ಅನ್ನೋನ್‌ ಫ್ಯಾಕ್ಟರ್‌

ಸಂಧಿಕಾಲ

Team Udayavani, May 19, 2019, 6:00 AM IST

8

ಪ್ರಾಡಕ್ಟ್ ವಿನ್ಯಾಸ ಕ್ಷೇತ್ರದಲ್ಲಿರುವಂತಹ ನನ್ನಂತವರ ಬಾಯಿಯಿಂದ ದಿನ ಬೆಳಗಾದರೆ ಫ್ಯಾಕ್ಟರ್‌ ಆಫ್ ಸೇಫ್ಟಿ (Factor half safety) ಎನ್ನುವ ಶಬ್ದ ಬಂದೇ ಬರುತ್ತದೆ. ಇದನ್ನು ನಮ್ಮೆಲ್ಲರಿಗೂ ಬಹಳ ಹತ್ತಿರವಾದ ಒಂದು ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳೋಣ. ಒಂದು ಕಟ್ಟಡದ ಅಡಿಪಾಯ ಕಟ್ಟುವಾಗ ನಮಗೆ ಗೊತ್ತಿರದ ಯಾವುದಾದರೊಂದು ಅಂಶದಿಂದ ಭವಿಷ್ಯದಲ್ಲಿ ಆಗಬಹುದಾದ ವೈಫ‚‌ಲ್ಯ/ಅನಾಹುತವನ್ನು ತಡೆಗಟ್ಟುವುದಕ್ಕೋಸ್ಕರ ಅಗತ್ಯಕ್ಕಿಂತ ಹೆಚ್ಚು ಕಬ್ಬಿಣ ಬಳಸಿದರೆ ಆ ಅಗತ್ಯಕ್ಕಿಂತ ಹೆಚ್ಚು ಪ್ರಮಾಣವನ್ನು ಫ್ಯಾಕ್ಟರ್‌ ಆಫ‚… ಸೇಫ್ಟಿ ಎಂದು ಕರೆಯಬಹುದು. ನಿರೀಕ್ಷಿತ ಕಾರ್ಯಕ್ಷಮತೆ ಮತ್ತು ಫ್ಯಾಕ್ಟರ್‌ ಆಫ್ ಸೇಫ್ಟಿಯ ನಡುವೆ ಗೊಂದಲ ಬೇಡ. ಉದಾಹರಣೆಗೆ ಮನೆಯಲ್ಲಿರುವ ನಮ್ಮ ತೂಕದ ಯಂತ್ರದ ಹಿಂಭಾಗದಲ್ಲಿ 10 ರಿಂದ ಗರಿಷ್ಟ 100 ಕೆ.ಜಿ. ಎಂದು ಬರೆದಿದೆ ಎಂದು ಅಂದುಕೊಳ್ಳೋಣ. ಅದು ತೋರಿಸುವಷ್ಟು (10 ರಿಂದ ಗರಿಷ್ಟ 100 ಕೆ. ಜಿ.) ತೂಕವನ್ನು ಸರಿಯಾಗಿ ತೂಗಿದರೆ ಅದನ್ನು ನಿರೀಕ್ಷಿತ ಕಾರ್ಯಕ್ಷಮತೆ ಎನ್ನುತ್ತಾರೆ. 110ಕೆ. ಜಿ. ಯ ಒಬ್ಬ ಮನುಷ್ಯ ನಿಂತರೆ ಆತನ ಭಾರವನ್ನು ಯಂತ್ರ ತೋರಿಸದಿದ್ದರೂ ಅದು ಮುರಿದು ಹೋಗುವುದಿಲ್ಲ ತಾನೇ? ಗರಿಷ್ಟ ತೂಕಕ್ಕಿಂತ ಸ್ವಲ್ಪ ಹೆಚ್ಚು ತೂಕದವ ನಿಂತರೂ ಯಂತ್ರ ಮುರಿಯಬಾರದೆಂದು, ಅದನ್ನು ತಯಾರಿಸುವಾಗಲೇ ಅದರ ನಿರೀಕ್ಷಿತ ಕಾರ್ಯಕ್ಷಮತೆಗಿಂತ (ಅಗತ್ಯಕ್ಕಿಂತ) ಸ್ವಲ್ಪ ಹೆಚ್ಚಿನ ತೂಕವನ್ನು ಸಹಿಸುವ ಮಟ್ಟದಲ್ಲಿ ತಯಾರಿಸಿರುತ್ತಾರೆ. ಆ ಸ್ವಲ್ಪ ಹೆಚ್ಚಿನ ಮಟ್ಟವೇ ಫ್ಯಾಕ್ಟರ್‌ಆಫ‚… ಸೇಫ್ಟಿ. ಆದರೆ, ಲಿಫ್ಟ್ ಬಾಗಿಲು ಮುಚ್ಚುವಾಗ ಬಾಗಿಲ ಬಳಿ ಏನಾದರೂ ಅಡ್ಡ ಬಂದರೆ ಬಾಗಿಲು ಮುಚ್ಚದೇ ಇರುವುದು ಸೇಫ್ಟಿಯೇ ಹೊರತು ಫ್ಯಾಕ್ಟರ್‌ಆಫ್ ಸೇಫ್ಟಿ ಅಲ್ಲ.

