ಮಾಂತ್ರಿಕ ಸಿನೆಮಾಗಳ ನಿರ್ದೇಶಕ

Team Udayavani, Aug 12, 2018, 6:00 AM IST

30.jpg

ಸಮೂಹ‌ ಸಂವಹನ ವಿದ್ಯಾರ್ಥಿಗಳು ಅಥವಾ ಸಿನಿಮಾ ಅಧ್ಯಯನದ ವಿದ್ಯಾರ್ಥಿಗಳು ಆಗಾಗ್ಗೆ ತರಗತಿಯಲ್ಲಿ, ರಸಗ್ರಹಣ ಶಿಬಿರಗಳಲ್ಲಿ ಚರ್ಚಿಸುವ ವ್ಯಕ್ತಿ ಆಲ್‌ಫ್ರೆಡ್‌ ಹಿಚ್‌ಕಾಕ್‌ ಹಾಗೂ ಆತನ ಸಿನೆಮಾ ತಂತ್ರ. ಜಾಗತಿಕ ಸಿನೆಮಾದಲ್ಲಿ ಐಕಾನಿಕ್‌ ನಿರ್ದೇಶಕ ಎಂದೆನಿಸಿಕೊಂಡ ಆಲ್‌ಫ್ರೆಡ್‌ ಹಿಚ್‌ಕಾಕ್‌ ಹುಟ್ಟಿದ್ದು ಆಗಸ್ಟ್‌ 13, 1899ರಲ್ಲಿ, ಇಂಗ್ಲೆಂಡ್‌ನ‌‌ ಲಿಟೋನ್‌ಸ್ಟೋನ್‌ನಲ್ಲಿ. ನಾಳೆಗೆ ಸರಿಯಾಗಿ ನೂರಿಪ್ಪತ್ತು ವರ್ಷಗಳ ಹಿಂದೆ. 

ಆಲ್ಫೆಡ್‌ ಹಿಚ್‌ಕಾಕ್‌ ಪ್ರೇಕ್ಷಕರ ಸಿನಿಮೀಯ ಅನುಭವಕ್ಕೆ ಹೊಸಭಾಷ್ಯವನ್ನು ಬರೆದವರು. ರಹಸ್ಯ, ಕುತೂಹಲ ಹಾಗೂ ರೋಚಕ ಕಥನಗಳನ್ನು ಸಿನೆಮಾಕ್ಕೆ ಇಳಿಸಿ, ಸಿನೆಮಾಸಕ್ತರಿಗೆ ಹೊಸ ಅನುಭವವನ್ನೇ ಕಟ್ಟಿಕೊಟ್ಟವರು. ಸಾಮಾನ್ಯವಾಗಿ ಕೆಲವೊಂದು ಸಿನೆಮಾಗಳು ನಟರ ಹೆಸರಿನಲ್ಲಿ ಗುರುತಿಸಿಕೊಂಡರೆ, ಕೆಲವೊಂದು ಸಿನೆಮಾಗಳು ನಿರ್ದೇಶಕರ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತವೆ. “ನಿರ್ದೇಶಕನ ಸಿನೆಮಾ’ ಎಂಬ ಸಾಲಿಗೆ ಸೇರಿಕೊಳ್ಳುವವು ಹಿಚ್‌ಕಾಕ್‌ ಕೃತಿಗಳು ಮಾತ್ರ. ಆಲ್ಫೆಡ್‌ ಹಿಚ್‌ಕಾಕ್‌ ಒಬ್ಬ ಸ್ಟಾರ್‌ ನಿರ್ದೇಶಕ.

ತಳಮಟ್ಟದಿಂದ ಬಂದು…
ಒಬ್ಬ ಸಾಮಾನ್ಯ ಟೈಟಲ್‌ ಕಾರ್ಡ್‌ ವಿನ್ಯಾಸಕಾರನಾಗಿ ವೃತ್ತಿಜೀವನ ಆರಂಭಿಸಿದ ಹಿಚ್‌ಕಾಕ್‌ ತದನಂತರದಲ್ಲಿ ಸಿನೆಮಾ ಜಗತ್ತಿಗೆ ನೀಡಿದ ಕೊಡುಗೆ ಐತಿಹಾಸಿಕ ಮೌಲ್ಯವುಳ್ಳದ್ದು.  ಜಗತ್ತಿನ ಎಲ್ಲಾ ಸಿನೆಮಾ ಅಧ್ಯಯನ ಪಠ್ಯದಲ್ಲಿ ಹಿಚ್‌ಕಾಕ್‌ನ ಸಿನೆಮಾ ತಂತ್ರಗಳು ಓದಲೇಬೇಕಾದ ವಿಷಯ. ತನ್ನ ನಿರ್ದೇಶನ ವೃತ್ತಿಯನ್ನು ಆರಂಭಿಸಿದ್ದು 1925ರ ದಿ ಫ್ಲೆಷರ್‌ ಗಾರ್ಡನ್‌ ಎಂಬ ಸಿನೆಮಾದ ಮೂಲಕ. ಆದರೆ 1927ರಲ್ಲಿ ನಿರ್ದೇಶಿಸಿದ ದಿ ಲಾಡ್ಜರ್‌ ಎಂಬ ಚಿತ್ರ “ಥ್ರಿಲ್ಲರ್‌’ ಎಂಬ ಹೊಸ ಸಿನೆಮಾ ಪ್ರಕಾರವನ್ನು ಆರಂಭಿಸುವಲ್ಲಿ ನಾಂದಿ ಹಾಡಿತು. ಆ ಎಲ್ಲ ಚಿತ್ರಗಳು ಗಳಲ್ಲಿ ಬಳಸಿದ ಸಿನೆಮಾ ತಂತ್ರಗಳು ಕಾಲಾನಂತರದಲ್ಲಿ  ಹಿಚ್‌ಕಾಕಿಯನ್‌ ತಂತ್ರ  ಎಂದೇ ಪ್ರಸಿದ್ಧಿಗೆ ಬಂತು.

