ವಯಸ್ಸಿನ ವಿಷಯ
Team Udayavani, Oct 1, 2017, 6:10 AM IST
ಪತ್ರಿಕೆಯೊಂದರಲ್ಲಿ ಜಾಹೀರಾತು ಪ್ರಕಟವಾಗಿತ್ತು:
“”ನಿಮಗಾದ ವಯಸ್ಸಿಗಿಂತಲೂ, ಕಡಿಮೆ ವಯಸ್ಸಿನವರಂತೆ ನೀವು ಕಾಣುತ್ತಿದ್ದಲ್ಲಿ ಇತರರಿಗೆ ನಿಮ್ಮ ವಯಸ್ಸು ಗೊತ್ತಾಗದೇ ಬೇಸ್ತುಬಿದ್ದ ಸನ್ನಿವೇಶವನ್ನು ವಿವರಿಸಿ ನಮಗೆ ಪತ್ರ ಬರೆದು ಕಳುಹಿಸಿ. ಐದು ಸಾವಿರ ರೂಪಾಯಿಯ ಬಹುಮಾನ ಗೆಲ್ಲಿರಿ. ಜೊತೆಯಲ್ಲಿ ನಮ್ಮ ಸೋಪಿನ ರ್ಯಾಪರ್ ಇರಲಿ…”
ಬಹುಮಾನದ ಮೊತ್ತವನ್ನು ನೋಡಿದ್ದೇ ತಡ, ಆದ ವಯಸ್ಸಿಗಿಂತಲೂ ಐದು ವರ್ಷ ಜಾಸ್ತಿಯೇ ಆದಂತೆ ಕಾಣುವ ನಾನು, ಚಿಕ್ಕವಳಂತೆ ಕಂಡ ಢೋಂಗಿ ಕತೆಯೊಂದನ್ನು ಬರೆದು ಕಳುಹಿಸಿದ್ದೆ.
ಹದಿನೆಂಟೂ ಕೂಡ ದಾಟದಂತೆ ಕಾಣುತ್ತಿದ್ದ ನನ್ನನ್ನು ಟ್ರಾಫಿಕ್ಕಿನಲ್ಲಿ ಕಂಡ ಪೊಲೀಸ್, “”ಏಯ್ ಹುಡ್ಗಿà, ನಿಂಗಿನ್ನೂ ಪೀಯೂಸೀನೂ ಮುಗಿದ ಹಾಗೆ ಕಾಣಲ್ಲ. ಲೈಸೆನ್ಸ್ ಇಲೆªà ಗಾಡಿ ಬೇರೇ ಓಡುಸಾö, ತೆಗಿ ನಿನ್ನ ಲೈಸೆನ್ಸ್” ಎಂದು ದರ್ಪ ತೋರಿದಾಗ, ವಯಸ್ಸು ಇಪ್ಪತೂ¾ರು ಎಂದು ದಾಖಲಿಸಿದ್ದ ಡ್ರೈವಿಂಗ್ ಲೈಸೆನ್ಸ್ ಅವನ ಮುಂದೆ ಚಾಚಿದ್ದೆ. ಬೆಪ್ಪಾದ ಪೊಲೀಸ್, ಮಿಕಿಮಿಕಿ ನನ್ನ ಮೂರ್ತಿಯನ್ನೇ ನೋಡುತ್ತಾ, ಮುಂದೆ ಹೋಗಲು ಅನುವು ಮಾಡಿಕೊಟ್ಟನೆಂಬುದೇ ಆ ಢೋಂಗಿ ಕತೆ. ಜಾಹೀರಾತು ಕೊಟ್ಟಿದ್ದ ಕಂಪೆನಿಯವರು, ನನ್ನ ಫೋಟೋವನ್ನಾಗಲಿ, ಸಾಕ್ಷ್ಯಾಧಾರಗಳನ್ನಾಗಲೀ ಕೇಳದ ಕಾರಣ, ನನಗೆ ಬಹುಮಾನವೂ ಸಿಕ್ಕಿತೆನ್ನಿ!
