ಆದಷ್ಟು ಬೇಗ…


Team Udayavani, Feb 17, 2017, 6:08 PM IST

handmade-pencil-sketch-drawinga1.jpg

ಓಕಳಿಪುರ ಸಿಗ್ನಲ್‌ ಸುತ್ತ ಸುತ್ತುವರೆದಿರುವ ವಾಹನಗಳ ಸಾಲು ಕಂಡು ಅವನೊಳಗಿನ ದುಗುಡದ ತೀವ್ರತೆ ಇನ್ನಷ್ಟು ಏರಿತು. ನಿರೀಕ್ಷೆಯಂತೆ ಪ್ಯಾಂಟು ಜೇಬಿನಲ್ಲಿದ್ದ ಮೊಬೈಲು ವೈಬ್ರೇಟ್‌ ಆಗುವ ಮೂಲಕ ಅವನ ತೊಡೆಗೆ ಕಚಗುಳಿ ಇಡಲಾರಂಭಿಸಿತು. ಮೊದಲೇ ಊಹಿಸಿದಂತೆ ಅತ್ತಲಿಂದ ತನ್ನೊಡನೆ ಜಗಳ ಆಡಲೆಂದು ಬಂದಿರುವುದು ಅವಳದೇ ಕರೆ ಎಂಬುದು ಸ್ಕ್ರೀನ್‌ ಮೇಲೆ ಬಿತ್ತರಗೊಂಡ “ಬೈಕ್‌’ ಎಂಬ ಪದದಿಂದ ಖಾತ್ರಿಯಾಯಿತು.

ಬಹುತೇಕ ಎಲ್ಲ ಪ್ರೇಮಿಗಳೂ ಅನುಸರಿಸುವಂತೆ ಇವನೂ ಸಹ ತಾನು ಪ್ರೀತಿಸುವ ಹುಡುಗಿಗೊಂದಿಷ್ಟು ಹೊಸ ಹೆಸರುಗಳ ನಾಮಕರಣ ಮಾಡಿದ್ದ. ಆ ಪಟ್ಟಿಯಲ್ಲಿ ಊದು, ಬೈಕ್‌, ಗುಮ್ಮಿ ಎಂಬ ನಾಮಪದಗಳು ಹೆಚ್ಚು ಬಳಕೆಯಲ್ಲಿದ್ದವು. ಊದು ಮತ್ತು ಗುಮ್ಮಿ ಹೆಸರುಗಳನ್ನು ಅವಳೊಂದಿಗೆ ಮೊಬೈಲಿನಲ್ಲಿ ಅಕ್ಷರಗಳನ್ನು ಟೈಪು ಮಾಡುವ ಮೂಲಕ ಮಾತಾಡುವಾಗಲೆಲ್ಲ ಬಳಸುತ್ತಿದ್ದನಾದರೂ, “ಬೈಕ್‌’ ಎಂಬ ಹೆಸರು ಅವನನ್ನು ಹೆಚ್ಚು ಮುದಗೊಳಿಸುತ್ತಿದ್ದುದರಿಂದ ಅದೇ ಹೆಸರಿನಲ್ಲಿ ಅವಳ ನಂಬರ್‌ ಸೇವ್‌ ಮಾಡಿಕೊಂಡಿದ್ದ.

ಅವಳಿಗೆ “ಬೈಕ್‌’ ಎಂದು ನಾಮಕರಣ ಮಾಡುವ ಪ್ರಕ್ರಿಯೆಯ ಹಿಂದೊಂದು ಲಾಜಿಕ್‌ ಕೂಡ ಇತ್ತು. ತಾನು ತನ್ನೊಳಗೆ ಅವಳನ್ನು ಪ್ರೀತಿಸುವ ಸಂದರ್ಭದಲ್ಲೂ ಅದಾಗಲೇ ಪರಿಚಿತಳಾಗಿ ಸ್ನೇಹಿತೆಯ ಸ್ಥಾನ ಅಲಂಕರಿಸಿದ್ದ ಅವಳನ್ನು ತನ್ನ ಬೈಕಿನಲ್ಲಿ ಕೂರಿಸಿಕೊಂಡು ಊರೆಲ್ಲ ಸುತ್ತುತ್ತಿದ್ದ. ಅವಳನ್ನು ಆಫೀಸಿಗೆ ಬಿಡುವುದು, ಕರೆದುಕೊಂಡು ಬರುವುದು ಬಹುತೇಕರ ಕಣ್ಣಿಗೂ ಬಿದ್ದಿತ್ತು. ಆಗಾಗ ಇವಳು, “ನಿನ್‌ ಬೈಕ್‌ನಲ್ಲಿ ಬರಲ್ಲ. ನಡ್ಕೊಂಡು ಹೋಗೋಕೆ ಕಾಲು ಗಟ್ಟಿ ಇವೆ’ ಅಂತೆಲ್ಲ ಹುಸಿ ಕೋಪ ತೋರಿದರೂ, ಅವಳ ಹಿಂದಿಂದೆ ಹೋಗಿ ಬೈಕಿಗೆ ಹತ್ತಿಸಿಕೊಂಡು ಡ್ರಾಪ್‌ ನೀಡುತ್ತಿದ್ದದ್ದೂ ಉಂಟು. ಒಮ್ಮೊಮ್ಮೆ ಅವಳ ಮನವೊಲಿಸಲು ಹೋಗಿ ಸೋತು ಸೊರಗಿದ್ದೂ ಇದೆ.

