ಮಾನ್ವಿತಾ ಮಾನ್ಯತಾ


Team Udayavani, May 20, 2018, 9:07 AM IST

o-19.jpg

ಶಿವರಾಜಕುಮಾರ್‌ ಅಭಿನಯದ “ಟಗರು’ ಚಿತ್ರವು ನೂರನೇ ದಿನದತ್ತ ಸಾಗುತ್ತಿದೆ. ಈ ಚಿತ್ರದಲ್ಲಿ ಶಿವರಾಜಕುಮಾರ್‌ ಅಲ್ಲದೆ ಇನ್ನೊಂದಿಷ್ಟು ಕಲಾವಿದರು ಸಹ ಗುರುತಿಸಿಕೊಂಡಿದ್ದು ವಿಶೇಷ. ಡಾಲಿ ಪಾತ್ರ ಮಾಡಿದ ಧನಂಜಯ್‌, ಕಾಕ್ರೋಚ್‌ ಪಾತ್ರದಲ್ಲಿ ಕಾಣಿಸಿಕೊಂಡ ಸುಧಿ, ಕಾನ್‌ಸ್ಟಬಲ್‌ ಸರೋಜ ಪಾತ್ರ ಮಾಡಿದ ತ್ರಿವೇಣಿ … ಹೀಗೆ ಪಟ್ಟಿ ಬೆಳೆಯುತ್ತದೆ. ಇವರೆಲ್ಲರ ಜೊತೆಗೆ ದೊಡ್ಡ ಮಟ್ಟದಲ್ಲಿ ಗಮನಸೆಳೆದಿದ್ದು ಪುನರ್ವಸು ಪಾತ್ರ ಮಾಡಿರುವ ಮಾನ್ವಿತಾ ಹರೀಶ್‌. ಮಾನ್ವಿತಾ ಅವರ ಪಾತ್ರ ಅದ್ಯಾವ ಮಟ್ಟಿಗೆ ಹಿಟ್‌ ಆಯಿತು ಎಂದರೆ, ಒರಾಯನ್‌ ಮಾಲ್‌ನಲ್ಲಿ “ಟಗರು’ ಸಿನಿಮಾ ನೋಡಿದ ರಾಮ್‌ಗೊàಪಾಲ್‌ ವರ್ಮಾ, ಸಿನಿಮಾದ ಜೊತೆಗೆ ಮಾನ್ವಿತಾ ಹರೀಶ್‌ ನಟನೆಗೆ ಫೀದಾ ಆಗಿದ್ದಾರೆ. ಬರೀ ಅಷ್ಟೇ ಆಗಿಲ್ಲ. ವರ್ಮ ಅವರು ತಮ್ಮ ಮುಂದಿನ ಸಿನಿಮಾದಲ್ಲಿ ಆಕೆಗೆ ಅವಕಾಶ ನೀಡುವ ಜೊತೆಗೆ ಆಕೆ ಕೇಳುವುದಕ್ಕಿಂತ 10 ಲಕ್ಷ ರೂಪಾಯಿ ಹೆಚ್ಚು ಸಂಭಾವನೆ ಕೊಡುತ್ತೇನೆ ಎಂದು ಘೋಷಿಸಿದ್ದರು.

ರಾಮ್‌ ಗೋಪಾಲ್‌ ವರ್ಮ ನಿರ್ದೇಶನದ ಹೊಸ ಚಿತ್ರದಲ್ಲಿ ಮಾನ್ವಿತಾ ನಟಿಸುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ, ವರ್ಮ ಕೊಟ್ಟ ಆಫ‌ರ್‌ನಿಂದ ಮಾನ್ವಿತಾ ಬಹಳ ಥ್ರಿಲ್‌ ಆಗಿದ್ದರು. “”ನನಗೆ ಭವಿಷ್ಯದ ಬಗ್ಗೆ ಗೊತ್ತಿಲ್ಲ. ಈ ಕ್ಷಣಕ್ಕೆ ನಾನು ತುಂಬಾ ಖುಷಿಯಾಗಿದ್ದೇನೆ. “ಟಗರು’ ಚಿತ್ರದ ಯಶಸ್ಸಿನಲ್ಲಿ ನನಗೇನು ಸಿಗಬೇಕಿತ್ತು ಅದು ಸಿಕ್ಕಿದೆ. ಆ ತರಹದ ಮೆಚ್ಚುಗೆ ಒಬ್ಬ ದೊಡ್ಡ ನಿರ್ದೇಶಕರಿಂದ ಸಿಕ್ಕಾಗ ಯಾರು ತಾನೆ ಖುಚಯಾಗಲ್ಲ ಹೇಳಿ. ಫ್ರೆàಮ್‌ ಟು ಫ್ರೆàಮ್‌ ಅದ್ಭುತವಾಗಿ ಕಾಣಿಸಿಕೊಂಡಿದ್ದೀಯ ಎಂದು ಮೆಚ್ಚುಗೆ ಸೂಚಿಸಿದ್ದು ನನಗೆ ಸಿಕ್ಕ ದೊಡ್ಡ ಗೆಲುವು. ಈ ತರಹ ನನ್ನ ಬಗ್ಗೆ ಟ್ವೀಟ್‌ ಮಾಡಿರಲಿಲ್ಲ’ ಎಂದು ಮಾನ್ವಿತಾ ಕೆಲವು ದಿನಗಳ ಹಿಂದೆ ಹೇಳಿಕೊಂಡಿದ್ದರು.

