ಕ್ಷಮೆ
Team Udayavani, Oct 1, 2017, 6:25 AM IST
ಟಪ ಟಪ’ ತಟ್ಟಿದ ಶಬ್ದ; ಹುಬ್ಬು ಗಂಟಿಕ್ಕಿದಳು, ಮಲಗಿದÇÉೇ ಹೊರಳಿ ಬಾಗಿಲತ್ತ ನೋಡಿದಳು.
ಪಾಂಡು- ಕುಂತಿಯರ ಮಾತುಗಳನ್ನು ಕೇಳಿಸಿಕೊಳ್ಳುವ ಗುಂಗಿನಲ್ಲಿದ್ದ ಅವಳಿಗೆ ಎದ್ದು ಹೋಗಿ ಬಾಗಿಲು ತೆಗೆಯಲು ಬೇಸರ. ಯಾರಪ್ಪಾ ಈ ಹೊತ್ತಿನಲಿ? ಎನ್ನುವ ಉದಾಸೀನ. ಮತ್ತೆ ಪುಸ್ತಕದತ್ತ ಕಣ್ಣು ಆಡಿಸಿದಳು. ಟೆÌÌಂಟಿ ಟ್ವೆಂಟಿ ಕ್ರಿಕೆಟ್ ಟಿವಿಯಲ್ಲಿ. ಅದು ಮ್ಯೂಟಲ್ಲಿತ್ತು.
ಪಾಂಡುರಾಜ ಹತ್ತಿರ ಬಂದು ಕುಂತಿಯನ್ನು ನೇವರಿಸಿದ. ಪಿಸುಮಾತಲ್ಲಿ ಮೈಸವರುತ್ತ, “ನಿಯೋಗ ತಪ್ಪಲ್ಲ. ಒಂದೇ ಒಂದು ಸಲ’
ಪುಲಕಗೊಂಡು ಬೋರಲಾದಳು.
ಟಪ್ ಟಪ್… ಮತ್ತೆ ಬಾಗಿಲು ತಟ್ಟಿದ ಶಬ್ದ. ಅಸಹನೆಯಿಂದ ಪುಸ್ತಕ ಬದಿಗಿಟ್ಟಳು. ಈ ಹೊತ್ತಿನಲ್ಲಿ? ಪಕ್ಕದ ಮನೆ ಸವಿತಾ? ಬಾಬಿ? ಊಹೂಂ, ಅವರು ಬೆಲ್ ಮಾಡುತ್ತಾರೆ. ಮೊಬೈಲಲ್ಲಿ ಹೇಳಿಯೇ ಬರುವುದು. ಬಾಗಿಲು ತಟ್ಟಬೇಕೆಂದರೆ?
ಯಾರಿರಬೇಕು?
ಮಗ್ಗಲು ಬದಲಿಸಿ ಎದ್ದು ರೂಮಿನಿಂದ ಹೊರಬಂದರೆ?
ಹಾಲು, ಸೋಫಾ, ಟೇಬಲ…, ಟೀಪಾಯ…, ಅಂದಿನ ಪತ್ರಿಕೆಗಳು. ಒಂದು ಮೂಲೆಯಲ್ಲಿ ಭೀಕರ ಸಿಂಹದ ಎರಕದ ಗೊಂಬೆ. ಅಕಸ್ಮಾತ್ ಮೊದಲ ಸಲ ನೋಡಿದವರು ಕಿರುಚುವಂತೆ ನಿಜವಾದ ಸಿಂಹದಂತೆ ಇದೆ. ಕಾರ್ನ್ ಹಾಕಿದ್ದರಿಂದ ಹಾಲೆಲ್ಲ ಮಬ್ಬು ಬೆಳಕು.
ಕಿಟಕಿ ಕರ್ಟನ್ ಸ್ವಲ್ಪ ಸರಿಸಿ ನೋಡಿದರೆ ಯಾರೂ ಇಲ್ಲ. ಇನ್ನೂ ಕುತೂಹಲ ಹೆಚ್ಚಿತು. “ಸೇಲ್ಸ… ಬಾಯ್ಸ…?’ ಇರಬೇಕು. ಬಾಗಿಲು ತೆಗದಳು. ಗೇಟ್ ಹಾಕಿದಂತೇ ಇದೆ. ಅತ್ತ ಇತ್ತ ದೃಷ್ಟಿ ಹರಿಸಿದಳು. ಯಾರೂ ಇಲ್ಲ. ಡಿಸ್ಟರ್ಬ್ ಆಗಿದ್ದರ ಬೇಸರ. ಬಾಗಿಲು ಮುಚ್ಚಿ ಹಿಂದುರಿಗಿದಳು. ಪರ್ವ ಕಾದಂಬರಿಯ ಕುಂತಿ ಅವಳ ದಾರಿ ಕಾದಿದ್ದಳು. ಕುಂತಿಗೆ ಗಂಡನ ಮಾತು ಅದೂ ಮೈಮೇಲೆ ಕೈ ಆಡಿಸುತ್ತ ಕಿವಿಯಲ್ಲಿ ಮುಖವಿಟ್ಟು ಪಾಂಡು ಏನು ಹೇಳುವನೋ ಕುತೂಹಲ ಇಲ್ಲದ ಕಲ್ಪನೆ ಮಾಡಿಕೊಳ್ಳುತ್ತ ಮುಂದೇನೋ ಓದತೊಡಗಿದಳು.
