ಚಂದಿರ ಬೇಕೆಂದವನು…
Team Udayavani, Feb 12, 2017, 3:45 AM IST
“ಉನ್ಮಾದದಲ್ಲಿ ಉಲ್ಲಾಸವಿದೆ’ ಎನ್ನುತ್ತಾನೆ ಮಿಮಿ ಬೇರ್ಡ್ ! ಆತ ಒಬ್ಬ ಮನೋರೋಗಿ. ಪ್ರತಿಭಾವಂತ ವೈದ್ಯನೂ ಹೌದು. ತನ್ನ ಅಪ್ಪನ ಮಾನಸಿಕ ತುಮುಲವನ್ನು ದಾಖಲಿಸುವ ಪ್ರಯತ್ನವನ್ನು ಮಿಮಿ ಬೇರ್ಡ್ ನ ಮಗಳು ಮಾಡಿದ್ದಾಳೆ….
ನನ್ನ ಅಪ್ಪ ತನ್ನ ದಾರುಣ ಕತೆಯನ್ನು ಬರೆಯಲು ಶುರು ಮಾಡಿದ ಹೊತ್ತಿನಲ್ಲಿ ಅವನಿಗೆ 40 ವರ್ಷವಾಗಿತ್ತು. ಅದಕ್ಕೂ ಮೊದಲು ಸುಮಾರು 10 ವರ್ಷಗಳ ಹಿಂದೆಯೇ ಅವನಿಗೆ ಉನ್ಮಾದಗ್ರಸ್ತ ಖನ್ನತೆಯಿದೆಯೆಂದು ಗುರುತಿಸಲಾಗಿತ್ತು. ಆ ವೇಳೆಗಾಗಲೇ ಅವನಿಗೆ ತನ್ನ ಕಾಯಿಲೆಯ ಲಕ್ಷಣಗಳ ಬಗ್ಗೆ ಸಾಕಷ್ಟು ಪರಿಚಯವಾಗಿತ್ತು. ಭಯ ಹುಟ್ಟಿಸುವಷ್ಟು ತೀವ್ರವಾದ ಉನ್ಮಾದದ ಸ್ಥಿತಿಗೆ ತಲುಪಿ, ಅದರ ಬೆನ್ನ ಹಿಂದೇ ಕಾರಿರುಳಂತೆ ವ್ಯಾಪಿಸಿಕೊಳ್ಳುವ ಖನ್ನತೆಯ ಸ್ಟ್ರೋಕ್ಸ್… 1944ನೇ ಇಸವಿಯ ಫೆಬ್ರವರಿ ತಿಂಗಳಿನ ಒಂದು ದಿನ…
ಅಪ್ಪ ಯಾವಾಗಲೂ ತನಗೆ ಉನ್ಮಾದ ಏರುತ್ತಿರುವ ಸೂಚನೆ ಸಿಕ್ಕ ಕೂಡಲೇ ಮನೆಬಿಟ್ಟು ಬೋಸ್ಟನ್ನಿನ ರಿಜ್-ಕಾರ್ಲಟನ್ ಹೊಟೇಲಿಗೆ ಹೋಗಿ ಉಳಿದುಕೊಳ್ಳುತ್ತಿದ್ದ. ಅಂತಹ ಕ್ಷಣಗಳಲ್ಲಿ ತಾನು ಹುಚ್ಚು ಹುಚ್ಚಾಗಿ ಆಡುವುದರಿಂದ ತನ್ನ ಮನೆಯವರಿಗೆ ತೊಂದರೆಯಾಗಬಾರದೆಂದು ಅವನು ಹೀಗೆ ಮಾಡುತ್ತಿದ್ದ. ಆವತ್ತೂ ಹಾಗೆ ಉನ್ಮಾದದ ಲಕ್ಷಣಗಳು ಕಂಡದ್ದರಿಂದ ರಿಜ್-ಕಾರ್ಲಟನ್ ಹೊಟೇಲಿಗೆ ಹೋಗಿಬಿಟ್ಟ.
