ಜೈ ಹಾಸ್ಯ ಭುವನೇಶ್ವರಿ !


Team Udayavani, May 28, 2017, 3:45 AM IST

bhuvaneshwarihegde.jpg

ವಿನೋದ‌ ಬರಹ ಮತ್ತು ಭಾಷಣಗಳ ಮೂಲಕ ಕರ್ನಾಟಕದಿಂದ ಅಮೆರಿಕದವರೆಗೂ ಜನಪ್ರಿಯತೆ ಗಳಿಸಿರುವ ಭುವನೇಶ್ವರಿ ಹೆಗಡೆ ಕಾಲೇಜು ಪ್ರಾಧ್ಯಾಪಕಿಯ ತಮ್ಮ ವೃತ್ತಿಜೀವನದಿಂದ ನಿವೃತ್ತರಾಗುತ್ತಿದ್ದಾರೆ. ಇನ್ನು, ಪೂರ್ಣಾವಧಿ “ಹಾಸ್ಯವೃತ್ತಿ’ಯನ್ನು ಅನುಸರಿಸಲಿರುವ ಭುವನೇಶ್ವರಿಯವರನ್ನು ಸಾರ್ವಜನಿಕವಾಗಿ ಅಭಿನಂದಿಸುವ ಕಾರ್ಯಕ್ರಮವನ್ನು ಬರುವ ಜೂನ್‌ 3 ರಂದು ಹಮ್ಮಿಕೊಳ್ಳಲಾಗಿದೆ. ಆ ದಿನ “ಬನಸಿರಿ’ ಅಭಿನಂದನ ಗ್ರಂಥವೂ ಬಿಡುಗಡೆಯಾಗಲಿದೆ. 
“ಜೈ ಹಾಸ್ಯ ಭುವನೇಶ್ವರಿ’

ಭು. ಹೆ. ಅವರು ವೃತ್ತಿಯಿಂದ ನಿವೃತ್ತ ರಾಗುತ್ತಿ¨ªಾರೆ. ಅಭಿನಂದನಾ ಸಮಾರಂಭ ಇಟ್ಟುಕೊಳ್ಳುವ ಅಂತ ಮಂಗಳೂರು ನಗರದ ಕೆಲ ಸಾಹಿತ್ಯಾಸಕ್ತ ಬಂಧುಗಳು ಹೇಳಿದಾಗ ನನಗೆ ನಂಬಲಿಕ್ಕಾಗಲಿಲ್ಲ. ಭುವನೇಶ್ವರಿಯವರಿಗೆ ಅರುವತ್ತಾಯಿತಾ? ಅವರಿಗೇ ಫೋನಾಯಿಸಿ ಕೇಳಿದರೆ… ಏನೋ ಹಾಸ್ಯದ ಮಾತಾಡಿ ಪ್ರಶ್ನೆಯನ್ನೇ ಮರೆಸಿ ಬಿಟ್ಟಿದ್ದರು. ನೀಳ ಜಡೆಯನ್ನು ಹಾವಿನಂತೆ ತಿರುವುತ್ತ ಪುಟು ಪುಟು ನಡೆಯುವ ಉತ್ಸಾಹದ ಚಿಲುಮೆ ಭು. ಹೆ. ಅವರ ಚಿರ ಯೌವ್ವನದ ರಹಸ್ಯ ಅವರ ಹಾಸ್ಯಪ್ರಜ್ಞೆಯೇ ಇರಬೇಕು. ವಯಸ್ಸನ್ನು ಮರೆಯಾಗಿಸುವ ರಸಾಯನದ ಕೆಲಸ ಮಾಡಿದೆ ಈ ಹಾಸ್ಯ! 