ಹದಿನಾಲ್ಕನೇ ಓವರ್!
.
ಇತ್ತ ಅವನು.
ಕಣ್ಣು ಮುಚ್ಚಿದರೂ ಅದೇ. ಘಟನೆ ಅಲ್ಲ ದುರ್ಘಟನೆ. ತಲೆಯ ತುಂಬ ಅದೇ. ನಿಶೆ ಇಳಿಯುತ್ತಿದ್ದಂತೆ ಸ್ಪಷ್ಟವಾಗುತ್ತಾ ಈಗಂತೂ ದೈತ್ಯಾಕಾರವಾಗಿ ತೆರೆದುಕೊಂಡಿತ್ತು. ಎದ್ದು ಕುಳಿತ. ಕಣ್ಣುಜ್ಜಿಕೊಂಡ. ಭಯ ಹೆಚ್ಚತೊಡಗಿದಂತೆ ತನ್ನ ಬಗ್ಗೆ ತನಗೇ ಅಸಹ್ಯವೂ ಸೇರಿತ್ತು. ತಾನು ಅಂಥವನಲ್ಲ. ಕನಸು ಮನಸಲ್ಲೂ ಹಾಗೆ ಕಲ್ಪಿಸಿಕೊಳ್ಳದ ಸುಸಂಸ್ಕೃತ ಮನಸ್ಸು. ಆದರೆ, ಆಗಬಾರದ್ದು ಆಗಿ ಹೋಗಿತ್ತು. ಏಕೆ ಹೀಗಾಯಿತು? ತನಗೆ ಏನಾಗಿತ್ತು?
ಗೆಳೆಯ ರಘುವನ್ನು ಕೊಚ್ಚುವಷ್ಟು ಸಿಟ್ಟು ಬಂತು. ಮುಷ್ಟಿ ಬಿಗಿದಿತ್ತು.
“ಅವನಿಗೆ ಸರಿಯಾಗಿ ಮಾಡುತೀನಿ. ಥೂ ಸೂ… ಮಗ…’
ಸ್ವಗತಕ್ಕೆ ತಾನೆ ಬೆಚ್ಚಿದ. ತನ್ನ ಬಾಯಿಯಿಂದ ಅಂತಹ ಬೈಗುಳವೆ? ಅಸಹ್ಯ ತರಿಸಿತು. ಸದಾ ಹೆಣ್ಣುಮಕ್ಕಳ ಪರ ಮಾತಾಡುವ ತನಗೆ ಏನಾಗಿದೆ? ರಘು ತಪ್ಪಿಗೆ ಅವನ ಅಮ್ಮನನ್ನು ಸೂಳೆ ಮಾಡುವ ಪದ ಉಪಯೋಗಿಸಿ ಬಿಟ್ಟಿದ್ದ. ಆ ತಾಯಿ ನೆನಪಾದಳು. ಒಂದೆರಡು ಸಲ ನೋಡಿದ್ದ. ಗಾಂಭೀರ್ಯ ತುಂಬಿದ ಲಕ್ಷ್ಮೀದೇವಿಯಂಥ ಸೌಂದರ್ಯ. ಆರಾಧನಾ ಭಾವ ಮೂಡಿಸಿತ್ತು. ಅಂಥವರಿಗೆ ಸೂಳೆ? ಛೇ! ಇದೊಂದು ಅನಾದಿಕಾಲದಿಂದ ರಕ್ತದಲ್ಲಿ ಹರಿದ ಅನಾರ್ಯಭಾವ.
ಇಂಗ್ಲಿಷಿನಲ್ಲಿ? ಅಲ್ಲೂ ಅಷ್ಟೆ. ಬಾಸ್ಟರ್ಡ್. ಅರ್ಥ? ಡಿಕ್ಷನರಿ ತೆಗೆದ. ಜಾರಜ. ಸೂಳೇಮಗ. ಥೂ! ಎÇÉಾ ಭಾಷೆ ಅಷ್ಟೆ. ಹೆಣ್ಣನ್ನು ಸೂಳೆ ಮಾಡುವುದರಲ್ಲಿ ಪುರುಷತ್ವ ವಿಜೃಂಭಿಸಿದೆ-ಧರ್ಮ ದೇಶ ಕಾಲ ಭಾಷಾತೀತವಾಗಿ.