ಮೇಲೆ ಹೇಳಿದ ವೈಫ‚‌ಲ್ಯಕ್ಕೆ ಕಾರಣವಾಗುವ ನಮಗೆ ಗೊತ್ತಿರದ ಅಂಶವನ್ನು ನಾವು ಅನ್ನೋನ್‌ ಫ್ಯಾಕ್ಟರ್‌ ಎಂದು ಕರೆಯುತ್ತೇವೆ. ವಿನ್ಯಾಸದ ಪ್ರಕ್ರಿಯೆಯಲ್ಲಿ ಎಲ್ಲವನ್ನೂ ತಿಳಿದುಕೊಂಡಿದ್ದೇವೆ ಎಂದು ನಾವೆಷ್ಟೇ ಅಂದುಕೊಂಡರೂ ಮೇಲೆ ಹೇಳಿದ ಗೊತ್ತಿರದ ಅಂಶ ಇದ್ದೇ ಇರುತ್ತದೆ. ಇದಕ್ಕೆ ಕಾರಣ ವಿನ್ಯಾಸದ ಸಮಯದಲ್ಲಿ ಗಮನದಲ್ಲಿಟ್ಟುಕೊಂಡ ಪರಿಸ್ಥಿತಿ, ಅಷ್ಟೇ ಅಲ್ಲದೇ ಮುಂದೊಂದು ದಿನ ಇನ್ಯಾವುದೋ ಯೋಚಿಸಿರದ, ಗೊತ್ತಿರದ ಪರಿಸ್ಥಿತಿಗಳಲ್ಲಿ ಕಾರ್ಯ ನಿರ್ವಹಿಸಬೇಕಾದ ಸಮಯ ಬರುವುದು ಅಥವಾ ತಯಾರಿಸಿದ ಕೂಡಲೇ ಪ್ರಾಡಕ್ಟ್ ಈ ಗೊತ್ತಿರದ ಅಥವಾ ಅನ್ನೋನ್‌ ಫ್ಯಾಕ್ಟರ್‌ ಕಡೆಗೆ ಚಲಿಸುವುದು ಇತ್ಯಾದಿ. ಇದನ್ನು ಸುಲಭವಾಗಿ ವಿವರಿಸಲು ಮದುವೆ ಮನೆಗಿಂತ ಉತ್ತಮವಾದ ಸಿಮುಲೇಟರ್‌ ನನಗೆ ಯಾವುದೂ ಕಂಡಿಲ್ಲ. ಈ ಮದುವೆ ಎನ್ನುವ ಮೂರು-ನಾಲ್ಕು ದಿನದ ಈ ಸಂಕೀರ್ಣ ಟೆಸ್ಟಿಂಗ್‌ ಗ್ರೌಂಡ್‌ನ‌ಲ್ಲಿ ಬಹಳಷ್ಟನ್ನು ಟೆಸ್ಟ್‌ ಮಾಡಬಹುದು.