ಹೊರಡುವಾಗ ಅಮ್ಮನಿಗೆ “ತಾನೊಂದು ಪುಸ್ತಕ ಬರೆಯುವುದರಲ್ಲಿ ವ್ಯಸ್ತನಾಗಿದ್ದೇನೆ, ಅದಕ್ಕೆ ಏಕಾಂತ ಬೇಕು, ಹೊಟೇಲಿನಲ್ಲಿ ಉಳಿಯುತ್ತೇನೆ’ ಎಂದು ಹೇಳಿ ಹೋಗಿದ್ದ. ಆದರೆ ಅಲ್ಲಿಗೆ ಹೋದ ಬಳಿಕ ಪುಸ್ತಕದಿಂದ ವಿಮುಖನಾಗಿಬಿಟ್ಟ. ನಾನು ಮತ್ತು ನನ್ನ ತಂಗಿ ಕ್ಯಾಥರೀನ್ ಮಾತ್ರ ನಗರದಿಂದ ಸ್ವಲ್ಪ ಹೊರಗಿರುವ ಚೆಸ್ಟ್ ನಟ್ ಹಿಲ್ ನ ನಮ್ಮ ಮನೆಯೊಳಗೆ ಇದ್ಯಾವುದರ ಅರಿವೂ ಇಲ್ಲದೆ ಬೆಳೆದುಬಿಟ್ಟೆವು.
.
.
ಯಾಕೆ ಉನ್ಮಾದಗ್ರಸ್ತ ಸ್ಥಿತಿ ಅಷ್ಟೊಂದು ಉÇÉಾಸದಾಯಕವೆನಿಸುತ್ತದೆ?
1944, ಫೆಬ್ರವರಿ 20ರ ಬೆಳಿಗ್ಗೆ, ನಾನು ಬರೀ ಮೂರು ನಾಲ್ಕು ಗಂಟೆಗಳ ನಿ¨ªೆ ಮುಗಿಸಿ ಎದ್ದು ಬಿಟ್ಟಿ¨ªೆ. ಅಲ್ಪಾವಧಿಯ ನಿ¨ªೆಯಾದರೂ ಒಳ್ಳೆಯ ನಿ¨ªೆ ಬಂದಿತ್ತು. ರಿಜ್‌ನಲ್ಲಿ¨ªೆ. ಎದ್ದವನಿಗೆ ನನ್ನೊಳಗೆ ಸುಯ್ದಾಡುತ್ತಿದ್ದ ವಿಲಕ್ಷಣ ಉನ್ಮಾದದ ಹರ್ಷೋÇÉಾಸ ಅನುಭವಕ್ಕೆ ಬಂದಿತ್ತು. ಸ್ನಾನ ಮಾಡಿದೆ, ಗಡ್ಡ ಮಾಡಿಕೊಂಡೆ, ಉಡುಪನ್ನು ಧರಿಸಿಕೊಂಡು ತಿಂಡಿ ತಿಂದೆ. ಆಮೇಲೆ ಬೋಸ್ಟನ್ನಿನ ಸಾರ್ವಜನಿಕ ಉದ್ಯಾನವನದೊಳಗೆ ಸುತ್ತಿ ಬರಲು ಹೊರಟೆ. ಸ್ವಲ್ದ ದೂರದವರೆಗೆ ಓಡುತ್ತ ಹೋದೆ. ಆಮೇಲೆ ಅಗಲಕ್ಕೆ ಹರಡಿಕೊಂಡಿದ್ದ ಹೂಹಾಸಿನ ಮೇಲೆ ನಶೆ ಬಂದವರ ಹಾಗೆ ಹಾರಿಕೊಂಡು ಹೋದೆ. ಹೊಟೇಲಿನಿಂದ ಯಾರಾದರೂ ನನ್ನನ್ನು ಗಮನಿಸುತ್ತಿದ್ದರೆ ಮಾತ್ರ, “ಇದೇನಪ್ಪ ಇವನಿಗೇನು ಮರುಳಾ, ಸಂಯಮ ಕಳೆದುಕೊಂಡವರ ಥರ ವರ್ತಿಸುತ್ತಿದ್ದಾನೆ’ ಅಂದುಕೊಳ್ಳುತ್ತಿದ್ದರು. ನಾನು ಮಾತ್ರ ತುಂಬ ಖುಷಿಯಲ್ಲಿ¨ªೆ. ಖುಷಿ ಕೆರಳಿತ್ತು ಅನ್ನಬಹುದು. ಒಂಥರ ಹುಮ್ಮಸ್ಸಿನ ಚಡಪಡಿಕೆ, ಮಿತಿಮೀರಿ ಕ್ರಿಯಾಶೀಲನಾಗಿರುವುದು, ಜೊತೆಗೆ ಹೊಗೆಯಾಡುವ ಅಸಹನೆ. ಹೀಗೆ ಹತ್ತು ನಿಮಿಷ ನಡೆದು ದೂರದಲ್ಲಿ ಬರುತ್ತಿದ್ದ ಟ್ಯಾಕ್ಸಿಗೆ ಕೈ ಮಾಡಿ ಹತ್ತಿ, ಚೆಸ್ಟ್ ನಟ್ ಹಿಲ್‌ನಲ್ಲಿರುವ ನನ್ನ ಮನೆಗೆ ಹೋದೆ. ಮೈಯ್ಯೊಳಗೆ ರಾಕ್ಷಸ ಕಸುವು. ಅದು ತೀವ್ರ “ಉನ್ಮಾದ’ದ ಲಕ್ಷಣ.
