ಅಮೃತರ ಚಿರಂಜೀವಿ ಸಾಹಿತ್ಯ 


Team Udayavani, Apr 29, 2018, 6:00 AM IST

4.jpg

ತುಳು-ಕನ್ನಡ ಸಾಹಿತಿ, ಜಾನಪದ ವಿದ್ವಾಂಸ ಅಮೃತ ಸೋಮೇಶ್ವರರಿಗೆ ಈಗ ಎಂಬತ್ತಮೂರರ ಹಿರಿಹರೆಯ. ಮನೆಯೊಳಗೆ ಓಡಾಡುತ್ತ ಚಿಂತನೆ- ಓದು-ಬರವಣಿಗೆಗಳಲ್ಲಿ ಸದಾ ಕ್ರಿಯಾಶೀಲರಾಗಿರುವ ಅವರ ಸಮಕ್ಷದಲ್ಲಿ ಇತ್ತೀಚೆಗೆ ಸಹವರ್ತಿಗಳು, ಗೆಳೆಯರು, ವಿದ್ಯಾರ್ಥಿಗಳು ಸೇರಿ “ಅಭಿಮಾನದ ಬೈಠಕ್‌’ ನಡೆಸಿದರು. ಅಮೃತಸೋಮೇಶ್ವರರ ಪದ್ಯಗಳನ್ನು ವಾಚಿಸಿದರು, ಯಕ್ಷಗಾನದ ಪದ್ಯಗಳನ್ನು ಹಾಡಿದರು, ಗದ್ಯಸಾಲುಗಳನ್ನು ಓದಿದರು, ನಾಟಕದ ಸಂಭಾಷಣೆಯನ್ನು ಅಭಿನಯಿಸಿದರು. ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ-ಸೋಮೇಶ್ವರದ ಅಮೃತರ ಮನೆ “ಒಲುಮೆ’ಯಲ್ಲಿ ಜರಗಿದ ಒಲುಮೆಯ ಸಮಾರಂಭದಲ್ಲಿ ಅಮೃತರ ಬದುಕು-ಬರಹದ ವಿರಾಟ್‌ದರ್ಶನವಾಯಿತು…

ಕೆಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಡಾ. ಅಮೃತ ಸೋಮೇಶ್ವರರು ಹೀಗೆ ಹೇಳಿದ್ದುಂಟು- “ನನ್ನದು ಗೂಡಂಗಡಿ. ನನಗೆ ಗೂಡಂಗಡಿ ಬೇರದಲ್ಲಿಯೇ ಆಸಕ್ತಿ. ರಖಂ ವ್ಯಾಪಾರ ನನ್ನದಲ್ಲ’. ಇಲ್ಲಿ ಗೂಡಂಗಡಿ ಎಂಬ ಪರಿಕಲ್ಪನೆಯೇ ಬಹಳ ಅರ್ಥಪೂರ್ಣವಾದುದು. ಇವತ್ತು ಅಮೃತರ ಗೂಡಂಗಡಿಯಲ್ಲಿ ಸಿಗುವ ವಸ್ತುಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಗೂಡಂಗಡಿಯ ಗ್ರಹಿಕೆ ಹಾಗೆಯೇ ಉಳಿದಿದೆ. ಗೂಡಂಗಡಿಯಲ್ಲಿ ನಡೆಯುವ ಕೊಡು-ಕೊಳ್ಳುವಿಕೆಯ ಹಿಂದಿರುವ ಮನೋಧರ್ಮವು ನಗರದಲ್ಲಿರುವ ಮಾಲ್‌ ಸಂಸ್ಕೃತಿಯ ಮನೋಧರ್ಮಕ್ಕೆ ವಿರುದ್ಧವಾದುದು. ನನ್ನ ದೃಷ್ಟಿಯಲ್ಲಿ ಅಮೃತರ ಸ್ವಭಾವವನ್ನು , ದೇಸೀ ಪ್ರಜ್ಞೆಯನ್ನು , ಜೀವನ ಮೌಲ್ಯಗಳನ್ನು ಕಟ್ಟಿಕೊಡುವ ರೂಪಕವೇ ಗೂಡಂಗಡಿ. 

ಅಮೃತ ಸೋಮೇಶ್ವರ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯು ಕೆಲವು ಸಮಯದ ಹಿಂದೆ ತುಳು ಭಾಷಾ ಸಮ್ಮಾನ್‌ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.  ಅಮೃತರು ಅಸೌಖ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದರಿಂದ ಪ್ರಶಸ್ತಿ ಪ್ರದಾನ ಸಮಾರಂಭವು ಆಸ್ಪತ್ರೆಯ ಪುಟ್ಟ ಸಭಾಂಗಣದಲ್ಲಿಯೇ ಜರುಗಿತು. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಪ್ರಚಾರ ನೀಡಿರಲಿಲ್ಲ, ಆದರೂ ಅವರಿಂದ ಇವರಿಂದ ಸುದ್ದಿ ತಿಳಿದ ಅಮೃತರ ಹಲವು ಅಭಿಮಾನಿಗಳು ಬಂದಿದ್ದರು. ಚಂದ್ರಶೇಖರ ಕಂಬಾರರು ಪ್ರಶಸ್ತಿ ಪ್ರದಾನ ಮಾಡಿ ಅಮೃತರ ಸೃಜನಶೀಲ ಬರವಣಿಗೆಯ ಮಹತ್ವವನ್ನು ಕೊಂಡಾಡಿದರು. “ಅಮೃತರು ತುಳುವನ್ನು ಮಾತ್ರವಲ್ಲ, ಕನ್ನಡವನ್ನೂ ಶ್ರೀಮಂತಗೊಳಿಸಿದ್ದಾರೆ. ಅಮೃತರನ್ನು ನಮ್ಮ ನಾಡಿನ ಸಾಂಸ್ಕೃತಿಕ ವಲಯದ ಬಹುಮುಖ್ಯ ಲೇಖಕ ಮತ್ತು ಚಿಂತಕ ಎಂದು ಪರಿಗಣಿಸಬೇಕು. ಬರವಣಿಗೆಯಲ್ಲಿ ಅನನ್ಯತೆಯನ್ನು ತರಬಲ್ಲ ಅಮೃತರ ಸೃಜನಶೀಲ ಪ್ರತಿಭೆ ಅದ್ಭುತವಾದುದು ಎಂದು ಮೆಚ್ಚುಗೆಯ ಮಾತುಗಳನ್ನು ಹೇಳಿದರು. ಗಾಲಿಕುರ್ಚಿಯಲ್ಲಿ ಕುಳಿತಿದ್ದ ಅಮೃತರು ತಮ್ಮ ಸ್ವಭಾವಕ್ಕೆ ಒಪ್ಪುವ ಅನುನಯ ಮತ್ತು ಪ್ರೀತಿಯ ಕೆಲವು ಮಾತುಗಳನ್ನು ಹೇಳಿದರು. ಅಮೃತರು ಹೇಳಿದ ಒಂದು ಮಾತು, “ಆರೋಗ್ಯ ಸುಧಾರಿಸೀತು. ನಿಮ್ಮೆಲ್ಲರ ಒಲುಮೆಯನ್ನು ನೋಡಿದರೆ ಮನಸ್ಸು ತುಂಬಿ ಬರುತ್ತದೆ. ಸಾಹಿತ್ಯದ ಕೃಷಿಯನ್ನು ಮುಂದುವರಿಸುವ ಮನಸ್ಸಿದೆ. ತುಳುವಿನಲ್ಲಿ ಒಂದು ಮಹಾಕಾವ್ಯವನ್ನು ಬರೆಯುವ ಆಸೆ ಉಂಟು’  

