ಶಾಂತವಾಗಿರಿ ಸುಮ್ಮನೆ ಸಾಗುತ್ತಿರಿ
Team Udayavani, Sep 24, 2017, 6:35 AM IST
2017ರ ವರ್ಷವನ್ನು ಬ್ರಿಟನ್ನಿನ ಮಟ್ಟಿಗೆ ಈ ದಶಕದ ಪ್ರಕ್ಷುಬ್ಧ ವರ್ಷ ಎಂದು ಕರೆಯಬಹುದು. ಬ್ರೆಕ್ಸಿಟ್‌ನಿಂದ ಮಿಲಿಯಗಟ್ಟಲೆ ಜನರು ಕೆಲಸಗಳನ್ನು ಕಳೆದುಕೊಳ್ಳಬಹುದು ಎನ್ನುವ ಅತಂತ್ರತೆ ಒಂದು ಕಡೆಯಾದರೆ, ಇನ್ನೊಂದು ಕಡೆ ವಿಧ್ವಂಸಕ ಕೃತ್ಯಗಳ ಸರಣಿ ನಡೆಯುತ್ತಲೇ ಇದೆ. ಮಾರ್ಚ್ ತಿಂಗಳಿನಿಂದ ಕಳೆದ ವಾರದ ತನಕ ಐದು ದುರ್ಘಟನೆಗಳು ನಡೆದುಹೋಗಿವೆ. ಲಂಡನ್ ಮತ್ತು ಮ್ಯಾಂಚೆಸ್ಟರ್ ಪಟ್ಟಣಗಳಲ್ಲಿ ನಡೆದ ಈ ಕರಾಳ ಘಟನೆಗಳು ರಸ್ತೆ ಬದಿ ನಡೆಯುವವರನ್ನು, ಭವನದಲ್ಲಿ ಕುಳಿತು ಸಂಗೀತ ಕಾರ್ಯಕ್ರಮ ನೋಡುತ್ತಿರುವವರನ್ನು, ರೈಲಿನಲ್ಲಿ ಪ್ರಯಾಣಿಸುವವರನ್ನು – ಮಕ್ಕಳ್ಳೋ ವೃದ್ಧರೂ ಆಂಗ್ಲರೊ ವಲಸೆಬಂದವರೋ ಹೀಗೆ ಯಾವ ವ್ಯತ್ಯಾಸ ತೋರದೆ ಯಾರೂ ಎಲ್ಲೂ ಸುರಕ್ಷಿತರಲ್ಲ ಎಂದು ತೋರಿಸಿಕೊಟ್ಟಿವೆ. ಇಲ್ಲಿನ ಸರಕಾರ ಮತ್ತು ಪೊಲೀಸ್ ಇಲಾಖೆಗಳ ಕಡತಗಳಲ್ಲಿ ಈ ಐದು ಘಟನೆಗಳು ಭಯೋತ್ಪಾದಕ ಕೃತ್ಯಗಳು ಎಂದು ಕರೆಸಿಕೊಳ್ಳುತ್ತವೆ. ಈ ವರ್ಷ ಬ್ರಿಟನ್‌ನಲ್ಲಿ ಬೇರೆ ಬೇರೆ ತಂತ್ರಗಳನ್ನು ಬಳಸಿ, ಒಂದೇ ಉದ್ದೇಶಕ್ಕೆ ನಡೆದ ಐದು