ವಾಸ್ತವದ ಸಂಗತಿಯೆಂದರೆ, ನಾನು ಹುಟ್ಟಿದ ತುಂಬು ಕುಟುಂಬದಲ್ಲಿ ನಾನೇ ಎಲ್ಲರಿಗಿಂತಲೂ ಚಿಕ್ಕವಳು. ಅಣ್ಣಂದಿರು ಮತ್ತು ಅಕ್ಕಂದಿರೆಲ್ಲರೂ ಹಿರಿತನದ ಅಧಿಕಾರ ಬಳಸಿಕೊಂಡು, ಸದಾ ನನಗೆ ನೀತಿಪಾಠ ಬೋಧಿಸಿದವರೇ ಟೇಬಲ್ ಮೇಲಿನ ಯಾರದ್ದೇ ಜಾಮಿಟ್ರಿ ಬಾಕ್ಸು, ಯಾರದ್ದೇ ಅಜಾಗರೂಕತೆಯಿಂದ ಕೆಳಗೆ ಬಿದ್ದು, ಪೆನ್ನು, ಪೆನ್ಸಿಲ್, ಕಂಪಾಸು, ಇರೇಜರುÅ ಚೆಲ್ಲಾಪಿಲ್ಲಿಯಾದರೂ ಕೆಳಗೆ ಬಗ್ಗಿ ಬಾಗಿ, ಹೆಕ್ಕಿ ತೆಗೆಯುವ ಕೆಲಸ, ಚಿಕ್ಕವಳಾದ ತಪ್ಪಿಗೆ ನನ್ನ ಹೆಗಲೇರುತ್ತಿತ್ತು. ಅಡುಗೆ ಮನೆಗೆ ಅರ್ಜೆಂಟಾಗಿ ನಿಂಬೇಹಣ್ಣು, ಕರಿಬೇವು, ಕೊತ್ತಂಬರಿಸೊಪ್ಪು, ಟೊಮ್ಯಾಟೋ ಅಗತ್ಯಬಿದ್ದರೆ, ಹಾnಂ ಹೂಂ ಎನ್ನದೇ ನಿಮಿಷಾರ್ಧದಲ್ಲಿ ಮನೆಯೆದುರಿನ ತರಕಾರಿ ಅಂಗಡಿಗೆ ಹೋಗಿ, ಅವುಗಳನ್ನು ತಂದು ಅಡುಗೆಮನೆಗೊಪ್ಪಿಸಲೂ ಕೂಡ ಎಲ್ಲರಿಗೂ ನೆನಪಾಗುತ್ತಿದ್ದುದು ಕಿರಿಯಳಾದ ನನ್ನ ಹೆಸರು. ಹಿತ್ತಲ ಪೇರಳೇ ಮರವನ್ನೇರಲು ಬೆಟ್ಟದಷ್ಟು ಆಸೆಯಿದ್ದರೂ ಕಿರಿಯಳಾದ ತಪ್ಪಿಗೆ ಅನುಮತಿಯಿಂದ ವಂಚಿತಳಾಗಿದ್ದೆ. ಮರವೇರುವ ಸಂದರ್ಭವಿದ್ದಾಗ, “”ನೀನಿನ್ನೂ ಚಿಕ್ಕವಳು ಬಿಡು. ಮರಾನ ಅಣ್ಣ ಹತ್ತಲಿ…” ಎಂಬ ಬುದ್ಧಿಮಾತು ಹೇಳಬೇಕಾಗಿದ್ದಿತು. ದೊಡ್ಡವರ ದರ್ಪದ ಬಗ್ಗೆ, ಅಪ್ಪ-ಅಮ್ಮನವರಲ್ಲಿ ದೂರಿತ್ತಾಗಲೂ, “”ನೀನು ಚಿಕ್ಕವಳಲ್ವಾ? ಅಣ್ಣ-ಅಕ್ಕ ಎರಡು ಮಾತಂದ್ರೆ ತಿದೊRàಬೇಕು. ಅನುಸರಿಸಿಕೊಂಡು ಹೋಗ್ಬೇಕು” ಎನ್ನುವ ಸಾಂತ್ವಾನವೇ ಎತ್ತರವಾಗಿರಿ¤ತ್ತು. ಸದಾ ಕಿರಿತನವು ನನ್ನ ಸ್ವಾತಂತ್ರ್ಯ. ಅಧಿಕಾರ-ಹಕ್ಕುಗಳನ್ನು ಕಿತ್ತುಕೊಂಡಿದೆ ಎಂದು ನನಗನ್ನಿಸಿದ್ದರಿಂದ, ಕಿರಿತನದ ಬಂಧನದಿಂದ ಮಕ್ಕಳಾಗಲು ಕಾತರಳಾಗಿದ್ದೆ.