ಹಲವು ಸಂಪುಟಗಳ ಕತೃì
ಯಕ್ಷಗಾನ ಮಹಾಸಂಪುಟ, ತುಳು ನಾಟಕ ಮಹಾಸಂಪುಟ, ತುಳು ಪಾಡªನ ಮಹಾಸಂಪುಟ- ಹೀಗೆ ಹಲವು ಮಹಾಸಂಪುಟಗಳನ್ನು ನೀಡಿರುವ ಅಮೃತರಿಗೆ ಇದೀಗ ತುಳುವಿನಲ್ಲಿ ಮಹಾಕಾವ್ಯ ಸಂಪುಟವನ್ನು ರಚಿಸುವ ಬಯಕೆ ಹುಟ್ಟಿದುದು ಬರಿಯ ಚೋದ್ಯವಲ್ಲ. ಅವರಲ್ಲಿರುವ ನಿರಂತರ ಪ್ರತಿಭಾನ್ವೇಷಣೆಗೆ ಸಾಕ್ಷಿಯಾಗುವ ಅವರ ಮನದಾಳದ ಮಾತದು. 

ವಿದ್ವತ್‌ಪೂರ್ಣ ವಿಸ್ತಾರ ಪ್ರಸಾವನೆಯಿರುವ ಹದಿನಾರು ಪಾಡªನಗಳ ಸಂಪುಟ, ಮೂವತ್ತೆçದಕ್ಕಿಂತ ಹೆಚ್ಚು ಲೇಖನಗಳಿರುವ ತುಳು ಬದುಕು ಮತ್ತು ತುಳುವ ಜಾನಪದದ ನೋಟಗಳಿರುವ ಕೃತಿಗಳು, 42 ಲೇಖನಗಳಿರುವ ಯಕ್ಷಾಂದೋಳ ಮತ್ತು ಯಕ್ಷತರು ಕೃತಿಗಳು, ಹದಿಮೂರು ಪ್ರಸಂಗಗಳಿರುವ ಯಕ್ಷಗಾನ ಕೃತಿಸಂಪುಟ, ಸಮಕಾಲೀನ ಸಾಮಾಜಿಕ ಸಮಸ್ಯೆಗಳನ್ನು ಪೌರಾಣಿಕ ಚೌಕಟ್ಟಿನಲ್ಲಿ ಪ್ರಸ್ತುತಪಡಿಸುವ ಹತ್ತಕ್ಕಿಂತ ಹೆಚ್ಚು ಪ್ರಸಂಗಗಳು, ಏಳು ತುಳು ನಾಟಕಗಳಿರುವ ತುಳು ನಾಟಕ ಸಂಪುಟ,  ಭಗವತಿ ಆರಾಧನೆಯ ಬೃಹತ್‌ ಅಧ್ಯಯನ ಸಂಪುಟ, ಮೋಯ ಮಲೆಯಾಳ ಕನ್ನಡ ಕೋಶ, ಸುಮಾರು ನಾಲೂ°ರಕ್ಕಿಂತ ಹೆಚ್ಚು ಕನ್ನಡ-ತುಳು ಕವನಗಳಿರುವ ಒಂಭತ್ತು ಕವನ ಸಂಕಲನಗಳು (ವನಮಾಲೆ, ಭ್ರಮಣ, ಕರೆಗಾಳಿ, ಉಪ್ಪುಗಾಳಿ, ಸಂಜೆ ಪಯಣದ ಹಾಡು, ತಂಬಿಲ, ರಂಗಿತ, ಪೂ ಪೂಜನೆ ಇತ್ಯಾದಿ), ಮೂವತ್ತನಾಲ್ಕು ಕತೆಗಳಿರುವ ನಾಲ್ಕು ಕಥಾಸಂಕಲನಗಳು (ಎಲೆಗಿಳಿ, ರುದ್ರಶಿಲೆ ಸಾಕ್ಷಿ , ಕೆಂಪುನೆನಪು, ಮಾನವತೆ ಗೆದ್ದಾಗ ಮತ್ತು ಇತರ ಕೃತಿಗಳು), ಕಲೆ, ಸಾಹಿತ್ಯ, ರಾಜಕೀಯ, ಸಂಸ್ಕೃತಿ, ವ್ಯಕ್ತಿಚಿತ್ರಣ ಇತ್ಯಾದಿ ಕುರಿತ ನೂರೈವತ್ತರಷ್ಟು ಚಿಂತನಾ ಬರಹಗಳಿರುವ ಐದು ಕೃತಿಗಳು (ದೀಪದ ಕೆಳಗೆ, ಜಿಜ್ಞಾಸೆಯ ತುಣುಕುಗಳು, ಮಹನೀಯ ಚೇತನಗಳು, ಅರಿವಿನ ಹರಿಕಾರರು ಮೊದಲಾದವು), ಇನ್ನೂರ ಐವತ್ತನಾಲ್ಕು ವಚನಗಳಿರುವ ಹೃದಯ ವಚನಗಳ ಸಂಪುಟ, ನೂರ ಇಪ್ಪತ್ತಮೂರು ಮಂದಿ ಬರೆದಿರುವ ಪತ್ರಗಳ ಸಂಚಯ ಎದೆಯ ನಂಟು ನೂರೆಂಟು, ಜನಾಂಗೀಯ ಅಧ್ಯಯನ ಕೃತಿ (ಕೊರಗರು), ವ್ಯಂಗ್ಯಾರ್ಥ ಹಾಗೂ ವಿಚಿತ್ರಾರ್ಥಗಳನ್ನು ನೀಡುವ ಪದಗಳ ಆಟವಿರುವ ಅಪಾರ್ಥಿನಿ ಕೃತಿ, ಸುಮಾರು ಹತ್ತರಷ್ಟು ಸಂಪಾದಿತ ಕೃತಿಗಳು (ಸುಂದರಕಾಂಡ, ನಾಟ್ಯ ಮೋಹನ, ಅಬ್ಬಕ್ಕ ಸಂಕಥನ, ಅಮ್ಮೆಂಬಳ ಅರುವತ್ತು, ಯಕ್ಷಗಂಗೋತ್ರಿ, ವಜ್ರಕುಸುಮ ಇತ್ಯಾದಿ)- ಈ ಪಟ್ಟಿ ಅಮೃತರ ಬರವಣಿಗೆಯ ವ್ಯಾಪ್ತಿಯನ್ನು ಸೂಚಿಸುತ್ತವೆ. ಇಷ್ಟು ಬರೆದೂ ಅಮೃತರ ಉತ್ಸಾಹ ತಗ್ಗಿಲ್ಲ. ಆಸಕ್ತಿ ಕುಂದಿಲ್ಲ. ಅವರದು ಅಮೃತ ಜೀವ.   

ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಕನ್ನಡ ಮತ್ತು ತುಳುವಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿದ್ಯಮಾನಗಳಿಗೆ ಅಮೃತರು ಧನಾತ್ಮಕವಾಗಿ ಪ್ರತಿಕ್ರಿಯಿಸುತ್ತ ಬಂದಿದ್ದಾರೆ. ಈ ಅವಧಿಯನ್ನು ಅಮೃತರು ಕಂಡಿದ್ದಾರೆ, ಈ ಅವಧಿ ಅಮೃತರನ್ನು ಕಂಡಿದೆ. ತುಳುವಿನ ಸಾಂಸ್ಕೃತಿಕ ಪುನರುತ್ಥಾನದ ನೆಲೆಯಲ್ಲಿ ನೋಡಿದರೆ ಅಮೃತರ ಬರಹಗಳು ಬಹಳ ಮುಖ್ಯವಾಗುತ್ತವೆ. ತುಳು ಬದುಕು ಎಂಬುದು ಅವರ ಒಂದು ಕೃತಿಯ ಹೆಸರು. ತುಳು ಒಂದು ಬದುಕು ಮತ್ತು ಅಂತಹ ತುಳು ಬದುಕಿ ಬಾಳಬೇಕೆಂಬುದು ಅವರ ತುಳು ಬರಹಗಳ ಬಹಳ ಮುಖ್ಯ ಆಶಯ. ಮಾನವತೆ ಗೆ¨ªಾಗ ಎಂಬುದು ಅವರ ಒಂದು ಕಥಾಸಂಕಲನದ ಹೆಸರು. ಮಾನವತೆ ಗೆಲ್ಲಬೇಕೆಂಬುದು ಅವರ ನಿಲುವು. ತುಳುವಿನ ಬಗೆಗಿನ ಅವರ ಎಲ್ಲ ಬರಹಗಳನ್ನು ಒಟ್ಟಾಗಿ ತುಳುವ ಸಂಸ್ಕೃತಿ ಚಿಂತನೆಯ ಮಹಾಸಂಕಥನ ಎಂದು ನೋಡಬಹುದು.

