ಪುಸ್ತಕ ಸಂಸ್ಕೃತಿ ಮತ್ತು ಪ್ರಕಾಶನ ಸಂಸ್ಥೆಗಳು


Team Udayavani, Nov 12, 2017, 6:35 AM IST

book.jpg

ನವೆಂಬರ್‌ 14ರಿಂದ ಆರಂಭಿಸಿ ಏಳು ದಿನಗಳ ಕಾಲ “ರಾಷ್ಟ್ರೀಯ ಪುಸ್ತಕ ಸಪ್ತಾಹ’ವನ್ನು ಆಚರಿಸಲಾಗುತ್ತಿದೆ. ಈ ಅವಧಿಯಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಕೇಂದ್ರ ಸಾಹಿತ್ಯ ಅಕಾಡೆಮಿ, ನ್ಯಾಷನಲ್‌ ಬುಕ್‌ ಟ್ರಸ್ಟ್‌ ಮುಂತಾದ ಸಂಸ್ಥೆಗಳು ಕವಿಗೋಷ್ಠಿ, ವಿಚಾರಸಂಕಿರಣ, ಸಂವಾದಗೋಷ್ಠಿ, ಕಥಾವಾಚನ, ಪುಸ್ತಕ ಪ್ರದರ್ಶನ, ವಿಶೇಷ ಉಪನ್ಯಾಸ, ಸದಸ್ಯತ್ವ ನೋಂದಣಿ ಕಾರ್ಯಕ್ರಮ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ “ಓದುವ ಸಂಸ್ಕೃತಿ’ಯನ್ನು ಬೆಳೆಸಲು ರಚನಾತ್ಮಕ ಪ್ರಯತ್ನಗಳನ್ನು ಮಾಡುತ್ತವೆ. ಸ್ಥಳೀಯ ಮಟ್ಟದಿಂದ ತೊಡಗಿ ಜಾಗತಿಕ ಮಟ್ಟದವರೆಗಿನ ಪ್ರಕಾಶಕರ ಒಕ್ಕೂಟಗಳ ಬಗ್ಗೆ ಒಂದು ಸಾಂದರ್ಭಿಕ ಲೇಖನ ಇಲ್ಲಿದೆ…

ಸುಮಾರು 60 ದೇಶಗಳ 70 ವಿವಿಧ ಪುಸ್ತಕ ಪ್ರಕಾಶನ ಸಂಸ್ಥೆಗಳ ಒಕ್ಕೂಟವಾಗಿರುವ “ಅಂತಾರಾಷ್ಟ್ರೀಯ ಪ್ರಕಾಶಕರ ಸಂಘ’ವು ಬೌದ್ಧಿಕ ಆಸ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ಸಂರಕ್ಷಿಸಲು ಈಗ ಕಾರ್ಯಬದ್ಧವಾಗಿದೆ. ಇದು ವಿಶ್ವದ ಸಾವಿರಾರು ಪ್ರಕಾಶನ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಶ್ವದ ಅತ್ಯಂತ ದೊಡ್ಡ ಸಂಸ್ಥೆಯಾಗಿದೆ. ಇದರಲ್ಲಿ 5.6 ಬಿಲಿಯನ್‌ ಜನಪ್ರತಿನಿಧಿಗಳಿದ್ದಾರೆ. ಅಷ್ಟೇ ಅಲ್ಲ , 1896ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಅತಿ ಪುರಾತನ ಸಂಸೆೆ§ಗಳಲ್ಲಿ ಒಂದೆಂದು ಹೆಸರು ಪಡೆದಿದೆ. ಜಾಗತಿಕ ನೆಲೆಯಲ್ಲಿ ಲೇಖಕರ ಮತ್ತು ಕಲಾವಿದರ ಬೌದ್ಧಿಕ ಆಸ್ತಿಯ ರಕ್ಷಣೆ ಹಾಗೂ ಮನುಷ್ಯನ ವಿಶಿಷ್ಟ, ಮೂಲಭೂತ ಆವಶ್ಯಕತೆಗಳÇÉೊಂದಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಸಾರಲು, ಸಂರಕ್ಷಿಸಲು ಈಗಲೂ ಕ್ರಿಯಾಶೀಲವಾಗಿದೆ ಈ ಸಂಸ್ಥೆ. ಎರಡು ವರ್ಷಗಳಿಗೊಮ್ಮೆ ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ವಿಶ್ವ ಪ್ರಕಾಶಕರ ಅಧಿವೇಶನಗಳನ್ನು ಆಯೋಜಿಸುವ ಮೂಲಕ ಸದಸ್ಯ ಪ್ರಕಾಶನ ಸಂಸ್ಥೆಗಳು ಜಾಗತಿಕವಾಗಿ ಎದುರಿಸುತ್ತಿರುವ ಸಮಸ್ಯೆಗಳ ಕಡೆಗೆ ಗಮನ ಸೆಳೆಯುವುದು, ಕೃತಿ ಚೌರ್ಯ ತಡೆಗಟ್ಟುವುದು, ಗ್ರಂಥ ಸ್ವಾಮ್ಯಕ್ಕೆ ಧಕ್ಕೆ ಬಾರದ ಹಾಗೆ ಕಾರ್ಯಯೋಜನೆಗಳನ್ನು ರೂಪಿಸುವುದು, ಪುಸ್ತಕೋದ್ಯಮವನ್ನು ಆಧುನಿಕ ವ್ಯವಸ್ಥೆಗೆ ಸಜ್ಜುಗೊಳಿಸುವುದು, ಓದುವ ವರ್ಗದ ಹಿತಾಸಕ್ತಿಗಳನ್ನು ಕಾಯುವುದು ಹೀಗೆ ಒಟ್ಟು “ಪುಸ್ತಕ ಸಂಸ್ಕೃತಿ’ಯನ್ನು ಬೆಳೆಸಲು ಈ ಸಂಸ್ಥೆ ಸಹಕಾರಿಯಾಗಿದೆ. ಅಮೆರಿಕ, ಸೌದಿ ದೇಶಗಳು, ಜಪಾನ್‌, ಆಫ್ರಿಕಾದ  ದೇಶಗಳೂ ಸೇರಿದಂತೆ ಹಲವು ರಾಷ್ಟ್ರಗಳ ಪ್ರಕಾಶನ ಸಂಸ್ಥೆಗಳನ್ನು ಸದಸ್ಯರನ್ನಾಗಿ ಹೊಂದಿದೆ. ಜಿನೀವಾ (ಸ್ವಿಡ್ಜರ್‌ಲ್ಯಾಂಡ್‌)ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಯ ಪ್ರಸ್ತುತ ಅಧ್ಯಕ್ಷರು ಡಾ. ಮಿಚಿಲ್‌ ಕೋಲ್‌ವುನ್‌ ಮತ್ತು  ಜೋಸ್‌ ಬಾರ್ಚಿನೋ ಅವರು ಕಾರ್ಯದರ್ಶಿಯಾಗಿದ್ದಾರೆ. 
“ಫೆಡರೇಷನ್‌ ಆಫ್ ಇಂಡಿಯನ್‌ ಪಬ್ಲಿಶರ್ಸ್‌’ (ಎಫ್ಐಪಿ) ವಿಶ್ವ ಪ್ರಕಾಶಕರ ಸಂಘದ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಸಂಸ್ಥೆಯಾಗಿದ್ದು ದಕ್ಷಿಣ ಏಷ್ಯಾದ ಕೇಂದ್ರವಾಗಿಯೂ ಮಾನ್ಯತೆ ಪಡೆದಿದೆ. ಇದು 1992ರಲ್ಲಿ ವಿಶ್ವ ಪ್ರಕಾಶಕರ ಅಧಿವೇಶನವನ್ನು ದೆಹಲಿಯಲ್ಲಿ ಆಯೋಜಿಸಿ, ಅತ್ಯುತ್ತಮ ಅಧಿವೇಶನವೆನ್ನುವ ಕೀರ್ತಿಗೆ ಪಾತ್ರವಾಗಿತ್ತು. ಫೆಬ್ರವರಿ 2018ರಲ್ಲಿ ನಡೆಯುವ ಅಧಿವೇಶನವನ್ನೂ ಆಯೋಜಿಸುವ ಅವಕಾಶವನ್ನು ಎರಡನೆಯ ಬಾರಿಗೆ ಎಫ್ಐಪಿ ಪಡೆದಿದೆ.