“ಬೆಕ್ಕಿಗೆ ಗಂಟೆ ಕಟ್ಟುವವರಾರು?’ ಎಂದು ತಲೆಕೆಡಿಸಿಕೊಳ್ಳುವುದಕ್ಕಿಂತಲೂ, ನಾವೇ ಬೆಕ್ಕಾಗಿ ರೂಪುಗೊಳ್ಳುವುದು ಲೇಸಲ್ಲವೆ? ನನ್ನ ಮನಸ್ಸೂ ಕೂಡ, ನಾನೇ ಹಿರಿಯಳಾಗಿ, ಬೇರೆಯವರ ಮೇಲೆ ಅಧಿಕಾರ ಚಲಾಯಿಸುವ ಸುವರ್ಣಾವಕಾಶಕ್ಕಾಗಿ ಕಾಯುತ್ತಿತ್ತು. ಪರಿಸ್ಥಿತಿ ಹೀಗಿದ್ದ ಕಾರಣ, ನನಗ್ಯಾವತ್ತೂ ನಾನು ಚಿಕ್ಕವಳಾಗಿ ಕಾಣಬೇಕೆಂದು ಅನ್ನಿಸಲೇ ಇಲ್ಲ. ಜೊತೆಯವರ ನಡುವೆ ಹಿರಿಯಳಂತೆ ಕಂಡರೆ, ಅವರೆಲ್ಲಾ ಭಯ-ಭಕ್ತಿಯಿಂದ ನನ್ನ ಮಾತು ಕೇಳುತ್ತಾರೆ, ಎಂಬುದೇ ನನ್ನ ನಂಬಿಕೆಯಾಗಿದ್ದಿತು. ಇದೇ ಲೆಕ್ಕಾಚಾರದಲ್ಲಿ ಎಲ್ಲರೆದುರಿನಲ್ಲಿ ಆದುದಕ್ಕಿಂತಲೂ ಹೆಚ್ಚಿನ ವಯಸ್ಸನ್ನು ಘೋಷಿಸಿಕೊಂಡು ಅಪ್ಪ-ಅಮ್ಮನಿಂದ ಕಿವಿ ಹಿಂಡಿಸಿಕೊಂಡಿದ್ದೂ ಇದೆ. ಹಿರಿಯರೊಂದಿಗೆ ಟೆಂಟ್ ಸಿನೆಮಾಗೆ ಹೋಗುವಾಗಲಂತೂ, ಅಪ್ಪಿತಪ್ಪಿಯಾದರೂ ವಯಸ್ಸನ್ನು ಎಲ್ಲೂ ಬಾಯಿಬಿಡುವುದಿಲ್ಲವೆಂಬ ಪೂರ್ವ ಶರತ್ತಿಗೆ ನಾನು ಸಮ್ಮತಿ ಸೂಚಿಸಿದ ನಂತರವಷ್ಟೇ ಮನೆಯ ಮೆಟ್ಟಿಲಿಳಿಯುತ್ತಿದ್ದುದು. ಟೆಂಟ್ ಸಿನೆಮಾ! ವ್ಹಾ!!