ದುರ್ಘಟನೆಗಳಲ್ಲಿ ಹಲವರು ಜೀವಕಳೆದುಕೊಂಡರು. ಕೆಲವರು ಗಾಯಾಳುಗಳಾದರು. ಅನೇಕ ಸಂತಸದ ಘಳಿಗೆಗಳು ಹಾಳಾದವು. ನಿರಂತರವಾಗಿ ನಡೆಯುತ್ತಿರುವ ಈ ದಾಳಿಗಳು ಜನರ ಮನಸ್ಸಿನಲ್ಲಿ ಆತಂಕವನ್ನು ಹುಟ್ಟಿಸಿದೆಯಾದರೂ, ಇಲ್ಲಿನ ಜನರ ಬಹಿರಂಗದ ಪ್ರತಿಕ್ರಿಯೆ ಮಾತ್ರ ಬಹಳ ತಣ್ಣಗಿದೆ. ಇಂತಹ ಘಟನೆಯೊಂದು ನಡೆದ ದಿನ, ಬ್ರೇಕಿಂಗ್ ನ್ಯೂಸ್ ಆಗಿ ಸುದ್ದಿ ಮಾಧ್ಯಮಗಳಲ್ಲಿ ಮೂಡಿದ ನಂತರ, ಕೃತ್ಯ ಎಸಗಿದವರನ್ನು ಹಿಡಿದ ವಿಷಯ ಸುದ್ದಿಯ ಮುಖ್ಯಾಂಶದÇÉೊಮ್ಮೆ ಬಂದು ಹೋಗುತ್ತವೆ. ಮತ್ತೆ ಮತ್ತೆ ನಡೆಯುತ್ತಿರುವ ದಾಳಿಗಳ ಬಗ್ಗೆ ಜನಸಾಮಾನ್ಯರಿಂದ ತೀವ್ರ ಪ್ರತಿಕ್ರಿಯೆಗಳೂ ಭಾವೋದ್ರೇಕವೂ ವ್ಯಕ್ತವಾಗುವುದಿಲ್ಲ. ಜೂನ್ ತಿಂಗಳಲ್ಲಿ ಲಂಡನ್‌ನ ರಸ್ತೆ ಬದಿಯಲ್ಲಿ ನಡೆಯುತ್ತಿರುವವರ ಮೇಲೆ ವ್ಯಾನ್ ಹಾಯಿಸಿದ ಘಟನೆ ನಡೆದಾಗ, ಮೊನ್ನೆ ಮೊನ್ನೆ ಲಂಡನ್ ಟ್ಯೂಬ್ ರೈಲಿನಲ್ಲಿ ಬೆಂಕಿ ಹೊತ್ತಿಸಿದಾಗ, “ಇವಕ್ಕೆಲ್ಲ ಕೊನೆಯಿಲ್ಲವೆ?’ ಎಂಬ ಒಂದು ವಾಕ್ಯವನ್ನಷ್ಟೇ ನನ್ನ ಆಂಗ್ಲ ಸಹೋದ್ಯೋಗಿಗಳು ಉದ್ಗರಿಸಿದ್ದರು. ಸತತವಾಗಿ ನಡೆಯುತ್ತಿರುವ ಭೀಕರ ಘಟನೆಗಳನ್ನು ಇವರು ಸ್ಥಿತಪ್ರಜ್ಞರಾಗಿ ಸ್ವೀಕರಿಸುವುದು ಕುತೂಹಲ ಹುಟ್ಟಿಸುತ್ತದೆ.
