ಅಟೋರಿಕ್ಷಾ ಚಾಲಕನ ಅಂತರಂಗ


Team Udayavani, Nov 12, 2017, 6:35 AM IST

auto-ricksha.jpg

ಆವತ್ತು ಇನ್ನೊಬ್ಬರು, ಒಬ್ಬರೇ ಒಬ್ಬರು ನನ್ನ ಆಟೋ ಹತ್ತಿದ್ರೆ ಸಾಕಿತ್ತು ಸಾರ್‌!’
ಅಂದ ಆತ ತಕ್ಷಣ ಕಣ್ಣೀರಾದ. ನಾನು ಅವನನ್ನು ಸಮಾಧಾನ ಪಡಿಸಬೇಕೋ ಇÇÉಾ… ಅತ್ತಾರ ಅತ್ತು ಬಿಡು ಹೊನಲು ಬರಲಿ ನಕ್ಯಾಕ ಮರಸತೀ ದುಃಖ… ಅಂತ ಅಳಲು ಬಿಟ್ಟು ಬಿಡಬೇಕೋ ಗೊತ್ತಾಗದೆ ಕಂಗಾಲಾದೆ.

ಆತನಿಗೆ ಅಳು ಕಂಟ್ರೋಲ್‌ ಮಾಡಲು ಆಗಲೇ ಇಲ್ಲ. “ಕ್ಷಮಿಸಿ ಸರ್‌, ಕ್ಷಮಿಸಿ ಸರ್‌’ ಎನ್ನುತ್ತಲೇ ಆತನ ಕಣ್ಣು ಎದುರಿಗಿದ್ದ ದಾರಿಯೂ ಕಾಣದಷ್ಟು ಮಂಜಾಗಿ ಹೋಯಿತು. ಇನ್ನೇನೂ ಮಾಡಲು ತೋಚದೆ ಆತ ರಸ್ತೆ ಬದಿಗೆ ಗಾಡಿ ನಿಲ್ಲಿಸಿದ.
ಆಟೋ ಹತ್ತಿದಾಗೆಲ್ಲ ಸುಮ್ಮನೆ ಕೂರುವುದು ನನ್ನ ಜಾಯಮಾನವಲ್ಲ. ಹಾಗಾಗಿ, ಇವನನ್ನೂ ಮಾತಿಗೆಳೆದುಕೊಂಡು ಕುಳಿತಿ¨ªೆ. ಆವತ್ತು ಏನು ಮಾಡಿದರೂ ಉಬೆರ್‌/ ಓಲಾ ಸಿಗುವ ಲಕ್ಷಣವೇ ಕಾಣಲಿಲ್ಲ. ಹಾಗಾಗಿ “ಹಳೆ ಗಂಡನ ಪಾದವೇ ಗತಿ’ ಎನ್ನುವಂತೆ ನಾನು ಆಟೋಗೆ ಕೈ ಅಡ್ಡ ಹಾಕಿ¨ªೆ. ಸ್ವಲ್ಪ ದೂರ ಹೋಗಿರಬೇಕು, “ಉಬೆರ್‌, ಓಲಾ ಬಂದು ನಿಮಗೆ ಪ್ರಾಬ್ಲಿಮ್‌ ಆಗಿಲ್ವಾ…’ ಅಂದೆ.
 

ಆತ ಶತಮಾನಗಳ ಮಾತನ್ನು ನುಂಗಿ ಕುಳಿತಿದ್ದವನಂತೆ ಮಾತು ಆಡುತ್ತಲೇ ಹೋದ. ನಮ್ಮ ಆಟೋ ಸಂತೆ ದಾಟಿತು, ಮೇಲ್ಸೇತುವೆ ಏರಿತು, ಗಲ್ಲಿ ಹೊಕ್ಕಿತು, ಮಾಲ್‌ ಮುಂದೆ ಹಾಯ್ದಿತು, ಬಾಳೆಹಣ್ಣು ಮಂಡಿಯನ್ನೂ ನೋಡಿತು.