ನನ್ನ ಮತ್ತು ಭು. ಹೆ. ಅವರ ಆತ್ಮೀಯ ಒಡನಾಟ ಹದಿನೇಳು ವರ್ಷದ್ದು. ಅವರು ಹಾಸ್ಯ ಲೇಖನ, ಪ್ರಬಂಧಗಳ ಮೂಲಕ ಪರಿಚಿತರು. ದಿನನಿತ್ಯದ ಪ್ರಚಲಿತ ವಿದ್ಯಮಾನಗಳನ್ನೇ ಬಂಡವಾಳವಾಗಿಸಿಕೊಂಡು, ಅದಕ್ಕೊಂದು ವಿಭಿನ್ನವಾದ ರೂಪವನ್ನು ಕೊಟ್ಟು ಬಿಡುತ್ತಾರಿವರು. ಕೆಲವೊಮ್ಮೆಯಂತೂ ಇವರೇನಾದರೂ ಸಿ. ಸಿ. ಕ್ಯಾಮರಾದ ಕಣ್ಣಿಂದ ನಮ್ಮ ಬದುಕನ್ನು ನೋಡುತ್ತಿ¨ªಾರ ಅಂತ ಸಂಶಯವಾಗಿ ಬಿಡುತ್ತದೆ. ಅವರ ಬರಹಗಳ ವಿಷಯಗಳಲ್ಲಿ ಒಂದು ಥರ ತಾಜಾತನವಿದೆ. ಮೊನ್ನೆ ಐನೂರು, ಸಾವಿರ ರೂ. ನೋಟುಗಳು ಅಮಾನ್ಯಿàಕರಣಗೊಂಡಾಗ ನಮ್ಮೆಲ್ಲ ಹೆಂಗಸರ ಗುಪ್ತನಿಧಿಯ ವಿಷಯವನ್ನು ಬಹಿರಂಗಪಡಿಸಿದ್ದೇ ಅಲ್ಲ , ಅದನ್ನು ಹೇಗೆ ಬ್ಯಾಂಕಿಗೆ ಹಾಕುವುದು- ಏನು ಮಾಡಬೇಕಂತ ಹಾಸ್ಯಮಯವಾಗಿಯೇ ಸಲಹೆ ಕೊಟ್ಟು ಬಿಟ್ಟರು. ಇವರದ್ದು ಹಾಸ್ಯಕ್ಕಾಗಿ ಹಾಸ್ಯವಲ್ಲ. ಅವರು ಯಾರನ್ನೂ ಅಪಹಾಸ್ಯ ಮಾಡಿದ್ದಿಲ್ಲ. ಮನನೋಯಿಸಿದ್ದಿಲ್ಲ. ಬೇಕಾದರೆ ತಮ್ಮನ್ನೇ ತಾವು ಹಾಸ್ಯದ ವಸ್ತುವಾಗಿಸಿ ಬಿಡುತ್ತಾರೆ. ಒಂದು ದಿನ ಯಾರೋ ಫೋನೆತ್ತಿದ ಇವರ ಹತ್ತಿರವೇ “”ನಿಮ್ಮ ಶ್ರೀಮತಿಗೆ ಫೋನ್‌ ಕೊಡಿ” ಅಂತ ಕೇಳಿದರಂತೆ! ಇದನ್ನು ಅವರೇ ನಮಗೆ ಹೇಳಿದ್ದು ! ಟೆಲಿಫೋನ್‌ ವಿಭಾಗ ತಮಗೆ “ಸರ್‌ ಹುಡ್‌’ ಪದವಿ ನೀಡಿದೆಯೆನ್ನುತ್ತಾರೆ. ಆಕಾಶವಾಣಿ ಕೇಳುಗರಿಗೂ ತಮ್ಮ ದಪ್ಪ ಸ್ವರದ ಲಘು ಭಾಷಣಗಳಿಂದ ಭು. ಹೆ. ಪರಿಚಿತರು. 