ಹಿಚ್‌ಕಾಕಿಯನ್‌ ತಂತ್ರ
ಕೆಮರಾದ ದೃಷ್ಟಿಕೋನವೇ ನೋಡುಗನ ದೃಷ್ಟಿಯಾಗಿ ಪರಿವರ್ತನೆಯಾಗಿ ಆ ದೃಶ್ಯದ ಪ್ರತ್ಯಕ್ಷದರ್ಶಿ ತಾನು ಎಂಬ ಭಾವವನ್ನು ನೋಟಕನಲ್ಲಿ ಉಂಟುಮಾಡುವ  ತಂತ್ರ (voyeur),  ಆತಂಕ ಹಾಗೂ ಭಯಾನಕತೆಯನ್ನು ಬಿಂಬಿಸುವ ದೃಶ್ಯ… ಇವೆಲ್ಲಾ ಹಿಚ್‌ಕಾಕ್‌ನ ಕೃತಿಗಳನ್ನು ಇತರ ಸಿನೆಮಾಗಳಿಂದ ಭಿನ್ನಗೊಳಿಸುವಂಥವು. ಬಹುಶಃ ತದನಂತರದ ಎಲ್ಲಾ ಥ್ರಿಲ್ಲರ್‌ ಸಿನೆಮಾಗಳು ಹಿಚ್‌ಕಾಕಿಯನ್‌ ತಂತ್ರವನ್ನೇ ಅನುಸರಿಸಿವೆ. 

ಹಿಚ್‌ಕಾಕಿಯನ್‌ ಶೈಲಿಯಲ್ಲಿ ಗಮನಿಸುವಂಥ ಇನ್ನೊಂದು ತಂತ್ರವೆಂದರೆ ಮ್ಯಾಕ್‌ಗಫೀನ್‌ (MacGuffin). ಸಿನೆಮಾದ ಕಥೆಯ ಬೆಳವಣಿಗೆ ಹಾಗೂ ಪಾತ್ರ ಪೋಷಣೆಗೆ  ಯಾವುದೋ ಒಂದು ವಸ್ತು ಅಥವಾ ಪದವನ್ನು ಬಳಸಲಾಗುತ್ತದೆ. ಉದಾಹಣೆಗೆ ಜನಪ್ರಿಯ ಹಾಲಿವುಡ್‌ ಚಿತ್ರ ಟೈಟಾನಿಕ್‌ನಲ್ಲಿ  ಸಂಶೋಧಕನೊಬ್ಬ ನೀಲಿ ಹರಳಿನ ನೆಕ್ಲೇಸ್‌ ಅರಸುತ್ತಾನೆ. ಆ ಹುಡುಕಾಟ ಟೈಟಾನಿಕ್‌ ಎಂಬ ಸುಂದರ ಪ್ರೇಮ ಕಥೆಯೊಂದು ಬಿಚ್ಚಿಕೊಳ್ಳಲು ನೆರವಾಗುತ್ತದೆ. ಅದೇ ರೀತಿ ಆರ್ಸನ್‌ ವೇಲ್ಸ್‌ ನಿರ್ದೇಶಿಸಿದ ಸಿಟಿಜನ್‌ ಕೇನ್‌ ಎನ್ನುವ ಚಿತ್ರದಲ್ಲಿ “ರೋಸ್‌ಬಡ್‌’ ಎಂಬ ಪದವೇ ಕಥಾನಾಯಕನ ಬದುಕಿನ ವಿವಿಧ ಮಜಲುಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ನೆರವಾಗುತ್ತದೆ. ಮ್ಯಾಕ್‌ಗಫೀನ್‌ ಪ್ರೇಕ್ಷಕರ ದೃಷ್ಟಿಯಲ್ಲಿ ಪ್ರಾಮುಖ್ಯ ಇರುವುದಿಲ್ಲ ಅಥವಾ ಸಿನಿಮಾದಲ್ಲಿ ಅದು ಒಂದು ಹಾದುಹೋಗುವ ಒಂದು ಶಾಟ್‌ ಆಗಿರುತ್ತದೆ. ಆದರೆ, ಪೂರ್ತಿ ಕಥೆ ಮ್ಯಾಕ್‌ಗಫೀನ್‌ ಮೇಲೆ ನಿಂತಿರುತ್ತದೆ. 