ಮತ್ತೆ ಆ ಘಟನೆ ರಿಪ್ಲೇ. ತಲೆ “ದಿಂ’ ಎಂದಿತು. ಗಟ ಗಟ ನೀರು ಕುಡಿದ. ಸ್ವಲ್ಪ ನೀರು ಬನಿಯನ್ ಮೇಲೂ ಚೆಲ್ಲಿ ಮಂಜಿನಂತೆ ಕೊರೆಯತೊಡಗಿತ್ತು. ಬನಿಯನ್ ತೆಗೆದು ಬಿಸಾಕಿ ಹಾಗೇ ಹಾಸಿಗೆ ಮೇಲೆ ಅಂಗಾತ ಬಿದ್ದ.
ರಘು ಮನೆಗೆ ಹೋಗಬೇಕು. ಆಕ್ರೋಶದಿಂದ ತುಟಿ ಕಚ್ಚಿದ. ಮನೆ ಬೇಡ. ಪಾರ್ಕೇ ಸರಿ. ಅಲ್ಲಿಗೆ ಎಳೆದುಕೊಂಡು ಹೋಗಿ “ಇದಕ್ಕೆಲ್ಲ ನೀನೇ ಕಾರಣ’ ಎಂದು ಗಟ್ಟಿಸಿ ಬಾಯಿಗೆ ಬಂದಂತೆ ಬೈಯಬೇಕು.
ಅವನು ಕುಡಿಸಿದ. ತಾನು ಕುಡಿದೆ!
ಜಾಡಿಸಿದರೂ ಮತ್ತೆ ಮುಕುರುತ್ತಲೇ ಇರುವ ನೊಣದಂತೆ ಅದೇ ಯೋಚನೆಗಳು. ಚಟಪಟಿಸುತ್ತ¤ ಚಟಪಟಿಸುತ್ತ ಯಾವಾಗ ನಿ¨ªೆ ಬಂತೋ…
ಕಣ್ಣು ಬಿಟ್ಟಾಗ ಕಿಟಕಿಯಿಂದ ಸೂರ್ಯ ಕುಕ್ಕಿದ್ದ. ದಡಬಡಿಸಿ ಎದ್ದ. ಸ್ವಲ್ಪ ಹೊತ್ತು ಎಲ್ಲ ಮರೆತಂತಿತ್ತು. ಮತ್ತೆ ನೆನಪಾಗಿ ವಿಹ್ವಲನಾದ. ಇವತ್ತು ಆಫೀಸಿಗೆ ಹೋಗುವುದು ಬೇಡ. ಬಾಸಿಗೆ ಮೋರೆ ತೋರಿಸುವುದು ಹೇಗೆ? ಅವರು ತನ್ನನ್ನು ಗೌರವ ಪ್ರೀತಿಯಿಂದ ಕಾಣುತ್ತಾರೆ ಅಧಿಕಾರಿ ಎಂಬ “ಅಹಂ’ ಇಲ್ಲ. ಆದರೆ ಈ ವಿಷಯದಲ್ಲಿ? ಹೇಗೆ ನಿಭಾಯಿಸುವುದು? ಯಾರೋ ಎಂದು ತಿಳಿದು ಎನ್ನಲೇ? ಅರೇ ಬಾಸ್ ದೆಹಲಿಗೆ ಹೋಗಿ¨ªಾರೆ. ಚಟ್ಟನೆ ಎದ್ದ. ಹೊಸ ನಿರ್ಧಾರ ಮೂಡಿತ್ತು.
ನೇರವಾಗಿ ರಘು ಮನೆಗೆ ಹೊರಟ.
ಬಾಗಿಲಲ್ಲೇ ರಾಘವ. ಕೈಲಿ ದೋಸೆ ಪ್ಲೇಟ್.
“ಬಾ, ಬಾ’ ಎಂದು ಆತ್ಮೀಯವಾಗಿ ಕರೆಯುತ್ತ, “ಸೋನೂ ಇನ್ನೊಂದು ದೋಸೆ. ಡಬಲ್ ರೋಸ್ಟ್ ಮಾಡು ವಿವೇಕ್ ಬಂದಿದಾನೆ’ ಎಂದ. ಸಿಟ್ಟು ತಡೆಹಿಡಿದು ಒಳಗೆ ಹೋದ.
ದೋಸೆ “ಗಂ’ ರುಚಿಸಿತು. ಎಲ್ಲವನ್ನೂ ಸಹಿಸುವ ಶಕ್ತಿ ಹಸಿವಿನದ್ದು. ಬೇಡ ಎಂದರೂ ಮತ್ತೂಂದು ಹಾಕಿದಳು. ಗೆಳೆಯನ ಎಡವಟ್ಟು ಅವನ ಹೆಂಡತಿಯ ದೋಸೆಯ ರುಚಿಯಲ್ಲಿ ತೀವ್ರತೆ ಕಳೆದುಕೊಂಡಿತ್ತು. ನಗುತ್ತ, “ದೋಸೆ ಎಷ್ಟು ಚೆನ್ನಾಗಿ ಮಾಡುತ್ತೀರಿ’ ಎಂದು ಹೊಗಳಿದ. ರಾಘವ ಹೆಂಡತಿಯೊಡನೆ ಹೊರಟಂತಿತ್ತು. “ಸಾಯಂಕಾಲ ಸಿಗುತೀನಿ’ ಎಂದ.
ರೂಮ್‌ಗೆ ಹಿಂತಿರುಗಿದ. ಮತ್ತೆ ಏಕಾಂಗಿ. ಅದೇ ಪ್ರಸಂಗ ಹಳೆಯ ಕೆಟ್ಟ ರೆಕಾರ್ಡ್‌ನಂತೆ ಮತ್ತೆ ಮತ್ತೆ ಪ್ಲೇ ಆಗುತ್ತಲಿತ್ತು.
ತಾನೇಕೆ ಬೆತ್ತಲೆ ಕೈಗೆ ಕೈ ತಾಗಿಸಿದೆ? ಅದು ಅಕಸ್ಮಿಕ. ಯಾರೆಂದು ತಿಳಿದಿರಲಿಲ್ಲ. ಆದರೆ ತಾನೇಕೆ ಬಿಸಿ ತಾಗುತ್ತಲೇ ಹಿಂತೆಗೆದುಕೊಳ್ಳಲಿಲ್ಲ. ಅದರ ಬಿಸಿಯಲ್ಲಿ ಕರಗುತ್ತ ಅಂಟಿಕೊಂಡೆ. ಪುಲಕಗೊಂಡೆ?
ಕೊನೆಯ ಸೀನು. ಹೀರೋ ಹೀರೋಯಿನ್ ಅನ್ನು ಬಳಸಿ ತಬ್ಬಿ ನಡೆದಿರುವಾಗ ತನಗೇನಾಯ್ತು? ಈಗ ಬಿಟ್ಟರೆ ಇನ್ನಿಲ್ಲ ಎಂಬಂತೆ ಆ ಬಿಸಿ ಕೈಯನ್ನು ಒತ್ತಿ ಹಿತವೆನಿಸಿ… ಹಾಗೇ..
ಮಂದಬೆಳಕಲ್ಲಿ ಓರೆಗಣ್ಣಿಂದ ನೋಡುತ್ತಲೇ ಸಿಡಿಲು ಬಡಿದಂತೆ ಕ್ಷಣದಲ್ಲಿ ಬೆವತು ನೀರು ನೀರಾಗಿ ಜನಸಂದಣಿಯಲ್ಲಿ ನುಗ್ಗಿ ಕಣ್ಣತಪ್ಪಿಸಿಕೊಂಡ. ಎಂತಹ ಅನಾಹುತ. ಅವರೂ ನೋಡಿದರೆ? ಗೊತ್ತು ಹಿಡಿದರೆ? ನಿಶೆಯಲ್ಲಿ ಏನೋ ಅಗಿಹೋಗಿತ್ತು.
ನೋಡಿ¨ªಾರೆ. ಗೊತ್ತು ಸಿಕ್ಕಿದೆ ಮೈ ಸಣ್ಣಗೆ ನಡುಗಿ ಬಾಯಿ ಒಣಗಿತ್ತು.
ಕ್ಷಮೆಯಾಚಿಸಬೇಕು. ಅವರದು ತುಂಬ ಗಂಭೀರ ಸ್ವಭಾವ. ನೋಟದಲ್ಲಿ ಮಮತೆ ತುಂಬಿದೆ. ಸಂಕೋಚಸ್ವಭಾವ.
ಎಷ್ಟೋ ಸಲ ಬಾಸ್ ಕರೆದಾಗ. ಮನೆಗೆ ಹೋಗಿ ಬೆಲ್ ಮಾಡಿದ್ದ. “ಬನ್ನಿ ಕುಳಿತುಕೊಳ್ಳಿ ಈಗ ಬರುತ್ತಾರೆ ಕಾಫಿ ಕೊಡುತೀನಿ ಪೇಪರ್ ನೋಡುತ್ತಿರಿ’ ಎಂದಷ್ಟೇ ಮಾತು. ಹೆಚ್ಚು ಹೊತ್ತು ನಿಲ್ಲುತ್ತಿರಲಿಲ್ಲ. ಕೆಲವು ಸಲ ಬಿಸಿ ಬಿಸಿ ಉಪ್ಪಿಟ್ಟು ಕೊಟ್ಟಿ¨ªಾರೆ. “ಇವರು ತುಂಬ ಚುರುಕು ತುಂಬ ಡೀಸೆಂಟ್ ಪ್ರಾಮಾಣಿಕ. ಯಾವ ಕೆಲಸ ಕೊಟ್ಟರೂ ನಿಭಾಯಿಸುತ್ತಾರೆ’ ಎಂದು ಬಾಸ್ ಹೇಳಿದಾಗ ಸ್ವಲ್ಪವೇ ನಕ್ಕಿದ್ದರು. ಈಗ ತಾನೆಂಥ ಡೀಸೆಂಟ್! ಲಜ್ಜೆಯಿಂದ ಕುಗ್ಗಿಹೋದ. ಇನ್ನು ಆ ಮನೆಯತ್ತ ಸುಳಿಯಲೇ ಬಾರದು. ಇಂತಹ ಮುಖ ಹೊತ್ತು ಹೇಗೆ ಮಾತಾಡುವುದು?