ಅವರ ಹಾಸ್ಯಬರಹಗಳಲ್ಲಿ ನನಗೆ ತುಂಬಾ ಇಷ್ಟವಾದದ್ದು, ಇನ್ನೂ ಕಾಡುವುದು “ಉದಯವಾಣಿ’ಯಲ್ಲಿ ಪ್ರಕಟವಾದ ಎ.ಟಿ.ಎಂ. ಬಗೆಗಿನ ಒಂದು ಪ್ರಬಂಧ  “ಯಂತ್ರಕ್ಕಿದೆಯೆ ಅಂತಃಕರಣ?’. ಆಗ  ಎ.ಟಿ.ಎಂ. ಹಾವಳಿ ಶುರುವಾದದ್ದಷ್ಟೇ. ಆಧುನಿಕ ಉಪಕರಣದ ವೈಫ‌ಲ್ಯದ ಬಗ್ಗೆ ಎಷ್ಟು ಚೆನ್ನಾಗಿ ಬರೆದಿದ್ದರೆಂದರೆ… ಕೊನೆಯಲ್ಲಿನ ಟ್ರಾಜಿಡಿ ಸಹ ತುಟಿಯಲ್ಲಿ ನಗು ಚಿಮ್ಮಿಸಿತ್ತು. ಕಳೆದ ತಿಂಗಳು ಬೆಂಗಳೂರಿನಲ್ಲಿ ಒಂದು ಲೋಟ ಜ್ಯೂಸಿಗಾಗಿ ಹತ್ತು ಎ.ಟಿ.ಎಂ. ಗಳ ಕಟ್ಟೆ ಪೂಜೆ  ಮಾಡಿದಾಗ ಎಷ್ಟೋ ವರ್ಷ ಹಿಂದೆ ಓದಿದ್ದು ನೆನಪಾಯ್ತು. 

ಅವರ ಹಾಸ್ಯಪ್ರಜ್ಞೆಗೆ ಇತಿಮಿತಿಯೇ ಇಲ್ಲ. ಅತ್ಯಂತ ದುಃಖ ಅಥವಾ ನೋವಿನ ಸಂದರ್ಭದಲ್ಲೂ ಹಾಸ್ಯಬಾಣ ಬಿಡಬಲ್ಲರಿವರು. ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಅವರಿಗೆ ಪುಟ್ಟದೊಂದು ಶಸ್ತ್ರಚಿಕಿತ್ಸೆ ಆಗಿತ್ತು.  ಆಪರೇಷನ್‌ ಆದದ್ದು ಒಂದು ಬಿಲ್ಡಿಂಗ್‌ನಲ್ಲಿ. ಆದರೆ ಪೋಸ್ಟ್‌ ಆಪರೇಟಿವ್‌ ಕೋಣೆ ಇನ್ನೊಂದು ಬಿಲ್ಡಿಂಗ್‌ನಲ್ಲಿತ್ತು. ಏನೋ ವಿವಾದದಿಂದಾಗಿ ಸಂಪರ್ಕಕ್ಕಾಗಿ ಹೊರಗೆ ರಸ್ತೆಯ ಮೂಲಕ ಹೋಗಬೇಕಿತ್ತು. ಅರೆಬರೆ ಪ್ರಜ್ಞೆಯಲ್ಲಿದ್ದ  ಭು. ಹೆ.ಯವರು ಆಕಾಶ, ಮೋಡಗಳು, ನಕ್ಷತ್ರ, ಚಂದ್ರ ನೋಡಿ… ದೇವಲೋಕ ತಲುಪಿದೆ ಅಂದುಕೊಂಡರಂತೆ. ನಾವೀಗ ನಗಬೇಕೋ, ಅಳಬೇಕೋ?