ಮನೆಗೆ ಬಂದರೆ ಅಲ್ಯಾರೂ ಇದ್ದ ಹಾಗೆ ಕಾಣಿಸಲಿಲ್ಲ. ಹಿತ್ತಲಿಗೆ ಹೋಗಿ ಶತಪಥ ತಿರುಗಿದೆ. ಮತ್ತೇನೂ ತೋಚಲಿಲ್ಲ. ಒಂದು ತರಹದ ಆವೇಗದಿಂದ ಹಿತ್ತಲಿಗೆ ಹೊಂದಿಕೊಂಡಿದ್ದ ಜಿಂಕೆ ಪಾರ್ಕಿನ ಹನ್ನೆರಡು ಅಡಿ ಎತ್ತರದ ತಂತಿ ಬೇಲಿಯನ್ನ ಸರಸರನೆ ಏರಿದೆ. ಬೇಲಿ ಏರಿ ಪಾರ್ಕಿನೊಳಗೆ ಹಾರಿದವನೇ ಅಡ್ಡಾದಿಡ್ಡಿ ಓಡಲು ಆರಂಭಿಸಿದೆ. ಪಾರ್ಕಿನೊಳಗಿದ್ದ ಒಂದು ದಿಣ್ಣೆಯನ್ನೇರಿ ಸುತ್ತಲೂ ನೋಡಿದೆ. ಅÇÉೇ ಕೆಳಗೆ ಬಯಲೊಳಗೆ ನಿಂತಿದ್ದ ಜಿಂಕೆಯ ಹಿಂಡೊಂದು ಕಂಡಿತು. ಇಲ್ಲಿರೋ ಜಿಂಕೆಗಳಷ್ಟು ವೇಗವಾಗಿ ಅವುಗಳಿಗೆ ಸರಿಸಮನಾಗಿ ಓಡಲಾಗಬಹುದೆ? ಹಾಗನ್ನಿಸಿದ್ದೇ ತಡ, ಓಡತೊಡಗಿದೆ. ಎಲ್ಲ ಜಿಂಕೆಗಳೂ ಬೆದರಿ ಓಡಿದವು. ಒಂದು ಜಿಂಕೆ ಮಾತ್ರ ತನ್ನ ಪುಟ್ಟ ಬಿಳಿ ಬಾಲ ಅÇÉಾಡಿಸುತ್ತ ನಿಂತಿತ್ತು. ಆಮೇಲೆ ಅದು ಕೂಡ ತಿರುಗಿ ಓಡಿಹೋಯಿತು. ನಾನು ಅÇÉೇ ಒಂದು ಬಂಡೆಯ ಹಿಂದೆ ಅವುಗಳಿಗೆ ಮರೆಯಾಗಿ ನಿಂತೆ.
ಜಿಂಕೆಗಳು ಅತ್ತ ಕಡೆ ಬಂದವು. ಬಂಡೆಗೆ ಸಮೀಪಿಸುತ್ತಿದ್ದಂತೆ ನಾನು ಮತ್ತೆ ಅವುಗಳನ್ನ ಹಿಂದಿಕ್ಕಿ ಓಡಲು ಶುರು ಮಾಡಿದೆ. ಆ ಜಿಂಕೆ ಹಿಂಡಿನೊಂದಿಗೆ ಒಂದು ದೊಡ್ಡ ಗಂಡು ಜಿಂಕೆಯೂ ಇತ್ತು. ಅದರ ದಾರಿಗೇ ನಾನು ಅಡ್ಡವಾದೆ. ಅದು ನನ್ನ ಮೇಲೆ ಏರಿ ಬರುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಅದು ತನ್ನ ಹಿಂಡಿನೊಂದಿಗೆ ನನ್ನನ್ನೂ ದಾಟಿ ಮುಂದೆ ಸಾಗಿಹೋಯಿತು.
