ಯಶ್ ಮೂಗು ತೂರಿಸಲ್ಲ ಇನ್ವಾಲ್ ಆಗ್ತಾರೆ
Team Udayavani, Oct 5, 2018, 6:00 AM IST
“ಕೆಜಿಎಫ್’ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆ ಯಾಗಿದೆ. ನವೆಂಬರ್ 16 ರಂದು ಬಿಡುಗಡೆ ಮಾಡು ವುದಾಗಿ ಚಿತ್ರತಂಡ ಹೇಳಿ ಕೊಂಡಿದೆ. ನಿರ್ದೇಶಕ ಪ್ರಶಾಂತ್ ನೀಲ್, ತಮ್ಮ ಚಿತ್ರದ ಅನುಭವವನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.
ಇಲ್ಲಿ ಮೂವರು ಸಕ್ಸಸ್ ಮಂದಿಯ ಸ್ಪರ್ಶವಿದೆ. ನಾಯಕ ಯಶ್ ಯಶಸ್ಸಿನ ಅಲೆಯಲ್ಲಿದ್ದವರು. ನಿರ್ಮಾಪಕ ವಿಜಯ್ ಕಿರಗಂದೂರು ಸಕ್ಸಸ್ ಸಿನಿಮಾ ಕೊಟ್ಟವರು, ನಿರ್ದೇಶಕ ಪ್ರಶಾಂತ್ ನೀಲ್ “ಉಗ್ರಂ’ ಮೂಲಕ ಯಶಸ್ಸು ಕಂಡವರು. ಹೀಗಿದ್ದ ಮೇಲೆ ನಿರ್ದೇ ಶಕರಿಗೆ “ಕೆಜಿಎಫ್’ ಒಂದು ದೊಡ್ಡ ಸವಾಲು. ಅಂಥದ್ದೊಂದು ಸವಾಲು ಏನಿತ್ತು? ಈ ಪ್ರಶ್ನೆಗೆ ಉತ್ತರಿಸುವ ಪ್ರಶಾಂತ್ ನೀಲ್, “ಮೊದಲನೆ ಯದು ಇದೊಂದು ದೊಡ್ಡ ಕ್ಯಾನ್ವಾಸ್. ನನಗಿದು ಎರಡನೇ ಸಿನಿಮಾ. ಅನುಭವ ಬೇರೆ ಕಮ್ಮಿ. ದೊಡ್ಡ ತಂಡದ ಜೊತೆ ಕೆಲಸ. ನಿರೀಕ್ಷೆ ಮೀರಿದ ಸೆಟ್ಟು. ಯಾವು ದಕ್ಕೂ ಕೊರತೆ ಇಲ್ಲದ ಪ್ರೊಡಕ್ಷನ್. ಇವೆಲ್ಲವನ್ನೂ ಸಮನಾಗಿ, ಸರಿಯಾಗಿ ತೂಗಿಸಿಕೊಂಡು ಹೋಗಬೇಕಿದ್ದದ್ದೇ ದೊಡ್ಡ ಸವಾಲು.
