![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Nov 15, 2020, 9:31 PM IST
“ವಿಂಡೋಸೀಟ್’ – ಹೀಗೊಂದು ಸಿನಿಮಾ ಹೆಸರನ್ನು ನೀವುಕೆಲ ತಿಂಗಳುಗಳಿಂದ ಕೇಳಿರುತ್ತೀರಿ. ಈಗ ಆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುವ ಜೊತೆಗೆ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಶೀತಲ್ ಶೆಟ್ಟಿ ಈ ಸಿನಿಮಾದ ನಿರ್ದೇಶಕಿ.
ನಿರೂಪ್ ಭಂಡಾರಿ ಚಿತ್ರದಲ್ಲಿ ನಾಯಕರಾಗಿ ನಟಿಸಿದರೆ ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯಂಗಾರ್ ನಾಯಕಿಯರಾಗಿ ನಟಿಸಿದ್ದಾರೆ. ಜಾಕ್ ಮಂಜು ಈ ಚಿತ್ರದ ನಿರ್ಮಾಪಕರು. ತಮ್ಮ ಚೊಚ್ಚಲ ಸಿನಿಮಾದ ಬಗ್ಗೆ ಮಾತನಾಡುವ ಶೀತಲ್ ಶೆಟ್ಟಿ, “ತುಂಬಾ ಪ್ರೀತಿ ಇರುವಕಥೆ. ಚಿತ್ರದಲ್ಲೊಂದು ಲವ್‌ಸ್ಟೋರಿ ಇದ್ದರೂ ಅದರಾಚೆಗೆ ಒಂದು ಸಸ್ಪೆನ್ಸ್ ಸ್ಟೋರಿ ಇದೆ. ಮೊದಲ ನಿರ್ದೇಶನ ನನಗೆ ಖುಷಿ ಕೊಟ್ಟಿದೆ’ ಎನ್ನುವ ಶೀತಲ್ ಇಡೀ ತಂಡದ ಪ್ರೋತ್ಸಾಹದ ಬಗ್ಗೆ ಹೇಳಲು ಮರೆಯೋದಿಲ್ಲ. “ಕಥೆ ಮಾಡಿಕೊಂಡು ಸಾಕಷ್ಟು ನಿರ್ಮಾಪಕರನ್ನು ಭೇಟಿಯಾದೆ. ಆದರೆ, ಸಿನಿಮಾ ಮಾಡಲು ಯಾರೂ ಮುಂದೆ ಬರಲಿಲ್ಲ. ಈ ಸಂದರ್ಭದಲ್ಲಿ ಮಂಜುನಾಥ್ ಅವರು ಮುಂದೆ ಬಂದರು. ಸುದೀಪ್ ಸಾರ್‌ಕೂಡಾಕಥೆಕೇಳಿ ಇಷ್ಟಪಟ್ಟು, ಪ್ರೋತ್ಸಾಹಿಸಿದರು. ನಟ ನಿರೂಪ್ ಅವರು ಒಂದು ದೊಡ್ಡ ಹಿಟ್‌ಕೊಟ್ಟವರು. ಹಾಗಾಗಿ, ಸಣ್ಣ ಭಯವಿತ್ತು. ಆದರೆ, ಅವರು ಕೂಡಾ ಕಥೆಗೆ ತುಂಬಾ ಚೆನ್ನಾಗಿ ನ್ಯಾಯ ಒದಗಿಸಿದ್ದಾರೆ’ ಎನ್ನುವುದು ಶೀತಲ್ ಶೆಟ್ಟಿ ಮಾತು.
ಚಿತ್ರದ ಬಗ್ಗೆ ಮಾತನಾಡುವ ನಿರೂಪ್, ಶೀತಲ್‌ಶೆಟ್ಟಿ ಅವರಕಿರುಚಿತ್ರ ನೋಡಿದ್ದೆ. ಖುಷಿಯಾಯ್ತು. ಇವರು ಸಿನಿಮಾ ಮಾಡುತ್ತಾರೆ ಎನಿಸಿತು. ಹಾಗೆಯೇ ಅವರಕಥೆ ಕೇಳಿದೆ. ಹೇಳುವ ರೀತಿಯಲ್ಲೇ ಅವರು ಸಿನಿಮಾವನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಅನ್ನೋದು ಗೊತ್ತಾಯ್ತು. ಆಗಲೇ ನಿರ್ಧರಿಸಿ ಸಿನಿಮಾ ಮಾಡಿದೆ. ಒಳ್ಳೆಯಕಥೆ ಹೆಣದಿದ್ದು, ಅವರೊಂದಿಗೆ ಎಂಟು ಜನರ ಉತ್ತಮ ಬರಹಗಾರರ ತಂಡವೂ ಇದೆ. ತಾಂತ್ರಿಕ ವರ್ಗ ಕೂಡ ಪ್ರತಿಭಾವಂತ ತಂಡವಿದೆ’ ಎನ್ನುತ್ತಾರೆ. ಸದ್ಯ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಜನವರಿಯಲ್ಲಿ ತೆರೆಗೆ ಬರಲಿದೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.