ವುಮೆನ್ಸ್‌ ಡೇ ಔಟ್‌!

Team Udayavani, Jun 30, 2017, 12:05 PM IST

such6.jpg

ಪ್ರೊಡಕ್ಷನ್‌ ಮ್ಯಾನೇಜರ್‌ ಗಂಗಾಧರ್‌ ಅಲಿಯಾಸ್‌ ಗಂಗು, ಬಹಳ ದಿನಗಳಿಂದ ಒಂದು ಚಿತ್ರ ಮಾಡಬೇಕು ಅಂತ ಹೇಳುತ್ತಲೇ ಇದ್ದರಂತೆ. ಅದಕ್ಕೆ ಮುಹೂರ್ತ ಕೂಡಿ ಬಂದಿದ್ದು ಇತ್ತೀಚೆಗೆ. “ವುಮೆನ್ಸ್‌ ಡೇ’ ಎಂಬ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿರುವ ಅವರು, ಸದ್ಯದಲ್ಲೇ ಅದನ್ನು ಬಿಡುಗಡೆ ಮಾಡುವುದಕ್ಕೆ ಹೊರಟಿದ್ದಾರೆ.  ಈ ಮಧ್ಯೆ ಜನಕ್ಕೆ ಚಿತ್ರದ ಬಗ್ಗೆ ಗೊತ್ತಿರಲಿ ಎಂದು ಚಿತ್ರದ ಪ್ರೋಮೋಗಳನ್ನು ಬಿಡುಗಡೆ ಮಾಡಲಾಯಿತು.

ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಈ ಸಮಾರಂಭಕ್ಕೆ ಪ್ರೋಮೋ ಬಿಡುಗಡೆ ಮಾಡುವುದಕ್ಕೆ ನಟಿ ರಾಗಿಣಿ, ನಿರ್ಮಾಪಕರಾದ ಪತ್ತಿಕೊಂಡ ಕುಮಾರಸ್ವಾಮಿ, ಆರ್‌.ಎಸ್‌. ಗೌಡ ಮುಂತಾದವರು ಬಂದಿದ್ದರು.ಆರ್‌.ಎಸ್‌. ಗೌಡ ನಿರ್ಮಾಣದ ಎಂಟು ಚಿತ್ರಗಳಿಗೆ ಪ್ರೊಡಕ್ಷನ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿದ್ದರಂತೆ ಗಂಗು. ಆರು ತಿಂಗಳ ಹಿಂದೆ ಕಥೆ ಹೇಳಿದರಂತೆ. ಗೌಡರು ಕಥೆ ಕೇಳಿ, ಚೆನ್ನಾಗಿದೆ ಎಂದು ಹೇಳುತ್ತಲೇ, ಚಿತ್ರ ಮಾಡಿ ಮುಗಿಸಿದ್ದಾರೆ.

ಈ ಚಿತ್ರದಿಂದ ದೊಡ್ಡ ಭಡ್ತಿ ಸಿಕ್ಕಿ, ಗಂಗು ದೊಡ್ಡ ನಿರ್ಮಾಪಕರಾಗಲಿ ಎಂದು ಆರ್‌.ಎಸ್‌. ಗೌಡ ಹಾರೈಸಿದರು. ಇನ್ನು ಗಂಗು ನಿರ್ಮಾಪಕರಾಗಿದ್ದು ರಾಗಿಣಿಗೆ ಬಹಳ ಖುಷಿಯಾಯಿತಂತೆ. ಈ ಸಿನಿಮಾ ಆದ ಮೇಲೆ, ಇನ್ನೂ ಸಿನಿಮಾ ಮಾಡಲಿ ಮತ್ತು ನಮ್ಮ ಜೊತೆಗೂ ಮಾಡಲಿ ಎಂದರು ರಾಗಿಣಿ. ಪತ್ತಿಕೊಂಡ ಕುಮಾರಸ್ವಾಮಿ ಸಹ ಅದೇ ಹೇಳಿದರು. “ಒಬ್ಬ ಪ್ರೊಡಕ್ಷನ್‌ ಮ್ಯಾನೇಜರ್‌ ನಿರ್ಮಾಣ ಮಾಡುವ ಹಂತಕ್ಕೆ ಬೆಳೆದಿದ್ದು ಖುಷಿಯ ವಿಷಯ’ ಎಂದರು.

ಈ ಚಿತ್ರವನ್ನು ಈಶ್ವರ್‌ ಬಾಳೇಗುಂದಿ ನಿರ್ದೇಶಿಸಿದ್ದಾರೆ. ಈ ಹಿಂದೆ ಒಂದೆರೆಡು ಚಿತ್ರಗಳನ್ನು ನಿರ್ದೇಶಿಸಿರುವ ಅವರು, ಈಗ ಈಶ ಎಂಬ ಹೆಸರಿನಲ್ಲಿ ಚಿತ್ರ ಮಾಡಿದ್ದಾರೆ. ಚಿತ್ರಕ್ಕೆ ಕೌಶಿಕ್‌ ಹರ್ಷ ಅವರ ಸಂಗೀತ ಸಂಯೋಜನೆ ಮತ್ತು ಪಿ.ಕೆ.ಎಚ್‌. ದಾಸ್‌ ಅವರ ಛಾಯಾಗ್ರಹಣವಿದೆ. ಸಾಯಿಕುಮಾರ್‌, ತಿಮ್ಮೇಗೌಡ, ಜೊತೆಗೆ ನಾಲ್ವರು ಹೊಸ ಹುಡುಗಿಯರು ಸಹ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.

ಟಾಪ್ ನ್ಯೂಸ್

2-kunigal

Kunigal:ಮನೆಗೆ ನುಗ್ಗಿದ ದುಷ್ಕರ್ಮಿಗಳು; ರಾಡ್ ನಿಂದ ತಲೆಗೆ ಹೊಡೆದು ಮಾಂಗಲ್ಯಸರ ದೋಚಿ ಪರಾರಿ

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

Australia won the BGT 2024-25

INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್‌ ಗಾವಸ್ಕರ್‌ ಟ್ರೋಫಿ ಸೋತ ಭಾರತ

Private-Bus

Private Bus fare: ಶೀಘ್ರದಲ್ಲೇ ಖಾಸಗಿ ಬಸ್‌ ಪ್ರಯಾಣ ದರವೂ ಏರಿಕೆ?

1-horoscope

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ

BNG-winter

Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ

Womens-Commssion

Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiccha Sudeep supports Sanju Weds Geetha 2 movie

Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್‌‌

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood: ತೆರೆ ಮೇಲೆ ಗನ್ಸ್‌ ಆ್ಯಂಡ್‌ ರೋಸಸ್‌

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2-kunigal

Kunigal:ಮನೆಗೆ ನುಗ್ಗಿದ ದುಷ್ಕರ್ಮಿಗಳು; ರಾಡ್ ನಿಂದ ತಲೆಗೆ ಹೊಡೆದು ಮಾಂಗಲ್ಯಸರ ದೋಚಿ ಪರಾರಿ

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

Australia won the BGT 2024-25

INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್‌ ಗಾವಸ್ಕರ್‌ ಟ್ರೋಫಿ ಸೋತ ಭಾರತ

Private-Bus

Private Bus fare: ಶೀಘ್ರದಲ್ಲೇ ಖಾಸಗಿ ಬಸ್‌ ಪ್ರಯಾಣ ದರವೂ ಏರಿಕೆ?

1-horoscope

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.