ಅಲ್ಲೇ ಆಚೆಈಚೆ ಸುತ್ತಾಡಿ ಪಾರ್ಕಿನ ದ್ವಾರದ ಬಳಿ ಬಂದರೆ ದ್ವಾರ ಮುಚ್ಚಿತ್ತು. ಮತ್ತೆ ಬೇಲಿ ಏರಿ ಮನೆಯ ಹಿತ್ತಲ ಬಾಗಿಲಿಗೆ ಬಂದೆ. ಮನೆಯ ಕೆಲಸದ ಹೆಂಗಸು ಒಳಗೆ ಒಂದು ಮೇಜಿನ ಮೇಲೆ ತೋಳಿನ ಮೇಲೆ ತಲೆಯಿಟ್ಟು ಕೂತಿದ್ದು ಕಂಡಿತು. ಖಂಡಿತ ಅವಳು ಅಳುತ್ತಿದ್ದಳು. ನನಗೆ ಆರಾಮಿಲ್ಲ ಅನ್ನುವುದು ಅವಳಿಗೆ ಗೊತ್ತಾಗಿರಬೇಕು. ನಾನು ಸೀದಾ ಅಡುಗೆಮನೆಯಿಂದ ಊಟದ ಕೋಣೆಗೆ ಹೋಗಿ, ಮನೆಯ ಹಜಾರ ದಾಟಿ ಮುಂದಿನ ಬಾಗಿಲನ್ನೂ ದಾಟಿ ಹೊರಬಿ¨ªೆ.
ಕೋಟು ಧರಿಸದೆ ಇದ್ದರೂ ಆವತ್ತು ಸೆಕೆ ಅನಿಸುತ್ತಿತ್ತು. ಹೊರಗೆ ಸಾಕಷ್ಟು ಚಳಿ ಇತ್ತು. ಸೂರ್ಯ ಪ್ರಖರವಾಗಿ ಬೆಳಗುತ್ತಿದ್ದ. ನಾನು ಸೂರ್ಯನತ್ತ ನೇರವಾಗಿ ದಿಟ್ಟಿಸಿದೆ. ಆ ಪ್ರಖರ ಹೊಳಪಿಗೆ ಕಣ್ಣುಗಳೇನೂ ವಿಚಲಿತವಾಗಲಿಲ್ಲ. ನೋಡುತ್ತ ನೋಡುತ್ತ ಸೂರ್ಯನ ಚೆಹರೆ ಬದಲಾಯಿತು. ಬೆಂಕಿಯುಂಡೆಯಂತಿದ್ದದ್ದು ಬೆಳ್ಳಿಯ ಬಿÇÉೆಯಾಕಾರವಾಗಿ ಅದರ ಸುತ್ತ ಕಾಂತಿ ವಲಯವೊಂದು ಕಾಣಿಸಿಕೊಂಡಿತು. ನನ್ನ ದೃಷ್ಟಿ ಅಲ್ಲಿಂದ ಸೀದಾ ಎದುರಿಗಿದ್ದ ಹಿಮದ ಮೇಲೆ ಬಿತ್ತು. ಬಿಳಿ ಹಿಮದ ಮೇಲೆ ಗಾಢ ಹಳದಿ ಬಣ್ಣದ ಚುಕ್ಕೆಗಳು ಕಾಣಿಸಿಕೊಂಡವು.
ಅಲ್ಲಿಂದ ನನ್ನ ಗೆಳೆಯ ಡಾ. ರಿಜಿನಾಲ್ಡ್ ಸ್ಮಿತ್ವಿಕ್ ಮನೆಗೆ ಬಂದೆ. ಅವನೊಬ್ಬ ಮನೋರೋಗ ತಜ್ಞ. ಅವನ ಮನೆಯಂಗಳದ ಹುಲ್ಲುಹಾಸನ್ನು ದಾಟಿ ಅವರ ಲಿವಿಂಗ್ ರೂಮಿನ ಕಿಟಕಿಯ ಬಳಿ ನಿಂತೆ. ರವಿವಾರದ ಬೆಳಿಗ್ಗೆ ಅವನು ಯಾವಾಗಲೂ ಎಲ್ಲಿರುತ್ತಾನೋ ಅÇÉೇ ಇದ್ದ. ಅಗ್ನಿಷ್ಟಿಕೆಯ ಎದುರಿನ ಕುರ್ಚಿಯ ಮೇಲೆ ವೈಜ್ಞಾನಿಕ ಲೇಖನವೊಂದಕ್ಕೆ ಅವಶ್ಯವಿದ್ದ ಲೆಕ್ಕ ಮಾಡುತ್ತ ಕೂತಿದ್ದ. ಬಾಗಿಲು ತಟ್ಟಿದವನು ಹಾಗೆ ದೂಡಿಕೊಂಡು ಒಳ ಹೋದೆ.