ಮೇ ತಿಂಗಳಲ್ಲಿ ಮ್ಯಾಂಚೆಸ್ಟರ್ ನಗರದಲ್ಲಿ ಆತ್ಮಹತ್ಯಾ ದಾಳಿ ನಡೆದ ನಂತರ ಅಮೆರಿಕದ ನ್ಯೂಯಾರ್ಕ್ ಟೈಮ್ಸ… ಮಾಧ್ಯಮ, “ಸಮತೋಲನ ಕಳೆದುಕೊಳ್ಳಲಿರುವ ಆಂಗ್ಲರು’ ಎನ್ನುವ ಶೀರ್ಷಿಕೆಯನ್ನು ಟ್ವೀಟರ್‌ನಲ್ಲಿ ಪ್ರಕಟಿಸಿತ್ತು. ಇದನ್ನು ಇಷ್ಟಪಡದ ಆಂಗ್ಲರು, “ಯಾವ ಯಾವ ಕಾರಣಗಳಿಗೆ ನಾವು ಮಾನಸಿಕ ಸಮತೋಲನ ಕಳೆದುಕೊಳ್ಳುತ್ತೇವೆ?’ ಎಂದು ವ್ಯಂಗ್ಯ ವಿವರಣೆಯ ಮೂಲಕ ಅಂತರ್ಜಾಲ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದರು. ಬ್ರಿಟಿಷರ ಮಾನಸಿಕ ಸ್ಥಿಮಿತತೆ ತಪ್ಪಬೇಕಿದ್ದರೆ ಒಂದೋ ಚಹಾದ ಖಡಕ್ ಕಡಿಮೆ ಇರಬೇಕು ಅಥವಾ ಪ್ರಾಕೃತಿಕ ವಿಷಯಗಳ ಸಾಕ್ಷ್ಯಚಿತ್ರ ಮಾಡಿ ಹೆಸರುವಾಸಿಯಾದ ಡೇವಿಡ್ ಅಟೆನ್‌ಬರೋ ತನ್ನ ಸಾಕ್ಷ್ಯಚಿತ್ರಗಳಲ್ಲಿ ಇನ್ಯಾರದೋ ಧ್ವನಿ ಬಳಸಬೇಕು ಅಥವಾ ಶಿಸ್ತನ್ನು ಪ್ರೀತಿಸುವ ಬ್ರಿಟಿಶರನ್ನು ಯಾರೋ ಅಶಿಸ್ತಿನಿಂದ ಪೇಚಿಗೆ ಸಿಲುಕಿಸಬೇಕು ! ಇವುಗಳನ್ನು ಬಿಟ್ಟು ಭಯೋತ್ಪಾದಕ ದಾಳಿಗಳಿಗೆ ತಾವು ಸಮತೋಲನ ಕಳೆದುಕೊಳ್ಳುವುದಿಲ್ಲ ಎಂದು ಟ್ವೀಟರ್ ತುಂಬ ಒಂದು ಮಿಲಿಯನ್ ಆಂಗ್ಲರು ಪ್ರತಿಕ್ರಿಯಿಸಿದರು.
ದೊಡ್ಡ ದುರಂತವೊಂದರ ಬಗ್ಗೆ ಅಥವಾ ಅಪಘಾತವೊಂದರ ಬಗ್ಗೆ ಭಾವಾವೇಶ ಇಲ್ಲದ ತಣ್ಣಗಿನ ಪ್ರತಿಕ್ರಿಯೆಗಳ ಹಿಂದಿರುವುದು ಶಾಂತವಾಗಿರೋಣ ಮತ್ತು ನಮ್ಮ ಕೆಲಸ ಮುಂದುವರಿಸೋಣ (Keep Calm and Carry on ) ಎನ್ನುವ ಆಂಗ್ಲರ ಮನೋಭಾವನೆ. ತಮ್ಮ ಮೇಲೆ ಎರಗುವ ಯಾವುದೊ ದಾಳಿ ಇವರನ್ನು