ಹಿಚ್‌ಕಾಕ್‌ನ ಚಿತ್ರಗಳ ಇನ್ನೊಂದು ವಿಶೇಷತೆ ಎಂದರೆ, ಆತ ನಿರ್ದೇಶಿಸಿದ ಹೆಚ್ಚಿನ ಚಿತ್ರಗಳಲ್ಲಿ ಸಣ್ಣ ಪಾತ್ರವೊಂದರಲ್ಲಿ ಸ್ವತಃ ಹಾದುಹೋಗುವ ಹಿಚ್‌ಕಾಕ್‌ (ಕ್ಯಾಮಿಯೋ ಅಪಿಯರೆನ್ಸ್‌), ಹಿಚ್‌ಕಾಕ್‌ ನಿರ್ದೇಶಿಸಿದ 52 ಚಿತ್ರಗಳಲ್ಲಿ ಸುಮಾರು 39 ಚಿತ್ರಗಳಲ್ಲಿ ಆತನ ಕ್ಯಾಮಿಯೋ ಪಾತ್ರಗಳನ್ನು ಗುರುತಿಸಬಹುದು. ಇಂಥ ಪಾತ್ರಗಳಿಗೆ ಚಿತ್ರದಲ್ಲಿ ಯಾವುದೇ ಮಹತ್ವವಿರುವುದಿಲ್ಲ , ಅದು ಕೆಲವೊಮ್ಮೆ ಸಂಭಾಷಣೆರಹಿತ ಪಾತ್ರವೂ ಆಗಿರಬಹುದು.  ಆ ಪಾತ್ರ ಯಾವುದೋ ದೃಶ್ಯದಲ್ಲಿ ಬರುವ ದಾರಿಹೋಕನೂ ಆಗಿರಬಹುದು, ಗಡಿಯಾರ ರಿಪೇರಿ ಮಾಡುವವನೂ ಇರಬಹುದು, ವೈದ್ಯ-ಲಾಯರ್‌ನೂ ಆಗಿರಬಹುದು ಇತ್ಯಾದಿ. ಉದಾಹರಣೆಗೆ ಹಿಂದಿ ಚಿತ್ರನಿರ್ದೇಶಕ ಮಧುರ್‌ ಭಂಡಾರ್ಕರ್‌ ತನ್ನೆಲ್ಲಾ ಚಿತ್ರಗಳಲ್ಲಿ ಒಮ್ಮೆ ತೆರೆಯ ಮೇಲೆ ಹಾದುಹೋಗುತ್ತಾರೆ. ಕನ್ನಡ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರ‌ಶೇಖರ್‌ ತನ್ನ ಚಿತ್ರಗಳ ಒಂದು ದೃಶ್ಯದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳುವುದಿದೆ.

ಆರು ದಶಕಗಳ ಸಿನಿಮಾಯಾನದಲ್ಲಿ ಆತ ನಿರ್ದೇಶಿಸಿದ್ದು ಬರೋಬ್ಬರಿ 52 ಚಿತ್ರಗಳು, 1960ರ ಹೊತ್ತಿಗೆ ಹಿಚ್‌ಕಾಕ್‌ ನಿದೇಶಿಸಿದ ಕೆಲ ಚಿತ್ರಗಳು ಅತ್ಯದ್ಭುತ ಚಿತ್ರಗಳಾಗಿ ಮೂಡಿಬಂದವು, ರಿಯರ್‌ವಿಂಡೋ (1954), ವೆರ್ಟಿಗೋ (1958), ನಾರ್ತ್‌ ಬೈ ನಾರ್ತ್‌ ವೆಸ್ಟ್‌, ಸೈಕೋ (1960) ಸಿನಿಮಾ ವಲಯದಲ್ಲಿ ಈಗಲೂ ಚರ್ಚೆಗೆ ಗ್ರಾಸವಾಗುವ, ಅಧ್ಯಯನ ಯೋಗ್ಯ ಚಿತ್ರಗಳು, ಥ್ರಿಲ್ಲರ್‌ ಹಾಗೂ ಡಿಟೆಕ್ಟಿವ್‌ ಚಿತ್ರಗಳು ಒಂದಲ್ಲ ಒಂದು ರೀತಿಯಲ್ಲಿ ಹಿಚ್‌ಕಾಕಿಯನ್‌ ತಂತ್ರದ ಪ್ರಭಾವಕ್ಕೆ ಒಳಗಾದಂಥವೇ.

ಗೀತಾ ವಸಂತ್‌

ಟಾಪ್ ನ್ಯೂಸ್

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

2

Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

1(1

Puttur ನಗರಕ್ಕೂ ಬೇಕು ಟ್ರಾಫಿಕ್‌ ಸಿಗ್ನಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.