“ಗುಡ್ ಮಾರ್ನಿಂಗ್ ರೆಗ್’ ಅಂದೆ.
“ಹೋಯ್ ಪೆರ್ರಿ !’ ಮಾರುತ್ತರ ಬಂತು. “ಬಾರಪ್ಪ, ಬಾ. ಕೂತ್ಕೊà’
ಅಲ್ಲೇ ಸೋಫಾದ ಮೇಲೆ ಕೂತೆ. ಆ ಪ್ರಸ್ತಾಪ ಹೇಗಾಯಿತು, ಯಾವ ಸಂದರ್ಭದಲ್ಲಿ ಅನ್ನೋದೆಲ್ಲ ಈಗ ನೆನಪಿಲ್ಲ. ನಾನು ಉನ್ಮಾದಗ್ರಸ್ತನಾಗಿದ್ದೇನೆ ಎಂಬುದನ್ನು ಅವನೆದುರು ಉಸುರಿಬಿಟ್ಟೆ, ಆಮೇಲೆ ನನಗೆ ಏನಾಗುತ್ತಿದೆ ಎಂಬುದನ್ನೂ ವಿವರಿಸುವುದಕ್ಕೆ ಯತ್ನಿಸಿದೆ. ನನ್ನ ಉದ್ರಿಕ್ತ ಮನಃಸ್ಥಿತಿಯ ಬಗೆಗೂ, ಹೆಚ್ಚಳಗೊಂಡ ದೈಹಿಕ ಬಲದ ಬಗೆಗೂ ಹೇಳಿದೆ. ಅದನ್ನು ವಿವರಿಸುತ್ತ ವಿವರಿಸುತ್ತ ನಾನು ಕೂತಲ್ಲಿಂದ ಎ¨ªೆ. ಅಗ್ನಿಷ್ಟಿಕೆಯ ಸಮೀಪ ಇಟ್ಟ ಪೋರ್ಕ್, ಬೆಂಕಿ ಕೆದಕಲು ಉಪಯೋಗಿಸುವ ಸಲಾಕೆಯನ್ನು ಕೈಯ್ಯಲ್ಲಿ ಹಿಡಿದೆತ್ತಿದೆ. ಹೊರಮೈಗೆ ತಾಮ್ರ ಲೇಪಿಸಿದ ಕಬ್ಬಿಣದ ಸಲಾಕೆ ಅದು.
ಹೀಗೆ ಸುಮ್ನೆ ನೋಡ್ತೀನಿ. ನನ್ನಿಂದ ಈ ಸಲಾಕೆಯನ್ನ ಎಂಟರಂಕಿಯಲ್ಲಿ ಬಗ್ಗಿಸಲಾಗಬಹುದೆ ಅಥವಾ ಹೂಗಂಟನ್ನಾದರೂ ಹಾಕಲಾಗುತ್ತದೆಯೆ ಅಂತ ನೋಡ್ತೀನಿ ಎಂದೆ.
ಹಾಗನ್ನುತ್ತ ಸಲಾಕೆಯನ್ನು ಬಗ್ಗಿಸಿ ತಿರುಚತೊಡಗಿದೆ.
“ಅಯ್ಯೋ ಬೇಡ!’ ಎನ್ನುತ್ತ ರೆಗ್ ಏರು ಸ್ವರದಲ್ಲಿ ಕಿರುಚಿದ. ಅವನು ಬಿಳಿಚಿಕೊಂಡಿದ್ದ, ಮುಂದೆ ಆಗಲಿರುವ ಘಟನೆಯ ಮೇಲೆ ಇಡೀ ಭವಿಷ್ಯವೇ ನಿಂತಿದೆಯೇನೋ ಎಂಬಂತೆ! ಅತೀ ಮುಖ್ಯ ಅನ್ನಬಹುದಾದ ಎಚ್ಚರಿಕೆಯನ್ನೇ ರೆಗ್ ಕೊಟ್ಟಿದ್ದರೂ ನಾನದನ್ನು ಕಿವಿಗೆ ಹಾಕಿಕೊಳ್ಳದೆ ನನ್ನ ಕೆಲಸ ಮುಂದುವರೆಸಿದೆ. ಕೆಲವೇ ಕ್ಷಣಗಳಲ್ಲಿ ತಾಮ್ರದ ಫೋರ್ಕ್ ಎರಡು ಗೋಲಗಳ ಆಕಾರಕ್ಕೆ ತಿರುಚಲ್ಪಟ್ಟಿತ್ತು.
ರೆಗ್ ಕ್ಷೊàಭೆಗೊಂಡಿದ್ದ.
