Special Story: ಕಾಳಗದ ಅಂಗಳ ಕೊಲೊಸಿಯಮ್: ರೋಮ್ ನಗರದ ರಮ್ಯ ತಾಣ
Team Udayavani, Aug 27, 2023, 1:09 PM IST
ರೋಮ್ ನಗರದ ಮಧ್ಯಭಾಗದಲ್ಲಿ, ಆರು ಎಕರೆ ವಿಸ್ತೀರ್ಣದಲ್ಲಿರುವ ಕೊಲೊಸಿಯಮ…, ಜಗತ್ಪ್ರಸಿದ್ಧ ಪುರಾತನ ಕಟ್ಟಡಗಳಲ್ಲೊಂದು. ಗ್ಲಾಡಿಯೇಟರ್ ಕದನಗಳ ಚಮತ್ಕಾರಗಳಿಗೆ ಸಾಕ್ಷಿಯಾಗಿ ಉಳಿದಿರುವ ಈ ಸ್ಥಳದಲ್ಲಿ ಮನುಷ್ಯ- ಪ್ರಾಣಿಯ ನಡುವೆ ಹಾಗೂ ಮನುಷ್ಯ- ಮನುಷ್ಯರ ನಡುವೆ ಕಾಳಗ ನಡೆಸಲಾಗುತ್ತಿತ್ತು…
ತಿಹಾಸಿಕ ನಗರಿ ಇಟಲಿಯ ರೋಮ್ ನಗರದ ಕೊಲೊಸಿಯಮ…, ಜಗತøಸಿದ್ಧ ಪುರಾತನ ಕಟ್ಟಡಗಳಲ್ಲೊಂದು. ಫ್ಲೇವಿಯನ್ ಆಂಫಿ ಥಿಯೇಟರ್ ಎಂದೂ ಇದನ್ನು ಕರೆಯುತ್ತಾರೆ. ಗ್ಲಾಡಿಯೇಟರ್ ಕದನಗಳ ಚಮತ್ಕಾರಗಳಿಗೆ ಈ ಬೃಹತ್ ಆಂಫಿ ಥಿಯೇಟರ್ ಇಂದಿಗೂ ಸಾಕ್ಷಿಯಾಗಿ ನಿಂತಿದೆ. ರೋಮ್ ನಗರದ ಮಧ್ಯಭಾಗದಲ್ಲಿ, ಸುಮಾರು ಆರು ಎಕರೆ ವಿಸ್ತೀರ್ಣದಲ್ಲಿ, ಸುಣ್ಣದಕಲ್ಲು ಮತ್ತು ಇಟ್ಟಿಗೆ ಕಾಂಕ್ರೀಟ್ ಬಳಸಿ ಇದನ್ನು ಕಟ್ಟಲಾಗಿದೆ. 189 ಮೀಟರ್ ಉದ್ದ, 156 ಮೀಟರ್ ಅಗಲವಿರುವ, ಅಂಡಾಕಾರದ ಈ ಕ್ರೀಡಾಂಗಣ ಸುಮಾರು 24000 ಚದರ ಮೀಟರ್ ತಳಹದಿಯ ಮೇಲೆ ನಿಂತಿದೆ. ಹೊರಗೋಡೆ 48 ಮೀಟರ್ ಎತ್ತರವಿದೆ. ಕೊಲೊಸಿಯಮ… ನ ಮಧ್ಯಭಾಗ 87 ಮೀಟರ್ ಉದ್ದ, 55 ಮೀಟರ್ ಅಗಲವಾಗಿದ್ದು, 5 ಮೀಟರ್ ಎತ್ತರದ ಗೋಡೆಯನ್ನು ಹೊಂದಿದೆ.
80 ಪ್ರವೇಶ ದ್ವಾರಗಳಿದ್ದವು!