ರೊಚ್ಚಿಗೆಬ್ಬಿಸುವುದಿಲ್ಲ, ಬೀದಿಗಿಳಿದು ಸಾರ್ವಜನಿಕ ಸ್ವತ್ತುಗಳನ್ನು ನಾಶಪಡಿಸಲು ಪ್ರೇರೇಪಿಸುವುದಿಲ್ಲ; ಸುದ್ದಿಮಾಧ್ಯಮಗಳಲ್ಲಿ ಮುಖ್ಯ ರಾಜಕೀಯ ಪಕ್ಷಗಳ ನೇತಾರರು, ಬೇರೆಬೇರೆ ವಿಚಾರಧಾರೆಯ ಚಿಂತಕರು ಒಬ್ಬರನ್ನೊಬ್ಬರು ಕಿತ್ತು ತಿನ್ನುವಂತೆ ವಾದಿಸುವುದಿಲ್ಲ. 24 x7ರ ಸುದ್ದಿ ವಾಹಿನಿಗಳು ಕೊಲೆಯಾಗಿ ಬಿದ್ದು ರಕ್ತ ಸೋರುವ ದೇಹಗಳಿಗೆ ಕೆಮರಾ ಹಿಡಿಯುವುದಿಲ್ಲ; ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಕೊಂದವರ ಧರ್ಮ ಯಾವುದು, ಸತ್ತವರ ಜಾತಿ ಯಾವುದು ಎಂದು ಒಬ್ಬರನ್ನು ಇನ್ನೊಬ್ಬರು ಗುಮಾನಿ ಪಡುವಂಥ ವಿಷಯಗಳ ಸಂದೇಶಗಳು ಹರಿದಾಡುವುದಿಲ್ಲ . ದುರಂತ ಆದಾಗ ತನಿಖೆ ನಡೆಸುವ ಮತ್ತು ಕ್ರಮ ಜರುಗಿಸುವ ಹೊಣೆ ಇರುವುದು ಸರಕಾರ ಮತ್ತು ಪೊಲೀಸ್ ವ್ಯವಸ್ಥೆಗಳ ಮೇಲೆ ಎಂದು ಇವರು ನಂಬುತ್ತಾರೆ. ಕಳೆದ ವಾರ ನಡೆದ ರೈಲು ಭಯೋತ್ಪಾದಕ ಧಾಳಿಯ ಸಂಚುಕೋರರನ್ನು ಎರಡು ದಿನಗಳಲ್ಲಿ ಪೊಲೀಸರು ಬಂಧಿಸಿ¨ªಾರೆ. ಈ ಹಿಂದೆ ನಡೆದ ಅಪಘಾತಗಳ ದುರಂತಗಳ ಹಿಂದಿರುವವರನ್ನು ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಕಂಡುಹಿಡಿದಿ¨ªಾರೆ. ಇಡೀ ಬ್ರಿಟನ್‌ನಲ್ಲಿ ಭಯೋತ್ಪಾದಕ ಘಟನೆಗಳು ಸಾಮಾನ್ಯ ಎನಿಸುತ್ತಿರುವ ಈ ದಿನಗಳಲ್ಲಿ ಜನಸಾಮಾನ್ಯರ ಹೊಣೆಗಾರಿಕೆಗಳೆಂದರೆ ಒಂದು, ಕಟ್ಟೆಚ್ಚರದಿಂದಿರುವುದು; ಎರಡನೆಯದು, ಸಾಧ್ಯವಾದರೆ ದುರಂತಗಳು ನಡೆದ ಸಮಯದಲ್ಲಿ ಸಹಾಯ ಮಾಡುವುದು ಎಂದು ಇವರು ತಿಳಿಯುತ್ತಾರೆ.
