ಸುಮ್ನೆ ತಮಾಷೆಗೆ ಒಂದು ಕತೆ


Team Udayavani, Sep 30, 2018, 6:00 AM IST

8.jpg

ಜಗತ್ತಿನಲ್ಲಿ ಎಷ್ಟೋ ಮಂದಿ ಶ್ರೀಮಂತರಿದ್ದಾರೆ. ಅವರಿಗೆ ಸಮಸ್ಯೆಗಳಿಲ್ಲವೆ? ಇದೆ. ನಮಗೆ ತಿಳಿಯುವುದಿಲ್ಲ, ಅಷ್ಟೆ ! ಭಾರತದ ಮಿಲಿಯಾಧಿಪತಿಗಳ ಪಟ್ಟಿ ಮಾಡಿ. ಅವರ ಜೊತೆಗೆ ಕುಳಿತು ಕೇಳಿ. ಕಷ್ಟ ಪರಂಪರೆ ಎಳೆಯೆಳೆಯಾಗಿ ತೆರೆದುಕೊಳ್ಳಲಾಂಭಿಸುತ್ತದೆ. 

ಉದಾಹರಣೆಗೆ ಸುಕೇಶ್‌ ಹಿಮಾನಿ ಇದ್ದಾರೆ. ಅವರು ಬಹುಶಃ ಮೊದಲ ಪಂಕ್ತಿಯ ಸಿರಿವಂತರು. ಅವರಿಗೂ ತಾಪತ್ರಯಗಳು ಇದ್ದೇ ಇವೆ. 
ಸುಕೇಶ್‌ ಹಿಮಾನಿ ಅವರದ್ದು ಮೂವತ್ತು ಮಹಡಿಯ ದೊಡ್ಡ ಮನೆ. ಮಹಾನಗರದ ಹೃದಯಭಾಗದಲ್ಲಿದೆ. ಅವರು ಬೆಳಗ್ಗೆ ಏಳುವುದು 15ನೆಯ ಮಾಳಿಗೆಯಲ್ಲಿ. ಯಾಕೆಂದರೆ, ಅವರ ಬೆಡ್‌ ರೂಮ್‌ ಇರುವುದು ಅಲ್ಲಿಯೇ. ಆಮೇಲೆ, ಟ್ರೆಡ್‌ಮಿಲ್‌ನಲ್ಲಿ ಓಡಬೇಕಾದರೆ 9ನೆಯ ಮಾಳಿಗೆಗೆ ಇಳಿಯಬೇಕು. ಜಿಮ್‌ ಇತ್ಯಾದಿಗಳಿಗೆ ಆ ಮಹಡಿ ಮೀಸಲು. ಆಮೇಲೆ, ಈಜಾಡುವ ಮನಸ್ಸಾದರೆ, 12ನೆಯ ಮಹಡಿಯಲ್ಲಿರುವ ಈಜುಕೊಳದತ್ತ ಸಾಗಬೇಕು. 19ನೆಯ ಮಹಡಿಗೆ ಹೋಗಿ ಬೆಳಗಿನ ಉಪಾಹಾರ ಮುಗಿಸಬೇಕು. ಚಹಾ ಕುಡಿಯುವಾಗ ಸಮುದ್ರ ಕಾಣುತ್ತದೆ ಎಂಬ ಕಾರಣಕ್ಕೆ ಡೈನಿಂಗ್‌ ಹಾಲ್‌ನ್ನು ಅಲ್ಲಿಯೇ ಮಾಡಲಾಗಿದೆ. 14ನೆಯ ಮಹಡಿಯಲ್ಲಿ ಆಫೀಸ್‌ ಡ್ರೆಸ್‌ ಹಾಕಿಕೊಳ್ಳಬೇಕು. 21ನೆಯ ಮಹಡಿಯಲ್ಲಿರುವ ಪರ್ಸನಲ್‌ ಆಫೀಸ್‌ನಲ್ಲಿ ಫೈಲ್‌ ಸಂಗ್ರಹಿಸಬೇಕು. 16ನೆಯ ಮಹಡಿಯಲ್ಲಿರುವ ಪತ್ನಿ ಗೀತಾ ಹಿಮಾನಿಯವರಿಗೆ “ಬಾಯ್‌’ ಹೇಳಬೇಕು. 13ನೆಯ ಮಹಡಿಯಲ್ಲಿರುವ ಮಕ್ಕಳಿಗೆ “ಸೀ ಯೂ’ ಹೇಳಬೇಕು. ಲಗುಬಗೆಯಿಂದ 3ನೆಯ ಮಹಡಿಯತ್ತ ಇಳಿದುಕೊಂಡು ಬರುವಾಗ ಲಿಫ್ಟ್ ಕೈಕೊಟ್ಟರೂ ಕೊಟ್ಟಿàತು. ಪವರ್‌ ಕಟ್‌ ಆದರೆ ಜನರೇಟರ್‌ ಚಾಲೂ ಮಾಡುವವರೆಗೆ ಲಿಫ್ಟ್ನೊಳಗೆಯೇ ಬಾಕಿ. 