ನನ್ನ ತಂಡದ ಸಹಕಾರ, ನಿರ್ಮಾಪಕರ ಪ್ರೋತ್ಸಾಹ, ಕಲಾವಿದರ ಹುಮ್ಮಸ್ಸು ಸವಾಲನ್ನು ಸ್ವೀಕರಿಸುವಂತೆ ಮಾಡಿದ್ದು ಸುಳ್ಳಲ್ಲ. ಇಂಥದ್ದೊಂದು ಚಿತ್ರ ಮಾಡುವಾಗ ಸಮಸ್ಯೆಗಳು ಸಹಜ. “ಕೆಜಿಎಫ್’ ಚಿತ್ರಕ್ಕೂ ಅಂಥದ್ದೊಂದು ಸಮಸ್ಯೆ ಎದುರಾಗಿದ್ದು ನಿಜ. ಚಿತ್ರೀಕರಣ ವೇಳೆ ಒಂದು ದಶಕದ ಹಿಂದೆ ಬಂದಿದ್ದಂತಹ ಜೋರು ಗಾಳಿ, ಮಳೆ ಸುರಿದು, ಹಾಕಿದ್ದ ದೊಡ್ಡ ಸೆಟ್ ಹಾಳಾಯಿತು. 6 ತಿಂಗಳ ಕಾಲ ಆ ಸೆಟ್‌ನಲ್ಲೇ ನಮ್ಮ ಕೆಲಸ. ಅಲ್ಲೇ ಊಟ, ತಿಂಡಿ, ನಡೆದಿತ್ತು. ಎಂಥವರಿಗೂ ಸೆಟ್ ಹಾಳಾದಾಗ ಬೇಸರವಾಗೋದು ನಿಜ. ಆದರೆ, ಸೆಟ್‌ಗೆ ಹಾಕಿದ್ದ ಅಷ್ಟೊಂದು ಹಣ ಕೊಚ್ಚಿ ಹೋದರೂ ನಿರ್ಮಾಪಕರು, ಧೈರ್ಯ ತುಂಬಿ ಪುನಃ ಅಂಥದ್ದೇ ಸೆಟ್ ಹಾಕಿಸಿದರು. ಕೇವಲ 25 ದಿನದಲ್ಲೇ ಮತ್ತೆ ಸೆಟ್ ಹಾಕಿ ಚಿತ್ರೀಕರಣ ನಡೆಸುವಂತೆ ಮಾಡಿದ್ದು ನಿರ್ಮಾಪಕರ ಹೆಚ್ಚುಗಾರಿಕೆ’ ಎಂದು “ಕೆಜಿಎಫ್’ನಲ್ಲಾದ ಎಡವಟ್ಟು ಕುರಿತು ಹೇಳುತ್ತಾರೆ ಪ್ರಶಾಂತ್ ನೀಲ್.
ಸಾಮಾನ್ಯವಾಗಿ ಯಶ್ ಕುರಿತು ಒಂದು ಮಾತು ಕೇಳಿಬರುತ್ತೆ. ಯಶ್ ನಟಿಸುವ ಸಿನಿಮಾಗಳ ಕಥೆಯಲ್ಲಿ ಅಥವಾ ಚಿತ್ರೀಕರಣ ಸಮಯದಲ್ಲಿ “ಮೂಗು ತೂರಿಸುತ್ತಾರೆ’ ಎಂಬುದೇ ಆ ಮಾತು. “ಕೆಜಿಎಫ್’ನಲ್ಲೂ ಅದು ಕೇಳಿಬಂತಾ? ಇದಕ್ಕೆ ನಗುತ್ತಲೇ ಸ್ಪಷ್ಟಪಡಿಸಿದ ಪ್ರಶಾಂತ್ ನೀಲ್, “ಯಶ್ ಅವರಲ್ಲಿ ಪ್ರಪಂಚದ ಸಿನಿಮಾಗಳ ಜ್ಞಾನವಿದೆ. ಅವರು ಯಾವತ್ತೂ “ಕೆಜಿಎಫ್’ ವಿಚಾರದಲ್ಲಿ ಹಾಗೆ ನಡೆದುಕೊಂಡಿಲ್ಲ. ಅವರ ಇನ್ವಾಲ್‌ಮೆಂಟ್ ಇತ್ತು ಎಂದೇ ಹೇಳಬಹುದು. ಅವರ ಆಸಕ್ತಿ ಮತ್ತು ಪ್ರೀತಿಯನ್ನೇ “ಮೂಗು ತೂರಿಸುವುದು’ ಅಂತ ಭಾವಿಸಿದರೆ ಹೇಗೆ. ಅವರ ಇನ್ವಾಲ್Ìಮೆಂಟ್ ನನಗೆ ಇಷ್ಟವಾಯ್ತು. ನಿಜ ಹೇಳುವುದಾದರೆ, ಸ್ಕ್ರೀನ್ ಮೇಲೆ ಎಷ್ಟು ಎಫರ್ಟ್ ಹಾಕಿದ್ದಾರೋ, ಅದಕ್ಕಿಂತ ಹತ್ತುಪಟ್ಟು ತೆರೆಯ ಹಿಂದೆ ಎಫರ್ಟ್ ಹಾಕಿದ್ದಾರೆ. ಯಶ್ ಅವರಿಗೆ ನನ್ನ ಸ್ಟ್ರೆಂಥ್ ಗೊತ್ತು. ನಾನು ಹೇಳುವ ಅಂಶ ಜನರಿಗೆ ತಲುಪುತ್ತದೆ ಅನ್ನುವುದು ಅವರಿಗೆ ಗೊತ್ತಾದರೆ ಸುಮ್ಮನಾಗುತ್ತಾರೆ. ಒಂದು ವೇಳೆ ಅಲ್ಲೇನೋ ಬೇಕು ಅಂತೆನಿಸಿದಾಗ, ಸಲಹೆ ಕೊಡ್ತಾರೆ. ಅದು ಅವರ ಸಿನಿಮಾ ಪ್ರೀತಿಯೇ ವಿನಃ, ಮೂಗು ತೂರಿಸುವುದಲ್ಲ. ಅವರಿಗೊಂದು ಜವಾಬ್ದಾರಿ ಇದೆ. ಅವರ ಹೆಸರಿಗಾಗಿಯೇ ಜನ ಚಿತ್ರ ನೋಡೋಕೆ ಬರ್ತಾರೆ. ಹಾಗಾಗಿ, ನನಗಿಂತಲೂ ಚೆನ್ನಾಗಿ ಯೋಚನೆ ಮಾಡ್ತಾರೆ. ಈ ವಿಷಯ ಜನರಿಗೆ ಇಷ್ಟ ಆಗಬಹುದು ಅಂತ ಹೇಳ್ತಾರೆ. ಅದು ಅವರೊಳಗಿರುವ ಬುದ್ಧಿವಂತ ಕಲಾವಿದನ ಇನ್ವಾಲ್Ì ಮೆಂಟ್. “ಕೆಜಿಎಫ್’ನಲ್ಲಿ ಅವರು ಎಷ್ಟೊಂದು ಎನರ್ಜಿ ಇಟ್ಟುಕೊಂಡು, ರಾತ್ರಿ-ಹಗಲು ದುಡಿದಿದ್ದಾರೆ ಎಂಬುದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ’ ಎಂಬುದು ಪ್ರಶಾಂತ್ ನೀಲ್ ಮಾತು.
“ನಾನು “ಕೆಜಿಎಫ್’ ಬರೆದಾಗ ಚಿಕ್ಕ ಲೈನ್ ಇಟ್ಟುಕೊಂಡಿದ್ದೆ. ಅದನ್ನು ಕೇಳಿದ ನಿರ್ಮಾಪಕರು ಇದೊಂದು ಯೂನಿರ್ವಸಲ್ ಕಥೆ. ಕನ್ನಡಕ್ಕೆ ಅಂತಾನೇ ಮಾಡಬೇಡಿ. ಆಳವಾಗಿ ಯೋಚಿಸಿ, ದೊಡ್ಡದಾಗಿ ಮಾಡಿ ಎಂದರು. ಆಗ ಒಂದಷ್ಟು ರೀಸರ್ಚ್ ಮಾಡಿ, ಚಿತ್ರ ಮಾಡಿದೆ. ಇದಕ್ಕಾಗಿ ಮೂರು ವರ್ಷ ಸಮಯ ತೆಗೆದುಕೊಂಡಿದ್ದೇನೆ. 2017 ರ ಮಾರ್ಚ್‌ನಲ್ಲಿ ಚಿತ್ರ ಶುರುವಾಯ್ತು. ಆದರೆ, ಅದಕ್ಕೂ ಎರಡು ವರ್ಷದ ಹಿಂದೆಯೇ ಈ ಕಥೆ ಮೇಲೆ ಕೆಲಸ ನಡೆದಿತ್ತು’ ಎಂದು “ಕೆಜಿಎಫ್’ ಹುಟ್ಟಿನ ಬಗ್ಗೆ ಹೇಳುತ್ತಾರೆ.