ಇನ್ನೊಂದು ಮಾಲ್‌ಗಾಗಿ ಬಡವರಿಗೆ ಬಟ್ಟೆ ನೀಡುತ್ತಿದ್ದ ಮಿಲ್‌ ಮುಚ್ಚಿದ್ದ ಬೀದಿಯನ್ನೂ ದಾಟಿತು. ಆದರೆ ಅವನ ಮಾತು ನಿಂತಿರಲಿಲ್ಲ. “ಯಾವುದೀ ಪ್ರವಾಹವು…’ ಎನ್ನುವುದಕ್ಕೆ ಅರ್ಥ ಕೊಡಲೇಬೇಕು ಎಂದು ಮನಸ್ಸು ಮಾಡಿಬಿಟ್ಟವನಂತೆ ಮಾತು ಆಡುತ್ತಲೇ ಹೋದ. 

ಹಾಗೆ ಮಾತನಾಡುತ್ತಿದ್ದವನೇ ಹೀಗೆ ದಿಢೀರ್‌ ಕಣ್ಣೀರಾಗಿ ಹೋದ. ನಾನು ಅವನು ಸಂಪೂರ್ಣ ಕಣ್ಣೀರಾಗುವವರೆಗೂ ಏನೊಂದೂ ಮಾತನಾಡದೆ ಕುಳಿತೆ. ಅವನು ಬಿಕ್ಕಿ ಬಿಕ್ಕಿ ಅತ್ತ. ಇನ್ನೊಂದು ಹನಿಯೂ ಉಳಿದಿಲ್ಲ ಎನ್ನುವವರೆಗೂ ಅತ್ತ.  
ಆಗ ನಾನು ಕೇಳಿದೆ, “”ಏನಾಯ್ತು?” ಅಂತ. “”ನನಗೆ ಇನ್ನು ಬೇಕಿದ್ದದ್ದು 20 ರೂಪಾಯಿ ಮಾತ್ರ ಸಾರ್‌. ಒಬ್ಬೇ ಒಬ್ಬರು ಆಟೋ ಹತ್ತಿದ್ದರೆ ಸಾಕಿತ್ತು, ನನ್ನ ತಾಯಿಯನ್ನು ಗೌರವವಾಗಿ ಮನೆಗೆ ಸೇರಿಸುತ್ತಿ¨ªೆ” ಎಂದ. 

ಅರೆ ! 20 ರೂಪಾಯಿಗೂ ಆ ತಾಯಿಗೂ ಏನು ಸಂಬಂಧ ಅನಿಸಿತು. ನನಗೆ ಇದೆÇÉಾ ಅರ್ಥವಾಗುವ ಸಾಧ್ಯತೆಯೇ ಇಲ್ಲ ಅಂತ ಅವನಿಗೆ ಅನಿಸಿತೇನೋ. ಹೇಳಿದ, “”ನಾನು ಆ ದಿನ ದೂರದ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಆಟೋ ಓಡಿಸುತ್ತಿ¨ªೆ”  

“”ನನ್ನ ತಂಗಿಯಿಂದ ಫೋನ್‌ ಬಂತು- ಅಮ್ಮ ಹೋಗಿಬಿಟ್ಟರು ಅಣ್ಣ ಅಂದಳು. ನಾನೋ ಆಟೋ ಓಡಿಸುತ್ತಿದ್ದವನು ಜೊತೆಯಲ್ಲಿದ್ದ ಕಸ್ಟಮರ್‌ನ ದಾರಿ ಅರ್ಧದÇÉೇ ಇಳಿಸುವ ಹಾಗೂ ಇರಲಿಲ್ಲ. ಹಾಗಾಗಿ, ಅವರು ಹೇಳಿದ ಕಡೆಗೆ ಕಣ್ಣಲ್ಲಿ ನೀರು ಇಟ್ಟುಕೊಂಡೇ ಆಟೋ ಓಡಿಸಿದೆ”