ಟ್ಯಾಕ್ಸಿಯವರಿಗೆ, “ಫೋನ್ ಮಾಡ್ತೀಯಾ? ನಂಗೊಂದು ಟ್ಯಾಕ್ಸಿ ಬೇಕು’ ಈಗ ಅಂದೆ. ಅವನು ನಿರ್ವಾಹವಿಲ್ಲದೆ ಫೋನ್ ಮಾಡಿ ಟ್ಯಾಕ್ಸಿ ಕರೆಸಿದ.
ಟ್ಯಾಕ್ಸಿಯವನಿಗೆ, “ರಿಜ್ ಹೊಟೇಲಿಗೆ ಹೋಗಬೇಕಪ್ಪ’ ಎಂದೆ. ಅದು ರವಿವಾರದ ಮಧ್ಯಾಹ್ನವಾಗಿದ್ದರಿಂದ ಹೊಟೇಲಿಗೆ ಹೋಗುವ ದಾರಿಯಲ್ಲಿ ಅಷ್ಟಾಗಿ ಜನದಟ್ಟಣೆಯೂ, ವಾಹನ ಸಂಚಾರವೂ ಇರಲಿಲ್ಲ. ರಿಜ್ ಹೊಟೇಲಿನ ಎದುರು ಟ್ಯಾಕ್ಸಿ ನಿಂತಾಗ ಒಂದು ಕಾರೂ ಕಾಣಲಿಲ್ಲ.
ಲಾಬಿಯ ಮೂಲೆಯಲ್ಲಿ ನನ್ನೊಬ್ಬ ಸೆಕ್ರೆಟರಿ ಶ್ಯಾರ್ಲಟ್ ರಿಚರ್ಡ್ಸ್ ನನಗಾಗಿ ಕಾಯುತ್ತಿದ್ದಳು. ಬೆಳಿಗ್ಗೆ ರಿಜ್‌ನಿಂದ ಹೊರಡುವ ಮೊದಲು ಕಚೇರಿಗೆ ಕರೆ ಮಾಡಿ ಯಾರನ್ನಾದರೂ ಕಳಿಸುವಂತೆ ಹೇಳಿ¨ªೆ. ಅವಳು ಸ್ವಲ್ಪ ಅಧೀರಗೊಂಡಂತೆ ಕಂಡಳು. ಲಿಫ್ಟ್ ಮೂಲಕ ಇಬ್ಬರೂ ನನ್ನ ರೂಮಿಗೆ ಬಂದೆವು. ರೂಮಿನ ಅಗ್ನಿಷ್ಟಿಕೆಯ ಎದುರು ಮತ್ತೂಂದು ಸುಂದರ ತಾಮ್ರದ ಲೇಪನವಿದ್ದ ಕಬ್ಬಿಣದ ಪೋರ್ಕ್ ಕಂಡಿತು. ಅದನ್ನೆತ್ತಿಕೊಂಡು ಅದನ್ನು ತಿರುಚುವ ಕಾರ್ಯದಲ್ಲಿ ಮಗ್ನನಾದೆ.
ಶ್ಯಾರ್ಲೆಟ್ ಹಿಂಜರಿಯುತ್ತ ನಾನೊಬ್ಬಳೇ ಬರಲಿಕ್ಕೆ ತಯಾರಾದದ್ದು. ಉಳಿದವರು ಹೆದರಿದರು ಎಂದು ಉಸುರಿದಳು,
ಸುಮಾರು ಎರಡು ಗಂಟೆಗಳ ಕಾಲ ಅವಳಿಗೆ ಡಿಕ್ಟೇಟ್ ಮಾಡುತ್ತ ಹೋದೆ. ಆ ದಿನ ಅಪರಿಮಿತ ಡಿಕ್ಟೇಶನ್. ನಡು ನಡುವೆ ಒಂದಾದ ನಂತರ ಇನ್ನೊಂದರಂತೆ ಎಷ್ಟು ಬಾಟಲಿ ಕೋಕೊಕೋಲಾ ಕುಡಿದೆನೋ ಗೊತ್ತಿಲ್ಲ, ಡಜನ್‌ಗಟ್ಟಲೇ ಬಾಟಲ್ಲುಗಳನ್ನು ವೈಟರ್ ಕೇಳಿದ ಹಾಗೆಲ್ಲ ತಂದಿಡುತ್ತ ಹೋಗಿದ್ದ. ಜೊತೆಗೆ ತೆರಪಿಲ್ಲದೇ ಒಂದಾದ ನಂತರ ಇನ್ನೊಂದು ಕೂಲ್ ಸಿಗರೇಟುಗಳನ್ನೂ ಸೇದುತ್ತ ಹೋದೆ. ಸಿಗರೇಟ್ ಮತ್ತು ಕೋಲಾ ಎರಡೂ ಸೇರಿ ನನ್ನ ಉದ್ರಿಕ್ತತೆಯನ್ನು ಇನ್ನಷ್ಟು ಹೆಚ್ಚಿಸಿರಬೇಕು. ನನ್ನ ವಿಚಾರಗಳು ಬೆಳಕಿನ ವೇಗದಷ್ಟು ವೇಗವಾಗಿ ಮತ್ತು ಸು#ಟವಾಗಿ ಮೂಡತೊಡಗಿದ್ದು ಅನುಭವಕ್ಕೆ ಬಂತು. ಹೀಗೆ ತಡೆಯಿಲ್ಲದೇ ಎರಡು ಗಂಟೆಗಳ ಕಾಲ ಮಾತಾಡುತ್ತ, ಡಿಕ್ಟೇಟ್ ಮಾಡುತ್ತ ಉಳಿದೆ.