ಅವಳು ಮೈಸೂರಿನಲ್ಲಿ¨ªಾಗ ಪ್ರತಿದಿನವೂ ಹೀಗೆ ತನ್ನ ಬೈಕ್‌ನಲ್ಲಿ ಪಿಕ್‌ ಆ್ಯಂಡ್‌ ಡ್ರಾಪ್‌ ಮಾಡುತ್ತಿದ್ದುದರಿಂದ ಅವಳೂ ತನ್ನ ಬೈಕಿನ ಅವಿಭಾಜ್ಯ ಅಂಗವೇನೊ ಎನಿಸಲಾರಂಭಿಸಿ ಅವಳಿಗೆ ತನ್ನೊಳಗೇ “ಬೈಕ್‌’ ಎಂದು ಕರೆದುಕೊಳ್ಳಲಾರಂಭಿಸಿದ್ದ.
.
ಕಾಲ್‌ ಪಿಕ್‌ ಮಾಡುವ ಮುನ್ನ ಅವಳು ಕೇಳಬಹುದಾದ ಪ್ರಶ್ನೆಗೆ ತನ್ನೊಳಗೊಂದು ಉತ್ತರ ಕಂಡುಕೊಳ್ಳಲು ಒಂಚೂರು ಸಮಯ ತೆಗೆದುಕೊಂಡವನು, ಅಕ್ಸೆಪ್ಟ್ ಎಂಬ ಹಸಿರು ಗುರುತಿನ ಮೇಲೆ ಬೆರಳಾಡಿಸಿ, ಮೊಬೈಲನ್ನು ಕಿವಿಗೆ ಒರಗಿಸಿಕೊಂಡ. “ಎಲ್ಲಿದ್ಯೋ?’ ಎಂಬ ನಿರೀಕ್ಷಿತ ಪ್ರಶ್ನೆಯೇ ಎದುರಾಯಿತು. 

“ಇನ್ನೂ ಮೆಜೆಸ್ಟಿಕ್‌ ಹತ್ರನೇ ಇದೀನಿ’
“ಇನ್ನೂ ಅÇÉೇ ಇದ್ಯಾ… ಎಂಜಿ ರೋಡ್‌ ಬಸ್‌ ಹತ್ತಿದ್ಯಾ…’
“ಇಲ್ಲ, ಇನ್ನೂ ಬಿಎಂಟಿಸಿ ಸ್ಟ್ಯಾಂಡ್‌ಗೆ ಹೋಗಿಲ್ಲ’
“ಥೂ ಲೋಫ‌ರ್‌… ಇಷ್ಟೊತ್ತು ಅÇÉೇನು ತೊಟಿ¤¨ªಾ!’
“ನಿಂಗೇ ಗೊತ್ತಲ್ಲ… ಕಲಾಗ್ರಾಮ ಇಲ್ಲಿಂದ ತುಂಬಾ ದೂರ… ಈಗ ಟ್ರಾಫಿಕ್‌ ಜಾಮ್‌ ಬೇರೆ ಆಗಿದೆ’
“ಏನಾದ್ರೂ ಮಾಡ್ಕೊಂಡ್‌ ಸಾಯಿ… ನಂಗೇನೂ ಹೇಳ್ಬೇಡ… ನಂಗೆ ಫ್ರೀ ಇಲ್ಲ. ಬೇಗ ಬರೋದಾದ್ರೆ ಬಾ. ಇÇÉಾಂದ್ರೆ ನಾನು ಆಫೀಸ್‌ಗೆ ಹೋಗ್ತಿàನಿ’

ಅವಳ ಭೇಟಿ ಮತ್ತು ಕಲಾಗ್ರಾಮದಲ್ಲಿ ಆಯೋಜನೆಗೊಂಡ ಸ್ನೇಹಿತನ ಪುಸ್ತಕ ಬಿಡುಗಡೆ ಕಾರ್ಯಕ್ರಮ ಎರಡೂ ಉದ್ದೇಶ ಇಟ್ಟುಕೊಂಡು ಬೆಳಿಗ್ಗೆ ಆರಕ್ಕೆ ಮೈಸೂರಿನಿಂದ ಬೆಂಗಳೂರು ಬಸ್‌ ಹತ್ತಿದ್ದ ಅವನು, ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಗಿಸಿಕೊಂಡು ಅವಳ ಭೇಟಿಗೆಂದು ಹೊರಡುವ ಹೊತ್ತಿಗಾಗಲೇ ಮಧ್ಯಾಹ್ನ ಎರಡಾಗಿತ್ತು.