“”ಅವರು ಇಳಿದ ತಕ್ಷಣವೇ ಆಸ್ಪತ್ರೆಗೆ ಫೋನ್‌ ಮಾಡಿದೆ- ಆಂಬುಲೆನ್ಸ್‌ ಇರಲಿ ಅಣ್ಣ , ಒಂದು ಗಂಟೆಯೊಳಗೆ ಬಂದು ಬಿಡ್ತೀನಿ ಅಂತ. “ಆಯ್ತಪ್ಪಾ ಆದ್ರೆ 500 ರೂಪಾಯಿ ಆಗುತ್ತೆ’ ಅಂದ. “ಶವ ಸಾಗಿಸಲು ಫ್ರೀ ಆ್ಯಂಬ್ಯುಲೆನ್ಸ್‌ ಕೊಡ್ತೀವಿ ಅಂತ ಸರ್ಕಾರ ಹೇಳಿತ್ತು. ನಾನು- ಯಾಕೆ ಅಣ್ಣ? ಅಂದೆ.  “ಅದು ನಮ್ಮ ಚಾರ್ಜ್‌. ಸತ್ತೋರ ಜೊತೆ ಓಡಾಡಬೇಕಲ್ಲಪ್ಪಾ’ ಅಂದ. ನನ್ನ ಜೇಬಿನಲ್ಲಿ ಅದುವರೆಗೂ ದುಡಿದಿ¨ªೆÇÉಾ ಎಣಿಸಿದೆ. ತಂಗಿ ಬಳಿ ಇದ್ದ ಪುಡಿಗಾಸು ಎಣಿಕೆ ಹಾಕಿದೆ. ಮನೆಯಲ್ಲಿ ಇರೋದು ಎಷ್ಟು ಫೋನ್‌ ಮಾಡಿ ಕೇಳಿದೆ. ಎÇÉಾ ಸೇರಿದರೂ 500 ಆಗುತ್ತಿಲ್ಲ. ಜೊತೆಗೆ ಕಂಡ ಡ್ರೈವರ್‌ಗಳಿಂದಲೂ ಅಷ್ಟಿಷ್ಟು ಸೇರಿಸಿದೆ. ಇನ್ನು 20 ರೂಪಾಯಿ ಮಾತ್ರ ಬೇಕಿತ್ತು”

“”ಅಮ್ಮ ಅಲ್ಲಿ ಉಸಿರು ಇಲ್ಲದೆ ಮಲಗಿ¨ªಾರೆ ಅಂತ ಗೊತ್ತಿತ್ತು, ತತ್‌ಕ್ಷಣ ಹೋಗಬೇಕು ಅನ್ನೋದು ಗೊತ್ತಿತ್ತು. ಏನು ಮಾಡಲಿ 20 ರೂಪಾಯಿ ಇಲ್ಲದೆ ಅಮ್ಮನನ್ನು ಮನೆಗೆ ಕರೆದುಕೊಂಡು ಹೋಗುವ ಹಾಗೇ ಇಲ್ಲ. ಸರಿ ಇದ್ದ ಎಲೆಕ್ಟ್ರಾನಿಕ್‌ ಸಿಟಿಯÇÉೇ ಬೀದಿ ಬೀದಿ ಸುತ್ತಿದೆ. ಒಬ್ಬ, ಒಬ್ಬೇ ಒಬ್ಬ ನನ್ನ ಆಟೋ ಹತ್ತಲಿ ಅಂತ. ಸಾರ್‌ ಎಲ್ಲಿ ನೋಡಿದ್ರೂ ದೊಡ್ಡ ದೊಡ್ಡ ಬಿಲ್ಡಿಂಗ್‌ ಸಾರ್‌, ಸಾವಿರಾರು ಜನ ಬರ್ತಾರೆ ಹೋಗ್ತಾರೆ. ನನ್ನ ಕಣ್ಣೆದುರಿಗೇ ಬೇಕಾದಷ್ಟು ಉಬೆರ್‌- ಓಲಾಗಳು ಬಂತು. ಜನ ಹತ್ತಿ ಹೋದರು”

“”ನಾನು ಕಣ್ಣಲ್ಲಿ ಆಸೆ ಇಟ್ಟುಕೊಂಡು ಎಲ್ಲರ ಮುಂದೆಯೂ ಸುತ್ತಿದೆ. ಆಗಲಿಲ್ಲ, ಒಂದು ಗಂಟೆ ತಡವಾಯ್ತು ಆಟೋ ಗ್ಯಾಸ್‌ ಮುಗಿದು ಹೋದರೆ ಅನ್ನೋ ಭಯ ಶುರುವಾಯ್ತು. ಕೊನೆಗೆ ಆಸ್ಪತ್ರೆ ಕಡೆ ಗಟ್ಟಿ ಮನಸ್ಸು ಮಾಡಿ ಆಟೋ ಓಡಿಸಿದೆ”

