ಸಂಜಯ್ ದತ್ ಬ್ರೇಕ್ ಕೆಜಿಎಫ್-2 ಮೇಲೆ ಪರಿಣಾಮ ಬೀರುತ್ತಾ?
Team Udayavani, Aug 14, 2020, 4:02 PM IST
ಇತ್ತೀಚೆಗಷ್ಟೇ “ಕೆಜಿಎಫ್-2′ ಚಿತ್ರತಂಡ, ನಟ ಸಂಜಯ್ ದತ್ ಅವರ ಜನ್ಮದಿನದ ಪ್ರಯುಕ್ತ ಅವರ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿತ್ತು. ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದ, ಸಂಜಯ್ ದತ್ ಅವರ ಅಧೀರ ಪಾತ್ರದ ಫಸ್ಟ್‌ಲುಕ್ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ, ಎಲ್ಲೆಡೆ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಕೂಡ ಪ್ರೇಕ್ಷಕರು, ಸಂಜಯ್ ದತ್ ಗೆಟಪ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇನ್ನು ಕನ್ನಡದ ತಮ್ಮ ಮೊದಲ ಚಿತ್ರದ ಬಗ್ಗೆ ಸಂಜಯ್ ದತ್ ಕೂಡ ಸಾಕಷ್ಟು ನಿರೀಕ್ಷೆಯನ್ನು ಹೊರಹಾಕಿದ್ದರು. ಅಲ್ಲದೆ “ಬರ್ತ್‌ಡೇ ವೇಳೆ ಇದಕ್ಕಿಂತ ಒಳ್ಳೆಯ ಗಿಫ್ಟ್ ನಿರೀಕ್ಷಿಸುವಂತಿಲ್ಲ’ ಎಂದಿದ್ದರು.
ಇನ್ನು “ಕೆಜಿಎಫ್-2′ ಚಿತ್ರದಲ್ಲಿ ಸಂಜಯ್ ದತ್ ಅವರ ಭಾಗದ ಚಿತ್ರೀಕರಣ ಇನ್ನೂ ಸ್ವಲ್ಪ ಬಾಕಿಯಿದೆ ಎನ್ನುವಾಗಲೇ, ಅವರ ಆರೋಗ್ಯದ ಕುರಿತು ಸುದ್ದಿಯೊಂದು ಹೊರಬಿದ್ದಿದೆ. ಸಂಜಯ್ ದತ್ ಶ್ವಾಸಕೋಶ ಸಂಬಂಧಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಸದ್ಯ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ.
ಇದರಿಂದ ಸಂಜಯ್ ದತ್ ಕೂಡ ಕೆಲ ಸಮಯ ಚಿತ್ರರಂಗದ ಚಟುವಟಿಕೆಗಳಿಂದ ದೂರವಿದ್ದು, ಚಿಕಿತ್ಸೆ ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಹೀಗಾಗಿ ಇನ್ನೂ ಕೆಲ ತಿಂಗಳು ಸಂಜಯ್ ದತ್ ಸಿನಿಮಾಗಳಿಂದ ದೂರವಿರಲಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆಯೇ ಸಂಜಯ್ ದತ್ ಅನಾರೋಗ್ಯ “ಕೆಜಿಎಫ್-2′ ಚಿತ್ರದ ಮೇಲೂ ಏನಾದರೂ, ಅಡ್ಡ ಪರಿಣಾಮ ಬೀರಲಿದೆಯ ಎನ್ನುವ ಮಾತುಗಳು ಸ್ಯಾಂಡಲ್‌ವುಡ್‌ನಲ್ಲಿ ಕೇಳಿಬರುತ್ತಿದೆ. ಚಿತ್ರತಂಡದ ಮೂಲಗಳ ಪ್ರಕಾರ ಇನ್ನೂ ಕೆಲ ದಿನಗಳ ಕಾಲ ಸಂಜಯ್ ದತ್ ಅವರ ಪಾತ್ರದ ಚಿತ್ರೀಕರಣ ಬಾಕಿಯಿರುವುದರಿಂದ, ಅವರ ಲಭ್ಯತೆ ಇಲ್ಲದಿದ್ದರೆ ಅನಿವಾರ್ಯವಾಗಿ ಚಿತ್ರೀಕರಣವನ್ನು ಮುಂದೂಡಬೇಕಾಗುತ್ತದೆ ಅಥವಾ ಬೇರೆ ಮಾರ್ಗಗಳನ್ನು ಚಿತ್ರತಂಡ ಹುಡುಕಿಕೊಳ್ಳಬೇಕಾಗುತ್ತದೆ. ಈಗಾಗಲೇ ಕೋವಿಡ್ ಲಾಕ್‌ಡೌನ್ ಮತ್ತಿತರ ಕಾರಣಗಳಿಂದ “ಕೆಜಿಎಫ್-2′ ಚಿತ್ರದ ಚಿತ್ರೀಕರಣ ಕೆಲ ಕಾಲ ಮುಂದೂಡಲಾಗಿದ್ದು, ಈ ವರ್ಷದ ಅಕ್ಟೋಬರ್ ವೇಳೆಗೆ ತೆರೆಕಾಣಬೇಕಾಗಿದ್ದ “ಕೆಜಿಎಫ್-2′ ನಿಗದಿತ ವೇಳೆಯಲ್ಲಿ ತೆರೆಗೆ ಬರಲಿದೆಯೇ ಎಂಬ ಅನುಮಾನ ಅನೇಕರನ್ನು ಕಾಡುತ್ತಿದೆ.
ಒಟ್ಟಾರೆ, ಅಧೀರನಾಗಿ ಸಂಜಯ್ ದತ್ ಕನ್ನಡ ಚಿತ್ರದಲ್ಲಿ ಎಂಟ್ರಿ ಕೊಡಲಿದ್ದಾರೆ ಎಂಬ ಖುಷಿಯಲ್ಲಿದ್ದ ಕನ್ನಡ ಪ್ರೇಕ್ಷಕರಿಗೆ ಇಂಥದ್ದೊಂದು ಸುದ್ದಿ ಬೇಸರವಾಗಿರುವುದಂತೂ ನಿಜ.
-ಜಿ.ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.