ಕ್ಷಮೆಯಾಚಿಸಬೇಕು. ಇದು ಅಕಸ್ಮಿಕ ಎಂದು ಮನಕರಗುವಂತೆ ತನ್ನ ಮೇಲಿನ ದುರಭಿಪ್ರಾಯ ಅಳಿಸುವಂತೆ ಮನವರಿಕೆಮಾಡಿಕೊಡಬೇಕು. ಕ್ಷಮಾಯಾಚನೆಯಂಥ ಮಾರ್ಗ ಮತ್ತೂಂದಿಲ್ಲ. ಕ್ಷಮಿಸುತ್ತಾರೆ. ತನ್ನನ್ನು ಲಂಪಟ ಎಂದು ಅಪ್ಪಿತಪ್ಪಿಯು ಭಾವಿಸುವುದಿಲ್ಲ.
“ನೀವೆಂದು ತಿಳಿಯಲಿಲ್ಲ’
“ಹೌದಾ? ಯಾರು ಎಂದು ತಿಳಿದು ಹಾಗೆ ಮಾಡಿದಿರಿ?’ ಎಂದು ಕೇಳಿದರೆ?
ತಲೆ ಬಿಸಿಯಾಯ್ತು. ರಾಘವನ ಮೇಲೆ ಮತ್ತೆ ಆಕ್ರೋಶ ಉಕ್ಕಿತು. ಛೇ! ಎಂದೂ ಇಲ್ಲದ ತಾನು ಅಂದು ಏಕೆ ಗುಂಡು ಹಾಕಿದೆ? ಸ್ವಲ್ಪ ಸ್ವಲ್ಪ ಎಂದು ಎಂಥ ಅನಾಹುತ ಮಾಡಿದ. ದುಷ್ಟಸಖ್ಯದಿಂದ ಅಭಿಮಾನ ಭಂಗವಾಗಿ ಹೋಯ್ತ, ತನ್ನದೂ ತಪ್ಪಿದೆ ಸೀದಾ ರೂಮಿಗೆ ಹೋಗಬೇಕಿತ್ತು. ಇದೇ ಸಮಯದÇÉೇ ಪಕ್ಕದ ಮನೆಯ ಯಜಮಾನ; ಅರವತ್ತರ ಹಿರಿಯ ಬಂದು ಬಿಡುತ್ತಾರೆ. ತನ್ನ ಕುಡಿತದ ವಾಸನೆ ಬಡಿದರೆ? ಏನು ತಿಳಿದುಕೊಂಡಾರು? ತಪ್ಪಿಸಿಕೊಳ್ಳಲು ಸಿನೆಮಾಕ್ಕೆ ಹೋಗಿದ್ದೇ ಈ ಅನಾಹುತಕ್ಕೆ ಕಾರಣ.
“ನಿಮ್ಮ ಅಸಿಸ್ಟೆಂಟ್ ಏಕೋ ಸರಿ ಇಲ್ಲ’ ಎಂದು ಸೂಕ್ಷ್ಮವಾಗಿ ಹೇಳಿದರೆ? ಬಾಸ್ ತನ್ನನ್ನು ಅದೇ ದಿನ ಗೆಟ್‌ಔಟ್ ಎನ್ನುತ್ತಾರೆ. ಕೈ ತುಂಬ ಸಂಬಳ, ಉತ್ತಮ ಭವಿಷ್ಯ, ಮುಂದಿನ ತಿಂಗಳು ಹತ್ತೂಂಬತ್ತಕ್ಕೆ ಮದುವೆ.
ಮತ್ತೆ ಕಂಪಿಸಿದ. ಈಗ ಕೆಲಸ ಹೋದರೆ ಮದುವೆಯೂ ಮುರಿದಂತೆ. “ಏಕೆ ಕೆಲಸದಿಂದ ತೆಗೆದರು’ ಎಂದು ಕೇಳಿದರೆ?