ಇಪ್ಪತ್ನಾಲ್ಕು ಗಂಟೆಯೂ ಸುದ್ದಿ ಬಿತ್ತರಿಸುವ ಆಶ್ವಾಸನೆ ನೀಡುವ ಚಾನೆಲ್‌ವೊಂದರ ಹೃದಯದ ಎಡಭಾಗದಂತಿದ್ದ ದಿನಪತ್ರಿಕೆಯಲ್ಲಿ ಅವಳು ರಿಪೋರ್ಟರ್‌ ಆಗಿದ್ದಳು. ಅವಳ ವೀಕ್ಲಿ ಆಫ್ ಗುರುವಾರಕ್ಕೆ ನಿಗದಿಯಾಗಿದ್ದರಿಂದ ಭಾನುವಾರದ ತನ್ನ ಅಸೈನ್‌ಮೆಂಟುಗಳಿಗೆ ಅನುಗುಣವಾಗಿ ವಿಶ್ವೇಶ್ವರಯ್ಯ ಮ್ಯೂಸಿಯಂ ಹಿಂಬದಿಯಲ್ಲಿರುವ ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ ಕಲಾವಿದರ ಕಲಾತ್ಮಕ ಪ್ರತಿಭಟನೆ ಕಣ್ತುಂಬಿಕೊಳ್ಳುವ ಆತುರದಲ್ಲಿದ್ದಳು. ತನ್ನ ನೋಡಲೆಂದು, ಮುಟ್ಟದೆಯೂ ಮುದ್ದು ಮಾಡಲೆಂದು ಬರುತ್ತಿರುವ ಇವನಿಗೂ ತಾನಿರುವಲ್ಲಿಗೇ ಬರುವಂತೆ ಸೂಚಿಸಿದ್ದಳು. ಎಂಜಿ ರೋಡ್‌ಗೆ ಸಿಟಿ ಬಸ್‌ನಲ್ಲಿ ಬಂದು ಅಲ್ಲಿಂದ ಮ್ಯೂಸಿಯಂ ಅಂತ ಕೇಳ್ಕಂಡು ಬಾರಪ್ಪ ಅಂತಲೂ ತಿಳಿಸಿದ್ದಳು.
.
ಓಕಳಿಪುರದ ಸಿಗ್ನಲ್ಲು ಹಸಿರು ಬಣ್ಣ ತೋರಿದ್ದೇ ತಡ ಇವನು ಕುಳಿತಿದ್ದ ಬಸ್ಸು ಕೂಡ ಚಲನೆಯೊಂದಿಗೆ ಮೋಹಗೊಂಡಂತೆ ಓಡಲಾರಂಭಿಸಿತು. ಮೆಜೆಸ್ಟಿಕ್ಕು ತಲುಪಿದ್ದೇ ತಡ ಸೀದಾ ವಿಚಾರಣಾ ಕೌಂಟರ್‌ಗೆ ತೆರಳಿ, ಅಲ್ಲಿ ಸಿಕ್ಕ ಮಾಹಿತಿ ಅನುಸಾರ ಪ್ಲಾಟ್‌ಫಾರಂ ಹತ್ತೂಂಬತ್ತರತ್ತ ನಡೆದ. ಒಂದೆರಡು ಬಸ್ಸುಗಳ ಕಂಡಕ್ಟರುಗಳನ್ನು ವಿಚಾರಿಸಿದ ನಂತರ ಮುಂದೆ ಮುಂದೆ ಎಂಬ ಸೂಚನೆ ಸ್ವೀಕರಿಸಿ ಕೊನೆಗೂ ಕಾಡುಗೋಡಿ ತಲುಪಿಸುವ ಫ‌ಲಕ ಹೊತ್ತ ಬಸ್ಸನ್ನೇರಿದ.
ಅವಳ ಸೂಚನೆಯಂತೆ ಎಂಜಿ ರಸ್ತೆಗೆ ಆತುಕೊಂಡಂತಿರುವ ಮೇಯೊಹಾಲ್‌ ಎದುರು ಇಳಿದವನು ಮ್ಯೂಸಿಯಂಗೆ ಹೇಗೆ ಹೋಗ್ಬೇಕು ಅಂತ ಯಾರನ್ನು ಕೇಳ್ಳೋದೆಂದು ಸುತ್ತಮುತ್ತ ನೋಡಿದ.

ಸನಿಹದÇÉೇ ಕುಳಿತಿದ್ದ, ನೆರಳಲ್ಲಿದ್ದರೂ ಕೂಲಿಂಗ್‌ ಗ್ಲಾಸು, ಭಾನುವಾರವಾಗಿದ್ದರೂ ಸ್ಕೂಲ್‌ ಬ್ಯಾಗು ಹಾಕಿಕೊಂಡಿದ್ದ ಹುಡುಗನ ಬಳಿ ವಿಚಾರಿಸಿದ. “ವಿಶ್ವೇಶ್ವರಯ್ಯ ರೋಡಾ ಮ್ಯೂಸಿಯಮ್ಮಾ?’ ಅಂತ ಕೇಳಿದವನು “ಇÇÉೆಲ್ಲೂ ಮ್ಯೂಸಿಯಂ ಇಲ್ವÇÉಾ… ನೀವು ಮ್ಯೂಸಿಯಂಗೆ ಹೋಗ್ಬೇಕು ಅಂದ್ರೆ ಒಂದ್‌ ಕೆಲ್ಸ ಮಾಡಿ. ಇಲ್ಲಿ ಮುಂದೆ ಹೋದ್ರೆ ಒಂದ್‌ ಬಸ್‌ ಸ್ಟಾಪ್‌ ಸಿಗುತ್ತೆ. ಅಲ್ಲಿ ಸಿಟಿ ಮಾರ್ಕೆಟ್‌ ಬಸ್‌ ಹತ್ತಿ. ಮ್ಯೂಸಿಯಂ ಇರೋದು ಸಿಟಿ ಮಾರ್ಕೆಟ್‌ ಹತ್ರ’ ಅಂದ.

