ವಿಲನ್‌ ಅನೂಪ್‌ ಈಗ ಹೀರೋ

Team Udayavani, Sep 28, 2018, 6:00 AM IST

d-25.jpg

“ಉದ್ಘರ್ಷ’ ಎಂಬ ಚಿತ್ರವನ್ನು ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರವು ಇದೀಗ ಮುಕ್ತಾಯದ ಹಂತಕ್ಕೆ ಬಂದಿದ್ದು, ಇನ್ನು ಕೆಲವು ದಿನಗಳ ಪ್ಯಾಚ್‌ವರ್ಕ್‌ ಇದೆಯಂತೆ. ಪ್ಯಾಚ್‌ವರ್ಕ್‌ ಚಿತ್ರೀಕರಣಕ್ಕೆ ಅಣಿಯಾಗುತ್ತಲೇ, ಇತ್ತೀಚೆಗೆ ತಮ್ಮ ತಂಡದ ಜೊತೆಗೆ ಮಾಧ್ಯಮದವರೆದುರು ಬಂದರು ದೇಸಾಯಿ.

ಅಂದು ನಾಯಕ ಅನೂಪ್‌ ಸಿಂಗ್‌ ಠಾಕೂರ್‌, ನಿರ್ಮಾಪಕ ದೇವರಾಜ್‌ ಮತ್ತು ಸಂಗೀತ ನಿರ್ದೇಶಕ ಸಂಜಯ್‌ ಚೌಧರಿ ಅವರನ್ನು ಪರಿಚಯಿಸುವುದು ದೇಸಾಯಿ ಅವರ ಉದ್ದೇಶವಾಗಿತ್ತು. ಈ ಮೂವರಲ್ಲಿ ಸಂಜಯ್‌ ಚೌಧರಿ ಕಾರಣಾಂತರ‌ಗಳಿಂದ ಬಂದಿರಲಿಲ್ಲ. ಇನ್ನು ನಾಯಕ ಮತ್ತು ನಿರ್ಮಾಪಕರ ಜೊತೆಗೆ ಮಾತಿಗೆ ನಿಂತರು ದೇಸಾಯಿ. ಅನೂಪ್‌ ಸಿಂಗ್‌ ಠಾಕೂರ್‌ ಅವರನ್ನು ದೇಸಾಯಿ ಮೊದಲು ನೋಡಿದ್ದು “ರೋಗ್‌’ ಚಿತ್ರದ ಸಮಾರಂಭವೊಂದರಲ್ಲಿ. ಆ ಚಿತ್ರದಲ್ಲಿ ವಿಲನ್‌ ಆಗಿದ್ದರು ಅನೂಪ್‌. ಇನ್ನು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು ದೇಸಾಯಿ. ಈ ಸಂದರ್ಭದಲ್ಲಿ ಇಬ್ಬರ ಮುಖಾಮುಖೀಯಾಗಿದೆ. ಅಷ್ಟರಲ್ಲಾಗಲೇ “ಉದ್ಘರ್ಷ’ ಚಿತ್ರದ ನಾಯಕನ ಹುಡುಕಾಟದಲ್ಲಿದ್ದ ದೇಸಾಯಿ. ಅವರಿಗೆ, ಈ ಪಾತ್ರಕ್ಕೆ ಅನೂಪ್‌ ಸೂಕ್ತ ಎಂದೆನಿಸಿ ಆಫ‌ರ್‌ ಕೊಟ್ಟಿದ್ದಾರೆ.

ಅಂದು ತಮ್ಮ ನಾಯಕನನ್ನು ಸಾಕಷ್ಟು ಹೊಗಳಿದರು ದೇಸಾಯಿ. “ಅನೂಪ್‌ ಬಹಳ ಚೆನ್ನಾಗಿ ತಮ್ಮ ಪಾತ್ರ ಮಾಡಿದ್ದಾರೆ. ನಾನು ಅವರಿಂದೇನು ನಿರೀಕ್ಷೆ ಮಾಡಿದ್ದೆನೋ, ಅದಕ್ಕಿಂತ ಒಂದು ತೂಕ ಚೆನ್ನಾಗಿ ಮಾಡಿದ್ದಾರೆ. ತುಂಬಾ ಡೆಡಿಕೇಟೆಡ್‌ ಅವರು. ತುಂಬಾ ಪ್ರೀತಿಯಿಂದ ಕೆಲಸ ಮಾಡಿ¨ªಾರೆ. ಒಂದು ದಿನವೂ ಡ್ನೂಪ್‌ ಹಾಕುತ್ತಿರಲಿಲ್ಲ. ರಿಸ್ಕ್ ಇದ್ದರೂ ಒಪ್ಪುತ್ತಿರಲಿಲ್ಲ. ಒಂದು ದೃಶ್ಯದಲ್ಲಿ ಮರದ ಕೊಂಬೆಯ ಮೇಲೆ ನೇತಾಡುವುದಿತ್ತು. 50 ಅಡಿ ಎತ್ತರದಲ್ಲಿ ಅವರು ನೇತಾಡಬೇಕಿತ್ತು. ಈ ದೃಶ್ಯಕ್ಕೆ ಡ್ನೂಪ್‌ ಹಾಕೋಣ ಅಂದರೆ ಅವರು ಬಿಡಲಿಲ್ಲ. ತಾನೇ ಮಾಡುತ್ತೀನಿ ಅಂತ ಬಂದರು. ಬಹಳ ಎನರ್ಜೆಟಿಕ್‌ ಮನುಷ್ಯ’ ಎಂದು ಕೊಂಡಾಡಿದರು.

