ದಡ್ಡ ಮಕ್ಕಳಿಗೆ ಮೀಸಲಾದ ಶಾಲೆ !
Team Udayavani, Apr 28, 2019, 6:00 AM IST
ಒಂದು ಶಾಲೆಯಲ್ಲಿ 50 ಶೇ. ಫಲಿತಾಂಶ ಬಂದಿದೆ ಎಂದು ಭಾವಿಸೋಣ. ಅಂದರೆ 100 ಮಂದಿಯಲ್ಲಿ 50 ಮಂದಿ ಉತ್ತೀರ್ಣರಾಗಿದ್ದಾರೆ ಎಂದರ್ಥ. 50 ಶೇ. ಮಂದಿಗೆ ಭವಿಷ್ಯದಲ್ಲಿ ಸಾಕಷ್ಟು ಅವಕಾಶದ ಸಾಧ್ಯತೆಗಳಿವೆ. ಅತ್ಯಂತ ಹೆಚ್ಚು ಅಂಕಗಳನ್ನು ಪಡೆದವರು ಉನ್ನತ ಶಿಕ್ಷಣಕ್ಕೆ ತೆರಳಬಹುದು. ಕೇವಲ ಮಾರ್ಕು ಪಡೆದರೆ ಸಾಲದು, ಅವರ ಆರ್ಥಿಕ ಸ್ಥಿತಿಯೂ ಅನುಕೂಲಕರವಾಗಿರಬೇಕು. ಕಡಿಮೆ ಅಂಕ ಗಳಿಸಿದವರು ಯಾವುದಾದರೂ ಉದ್ಯೋಗ ತರಬೇತಿಗೆ, ಮುಂದಿನ ತರಗತಿಗಳಿಗೆ ಸೇರಬಹುದು. ಆದರೆ, ಅನುತ್ತೀರ್ಣರಾದ 50 ಶೇ. ಮಂದಿ ಏನು ಮಾಡುವುದು? ಅನುತ್ತೀರ್ಣರಾದವರು ಮಾತ್ರವಲ್ಲ, ಕಡಿಮೆ ಅಂಕ ಗಳಿಸಿದವರು ಕೂಡ ಮುಂದಿನ ಶಿಕ್ಷಣ ಪಡೆಯಲಾರದೆ ಪರದಾಡುವ ಸ್ಥಿತಿ ಇಂದು ಇದೆ.
ನಿಜವಾಗಿ ಅನುತ್ತೀರ್ಣರಾದ ಮಂದಿ ಆಫೀಸು ಸಹಾಯಕರಾಗಿಯೊ, ಕೂಲಿಕಾರ್ಮಿಕರಾಗಿಯೊ, ಗೂಡಂಗಡಿ ನಡೆಸಿಯೋ ಜೀವನ ನಡೆಸಬಹುದು. ಆದರೆ, ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದೆಂದರೆ ಬದುಕಿನಲ್ಲಿ ಸೋತುಹೋದಂತೆ ಎಂದೇ ಬಿಂಬಿಸಲಾಗುತ್ತಿದೆ. ಫೇಲಾದವರು ಕೂಡಾ ಬದುಕಿಯೇ ಬದುಕುತ್ತಾರೆ. ಆದರೆ, ಪರೀಕ್ಷೆಯಲ್ಲಿ ಫೇಲಾದವರನ್ನು ಮತ್ತು ಫೇಲ್ ಆದವರು ಮಾಡುವ ದುಡಿಮೆಯನ್ನು ಒಂದು ಘನತೆಯಿಂದ ಕಾಣುವ ಸ್ಥಿತಿ ನಮ್ಮಲ್ಲಿ ಏಕೆ ಇಲ್ಲ?
“ಗೆಲುವೆಂಬುದು ಗೆಲುವೇ ಅಲ್ಲ’ ಎಂಬುದೊಂದು ಪ್ರಸಿದ್ಧ ಉಕ್ತಿ. ನಮ್ಮಲ್ಲಿ ಉನ್ನತ ಅಂಕ ಪಡೆದವರು ಉನ್ನತ ಹುದ್ದೆಗಳನ್ನು ಪಡೆಯುತ್ತಾರೆ ಎಂದಿಟ್ಟುಕೊಳ್ಳೋಣ. ಅವರಲ್ಲಿ ಕೆಲವರು ಲಂಚ ಪಡೆದು, ವಂಚನೆ ಮಾಡಿ ಶ್ರೀಮಂತರಾಗಬಹುದು. ಹಾಗಿದ್ದರೆ, ಅವರ ವ್ಯಕ್ತಿತ್ವವನ್ನು ಅಂಕಗಳಿಂದ ಅಳೆಯುವುದು ಹೇಗೆ?