ಬಾಸ್ ಊರಲ್ಲಿ ಇರುವುದೇ ಕಡಿಮೆ. ಎಲ್ಲ ಜವಾಬ್ದಾರಿ ತನ್ನ ಮೇಲೆ ಹೊರಿಸಿ ನಿಶ್ಚಿಂತೆಯಿಂದ ಟೂರ್. ಮುಂಬೈ ದೆಹಲಿ ಎಂದು ಹೋಗುತ್ತಾರೆ. ವರ್ಷ ವರ್ಷವೂ ನಿರೀಕ್ಷೆಗೂ ಮೀರಿ ವೇತನ ಹೆಚ್ಚಿಸಿ¨ªಾರೆ. ಎಂತಹ ವಿಶ್ವಾಸ ತನ್ನ ಮೇಲೆ. ತಾನೂ ಅಷ್ಟೇ ಒಂದು ಸಾರಿಯೂ ಐಮಾರಿ ಕೆಲಸಮಾಡಿಲ್ಲ. ಅಚ್ಚುಕಟ್ಟಾಗಿ ನಿಭಾಯಿಸಿ ಶಹಭಾಸ್ ಎನ್ನಿಸಿಕೊಂಡಿದ್ದೇನೆ. ಈ ದರಿದ್ರ ರಾಘವನಿಂದ ಏನೆಲ್ಲ ಆಗಿಹೋಯ್ತು!
ಹಲ್ಲು ಹಲ್ಲು ಕಡಿದ.
ಬಾಸ್ ಒಳ್ಳೆಯವರು. ಆದರೆ, ಆವೇಶ ಹೆಚ್ಚು. ಆಕೆಯ ಒಂದು
ಮಾತಿಂದ ತನ್ನ ಸರ್ವಸ್ವವೂ ನಾಶವಾಗುತ್ತದೆ.
ಮು¨ªಾದ ಮಂದಾಕಿನಿಯ ಮುಖ ನೆನಪಾಯ್ತು. ಅಪ್ಪ ಶ್ರೀಮಂತ. ಮದುವೆಯಾದ ಮೇಲೆ ತಾನೇ ಅವರ ಭಾವೀ ಮಾವನ ವಾರಸುದಾರ. ಮಂದಾಕಿನಿಯೂ ಸಾಮಾನ್ಯ ಹೆಣ್ಣಲ್ಲ. ತುಂಬ ಬುದ್ಧಿವಂತೆ.
ಈಗ ತಾನು ಇಂಥವನು ಎಂದು ತಿಳಿದರೆ? ತನ್ನ ಮುಖವನ್ನೂ ನೋಡದೆ ಬಾಗಿಲನ್ನು ಮುಖಕ್ಕೆ ಹೊಡೆವಂತೆ ಹಾಕಿ ದಬ್ಬುತ್ತಾರೆ. ಉದ್ಯೋಗ ಮತ್ತು ಹೆಣ್ಣು ಎರಡನ್ನೂ ಒಂದೇ ಸಲ ಕಳೆದುಕೊಂಡೆ.
ಒಂದು ಸಣ್ಣ ತಪ್ಪು ಏನೆಲ್ಲ ಮಾಡಿಬಿಡುತ್ತದೆ. ಏನಿದೆಲ್ಲ?
ಯೋಚಿಸುತ್ತ ದೃಢನಿರ್ಧಾರಕ್ಕೆ ಬಂದ. “ಸ್ನೇಹಿತರ ಬಲವಂತಕ್ಕೆ ಬಾರಿಗೆ ಹೋದೆ. ಅಲ್ಲೂ ಬಲವಂತ. ಕುಡಿದೆ. ಎಂದೂ ವಾಸನೆ ನೋಡದ ನಾನು ವಿವೇಕ ಕಳೆದುಕೊಂಡೆ’ ಎಲ್ಲ ಹೇಳಿಬಿಡಬೇಕು
ಬಾಸ್ ದೆಹಲಿಗೆ ಹೋಗಿ¨ªಾರೆ. ಈಗಲೇ ಅವರ ಮನೆಗೆ ಹೋಗಿ ಕಾಲಿಗೂ ಬಿದ್ದು ಕ್ಷಮಿಸುವಂತೆ ಬೇಡಬೇಕು. ತುಂಬ ಒಳ್ಳೆಯವರು. ಖಂಡಿತ ಕ್ಷಮಿಸುತ್ತಾರೆ.
ಮೈಬೆವರುತ್ತಿತ್ತು. ಎದ್ದು ಹೊರಟೇ ಬಿಟ್ಟ.
.
ಬಾಗಿಲು ತಟ್ಟುತ್ತಲೇ ಮತ್ತೆ ಮೈ ಬೆವರೊಡೆಯಿತು. ಹೊರಬಂದು ಬಿಟ್ಟ . ಊಹೂಂ ಏನೇ ಆಗಲಿ ಎಂದು ಮೊಂಡ ಧೈರ್ಯ ತಂದು ಕೊಂಡು ಕಾಲಿಂಗ್ ಬೆಲ್ ಒತ್ತಲು ಹೋದ. ಮತ್ತೆ ಹಿಂಜರಿಕೆ. ಬಾಗಿಲು ಬಡಿದ. ಹೆದರಿ ಮರೆಯಾದ.