ಈ ಕ್ರೀಡಾಂಗಣ 65000 ದಿಂದ 80000 ಜನ ಕುಳಿತು ನೋಡಬಹುದಾದಷ್ಟು ವಿಶಾಲವಾಗಿದೆ. ಪ್ರವೇಶಕ್ಕಾಗಿ ನೆಲ ಅಂತಸ್ತಿನಲ್ಲಿ 80 ಪ್ರವೇಶದ್ವಾರಗಳಿದ್ದು ಪ್ರತಿ ದ್ವಾರಕ್ಕೂ ಪ್ರತ್ಯೇಕ ಸಂಖ್ಯೆಗಳನ್ನು ನೀಡಲಾಗಿತ್ತು. ಉತ್ತರದ ಮುಖ್ಯ ಪ್ರವೇಶ ದ್ವಾರಗಳು ರೋಮನ್ ಚಕ್ರವರ್ತಿ ಮತ್ತು ಅವರ ಕುಟುಂಬ ವರ್ಗಕ್ಕೆ ಮೀಸಲಾಗಿತ್ತು. ಎತ್ತರದ ಕಮಾನುಗಳು, ಸಂಕೀರ್ಣ ಕಾರಿಡಾರ್ ಗಳು ಇದರ ವಿಶೇಷ. ರೋಮನ್ ಸಮಾಜದ ಸಾಮಾಜಿಕ ಶ್ರೇಣಿಯನ್ನು ಪ್ರತಿಬಿಂಬಿಸುವ ವಿವಿಧ ಹಂತಗಳ ಆಸನ ವ್ಯವಸ್ಥೆಯನ್ನು ಈ ಕಟ್ಟಡದಲ್ಲಿ ನಿಖರವಾಗಿ ಆಯೋಜಿಸಿದ್ದರು ಎನ್ನಲಾಗುತ್ತದೆ. ರೋಮನ್ನರು ಸಾಮಾನ್ಯವಾಗಿ ಕ್ರೂರ ಆಟಗಳಿಗಾಗಿ ಈ ಕ್ರೀಡಾಂಗಣವನ್ನು ಬಳಸುತ್ತಿದ್ದರು. ಆಯುಧ ಹಿಡಿದು ಪ್ರೇಕ್ಷಕರೆದುರು ಪ್ರಾಣಿಯನ್ನು ಅಥವಾ ಇತರ ಮನುಷ್ಯರನ್ನು ಸಾಯಿಸಲು ಹೊಡೆದಾಡುವ ಮಲ್ಲ ಕಾಳಗಕ್ಕೆ ಹೆಚ್ಚಾಗಿ ಬಳಸುತ್ತಿದ್ದರು. ಸೋಲು- ಗೆಲುವನ್ನು ಸಂಭ್ರಮಿಸಿ ಕೇಕೆ ಹಾಕುವ ಪ್ರೇಕ್ಷಕ ವರ್ಗ ಸುತ್ತಲೂ ನೆರೆದಿರುತ್ತಿತ್ತು. ಪ್ರಾಣಿಗಳ ಕಾಳಗ, ಮನುಷ್ಯ-ಮನುಷ್ಯರ ಮಧ್ಯೆ ಕಾಳಗ ನಡೆಸಿ ಮನರಂಜನೆಯ ವಿಕೃತ ಸಂತೋಷ ಅನುಭವಿಸುತ್ತಿದ್ದರು.
ಜೀವದ ಹಂಗು ತೊರೆದು ಹೋರಾಟ
ಸಾಮಾನ್ಯವಾಗಿ ಗುಲಾಮರು, ಯುದ್ಧ ಕೈದಿಗಳು ಮತ್ತು ಅಪರಾಧಿಗಳನ್ನು ಈ ಕ್ರೀಡೆಗಳಿಗೆ ಬಳಸಿಕೊಳ್ಳುತ್ತಿದ್ದರಂತೆ. ಕತ್ತಿ-ಗುರಾಣಿಗಳನ್ನು ಹಿಡಿದ ಈ ಕದನ ಕಲಿಗಳು ಜೀವದ ಹಂಗು ತೊರೆದು ಹೋರಾಡುತ್ತಿದ್ದರು. ಇಬ್ಬರು ಅಥವಾ ಹೆಚ್ಚು ಜನರು ಒಟ್ಟಿಗೆ ಹೋರಾಡುವದಲ್ಲದೆ ಕ್ರೂರ ಕಾಡು ಪ್ರಾಣಿಗಳೊಂದಿಗೂ ಹೋರಾಡಬೇಕಿತ್ತು. ರೋಮನ್ ಸಮಾಜದಲ್ಲಿ ಇದು ಶೌರ್ಯ ಮತ್ತು ಗೌರವದ ಪ್ರತೀಕವೆಂದೇ ಪ್ರತಿಬಿಂಬಿತವಾಗುತ್ತಿತ್ತು. ಕಠೊರ ಪರಿಸ್ಥಿತಿಗಳನ್ನು ಎದುರಿಸಿ ಗೆದ್ದು ತಮ್ಮ ಪ್ರದರ್ಶನದ ಮೂಲಕ ಜನರ, ಆಳುವವರ ಮೆಚ್ಚುಗೆಗೆ ಪಾತ್ರರಾಗಿ ಸ್ವತಂತ್ರವಾಗುವ ಅವಕಾಶ ಅವರಿಗೊಂದು ಆಶಾಕಿರಣವಾಗಿತ್ತು. ಮರಣದಂಡನೆಗೊಳಗಾದವರನ್ನು ಅತ್ಯಂತ ಕ್ರೂರವಾಗಿ ಸಾಯಿಸಿ ಸಂಭ್ರಮಿಸುತ್ತಿದ್ದರು. ಚಕ್ರವರ್ತಿಗಳು ಮತ್ತು ರಾಜಕೀಯ ಗಣ್ಯರು ಅಧಿಕಾರವನ್ನು ಪಡೆಯಲು, ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಈ ಆಟಗಳನ್ನು ಬಳಸಿಕೊಳ್ಳುತ್ತಿದ್ದರು. ಈ ಅತಿರಂಜಿತ, ರಕ್ತ-ರಂಜಿತ ಆಟ ಸಾಮಾಜಿಕ-ರಾಜಕೀಯ ಸಮಸ್ಯೆಗಳಿಂದ ಜನರನ್ನು ದೂರವಿಡುವ ಸಾಧನವೂ ಆಗಿತ್ತು.