ಮದುವೆಮನೆಯ ಉದಾಹರಣೆ
ಉದಾಹರಣೆಗೆ, ನಾವು ಮದುವೆಯ ದಿನಕ್ಕೆ ನಾನೂರು ಮನೆ ಅಂದರೆ ಸುಮಾರಾಗಿ ಏಳನೂರು ಜನರನ್ನು ಆಹ್ವಾನಿಸಿದ್ದೇವೆ ಎಂದು ಅಂದುಕೊಳ್ಳೋಣ. ಆ ದಿನ ಬೇರೆ ಎಲ್ಲೂ ವಿಶೇಷ ಕಾರ್ಯಕ್ರಮವಿಲ್ಲ, ಮಕ್ಕಳ ಪರೀಕ್ಷೆ ಸಮಯವಲ್ಲ, ಮತ್ತೆ ಭಾನುವಾರವೂ ಆಗಿದ್ದರೆ ಕರೆದವರು ಹೆಚ್ಚಿನ ಮಂದಿ ಬಂದಾರು. ಆದರೂ ಊಟ ಕಡಿಮೆ ಆಗಿಬಿಟ್ಟರೆ ಎಂದು ನಾವು ಏಳನೂರಾಐವತ್ತು ಜನರಿಗೆ ಊಟ ತಯಾರಿಸಲು ಹೇಳುತ್ತೇವೆ. ಮನೆಯವರಿಗೆ ಜವಳಿ/ಉಡುಗೊರೆ ಕೊಡಬೇಕೆಂದು ಸರಿಯಾಗಿ ನಲವತ್ತು ಜನರನ್ನು ಗುರುತಿಸಿದರೂ ತರುವಾಗ ಇನ್ನೂ ಐದು ಸೀರೆ, ಐದು ಶರ್ಟ್‌ಗಳನ್ನು ಹೆಚ್ಚಿಗೆ ತರುತ್ತೇವೆ. ಈ ತರಹದ ವಿಷಯದ ಮಾತುಕತೆಯನ್ನು ನೀವು ಗಮನಿಸಿದರೆ ಅಲ್ಲಿರೆ ಪ್ರಯೋಗ ಹೆಚ್ಚಾಗಿರುತ್ತದೆ. ಹೆಚ್ಚು ಜನ ಬಂದರೆ, ಒಮ್ಮೆ ವಿಮಾನು ತಡವಾದರೆ, ನಾಳೆ ಬೆಳಗ್ಗೆ ನೀರು ಬರದಿದ್ದರೆ… ಈ “ರೆ’ ಬಳಕೆಯ ನಂತರವೇ ನಾವು ಅದರ ಪರಿಹಾರದ ಬಗ್ಗೆ ಮಾತನಾಡುತ್ತೇವೆ. ಹೀಗೆ ನಮಗೆ ಗೊತ್ತಿರದ, ಊಹಿಸಿರದ ಯಾವುದೋ ಒಂದು ಅಂಶದಿಂದ(ಅನೌ°ನ್‌ ಫ್ಯಾಕ್ಟರ್‌) ಕಾರ್ಯಕ್ರಮ ವಿಫ‚‌ಲವಾಗಬಾರದೆಂದು ಮಾಡುವುದೆಲ್ಲ ವನ್ನು ಅಗತ್ಯಕ್ಕಿಂತ ಸ್ವಲ್ಪ ಹೆಚ್ಚಿ ಗೆ ಮಾಡುತ್ತೇವೆ. ಆದರೆ, ಮದುವೆಯಲ್ಲಿ ಕಟ್ಟುವ ತಾಳಿಯನ್ನು ಎರಡು ಇರಲಿ ಎಂದು ತಂದಿದ್ದನ್ನು ಎಲ್ಲೂ ಕೇಳಿಲ್ಲ ! ಅಂದರೆ ಅಲ್ಲಿ ಅನ್ನೋನ್‌ ಫ್ಯಾಕ್ಟರ್‌ನ ಅಂಶ ಕಡಿಮೆ ಇದೆ ಎಂದಾಯಿತು.

