ಒಂದು ಲಘು ಕತೆ
Team Udayavani, Aug 11, 2019, 5:00 AM IST
ಓರ್ವ ಇಂಜಿನಿಯರ್ ಮತ್ತಾತನ ಪತ್ನಿ ಸದಾ ಪರಸ್ಪರ ಜಗಳವಾಡುತ್ತಿದ್ದರು. ಕಲಹದ ವೇಳೆ ಅವರ ತಾರಕ ಧ್ವನಿ ನೆರೆಹೊರೆಯವರಿಗೆ ನಡುರಾತ್ರಿಯವರೆಗೂ ಕೇಳಿಸುತ್ತಿತ್ತು.
ಜಗಳ ನಡೆಯುತ್ತಿರುವಾಗಲೆಲ್ಲ ಪತ್ನಿ,”” ನಾನು ಸತ್ತನಂತರ ಸಮಾಧಿಯನ್ನು ಅಗೆದು ಮೇಲಕ್ಕೆ ಬಂದು ಮತ್ತೆ ಪತಿಯನ್ನು ಪೀಡಿಸುತ್ತೇನೆ ” ಎಂದು ಬೆದರಿಕೆ ಒಡ್ಡುತ್ತಿದ್ದಳು. ಆದ್ದರಿಂದ ನೆರೆಹೊರೆಯವರೂ ಆಕೆಗೆ ಹೆದರುತ್ತಿದ್ದರು ಮತ್ತು ಅದು ಆಕೆಗೆ ಹೆಮ್ಮೆಯ ವಿಷಯವೂ ಆಗಿತ್ತು.
ಕಾಕತಾಳೀಯವೆಂಬಂತೆ ಆಕೆ ಒಮ್ಮೆ ಸತ್ತು ಹೋದಳು.
ಆಕೆಯ ಶವವನ್ನು ಹೂತು ಸಂಸ್ಕಾರ ಪೂರ್ಣಗೊಳಿಸಿದ ಬಳಿಕ ಇಂಜಿನಿಯರ್ ಪತಿ ನಿರಾಳವಾಗಿ ಸ್ಥಳೀಯ ಬಾರ್ ಒಂದರೊಳಗೆ ನುಸುಳಿ ಇನ್ನಿಲ್ಲವೆಂಬಂತೆ ಮದಿರಾಪಾನ ಮಾಡಿ ಮನೆಗೆ ಬಂದ.
ಆತನ ಬಗ್ಗೆ ಕಾಳಜಿ ಹೊಂದಿರುವ ನೆರೆಹೊರೆಯವರು, “”ಇಂದು ರಾತ್ರಿ ನಿಜವಾಗಿಯೂ ಆಕೆ ಸಮಾಧಿಯನ್ನು ಅಗೆದು ಹೊರಬಂದು ನಿನಗೆ ಉಪದ್ರವ ನೀಡಿಯಾಳೆಂದು ಹೆದರಿಕೆಯಾಗುವುದಿಲ್ಲವೆ?” ಎಂದು ವಿಚಾರಿಸಿದರು. ಇಂಜಿನಿಯರ್ ಗೆಲುವಿನ ನಗೆ ಬೀರುತ್ತ ಉತ್ತರಿಸಿದ, “”ಅವಳು ಎಷ್ಟು ಬೇಕಾದರೂ ಅಗೆಯಲಿ, ನಾನು ಆಕೆಯನ್ನು ತಲೆ ಕೆಳಗಾಗಿಸಿ ಹೂತಿದ್ದೇನೆ!”
ರಮಣ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.