ರಶಸ್ತಿ ವಿಜೇತ ಚಿತ್ರಗಳಾ? ಸ್ಟಾರ್ ನಟರು ನಟಿಸಿದಂತಹ ಚಿತ್ರಗಳಾ? ಬಹಳ ಅದ್ಧೂರಿಯಾಗಿ ಮಾಡಿದ ಚಿತ್ರಗಳಾ? ಹೆಸರಾಂತ ನಿರ್ದೇಶಕರು ಮತ್ತು ತಂತ್ರಜ್ಞರು ಮಾಡಿದ ಚಿತ್ರಗಳಾ? ಸಾಕಷ್ಟು ಪ್ರಚಾರ ಪಡೆದುಕೊಂಡ ಚಿತ್ರಗಳಾ? ನೂರು ದಿನ ಪೂರೈಸಿದ ಚಿತ್ರಗಳಾ? ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವಂತಹ ಚಿತ್ರಗಳಾ? ಜನರಿಗೆ ಇಷ್ಟವಾಗುವಂತಹ ಸಿನಿಮಾಗಳಾ? ಬೇರೆ ಭಾಷೆಗಳಿಗೆ ಪೈಪೋಟಿ ಕೊಡುವಂತಹ ಚಿತ್ರಗಳಾ? … ಇಷ್ಟರಲ್ಲಿ ಯಾವುದು ಒಳ್ಳೆಯ ಚಿತ್ರಗಳು ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕುವುದಿಲ್ಲ. ಆದರೆ, ಎಲ್ಲದ್ದಕ್ಕೂ ಒಂದೇ ಉತ್ತರ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ ಎಂಬುದು.
ಸಾಮಾನ್ಯವಾಗಿ ಎಲ್ಲರಲ್ಲೂ ಒಂದು ಬೇಸರ ಇದ್ದೇ ಇರುತ್ತದೆ. ಪರಭಾಷೆಗಳಲ್ಲಿ ಒಳ್ಳೊಳ್ಳೆಯ ಚಿತ್ರಗಳು ಬರುತ್ತಿವೆ. ಆದರೆ, ಕನ್ನಡದಲ್ಲಿ ಮಾತ್ರ ಬರುತ್ತಿಲ್ಲ ಎಂಬ ಬೇಸರ ಸಾಮಾನ್ಯವಾಗಿ ಕಾಣಬಹುದು. ಸರಿ, ಆ ಒಳ್ಳೆಯ ಚಿತ್ರಗಳು ಯಾವುವು ಎಂದರೆ ಒಂದಿಷ್ಟು ಜನಪ್ರಿಯ ಮತ್ತು ಯಶಸ್ವಿ ಚಿತ್ರಗಳ ಹೆಸರುಗಳು ಕೇಳಿ ಬರುತ್ತವೆ. ಆ ಎಲ್ಲಾ ಚಿತ್ರಗಳಲ್ಲಿ ಜನರಿಗೆ ಇಷ್ಟವಾಗುವ ಅಂಶಗಳು ಇದ್ದಿದ್ದರಿಂದಲೇ ಗೆದ್ದಿದ್ದು ಎನ್ನುವುದು ಹೌದು. ಆದರೆ, ಅದರ ಸುತ್ತ ಇನ್ನೂ ಒಂದಿಷ್ಟು ಒಳ್ಳೆಯ ಚಿತ್ರಗಳು ಬಿಡುಗಡೆಯಾಗಿರುತ್ತವೆ.