ಫ್ಯಾಕ್ಟರ ಆಫ‚… ಸೇಫ್ಟಿಯನ್ನು “ಕಡಿಮೆ ತಿಳುವಳಿಕೆ’ ಅಥವಾ “ಅಜ್ಞಾನದ ಅಂಶ’ವೆಂದೂ ಕರೆಯುವುದುಂಟು. ನಾವು ವಿನ್ಯಾಸ ಮಾಡುವ ಪ್ರಾಡಕ್ಟಿನ ಬಗ್ಗೆ ನಮಗೆ ತಿಳುವಳಿಕೆ ಕಡಿಮೆ ಇದ್ದರೆ ಅಂದರೆ ಅನ್ನೋನ್‌ ಫ್ಯಾಕ್ಟರ್‌ ಹೆಚ್ಚಾದರೆ ಬಳಸಬೇಕಾದ ವಸ್ತುಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸಬಹುದು. ಹೊಸದಾಗಿ ವಿನ್ಯಾಸ ಮಾಡುವ ಪ್ರಾಡಕ್ಟಿನಲ್ಲಿ ಇದರ ಅಂಶ ಹೆಚ್ಚಿರುತ್ತದೆ. ಇದು ಸಹಜ, ಕಾರಣ ಅಲ್ಲಿ ತಿಳಿಯದೇ ಇರುವ ಅಂಶಗಳು ಹೆಚ್ಚಿರುವುದು. ಅಲ್ಲಿ ಬಳಸಬೇಕಾಗಿರುವ ವಸ್ತುಗಳ ಗುಣಮಟ್ಟವೇ ಕಡಿಮೆ ಇದ್ದರಂತೂ ವಸ್ತುಗಳನ್ನು ಮತ್ತೂ ಹೆಚ್ಚು ಬಳಸಬೇಕಾದೀತು. ದಿನವೂ ಉಪ್ಪುಖಾರ ಸರಿಯಾಗುವ ಸಾಂಬಾರ ಒಂದು ದಿನ ಬಹಳ ಸಪ್ಪೆಯಾದರೆ ಮನೆಯವರಿಗೆಲ್ಲ ಆಶ್ಚರ್ಯವಾಗುವುದು, ಸಿಟ್ಟು ಬರುವುದು ಸಹಜವೇ. ಆಗ ಅಡಿಗೆ ಮನೆಯಿಂದ ಅಶರೀರವಾಣಿಯನ್ನು ನೀವು ಕೇಳಿರುತ್ತೀರಿ: “ಇಂದಿನ ಸಾಂಬಾರಿಗೆ ಹಾಕಿದ ಮೆಣಸು ನಿನ್ನೆಯಷ್ಟೇ ಅಂಗಡಿಯಿಂದ ತಂದಿದ್ದು ಎಂದು. ಹೊಸ ಮೆಣಸು ಎಷ್ಟು ಹಾಕಿದರೂ ಹದವಾದ ಖಾರವಾಗುತ್ತಿಲ್ಲ’ ಎಂದು.ಇಲ್ಲಿ ಮೆಣಸು ಹೊಸದಾದ್ದರಿಂದ ಅದರ ಗುಣಮಟ್ಟ, ಖಾರದ ಅಂಶ ಹೀಗೆ ಗೊತ್ತಿರದ ವಿಷಯಗಳು ಹೆಚ್ಚು. ಹಾಗೆಯೇ ಇನ್ನೊಂದು ಉದಾಹರಣೆಯನ್ನು ಗಮನಿಸೋಣ. ಕಟ್ಟಡ ನಿರ್ಮಾಣ ಇತ್ಯಾದಿಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದುದೇನೆಂದರೆ ಗೊತ್ತಿರದ ಅಂಶ ಹೆಚ್ಚಾದಂತೆ ಅದರ ವಿನ್ಯಾಸಕ್ಕೆ ಬಳಸುವ ವಸ್ತುಗಳ ಬಳಕೆ ಹೆಚ್ಚಾಗುತ್ತದೆ. ಅಂದರೆ ಅದರ ಖರ್ಚುವೆಚ್ಚವೂ ಹೆಚ್ಚಾಗುತ್ತದೆ ಎಂದಾಯಿತು. ಈ ಅಜ್ಞಾನದಿಂದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯೂ ಹೆಚ್ಚಾಗುತ್ತದೆ. ಇದು ಒಳ್ಳೆಯ ಲಕ್ಷಣ ಅಲ್ಲ. ನೀವು ಗಮನಿಸಿರಬಹುದು, ರಾಜಸ್ತಾನ, ಬಿಹಾರ ಮೂಲದ ಬಡಗಿಗಳು ಮಹಾನಗರಿ ಬೆಂಗಳೂರು ಅಷ್ಟೇ ಅಲ್ಲ, ಹೊನ್ನಾವರ, ಕುಮಟಾ, ಕುಂದಾಪುರ, ಚನ್ನಪಟ್ಟಣದಂತಹ ತಾಲೂಕಾ ಸ್ಥಳಗಳಲ್ಲೂ ಬಂದು ಬಿಟ್ಟಿದ್ದಾರೆ. ನನ್ನ ಗಮನದ ಪ್ರಕಾರ ನಮ್ಮ ರಾಜ್ಯದ ಬಡಗಿಗಳು ಕಂಡಿದ್ದು ಕಡಿಮೆ. ಅವರಿಗೆ ಮನೆಯ ಇಂಟೀರಿಯರ್‌, ಕಿಚನ್‌ಗಳಲ್ಲಿ ಕೈತುಂಬಾ ಕೆಲಸ. ನಾವು ಚಿಕ್ಕವರಿದ್ದಾಗ ಮೂರು ಚಕ್ರದ ಗಾಡಿ ಮಾಡಿದ್ದ ಬಡಗಿ ಮತ್ತು ಅವನ ಮಗನ ಹತ್ತಿರ ಎರಡು ವರ್ಷದ ಹಿಂದೆ, “ನೋಡಿ, ನಿಮ್ಮ ಕೆಲಸ ಅವರು ತೆಗೆದುಕೊಂಡು ಹೋಗುತ್ತಿದ್ದಾರೆ. ಅವರ ಕುಶಲತೆಯನ್ನು ನೀವು ಗಮನಿಸಬೇಕು’ ಎಂದೆ. ಅದಕ್ಕೆ ಉತ್ತರವಾಗಿ ಅವರು, “ನಾವು ಆ ರಾಜ್ಯದ ಬಡಗಿಗಳ ಕೆಲಸ ನೋಡಿದ್ದೇವೆ. ಎಲ್ಲಾ ಹೌದು. ಅವರು ಮಾಡಿದ ಮಂಚ, ಕುರ್ಚಿಗಳೆಲ್ಲ ಗಟ್ಟಿ ಬರುವುದಿಲ್ಲ’ ಎಂದರು.

