ಯರ್ರಾಬಿರ್ರಿ ಸಿನಿಮಾ
Team Udayavani, Feb 2, 2018, 11:03 AM IST
ದಿನದಿಂದ ದಿನಕ್ಕೆ ಚಿತ್ರ-ವಿಚಿತ್ರ ಶೀರ್ಷಿಕೆಯ ಸಿನಿಮಾಗಳು ಹೆಚ್ಚಾಗುತ್ತಿವೆ. ಸಿನಿಮಾದ ಶೀರ್ಷಿಕೆ ವಿಭಿನ್ನವಾಗಿರಬೇಕೆಂಬ ಕಾರಣಕ್ಕೆ ಏನೇನೋ ಹೆಸರುಗಳನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಈಗ ಅದೇ ರೀತಿ ಟೈಟಲ್ ಇರುವ ಸಿನಿಮಾವೊಂದು ಸೆಟ್ಟೇರಿದೆ. ಅದು “ಯರ್ರಾಬಿರ್ರಿ’. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಗೋವಿಂದ ದಾಸರ್ ಈ ಚಿತ್ರದ ನಿರ್ದೇಶಕರು. ಚಿತ್ರದಲ್ಲಿ ಅಂಜನ್ ನಾಯಕರಾಗಿ ನಟಿಸುತ್ತಿದ್ದು, ಅರ್ಚನಾ ಹಾಗೂ ಸೋನು ಪಾಟೀಲ್ ಈ ಸಿನಿಮಾದ ನಾಯಕಿಯರು. ಎಲ್ಲಾ ಓಕೆ, “ಯರ್ರಾಬಿರ್ರಿ’ಯಲ್ಲಿ ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆಂದರೆ ಆ್ಯಕ್ಷನ್ ಕಂ ಲವ್ ಎಂಬ ಉತ್ತರ ಬರುತ್ತದೆ.
ಚಿತ್ರದಲ್ಲಿ ನಾಯಕ ಪ್ರೀತಿ ಹಾಗೂ ತನ್ನ ಕುಟುಂಬಕ್ಕಾಗಿ ತೊಂದರೆಯಾದರೆ ಯಾವ ರಿಸ್ಕ್ ಅನ್ನು ಬೇಕಾದರೂ ಎದುರಿಸಲು ಸಿದ್ಧನಾಗಿರುತ್ತಾನಂತೆ. ಈ ರೀತಿಯ ಸಾಗುವ ಕಥೆಯಲ್ಲಿ ಮುಂದಿನದ್ದನ್ನು ನೀವು ಸುಲಭವಾಗಿ ಊಹಿಸಿಕೊಳ್ಳಬಹುದು. ನಾಯಕ ಅಂಜನ್‌ಗೆ ಈಗಾಗಲೇ ಅಭಿಮಾನಿ ಬಳಗ, ಫೇಸ್‌ಬುಕ್‌ನಲ್ಲಿ ಫಾಲೋವರ್ಸ್ ಜೊತೆಗೆ ರೂರಲ್ ಸ್ಟಾರ್ ಎಂಬ ಬಿರುದು ಕೂಡಾ ಇದೆಯಂತೆ. ಇವೆಲ್ಲವೂ ಮುಂದೆ ಸಿನಿಮಾ ಬಿಡುಗಡೆಯಾಗುವಾಗ ಸಹಾಯಕ್ಕೆ ಬರುತ್ತದೆ ಎಂಬ ವಿಶ್ವಾಸ ಅವರಿಗಿದೆ. ಚಿತ್ರದಲ್ಲಿ ಅರ್ಚನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ತಮಿಳು ಹಾಗೂ ತೆಲುಗಿನಲ್ಲಿ ನಟಿಸಿರುವ ಅರ್ಚನಾ ಅವರಿಗೆ ಬೋಲ್ಡ್ ಪಾತ್ರ ಸಿಕ್ಕಿದೆಯಂತೆ. ಮತ್ತೂಬ್ಬ ನಾಯಕಿ ಸೋನು ಪಾಟೀಲ್‌ಗೆ ಹೆಚ್ಚು ಹೋಮ್ಲಿ ಪಾತ್ರ ಸಿಕ್ಕಿದೆಯಂತೆ. ಚಿತ್ರದಲ್ಲಿ ವರ್ಧನ್ ಕೂಡಾ ನಟಿಸುತ್ತಿದ್ದಾರೆ. ಚಿತ್ರವನ್ನು ಹೆಚ್.ಜಿ. ದಾಸ್ ನಿರ್ಮಿಸಿದ್ದಾರೆ.
ಚಿತ್ರದಲ್ಲಿ ಸಂತೋಷ್ ರೆಡ್ಡಿ, ವಿ. ಶರಣು, ಎಸ್.ಕೆ. ಉಪ್ಪಾರ ನಟಿಸುತ್ತಿದ್ದಾರೆ. ಧಾರವಾಡ, ದಾಂಡೇಲಿ, ಬಾಗಲಕೋಟೆ, ಮಡಕೇರಿ, ಮೈಸೂರು ತಟಗಳಲ್ಲಿ ಚಿತ್ರೀಕರಣ ನಡೆಸಲಾಗುವುದು. ಹಾಡುಗಳಿಗೆ ಶಿವು ಭೈರಗಿ ರಾಗ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಪೂರ್ಣಚಂದ್ರ ಬೈಕಾಡಿ ಛಾಯಗ್ರಹಣ, ಪವರ್ ಪುಷ್ಪರಾಜು ಸಾಹಸ, ಸಂದೀಪ್.ಎಂ.ನಾಗೂರು ನ್ರತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.