ಮೂರನೆಯ ಮಹಡಿಯಲ್ಲಿ ಸುಕೇಶ್‌ ಹಿಮಾನಿಯವರ 2.5 ಕೋಟಿಯ ಬಿಎಂಡಬ್ಲ್ಯು ಕಾರು ನಿಂತಿರುತ್ತದೆ. ಅವರಿಗೆ ಸ್ವ-ಚಾಲನೆ ಇಷ್ಟ. ಡ್ರೈವರ್‌ ಒಬ್ಬ ಬೇರೊಂದು ಕಾರಿನಲ್ಲಿ ಇವರನ್ನು ಹಿಂಬಾಲಿಸುತ್ತಾನಲ್ಲದೆ ಅವರು ಯಾವತ್ತೂ ಇನ್ನೊಬ್ಬ ಚಾಲಕನ ಮೇಲೆ ಅವಲಂಬನೆ ಮಾಡಿದ್ದಿಲ್ಲ. 
ಇನ್ನೇನು, ಕಾರಿನೊಳಗೆ ಕೂರಬೇಕು ಎನ್ನುವಾಗ ಕಾರಿನ ಕೀ ಮರೆತು ಬಿಟ್ಟಿರುವುದು ಅರಿವಿಗೆ ಬರುತ್ತದೆ.
ಆದರೆ, ಯಾವ ಮಹಡಿಯಲ್ಲಿ ಕೀ ಮರೆತದ್ದು?
15, 16, 14, 19, 21,  16 ಅಥವಾ 13?
ಎಷ್ಟು ತಲೆ ಓಡಿಸಿದರೂ ತಿಳಿಯುವುದಿಲ್ಲ. ಅಲ್ಲಿರುವ ಸೆಕ್ಯುರಿಟಿಗೆ ಧಣಿಯ ತಳಮಳ ತಿಳಿಯುತ್ತದೆ. ಓವರ್‌ ಸ್ಮಾರ್ಟ್‌ ಆಗುವ ಉದ್ದೇಶದಲ್ಲಿ ಕೂಡಲೇ ಗೀತಾ ಹಿಮಾನಿಯವರಿಗೆ ಫೋನ್‌ ಮಾಡುತ್ತಾನೆ. ಅಷ್ಟರಲ್ಲಿ ಮನೆಯಲ್ಲಿರುವ ಎಲ್ಲ ಕೆಲಸಗಾರರು ಸೈರನ್‌ ಮೊಳಗಿದ್ದನ್ನು ಕೇಳಿದರೋ ಎಂಬಂತೆ ಎಲರ್ಟ್‌ ಆಗುತ್ತಾರೆ. ಮನೆಗೆಲಸದವರು, ಕಾರ್ಯದರ್ಶಿಗಳು, ನೌಕರರು, ಸಹಾಯಕರು, ಈಜುಕೊಳ ನೋಡಿಕೊಳ್ಳುವವವರು, ಜಿಮ್‌ನ ನಿರ್ವಾಹಕರು, ಲಿಫ್ಟ್ ಮೇಲ್ವಿಚಾರಕರು ಎಲ್ಲರೂ ಕೀ ಹುಡುಕಲು ತೊಡಗುತ್ತಾರೆ. ಎಲ್ಲಿ ಹುಡುಕಿದರೂ ಕಾರಿನ ಕೀ ಇಲ್ಲ. ಕೊನೆಗೆ ಸುಕೇಶ್‌ ಹಿಮಾನಿ ಅವರು ಕೈಕೊಡವಿ ಐಕಾನ್‌ ಕಾರಿನಲ್ಲಿ ಆಫೀಸಿಗೆ ಹೋಗುತ್ತಾರೆ. ದಾರಿಯುದ್ದಕ್ಕೂ ಕಾರಿನ ಕೀಯ ಸಮಸ್ಯೆ ಅವರ ತಲೆಯನ್ನು ಕೊರೆಯುತ್ತಿರುತ್ತದೆ. ಬೀದಿಯಲ್ಲಿ ಎಲ್ಲರೂ ಇವತ್ತೇಕೆ ಸುಕೇಶ್‌ ಅವರು ಬಿಎಂಡಬ್ಲೂನಲ್ಲಿ ಹೋಗುತ್ತಿಲ್ಲ ಎಂಬ ಬಗ್ಗೆ ಸಮಾಲೋಚನೆ ನಡೆಸಲಾರಂಭಿಸುತ್ತಾರೆ.