ಆ ಹುಡುಗನ ಮಾರ್ಗದರ್ಶನ ದಾರಿ ತಪ್ಪಿಸುವ ಸೂಚನೆ ಬಲವಾಗಿ ಗೋಚರಿಸಿದ್ದರಿಂದ ಅವನಿಗೆ ಥ್ಯಾಂಕ್ಸ್‌ ಹೇಳುವ ಗೋಜಿಗೂ ಹೋಗದೆ ಮತ್ತೆ ಮಾರ್ಗದರ್ಶಕರ ಹುಡುಕಾಟದಲ್ಲಿ ತಲ್ಲೀನನಾದ. ತನ್ನನ್ನೇ ದಿಟ್ಟಿಸುತ್ತ ನಿಂತಿದ್ದ ವ್ಯಕ್ತಿಯೊಬ್ಬ ಕೈಸನ್ನೆ ಮೂಲಕ ಕರೆಯುತ್ತಿರುವುದು ಕಣ್ಣಿಗೆ ಬಿದ್ದು ಅವನತ್ತ ತೆರಳಿದ. “ಎಲ್ಲಿಗ್‌ ಹೋಗ್ಬೇಕು’ ಅಂತ ತನಗೆ ಬಾರದ ಭಾಷೆಯಲ್ಲಿ ವಿಚಾರಿಸುತ್ತಿರುವ ಇವನಿಂದಲೂ ತನಗ್ಯಾವ ದರ್ಶನವೂ ದೊರೆಯುವುದಿಲ್ಲವೆನಿಸಿ, ಅವನು ಇನ್ನೂ ಮಾತಾಡುತ್ತಿರುವಾಗಲೇ ಇವನು ಅವನಿಗೆ ಕ್ಯಾರೇ ಅನ್ನದೇ ನಾಲ್ಕು ಮಾರು ದೂರ ತೆರಳಿ ಇನ್ನೊಬ್ಬನನ್ನು ಕೇಳಲಾಗಿ ಅವನು, “ಸೀದಾ ಹೋಗಿ ಸೆಕೆಂಡ್‌ ರೈಟ್‌ ತಗೊಂಡು, ಸೀದಾ ಹೋಗಿ ಸಿಗ್ನಲ್‌ ಹತ್ರ ಲೆಫ್ಟ್ ತಗೊಂಡ್ರೆ ಮ್ಯೂಸಿಯಂ ಸಿಗುತ್ತೆ’ ಅಂತಂದ ಮೇಲೆ ಅವನು ತೋರಿದ ಮಾರ್ಗ ಹಿಡಿದ.

ಸೆಕೆಂಡ್‌ ರೈಟು ತಗೊಂಡ ಮೇಲೆ ಸಿಕ್ಕ ಎಂಜಿ ರೋಡಿನ ದೃಶ್ಯಗಳನ್ನು ನೋಡುತ್ತ ಸಾಗಿದ ಅವನ ಕಣ್ಣಿಗೆ ಪೋರ್ಕ್‌ ದೊರೆಯುವ ಹೊಟೇಲು ಬಿದ್ದ ಕೂಡಲೇ ಮನಸ್ಸು ಜಾಗೃತವಾಯಿತು. ಹೀಗೆ ಒಮ್ಮೆ ಫೋನಿನಲ್ಲಿ ಮಾತಾಡುವಾಗ “ಪೋರ್ಕ್‌ ತಿನ್ಬೇಕು ಅಂತ ತುಂಬಾ ಆಸೆ ಆಗಿದೆ ಕಣೊ’ ಅಂತ ಅವಳು ಅಂದದ್ದು ನೆನಪಾಗಿ, ಇಂದು ಅವಳ ಆಸೆ ಈಡೇರಿಸಬಹುದೆಂದುಕೊಂಡ. ಮತ್ತೆ ಒಂದಿಬ್ಬರ ಬಳಿ ಕೇಳಿ ಹಿಡಿದಿರುವ ಹಾದಿ ಸರಿ ಇದೆ ಎಂಬುದನ್ನು ಖಾತ್ರಿ ಪಡಿಸಿಕೊಂಡು ಮುನ್ನಡೆದ. ಕಡೆಗೂ ಮ್ಯೂಸಿಯಮ್ಮು ಮತ್ತು ಅದರ ಹಿಂದಿರುವ ವೆಂಕಟಪ್ಪ ಆರ್ಟ್‌ ಗ್ಯಾಲರಿ ಕಂಡು ಗುರಿ ತಲುಪಿದ ಸಮಾಧಾನವಾಯಿತು. “ಗ್ಯಾಲರಿ ಹತ್ರನೇ ಇದೀನಿ, ನೀನು ಎಲ್ಲಿದ್ಯ’ ಅಂತನ್ನುವ ಸಲುವಾಗಿ ಅವಳಿಗೊಂದು ಕಾಲ್‌ ಮಾಡಲು ಮೊಬೈಲು ಕೈಗಿಟ್ಟುಕೊಂಡವನ ಕಣ್ಣಿಗೆ ದೂರದಿಂದಲೇ ಅವಳ ಇರುವು ಗೋಚರಿಸಿತು. ಅವಳ ಬಳಿ ಹೋದ. ನೋಡಿದವಳೇ ತುಂಟ ನಗೆ ಬೀರಿದಳು. ಮನಸ್ಸು ನಿರಾಳವಾಯಿತು.

“ಅÇÉೇನು ತೊಟಿ¤¨ªಾ… ಎÇÉಾದ್ರೂ ಹೋಗಿ ಸಾಯಿ…’ ಅಂತೆಲ್ಲ ಒಂದೂವರೆ ಗಂಟೆ ಹಿಂದಷ್ಟೇ ಬೈದವಳು ಇವಳೇನಾ ಎನ್ನುವ ಅನುಮಾನ ಅವನೊಳಗೂ ಅಡ್ಡಾಡಿತು. 