ಆಂಗ್ಲರ ಬದುಕಿನಲ್ಲಿ ಎದ್ದು ಕಾಣುವ Keep Calm and Carry on ಮನೋಧರ್ಮ ಕೆಲ ದಶಕಗಳ ಹಿಂದಿನ ಚಾರಿತ್ರಿಕ ಸಂದರ್ಭದಲ್ಲಿ ಉದಯಿಸಿದ ಘೋಷವಾಕ್ಯವಾಗಿತ್ತು. 1939ರಲ್ಲಿ ಬ್ರಿಟನ್ ಎರಡನೆಯ ಮಹಾಯುದ್ಧಕ್ಕೆ ತಯಾರಾಗುತ್ತಿ¨ªಾಗ ಬ್ರಿಟಿಶ್ ಸರಕಾರ ಈ ಘೋಷವಾಕ್ಯವನ್ನು ರಚಿಸಿತು. ಎದುರಾಳಿ ಪಡೆಯಿಂದ ಬ್ರಿಟನ್ನಿನ ಯಾವ ಭಾಗ ಯಾವ ಕ್ಷಣದಲ್ಲೂ ಬಾಂಬ್ ದಾಳಿಗೆ ತುತ್ತಾಗುವ ಸಾಧ್ಯತೆ ಇದ್ದ ಕಾಲದಲ್ಲಿ ಜನರ ಸ್ಥೈರ್ಯವನ್ನು ಹೆಚ್ಚಿಸಲೋಸುಗ ಈ ಸಾಲನ್ನು ಬಳಸಲಾಗಿತ್ತು. ಅಂದಿನ ಬ್ರಿಟಿಶ್ ಸರಕಾರ ಎರಡೂವರೆ ಮಿಲಿಯನ್ ಕೆಂಪು ಹಿನ್ನೆಲೆಯ ಕರಪತ್ರಗಳಲ್ಲಿ Keep Calm and Carry on ಎಂದು ಬಿಳಿ ಅಕ್ಷರಗಳಲ್ಲಿ ಮುದ್ರಿಸಿ ಊರೂರಿಗೆ ತಲುಪಿಸುವ ಯೋಜನೆ ಮಾಡಿತ್ತು. ಕಾರಣಾಂತರಗಳಿಂದ ಈ ಮುದ್ರಿತ ಕರಪತ್ರ ಅಂದು ಸರಕಾರ ಬಯಸಿದಷ್ಟು ಪ್ರಚಾರ ಪಡೆಯಲಿಲ್ಲ , ನಂತರ ಜರ್ಮನಿ ಬ್ರಿಟನ್ನಿನ ಮೇಲೆ ಬಾಂಬ್ ದಾಳಿಯನ್ನೂ ಮಾಡಿತು, ಎರಡನೆಯ ಮಹಾಯುದ್ಧವೂ ಮುಗಿಯಿತು. 2000ದಲ್ಲಿ ಹಳೆಯ ಪುಸ್ತಕಗಳನ್ನು ಮಾರಾಟ ಮಾಡುವ ಬ್ರಿಟನ್‌ನ ಅಂಗಡಿಯೊಂದರಲ್ಲಿ 1939ರಲ್ಲಿ ಮುದ್ರಿಸಿದ್ದ ಘೋಷಣೆಯ ಕರಪತ್ರಗಳು ಸಿಕ್ಕಿದವು. ಅಂದು ಸಿಕ್ಕಿದ ಕರಪತ್ರ ಮತ್ತೆ ಘೋಷವಾಕ್ಯವನ್ನು ಪ್ರಚಾರಕ್ಕೆ ತಂದಿತು. ಈಗ ಈ ಘೋಷಣೆಯ ಸಾಲನ್ನು ಮುದ್ರಿಸಿಕೊಂಡ ಟಿ-ಶರ್ಟ್‌ಗಳು, ಕಾಫಿಮಗ್‌ಗಳು, ಕರಪತ್ರಗಳು ಮನೆಗಳಲ್ಲಿ ಕಚೇರಿಗಳಲ್ಲಿ ಎಲ್ಲ ಕಡೆ ಕಾಣಿಸುತ್ತವೆ; ಅದಕ್ಕಿಂತ ಮುಖ್ಯವಾಗಿ ಈ ವಾಕ್ಯದ ಅರ್ಥ ಇಲ್ಲಿಯ ಜನರ ಬದುಕಿನ ಧೋರಣೆಯಾಗಿಯೂ ಕಾಣ ಸಿಗುತ್ತದೆ.