ಲೌರಿ ಹಾಂಕೋರವರ ವಿಶ್ಲೇಷಣೆ
ಅಮೃತರು ತುಳು ಜಾನಪದಕ್ಕೆ ಸಂಬಂಧಪಟ್ಟಂತೆ ಮಾಡಿರುವ ಕೆಲಸಗಳನ್ನು ನೋಡಿದರೆ, ಪ್ರೊ. ಲೌರಿ ಹಾಂಕೋ ಅವರ ಫೋಕ್‌ಲೋರ್‌  ಪ್ರೋಸೆಸ್‌ ಲೇಖನದ ನೆನಪಾಗುತ್ತದೆ. ಹಾಂಕೋ ಅವರು ಆ ಲೇಖನದಲ್ಲಿ ಜಾನಪದದ ಸ್ವರೂಪ ಮತ್ತು ಅಧ್ಯಯನ ಇತಿಹಾಸವನ್ನು ವೈಜ್ಞಾನಿಕವಾಗಿ ವಿವರಿಸಿದ್ದಾರೆ. ಹಳೆಯ ಪಳೆಯುಳಿಕೆಗಳ ಸಂಗ್ರಹದಿಂದ ಆರಂಭವಾಗಿ ಮಾನವ ಸಮುದಾಯಗಳನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯ ವರೆಗೆ ಜಾನಪದವು ಸಾಗಿಬಂದಿರುವ ಹಾದಿಯನ್ನು ವಿಶ್ಲೇಷಿಸಿದ್ದಾರೆ. ಯಕ್ಷಗಾನ ಮತ್ತು ತುಳು ಜಾನಪದಕ್ಕೆ ಸಂಬಂಧಪಟ್ಟಂತೆ ಅಮೃತರು ಮಾಡಿರುವ ಕೆಲಸಗಳು ಮತ್ತು ಹಾಂಕೋ ವಿವರಿಸಿರುವ ಜಾನಪದ ಪ್ರಕ್ರಿಯೆಯು ಪರಸ್ಪರ ಹೊಂದಿಕೆಯಾಗುತ್ತವೆ. ಹಳೆಯ ಪಳೆಯುಳಿಕೆಗಳ ಸಂಗ್ರಹದಿಂದ ಅಮೃತರ ಕೆಲಸ ಆರಂಭವಾಗುತ್ತದೆ. ಯಕ್ಷಗಾನ ಮತ್ತು ತುಳು ಜಾನಪದಕ್ಕೆ ಸಂಬಂಧಪಟ್ಟಂತೆ ಅಮೃತರ ಗ್ರಂಥಗಳಲ್ಲಿರುವ ಮಾಹಿತಿಗಳು ಅಪೂರ್ವವಾಗಿವೆ. ಅಮೃತರು ಸಂಗ್ರಹಿಸಿರುವ ಮಾಹಿತಿಗಳು ಎಲ್ಲಾ ಕಾಲಕ್ಕೂ ಮುಖ್ಯವಾಗುತ್ತವೆ. ಜಾನಪದ ಮತ್ತು ಯಕ್ಷಗಾನದ ವ್ಯಾಖ್ಯಾನಗಳು ಬದಲಾಗಬಹುದು. ಆದರೆ ಅಮೃತರು ಸಂಗ್ರಹಿಸಿಕೊಟ್ಟಿರುವ ಮಾಹಿತಿಗಳು ಮುಂದೆಯೂ ಆಕರಗಳಾಗಿ ಉಳಿಯುತ್ತವೆ. 