ಆಗಷ್ಟೇ ಪ್ರತಿಭಟನೆ ಮುಗಿಸಿ ವಿಶ್ರಮಿಸುತ್ತಿದ್ದ ಒಂದಿಬ್ಬರು ಕಲಾವಿದರನ್ನು ಮಾತಾಡಿಸಿ ತಾನಿರುವಲ್ಲಿಗೆ ಬಂದು ಮಾತಾಡಿಸಿದವಳ ಮುಖವನ್ನೊಮ್ಮೆ ದಿಟ್ಟಿಸಿ ನೋಡಿದ. ಮನಸ್ಸು ಹಗುರಾದಂತೆ ಭಾಸವಾಯಿತು. “ಬೇಗ್‌ ಬಾ ಅಂತ ಹೇಳಿರ್ಲಿಲ್ವಾ. ಈಗ ನೋಡು, ಮಾತಾಡೋಣ ಅಂದ್ರೆ ಜಾಸ್ತಿ ಟೈಮಿಲ್ಲ. ಊಟ ಬೇರೆ ಮಾಡಿಲ್ಲ’ ಅಂತ ಅವನ ಬಗೆಗೂ ತನ್ನ ಕುರಿತೂ ಕಾಳಜಿ ವ್ಯಕ್ತಪಡಿಸಿದಳು. “ನ್ಯೂಸ್‌ ಮಾಡೋಕೆ ಪಾಯಿಂಟ್ಸ್‌ ತಗೊಂಡಾಯ್ತ… ಬಾ ಊಟಕ್ಕೆ ಹೋಗೋಣ’ ಅಂತಂದ. “ಓಕೆ… ಬಾ ಇÇÉೇ ಕ್ಯಾಂಟೀನ್‌ನÇÉೇ ಮಾಡೋಣ’ ಎಂದ ಅವಳ ಮಾತಿನಲ್ಲಿ ಹೆಚ್ಚು ಪುರುಸೊತ್ತಿಲ್ಲವೆಂಬ ದನಿಯೂ ಅಡಗಿರುವಂತೆ ತೋರಿತು. ಆದರೂ “ಪೋರ್ಕ್‌ ತಿನ್ಬೇಕು ಅಂತ ಆಸೆ ಆಗಿದೆ ಅಂತಿ¨ªೆ. ಎಂಜಿ ರೋಡ್‌ನ‌ÇÉೊಂದು ಪೋರ್ಕ್‌ ಹೊಟೇಲ್‌ ಇದೆ. ಬಾ ಅಲ್ಲಿಗೇ ಹೋಗೋಣಂತೆ’ ಅಂದ.

“ಜಾಸ್ತಿ ಟೈಮಿಲ್ಲಪ್ಪ. ನಡಿ ಹೋಗೋಣ’ ಎಂದು ಅವನ ಕೈ ಹಿಡಿದು ನಡೆಯಲಾರಂಭಿಸಿದಳು. ಅವಳೊಡನೆ ನಡೆಯುವಾಗೆಲ್ಲ ಏನಾದರೊಂದು ಕೀಟಲೆ ಮಾಡುತ್ತಲೇ ಹೋದವನ ತಲೆಗೆ ತಿವಿಯಬೇಕೆಂದು ಅವಳಿಗೆ ಅನಿಸಿತಾದರೂ, ಪರಿಚಿತರು ಯಾರಾದರೂ ಗಮನಿಸಿದರೆ ಸರಿ ಇರುವುದಿಲ್ಲವೆನಿಸಿ ತನ್ನೊಳಗಿನ ತಿವಿಯುವ ಆಸೆಗೆ ಅಲ್ಪವಿರಾಮವಿಟ್ಟಳು. ಇವನೂ ಸಹ ತಾನೇನು ಕಮ್ಮಿ ಇಲ್ಲವೆನ್ನುವಂತೆ ಅವಳ ಕೈ ಹಿಡಿದು ನಡೆಯುವುದು, ಹೆಗಲ ಮೇಲೆ ಕೈ ಹಾಕಿ ಹಾಗೆ ಮೆಲ್ಲಗೆ ಕೆನ್ನೆಗೆ ಬೆರಳು ತಾಕಿಸುವುದು ಮಾಡುತ್ತಲೇ ಇದ್ದ. ಅವಳು, “ಇದು ರೋಡು’ ಅಂದಾಗಲೆಲ್ಲ, “ಹೌದು ಎಂಜಿ ರೋಡು!’ ಅಂತ ತುಂಟ ನಗೆ ಬೀರುತ್ತಿದ್ದ. “ಎಲ್ಲಪ್ಪ ಎಷ್ಟು ನಡೆದ್ರೂ ನಿನ್‌ ಪೋರ್ಕ್‌ ಹೋಟೆಲ್‌ ಸಿಕ್ತಿಲ್ಲ’ ಅಂದವಳ ಗಮನ ಬೇರೆಡೆ ಸೆಳೆಯಲೆಂದೇ “ಅಲ್ನೋಡು ಆ ಹುಡ್ಗಿàರೆಲ್ಲ ಹೆಂಗೆ ಪುಟ್‌ಪುಟ್‌ ಚೆಡ್ಡಿ ಹಾಕೊಂಡು ಬಿಂದಾಸಾಗಿ ತಿರುಗ್ತಿ¨ªಾರೆ. ನೀನು ಯಾವಾಗ ಅವ್ರಂಗೆ ಆಗೋದು’ ಅಂತ ಕಾಲು ಎಳೆದ. “ಸ್ವಲ್ಪ ಅಮಿಕಂದಿರಪ್ಪ’ ಅಂತ ಮೆಲ್ಲಗೆ ಗದರಿದವಳ ಕೈ ಹಿಡಿದು, “ಅÇÉೇ ಇದೆ ನೋಡು ನಿನ್‌ ಪೋರ್ಕ್‌ ಹೊಟೇಲ್ಲು’ ಅಂತೇಳಿ ಅವಳ ಕಣ್ಣು ಬಾಯಿ ಅರಳುವಂತೆ ಮಾಡಿದ. ಅದುವರೆಗೂ ತಾನು ಪೋರ್ಕ್‌ ಹೊಟೇಲ್‌ ಅಂತಲೇ ನಂಬಿಕೊಂಡಿದ್ದ ಅದು ಹಸಿ ಹಂದಿ ಮಾಂಸ ಮಾರುವ ಅಂಗಡಿ ಎಂಬ ವಾಸ್ತವ ಅವನಿಗೆ ಅರಿವಾದದ್ದು ಅದರ ಒಳ ನಡೆದು ಅಲ್ಲಿದ್ದವರನ್ನು ವಿಚಾರಿಸಿದಾಗಲೇ. 