ಯಾಕೆ ಉನ್ಮಾದಗ್ರಸ್ತ ಸ್ಥಿತಿಯಲ್ಲಿ ಅಷ್ಟೊಂದು ಆನಂದವಿರುತ್ತದೆ?
ಬಹುಶಃ ತಮ್ಮ ಬದುಕಿನಲ್ಲಿ ಹಿಂದಾದ ಅನುಭವಗಳು ಮತ್ತು ಈಗಿನ ಸಮಸ್ಯೆಗಳು ಇವನ್ನೆಲ್ಲ ಒಟ್ಟಾರೆ ಗ್ರಹಿಸಿಕೊಂಡಾಗ ಮನಸ್ಸು ಕೇವಲ ಖುಷಿ ಕೊಡುವ ಹಂತಗಳಲ್ಲಿ ಮಾತ್ರ ವಿಹರಿಸುವ ಸಾಮರ್ಥ್ಯ ಹೊಂದಿರುತ್ತದೆ. ಅದರ ಜೊತೆಗೆ, ಮನಸ್ಸಿಗೆ ಕಿರಿಕಿರಿ ಉಂಟುಮಾಡುವ ಸಂಗತಿಗಳನ್ನು ಬದಿಗೊತ್ತಿ ಬಿಡುವ ಸಾಮರ್ಥ್ಯವೂ ಒಟ್ಟುಗೂಡುತ್ತದೆ. ಆ ಸಂದರ್ಭದ ಚಿಂತನಾ ಪ್ರಕ್ರಿಯೆಯನ್ನು ಗಮನಿಸಿದಾಗ ಅದು ಕೇವಲ ಸ್ಪಷ್ಟ ಮತ್ತು ತರ್ಕಬದ್ಧ ಮಾತ್ರವಲ್ಲ , ಅತ್ಯಂತ ಕಸುವುಳ್ಳದ್ದೂ ಸೂಕ್ಷ್ಮಗ್ರಾಹಿಯೂ ಆಗಿರುತ್ತದೆ. ಈ ಲಕ್ಷಣಗಳು ಕಂಡುಬರುವುದು ಯಾವಾಗ ಎಂದರೆ ಸಂಪೂರ್ಣವಾದ ಏಕಾಗ್ರತೆ ಸಿದ್ಧಿಸಿದಾಗ ಮಾತ್ರ, ವಿಚಲಿತಗೊಳಿಸುವ ವಿವರಗಳನ್ನು ಕೈಬಿಟ್ಟು ಕೇವಲ ವಿಷಯಕ್ಕೆ ಸಂಬಂಧಿಸಿದ ಮುಖ್ಯ ಸತ್ಯಾಂಶಗಳತ್ತ ಕೇಂದ್ರಿಕರಿಸಿದಾಗ ಮಾತ್ರ. ಅಲ್ಲದೇ, ಈ ಆನಂದಾತಿಶಯಕ್ಕೆ ಜೀವಶರೀರಶಾಸ್ತ್ರಕ್ಕೆ ಸಂಬಂಧಿಸಿದ ಕಾರಣಗಳೂ ಇರಬಹುದು. ಶರೀರದೊಳಗೆ ದೀರ್ಘ ಕಾಲದವರೆಗೆ ನಿಷ್ಕ್ರಿàಯವಾಗಿದ್ದ ನಾಳಗಳಲ್ಲಿ ತೀವ್ರ ಸೆಳೆತವುಂಟಾಗಿ ಹಠಾತ್ತನೆ ಸ್ನಾಯುಗಳಲ್ಲಿ ಶಕ್ತಿ ಉಕ್ಕತೊಡಗಿ ಅತಿ-ಕ್ರಿಯಾಶೀಲವಾಗಬಹುದು. ಈ ಹಠಾತ್ ಎÇÉೆ ಮೀರುವಿಕೆಯು ಒಂದು ಪರಿವರ್ತನೆ, ಸುದೀರ್ಘ ನಿಷ್ಕ್ರಿàಯತೆಯ ಹಂತಗಳಿಂದ ಸರಾಗವಾಗಿ, ಹೇರಳವಾಗಿ ಹರಿಯುವ ಶಕ್ತಿಯ ಆ ಹರಿವಿನ ಹಂತಕ್ಕೆ ತಿರುಗುವ ಒಂದು ಪರಿವರ್ತನೆ.