“”ಅಲ್ಲಿ ಅಂಬ್ಯುಲೆನ್ಸ್‌ ಡ್ರೈವರ್‌ಗೆ 20 ರೂಪಾಯಿ ಕಡಿಮೆ ಇದೆ ಅಣ್ಣ ಅಂದೆ. ಆತ ಫೋನ್‌ನಲ್ಲಿದ್ದ. ಕೈಸನ್ನೆಯÇÉೇ, “”ಹೋಗ್‌ ಹೋಗ್‌ ಆಗೋದಿಲ್ಲ” ಅಂದ. ನಾನು ಎಲ್ಲಿಗೆ ಹೋಗ್ಲಿ, ಅಮ್ಮ ಇಲ್ಲದೆ ಹೇಗೆ ಹೋಗ್ಲಿ?” 

“”ಅವನ ಮುಂದೆಯೇ ಕುಕ್ಕುರುಗಾಲಲ್ಲಿ ಕೂತೆ. ಅವನು ಈಗ ಒಪ್ತಾನೆ, ಆಗ ಒಪ್ತಾನೆ ಅಂತ. ನಿಜ ಹೇಳ್ತೀನಿ ಸಾರ್‌, ಒಂದು ಗಂಟೆಗೂ ಜಾಸ್ತಿ ಫೋನ್‌ ಹಿಡಿದುಕೊಂಡೇ ನಿಂತಿದ್ದ, ನನ್ನ ಕಡೆ ಕಣ್ಣೆತ್ತಿ ಕೂಡಾ ನೋಡಲಿಲ್ಲ. ಅವನು ಒಂದು ಫೋನ್‌ ಕಡಿಮೆ ಮಾಡಿದ್ರೂ ನನ್ನ 20 ರೂಪಾಯಿ ಅವನಿಗೆ ಮಿಕ್ಕಿ ಹೋಗ್ತಿತ್ತು. ಆದರೆ ಮಾಡ್ಲಿಲ್ಲ. ನಾನು ಆಸ್ಪತ್ರೆಯಲ್ಲಿ ಕೈ ಮುಗಿಯದವರಿಲ್ಲ. ಡ್ರೈವರ್‌, ವಾಚ್‌ಮ್ಯಾನ್‌, ರೆಸೆಪ್ಷನಿಸ್ಟ್‌, ಮ್ಯಾನೇಜರ್‌, ಎಲ್ಲ ಡಾಕ್ಟರ್‌. 20 ರೂಪಾಯಿ ನನ್ನ ಮತ್ತು ಅಮ್ಮನ ನಡುವೆ ಕಲ್ಲಿನಂತೆ ಕೂತು ಬಿಟ್ಟಿತ್ತು”

“”ಬೆಳಗ್ಗೆ ಸತ್ತ ಅಮ್ಮನನ್ನು ಸಂಜೆ ಆದರೂ ಸಾಗಿಸಲಾಗಲಿಲ್ಲ. ಕೊನೆಗೆ ಒಂದು ನಿರ್ಧಾರಕ್ಕೆ ಬಂದೆ- ಸೀದಾ ಮ್ಯಾನೇಜರ್‌ ಹತ್ರ ಹೋಗಿ, “ಹೆಣ ನೀವೇ ಸುಟ್ಟು ಹಾಕಿಬಿಡಿ ನಮಗೆ ಬೇಡ’ ಅಂದೆ. ಅವರೇನೂ ಬಗ್ಲಿಲ್ಲ. ಆದರೆ ನಾನು ಇನ್ನೇನು ಮಾಡೋಕಾಗ್ತಿತ್ತು ಅಮ್ಮನ ಹಳೆ ಬಟ್ಟೆ, ಚೊಂಬು, ಮನೆಯಿಂದ ಅಮ್ಮನಿಗೆ ಇಷ್ಟ ಅಂತ ತಂದಿದ್ದ ಒಂದೆರಡು ಉಂಡೆ. ಎಲ್ಲ ಬ್ಯಾಗಿಗೆ ಹಾಕಿ ತಂಗಿಯೊಡನೆ ಹೊರಟೇಬಿಟ್ಟೆ. ಬಾಗಿಲು ದಾಟಿದೆ, ಗೇಟ್‌ ದಾಟಿದೆ, ರಸ್ತೆ ದಾಟಿದೆ”

