ಚಂದನವನದಲ್ಲಿ ಕಲಾಶಿಲ್ಪ


Team Udayavani, Mar 17, 2019, 12:30 AM IST

shilpa.jpg

ಕನ್ನಡ ಚಿತ್ರರಂಗದಲ್ಲಿ ಶಿಲ್ಪಾ ಎಂಬ ಹೆಸರು ಕೇಳಿದರೆ ಮೊದಲು ನೆನಪಿಗೆ ಬರುವುದು ಜನುಮದ ಜೋಡಿ ಖ್ಯಾತಿಯ ಶಿಲ್ಪಾ , ಆನಂತರ ಪ್ರೀತ್ಸೋದ್‌ ತಪ್ಪಾ? ಖ್ಯಾತಿಯ ಶಿಲ್ಪಾ ಶೆಟ್ಟಿ. ಈಗ ಶಿಲ್ಪಾ ಎನ್ನುವ ಹೆಸರಿನ ಮತ್ತೂಬ್ಬ ನಟಿ ಚಂದನವನದಲ್ಲಿ ಭರವಸೆಯ ನಾಯಕಿಯಾಗಿ ಪ್ರವರ್ಧನಮಾನಕ್ಕೆ ಬರುತ್ತಿದ್ದಾರೆ. ಅಂದ ಹಾಗೆ, ಈ ನವನಟಿಯ ಪೂರ್ಣ ಹೆಸರು ಶಿಲ್ಪಾ ಮಂಜುನಾಥ್‌. 

ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಮುಂಗಾರು ಮಳೆ-2 ಚಿತ್ರದಲ್ಲಿ ನಾಯಕಿಯರ ಪೈಕಿ ಒಬ್ಬಳಾಗಿ ಚಿತ್ರರಂಗಕ್ಕೆ ಪರಿಚಯವಾದ ಶಿಲ್ಪಾ ಮಂಜುನಾಥ್‌ ಅಪ್ಪಟ ಕನ್ನಡದ ಪ್ರತಿಭೆ.ಮುಂಗಾರು ಮಳೆ-2 ಚಿತ್ರದ ಬಳಿಕ ಪರಭಾಷೆಯತ್ತ ಮುಖ ಮಾಡಿದ ಶಿಲ್ಪಾ ಮಂಜುನಾಥ್‌ ಕಳೆದ ಮೂರು ವರ್ಷಗಳಲ್ಲಿ ತಮಿಳಿನ ಇಸ್ಪದೆ ರಾಜೂವಂ ಇದಾಯ ರನಿಯುಂ, ಕಾಲಿ, ಮಲೆಯಾಳದ ರೊಸಾಪೋ, ತೆಲುಗಿನ ಕಾಸಿ, ಕನ್ನಡದಲ್ಲಿ ನೀವು ಕರೆ ಮಾಡಿದ ಚಂದಾದಾರರು, ಮತ್ತು ಇತ್ತೀಚೆ ತೆರೆಕಂಡ ಸ್ಟ್ರೈಕರ್‌ ಸೇರಿದಂತೆ ಸುಮಾರು ನಾಲ್ಕು ಭಾಷೆಗಳಲ್ಲಿ, ಏಳಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ಸದ್ಯ ಕನ್ನಡದಲ್ಲಿ ಕೆಂಡಸಂಪಿಗೆ ಖ್ಯಾತಿಯ ವರುಣ್‌ ವಿಕ್ಕಿ ನಾಯಕನಾಗಿರುವ ರಂಗ ಬಿ.ಇ, ಎಂ.ಟೆಕ್‌ ಚಿತ್ರಕ್ಕೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದರ ನಡುವೆ ಇನ್ನೂ ಎರಡೂ¾ರು ಚಿತ್ರಗಳಿಗೆ ಶಿಲ್ಪಾ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಇವೆಲ್ಲದರ ನಡುವೆ ತಮಿಳಿನಲ್ಲಿ ಇಸ್ಪಿಟ್‌ ರಾಜ ಇದೆಯಾ ರಾಣಿ  ಚಿತ್ರದಲ್ಲಿ ನಾಯಕಿಯಾಗಿ ತೆರೆಮೇಲೆ ಬರುತ್ತಿದ್ದಾರೆ. ತೆಲುಗಿನಲ್ಲೂ ಶಿಲ್ಪಾ ಒಂದೆರಡು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು, ಆ ಚಿತ್ರದ ಟೈಟಲ್‌ಗ‌ಳು ಇನ್ನಷ್ಟೇ ಹೊರಬೀಳಬೇಕಿದೆ. 
 