ಅವರ ಮಾತು ಅಜ್ಞಾನಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿತ್ತು. ಉದಾಹರಣೆಗೆ ಒಂದು ಮಂಚವನ್ನೇ ತೆಗೆದುಕೊಳ್ಳಿ.ಅದನ್ನು ವಿನ್ಯಾಸಗೊಳಿಸುವಾಗ ಅದು ಎಷ್ಟು ಭಾರವನ್ನು ತಡೆದುಕೊಳ್ಳಬೇಕು, ಅದಕ್ಕೆ ಅನುಸಾರವಾಗಿ ಕಬ್ಬಿಣ ಅಥವಾ ಮರವನ್ನು ಬಳಸಬೇಕು. ಸುಲಭವಾಗಿ ಕಳಚುವ, ಬೇಕಾದ ಕಡೆ ಅದನ್ನು ತೆಗೆದುಕೊಂಡು ಹೋಗುವಂತೆ ಇರಬೇಕು.ಆದರೆ, ನಮ್ಮ ಊರಿನಲ್ಲಿರುವ ಮಂಚಗಳನ್ನು ನೋಡಿ, ಪೂರ್ತಿ ಮರವೇ ಬಂದು ಕುಂತಂತಿದ್ದು ಅದನ್ನು ಕಳಚುವುದಿರಲಿ, ಆ ಕೋಣೆಯಿಂದ ಈ ಕೋಣೆಗೆ ತೆಗೆದುಕೊಂಡು ಹೋಗಲೂ ಸಾಧ್ಯವಿಲ್ಲ. ಹಿಂದಿನ ಕಾಲದಲ್ಲಿ ನಡೆದು ಹೋಯಿತು. ಆದರೆ, ಈಗ ಹಾಗೇ ಮಾಡಲು ಕಟ್ಟಿಗೆ ಎಷ್ಟು ಬೇಕು, ಖರ್ಚುಎಷ್ಟಾದೀತು! ಹೊಸ ತಾಂತ್ರಿಕತೆಯಿಂದಾದ ಮರದ ಹಲಗೆ, ಯಂತ್ರ ಕೌಶಲ ಇತ್ಯಾದಿಗಳನ್ನು ಕಲಿತುಕೊಳ್ಳಲಾರದವ ಹಿಂದುಳಿಯಬೇಕಿದೆ.ಇದನ್ನು ಫ್ಯಾಕ್ಟರ್‌ ಆಫ‚… ಸೇಫ್ಟಿ ಎನ್ನುತ್ತೀರೋ ಅಥವಾ ಫ್ಯಾಕ್ಟರ್‌ ಆಫ‚… ಇಗ್ನೊರೆನ್ಸ್‌ ಎನ್ನುವುದೋ!?

ವಿನ್ಯಾಸದಲ್ಲಿ ಗೊತ್ತಿರುವ ಅಂಶ, ಗೊತ್ತಿರದ ಅಂಶವೆನ್ನುವ ಎರಡು ಭಾಗ. ಗೊತ್ತಿರದ ಅಂಶದಿಂದ ಪ್ರಾಡಕ್ಟ್ ವಿಫ‚‌ಲವಾಗಬಾರದೆಂದು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ವಸ್ತುಗಳನ್ನು ಬಳಸುತ್ತೇವೆ ಎಂದು ಈಗಾಗಲೇ ಚರ್ಚಿಸಿದ್ದೇವೆ. ಫ್ಯಾಕ್ಟರ್‌ ಆಫ‚… ಸೇಫ್ಟಿ, ಅಜ್ಞಾನ ಎಲ್ಲವೂ ಹೌದು. ಆದರೆ ನನಗೆ ದಿನಾಲೂ ವಿನ್ಯಾಸದ ಬ್ಲೂ ಪ್ರಿಂಟಿನ ಮುಂದೆ ಕುಂತಾಗ ಕಾಡುವ ವಿಷಯ ಬೇರೆಯೇ. ಈ ಗೊತ್ತಿರದ ಅಂಶ ಅಥವಾ ಅನ್ನೋನ್‌ ಫ್ಯಾಕ್ಟರ್‌ ಅಂದರೆ ಏನು ಎಂದು. ಈ ಗೊತ್ತಿರದ ಅಂಶವನ್ನು ಡಿಕೋಡ್‌ ಮಾಡುವುದೆಂದರೇನು? ವಿಷಯ ಒಂದು ಕಡೆ ತೆರೆದುಕೊಂಡಂತೇ ಇನ್ನೊಂದು ಕಡೆ ಮುಚ್ಚಿಕೊಳ್ಳುತ್ತದೆ ಎಂದು ಅಂದುಕೊಂಡರೂ, ವಿಜ್ಞಾನ ದಿನದಿಂದ ದಿನಕ್ಕೆ ಮುಂದುವರಿಯುತ್ತಿದೆ. ನಿನ್ನೆಗಿಂತ ಇಂದು ಪ್ರತೀ ವಿಷಯವೂ ಸ್ಪಷ್ಟವಾಗುತ್ತಿದೆ, ಪ್ರತೀಕ್ಷೇತ್ರದಲ್ಲಿ ಅಧ್ಯಯನ-ಸಂಶೋಧನೆ ನಡೆದು ಗುಣಮಟ್ಟ ಏರುತ್ತಲಿದೆ. ಇಲ್ಲಿಯವರೆಗೆ ನಾವು ಪ್ರಾಡಕ್ಟ್rಗಳ ಬಗ್ಗೆ ಮಾತನಾಡಿದೆವು. ಬದುಕು ಮತ್ತು ಪ್ರಕೃತಿಯ ವಿಷಯಗಳ ಮುಂದೆ ವಿನ್ಯಾಸದ ವಿಷಯ ಎಷ್ಟೆಂದರೂ ಚಿಕ್ಕದೇ!