ತನ್ನ ತಪ್ಪುಗ್ರಹಿಕೆಯಿಂದಾಗಿರುವ ಎಡವಟ್ಟಿಗೆ ಹೇಗಾದರೂ ತೇಪೆ ಹಾಕಲೇಬೇಕೆಂದುಕೊಂಡು, “ಇಲ್ಲಿ ಪೋರ್ಕ್‌ ಹೊಟೇಲ್‌ ಎಲ್ಲಿದೆ?’ ಎಂದು ಕೇಳಿದ. ಒಬ್ಬ ಹತ್ತಿರದÇÉೆಲ್ಲೂ ಇಲ್ಲವೆಂದರೆ, ಮತ್ತೂಬ್ಬ ಇÇÉೇ ನೆಕ್ಸ್ಟ್ ರೋಡÇÉೇ ಸಿಗುತ್ತೆ ಅಂತ ಭರವಸೆ ಹುಟ್ಟಿಸಿದ. “ಎಲ್ಲಿ ಹೇಳಿ?’ ಎಂಬ ಪ್ರಶ್ನೆಗೆ, “ಇÇÉೇ ಲೆಫ್ಟ್ಗೆ ಕ್ರಾಸ್‌ ಆದ್ರೆ ಸೇಂಟ್‌     ಮಾರ್ಕ್ಸ್ ರೋಡಲ್ಲಿ ಕೋಶೀಸ್‌ ಅಂತ ಕೂರ್ಗ್‌ ರೆಸ್ಟೋರೆಂಟ್‌ ಇದೆ. ಅಲ್ಲಿ ಸಿಗುತ್ತೆ ನೋಡಿ’ ಎಂದು ವಿವರಿಸಿದ.

ಹೊಟೇಲೆಂದು ನಂಬಿಕೊಂಡಿದ್ದ ಹಸಿ ಹಂದಿ ಮಾಂಸ ಮಾರುವ ಅಂಗಡಿಯ ಮುಂಬದಿಯಲ್ಲಿರುವ ಬೋರ್ಡಿನಲ್ಲಿದ್ದ ಹಂದಿ ಮಾಂಸದ ತರಹೇವಾರಿ ಐಟಮ್ಮುಗಳ ಪಟ್ಟಿ ತೋರಿಸಿ, ಇದನ್ನು ನೋಡಿಯೇ ತಾನು ಯಾಮಾರಿ¨ªಾಗಿ ಅವಳಿಗೆ ಮನದಟ್ಟು ಮಾಡಿಸುವಲ್ಲಿ ಚೂರುಪಾರಾದರೂ ಯಶಸ್ವಿಯಾದ. ಕೋಶೀಸ್‌ ಬಾರ್‌ ಅಂಡ್‌ ರೆಸ್ಟೋರೆಂಟ್‌ ಅಂತಿದ್ದ ಬೋರ್ಡು ಗಮನಿಸಿ ಇವಳನ್ನು ಬಾರ್‌ನೊಳಗೆ ಹೇಗೆ ಕರೆದುಕೊಂಡು ಹೋಗೋದಪ್ಪ ಅಂತ ಒಳಗೊಳಗೆ ಚಡಪಡಿಸುತ್ತಿರುವಾಗಲೇ, ಅದರ ಬಳಿ ನೆರೆದಿದ್ದವರಲ್ಲಿ ಮಹಿಳೆಯರು ಮತ್ತು ಯುವತಿಯರ ಸಂಖ್ಯೆಯೂ ಗಮನಾರ್ಹವಾಗಿರುವುದು ಗೋಚರಿಸಿತು.