ಮಾನ್ವಿತಾ ಅವರ ಮುಂದಿನ ನಡೆ ಏನಿರಬಹುದು? ಅವರು ಬಾಲಿವುಡ್‌ಗೆ ಹಾರುತ್ತಾರಾ ಎಂದು ಎಲ್ಲರೂ ಕುತೂಹಲದಿಂದ ಕಾಯುವಾಗಲೇ, ಮಾನ್ವಿತಾ ಎಲ್ಲರಿಗೂ ಒಂದು ಸರ್‌ಪ್ರೈಸ್‌ ಕೊಟ್ಟಿದ್ದಾರೆ. ಅದೇನೆಂದರೆ, ಮಾನ್ವಿತಾ ಈಗ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಕಳೆದ ತಿಂಗಳು ಜಪಾನ್‌ ಪ್ರವಾಸದಲ್ಲಿದ್ದ ನಾಗತಿಹಳ್ಳಿ ಚಂದ್ರಶೇಖರ್‌, ಬೆಂಗಳೂರಿಗೆ ಮರಳುವುದರ ಜೊತೆಗೆ ಒಂದು ಹೊಸ ಚಿತ್ರವನ್ನು ನಿರ್ದೇಶಿವುದಾಗಿ ಘೋಷಿಸಿದ್ದಾರೆ. ಈ ಚಿತ್ರದಲ್ಲಿ ಗುರುನಂದನ್‌ ನಾಯಕನಾಗಿ ನಟಿಸುತ್ತಿದ್ದು, ಗುರುನಂದನ್‌ಗೆ ನಾಯಕಿಯಾಗಿ ಮಾನ್ವಿತಾ ಅವರನ್ನು ಆಯ್ಕೆ ಮಾಡಿದ್ದಾರೆ ನಾಗತಿಹಳ್ಳಿ. ಇದಕ್ಕೂ ಮುನ್ನ ಸೂರಿ, ಆರ್‌. ಚಂದ್ರು ಮುಂತಾದ ಜನಪ್ರಿಯ ನಿರ್ದೇಶಕರ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಮಾನ್ವಿತಾ, ಸಹಜವಾಗಿಯೇ ಖುಷಿಯಾಗಿದ್ದಾರೆ.

ಇದಕ್ಕೂ ಮುನ್ನ ಕನ್ನಡದ “ರಿಲ್ಯಾಕ್ಸ್‌ ಸತ್ಯ’, “ತಾರಕಾಸುರ’, “ಅರಿಷಡ್ವರ್ಗ’ ಚಿತ್ರಗಳು ಈ ಹಿಂದೆಯೇ ಅವರ ಅಕೌಂಟ್‌ನಲ್ಲಿತ್ತು. ನಾಗತಿಹಳ್ಳಿ ಚಂದ್ರಶೇಖರ್‌ ಅವರ ಹೊಸ ಸಿನಿಮಾ ಸೇರಿ, ಮಾನ್ವಿತಾ ಅಕೌಂಟ್‌ನಲ್ಲಿ ಈಗ ನಾಲ್ಕು ಚಿತ್ರಗಳು ಸೇರಿದಂತಾಗಿದೆ. ಈಗಾಗಲೇ ನಾಲ್ಕರಲ್ಲಿ ಎರಡು ಚಿತ್ರಗಳನ್ನು ಮುಗಿಸಿ, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ ಅವರು. ಇನ್ನು ನಾಗತಿಹಳ್ಳಿ ಚಂದ್ರಶೇಖರ್‌ ಅವರ ಹೊಸ ಸಿನಿಮಾ ಇನ್ನಷ್ಟೇ ಶುರುವಾಗಬೇಕಿದೆ. ಅದಕ್ಕಾಗಿಯೇ ಲೊಕೇಶನ್‌ ಹುಡುಕುವುದಕ್ಕೆ ಲಂಡನ್‌ಗೆ ಹೋಗಲಿದ್ದಾರೆ ಮೇಷ್ಟ್ರು. ಏಕೆಂದರೆ, ಚಿತ್ರದ ಬಹುತೇಕ ಭಾಗ ಲಂಡನ್‌ನಲ್ಲಿ ನಡೆಯಲಿದೆಯಂತೆ. ಲೊಕೇಶನ್‌ ಹುಡುಕಿ ಬಂದ ನಂತರ ಬಹುಶಃ ಮುಂದಿನ ತಿಂಗಳಿನಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

ಎಲ್ಲಾ ಸರಿ, ವರ್ಮ ನಿರ್ದೇಶನದ ಚಿತ್ರದಲ್ಲಿ ಮಾನ್ವಿತಾ ನಟಿಸುವುದು ಏನಾಯಿತು ಎಂಬ ಕೊನೆಯ ಪ್ರಶ್ನೆ ಬರಬಹುದು. ಈ ಪ್ರಶ್ನೆಗೆ ವರ್ಮ ಅವರೇ ಉತ್ತರಿಸಬೇಕು.

ಟಾಪ್ ನ್ಯೂಸ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

8-uv-fusion

Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.