ನಾವು ಮೊದಲ ತಿಂಗಳು ಗರ್ಭಿಣಿ ಸ್ತ್ರೀಯನ್ನು ಆಲ್ಟ್ರಾಸೌಂಡ್‌ ಸ್ಕ್ಯಾನಿಂಗಿಗೆ ಕರೆದುಕೊಂಡು ಹೋಗುತ್ತೇವೆ. ಸ್ಕ್ಯಾನ್‌ ಮಾಡುವವ ಪರೀಕ್ಷೆಯ ನಂತರ ಮಗು ಹುಟ್ಟುವ ದಿನವನ್ನು ಬರೆದುಕೊಡುತ್ತಾನೆ. ಮನೆಗೆ ಬಂದು ಎಲ್ಲರಿಗೂ ಹೇಳಿ, ಆ ದಿನಾಂಕಕ್ಕೆ ಪೂರಕವಾಗುವಂತೇ ನಮ್ಮ ವೇಳಾಪಟ್ಟಿಯನ್ನು ಹೊಂದಿಸಿಕೊಳ್ಳುತ್ತೇವೆ. ನಂತರ ಮತ್ತೆ ನಾಲ್ಕನೆಯ ತಿಂಗಳಿಗೆ ಸ್ಕ್ಯಾನಿಂಗಿಗೆ ಹೋದಾಗ ಮೊದಲು ಸ್ಕ್ಯಾನಿಂಗ್‌ ಮಾಡಿದವನೇ ಹೊಸದೊಂದು ದಿನಾಂಕ ಕೊಡುತ್ತಾನೆ. ಆಗ ನಾವು ಇದು ಮತ್ತೂ ನಿಖರವಾದ ದಿನಾಂಕವೆಂದುಕೊಂಡು ಮನೆಗೆ ಹೋಗುತ್ತೇವೆ. ನಂತರ ಮತ್ತೆ ಎಂಟು ತಿಂಗಳು ಮುಗಿಯುವಾಗ ಸ್ಕ್ಯಾನ್‌ ಮಾಡಿದರೆ ಆತ ನಿಖರವಾದ ದಿನಾಂಕ ಕೊಡುವುದಿಲ್ಲ. ಆತ ರೇಂಜ್‌ ಅಥವಾ ವ್ಯಾಪ್ತಿಯನ್ನು ಕೊಡುತ್ತಾನೆ. ಮೊದಲ ತಿಂಗಳೇ ನಿಖರವಾದ ದಿನಾಂಕ ಹೇಳಿದವನು, ಎಂಟನೆಯ ತಿಂಗಳಿಗೆ ಇನ್ನೂ ನಿಖರವಾದ ದಿನಾಂಕ ಕೊಡಬಹುದಿತ್ತಲ್ಲ , ದಿನಾಂಕ ಇನ್ನೂ ಸ್ಪಷ್ಟವಾಗಬೇಕಿತ್ತಲ್ಲ . ಸ್ಕ್ಯಾನಿಂಗ್‌ ಮುಗಿಸಿ ಮನೆಗೆ ಬಂದ ನಂತರ ಗರ್ಭಿಣಿಯ ತಾಯಿ ಡಾಕ್ಟರ ಕೊಟ್ಟ ದಿನಾಂಕಕ್ಕಿಂತ ಎರಡು ವಾರ ಮೊದಲು ಅಥವಾ ನಂತರ ಹೆತ್ತಿದ್ದಳ್ಳೋ ಎಂದು ಪರಿಶೀಲಿಸುತ್ತೇವೆ.