ಇನ್ನು “ಉದ್ಘರ್ಷ’ ಬಗ್ಗೆ ಮಾತನಾಡಿದ ಅವರು, “ಇದು “ತರ್ಕ’, “ಉತ್ಕರ್ಷ’ ಲೆವೆಲ್ಲಿನ ಸಿನಿಮಾ. ಆ ಚಿತ್ರಗಳು ಆಗಿನ ಕಾಲಕ್ಕೆ ಏನು ಬದಲಾವಣೆ ಕೊಟ್ಟವು, ಈ ಚಿತ್ರ ಈಗಿನ ತಲೆಮಾರಿನವರಿಗೆ ಅದೇ ಅನುಭವ ಕೊಡುತ್ತದೆ ಎಂಬ ನಂಬಿಕೆ ನನಗಿದೆ. ನನ್ನ ಹಿಂದಿನ ಚಿತ್ರಗಳು ಅಂದುಕೊಂಡಂತೆ ಆಗಲಿಲ್ಲ. ಈ ಚಿತ್ರ ಅಂದುಕೊಂಡಂತೆ ಬಂದಿದೆ. ಇದೊಂದು ಒಳ್ಳೆಯ ಥ್ರಿಲ್ಲರ್‌ ಆಗುತ್ತದೆ ಎಂಬ ನಂಬಿಕೆ ನನಗಿದೆ’ ಎಂದು ದೇಸಾಯಿ ಹೇಳಿದರು. ಬರೀ ವಿಲನ್‌ ಪಾತ್ರಗಳನ್ನೇ ಮಾಡುತ್ತಿದ್ದ ಅನೂಪ್‌ಗೆ ದೇಸಾಯಿ ಅವರು ಹೀರೋ ಪಾತ್ರ ಕೊಟ್ಟಾಗ ಆಶ್ಚರ್ಯವಾಯಿತಂತೆ. “ಕಥೆ ಕೇಳಿದೆ. ಇಷ್ಟವಾಯ್ತು. ನನ್ನದು ವಿಲನ್‌ ಪಾತ್ರ ಅಂದುಕೊಂಡಿ¨ªೆ. ಚಿತ್ರದ ಹೀರೋ ಯಾರು ಅಂತ ಅವರನ್ನ ಕೇಳಿದಾಗ, ನಾನೇ ಹೀರೋ ಅಂದರು. ಅಷ್ಟೇ ಅಲ್ಲ, ಇದೇ ಲುಕ್‌ ಬೇಕಾಗಿದ್ದರಿಂದ, ಹೇರ್‌ಸ್ಟೆçಲ್‌ ಬದಲಿಸಬೇಡ ಅಂತ ಹೇಳಿದರು. ಈ ಲುಕ್‌ನಲ್ಲೇ ನಾನು ವಿಲನ್‌ ಆಗಿ ಕಾಣಿಸಿಕೊಂಡಿದ್ದೆ. ಹಾಗಾಗಿ ಇದೇ ಲುಕ್‌ನಲ್ಲಿ ಮುಂದು­ವರೆಯಬೇಕಾ ಎಂಬ ಪ್ರಶ್ನೆ ಇತ್ತು. ಆದರೆ, ದೇಸಾಯಿ ಅವರಿಗೆ ವಿಶ್ವಾಸ ಇದೆ. ಇದೊಂದು ಅಪ್ಪಟ ಸಸ್ಪೆನ್ಸ್‌ ಥ್ರಿಲ್ಲರ್‌. ಕೆಲವೇ ಗಂಟೆಗಳಲ್ಲಿ ನಡೆವ ಕಥೆ ಇದೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು.

ನಿರ್ಮಾಪಕ ದೇವರಾಜ್‌ ಹೆಚ್ಚು ಮಾತನಾಡಲಿಲ್ಲ. “ದೇಸಾಯಿ ಮನಸ್ಸಿನಲ್ಲಿರೋದು ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದಷ್ಟೇ ಹೇಳಿದರು.

ಟಾಪ್ ನ್ಯೂಸ್

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

kiran raj’s Megha movie

‌Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್‌ ರಾಜ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.