ಭಾರತದಲ್ಲಿ ಪ್ರಕಾಶಕರ ಸಂಘಗಳು 
ಭಾರತದಲ್ಲಿ ಕೂಡ ಪುಸ್ತಕೋದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಅನೇಕ ಪ್ರಕಾಶಕರ ಸಂಘಗಳು ಈ ಹೊತ್ತಿಗೂ ಕ್ರಿಯಾಶೀಲವಾಗಿವೆ. “ಭಾರತೀಯ ಪ್ರಕಾಶಕರ ಮತ್ತು ಪುಸ್ತಕ ಮಾರಾಟಗಾರರ ಸಂಘ (ಎಫ್ಪಿಬಿಎ)ವು 60 ವರ್ಷಗಳಿಂದ ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದೆ. ಸುಮಾರು 4,000 ಪ್ರಕಾಶನ ಸಂಸ್ಥೆಗಳನ್ನು ಸದಸ್ಯರನ್ನಾಗಿ ಹೊಂದಿರುವ ಈ ಸಂಸ್ಥೆ, ಪುಸ್ತಕ ಮೇಳಗಳನ್ನು ಏರ್ಪಡಿಸುವುದು, ಸರ್ಕಾರದ ಜೊತೆ ಸಂಪರ್ಕದಲ್ಲಿದ್ದು ಕಾನೂನು ತಿದ್ದುಪಡಿಗಳಿಗೆ ಚರ್ಚೆ-ಸಂವಾದದ ಮೂಲಕ ಸಹಾಯ ಮಾಡುವುದು, ಪ್ರತಿವರ್ಷ ಪ್ರಾಂತೀಯ ಭಾಷೆಗಳು ಸೇರಿದಂತೆ ಭಾರತದ ವಿವಿಧ ಭಾಷೆಗಳ ಅತ್ಯುತ್ತಮ ವಿನ್ಯಾಸದ ಪುಸ್ತಕಗಳಿಗೆ ಬಹುಮಾನಗಳನ್ನು ನೀಡುವುದು (ನವಕರ್ನಾಟಕ, ಪ್ರಿಸಮ್‌, ಗೀತಾ ಬುಕ್‌ ಹೌಸ್‌ ಪ್ರಕಾಶನ ಸಂಸ್ಥೆಗಳ ಪ್ರಕಟನೆಗಳು ಈಗಾಗಲೇ ಇಂಥ ಹಲವು  ಪ್ರಶಸ್ತಿಗಳನ್ನು ಗಳಿಸಿವೆ) ಪುಸ್ತಕೋದ್ಯಮಕ್ಕೆ ಅನುಪಮ ಸೇವೆ ಸಲ್ಲಿಸಿದ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವುದು, ಪ್ರಕಾಶಕರ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು ಮುಂತಾದವುಗಳು ಈ ಸಂಸ್ಥೆಯ ಕಾರ್ಯಯೋಜನೆಗಳಲ್ಲಿ ಸೇರಿವೆ. ಸುನಿಲ್‌ ಸಚ್‌ದೇವ್‌ ಅಧ್ಯಕ್ಷರಾಗಿ¨ªಾರೆ. ಪ್ರದೀಪ್‌ ಅರೋರಾ ಗೌರವ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿ¨ªಾರೆ. ದೇಶದ ನಾಲ್ಕೂ ಭಾಗವನ್ನು ಪ್ರತಿನಿಧಿಸಲು ನಾಲ್ಕು ಜನ ಉಪಾಧ್ಯಕ್ಷರನ್ನೂ, (ದಕ್ಷಿಣ ಭಾರತವನ್ನು ಪ್ರತಿನಿಧಿಸುತ್ತಿರುವವರು ಸಪ್ನಾ ಬುಕ್‌ ಹೌಸ್‌ನ ನಿತಿನ್‌ ಎಸ್‌. ಶಾ) ಕಾರ್ಯಕ್ರಮಗಳ ಆಯೋಜನೆ ಸಮಿತಿ, ಪ್ರಶಸ್ತಿ ಆಯ್ಕೆ ಸಮಿತಿ ಮುಂತಾದ ತಜ್ಞ ಪಡೆಯನ್ನು ಹೊಂದಿದೆ.