ಮಧ್ಯಾಹ್ನ 3.30 ಆಗುವಾಗ ಒಂದು ಸಂಗತಿ ಗೊತ್ತಾಗುತ್ತದೆ. ಹೊಸದಾಗಿ ಸೇರಿದ ಕೆಲಸಗಾರ್ತಿಯೊಬ್ಬಳು ಧಣಿಗಳ ಪ್ಯಾಂಟನ್ನು ಒಗೆದು 16ನೆಯ ಮಹಡಿಯಲ್ಲಿ ಒಣ ಹಾಕಿರುತ್ತಾಳೆ. ಕೀ ಅದರ ಜೇಬಿನಲ್ಲಿ ಉಳಿದಿರುತ್ತದೆ. ಅದು ಗೊತ್ತಾದದ್ದು  ಶ್ರೀಮತಿ ಗೀತಾ ಹಿಮಾನಿಯವರಿಗೆ. ಪ್ರತಿದಿನ ಅವರು ಇಸ್ತ್ರಿ ಹಾಕಿದ ಡ್ರೆಸ್‌ಗಳನ್ನು ನೀಟ್‌ ಹಾಕಿ ತೆಗೆದಿಡುವಾಗ ಕಾರಿನ ಕೀಯ ರಹಸ್ಯ ಹೊರಬಿದ್ದಿತ್ತು.

ಗೀತಾ ಹಿಮಾನಿಯವರಿಗೆ ಕಾರಿನ ಕೀ ಕಳೆದುಹೋದ ಸಮಸ್ಯೆ ತಲೆಚಿಟ್ಟು ಹಿಡಿಸಿತ್ತು. ಅದರ ಜೊತೆಗೆ ಇನ್ನೊಂದು ಕಿರಿಕಿರಿ…
ಮರುದಿನ ಬೆಳಗ್ಗೆ ಎದ್ದ ಕೂಡಲೇ ತಮ್ಮ ಪತಿಯನ್ನು ತರಾಟೆಗೆ ತೆಗೆದುಕೊಂಡರು. “”ರಾತ್ರಿ 3 ಗಂಟೆಗೆಲ್ಲ ನೀವು ಎಲ್ಲಿ ಅಲೆದಾಡಲು ಹೋಗುವುದು?” 
“”ಇಲ್ಲವಲ್ಲ, ನಾನು ಮನೆಯಲ್ಲಿಯೇ ಇದ್ದೆ” ಸುಕೇಶ್‌ ಅವರ ನಿರಾಳ ಉತ್ತರ.

“”ಮತ್ತೆ ಹೆಲಿಕಾಪ್ಟರ್‌ ರಾತ್ರಿ 3 ಗಂಟೆಗೆ ಮೇಲ್ಮಹಡಿಯಲ್ಲಿ ಲ್ಯಾಂಡ್‌ ಆಯಿತಲ್ಲ. ಅದರ ಶಬ್ದದ ಕಿರಿಕಿರಿಗೆ ನನಗೆ ನಿದ್ದೆಯೇ ಇಲ್ಲ!”
“”ಹೋ ಅದಾ? ಅದು ಕಾರಿನ ಕೀ ಕಳೆದುಹೋದ ಬಗ್ಗೆ ಕಾರಿನ ಕಂಪೆನಿಗೆ ಕಂಪ್ಲೇಂಟ್‌ ಕೊಟ್ಟಿದ್ದೆ. ಜರ್ಮನಿಯಿಂದ ಅದರ ಟೆಕ್ನೀಶಿಯನ್ಸ್‌ ಬಂದಿದ್ದ-ಡುಪ್ಲಿಕೇಟ್‌ ಕೀ ಕೊಡಲು”
“ಹಾ! ಅವಸ್ಥೆಯೆ!’ ಗೀತಾ ಉದ್ಗರಿಸಿದರು.
.
.
ಈ ಸಮಸ್ಯಾ ಪ್ರಕರಣ ಘಟಿಸಿದ ಮೇಲೆ ಅವರ ಮನೆಯಲ್ಲಿ ಕೆಲಸಕ್ಕಿರುವ ಗುಂಡನಿಗೆ ಜ್ಞಾನೋದಯವಾಗಿದೆ. “ನಾನಂತೂ ಹೊಸ ಮನೆ ಖರೀದಿಸುವಾಗ ತುಂಬ ಜಾಗ್ರತೆ ವಹಿಸುತ್ತೇನೆ. ಇಷ್ಟು ದೊಡ್ಡ ಮನೆ ಬೇಡವೇ ಬೇಡ’ ಎಂದು ಆಗಾಗ ಹೇಳುವ ಆತ, ಬ್ರೋಕರ್‌ಗಳಿಗೆ ಫೋನ್‌ ಮಾಡಿ “”ಎಲ್ಲಿಯಾದರೂ 2 ಬಿಎಚ್‌ಕೆ ಮನೆ ಇದ್ದರೆ ಹೇಳಿ”  ಎಂದು ಕೇಳಲಾರಂಭಿಸಿದ್ದಾನೆ.

ಶಶಿ

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.