ಆವಂತಿಕಾ ಯೂ-ಟರ್ನ್
Team Udayavani, Jan 20, 2019, 12:30 AM IST
ಚಿತ್ರರಂಗದಲ್ಲಿ ಕೆಲವು ನಟಿಯರು ಭಾರೀ ಅಬ್ಬರದೊಂದಿಗೆ ಎಂಟ್ರಿಯಾಗಿ, ಅಷ್ಟೇ ಬೇಗ ಚಿತ್ರರಂಗದಲ್ಲಿ ಬೇಡಿಕೆ ಕಳೆದುಕೊಂಡು, ಸದ್ದಿಲ್ಲದೆ ಮೂಲೆಗುಂಪಾಗಿ ಹೋಗುತ್ತಾರೆ. ಇತ್ತೀಚಿನ ಅಂತಹ ನಟಿಯರ ಪಟ್ಟಿಗೆ ಅವಂತಿಕಾ ಶೆಟ್ಟಿ ಹೆಸರು ಕೂಡ ಸೇರ್ಪಡೆಯಾಗುತ್ತದೆ. ಹೌದು, 2015ರಲ್ಲಿ ತೆರೆಗೆ ಬಂದ ರಂಗಿತರಂಗ ಚಿತ್ರದ ಮೂಲಕ ಚಂದನವನಕ್ಕೆ ಪರಿಚಯವಾದ ಚೆಲುವೆ ಅವಂತಿಕಾ ಶೆಟ್ಟಿ , ಒಂದೇ ಚಿತ್ರದಲ್ಲಿ ಸಿನಿ ಪ್ರಿಯರ ಮತ್ತು ಚಿತ್ರರಂಗದ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ರಂಗಿತರಂಗ ಚಿತ್ರದ ಸೂಪರ್ ಹಿಟ್ ಸಕ್ಸಸ್ ಬಳಿಕ ಹಲವು ಅವಕಾಶಗಳು ಈಕೆಯನ್ನು ಅರಸಿ ಕೊಂಡು ಬಂದರೂ, ಈಕೆ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಬೆರಳೆಣಿಕೆಯಷ್ಟು ಚಿತ್ರಗಳನ್ನು ಮಾತ್ರ. ಎರಡನೇ ಚಿತ್ರದಲ್ಲೇ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಕಲ್ಪನ-2 ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಪಡೆದುಕೊಂಡ ಅವಂತಿಕಾ ಶೆಟ್ಟಿ ನಂತರ ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ಗುರುನಂದನ್‌ಗೆ ನಾಯಕಿಯಾಗಿ ಅಭಿನಯಿಸಿದರು.
ರಾಜು ಕನ್ನಡ ಮೀಡಿಯಂ ಚಿತ್ರದ ವೇಳೆ ನಿರ್ಮಾಪಕ ಕೆ.ಎ. ಸುರೇಶ್ ಅವರ ವಿರುದ್ದ ಕಿರುಕುಳ ಆರೋಪ ಮಾಡುವ ಮೂಲಕ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿಯಾದ ಅವಂತಿಕಾ, ಬಳಿಕ ಬಹಿರಂಗವಾಗಿ ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರೂ, ನಿರ್ಮಾಪಕರೊಬ್ಬರ ವಿರುದ್ಧ ಅವಂತಿಕಾ ಮಾಡಿದ ನಿರಾಧಾರ ಆರೋಪಕ್ಕೆ ಚಿತ್ರರಂಗದಿಂದ ಸಾಕಷ್ಟು ಟೀಕೆ, ಆಕ್ರೋಶಗಳು ವ್ಯಕ್ತವಾಯಿತು. ಅದಾದ ಬಳಿಕ ರಂಗಿತರಂಗ ಚಿತ್ರ ಖ್ಯಾತಿಯ ನಿರೂಪ್ ಭಂಡಾರಿ ಅಭಿನಯದ, ಅನೂಪ್ ಭಂಡಾರಿ ನಿರ್ದೇಶನದ ರಾಜರಥ ಚಿತ್ರದಲ್ಲಿ ನಾಯಕಿಯಾಗಿ ಪ್ರೇಕ್ಷಕರ ಮುಂದೆ ಬಂದರೂ ಚಿತ್ರ ಬಾಕ್ಸಾಫೀಸ್‌ನಲ್ಲಿ ಸೋಲುಂಡಿತು.