ಇದು ತಾನಂದುಕೊಂಡಿರುವಂತೆ ಬರೀ ಗಂಡಸರಷ್ಟೇ ಇರುವಂತಹ ಬಾರ್‌ ಅಲ್ಲವೆಂಬುದು ತಿಳಿದು ಅವನೊಳಗಿನ ಚಡಪಡಿಕೆ ಅಸುನೀಗಿತು. ಒಳ ಹೋಗಿ ಕುಳಿತವರ ಕೈಗೆ ಮೆನು ಕಾರ್ಡ್‌ ಬಂತು. ಎಷ್ಟೇ ಹುಡುಕಿದರೂ ಪೋರ್ಕ್‌ ಎಂಬ ಪದ ಕಣ್ಣಿಗೆ ಬೀಳದೇ ಹೋಗಿದ್ದರಿಂದ, “ಇಲ್ಲಿ ಪೋರ್ಕ್‌ ಸಿಗಲ್ವ’ ಅಂತ ವೇಟರ್‌ ಬಳಿ ವಿಚಾರಿಸಿದ. “ಸಿಗುತ್ತೆ ಸರ್‌’ ಎಂದ ಮೇಲೆ, “ಇದ್ರಲ್ಲಿ ಪೋರ್ಕ್‌ ಐಟಮ್ಸ್‌ ಯಾವುª ಅಂತ ತೋರಿÕ’ ಅಂತ ಮೆನು ಕಾರ್ಡ್‌ ಕೊಟ್ಟ. ಅವರು ತೋರಿಸಿದ ಮೇಲೆ ಮೆನು ಕಾರ್ಡ್‌ ನಲ್ಲಿದ್ದ ಪೋರ್ಕ್‌ ಐಟಮ್ಮುಗಳನ್ನು ಪತ್ತೆ ಹಚ್ಚಲಾಗದ ತನ್ನ ಅಜ್ಞಾನಕ್ಕೆ ನಾಚಿಕೆ ಪಟ್ಟುಕೊಳ್ಳಬೇಕೆಂದು ಅವನಿಗೇನು ಅನಿಸಲಿಲ್ಲ. ಈ ವಿಚಾರದಲ್ಲಿ ಅವನ ಪಕ್ಕ ಕುಳಿತಿದ್ದ ಅವಳೂ ಸಹ ಸಮಾನ ಅಜ್ಞಾನಿಯಾಗಿದ್ದರಿಂದ ಅವಳೂ ಇವನನ್ನು ರೇಗಿಸಲು ಮುಂದಾಗಲಿಲ್ಲ. ಹಂದಿ ಮಾಂಸಕ್ಕೆ ಪೋರ್ಕ್‌ ಅಲ್ಲದೆ ಇಂಗ್ಲಿಷಿನಲ್ಲಿ ಇನ್ನು ಯಾವ್ಯಾವ ಹೆಸರುಗಳಿವೆಯೋ ಅಂದುಕೊಂಡು, ಯಾವ ಐಟಮ್ಮು ಹೇಗಿರುವುದೋ ಎಂಬ ಕಲ್ಪನೆ ಇರದಿದ್ದರೂ, ಕಂಡದ್ದರÇÉೇ ಕಡಿಮೆ ಬೆಲೆಯಿದ್ದ ಐಟಮ್‌ ಒಂದನ್ನು ಗುರುತಿಸಿ, ಅವಳ ಒಪ್ಪಿಗೆ ಪಡೆದಾದ ಮೇಲೆ ಅದನ್ನೇ ನೀಡುವಂತೆ ತಿಳಿಸಿದ. ಹಂದಿ ಮಾಂಸ ಪ್ರಿಯರ ವಂಶದಲ್ಲಿ ಹುಟ್ಟಿಯೂ ತನ್ನ ಮಾಂಸಾಹಾರವನ್ನು ಕೇವಲ ಕೋಳಿ ಮತ್ತು ಮೀನಿಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದ ಅವನು, ತನಗೆಂದು ಫಿಶ್‌ ಕರಿ ಮತ್ತು ರೈಸ್‌ ಆರ್ಡರ್‌ ಮಾಡಿದ.

ಮೊದಲು ಹಂದಿ ಮಾಂಸದ ಖಾದ್ಯ ಟೇಬಲ್‌ ಮೇಲೆ ಆಸೀನವಾಯಿತು. ಅದರ ಅವತಾರ ನೋಡಿ ಇವನ ಮುಖದ ಮೇಲೆ ನಗೆ ಉಕ್ಕಿತು. “ಇದು ನಿಜ್ವಾಗ್ಲೂ ಫೋರ್ಕೆನಾ ಅಂತ ತಿಂದು ನೋಡಿ ಊದು’ ಅಂತೇಳಿ ಕೆಣಕಿದ. “ನಂಗೂ ಯಾಕೊ ಡೌಟು ಬರ್ತಿದ್ಯಪ್ಪ. ಇದುನ್ನ ನೋಡ್ತಿದ್ರೇನೆ ಒಂಥರಾ ಆಗ್ತಿದೆ. ಇನ್ನು ತಿನ್ನೋದು ಹೇಗೊ’ ಅಂದವಳ ಆತಂಕಕ್ಕೆ ತುಪ್ಪ ಸುರಿಯಲೆಂದೇ ಬಾಯೆ¤ರೆದ ಅವನು, “ಅದೆಲ್ಲ ನಂಗೆ ಗೊತ್ತಿಲ್ಲ. ನಾನಂತೂ ಪೋರ್ಕ್‌ ತಿನ್ನಲ್ಲ. ಏನೋ ನಿನ್ನಾಸೆ ಪೂರೈಸೋಣ ಅಂತ ಕರೊRಂಡ್‌ ಬಂದ್‌ ಕೊಡಿÕದ್ರೆ ಹಿಂಗಾಡ್ತಿದ್ಯಲ್ಲ… ಮುಚೊRಂಡು ತಿನ್ನು ಏನಾಗಲ್ಲ’ ಅಂತ ಗದರುವ ಯತ್ನ ಮಾಡಿದ. ಉಂಡೆ ಸುತ್ತಿದಂತಿದ್ದ ಒಂದು ಪೀಸ್‌ ಬಾಯಿYಟ್ಟ ಅವಳು ಮತ್ತೆ ತಿನ್ನುವ ಪ್ರಯತ್ನ ಮಾಡಲಿಲ್ಲ.

