![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 5, 2020, 3:59 AM IST
ಬಹುಪುರಾತನ ಕುಟುಂಬವೊಂದರಲ್ಲಿ ಒಂದು ಹಳೆಯ ಸಂಗೀತ ಉಪಕರಣವಿತ್ತು. ಅದನ್ನು ನುಡಿಸುವುದು ಯಾರಿಗೂ ಗೊತ್ತಿರಲಿಲ್ಲ. ಆದರೆ, ಅದನ್ನು ಬಹಳ ಜೋಪಾನವಾಗಿ ಎತ್ತಿಟ್ಟುಕೊಂಡಿದ್ದರು.
ಕೆಲವು ತಲೆಮಾರುಗಳು ಕಳೆದ ಬಳಿಕ ಆ ಉಪಕರಣವನ್ನು ಎತ್ತಿ ಅಟ್ಟಕ್ಕೆ ಹಾಕಲಾಯಿತು. ಅದು ಅಲ್ಲಿ ಧೂಳು ತಿನ್ನುತ್ತ ಬಿದ್ದಿತ್ತು. ಅದೊಂದು ಬೃಹತ್ ಉಪಕರಣವಾದ್ದರಿಂದ ಅದನ್ನು ಎತ್ತಿಟ್ಟುಕೊಳ್ಳಲು ಬಹಳ ಜಾಗ ಬೇಕಾಗಿತ್ತು. ಒಂದು ದಿನ ಆ ಕುಟುಂಬದ ಹೊಸ ತಲೆಮಾರಿನ ಮಕ್ಕಳು, ಅದನ್ನು ಗುಜರಿಗೆ ಹಾಕಲು ನಿರ್ಧರಿಸಿದರು.
“ಇದೊಂದು ಹಳೇ ಸಂಗೀತ ಉಪಕರಣ ಧೂಳು ಮೆತ್ತಿಕೊಂಡಿದ್ದು, ಬಹಳ ಜಾಗ ತಿನ್ನುತ್ತದೆ’ ಎನ್ನುತ್ತ ಅದನ್ನು ಕಸದ ರಾಶಿಗೆ ಬಿಸಾಕಿದರು.
ಹಾಗೆ ಕಸದ ರಾಶಿಯ ಬಳಿಯಿಂದ ಅವರು ಕೆಲವು ಹೆಜ್ಜೆ ದೂರ ನಡೆಯುವಷ್ಟರಲ್ಲಿ ಒಬ್ಬ ಭಿಕ್ಷುಕ ಆ ಆರ್ಗನ್ ನುಡಿಸಲು ಶುರು ಮಾಡಿದ. ಆ ಆರ್ಗನ್‌ನ ಇಂಪು ಧ್ವನಿಗೆ ಇಡೀ ಬೀದಿಯ ಜನರು ಮಾರು ಹೋದರು. ಒಂದು ಗಂಟೆ ಹೊತ್ತು ಈ ಇಂಪಾದ ಸಂಗೀತ ಕೇಳಿ ಬಂತು. ಆ ಬೀದಿಯ ಜನರ ಕಣ್ಣಲ್ಲಿ ಭಿಕ್ಷುಕ ದೊಡ್ಡ ಸಂಗೀತಗಾರನಾಗಿಬಿಟ್ಟ.
ಇದನ್ನು ಗಮನಿಸಿದ ಪುರಾತನ ಕುಟುಂಬದ ಮಕ್ಕಳು, ಆರ್ಗನ್ ವಾಪಸ್ ಕೊಡುವಂತೆ ಭಿಕ್ಷುಕನ ಬಳಿ ವಿನಂತಿಸಿದರು.
ಭಿಕ್ಷುಕ ಹೇಳಿದ: “ಇದು ನಿಮ್ಮದಲ್ಲ. ಇದನ್ನು ಯಾರು ನುಡಿಸಬಲ್ಲರೋ, ಅವರಿಗೆ ಇದು ಸೇರುತ್ತದೆ. ನಿಮ್ಮ ಮನೆಯಲ್ಲಿ ಬಹುಕಾಲ ಇದ್ದ ಮಾತ್ರಕ್ಕೆ ಅದು ನಿಮ್ಮದಾಗುವುದಿಲ್ಲ. ಸಂಗೀತವೇ ಗೊತ್ತಿಲ್ಲದ ನಿಮಗೆ ಅದು ಸಲ್ಲುವುದಿಲ್ಲ ‘ ಎಂದು ಹೇಳಿದ.
ಆ ಬೀದಿಯ ಜನರೆಲ್ಲ ಭಿಕ್ಷುಕನ ಮಾತಿಗೆ ಸಮ್ಮತಿಸಿದರು.
ಹೌದು. ಯಾರಿಗೆ ಸಂಗೀತ ತಿಳಿದಿದೆಯೋ ಅವರಿಗೆ ಆ ಸಂಗೀತ ಉಪಕರಣ ಸಲ್ಲುತ್ತದೆ.
ಹಾಗೆಯೇ ಜೀವನ ಕೂಡ. ಯಾರು ಚಂದವಾಗಿ ಬಾಳಬಲ್ಲರೋ, ಅವರಿಗೆ ಜೀವನದ ಆಳ-ಅಗಲ ತಿಳಿಯುತ್ತ ಸಾಗುತ್ತದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.