“”ಆಗ ಅವರಿಗೆ ಅನಿಸಿಹೋಯೆ¤ನೋ, ಇವನು ನಿಜಕ್ಕೂ ಈ ಮಾತು ಹೇಳಿ¨ªಾನೆ- ಇನ್ನು ನಾವೇ ಧಫ‌ನ್‌ ಮಾಡೋ ಹಾಗಾಗುತ್ತೆ ಅಂತ. ಆಗ ಬಂತು ನೋಡಿ ಸಾರ್‌ ನನ್ನ ಹಿಂದೆ ಆಂಬ್ಯುಲೆನ್ಸ್‌. ಮನೆಗೆ ಕರೆದುಕೊಂಡು ಬಂದು ಅಮ್ಮನಿಗೆ ಚಾಪೆಯ ಮೇಲೆ ಮಲಗಿಸಿ ಕೈ ಮುಗಿದೆ”

ಇದನ್ನೆಲ್ಲ ಕೇಳಿ ಆ ವೇಳೆಗೆ ನಿಟ್ಟುಸಿರಾಗಿ¨ªೆ. ಸ್ವಲ್ಪ ಹೊತ್ತು ಸುಮ್ಮನೆ ಕೂತೆ.
 ಹಾಗೆ ನಾವಿಬ್ಬರೂ ರಸ್ತೆ ಬದಿ ಆಟೋ ನಿಲ್ಲಿಸಿ ಎದೆ-ಎದೆಗಳ ನಡುವೆ  ಸೇತುವೆ ಇದೆಯೋ ಇಲ್ಲವೋ ಅಂತ ಪರೀಕ್ಷಿಸಿ ಕೊಳ್ಳುತ್ತಿ¨ªೆವು. ಇಷ್ಟೆÇÉಾ ಆದ ಮೇಲೂ ನನಗೆ ಒಂದು ಪ್ರಶ್ನೆ ಕೇಳಲು ಬಾಕಿ ಇತ್ತು. “”ಹಾಗಿದ್ರೆ ನಿಮ್ಮ ಅವತ್ತಿನ ಕಲೆಕ್ಷನ್‌ ಅಮ್ಮನ ಕಾರ್ಯಕ್ಕೆ ಬಳಸಿದ್ರಿ?” ಅಂದೆ. ಅದುವರೆಗೂ ಅತ್ತಿದ್ದ ಆ ಡ್ರೈವರ್‌ ಜೋರಾಗಿ ನಕ್ಕು ಬಿಟ್ಟ. “”ಸಾರ್‌, ಮನೆ ತಲುಪಿದ್ದು ಅಷ್ಟೇ, ಇನ್ನೂ ಬಾಡಿ ಕೆಳಗೆ ಇಳಿಸಿಲ್ಲ ಆತ ಬಾಗಿಲೇ ತೆಗೀಲಿಲ್ಲ. 480 ರೂಪಾಯಿ ಅವನ ಕೈಗೆ ಬಿದ್ದ ಮೇಲೇ ಅಮ್ಮ ಮನೆಗೆ ಎಂಟರ್‌ ಆಗಿದ್ದು” ಅಂದ.

 “ಏನು ಮಾಡಿದೆಯಪ್ಪಾ ಶಿವನೇ.. ನಿನ್ನ ಗುಡಿಗೆ ಬೆಂಕಿ ಹೊತ್ತೀಸ…’ ಅನ್ನಬೇಕು ಅಂದುಕೊಂಡೆ. ಆಗ ಅವನೇ ಮಾತನಾಡಿದ. “”ಸಾರ್‌, ಅದು ಬಿಡಿ ಸಾರ್‌, ಈ ಕಥೆ ಕೇಳಿ” ಅಂದ. 