ತಮ್ಮ ಸಿನಿ ಜರ್ನಿಯ ಬಗ್ಗೆ ಮಾತನಾಡುವ ಶಿಲ್ಪಾ ಮಂಜುನಾಥ್‌, “ಸದ್ಯ ನನ್ನ ಗಮನ ಚಿತ್ರರಂಗದಲ್ಲಿದೆ. ಒಳ್ಳೆಯ ಚಿತ್ರಗಳಲ್ಲಿ ಕಾಣಿಸಿ ಕೊಳ್ಳಬೇಕು, ಒಳ್ಳೆಯ ಪಾತ್ರಗಳನ್ನು ಮಾಡಬೇಕು ಎಂಬ ಆಸೆಯಿದೆ. ನನ್ನ ವೃತ್ತಿ ಜೀವನದಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಅಭಿನಯಿಸಿದರೂ ಬೇಜಾರಿಲ್ಲ. ಆದ್ರೆ ಜನರಿಗೆ ಬೋರ್‌ ಆಗದಂಥ ಚಿತ್ರಗಳಲ್ಲಿ, ಪಾತ್ರಗಳಲ್ಲಿ ಅಭಿನಯಿಸಬಾರದು. ಆಡಿಯನ್ಸ್‌ ನನ್ನನ್ನು ಅಭಿನಯದ ಮೂಲಕ ಗುರುತಿಸುವಂತಾಗಬೇಕು. ಆದ್ರೆ ನನಗೆ ಇಷ್ಟವಾಗುವ ಪಾತ್ರಗಳು ಸಿಕ್ಕರೆ ಮಾಡ್ತೀನಿ. ಗ್ಲಾಮರ್‌ ಪಾತ್ರಗಳು ಮಾತ್ರ ಮಾಡಬೇಕು, ಡಿ-ಗ್ಲಾಮರ್‌ ಇರಬಾರದು ಅಂತೇನೂ ಇಲ್ಲ’ ಎನ್ನುತ್ತಾರೆ. ಶಿಲ್ಪಾ ಮಂಜುನಾಥ್‌ ಅವರನ್ನು ನೋಡಿದ ಅನೇಕರು ಈ ಹುಡುಗಿಗೆ  ಜಂಭ ಜಾಸ್ತಿ, ಆ್ಯಟಿಟ್ಯೂಡ್‌ ಇದೆ ಎಂದು ಭಾವಿಸಿರುವುದು ಉಂಟಂತೆ!  ಶಿಲ್ಪಾ ತನಗೆ ಸಂಬಂಧಿಸಿರದ ವ್ಯಕ್ತಿಗಳು, ವಿಷಯಗಳ ಬಗ್ಗೆ ಅನಗತ್ಯವಾಗಿ ಮಾತನಾಡಲು ಹೋಗುವುದಿಲ್ಲವಂತೆ. ಹಾಗಾಗಿ, ಚಿತ್ರರಂಗದಲ್ಲಿ ಅನೇಕರು ತನ್ನ ಬಗ್ಗೆ ತಪ್ಪು ಭಾವಿಸಿದ್ದಾರೆ ಎಂಬ ಅಳಲು ಶಿಲ್ಪಾ ಅವರದ್ದು.

ಟಾಪ್ ನ್ಯೂಸ್

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.