ಒಬ್ಬರು ಹಳ್ಳಿ ಶಾಲೆಯ ಮೇಸ್ಟರು ಹೇಳುತ್ತಿದ್ದರು, “”ನಮ್ಮಲ್ಲಿ ಕೇವಲ ಹತ್ತೇ ಮಂದಿ ಅನುತ್ತೀರ್ಣರಾಗಿದ್ದಾರೆ” “”ನಿಮ್ಮ ಶಾಲೆ ಸೆಂಟ್ ಪರ್ಸೆಂಟ್ ಬಾರದ ಬಗ್ಗೆ ಬೇಸರವಿಲ್ಲವೆ?” ಎಂದು ಕೇಳಿದರೆ ಅವರ ಉತ್ತರ: “”ನಾವು ಕೇವಲ ಬುದ್ಧಿವಂತರಾದ ಮಕ್ಕಳಿಗೆ ಮಾತ್ರ ಕಲಿಸುವುದಲ್ಲ, ನಮ್ಮಲ್ಲಿ ದಡ್ಡ ಮಕ್ಕಳು ಕಲಿಯುತ್ತಾರೆ. ಎಲ್ಲರನ್ನೂ ಒಂದೇ ಬಾರಿ ಪರೀಕ್ಷೆಗೆ ಕೂರಿಸುತ್ತೇವೆ”.
ಸ್ನೇಹಿತರೊಬ್ಬರು ಸೀಮಿತ ಸಂಖ್ಯೆಯ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಸುತ್ತಿದ್ದರು. ಆ ಶಿಬಿರದಲ್ಲಿ ಭಾಗವಹಿಸಬೇಕಾದರೆ ಮಕ್ಕಳಿಗೆ ಇರಬೇಕಾದ ಒಂದೇ ಒಂದು ಅರ್ಹತೆ ಎಂದರೆ ಶಾಲಾ ಪರೀಕ್ಷೆಗಳಲ್ಲಿ 40 ಶೇ.ಕ್ಕಿಂತ ಹೆಚ್ಚಿನ ಅಂಕ ಗಳಿಸಿರಬಾರದು!
ಅವರು ಅದಕ್ಕೆ ಕೊಡುವ ಸಮರ್ಥನೆ ಹೀಗಿದೆ: “ಒಳ್ಳೆಯ ಅಂಕ ಪಡೆಯಲು ಪ್ರಯತ್ನಿಸುವುದು ತಪ್ಪೇನೂ ಅಲ್ಲ. ಇಂದಿನ ಕಾಲ ಹಾಗೆಯೇ ಇದೆ. ಅಂಕ ಚೆನ್ನಾಗಿ ಪಡೆಯದವರನ್ನು ಯಾರೂ ಪರಿಗಣಿಸುವುದಿಲ್ಲ. ಆದರೆ, ಹೆಚ್ಚು ಅಂಕ ಪಡೆಯಲಾಗದ ವಿದ್ಯಾರ್ಥಿಗಳಿಗೆ ತಾವಿನ್ನು ಇಲ್ಲೇನೂ ಸಾಧಿಸಲಾರೆವು ಎಂದು ಮನದಟ್ಟಾಗಿರುತ್ತದೆ. ಅವರಲ್ಲಿ ಹೆಚ್ಚಿನವರು ಚಿತ್ರಕಲೆಗಳಲ್ಲಿ, ಕರಕುಶಲ ಕಲೆಯಲ್ಲಿ , ಹಾಡುವುದರಲ್ಲಿ ಪ್ರತಿಭಾವಂತರಾಗಿರುತ್ತಾರೆ. ಶಾಲೆಯಲ್ಲಿ ನಿರುಪಯುಕ್ತರೆಂದು ಭಾವಿಸಿದ ಆ ಮಕ್ಕಳಿಗೆ ಇಂಥ ಅಭಿವ್ಯಕ್ತಿಯ ಅವಕಾಶ ಸಿಕ್ಕಿದರೆ ಅದ್ಭುತವಾಗಿ ಮಿಂಚುತ್ತಾರೆ. ಹಾಗಾಗಿ, ತಮ್ಮ ಶಿಬಿರದಲ್ಲಿ ಯಾವತ್ತೂ ದಡ್ಡ ಮಕ್ಕಳಿಗೆ ಅವಕಾಶ’.
ದಡ್ಡತನಕ್ಕೆ ಆ ಹುಡುಗನೊಬ್ಬನೇ ಕಾರಣವಲ್ಲ, ಆತ ಬೆಳೆದುಬಂದ ರೀತಿ, ವಾಸಿಸುತ್ತಿರುವ ಸ್ಥಿತಿಯೂ ಕಾರಣವೇ.
ಕೆ. ಜೆ. ಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.