ಫೋನಿನ ಸದ್ದು. ನನ್ನ ಹೆಂಡತಿ ಗ್ರೆಟ್ಟಾಳ ಕರೆ.
“ಗುಡ್ ಮಾರ್ನಿಂಗ್ ಪೆರಿ! ಹೇಗಿದ್ದೀರಾ?’ ಕೇಳಿದಳು.
“ಓಹ್, ಚೆನ್ನಾಗಿದ್ದೀನಿ ಪ್ರಿಯೆ!’ ನಾನೆಂದೆ. “ನೀ ಹೇಗಿದ್ದಿ? ನಾನು ಶ್ಯಾರ್ಲೆಟ್‌ಗೆ ಸ್ವಲ್ಪ ಡಿಕ್ಟೇಶನ್ ಕೊಡುತ್ತಿದ್ದೇನೆ’
ಗ್ರೆಟ್ಟಾ ಒಂದು ವಿಷಯ ತಿಳಿಸಲಿಕ್ಕೆ ಕರೆ ಮಾಡಿದ್ದಳು- “ಡಾ. ಲ್ಯಾಂಗ್‌ರವರ ಕರೆ ಬಂದಿತ್ತು. ಅವರಿಗೆ ನೀವು ಮರಳಿ ಕರೆ ಮಾಡಬೇಕಂತೆ’.
ಅವಳು ಈ ವಿಷಯ ತಿಳಿಸಿದ ಹೊತ್ತಿಗೆ, ಮುಂದೆ ಎಂತಹ ಗಂಡಾಂತರ ಕಾದಿದೆ ಎಂಬುದರ ಅರಿವು ನನಗಾಗಬೇಕಿತ್ತು. ಹಾಗೆ ಅಂದುಕೊಳ್ಳಲಿಕ್ಕೆ ಸೂಕ್ತ ಕಾರಣಗಳು ನನ್ನ ಬಳಿ ಇದ್ದವು. ಡಾ. ಲ್ಯಾಂಗ್‌ರವರ ಕರೆ ಎಂದರೆ ನನಗೆ ಅದಾಗಲೇ ಅರ್ಥವಾಗಬೇಕಿತ್ತು. ಡಾ. ಲ್ಯಾಂಗ್ ರವರು ವೆಸ್ಟ್ ಬರೋ ಮನೋರೋಗ ಚಿಕಿತ್ಸಾಲಯದ ನಿರ್ವಾಹಕರು. ಅವರ ಕರೆ ಬಂತೆಂದರೆ ನಾನು ಆ ಆಸ್ಪತ್ರೆಗೆ ಮರಳುವ ಸಾಧ್ಯತೆಯ ಮುನ್ಸೂಚನೆ ಅಂತಲೇ. ಅದು ನನಗೆ ಅರಿವಾಗಬೇಕಿತ್ತು. ಎಂದಾದರೂ ಹಾಗಾಗಿಬಿಟ್ಟರೆ ಎಂಬ ಯೋಚನೆಗೇ ನಾನು ಅಧೀರನಾಗುತ್ತಿ¨ªೆ. ಅಂಥಾದ್ದರಲ್ಲಿ ಲ್ಯಾಂಗ್‌ರವರ ಕರೆ ಬಂತು ಎಂದು ತಿಳಿದ ಮೇಲೂ ನಾನು ಯಾಕೆ ಕಾರ್ಯತತ್ಪರನಾಗಲಿಲ್ಲ?
ಮೂಲ : ಮಿಮಿ ಬೇರ್ಡ್
ಅನು. : ಪ್ರಜ್ಞಾ ಶಾಸತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.