ತಮ್ಮ ಅಕ್ಕಪಕ್ಕದ ಟೇಬಲ್ಲುಗಳ ಬಳಿ ಕುಳಿತಿರುವವರೆಲ್ಲ ಏನು ತಿನ್ನುತ್ತಿ¨ªಾರೆ, ಏನು ಕುಡಿಯುತ್ತಿ¨ªಾರೆ, ಏನೇನು ಮಾಡುತ್ತಿ¨ªಾರೆ ಅಂತೆಲ್ಲ ಗಮನಿಸಲಾರಂಭಿಸಿದವರ ಕಣ್ಣಿಗೆ ಪಕ್ಕದ ಟೇಬಲ್‌ ಬಳಿ ಇಬ್ಬರು ಪರಸ್ಪರ ತಬ್ಬಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿರುವುದು ಕಂಡಿತು. “ನಾವ್ಯಾಕೆ ಹಾಗೆ ಮಾಡಾºರ್ದು’ ಅಂತ ಕೆಣಕಿದ. “ಮುಚRಂಡು ಕೂರಪ್ಪ, ಜಾಸ್ತಿ ನಿಗ್ರಾಡ್ಬೇಡ’ ಎನ್ನುವ ಮೂಲಕ ಅವನ ಮನಸ್ಸಿಗೆ ಮೆಲ್ಲಗೆ ತಿವಿದಳು.

ಫಿಶ್‌ ಕರಿ ಮತ್ತು ರೈಸನ್ನು ಇಬ್ಬರೂ ಸಮನಾಗಿ ಹಂಚಿಕೊಂಡು ತಿನ್ನುವಾಗ, “ಏನೇ ಹೇಳು ನಮ್‌ ಲೋಕಲ್‌ ಮಿಲಿó ಹೋಟ್ಲುಗಳ ಟೇಸ್ಟು ಇಲ್ಲಿರಲ್ಲ’ ಎನ್ನುವ ಅಭಿಪ್ರಾಯ ಮಂಡಿಸಿದ ಅವಳ ಮಾತಿಗೆ ಇವನು ಸಮ್ಮತಿಯ ಮುದ್ರೆ ಒತ್ತಿದ.
ತಿನ್ನಲಾಗದ್ದನ್ನು ತಿಂದು ಮಧ್ಯಾಹ್ನದ ಊಟವನ್ನು ನಾಲ್ಕು ಗಂಟೆಗೆ ಮಾಡಿದ ಇಬ್ಬರೂ ಮತ್ತೆ ಕೈ ಹಿಡಿದು ನಡೆಯಲಾರಂಭಿಸಿದರು. ಮತ್ತದೇ ಹಾದಿಯ ಮೇಲೆ ಹೆಜ್ಜೆ ಗುರುತು ಮೂಡಿಸುತ್ತ ಸಾಗಿದರು. ಇನ್ನೇನು ಬೀಳ್ಕೊಡುವ ಸಮಯ ಹತ್ತಿರವಾಗುತ್ತಿದೆ ಎಂಬುದು ಮನದಟ್ಟಾದ ಕೂಡಲೇ ಇವನು, “ಊದು ನಿನ್ನ ತುಂಬಾ ಮಿಸ್‌ ಮಾಡ್ಕೊತಿದೀನಿ ಕಣೆ’ ಅಂತನ್ನುವ ಮೂಲಕ ಅಳಲು ತೋಡಿಕೊಂಡ. ಎಂದಿನಂತೆ “ಐ ಟೂ’ ಎಂದವಳು, “ಆದಷ್ಟು ಬೇಗ’ ಎಂಬ ಸೂಚನೆ ಸೇರಿಸಿದಳು. ಆ ಆದಷ್ಟು ಬೇಗಕ್ಕೆ ಎಷ್ಟು ವರ್ಷಗಳ ಬದುಕಿದೆ ಎನ್ನುವುದೇ ತಿಳಿಯದಿದ್ದರೂ ಇಬ್ಬರೂ ಸದ್ಯದÇÉೇ ಮದುವೆ ಮೂಲಕ ಒಂದಾಗುವ ಕನಸಿಗೊಂದಷ್ಟು ನೀರು ಚುಮುಕಿಸಿ, ತಮ್ಮಿಬ್ಬರ ಕಣ್ಣಂಚಿಗೂ ಒಂದಿಷ್ಟು ನೀರು ಕರುಣಿಸಿ ಕಲಾ ಗ್ಯಾಲರಿ ಎದುರು ವಿರುದ್ಧ ದಿಕ್ಕಿನಲ್ಲಿ ಚಲಿಸಲಾರಂಭಿಸಿದರು.

– ಎಚ್‌. ಕೆ. ಶರತ್‌

ಟಾಪ್ ನ್ಯೂಸ್

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

1-ssss

J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.