ಶೃಂಗಾರ ಲಾಸ್ಯ ವೈಭವಂ
Team Udayavani, Dec 24, 2017, 6:00 AM IST
ಬಿಗ್‌ಬಾಸ್ ಮನೆಗೆ ಕಳೆದ ವಾರ ನಟಿ ಸಂಯುಕ್ತಾ ಹೆಗ್ಡೆ ಜೊತೆಗೆ ಲಾಸ್ಯಾ ಎಂಟ್ರಿ ಕೊಟ್ಟಾಗ, ಆಕೆ ಯಾರು, ಏನು ಮಾಡುತ್ತಿದ್ದರು ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ಕ್ರಮೇಣ ಗೊತ್ತಾಗಿದ್ದೇನೆಂದರೆ, ಆಕೆ ಮತ್ತು ಸಂಯುಕ್ತಾ ಕಳೆದ ಕೆಲವು ವರ್ಷಗಳಿಂದ ಒಳ್ಳೆಯ ಸ್ನೇಹಿತರು ಎಂದು. ಅದೇ ಸ್ನೇಹದ ಮೇಲೆ ಲಾಸ್ಯ, ಸಂಯುಕ್ತಾ ಜೊತೆಗೆ “ಬಿಗ್‌ಬಾಸ್’ ಮನೆಗೆ ಎಂಟ್ರಿ ಕೊಟ್ಟಿರಬಹುದು ಎಂದು ಹಲವರ ಅಭಿಪ್ರಾಯವಾಗಿತ್ತು. ಅದಕ್ಕೆ ಕಾರಣ ಲಾಸ್ಯ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲದಿರುವುದು.
ಲಾಸ್ಯ ಮೂಲತಃ ಕಿರುತೆರೆಯಿಂದ ಬಂದವರು. ಈ ಹಿಂದೆ ಪದ್ಮಾವತಿ ಎಂಬ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ಅದಕ್ಕೂ ಮುನ್ನ ಸುವರ್ಣ ಚಾನಲ್‌ನಲ್ಲಿ ಪ್ರಸಾರವಾದ ಡ್ಯಾನ್ಸ್ ಡ್ಯಾನ್ಸ್ ಎಂಬ ನೃತ್ಯದ ರಿಯಾಲಿಟಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಆ ಕಾರ್ಯಕ್ರಮದಲ್ಲಿ ಗಮನಸೆಳೆದ ಅವರು, ನಂತರ ಧಾರಾವಾಹಿಗೆ ಬಂದರು. ಅಲ್ಲಿ ಮಿಂಚಿದ ಲಾಸ್ಯ, ಹಿರಿತೆರೆಗೂ ಎಂಟ್ರಿ ಕೊಟ್ಟಿದ್ದಾಗಿದೆ.
ಹೌದು, ಲಾಸ್ಯ ಒಂದಲ್ಲ, ಎರಡು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಎರಡು ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಅದರಲ್ಲಿ ಮೊದಲನೆಯದು ಅಸತೋಮ ಸದ್ಗಮಯ. ರಾಧಿಕಾ ಚೇತನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಲಾಸ್ಯಗೂ ಒಂದು ಮಹತ್ವದ ಪಾತ್ರವಿದೆಯಂತೆ. ಈ ಚಿತ್ರದಲ್ಲಿ ಮಂಡ್ಯದ ಮಾಡರ್ನ್ ಹುಡುಗಿಯಾಗಿ ಕಾಣಿಸಿಕೊಂಡಿರುವ ಲಾಸ್ಯ, ಕಿರಣ್‌ರಾಜ್ ಎದುರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆಲೋಚನೆ ಮತ್ತು ಉಡುಗೆಯಲ್ಲಿ ಆಧುನಿಕವಾಗಿರುವ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಪಾತ್ರದಲ್ಲಿ ಲಾಸ್ಯ ಕಾಣಿಸಿಕೊಂಡಿರುವುದು ವಿಶೇಷ. ಇದಲ್ಲದೆ ಉಪೇಂದ್ರ ಮತ್ತು ವೇದಿಕಾ ನಟಿಸಿರುವ ಹೋಮ್ ಮಿನಿಸ್ಟರ್ ಎಂಬ ಚಿತ್ರದಲ್ಲೂ ಲಾಸ್ಯ ನಟಿಸಿದ್ದು, ಈ ಚಿತ್ರದಲ್ಲಿ ಅವರು ನಾಯಕಿ ವೇದಿಕಾ ಅವರ ಗೆಳತಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಯಾವುದೇ ಚಿತ್ರ ಇನ್ನೂ ಬಿಡುಗಡೆಯಾಗದಿ ರುವುದರಿಂದ ಲಾಸ್ಯ ಬಗ್ಗೆ ಹೆಚ್ಚು ಜನರಿಗೆ ಗೊತ್ತಿಲ್ಲ ಎಂದರೆ ತಪ್ಪಿಲ್ಲ. ಈಗ ಲಾಸ್ಯ ಒಂದು ವಾರ ಕಾಲ ಬಿಗ್‌ಬಾಸ್ ಮನೆಯಲ್ಲಿ ಕಳೆದಿರುವುದರಿಂದ, ಅವರ ಬಗ್ಗೆ ಕನ್ನಡಿಗರಿಗೆ ಪರಿಚಯವಾಗುತ್ತಿದ್ದಾರೆ.
ವೈಲ್ಡ್ ಕಾರ್ಡ್ ಮೂಲಕ ಬಿಗ್‌ಬಾಸ್ ಮನೆಗೆ ಬಂದಿರುವ ಲಾಸ್ಯ ಇನ್ನಷ್ಟು ವಾರಗಳ ಕಾಲ ಮನೆಯಲ್ಲಿರುತ್ತಾರಾ ಅಥವಾ ತಮ್ಮ ಗೆಳತಿ ಸಂಯುಕ್ತಾ ತರಹ ಬೇಗನೆ ಮನೆಯಿಂದ ಹೊರಬೀಳುತ್ತಾರಾ ಎಂಬ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿರಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
IPL Auction 2025: ಇಂದು, ನಾಳೆ ಐಪಿಎಲ್ ಬೃಹತ್ ಹರಾಜು
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪಲಾಯನ ಮಾಡಲ್ಲ: ನಿಖಿಲ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.