ತಾಳ್ಮೆ ಕಳೆದುಕೊಂಡು ಉನ್ಮಾದದಲ್ಲಿರುವ ಆಂಗ್ಲರನ್ನು ನೀವು ಸುಲಭವಾಗಿ ನೋಡಬೇಕೆಂದರೆ ಒಂದೋ ಫುಟ್‌ಬಾಲ್ ಪಂದ್ಯ ನಡೆಯುವÇÉೋ ಅಥವಾ ರಗಿº ಕ್ರೀಡೆ ಆಗುವ ಬಯಲಿಗೋ ಹೋಗಬೇಕು ಅಥವಾ ಶುಕ್ರವಾರ ಸಂಜೆಯ ಇವರ ಮೋಜಿನ ಕೂಟವನ್ನು ನೋಡಬೇಕು. ತಣ್ಣಗಿನ ಮನಸ್ಥಿತಿಯ, ಮಾತು ಮಾತಿಗೂ ವ್ಯಂಗ್ಯ ಮಾಡುವ ಪ್ರವೃತ್ತಿ ಆಂಗ್ಲರಲ್ಲಿ ಹೆಚ್ಚು ಸಾಮಾನ್ಯವೇ ಆದರೂ ನಿರಂತರ ಭಯೋತ್ಪಾದಕ ದಾಳಿಗಳು ತಮ್ಮ ದೇಶಕ್ಕೆ ವಲಸೆ ಬಂದವರ ಮೇಲಿನ ದ್ವೇಷವನ್ನು, ಕೆಲವು ಜನಾಂಗಗಳ ಮೇಲಿನ ಅಪ್ರಿಯತೆಯನ್ನು ಸಾರ್ವತ್ರಿಕವಾಗಿ ಅಲ್ಲದಿದ್ದರೂ ಸಾವಕಾಶವಾಗಿ ಹೆಚ್ಚಿಸುತ್ತಿದೆ ಎಂದು ಸಮೀಕ್ಷೆಗಳು, ಅಧ್ಯಯನಗಳು ಹೇಳುತ್ತವೆ. ತಮ್ಮ ಮೇಲಾಗುವ ದಾಳಿಗಳ ಬೆನ್ನÇÉೇ ದ್ವೇಷಪ್ರೇರಿತ ಅಪರಾಧಗಳು ವ್ಯಾಪಕವಾಗಿ ಅಲ್ಲದಿದ್ದರೂ ಕೆಲವು ಸ್ಥಳಗಳಲ್ಲಿ ಹಿಂದಿನ ವರ್ಷಗಳಿಗಿಂತ ಸ್ವಲ್ಪ ಹೆಚ್ಚಾಗುತ್ತಿವೆ ಎಂದೂ ಪೊಲೀಸ್ ಇಲಾಖೆಯ ಅಂಕಿಅಂಶ ಹೇಳುತ್ತದೆ. ದಾಳಿಗಳು ಮತ್ತು ದಾಳಿಗಳ ಹೊತ್ತಿನ ಸಂಯಮಗಳ ನಡುವೆ ಯಾವುದು ಹೆಚ್ಚು ಶಾಶ್ವತ ಇರಬಹುದು? ಬ್ರಿಟನ್ ಅಲ್ಲಿ ದಾಳಿಗಳು ಮುಂದುವರಿಯುತ್ತಲೇ ಇದ್ದರೆ ಆಂಗ್ಲರ ತಣ್ಣಗಿನ ಮನೋಧರ್ಮವೂ ನಿರಂತರವಾಗಿ ಮುಂದುವರಿದೀತೆ ಎನ್ನುವುದು ಪ್ರಕ್ಷುಬ್ಧತೆಯ ಕಾಲದಲ್ಲಿ ಕಾಡುವ ಪ್ರಮುಖ ಪ್ರಶ್ನೆಯಾಗಿದೆ.
– ಯೋಗೀಂದ್ರ ಮರವಂತೆ, ಬ್ರಿಸ್ಟಲ್, ಇಂಗ್ಲೆಂಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್ ಸಹೋದರಿ ಸುರೇಖಾ
First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್ ಡ್ರಾ
Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್
Contracter Case: ಸಚಿನ್ ಪಾಂಚಾಳ್ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ
Dandeli; ಕುಸಿದು ಬಿದ್ದು ಯುಪಿ ಮೂಲದ ಯುವಕ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.