ಭಾರತೀಯ ಪ್ರಕಾಶಕರ ಒಕ್ಕೂಟ (ಎಫ್ಐಪಿ)ವು ತಮ್ಮ “ಹಿಂದ್‌ ಪಾಕೆಟ್‌’ ಪುಸ್ತಕಗಳ ಮೂಲಕ ಜಾಗತಿಕ‌ ಮಟ್ಟದಲ್ಲಿ ಪುಸ್ತಕ ಪ್ರಕಾಶನಕ್ಕೆ ಬೇರೆಯದೇ ತಿರುವನ್ನು ನೀಡಿದ ದೀನಾನಾಥ ಮಲ್ಹೋತ್ರ ಅವರ ಮುಂದಾಳತ್ವದಲ್ಲಿ ರೂಪುಗೊಂಡ ಈ ಸಂಸ್ಥೆಯಾಗಿದೆ. ಈ ಹೊತ್ತಿಗೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಗುಣಮಟ್ಟದ ಪುಸ್ತಕಗಳ ಪ್ರಕಟನೆಗೆ ಉತ್ತೇಜನ ನೀಡುತ್ತ ಬಂದಿದೆ. ಈ ವರ್ಷ ನಮ್ಮ “ಅಭಿನವ’ ಪ್ರಕಾಶನದ ದ ಮೂರು ಪುಸ್ತಕಗಳಿಗೆ “ಪುಸ್ತಕ ಸೊಗಸು’ ಬಹುಮಾನ ಬಂದಿದೆ. ಅನೇಕ ವಿಚಾರ ಸಂಕಿರಣಗಳು, ಹೊಸ ಪ್ರಕಾಶಕರಿಗೆ ತರಬೇತಿ ಶಿಬಿರಗಳನ್ನು ನಿರಂತರವಾಗಿ ನಡೆಸುತ್ತ  ಬಂದಿದೆ. ಪ್ರತಿವರ್ಷ ಅತ್ಯುತ್ತಮ ವಿನ್ಯಾಸದ ಪುಸ್ತಕಗಳಿಗೆ ಪ್ರಶಸ್ತಿ ನೀಡುವುದರ ಜೊತೆಗೆ ವಿವಾದಾತ್ಮಕ ಕೃತಿ ಹಾಗೂ ಬೆದರಿಕೆ ಇದ್ದರೂ ನಿರ್ಭೀತಿಯಿಂದ ಪುಸ್ತಕ ಪ್ರಕಟಿಸುವ ಪ್ರಕಾಶನ ಸಂಸ್ಥೆಗೆ “ಪ್ರೀಡಂ ಟು ಪಬ್ಲಿಶ್‌ ಪ್ರಶಸ್ತಿ’, “ಮಹಿಳಾ ಮತ್ತು ಯುವ ಪ್ರಕಾಶಕ’ ಪ್ರಶಸ್ತಿಗಳನ್ನು ನೀಡುತ್ತಿದೆ. ಪ್ರತಿವರ್ಷ ದೆಹಲಿಯಲ್ಲಿ 1995ರಿಂದ “ದೆಹಲಿ ಪುಸ್ತಕ ಮೇಳ’ ಮತ್ತು “ವಿಶ್ವ ಪುಸ್ತಕ ಮೇಳ’ಗಳನ್ನು ಆಯೋಜಿಸುತ್ತ ಬಂದಿದೆ. ಕಾಪಿರೈಟ್‌ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಾಗ ತಜ್ಞ ನ್ಯಾಯವಾದಿಗಳ ಸಹಾಯ ಪಡೆದು ಲೇಖಕರ ಮತ್ತು ಪ್ರಕಾಶಕರ ಹಿತ ಕಾಯುವಲ್ಲಿ ವಹಿಸಿದ ಪಾತ್ರವೂ ದೊಡ್ಡದು. ಇತ್ತೀಚೆಗೆ ಲೇಖಕರಿಗೆ ಪ್ರಕಾಶಕರು ಕೊಡುವ ಗೌರವ ಧನದ ಮೇಲೆ ಶೇ. 18ರಷ್ಟು ಜಿಎಸ್‌ಟಿ ಕಟ್ಟಬೇಕೆಂಬ ಕೇಂದ್ರ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಎಫ್ಐಪಿ ಎಲ್ಲ ರಾಜ್ಯಗಳ ಪ್ರಕಾಶಕ ಸಂಘಟನೆಗಳ ಸಹಕಾರದಿಂದ ತುಂಬ ಆಸಕ್ತಿ ವಹಿಸಿ ಜಿಎಸ್‌ಟಿ ಮಂಡಲಿಗೆ ಮಾರ್ಚ್‌ 2018ರ ವರೆವಿಗೆ ಈ ಕರದಿಂದ ವಿನಾಯಿತಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಪುಸ್ತಕ ಮುದ್ರಣಕ್ಕೆ ಇದ್ದ ಶೇ. 18 ಜಿಎಸ್‌ಟಿ ಬದಲಿಗೆ ಶೇ. 5ಕ್ಕೆ ನಿಗದಿ ಮಾಡಲಾಗಿದೆ.