ಅದಕ್ಕೆ ಸಿಗಬೇಕಾದ ಜನಮನ್ನಣೆಯಾಗಲೀ, ಯಶಸ್ಸಾಗಲೀ, ಜನಪ್ರಿಯತೆಯಾಗಲೀ ಸಿಕ್ಕಿರುವುದಿಲ್ಲ. ಆದರೆ, ಜನರ ಉದಾಹರಣೆಯಲ್ಲಿ ಆ ಚಿತ್ರಗಳು ಸಿಕ್ಕುವುದೇ ಇಲ್ಲ. ಆ ಚಿತ್ರಗಳನ್ನು ಇಷ್ಟಪಟ್ಟರೂ ಅವೆಲ್ಲೋ ಮರೆಯಾಗುತ್ತವೆ ಅಥವಾ ಅದೊಂದು ಒಳ್ಳೆಯ ಚಿತ್ರ ಎಂಬ ಹಣೆಪಟ್ಟಿ ಹೊರುವುದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಇದು ಕನ್ನಡದಲ್ಲಿ ಮಾತ್ರವಲ್ಲ, ಎಲ್ಲಾ ಭಾಷೆಗಳಲ್ಲೂ ಇರುವ ಸಮಸ್ಯೆ.
ಕನ್ನಡದ ವಿಷಯವಾಗಿ ಮಾತನಾಡಿದರೆ, ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳೇ ಬರುವುದಿಲ್ಲವಾ ಅಥವಾ ಕನ್ನಡದಲ್ಲಿ ಒಂದೊಳ್ಳೆಯ ಸಿನಿಮಾ ಬಂದು ಯಾವ ಕಾಲವಾಯಿತು ಎಂಬ ಪ್ರಶ್ನೆಗೆ, ಬೇಸರಕ್ಕೆ ಹಲವು ಉತ್ತರಗಳು ಸಿಗುತ್ತವೆ. ಈ ವರ್ಷವೇ ತೆಗೆದುಕೊಂಡರೆ, ಹಲವು ಚಿತ್ರಗಳನ್ನು ಉದಾಹರಿಸಬಹುದು. “ಕಥೆಯೊಂದು ಶುರುವಾಗಿದೆ’, “ಸಂಕಷ್ಟಕರ ಗಣಪತಿ’, “ಆ ಕರಾಳ ರಾತ್ರಿ’, “ಗುಳುr’, “ಕೃಷ್ಣ ತುಳಸಿ’, “ಇದೀಗ ಬಂದ ಸುದ್ದಿ’, “ಸಾವಿತ್ರಿ ಬಾಯಿ ಫುಲೆ’ ಸೇರಿದಂತೆ ಕೆಲವು ಚಿತ್ರಗಳು ಜನರಿಂದ ಮತ್ತು ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತಪಡೆದಿವೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಚಿತ್ರಗಳ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದಬರುತ್ತಿದೆ. ಆದರೆ, ಈ ಚಿತ್ರಗಳಲ್ಲಿ ಯಾವುದೇ ದೊಡ್ಡ ಸ್ಟಾರ್‌ಗಳಿರಲಿಲ್ಲ. ಇನ್ನು ಈ ಚಿತ್ರಗಳು 50 ಅಥವಾ 100 ದಿನಗಳನ್ನು ಪೂರೈಸಲಿಲ್ಲ ಮತ್ತು ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿಲ್ಲ. ಅಷ್ಟೆಲ್ಲಾ ಯಾಕೆ? ಈ ಚಿತ್ರಗಳಿಗೆ ಸರಿಯಾಗಿ ಚಿತ್ರಮಂದಿರಗಳು ಸಹ ಸಿಗಲಿಲ್ಲ. ಹಾಗಂತ ಇವೆಲ್ಲಾ ಕೆಟ್ಟ ಚಿತ್ರಗಳಾ? ಖಂಡಿತಾ ಅಲ್ಲ. ಆದರೆ, ಈ ಚಿತ್ರಗಳಿಗೆಲ್ಲಾ ಸಿಗಬೇಕಾದ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂಬುದಷ್ಟೇ ಸತ್ಯ.
ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರುವುದಿಲ್ಲ ಎಂದು ಕೊರಗುವವರು, ಯಾಕೆ ಈ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಲಿಲ್ಲ ಎಂಬ ಪ್ರಶ್ನೆ ಕೇಳುವುದು ಸುಲಭ. ಆದರೆ, ಇದಕ್ಕೆ ಖಂಡಿತಾ ಉತ್ತರ ಸಿಕ್ಕುವುದಿಲ್ಲ. ಏಕೆಂದರೆ, ಸಿನಿಮಾ ಎನ್ನುವುದು ಅವರವರ ವೈಯಕ್ತಿಕ ಅಭಿಪ್ರಾಯ. ಯಾವ ಸಿನಿಮಾ ನೋಡಬೇಕು ಎಂಬುದನ್ನು ತೀರ್ಮಾನಿಸುವುದು ಜನ. ಹಾಗಂತ ಒಳ್ಳೆಯ ಸಿನಿಮಾಗಳೇ ಬರುತ್ತಿಲ್ಲ ಎಂದು ಸಾರಾಸಗಟಾಗಿ ತೀರ್ಮಾನಕ್ಕೆ ಬರುವುದು ತಪ್ಪು. ಯಾವುದೇ ಚಿತ್ರರಂಗವೇ ಆಗಲಿ, ಎಲ್ಲಾ ಕಾಲಕ್ಕೂ ಒಳ್ಳೆಯ, ಕೆಟ್ಟ ಚಿತ್ರಗಳು ಬರುತ್ತಲೇ ಇರುತ್ತವೆ. ಆಗಲೂ ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿದ್ದವು, ಈಗಲೂ ಬರುತ್ತಿವೆ. ಆದರೆ, ಹಲವು ಚಿತ್ರಗಳು ಒಂದೇ ವಾರದಲ್ಲಿ ಬಿಡುಗಡೆಯಾಗುತ್ತಿರವುದರಿಂದಲೋ, ಪ್ರಚಾರದ ಕೊರತೆಯೋ ಅಥವಾ ಇನ್ನಾವ ಕಾರಣಕ್ಕೋ, ಒಟ್ಟಿನಲ್ಲಿ ಜನರ ಮನಸ್ಸಿನಲ್ಲಿ ನಿಲ್ಲುತ್ತಿಲ್ಲ.
ಎಷ್ಟೋ ಚಿತ್ರಗಳಲ್ಲಿ ಹಲವು ಒಳ್ಳೆಯ ಅಂಶಗಳಿರುತ್ತವೆ. ಆದರೆ, ಆ ಒಳ್ಳೆಯ ಅಂಶಗಳನ್ನು ತೆರೆಯ ಮೇಲೆ ತೋರಿಸುವಲ್ಲಿ ಚಿತ್ರತಂಡದವರು ಎಡವಿರುತ್ತಾರೆ. ಇನ್ನು ಕೆಲವು ಎಲ್ಲಾ ರೀತಿಯಲ್ಲೂ ಒಳ್ಳೆಯ ಚಿತ್ರಗಳಾಗುತ್ತವೆ. ಆದರೆ, ಅದು ಅಂತಿಮವಾಗಿ ಪ್ರೇಕ್ಷಕರನ್ನು ಮುಟ್ಟುವುದಕ್ಕೆ ವಿಫಲವಾಗಿರುತ್ತದೆ. ಒಂದು ಚಿತ್ರ ಜನರ ಮನಸ್ಸಿಗೆ ಹಿಡಿಸಿರಬಹುದು. ಆದರೆ, ಅದು ಇನ್ನಷ್ಟು ಜನರಿಗೆ ತಲುಪುವುದಕ್ಕೆ ಸಮಯ ಬೇಕಾಗಬಹುದು. ಹಲವು ಚಿತ್ರಗಳ ಬಿಡುಗಡೆ ಇರುವುದರಿಂದ, ಚಿತ್ರಮಂದಿರಗಳು ಸಿಗದಿರಬಹುದು. ಚಿತ್ರಗಳ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಬಹುದು. ಇದೆಲ್ಲದರಿಂದ ಒಳ್ಳೆಯ ಚಿತ್ರಗಳು ಸಹ ಚಿತ್ರಮಂದಿರಗಳಿಂದ ಮಾಯವಾಗಬಹುದು. ಹಾಗಂತ ಅದು ಒಳ್ಳೆಯ ಚಿತ್ರವಲ್ಲ ಎಂದರ್ಥವಲ್ಲ. ಜನರಿಗೆ ತಲುಪಲಿಲ್ಲ ಎಂದಷ್ಟೇ ಅರ್ಥ. ಒಂದು ಚಿತ್ರ ಚೆನ್ನಾಗಿರುವುದು ಬೇರೆ, ಅದರ ಯಶಸ್ಸು, ಜನಪ್ರಿಯತೆ ಬೇರೆ. ಜನರ ಮನಸ್ಸಿಗೆ ಇಷ್ಟವಾಗುವ ಚಿತ್ರಗಳು ಯಶಸ್ವಿಯಾಗಬೇಗಬೇಕು, ನೂರು ದಿನ ಓಡಬೇಕು, ಅದನ್ನೆಲ್ಲರೂ ನೋಡಬೇಕು ಎಂಬ ಯಾವುದೇ ನಿಯಮವಿಲ್ಲ. ಹಾಗಾಗಿ ಒಂದೊಳ್ಳೆಯ ಚಿತ್ರಕ್ಕೂ, ಅದರ ಬಿಝಿನೆಸ್ಸಿಗೂ, ಪ್ರದರ್ಶನಕ್ಕೂ ಸಂಬಂಧವೇ ಇಲ್ಲ. ಇದೆಲ್ಲಾ ಕಾರಣಗಳಿಂದ ಒಂದು ಚಿತ್ರ ಒಳ್ಳೆಯ ಚಿತ್ರವಾಗಿ ಪರಿಗಣನೆಯಾದರೂ, ಅದು ಎಷ್ಟೋ ಜನರಿಗೆ ಮುಟ್ಟುವುದಿಲ್ಲ. ಹಾಗಂತ ಒಳ್ಳೆಯ ಚಿತ್ರಗಳು ಬರುತ್ತಿಲ್ಲ, ಚಿತ್ರರಂಗದ ಪರಿಸ್ಥಿತಿ ಹದೆಗೆಟ್ಟಿದೆ ಎಂಬುದು ತಪ್ಪಾಗುತ್ತದೆ.
ಇಷ್ಟಕ್ಕೂ ಒಳ್ಳೆಯ ಚಿತ್ರ ಮಾಡುವುದು ಹೇಗೆ?
ಡಾ. ವಿಷ್ಣುವರ್ಧನ್ ಅವರು ಹಿಂದೊಮ್ಮೆ ಹೇಳಿದ ಮಾತು ನೆನಪಾಗುತ್ತದೆ. “ಒಂದೊಳ್ಳೆಯ ಚಿತ್ರ ಮಾಡುವುದು ಎನ್ನುವುದೆಲ್ಲಾ ಸುಳ್ಳು. ಒಳ್ಳೆಯ ಚಿತ್ರ ಮಾಡುವುದಕ್ಕಾಗುವುದಿಲ್ಲ. ಒಂದು ಚಿತ್ರ ಮಾಡಬಹುದು ಅಷ್ಟೇ. ಅದು ಒಳ್ಳೆಯದಾಗುವುದು, ಕೆಟ್ಟದಾಗುವುದು ನಮ್ಮ ಕೈಯಲ್ಲಿ ಇರುವುದಿಲ್ಲ’ ಎಂದು ವಿಷ್ಣುವರ್ಧನ್ ಅವರು ಹೇಳುತ್ತಿದ್ದರು. ಅದೇ ಸತ್ಯ. ಅದೇ ನಿತ್ಯ.
ಚೇತನ್ ನಾಡಿಗೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kollegala: ಮರಳೆಕಾಯಿ ತಿಂದು ವಾಂತಿ-ಭೇದಿ; 13 ಜನರು ಆಸ್ಪತ್ರೆಗೆ ದಾಖಲು
Max Movie: ಅಂತೂ ಬಂದೇ ಬಿಡ್ತು ʼಮ್ಯಾಕ್ಸ್ʼ ರಿಲೀಸ್ ಡೇಟ್.. ಫ್ಯಾನ್ಸ್ ಖುಷ್
Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್
Simple Life: ಬದುಕು ನಿರಾಡಂಬರವಾಗಿರಲಿ
Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.