ಭೂತಕಾಲಕ್ಕೆ ರಿವೈಂಡ್ ಆದಾಗ…
Team Udayavani, Dec 15, 2017, 11:25 AM IST
ಈಗಂತೂ ಕನ್ನಡ ಚಿತ್ರರಂಗದಲ್ಲಿ ಹೊಸಬರದ್ದೇ ಕಾರುಬಾರು. ಅದರಲ್ಲೂ ಹೊಸ ಬಗೆಯ ಕಥೆಯೊಂದಿಗೆ ಒಂದಷ್ಟು ಗಮನಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆ ಸಾಲಿಗೆ “ಟೋರ ಟೋರ’ ಸಿನಿಮಾವೂ ಒಂದು. ಈ ಚಿತ್ರ ಇದೀಗ ಡಿ.22ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಗಾಂಧಿನಗರದ ರೆಗ್ಯುಲರ್ ಪ್ಯಾಟರ್ನ್ ಬಿಟ್ಟು ಸಿನಿಮಾ ಮಾಡಿರುವ ಖುಷಿಯಲ್ಲಿ ಹೊಸಬರಿದ್ದಾರೆ. ಹರ್ಷ್ ಗೌಡ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಜೊತೆಗೆ ನಿರ್ಮಾಣ ಕೂಡಾ ಇವರದೇ. ತಮ್ಮ ತಂಡದೊಂದಿಗೆ ಚಿತ್ರದ ಬಗ್ಗೆ ಹೇಳಲೆಂದೇ ಪತ್ರಕರ್ತರ ಮುಂದೆ ಆಗಮಿಸಿದ್ದರು ಹರ್ಷ್ ಗೌಡ.
“ಇದೊಂದು ಟೈಮ್ ಮೆಷಿನ್ ಕುರಿತ ಸಿನಿಮಾ. ಈ ಕಾನ್ಸೆಪ್ಟ್ ಕನ್ನಡಕ್ಕೆ ಹೊಸದು. ಕನ್ನಡಕ್ಕೆ ಹೊಸದಾದ ಈ ಕಾನ್ಸೆಪ್ಟ್ ಅನ್ನು ಜನರು ಸ್ವೀಕರಿಸುತ್ತಾರೆಂಬ ವಿಶ್ವಾಸವೂ ನನಗಿದೆ. ಕನ್ನಡದವರು ಹೊಸ ಕಾನ್ಸೆಪ್ಟ್ ಅನ್ನು ಯಾವತ್ತೂ ಕೈ ಬಿಟ್ಟಿಲ್ಲ. ಹಾಗಾಗಿ, ನಮಗೆ ಸಿನಿಮಾ ಮೇಲೆ ವಿಶ್ವಾಸವಿದೆ’ ಎನ್ನುತ್ತಾರೆ ಹರ್ಷ್ ಗೌಡ. “ಟೈಮ್ ಮೆಷಿನ್ ಕಾನ್ಸೆಪ್ಟ್ ಬಗ್ಗೆ ಹೇಳುವುದಾದರೆ, “ಇದೊಂದು ಕಾಲ್ಪನಿಕ ಕಥೆ. ಟೈಮ್ ಮೆಷೀನ್ ಮೂಲಕ ನಮ್ಮ ಭೂತಕಾಲವನ್ನು ರಿವೈಂಡ್ ಮಾಡಿ ನೋಡಬಹುದು. ಭೂತಕಾಲಕ್ಕೆ ಹೋಗುವಾಗ ಏನೆಲ್ಲಾ ಆಗುತ್ತದೆ ಎಂಬ ಅಂಶದೊಂದಿಗೆ ಇಡೀ ಸಿನಿಮಾ ಸಾಗುತ್ತದೆ. ಪ್ರೇಕ್ಷಕರು ತಾಳ್ಮೆಯಿಂದ ನೋಡಿದರೆ ಈ ಸಿನಿಮಾ ಖಂಡಿತಾ ಇಷ್ಟವಾಗುತ್ತದೆ ಎನ್ನುತ್ತಾರೆ ಅವರು, ಈಗಿನ ಯೂತ್ಸ್ಗೆ ಬೇಕಾದ ಅಂಶಗಳು ಚಿತ್ರದಲ್ಲಿವೆ. ಇನ್ನು, ಇಲ್ಲಿ ಅಶ್ಲೀಲತೆಯಾಗಲಿ, ಡಬಲ್ ಮೀನಿಂಗ್ ಸಂಭಾಷಣೆಗಳಾಗಲೀ ಇಲ್ಲ’ ಎಂಬುದು ಅವರ ಮಾತು.