ಮೂರನೆಯ ಸಲ ಮತ್ತೆ ಎಲ್ಲಿಲ್ಲದ ಭಂಡ ಧೈರ್ಯ ತಂದುಕೊಂಡು ಕಾಲಿಂಗ್ ಬೆಲ್ ಒತ್ತಿದ. ಒತ್ತುವ ಬೆರಳು ಕಂಪಿಸಿತ್ತು.
ಬಾಗಿಲು ತೆಗೆಯಿತು. ನೋಡುತ್ತಲೇ “ಹೋ ನೀವಾ?’ ಎಂದಳು. ಆ ಧ್ವನಿಯಲ್ಲಿ ರಾತ್ರಿ ಘಟನೆ ಕಂಡಿತು. ಹೆದರಿ ಹೋದ. ಓಡಿಹೋಗಲೇ ಎನ್ನಿಸಿತು.
“ಬನ್ನಿ ಬನ್ನಿ ಜೀವ ಬಂದಂತಾಯಿತು’ ಕಣ್ಣುಬಿಟ್ಟ ಏನೂ ತೋಚದೆ ನಿಂತ. ನೆಲ ಅದುರುತ್ತಿತ್ತು. “ಬನ್ನಿ’ ಮತ್ತೆ ಕರೆಯುತ್ತ ನಡೆದಳು. ಹಿಂಬಾಲಿಸಿದ. ಎದೆ ಢವಗುಟ್ಟಿತ್ತು.
ಅವಳ ಮುಖ ನೋಡಿದ್ದರೆ ಅಪೂರ್ವ ಲವಲವಿಕೆ ಎದ್ದು ಕಾಣುತ್ತಿತ್ತು. ಕಣ್ಣುಗಳಲ್ಲಿ ಮಿಂಚಿತ್ತು. ನಡಿಗೆಯಲ್ಲಿ ಸಡಗರ. ಇದೆಲ್ಲ ಗುರುತಿಸಿದ್ದರೆ ನಿನ್ನೆ ನಾನೆಂದು ತಿಳಿದಿಲ್ಲ ಎಂದು ನಿರುಮ್ಮಳನಾಗುತ್ತಿದ್ದನೇನೋ, ಧೈರ್ಯವೂ ಬಂದಿರುತ್ತಿತ್ತು. ಆದರೆ, ನೋಡುವ ಧೈರ್ಯ ಎಲ್ಲಿಂದ ಬರಬೇಕು. ಲಜ್ಜೆಯಿಂದ ಕುಗ್ಗಿ ಹೋಗಿದ್ದ. ಆತಂಕದ ಬಿಸಿಯಲ್ಲಿ ಕಮರಿಹೋಗಿದ್ದ.
ಅವಳು ಮುಂದೆ, ಅವನು ಹಿಂದೆ.
ತಡಮಾಡುವುದು ಬೇಡ ಒಂದೇ ಉಸಿರಲ್ಲಿ ಕ್ಷಮೆ ಕೇಳಿ ಹೊರಟುಬಿಡಬೇಕು. ಎಲ್ಲಿಲ್ಲದ ಎದೆಗಾರಿಕೆ ತಂದುಕೊಂಡು ಹೇಳತೊಡಗಿದ, “ಮೇಡಂ’ ಅಳುಕುತ್ತ ಕರೆದ. ಅವಳು ಹಿಂತಿರುಗಿದಳು.
“ತಪ್ಪಾಗಿದೆ. ಕ್ಷಮಾ ಮಾಡಬೇಕು. ನಿನ್ನೆ ನಾನು ನಾನು…’ ಒಂದೇ ಉಸಿರಲ್ಲಿ ಬಡಬಡಿಸುವಂತೆ ಹೇಳಿ ತಲೆ ತಗ್ಗಿಸಿದ.
“ಅದು ನೀವಾ?’ ದಿಟ್ಟಿಸತೊಡಗಿದಳು. ಆ ದೃಷ್ಟಿಯಲ್ಲಿ ಏನಿತ್ತು?
ನಗುಬಂತೋ ದುಮ್ಮುಗುಟ್ಟಿದಳ್ಳೋ ಸ್ಥಿತಿ ನೋಡಿ ಅನುಕಂಪವೊ ಅಥವಾ ಕೆಂಡದಂಥ ಕೋಪವೋ. “ಏಕೆ ಅಷ್ಟು ಬೆವರುತ್ತಿದ್ದೀರಿ. ಮಹಡಿ ರೂಮಲ್ಲಿ ಎಸಿ ಇದೆ. ತಣ್ಣಗೆ ಇರುತ್ತೆ. ಕ್ರಿಕೆಟ್ ಮ್ಯಾಚ್ ಟ್ವೆಂಟಿ -ಟ್ವೆಂಟಿ. ಟಿವಿ ನೋಡುತ್ತ ಇರಿ. ಕಾಫಿ ತರುತೀನಿ’
ಮಾತು ಅರ್ಥವಾಗಲಿಲ್ಲ. ಮುಖ ಎತ್ತಿದ.