ತಿಂಗಳ ಸಂಬಳವನ್ನೆಲ್ಲಾ ಸುರಿದು ಖರೀಸಿದ್ದ ಪಾಪ್‌ಕಾರ್ನ್, ಕುರುಕುರೆ, ಚಿಪುÕ ಮೆಲ್ಲುತ್ತಾ ಒಂದಕ್ಕೆ ಮೂರು ಪಟ್ಟು ಹಣ ತೆತ್ತು ಮಾಲಿನ ಕಗ್ಗತ್ತಲ ಗುಹೆಯೊಳಗೆ ಸಿನೆಮಾ ವೀಕ್ಷಿಸಿ, ಬೆಂದು-ಬವಸಳಿದು ಕಣ್ಣುಜ್ಜುತ್ತಾ ಹೊರಬರುವುದನ್ನೇ ಮನೋರಂಜನೆಯೆಂದು ನಂಬಿರುವ ಇಂದಿನ ತರುಣ-ತರುಣಿಯರಿಗೆ ಟೆಂಟ್ ಸಿನೆಮಾದ ಸ್ವಾರಸ್ಯ ಅರ್ಥವಾಗಲಾರದು, ಬಿಡಿ. ನಿಸರ್ಗದ ಮಡಿಲಲ್ಲಿ ಬೆಳ್ಳಿ ಚುಕ್ಕಿ ಬಾನಿನ ಚೆಲುವನ್ನು ಆಸ್ವಾದಿಸುತ್ತಾ ಚಿತ್ರವೀಕ್ಷಣೆ ಮಾಡುವ ಮಜಾವೇ ಬೇರಿತ್ತು. ಛೇ… ಛೇ… ಈಗೆಲ್ಲಿ ಆ ಗಮ್ಮತ್ತು!
ಅಂದಿನ ಕಾಲಕ್ಕೆ ನಮ್ಮೂರಿನ ಹೊಳೆಬಯಲಿನಲ್ಲಿ ಬೇಸಿಗೆಗೆ ಸಿನೆಮಾ ಟೆಂಟ್ ತಲೆಯೆತ್ತಿ ನಿಂತಿರುತ್ತಿತ್ತು. ನನ್ನ ಅಪ್ಪ-ಅಮ್ಮ ಆಗೊಮ್ಮೆ ಈಗೊಮ್ಮೆ ನನ್ನನ್ನು ಕರೆದುಕೊಂಡು ಅಲ್ಲಲ್ಲ… ಎತ್ತಿಕೊಂಡು ಸಿನೆಮಾಕ್ಕೆ ಹೋಗುತ್ತಿದ್ದರು. ದೊಡ್ಡವರು ನನ್ನನ್ನು ಎತ್ತಿಕೊಂಡು ಹೋಗುತ್ತಿದ್ದರು ಎಂದಮಾತ್ರಕ್ಕೆ, ಆಗ ನಾನು ಒಂದು ವರ್ಷದ ಒಳಗಿನ ಕೂಸಾಗಿದ್ದಿರಬೇಕು ಎಂದು ನೀವು ಊಹಿಸಿದ್ದರೆ, ಅದು ಖಂಡಿತಾ ತಪ್ಪು.