ಸಿದ್ದು ಮೂಲೀಮನಿ ಅವರಿಗೆ ಈ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಈಗಾಗಲೇ ಧ್ರುವ ಸರ್ಜಾ, ಯೋಗಿ ಅವರು ಟ್ರೇಲರ್ ನೋಡಿ ಮೆಚ್ಚುಗೆ ಪಟ್ಟಿರುವುದರಿಂದ ಸಹಜವಾಗಿ ಅವರಿಗೂ ಖುಷಿಯಾಗಿದೆಯಂತೆ. ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ವಿಶೇಷತೆ ಹೊಂದಿದೆ. ಇದು ರೆಗ್ಯುಲರ್ ಪ್ಯಾಟರ್ನ್ ಸಿನಿಮಾವಲ್ಲ. ಇಡೀ ಸ್ಕ್ರಿಪ್ಟ್ ಅನ್ನು ನಿರ್ದೇಶಕ ಹರ್ಷ್ ಬೇರೆ ರೀತಿಯೇ ಮಾಡಿಕೊಂಡಿದ್ದು, ಫನ್ನಿಯಾಗಿ ಸಿನಿಮಾ ಸಾಗುತ್ತದೆ. ಹರ್ಷ್ ಅವರು ಕಲಾವಿದರಿಗೆ ಸಂಪೂರ್ಣ ಸ್ವತಂತ್ರ ಕೊಟ್ಟಿದ್ದರಿಂದ ಪಾತ್ರ ಕೂಡಾ ಚೆನ್ನಾಗಿ ಮೂಡಿಬಂದಿದೆ ಎಂಬುದು ಸಿದ್ದು ಮಾತು. ಉಳಿದಂತೆ ಚಿತ್ರದಲ್ಲಿ ನಟಿಸಿರುವ ಸನಿಹ ಅವರಿಗೆ ಇದು ಮೊದಲ ಸಿನಿಮಾವಂತೆ. ಈ ಹಿಂದೆ ಅವರು ನಟಿಸಿದ “ವುಮೆನ್ಸ್ ಡೇ’ ಚಿತ್ರ ಬಿಡುಗಡೆಯಾಗಿದೆ. ಅವರಿಗಿಲ್ಲಿ ಸಾಕಷ್ಟು ಕಲಿಯಲು ಸಾಧ್ಯವಾಗಿದೆಯಂತೆ. ಇನ್ನು ಪೂಜಾ ರಾಜು ಅವರಿಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿ ನಟಿಸಿದ್ದಾರೆ. ಚಿತ್ರ ಮನರಂಜನೆಯ ಜತೆಯಲ್ಲಿ ಒಳ್ಳೆಯ ಸಂದೇಶ ಕೊಡಲಿದೆ ಅಂದರು ಪೂಜಾ. ರಾಮಮೂರ್ತಿ, ಸನತ್, ಮಂಜು ಹೆದ್ದೂರು, ಅನಿರುದ್ಧ ಎಲ್ಲರೂ ಮಾತನಾಡಿದರು. ಚಿತ್ರಕ್ಕೆ ಸಿದ್ಧಾರ್ಥ್ ಕಾಮತ್ ಸಂಗೀತ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.