ಇವೆಲ್ಲದರ ನಡುವೆ ಅವಂತಿಕಾ ಬಗ್ಗೆ ಒಂದಷ್ಟು ನಕಾರಾತ್ಮಕ ಸುದ್ದಿ ಗಳು ಚಿತ್ರರಂಗದಲ್ಲಿ ಹರಿದಾಡಲು ಶುರುವಾಯಿತು. ಅವಂತಿಕಾ ಅತಿ ಹೆಚ್ಚು ಸಂಭಾ ವನೆಗೆ ಡಿಮ್ಯಾಂಡ್ ಮಾಡು ತ್ತಾರೆ, ಚಿಕ್ಕ ಮತ್ತು ಮಧ್ಯಮ ಬಜೆಟ್ ಚಿತ್ರಗಳಿಗೆ ಅವಂತಿ ಕಾದುಬಾರಿ ನಟಿ, ಚಿತ್ರೀಕರಣ ದಲ್ಲಿ ವಿನಾ ಕಾರಣ ಚಿತ್ರತಂಡದ ಜೊತೆಗೆ ತಗಾದೆ ತೆಗೆಯುತ್ತಾರೆ, ಬೇಕಾದ ಸಮಯಕ್ಕೆ ಕಾಲ್‌ಶೀಟ್ ಕೊಡುವುದಿಲ್ಲ, ನಿರ್ದೇಶಕರು- ನಿರ್ಮಾಪಕರಿಗೆ ಕಿರಿಕಿರಿ ನೀಡುತ್ತಾರೆ. ನಿಗದಿತ ಸಮಯಕ್ಕೆ ಚಿತ್ರೀಕರಣಕ್ಕೆ ಬರುವುದಿಲ್ಲ. ಚಿತ್ರ ಮುಗಿದ ಮೇಲೆ ಚಿತ್ರದ ಪ್ರಮೋಷನ್ ಕಾರ್ಯಗಳಿಗೆ ಬರುವುದಿಲ್ಲ…ಹೀಗೆ. ಇದಾದ ಬಳಿಕ ಅವಂತಿಕಾ ಶೆಟ್ಟಿಯನ್ನು ತಮ್ಮ ಚಿತ್ರಗಳಿಗೆ ಆಯ್ಕೆ ಮಾಡಿಕೊಳ್ಳುವ ಮನಸ್ಸು ಮಾಡಿದ್ದ ಹಲವು ನಿರ್ದೇ ಶಕರು, ನಿರ್ಮಾಪಕರು ತಮ್ಮ ನಿರ್ಧಾರ ದಿಂದ ಹಿಂದೆ ಸರಿದರು. ಹೀಗಾಗಿ, ಇನ್ನೂ ಮಾತುಕತೆಯ ಹಂತದಲ್ಲಿದ್ದ ಹಲವು ಚಿತ್ರಗಳು ಅವಂತಿಕಾ ಅವರ ಕೈ ತಪ್ಪಿಹೋದವು.
ಸದ್ಯ ಕನ್ನಡದಲ್ಲಿ ಯಾವುದೇ ಚಿತ್ರಗಳಲ್ಲಿ ಅವಕಾಶಗಳು ಇಲ್ಲದಿರುವು ದರಿಂದ ಅವಂತಿಕಾ ಮುಂಬೈನಲ್ಲೇ ನೆಲೆಸಿ ಅಲ್ಲಿಯೇ ಮಾಡೆಲಿಂಗ್, ಟಿವಿ ಶೋಗಳು ಹೀಗೆ ಒಂದಷ್ಟು ಕೆಲಸಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಒಟ್ಟಾರೆ ರಂಗಿತರಂಗ ಚೆಲುವೆ ಅವಂತಿಕಾ ಶೆಟ್ಟಿ ಮತ್ತೆ ಕನ್ನಡ ಚಿತ್ರರಂಗಕ್ಕೆ ಬರುತ್ತಾರಾ? ಎಂಬುದು ಪ್ರಶ್ನೆಯೇ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.