ಟೆಂಟಿನ ಹೊರಬಾಗಿಲಲ್ಲಿ ನಿಂತಿರುತ್ತಿದ್ದ ಗೇಟ್‌ಕೀಪರ್, ಏಳು ವರ್ಷದ ಒಳಗಿನ ಮಕ್ಕಳಿಗೆ ಹಾಫ್ ಟಿಕೇಟ್ ಮತ್ತು ಏಳು ಮೀರಿದ ಮಕ್ಕಳಿಗೆ ಪುಲ್ ಟಿಕೇಟ್ ತೋರಿಸಲು ಕೇಳುತ್ತಿದ್ದ. ಉಳಿತಾಯದ ದೃಷ್ಟಿಯಿಂದ ದೊಡ್ಡವರು ನಮಗೆ ಹಾಫ್ ಟಿಕೇಟ್ ತೆಗೆಯುತ್ತಿದ್ದರಾದ್ದರಿಂದ, ನಮ್ಮ ವಯಸ್ಸನ್ನು ಬಚ್ಚಿಡಲು ಮಣಭಾರದ ನಮ್ಮನ್ನು ಸೊಂಟಕ್ಕೇರಿಸಿಕೊಳ್ಳುತ್ತಿದ್ದರು! ಏಳಕ್ಕೆ ಉದುರಿ, ಪುನಃ ಹುಟ್ಟಿದ ಹಲ್ಲುಗಳು ಕಾಣಬಾರದೆಂದು ಬಾಯಿ ಬಿಗಿಯಾಗಿ ಮುಚ್ಚಿರುತ್ತಿದ್ದೆವು. ನಾಲ್ಕು ಅಡಿ ಎತ್ತರಕ್ಕೆ ಬೆಳೆದಿದ್ದ ನಾನು, ಕಾಲುಗಳನ್ನು ನೆಲಕ್ಕೆ ತಗುಲದಂತೆ ಮುದುರಿ ಹಿಡಿದುಕೊಂಡು ಕೋತಿ ಮರವನ್ನಪ್ಪುವಂತೆ ಅಮ್ಮನನ್ನು ಅಪ್ಪಿಕೊಂಡು ಸೊಂಟದಲ್ಲಿ ಕುಳಿತಿರುತ್ತಿದ್ದೆ. ಆನೆಭಾರದ ಕೂಸನ್ನು ಹೊತ್ತಿರುತ್ತಿದ್ದ ನಮ್ಮಮ್ಮ ಟೆಂಟೊಳಗೆ ಹೋದದ್ದೇ ತಡ, “ಪಾಪು’ವನ್ನು ಸೀಟಿನಲ್ಲಿ ಕುಕ್ಕಿ “ಉಸ್ಸಪ್ಪಾ’ ಅಂತ ಏದುಸಿರು ಬಿಟ್ಟಿರಲಿಕ್ಕೂ ಸಾಕು! ನಿಜ, ಇಲ್ಲಿಂದಲೇ ಪ್ರಾರಂಭ, ವಯಸ್ಸು ಬಚ್ಚಿಡುವ ಸರ್ಕಸ್ಸಿನ ತಾಲೀಮು.
ಈ ಸರ್ಕಸ್ಸು ಸಿನೆಮಾ ಟೆಂಟಿಗೆ ಮಾತ್ರವೇನೂ ಸೀಮಿತವಾಗಿರಲಿಲ್ಲ. ಬಸ್ಸಿನೊಳಗೂ ಇತ್ತು. “ಒಂದೂವರೆ’ ಟಿಕೆಟ್ ತೆಗೆಯುವ ಅಪ್ಪನ ಜೊತೆ ಪ್ರಯಾಣಿಸುವಾಗಲೆಲ್ಲಾ ಕಂಡೆಕ್ಟರ್ ಅಪ್ಪನನ್ನು “”ಅರ್ಧ ಯಾವುದು?” ಎಂದು ಕೇಳಿದಾಗ, ಅಪ್ಪ ನನ್ನೆಡೆಗೆ ಬೆರಳು ತೋರಿಸುತ್ತಿದ್ದರು. “”ಪುಟ್ಟಿà ಎಷ್ಟನೇ ಕ್ಲಾಸಿನಲ್ಲಿ ಓದುತ್ತಿದ್ದೀಯಾ, ಮರೀ?” ಕಂಡೆಕ್ಟರ್ ರಾಗವಾಗಿ ನನ್ನನ್ನು ಕೇಳುತ್ತಿದ್ದ. ನಮ್ಮ ವ್ಯಾಸಂಗ, ಮಿಡ್ಲ್ ಸ್ಕೂಲು ದಾಟಿ, ಹೈಸ್ಕೂಲು ಮೆಟ್ಟಿಲೇರುತ್ತಿದ್ದು, “”ನಾನಿನ್ನು ಹೈಸ್ಕೂಲು ಸೇರೊRàಬೇಕು” ಎನ್ನಲು ಆಸೆಯಾಗುತ್ತಿದ್ದರೂ, ಒಲ್ಲದ ಮನಸ್ಸಿನಿಂದ “ನಾಲ್ಕು’ ಎನ್ನುತ್ತಿದ್ದೆವು.