“”ಅಮ್ಮ ಆಸ್ಪತ್ರೆ ಸೇರಿ 14 ದಿನ ಆಗಿತ್ತು. ಡಾಕ್ಟರ್‌ ಬಂದವರೇ, “ಇವರನ್ನ ನೋಡಿಕೊಳ್ಳೋರು ಯಾರಮ್ಮಾ’ ಅಂತ ಕೇಳಿದ್ರು. ನನ್ನ ತಂಗಿ ಬಂದು ನಿಂತಳು. “ಪೇಶಂಟ್‌ ವೀಕ್‌ ಆಗಿ¨ªಾರೆ, ಐಸಿಯುಗೆ ಅಡ್ಮಿಟ್‌ ಮಾಡ್ಬೇಕು’ ಅಂದ್ರು. ತತ್‌ಕ್ಷಣ ತಂಗಿ ನನಗೆ ಫೋನ್‌ ಮಾಡಿದಳು- ಅಣ್ಣ ಹೀಗಂತೆ ಅಂತ.” 

“”ಅಮ್ಮನಿಗೆ ಪ್ರತೀ ದಿನ ಊಟ ತೆಗೆದುಕೊಂಡು ಹೋಗಬೇಕು ಅಂತ ಅಂದ್ರೂ ಅಷ್ಟು ಹೊತ್ತು ಡ್ನೂಟಿ ಮಾಡದೆ ಹೋದ್ರೆ ಮನೇಲಿ ಅನ್ನ ಬೇಯಲ್ಲ ಸಾರ್‌ ಅಂತ ಸ್ಥಿತಿ ನಮ್ಮದು. ಹಾಗಿರುವಾಗ ಐಸಿಯು ಕಾಣಿಸೋದಿಕ್ಕೆ ಆಗುತ್ತಾ? ಭಯ ಆಯ್ತು. ನಾನೇ ಡಾಕ್ಟರ್‌ಗೆ ಫೋನ್‌ ಮಾಡಿದೆ, “ಸಾರ್‌, ಎಷ್ಟು ದಿನ ಇರಬೇಕಾಗುತ್ತೆ ಐಸಿಯುನಲ್ಲಿ’ ಅಂತ. ಅವರು, “ಒಂದು ವಾರ ಆದ್ರೂ ಆಗಬಹುದು, ಎರಡು ವಾರ ಆದ್ರೂ ಆಗಬಹುದು’ ಅಂದ್ರು. “ಸಾರ್‌, ನಾನು ಬಡವ, ನೀವೇ ನೋಡಿದ್ದೀರಲ್ಲ ಸಾರ್‌ ನಾನು ಯೂನಿಫಾರ್ಮ್ನÇÉೆ ಆಸ್ಪತ್ರೆಗೆ ಬರ್ತೀನಿ’ ಅಂತ. ಡಾಕ್ಟರ್‌ ಫೋನ್‌ ಕಟ್‌ ಮಾಡಿದ್ರು”
“”ಸರಿ, ಇನ್ನೇನು ಅಮ್ಮ ಅಲ್ವಾ, ಉಳಿದ್ರೆ ಉಳೀಲಿ ಇÇÉಾ ಅಂದ್ರೆ ಸರಿಯಾಗಿ ನೋಡಿಕೊಳ್ಳಲಿಲ್ಲ ಅನ್ನೋ ಕೊರಗು ಇರೋದಿಲ್ಲ ಅಂತ ಅದಕ್ಕೂ ಸಜ್ಜಾದೆ. ಆಗ ಸಾರ್‌ ಆಗ್ಲೆà ಅಲ್ಲಿದ್ದ ಆಯಾ ಒಬ್ಬಳು ಫೋನ್‌ ಮಾಡಿದುÉ-ಯಾವ ಕಾರಣಕ್ಕೂ ಐಸಿಯುಗೆ ಸೇರಿಸಬೇಡಿ. ದುಡ್ಡು ತಿನ್ನೋಕೆ ನಾಟಕ ಮಾಡ್ತಿ¨ªಾರೆ. ನಿಮ್ಮ ತಾಯಿ ಸತ್ತು ಆಗ್ಲೆà ಒಂದು ಗಂಟೆ ಆಗಿದೆ-ಅಂತ”