 ಯಕ್ಷಗಾನ ಮತ್ತು ತುಳು ಜಾನಪದದ ವಕõಗಳು ಮತ್ತು ಕಲಾವಿದರನ್ನು ಅಮೃತರು ಬಹಳ ಗೌರವದಿಂದ ಕಾಣುತ್ತ ಬಂದಿದ್ದಾರೆ. ಕಲಾವಿದರನ್ನು ಅರ್ಥಪೂರ್ಣವಾಗಿ ಸನ್ಮಾನಿಸಿದ್ದಾರೆ. ಯಕ್ಷಗಾನ ಸಂಘ ಗಳನ್ನು ಕಟ್ಟಿ, ಕಲಾವಿದರಿಗೆ ತರಬೇತು ನೀಡಿದ್ದಾರೆ. ಯಕ್ಷಗಾನದ ವೇಷಭೂಷಣಗಳನ್ನು ಮರುಕಲ್ಪಿಸಿದ್ದಾರೆ. ಜಾನಪದದ ವಿನ್ಯಾಸಗಳನ್ನು ತಮ್ಮ ಮನೆಯಲ್ಲಿ ಕಿಟಿಕಿ ಬಾಗಿಲುಗಳಿಗೆ ಆನ್ವಯಿಕವಾಗಿ ಬಳಸಿಕೊಂಡಿದ್ದಾರೆ. ಬಹಳ ಮುಖ್ಯ ಸಂಗತಿಯೆಂದರೆ, ಲೌರಿ ಹಾಂಕೋ ಜಾನಪದ ಪ್ರಕ್ರಿಯೆಯನ್ನು ಸೈದ್ಧಾಂತಿಕವಾಗಿ ಮಂಡಿಸುವ ಮೊದಲೇ ಅಮೃತರು ಜಾನಪದದ ಸಂಗ್ರಹ, ಸಂರಕ್ಷಣೆ, ಅಧ್ಯಯನ, ಪ್ರಕಟನೆ, ಪ್ರಸಾರ, ಆನ್ವಯಿಕತೆ, ನೈತಿಕತೆ ಮೊದಲಾದ ಅಂಶಗಳ ಕುರಿತಂತೆ ಗಂಭೀರ ಚಿಂತನೆ ನಡೆಸಿದ್ದಾರೆ.