ಇದು ಕೇವಲ ನಮ್ಮ ಅಪ್ಪ-ಅಮ್ಮ ನೀಡುತ್ತಿದ್ದ ತರಬೇತಿಯಲ್ಲ. ಊರಿನ ಎಲ್ಲಾ ಅಪ್ಪ-ಅಮ್ಮಂದಿರಿಗೂ ಮಕ್ಕಳಿಗೆ ಕಡಿಮೆ ವಯಸ್ಸನ್ನು ಹೇಳುವ ತಾಲೀಮು ಕೊಟ್ಟಿರುತ್ತಾರೆಂಬುದು, ಶಾಲೆಗೆ ಸೇರಿದ ದಿನದಂದೇ ಮನವರಿಕೆಯಾಗಿತ್ತು. ಶಾಲೆಯ ದಾಖಲಾತಿಗಳನ್ನು ಗಮನಿಸಿ, ಸಹಪಾಠಿಗಳಿಗೆ ಜನ್ಮದಿನದಂದು ಶುಭ ಕೋರಿದರೆ, “”ಇವತ್ತು ನನ್ನ ಬರ್ತ್ ಡೇ ಅಲ್ಲ. ಶಾಲೆಗೆ ಸೇರÕಕೇಂತ ಅಪ್ಪ ಆ ಬರ್ತ್‌ಡೇ ಮಾಡಿದಾರೆ. ಸ್ಕೂಲ್ ರೆಕಾರ್ಡ್ ಸರೀಯಿಲ್ಲ” ಎನ್ನುತ್ತಾ ಜನ್ಮದಿನದ ಶುಭಾಶಯವನ್ನೇ ತಿರಸ್ಕರಿಸುತ್ತಿದ್ದರು. ಸ್ಕೂಲ್ ರೆಕಾರ್ಡ್‌ನಲ್ಲಿರುವುದಕ್ಕಿಂತಲೂ, ನಿಜವಯಸ್ಸು ಎರಡು ವರ್ಷ ಕಡಿಮೆಯೆಂಬುದೇ ಎಲ್ಲರ ವಾದ. “ಆರಕ್ಕೆ ಕಲಿತ ಚಾಳಿ, ಅರವತ್ತಕ್ಕೂ ಬಿಡದು’ ಎನ್ನುವುದನ್ನು ಪುಷ್ಟೀಕರಿಸುವಂತೆ ಹೆಚ್ಚಿನವರು ಬದುಕಿನುದ್ದಕ್ಕೂ “ಬರ್ತ್ ಸರ್ಟಿಫಿಕೇಟ್ ಸರೀಯಿಲ್ಲ’ ಎನ್ನುವುದನ್ನೇ ರೂಢಿ ಮಾಡಿಕೊಂಡಿರುತ್ತಾರೆ.