 ಭು. ಹೆ.ಯವರ ಹಾಸ್ಯದ ಕಂಪು ನಮ್ಮ ಕನ್ನಡನಾಡಿನಲ್ಲಿ ಮಾತ್ರವಲ್ಲ ವಿದೇಶದಲ್ಲೂ ಪಸರಿಸಿದೆ. ಅಮೆರಿಕೆಯಲ್ಲಿ ಕನ್ನಡ ಸಾಹಿತ್ಯ ರಂಗ ತುಂಬಾ ವಿಶಿಷ್ಟವಾದ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಿದೆ. ಅದರ ಸ್ಥಾಪಕಾಧ್ಯಕ್ಷರಾದ ಹೆಚ್‌. ವೈ. ರಾಜಗೋಪಾಲ ಅವರು ಒಮ್ಮೆ ಬೆಂಗಳೂರಿನ ಅಪರಂಜಿ ಹಾಸ್ಯೋತ್ಸವದಲ್ಲಿ  ಭು. ಹೆ. ಅವರ ಭಾಷಣ ಕೇಳಿದರಂತೆ.  ಮರುವರ್ಷದ ( ಮೇ  2011) ಸಾಹಿತ್ಯೋತ್ಸವಕ್ಕೆ ಭು. ಹೆ.  ವಿಶೇಷ ಅತಿಥಿಯಾಗಿ ಫಿಕ್ಸ್‌ ಆದರು. ಸುಮತೀಂದ್ರ ನಾಡಿಗರ ಜತೆ ಸ್ಯಾನ್‌ಫ್ರಾನ್ಸಿಸ್ಕೊಗೆ ಹೋಗಿಳಿದು ಕ್ಯಾಲಿಫೋರ್ನಿಯಾ ಕನ್ನಡ ಕೂಟ, ಲಾಸ್‌ ಏಂಜಲೀಸ್‌ ಕನ್ನಡ ಸಂಘಗಳಲ್ಲಿ  ಸಹ ಉಪನ್ಯಾಸ ನೀಡಿ ಬಂದರು.  ಅದೇ ವರ್ಷ ಅಕ್ಟೋಬರಿನಲ್ಲಿ ಲಂಡನ್‌ ನಗರದಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ ಯುರೋಪ್‌ 2011ರಲ್ಲಿ ಸನ್ಮಾನಿತರಾಗಿದ್ದರು.  2012  ಅಕ್ಟೋಬರಿನಲ್ಲಿ ಅಮೆರಿಕೆಯ ಬಾಸ್ಟನ್‌ ನಗರದ ಕನ್ನಡ ಕೂಟದ  ರತ್ನ ಮಹೋತ್ಸವವನ್ನು ಉದ್ಘಾಟಿಸಿ ಹೊರನಾಡ ಕನ್ನಡಿಗರಿಗೆ ಹಾಸ್ಯದೌತಣ ಬಡಿಸಿ¨ªಾರೆ. ಅಲ್ಲಿಯ ಅನುಭವ, ಅಲ್ಲಿಯ ಬಿಡುಗೇಶಿ ಬೆಡಗಿಯರನ್ನು , “ಕಿಡುÕ’ಗಳನ್ನೂ  ಕಟೆದಿಟ್ಟು  ಅವರನ್ನು ಸಂಭ್ರಮ ಪೀಡಿತರೆಂದು ಕರೆದು ತಮಾಷೆ ಮಾಡಿ ಬರೆದ ಲೇಖನಗಳು ಪ್ರಕಟವಾಗಿದ್ದವು. 

ಕನ್ನಡದ ಹೆಚ್ಚಿನ ಪತ್ರಿಕೆಗಳಲ್ಲಿ ಇವರ ಅಂಕಣ ಬರಹಗಳು ಪ್ರಕಟವಾಗಿವೆ. ಹನ್ನೊಂದು ಹಾಸ್ಯ ಪ್ರಬಂಧ ಸಂಕಲನ ರಚಿಸಿದ್ದು ಎಲ್ಲ ಕೃತಿಗಳಿಗೂ ಅಕಾಡೆಮಿ ಪ್ರಶಸ್ತಿಯಿಂದ ಹಿಡಿದು ಉಗ್ರಾಣ ಪ್ರಶಸ್ತಿಯ ತನಕ ಅನೇಕ  ಪ್ರಶಸ್ತಿಗಳು ಸಂದಿವೆ. 

ಕಳೆದ 32 ವರ್ಷಗಳಿಂದ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ವಿಶ್ವ ವಿದ್ಯಾಲಯ ಕಾಲೇಜಿನಲ್ಲಿ (ಹಳೆಯ ಸರ್ಕಾರೀ ಕಾಲೇಜು ) ಅರ್ಥಶಾಸ್ತ್ರ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ಇದೇ ಮೇ 31ರಂದು ನಿವೃತ್ತರಾಗುತ್ತಿ¨ªಾರೆ   ಭು. ಹೆ. ಮಂಗಳೂರು ವಿಶ್ವ ವಿದ್ಯಾಲಯದ ಡಾ. ಕೆ. ಶಿವರಾಮ ಕಾರಂತ ಪೀಠದ ಮುಖ್ಯಸ್ಥೆಯಾಗಿರುವ ಗರಿಮೆಯೂ ಅವರದು. 