“ಮೇಲೆ ಹೋಗಿ’ ಮತ್ತೂಮ್ಮೆ ಆದೇಶದಂತೆ ಕೇಳಿಸಿತು. ಸದ್ಯ ಮೇಡಂ ಸಿಟ್ಟಾಗಿಲ್ಲ ಧೈರ್ಯ ಬಂತು. ವಿಧೇಯ ಕೆಲಸಗಾರನಂತೆ ಮೇಲಿನ ರೂಮಿಗೆ ಯಾಂತ್ರಿಕವಾಗಿ ಚಲಿಸಿದ. ಮೊತ್ತಮೊದಲ ಬಾರಿಗೆ ಆ ಮನೆಯ ಮೇಲಿನ ಮೆಟ್ಟಿಲ ಹತ್ತ ತೊಡಗಿದ.
ಅದೊಂದು ವಿಶಾಲ ರೂಮು. ಸೋಫಾ ಇದೆ. ಬೆಡ್ ಇದೆ. ಟಿವಿ ಇದೆ. ಎಸಿ ತಣ್ಣಗೆ ಮಾಡಿದೆ. ಕರ್ಟನ್ ಹಾಕಿದ್ದರಿಂದ ಮಂದಬೆಳಕು. ಒಂದೈದು ನಿಮಿಷ ಡೋರ್ ತೆಗೆದ ಮತ್ತೆ ಹಾಕಿದ ಶಬ್ದ. ಎರಡು ಕಪ್ ಹಿಡಿದು ರೂಮೊಳಗೆ ಬಂದರು. ಅವನು ನಿಂತೇ ಇದ್ದ. “ಏಕೆ ನಿಂತಿದ್ದೀರಿ. ಕುಳಿತುಕೊಳ್ಳಿ’
ಒಂದು ಗೊಂಬೆಯಾಗಿದ್ದ. ಕುಳಿತ. ಕಾಫಿ ಗ್ಲಾಸ್ ತೆಗೆದು ಕೊಂಡ. ಅವರು ಕುಳಿತರು. ಟಿವಿಯಲ್ಲಿ ಟೆÌÌಂಟಿ-ಟ್ವೆಂಟಿ. ಕೊನೆಯ ಬಾಲ್ ಸಿಕ್ಸರ್ ವಿನ್ನಿಂಗ್ ಶಾಟ್.
“ಹೋ ಇದು ಶಾಟ್! ಹೀಗೆ ಬ್ಯಾಟ್ ಬೀಸೋನೇ ಹೀರೋ’ ಆನಂದದೋದ್ವೇಗದಿಂದ ಮೇಡಂ ಚೀತ್ಕಾರ.
ಅವನಿಗೋ ಕ್ರಿಕೆಟ್‌ನ ಎಬಿಸಿಡಿ ಗೊತ್ತಿಲ್ಲ.
“ಈಗ ಹೇಳು, ಅದೇನೋ ಕ್ಷಮಿಸಿರಿ ಎಂದೆಯಲ್ಲ’ ಏಕವಚನದಲ್ಲಿ ಮೊತ್ತಮೊದಲ ಬಾರಿಗೆ!
ತನಗಿಂತ ಐದಾರು ವರ್ಷ ದೊಡ್ಡೋರು. ತಾನು ಏನೂ ಅಂತ ತಿಳಿದು ಹೋದಮೇಲೆ ಇನ್ನೆಂಥ ಗೌರವ? ಸಣ್ಣ ಕೆಲಸ ಮಾಡಿ ಈಗ ಅನುಭವಿಸಬೇಕು ಸಹಿಸಿಕೊಳ್ಳೋದು ಮುಖ್ಯ. ಅದರಲ್ಲಿ ತನ್ನ ಭವಿಷ್ಯ ತನ್ನ ಮಂದಾಕಿನಿಯ ಬದುಕು ಇದೆ. “ಸದ್ಯ ಮೇಡಂ ಗೆಟೌಟ್ ಎನ್ನಲಿಲ್ಲ’ ಎಂಬ ಸಂತಸ.
ಈಗಲೇ ಕಾಲಿಂಗ್ ಬೆಲ್ ಡಣಿಸಿತು. ಕ್ಷಣ ಎದೆಬಡಿತ ನಿಂತ ಅನುಭವ. “ಯಾರು ಬಂದಿರೋದು. ಏನಿದೆಲ್ಲ?’ ಹೌಹಾರಿದ.
“ಟಿ. ವಿ. ಮ್ಯೂಟ್ ಮಾಡಿ ನೋಡುತಾ ಕುಳಿತಿರು’ ಎಂದು ಬಾಗಿಲು ಎಳೆದುಕೊಂಡು ಯಜಮಾನಿ ಕೆಳ ನಡೆದಳು.
– ಸತ್ಯಬೋಧ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.