ಇತ್ತೀಚೆಗೆ ನಿವೃತ್ತರಾದ ಸಹೋದ್ಯೋಗಿಯೊಬ್ಬರು, ವಿದ್ಯಾ ಸಮಾರಂಭದ ಗೌರವ ಸ್ವೀಕರಿಸಿ ಮಾತನಾಡುತ್ತಾ, “”ನಮ್ಮ ಅಪ್ಪ ವಯಸ್ಸು ಜಾಸ್ತಿ ಮಾಡಿ, ಶಾಲೆಗೆ ಸೇರಿಸದಿದ್ದರೆ ಇನ್ನೂ ಐದು ವರ್ಷ ಸೇವೆಯಲ್ಲೇ ಮುಂದುವರಿಯುತ್ತಾ ನಿಮ್ಮೊಂದಿಗೆ ಆಫೀಸಿನಲ್ಲೇ ಇರುತ್ತಿದ್ದೆ” ಎನ್ನುವಾಗ, ಮಾತು ಬಾರದ, ನಡೆಯಲೂ ತಿಳಿಯದ ಎಳೇ ಕೂಸನ್ನು ಶಾಲೆಗೆ ದಾಖಲಿಸಿದ ಅವರಪ್ಪನ ಚಾಣಾಕ್ಷತೆಗೆ, ತೊಟ್ಟಿಲ ಕೂಸನ್ನು ಮಡಿಲಲ್ಲಿಟ್ಟುಕೊಂಡು ಓದು-ಬರಹ ಕಲಿಸಿದ ಶಾಲೆಯ ಮಾಸ್ತರರ ಸಹನೆಗೂ ಬೆರಗಾಗಿ ಮೂಕಳಾಗಿದ್ದೆ!
ವಯಸ್ಸನ್ನು ಹಿರಿದು ಮಾಡಿ ಮಕ್ಕಳನ್ನು ಶಾಲೆಗೆ ದಾಖಲಿಸುವ ಅಪ್ಪಂದಿರು ದೊಡ್ಡ ಸಂಖ್ಯೆಯಲ್ಲೇ ಎಲ್ಲೆಡೆ ಇರುವರಾದರೂ, ಈ ತನಕ ಸಂತ್ರಸ್ತ ಮಕ್ಕಳಿಗೆ ತಂದೆಯ ತಪ್ಪನ್ನು ತಿದ್ದಿ ವಯಸ್ಸನ್ನು ಘೋಷಿಸಿಕೊಳ್ಳುವ ಹಕ್ಕನ್ನು ಯಾವ ಸರ್ಕಾರವೂ ನೀಡಿಲ್ಲ. ಯಾವ ಮಕ್ಕಳೂ ತಪ್ಪು ವಯಸ್ಸನ್ನು ದಾಖಲಿಸುವ ಅಪ್ಪಂದಿರ ವಿರುದ್ಧ ದಾವೆ ಹೂಡಿದ ಉದಾಹರಣೆಗಳಿಲ್ಲ. ವಿಪರ್ಯಾಸವೆಂದರೆ ಇದೇ ತಾನೇ?
ನಿಸರ್ಗದ ನಿಯಮದಂತೆ, ಭೂಮಿ ಸೂರ್ಯನ ಸುತ್ತ ಸುತ್ತಲೇಬೇಕು. ಪಾಪ, ಭೂಮಿಗೆ ಬೇರೆ ಆಯ್ಕೆಗಳೇ ಇಲ್ಲ. ಭೂಮಿಯ ಮೇಲೆಯೇ ಪ್ರಯಾಣ ಹೊರಟಿರುವ ನಮಗೂ ಸೂರ್ಯ ಪ್ರದಕ್ಷಿಣೆ ಕಡ್ಡಾಯ, ತಪ್ಪಿಸಿಕೊಳ್ಳುವಂತಿಲ್ಲ. ಪ್ರತಿ ಪ್ರದಕ್ಷಿಣೆಗೂ ಭೂಮಿಯಲ್ಲಿ ಮಳೆ, ಚಳಿ, ಗಾಳಿ, ಬಿಸಿಲು, ಹವಾಮಾನದಲ್ಲಿ ಬದಲಾವಣೆ. ಮನುಷ್ಯನ ಬದುಕಿನಲ್ಲಿ ಬಾಲ್ಯ, ತಾರುಣ್ಯ, ಮುಪ್ಪು, ಸಾವುಗಳೆಂಬ ಬದಲಾವಣೆ. ತಡೆಯುವಂತಿಲ್ಲ, ಅಲ್ಲಗಳೆಯುವಂತಿಲ್ಲ. ಮೂವತ್ತನ್ನು