ನೆರೆ, ಸುನಾಮಿ, ಮಳೆ, ಕ್ರೀಡೆ ಹೀಗೆ ಸಾವಿರಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಎಷ್ಟೇ ತಿಳಿದುಕೊಂಡರೂ ಈ ಎಲ್ಲ ವಿಷಯಗಳು ನಾವು ನೋಡದೇ ಇದ್ದ ಹೊಸದಾರಿಯಲ್ಲಿ ಬಂದು ನಮ್ಮನ್ನು ಸೋಲಿಸಿಬಿಡುತ್ತವೆ. ಇನ್ನೆಷ್ಟು ವಿಷಯಗಳನ್ನು ಪ್ರಕೃತಿ ತನ್ನಲ್ಲೇ ಇಟ್ಟುಕೊಂಡಿದೆಯೊ ಏನೋ? ಹಾಗಾದರೆ, ತಿಳಿದಿ ರುವ ಅಂಶವನ್ನು ನಾವು ವಿಜ್ಞಾನವೆಂದು ಕರೆದರೆ ತಿಳಿಯದಿರುವ ಅಂಶವನ್ನು ದೇವರು ಎಂದು ಕರೆಯಬೇಕೆ? ದೇವರು ತನ್ನ ಶಕ್ತಿ, ಅಸ್ತಿತ್ವವನ್ನು ಹೀಗೆಯೇ ತೋರಿಸುತ್ತಾನೆಯೆ? ಒಂದು ದಿನ ನೂರಕ್ಕೆ ನೂರು ಡಿ-ಕೋಡ್‌ ಆಗಿ ಎಲ್ಲವೂ ವಿಜ್ಞಾನವಾಯಿತೆಂದು ನಾವು ನಮ್ಮ ಸೀಮಿತ ಜ್ಞಾನದಿಂದ ಅಂದುಕೊಂಡರೆ ಆ ನೂರೇ “ಅಂಕ ಒಂದು’.

ನದಿಯ ಕೊನೆ ಎಲ್ಲಿಯವರೆಗೆ ಎಂದು ಹುಡುಕಿಕೊಂಡು ಹೋಗಿ ಅಲ್ಲಿ ಒಮ್ಮೆಲೇ ಮಹಾಸಾಗರ ಪ್ರತ್ಯಕ್ಷವಾದಂತೇ!
.
.
ಇದು ಈ ಅಂಕಣ¨ ‌ಕೊನೆಯ ಲೇಖನ. ಕತೆಗಾರನಾದ ನನ್ನನ್ನು ಹೊಸದೊಂದು ಪ್ರಕಾರಕ್ಕೆ ಒಡ್ಡಿ ಈ ಹದಿನಾರು ವಾರ ಬೆಂಬಲಿಸಿ ಬರೆಸಿದ ಉದಯವಾಣಿ ಸಂಪಾದಕ ಮಂಡಳಿಗೆ, ಲೇಖನಗಳನ್ನು ಓದಿ ಚರ್ಚಿಸಿ ಅಭಿಪ್ರಾಯ ತಿಳಿಸಿದ ಸಾಹಿತ್ಯ-ಯಕ್ಷಗಾನ- ಸಂಗೀತಾಸಕ್ತರಿಗೆ ಆಭಾರಿ.
ಸಹೃದಯಿ ಅಜ್ಞಾತ ಓದುಗನ ಬಗ್ಗೆ ತಿಳಿಯುವ ಕುತೂಹಲ ಸಹಜವೇ. ಆತ ಎಲ್ಲ ಕಡೆ ಇದ್ದಾನಂತೆ. ಆತನಿಗೆ ಶಿರಬಾಗುವೆ.

ಸಚ್ಚಿದಾನಂದ ಹೆಗಡೆ
ಫೊಟೊ : ಬಾಲಸುಬ್ರಹ್ಮಣ್ಯ ಭಟ್‌

ಟಾಪ್ ನ್ಯೂಸ್

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

1-rb

ATP Finals Doubles; ಬೋಪಣ್ಣ ಜೋಡಿಗೆ 6ನೇ ಶ್ರೇಯಾಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.