ಅಪಾರ ಸಂಖ್ಯೆಯ ವಿದ್ಯಾರ್ಥಿಗಳನ್ನು ಸಾಹಿತ್ಯದ ಕಡೆಗೆ ಪ್ರೇರೇಪಿಸಿ ಅನೇಕ ಯುವ ಬರಹಗಾರರನ್ನೂ ರೂಪಿಸಿದ ಕೀರ್ತಿ ಅವರದ್ದು. ಮನೆಕೆಲಸದ ಹುಡುಗನಿಂದ ಹಿಡಿದು ಕಾಲೇಜಿನ ಅಟೆಂಡರ್‌ವರೆಗೆ, ಅಷ್ಟೇ ಯಾಕೆ, ಹಾಲಿನ ಬೂತಿನವರ ಕೈಯಿಂದಲೂ ಲೇಖನಿ ಹಿಡಿಸಿ, ಬರೆಸಿದ ತಾಕತ್ತು ಇವರದ್ದು.    ಕನ್ನಡನಾಡಿನ ಉದ್ದಗಲಗಳಲ್ಲೂ, ಗೋವಾ, ಚೆನ್ನೈ, ದಿಲ್ಲಿಗಳ ಕನ್ನಡ ಸಂಘಗಳಿಗೂ ಹೋಗಿ ಉಪನ್ಯಾಸ ನೀಡಿ¨ªಾರೆ.  ದಕ್ಷಿಣೋತ್ತರ ಕನ್ನಡ ಜಿÇÉೆಗಳಲ್ಲಿಯಂತೂ ಭು. ಹೆ. ಹೋಗಿ ಭಾಷಣ ಮಾಡದ ಶಾಲೆ-ಕಾಲೇಜುಗಳಿಲ್ಲ ಅನ್ನಬೇಕೇನೋ ! ನಾಡಿನ ರೋಟರಿ, ಲಯನ್ಸ್‌ನಂಥ ಸಂಸ್ಥೆಗಳು ಇವರನ್ನು ಕರೆದು ವಿಶೇಷ ಭಾಷಣ ಏರ್ಪಡಿಸಿವೆ. 

ಬಹಿರಂಗವಾಗಿ ಹೋರಾಟಗಳು, ಬಹಿಷ್ಕಾರ, ಘೋಷಣೆಗಳಲ್ಲಿ ತೊಡಗಿಸಿಕೊಳ್ಳದೆ, ಭು. ಹೆ. ಅವರು  ಹಾಸ್ಯವೆಂಬ ಅಸ್ತ್ರದಿಂದ ಜನಸಾಮಾನ್ಯರಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ, ಯುವ ಜನಾಂಗದಲ್ಲಿ ಜಾಗೃತಿಯನ್ನು, ಮಾನವೀಯ ದೃಷ್ಟಿಕೋನವನ್ನು ಮೂಡಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿ¨ªಾರೆ. ಮಲೆನಾಡಿನಲ್ಲಿ ಹುಟ್ಟಿ, ದಕ್ಷಿಣಕನ್ನಡದಲ್ಲಿ ಈ ಎತ್ತರಕ್ಕೆ ಬೆಳೆದ ಭು. ಹೆ. ಯವರಿಗೆ ತುಳುನಾಡಿನ ಸಂಸ್ಕೃತಿ ಮತ್ತು ದಕ್ಷಿಣ ಕನ್ನಡದ  ಜನತೆ ಬಗ್ಗೆ ವಿಶೇಷ ಪ್ರೀತಿ, ಅಭಿಮಾನ. ಮಂಗಳೂರಿನವರೇ ಆಗಿ ಬಿಟ್ಟಿರುವ ಭು.ಹೆ.ಯವರ ನಗಿಸುವ ಪ್ರವೃತ್ತಿ ಅವರ  ನಿವೃತ್ತಿಯ ನಂತರ ಮತ್ತಷ್ಟು ಹೆಚ್ಚಿ ನಾವೆಲ್ಲರೂ ಹಾಸ್ಯದ ಅರಬ್ಬೀಸಮುದ್ರದಲ್ಲಿ ತೇಲಾಡುವಂತಾಗಲಿ.

– ಡಾ. ಮೀರಾ

ಟಾಪ್ ನ್ಯೂಸ್

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.