“”ನಾನು ಇದ್ದದ್ದು , ಕೋರಾಪುಟ್‌ನಲ್ಲೂ ಅಲ್ಲ, ಬೆಹ್ರಾಮ್‌ ಪಾದದಲ್ಲೂ ಅಲ್ಲ. ಬೆಂಗಳೂರಿನಲ್ಲಿ. 
ಜಗತ್ತಿನ ಕಿರೀಟ, ಭಾರತದ ಸಿಲಿಕಾನ್‌ ಸಿಟಿಯಲ್ಲಿ. ಐಟಿ, ಬಿಟಿ ಎಂದು ಮೀಸೆ ತಿರುಗುತ್ತಿರುವ ನಗರಿಯಲ್ಲಿ. ಅಮೆರಿಕದ ಉಬೆರ್‌ ಸಹಾ ಕಣ್ಣಿಟ್ಟಿರುವ ಮಹಾನ್‌ ನಗರಿ ಬೆಂಗಳೂರಿನಲ್ಲಿ. ಆತ ಹೇಳುತ್ತಿರುವ ಕಥೆ ಇಲ್ಲಿನ ಹೃದಯ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆಯದ್ದು. ಒಂದು ಕ್ಷಣ ಮಾತು ಹೊರಡಲಿಲ್ಲ. ಅದಕ್ಕೆ ಹೇಳಿದರಾ ಕವಿ ಎಕ್ಕುಂಡಿ- ಕೆಂಡದ ಮೇಲೆ ನಡೆದವನಿಗೆ ಮಾತ್ರವೇ ಕೆಂಡದ ಬಿಸಿ ಗೊತ್ತಾಗಲು ಸಾಧ್ಯ ಅಂತ.

ಆತ ಆಟೋಸ್ಟಾರ್ಟ್‌ ಮಾಡಲು ಹೊರಟ. ಒಂದು ನಿಮಿಷ ಅಂದೆ. ಈಗ ಕಣ್ಣೀರಾಗುವ ಸರದಿ ನನ್ನದಾಗಿತ್ತು. ಇದೆÇÉಾ ಯಾಕೆ ನೆನಪಾಯ್ತು ಅಂದರೆ ಗೆಳತಿಯೊಬ್ಬಳು ಒಂದು ಪೋಸ್ಟರ್‌ನ್ನು ವಾಟ್ಸಾಪ್‌ ಮಾಡಿದ್ದಳು. ಅದು ಪುಟ್ಟ ಹೊಟೇಲ್‌ನ ಹೊರಗಡೆ ಇದ್ದ ಒಂದು ಫ‌ಲಕದ ಫೋಟೋ. ಅದರಲ್ಲಿತ್ತು- “ಇಲ್ಲಿ ನೀವು ತಿಂಡಿ ತಿಂದರೆ ಒಂದು ಮನೆಯ ಮಗು ಶಾಲೆ ಸೇರುತ್ತೆ. ಸ್ಟಾರ್‌ ಹೊಟೇಲ್‌ನಲ್ಲಿ ತಿಂದರೆ ಅದರ ಸಿಇಓಗೆ ಸಿಂಗಾಪುರ್‌ನಲ್ಲಿ ಮಜಾ ಮಾಡಲು ಒಂದು ರಜಾ ಎಕ್ಸಾ ಸಿಗುತ್ತೆ’ ಅಂತ.

– ಜಿ. ಎನ್‌. ಮೋಹನ್‌

ಟಾಪ್ ನ್ಯೂಸ್

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

Gudavi Pakshidhama: ದೂರದೊಂದು ತೀರದಿಂದ… ಸೈಬೀರಿಯಾದಿಂದ ಶಿವಮೊಗ್ಗದ ಗುಡವಿಗೆ!

Gudavi Pakshidhama: ದೂರದೊಂದು ತೀರದಿಂದ… ಸೈಬೀರಿಯಾದಿಂದ ಶಿವಮೊಗ್ಗದ ಗುಡವಿಗೆ!

2

Short Stories: ಸಣ್ಕತೆ ಸಾಮ್ರಾಜ್ಯ: ಪುಟ್‌ ಪುಟ್‌ ಕತೆ, ಪುಟಾಣಿ ಕತೆ…

ಹಸಿರು ವನಸಿರಿ ಸಂಡೂರಿನ ಸಿರಿ

ಹಸಿರು ವನಸಿರಿ ಸಂಡೂರಿನ ಸಿರಿ

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.