ಈಗಿದು ಬರೀ ಸ್ಮಾರಕ!
ರೋಮ್ ಸಾಮ್ರಾಜ್ಯ ಕುಸಿಯುತ್ತಿದ್ದಂತೆ ಈ ಗ್ಲಾಡಿಯೇಟರ್ ಪಂದ್ಯಗಳ ಜನಪ್ರಿಯತೆಯೂ ಕ್ಷೀಣಿಸತೊಡಗಿತು. ಒಂದು ಕಾಲದಲ್ಲಿ ಇನ್ನಿಲ್ಲದ ವೈಭವದಿಂದ ಮೆರೆದ ಕೊಲೋಸಿಯಂ, 5 ನೇ ಶತಮಾನದ ವೇಳೆಗೆ ನಿರ್ಲಕ್ಷದಿಂದಾಗಿ, ಕಳ್ಳಕಾಕರ ಲೂಟಿಯಿಂದಾಗಿ, ಭೂಕಂಪಗಳಿಂದಾಗಿ ಶಿಥಿಲಗೊಳ್ಳುತ್ತ ಹೋಯಿತು. ಈಗ ರೋಮ್‌ನ ಇತಿಹಾಸವನ್ನು ನೆನಪಿಸುವದಷ್ಟೆ ಈ ಕಟ್ಟಡದ ವೈಶಿಷ್ಟ್ಯ. ಗ್ಲಾಡಿಯೇಟರ್ ಕಾದಾಟಗಳ ಪರಂಪರೆ ಯನ್ನು ನೆನಪಿಸುತ್ತ ರೋಮ್‌ನ ಐತಿಹಾಸಿಕ ವೈಭವದ ಸಂಕೇತವಾಗಿ, ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿ ಇಂದಿಗೂ ಉಳಿದುಕೊಂಡಿದೆ. ಗ್ಲಾಡಿಯೇಟರ್ ಕದನಗಳ ಆಕರ್ಷಕ ಜಗತ್ತು ಮತ್ತು ಕೊಲೊಸಿಯಮ್ ನ ಭವ್ಯತೆ ಇಂದಿಗೂ ಪ್ರಾಚೀನ ರೋಮ್‌ನ ರಕ್ತ ಸಿಕ್ತ ಅಖಾಡದ ಬಹುಮುಖೀ ಕಥೆಯನ್ನು ಹೇಳುತ್ತಿದೆ. ಇಂದು ಕೊಲೊಸಿಯಮ್ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ವಿಶ್ವದಲ್ಲೇ ಅತಿ ಹೆಚ್ಚು ಜನ ಭೇಟಿ ನೀಡುವ ಪ್ರವಾಸೀ ತಾಣವಾಗಿದೆ.
ಸ್ವಲ್ಪ ದುಬಾರಿ…
ಬೆಂಗಳೂರಿನಿಂದ ರೋಮ್‌ಗೆ ವಿಮಾನ ಪ್ರಯಾಣ ದರ, ಒಬ್ಬರಿಗೆ ಸರಿಸುಮಾರು 75,000 ರಿಂದ 85,000 ರೂ. ಇದೆ. ವಿದೇಶ ಸಂಚಾರದ ವಿಷಯದಲ್ಲಿ ಪ್ರಾಯೋಜಕರು ಸಿಗಲಿಕ್ಕಿಲ್ಲ. ನಾವು ಲಂಡನ್‌ನಿಂದ ರೋಮ್‌ವರೆಗೆ 14 ದಿನಗಳ ಪ್ರಯಾಣ ಮಾಡಿದ್ದೆವು. ಒಟ್ಟು 10 ದೇಶಗಳನ್ನು ನೋಡಿದೆವು. ಲಂಡನ್‌ನಿಂದ ಪ್ಯಾರಿಸ್‌ಗೆ ಯೂರೋ ಟ್ರೈನ್. ಅಲ್ಲಿಂದ ಸ್ವಿಜರ್ಲ್ಯಾಂಡ್, ಜರ್ಮನಿ, ನೆದರ್ಲ್ಯಾಂಡ್, ಹಾಲೆಂಡ್… ಹೀಗೆ ರೋಮ್‌ವರೆಗೆ ಬಸ್ ಪ್ರಯಾಣ.
ಚಿತ್ರ ಲೇಖನ: ಜಿ.ಆರ್.ಪಂಡಿತ್, ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.