ಯಾವುದೇ ಒಬ್ಬ ನಿರ್ದೇಶಕನಿಗೆ ತನ್ನ ಚಿತ್ರ ಎಷ್ಟೇ ಚೆನ್ನಾಗಿ ಮೂಡಿಬಂದಿದ್ದರೂ, ಇನ್ನೇನೋ ಬೇಕಿತ್ತು ಎಂಬ ಸಣ್ಣದ್ದೊಂದು ಪ್ರಶ್ನೆ ಕಾಡುತ್ತಲೇ ಇರುತ್ತೆ. ಅಂಥದ್ದೊಂದು ಪ್ರಶ್ನೆ ಪ್ರಶಾಂತ್‌ನೀಲ್ ಅವರಿಗೂ ಕಾಡಿದ್ದು ನಿಜ. ಈಗ ಚಿತ್ರ ರೆಡಿಯಾಗಿದೆ. ನವೆಂಬರ್‌ನಲ್ಲಿ ತೆರೆಗೆ ಬರುತ್ತಿದೆ. ಆದರೂ ಅವರಿಗೆ ಇನ್ನೂ ಸಮಯ ಸಿಕ್ಕರೆ ಕರೆಕ್ಷನ್ ಹಾಕುವ ಮನಸ್ಸೂ ಇದೆ. “ನಾನು ಏನಿಲ್ಲವೆಂದರೂ “ಕೆಜಿಎಫ್’ ಚಿತ್ರವನ್ನು ಸುಮಾರು ನೂರೈವತ್ತು ಸಲ ನೋಡಿರಬಹುದು. ನಿರ್ಮಾಪಕರು ಏನಾದರೂ ಟೈಮ್ ಬೇಕಾ ಅಂತ ಕೇಳಿದರೆ, ಇನ್ನು ಆರು ತಿಂಗಳು ಕೊಡಿ ಅಂತೀನಿ. ಯಾಕೆಂದರೆ, ಒಂದು ಸಿನಿಮಾ ಅಂದರೆ, ಪ್ರತಿ ಹಂತದಲ್ಲೂ ಗಟ್ಟಿಯಾಗಿರಬೇಕು. ಕೆಲಸ ಪಫೆìಕ್ಟ್ ಇದ್ದರೆ ತಾನೇ ಎಲ್ಲರಿಗೂ ಹೆಸರು. ಆದರೂ, ನಿರ್ಮಾಪಕರ ಹಿತದೃಷ್ಟಿ ನೋಡುವುದು ನಿರ್ದೇಶಕನ ಕರ್ತವ್ಯ. “ಕೆಜಿಎಫ್’ ಎಲ್ಲರಿಗೂ ಒಂದೊಳ್ಳೆಯ ಹೆಸರು ತಂದುಕೊಡುತ್ತೆ ಎಂಬ ಅದಮ್ಯ ವಿಶ್ವಾಸವಂತೂ ಇದೆ. ಇಷ್ಟು ವರ್ಷದ ಶ್ರಮ ಯಾರಿಗೂ ಮೋಸ ಮಾಡಲ್ಲ’ ಎಂಬ ನಂಬಿಕೆ ನನ್ನದು ಎನ್ನುತ್ತಾರೆ ಪ್ರಶಾಂತ್.
