ಝಣ ಝಣ ಕಾಂಚಾಣ: ಹಣ ಮುಖ್ಯವೋ? ದೇಶ ಮುಖ್ಯವೋ?
Team Udayavani, Apr 28, 2017, 10:10 AM IST
ಮಗನ ಹೊಸ ಚಿತ್ರ ಸೆಟ್ಟೇರುತ್ತಿರುವ ಖುಷಿಯಲ್ಲಿದ್ದರು ಮೇಜರ್ ಶ್ರೀನಿವಾಸ್ ಪೂಜಾರ್. ಹಾಲ್ ತುಂಬಾ ಓಡಾಡುತ್ತಾ ಬಂದ ಹಿತೈಷಿಗಳನ್ನು ವಿಚಾರಿಸಿಕೊಳ್ಳುತ್ತಿದ್ದರು. ಜೊತೆಗೆ ತಮ್ಮ ಮಿಲಿಟರಿ ಸ್ನೇಹಿತರನ್ನು ಆಹ್ವಾನಿಸಿದ್ದರು. ಅವರೆಲ್ಲರನ್ನೂ ವೇದಿಕೆಗೆ
ಕರೆದು ಪರಿಚಯ ಕೂಡಾ ಮಾಡಿಕೊಟ್ಟರು. ಹೀಗೆ ಶ್ರೀನಿವಾಸ್ ಅವರ ಖುಷಿಗೆ ಕಾರಣವಾಗಿದ್ದು ಅವರ ಮಗ ಸಂದೇಶ್ ನಾಯಕರಾಗಿ
ನಟಿಸುತ್ತಿರುವ “ಝಣ್ ಝಣಾ ಝಣ್’. ಇತ್ತೀಚೆಗೆ ಈ ಚಿತ್ರದ ಮುಹೂರ್ತ ನಡೆಯಿತು. ಹೊಸಬರ ತಂಡವೇ ಸೇರಿಕೊಂಡು ಈ
ಸಿನಿಮಾ ಮಾಡುತ್ತಿದ್ದು, ಹಣದ ಹಿಂದೆ ಬೀಳುವ ಯುವಕರ ಕಥೆಯನ್ನು ಹೇಳಲು ಹೊರಟಿದ್ದಾರೆ. ಶಿವಕುಮಾರ್ ತಂತಿ ಈ ಸಿನಿಮಾದ ನಿರ್ದೇಶಕರು. ಇದು ಇವರಿಗೆ ಮೊದಲ ಚಿತ್ರ. ಕಾರ್ಪೋರೇಟ್ ಕ್ಷೇತ್ರದಲ್ಲಿದ್ದ ಇವರು ಒಂದಷ್ಟು ಜಾಹೀರಾತುಗಳನ್ನು ಮಾಡಿದ್ದಾರೆ. ಈಗ ಆ ಎಲ್ಲಾ ಅನುಭವಗಳನ್ನು ಒಟ್ಟು ಸೇರಿಸಿ ಈ ಸಿನಿಮಾ ಮಾಡುತ್ತಿದ್ದಾರೆ.
ಹಣ ಮಾಡಬೇಕೆಂಬ ಯುವಕರ ತಂಡಕ್ಕೆ ದೇಶದ್ರೋಹಿಗಳಿಂದ ಅಂದುಕೊಂಡಷ್ಟು ಹಣ ಸಿಗುತ್ತದೆ. ಆ ನಂತರ ಆ ಯುವಕರ ತಂಡ
ದೇಶದ್ರೋಹಿಗಳ ಜೊತೆ ಸೇರುತ್ತಾ ಅಥವಾ ಅವರನ್ನು ಪೊಲೀಸರಿಗೆ ಒಪ್ಪಿಸುತ್ತಾ ಎಂಬುದು ಎಂಬ ಲೈನ್‌ನೊಂದಿಗೆ ಇಡೀ ಸಿನಿಮಾ
ಸಾಗುತ್ತದೆಯಂತೆ. ಇಷ್ಟು ಹೇಳಿದ ಮೇಲೆ ಮುಂದೇನಾಗಬಹುದೆಂಬುದನ್ನು ನೀವು ನಿರೀಕ್ಷಿಸಬಹುದು. ಚಿತ್ರದಲ್ಲಿ ಕಾಮಿಡಿ, ಸಸ್ಪೆನ್ಸ್
ಇರುವುದರಿಂದ ಜನ ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ. ಈ ಚಿತ್ರವನ್ನು ದಿ ಸರಗಮ್ ಟೀಮ್ ನಿರ್ಮಿಸುತ್ತಿದೆ.
ಸಾಫ್ಟ್ವೇರ್ ಕ್ಷೇತ್ರದ ಮೂವರು ಸೇರಿ ಈ ಸಿನಿಮಾಕ್ಕೆ ಹಣ ಹಾಕುತ್ತಿದ್ದಾರೆ. ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳನ್ನು ಕೊಡಬೇಕೆಂಬ ಉದ್ದೇಶದಿಂದ ಸಿನಿಮಾ ಮಾಡುತ್ತಿದೆಯಂತೆ ಸರಗಮ್ ಅಂಡ್ ಟೀಂ. ಚಿತ್ರದ ನಾಯಕ ಸಂದೇಶ್‌ಗೆ ಈ ಹಿಂದೆ ಮಾಡಿದ ಸಿನಿಮಾಗಳಿಗಿಂತ ವಿಭಿನ್ನವಾದ ಪಾತ್ರ ಇಲ್ಲಿ ಸಿಕ್ಕಿದೆಯಂತೆ. ಇಡೀ ಸಿನಿಮಾ ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಮೂಲಕ ಪ್ರೇಕ್ಷಕರಿಗೆ ಮಜಾ ಸಿಗುತ್ತದೆ ಎಂಬ ವಿಶ್ವಾಸ ಅವರದು. ನಾಯಕ ಅಸ್ಮಾ ಕೂಡಾ “ಝಣ್ ಝಣಾ ಝಣ್’ ತಂಡದ ಜೊತೆ ಕೆಲಸ ಮಾಡುತ್ತಿರುವ ಖುಷಿ ಹಂಚಿಕೊಂಡರು. ಚಿತ್ರಕ್ಕೆ ಅಭಿಷೇಕ್ ಜಿ.ರಾಯ್ ಸಂಗೀತ, ಮನೋಹರ್ ಛಾಯಾಗ್ರಹಣ ವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ
Bhairathi Ranagal; ಶಿವಣ್ಣ ಡ್ರೀಮ್ ಪ್ರಾಜೆಕ್ಟ್ ಭೈರತಿ ಮೈಲುಗಲ್!
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.