ಇಪ್ಪತ್ತೆಂಟೆನ್ನುವಾಗ ಒಂದಿಷ್ಟು ಹಿಗ್ಗು, ನಿಜವಾದರೂ, ಕಡಿಮೆ ವಯಸ್ಸಿನವರಂತೆ ಕಾಣುವುದು ಸುಲಭಸಾಧ್ಯವೇ? ತರುಣರ ಹಾವಭಾವ ಅನುಕರಿಸಬೇಕು, ಸದಾ ಉತ್ಸಾದಲ್ಲಿರಬೇಕು, ಚುರುಕಾಗಿರಬೇಕು, ನಗಬೇಕು. ಆಧುನಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಮುಖಕ್ಕೆ ಮೇಕಪ್ಪು, ಕೂದಲಿಗೆ ಕಪ್ಪು ಮೆತ್ತಿಕೊಳ್ಳಬೇಕು. ಇಷ್ಟೆಲ್ಲಾ ಪರಿಶ್ರಮದ ನಂತರ ಇಳಿಯುವ ವಯಸ್ಸಾದರೂ ಎಷ್ಟು? ಅಬ್ಬಬ್ಟಾ ಅಂದರೆ ಐದು. ಇದರ ಮೇಲೆ ಅಪ್ಪನ ಬೋಗಸ್ ಬರ್ತ್ ಸರ್ಟಿಫಿಕೇಟಿನ ತಂತ್ರಗಾರಿಕೆ ಎಷ್ಟರಮಟ್ಟಿಗೆ ಕೆಲಸ ಮಾಡೀತು? ಹಾಕಿದ ಮೇಕಪ್ಪು ವ್ಯರ್ಥವಾಗದಿರಲೆಂದು, ಅಪ್ಪನ ಸುಳ್ಳಿನ ಸಬೂಬು ಅಷ್ಟೇ. ಇದೂ ಜನ್ಮದಿನದ ದಾಖಲಾತಿಯ ಸದ್ಬಳಕೆಯೇ ಬಿಡಿ.
ಮೊನ್ನೆ ಕೂದಲು ಸಂಪೂರ್ಣ ನರೆತ, ಐವತ್ತರ ಆಸುಪಾಸಿನ ನನ್ನ ನೆರೆಯವರೊಬ್ಬರು, ಮನೆ ಕಂದಾಯ ಕಟ್ಟಲು, ಬ್ಯಾಂಕಿನ ಕ್ಯಾಷ್ ಕೌಂಟರಿನೆದುರು ಕ್ಯೂನಲ್ಲಿ ನಿಂತಿರುವಾಗ, ಅವರ ತಲೆಯನ್ನೇ ಗಮನಿಸುತ್ತಿದ್ದ ಬ್ಯಾಂಕಿನ ನೌಕರರೊಬ್ಬರು- “”ಮೇಡಂ, ಈ ಕ್ಯೂನಲ್ಲಿ ನಿಂತು ಯಾಕೆ ಕಷ್ಟಪಡ್ತೀರಾ? ಆ ಕಡೆ ಸೀನಿಯರ್ ಸಿಟಿಜನ್ಸ್‌ಗೆ ಸಪರೇಟ್ ಕ್ಯೂ ಇದೆ ನೋಡಿ, ಅದ್ರಲ್ಲೇ ಬನ್ನಿ. ಬೇಗ ನಿಂ ಸರಿ¤ ಬರುತ್ತೆ” ಎಂದು ಸಲಹೆ ಇತ್ತರಂತೆ. ಹೇಗಿದೆ ನೋಡಿ ನರೆತ ಕೂದಲ ಮಹಿಮೆ! ಹೌದು, ವಯಸ್ಸಾದಂತೆ ಕಾಣುವುದರಿಂದ ಹಲವಾರು ಲಾಭಗಳೂ ಇವೆ. ಒಮ್ಮೆ ಆಲೊಚಿಸಿ ನೋಡಿ.
– ಕೇವೀಟಿ ಮೇಗೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.