ಕರಾವಳಿಯ ಆರಾಧನೆ, ಯಕ್ಷಗಾನ ಮತ್ತು ಇತರ ರಂಗಪ್ರದರ್ಶನ ಕಲೆಗಳ ರಂಗಗಳ ಕುರಿತಂತೆ ಶೈಕ್ಷಣಿಕವಾಗಿ ದುಡಿದ ನಮ್ಮ ನಾಡಿನ ಮತ್ತು ಹೊರದೇಶಗಳ ವಿದ್ವಾಂಸರಿಗೆ ಕಳೆದ ಐವತ್ತು ವರ್ಷಗಳಿಂದ ಅಮೃತರು ಅರಿವಿನ ಗುರುವಾಗಿ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಸಾಹಿತ್ಯ, ಜಾನಪದ, ಯಕ್ಷಗಾನ ರಂಗಗಳಲ್ಲಿ ದುಡಿದು ಹೆಸರು ಮಾಡಿದ ದೊಡ್ಡ ವಿದ್ಯಾರ್ಥಿ ಬಳಗವನ್ನು ಹೊಂದಿದ್ದಾರೆ. ಮಾರ್ತಾ ಆ್ಯಷ್ಟನ್‌, ಪೀಟರ್‌ ಜೆ. ಕ್ಲಾಸ್‌, ಫ್ರಾಂಕ್‌ ಕೊರೋಮ್‌, ಹೈಡ್ರೂನ್‌ ಬ್ರೂಕ್ನರ್‌, ಕ್ಯಾಥರಿನ್‌ ಫಿಶರ್‌, ಲೌರಿ ಹಾಂಕೋ, ಆಸ್ಕೋ ಪರ್ಪೊಲ, ಬೆಂಟೆ ಆಲ್ವೆರ್‌, ಸುಮಿಯೋ ಮೊರಿಜಿರಿ- ಹೀಗೆ ಅಮೃತರ ಜೊತೆ ಸಂವಾದ ನಡೆಸಿದ ವಿದೇಶಿ ವಿದ್ವಾಂಸರು ಹಲವರಿದ್ದಾರೆ. ಬೇರೆ ಬೇರೆ ರಾಜ್ಯಗಳ ಸಾಹಿತಿಗಳು, ಸಂಶೋಧಕರು, ರಂಗತಜ್ಞರು ಕರಾವಳಿ ರಂಗಭೂಮಿ ಮತ್ತು ಸಂಸ್ಕೃತಿಯ ಕುರಿತಂತೆ ಮಾಹಿತಿಗಳನ್ನು ಅಮೃತರಿಂದ ಸಂಗ್ರಹಿಸಿದ್ದಾರೆ. ಕರಾವಳಿ ಜಾನಪದ ಮತ್ತು ಯಕ್ಷಗಾನದ ಕುರಿತ ಮಾಹಿತಿಗಳನ್ನು ಮಾತ್ರವಲ್ಲ, ಒಳನೋಟಗಳನ್ನು ಯಾವುದೇ ಪ್ರತಿಫ‌ಲಗಳ ಅಪೇಕ್ಷೆಯಿಲ್ಲದೆ ಅಮೃತರು ಹಂಚುತ್ತ ಬಂದಿದ್ದಾರೆ. ಜ್ಞಾನವನ್ನು ಅಮೃತರು ಮಾರಾಟ ಮಾಡಿದವರಲ್ಲ; ಹಂಚಿ ಸಂತೋಷ ಪಟ್ಟವರು. ಆಲೋಚನೆಗಳು ಮಾರಾಟಕ್ಕಿರುವ ಈ ಕಾಲಘಟ್ಟದಲ್ಲಿ ಅಮೃತರ ನಡೆ ವಿಶಿಷ್ಟವಾದುದು. 

ಅಮೃತರಿಗೆ ಹಲವು ಪ್ರಶಸ್ತಿಗಳು ಸಿಕ್ಕಿವೆ, ಸನ್ಮಾನಗಳು ಆಗಿವೆ. ಆದರೂ ಅಖೀಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕೇಂದ್ರ ಸಂಗೀತ-ನಾಟಕ ಅಕಾಡೆಮಿಗಳ ಗೌರವ ಅಮೃತರಿಗೆ ಬರಬಹುದಾಗಿತ್ತೇನೋ… ಪ್ರಶಸ್ತಿಗಳಿಗಾಗಿ ಅಮೃತರು ಆಸೆ ಪಟ್ಟವರಲ್ಲ. ಅವರಿಗೆ ಬಂದ ಪ್ರಶಸ್ತಿಗಳು ಅವರು ಅರಸಿ ಬಂದವುಗಳಲ್ಲ; ತುಳು ಕನ್ನಡಿಗರು ಹರಸಿ ನೀಡಿದವುಗಳು.

ಕೆ. ಚಿನ್ನಪ್ಪ ಗೌಡ

ಟಾಪ್ ನ್ಯೂಸ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.