ಎಲ್ಲರಿಗೂ ತಿಳಿದಂತೆ “ಕೆಜಿಎಫ್ ಪಾರ್ಟ್ 2′ ಬರಲಿದೆ ಎಂಬುದು ಗೊತ್ತು. ಈ ಬಗ್ಗೆ ಪ್ರಶಾಂತ್ ಹೇಳುವುದು ಹೀಗೆ. “ಸೆಕೆಂಡ್ ಪಾರ್ಟ್ ಬರೋದು ಗ್ಯಾರಂಟಿ. ಆದರೆ, “ಕೆಜಿಎಫ್’ ಮೊದಲ ಭಾಗ ಜನರಿಗೆ ಇಷ್ಟ ಆಗಬೇಕು. ರಿಲೀಸ್ ಆಗಿ 10 ದಿನ ಕಳೆದ ನಂತರ ಜನರಿಗೆ ಯಾವ ಪಾತ್ರ ಇಷ್ಟವಾಗುತ್ತೆ. ಯಾವ ಭಾಗ ಇಷ್ಟವಾಗಲ್ಲ ಎಂಬುದನ್ನು ತಿಳಿದುಕೊಂಡು, ಆಮೇಲೆ ಎರಡನೇ ಭಾಗದಲ್ಲಿ ಅದನ್ನು ಸರಿಪಡಿಸಿಕೊಳ್ಳಬೇಕಿದೆ. ಎರಡನೇ ಭಾಗ ಪೂರ್ಣವಾಗಿಲ್ಲ. ಜನರ ಫಲಿತಾಂಶ ನೋಡಿಕೊಂಡು,ಸಣ್ಣಪುಟ್ಟ ಕರೆಕ್ಷನ್ ತಿದ್ದಿಕೊಂಡು ಬರಿ¤àವಿ.
“ಕೆಜಿಎಫ್’ ದಾಖಲೆಯ ಬಜೆಟ್ ಚಿತ್ರ ಅನ್ನೋದೆಲ್ಲಾ ಎಷ್ಟು ಸರಿಯೋ ಗೊತ್ತಿಲ್ಲ. ಆದರೆ, ಪ್ರಶಾಂತ್ ನೀಲ್ ಪ್ರಕಾರ ಬಜೆಟ್‌ನಿಂದ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದು ಗೊತ್ತಿದೆ. “ಒಂದು ಚಿತ್ರ ಬಜೆಟ್‌ನಿಂದ ಗೆಲ್ಲುವುದಿಲ್ಲ. ಕಂಟೆಂಟ್‌ನಿಂದ ಗೆಲ್ಲುತ್ತೆ. ಬಜೆಟ್ ಸಿನಿಮಾ ಅಂದರೆ ಅದೊಂದು ಚಿಕ್ಕ ಹೈಪ್ ಪಡೆದುಕೊಳ್ಳುತ್ತೆ ವಿನಃ ಬೇರೇನೂ ಅಲ್ಲ. ಅದರಿಂದ ಹತ್ತು ಜನ ಬರ್ತಾರೆ. ಆ ಹತ್ತು ಜನ ನೂರು ಜನರಿಗೆ ಹೇಳ್ತಾರೆ ಅದೊಂದೇ ಪ್ಲಸ್ಸು. ಸತ್ಯವಾಗಿ ಹೇಳ್ತೀನಿ ನನಗೆ “ಕೆಜಿಎಫ್’ ಬಜೆಟ್ ಗೊತ್ತಿಲ್ಲ. ಯಾಕೆಂದರೆ, 9 ಜನರ ತಂಡ ಅದನ್ನು ನೋಡಿಕೊಳ್ಳುತ್ತಿತ್ತು. ಇಷ್ಟರಲ್ಲೇ ಟ್ರೇಲರ್ ಬಿಡ್ತೀವಿ. ಅಲ್ಲಿ ಯಶ್ ಪಾತ್ರದ ಸುಳಿವು ಕೊಡ್ತೀವಿ. ಯಶ್ ಪಾತ್ರ ಯಾವುದೇ ರಿಯಲ್ ಲೈಫ್ದಲ್ಲ. ಕಥೆ ಕೋಲಾರ ಹಿನ್ನೆಲೆಯದ್ದಲ್ಲ’ ಎನ್ನುತ್ತಾರೆ ಪ್ರಶಾಂತ್.
ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.