ಚಂದನವನದಲ್ಲಿ ಚಂದದ ಭಾವನ!
Team Udayavani, Apr 21, 2019, 6:00 AM IST
ನಟ ಪುನೀತ್ ರಾಜಕುಮಾರ್ ಅಭಿನಯದ ಜಾಕಿ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಪರಿಚಯವಾದ ಮಲೆಯಾಳಿ ಕುಟ್ಟಿ ಭಾವನಾ ಮೆನನ್. ಜಾಕಿ ಚಿತ್ರದ ಸೂಪರ್ ಹಿಟ್ ಸಕ್ಸಸ್ ನಂತರ ಕನ್ನಡ ಚಿತ್ರರಂಗದಲ್ಲಿ ಜಾಕಿ ಭಾವನಾ ಎಂದೇ ಜನಪ್ರಿಯವಾದ ಈ ಚೆಲುವೆ ನಂತರ ವಿಷ್ಣುವರ್ಧನ, ರೋಮಿಯೋ, ಯಾರೇ ಕೂಗಾಡಲಿ, ಟೋಪಿವಾಲಾ, ಬಚ್ಚನ್, ಮೈತ್ರಿ, ಮುಕುಂದಾ – ಮುರಾರಿ, ಚೌಕ ಹೀಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ತನ್ನದೇ ಆದ ಅಭಿಮಾನಿ ವರ್ಗವನ್ನು ಗಳಿಸಿಕೊಂಡಾಕೆ.
ಕನ್ನಡ, ಮಲೆಯಾಳ ಚಿತ್ರರಂಗದಲ್ಲಿ ಬಹುಬೇಡಿಕೆಯ ನಾಯಕ ನಟಿಯಾಗಿ ಯಶಸ್ಸಿನಲ್ಲಿರುವಾಗಲೇ ಭಾವನಾ ಅವರನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. ಈ ಘಟನೆಯಲ್ಲಿ ಮಲೆಯಾಳ ಚಿತ್ರರಂಗದ ಖ್ಯಾತ ನಟನೊಬ್ಬನ ಕೈವಾಡವಿರುವುದಾಗಿ ಹೇಳಲಾಗಿದ್ದು, ಇಡೀ ಮಲೆಯಾಳ ಚಿತ್ರರಂಗ ಭಾವನಾ ಅವರ ಬೆನ್ನಿಗೆ ಬೆಂಬಲವಾಗಿ ನಿಂತಿತ್ತು. ಈ ಘಟನೆ ಭಾವನಾ ಅವರ ಚಿತ್ರ ಬದುಕಿನಲ್ಲಿ ಮತ್ತು ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ತಲ್ಲಣವನ್ನೇ ಸೃಷ್ಟಿಸಿತು. ಈ ಘಟನೆಯ ಬಳಿಕ ಕೆಲಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಭಾವನಾ, ತಮ್ಮ ಬಹುಕಾಲದ ಗೆಳೆಯ ಬೆಂಗಳೂರು ಮೂಲದ ನಿರ್ಮಾಪಕ ನವೀನ್ ಎಂಬುವವರನ್ನು ವರಿಸುವ ಮೂಲಕ ವೈವಾಹಿಕ ಬದುಕಿಗೆ ಕಾಲಿಟ್ಟರು.
ಸಾಮಾನ್ಯವಾಗಿ ಮದುವೆಯ ಬಳಿಕ ಬಹುತೇಕ ನಾಯಕ ನಟಿಯರು ತೆರೆಮರೆಗೆ ಸರಿಯುತ್ತಾರೆ ಎಂಬ ಮಾತುಗಳಿಗೆ ಅಪವಾದ ಎನ್ನುವಂತೆ, ಮದುವೆಯ ನಂತರ ಭಾವನಾ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗುತ್ತಿದ್ದಾರೆ. ಮದುವೆಯ ಬಳಿಕ ಟಗರು ಚಿತ್ರದ ಮೂಲಕ ಮತ್ತೆ ಸ್ಯಾಂಡಲ್‌ವುಡ್ ಭರ್ಜರಿಯಾಗಿ ರೀ ಎಂಟ್ರಿ ಕೊಟ್ಟ ಭಾವನಾ, ಈಗ ಕನ್ನಡದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಗೋಲ್ಡನ್‌ಸ್ಟಾರ್ ಗಣೇಶ್ ಅಭಿನಯದ 99, ಪ್ರಜ್ವಲ್ ದೇವರಾಜ್ ನಾಯಕನಾಗಿರುವ ಇನ್ಸ್‌ಪೆಕ್ಟರ್ ವಿಕ್ರಂ, ಶಿವರಾಜಕುಮಾರ್ ಅಭಿನಯದ ಮೈ ನೇಮ್ ಈಸ್ ಆಂಜಿ, ಇನ್ನೂ ಹೆಸರಿಡದ ಎರಡು ಚಿತ್ರಗಳು ಸೇರಿದಂತೆ ಸುಮಾರು ಐದಾರು ಚಿತ್ರಗಳಲ್ಲಿ ಭಾವನಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಒಟ್ಟಾರೆ ಭಾವನಾ ಕನ್ನಡ ಚಿತ್ರರಂಗದಲ್ಲಿ ಹತ್ತು ವರ್ಷಗಳ ಜರ್ನಿಯನ್ನು ಪೂರ್ಣಗೊಳಿಸುವ ಉತ್ಸಾಹದಲ್ಲಿದ್ದಾರೆ. ಭಾವನಾ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಸಮಯದಲ್ಲೇ, ಚಿತ್ರರಂಗಕ್ಕೆ ಕಾಲಿಟ್ಟ ಅನೇಕ ನಾಯಕ ನಟಿಯರು ಸದ್ಯ ತೆರೆಮರೆಗೆ ಸರಿದಿರುವಾಗ, ಬದುಕಿನಲ್ಲಿ ಅನೇಕ ಏಳು-ಬೀಳುಗಳನ್ನು ಕಂಡ ಭಾವನಾ ಮತ್ತೆ ಹೊಸ ಹುರುಪಿನೊಂದಿಗೆ ಚಿತ್ರರಂಗದಲ್ಲಿ ಸಕ್ರಿಯರಾಗುತ್ತಿರುವುದು ನಿಜಕ್ಕೂ ಗಮನಾರ್ಹ ಸಂಗತಿ. ಈ ವರ್ಷ ಭಾವನಾ ಕನ್ನಡದಲ್ಲಿ ಅಭಿನಯಿಸಿರುವ ಕನ್ನಿಷ್ಟ ಎರಡು-ಮೂರು ಚಿತ್ರಗಳು ಬಿಡುಗಡೆಯಾಗಲಿದ್ದು, ಭಾವನ ಸೆಕೆಂಡ್ ಇನ್ನಿಂಗ್ಸ್ ಚಿತ್ರಗಳಿಗೆ ಸಿನಿಪ್ರಿಯರ ರೆಸ್ಪಾನ್ಸ್ ಹೇಗಿರಲಿದೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.