ಶೈಕ್ಷಣಿಕ  ಪುಸ್ತಕಗಳ ಸಮಿತಿ, ಕಾಪಿರೈಟ್‌ ಸಮಿತಿ, ವಿದೇಶಿ ಮಾರುಕಟ್ಟೆ  ಸಮಿತಿ ಮುಂತಾದ ಉಪಸಮಿತಿಗಳ ಮೂಲಕ ತನ್ನ ಕ್ರಿಯಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದೆ. ಎರಡು ತಿಂಗಳಿಗೊಮ್ಮೆ  ಐnಛಜಿಚn ಆಟಟk ಐnಛusಠಿry ಎಂಬ ಪತ್ರಿಕೆಯನ್ನು ಹೊರತರುತ್ತಿದೆ. ಈ ಸಂಘಕ್ಕೆ ಕರ್ನಾಟಕದ ಮನೋಹರ ಗ್ರಂಥಮಾಲೆ, ನವಕರ್ನಾಟಕ ಪಬ್ಲಿಕೇಷನ್ಸ್‌  ಪ್ರೈ ಲಿ., ಅಭಿನವ ಮುಂತಾದ ಸಂಸ್ಥೆಗಳೂ ಕೂಡ ಸದಸ್ಯತ್ವ ಪಡೆದಿದೆ. “ಕರ್ನಾಟಕ ಪ್ರಕಾಶಕರ ಸಂಘ’ವೂ ಇದರ ಖಾಯಂ ಸದಸ್ಯತ್ವ ಹೊಂದಿದೆ.
ಕರ್ನಾಟಕದಲ್ಲಿ ಪ್ರಕಾಶಕರ ಸಂಘಗಳು
ಕರ್ನಾಟಕದಲ್ಲಿ ಹಲವಾರು ಸಹಕಾರಿ ಪ್ರಕಾಶನ ಸಂಸ್ಥೆಗಳು ಪುಸ್ತಕ ಪ್ರಕಟನೆಗೆ ಮಾತ್ರವಲ್ಲದೆ ಓದುಗರ ಅಭಿರುಚಿಯನ್ನು ಹೆಚ್ಚಿಸುವಲ್ಲಿ ಮಾಡಿದ ಪಾತ್ರ ಹಿರಿದು. ಅತಿ ಹೆಚ್ಚು ಲೇಖಕರೇ ಪ್ರಕಾಶಕರು ಅಥವಾ ಹವ್ಯಾಸಿ ಪ್ರಕಾಶಕರಾಗಿದ್ದ ದಿನಗಳಲ್ಲಿ ಕೂಡ ಬಾಪ್ಕೋ ಪ್ರಕಾಶನದ ಅನಂತ್‌, ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಎಚ್‌. ಆರ್‌. ದಾಸೇಗೌಡ, ಕಮಲೇಶ್‌ ಮುಂತಾದವರು “ಕರ್ನಾಟಕ ಪ್ರಕಾಶಕರ ಸಂಘ’ವನ್ನು ಕ್ರಿಯಾಶೀಲವಾಗಿಸಿದವರಲ್ಲಿ ಮುಖ್ಯರು. ಅದಕ್ಕೂ ಹಿಂದೆ ಗೋಪಾಲಕೃಷ್ಣ ಅಡಿಗರೂ 1975ರಲ್ಲಿ ಈ ಸಂಘದ ಸ್ಥಾಪನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಮುಖ್ಯ. ಎಸ್‌. ಮಂಚಯ್ಯ, ಎಸ್‌. ವಿ. ಶ್ರೀನಿವಾಸರಾವ್‌, ರಮಾಕಾಂತ ಜೋಶಿ ಮುಂತಾದ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದು ಈಗ ಪ್ರಕಾಶ ಕಂಬತ್ತಳ್ಳಿ ಅವರ ಅಧ್ಯಕ್ಷತೆಯಲ್ಲಿ ಪ್ರಯೋಗಶೀಲ ಚಟುವಟಿಕೆಗಳ ಮೂಲಕ ಕ್ರಿಯಾಶೀಲವಾಗಿದೆ.
ಅಕ್ಷರ ಪ್ರಕಾಶನ, ಮನೋಹರ ಗ್ರಂಥಮಾಲೆ, ನವಕರ್ನಾಟಕ ಪಬ್ಲಿಕೇಷನ್ಸ್‌ ಪ್ರೈ ಲಿ, ಪುಸ್ತಕ ಪ್ರಕಾಶನ, ಅಂಕಿತ ಪುಸ್ತಕ‌, ಕಾಮಧೇನು ಪ್ರಕಾಶನ, ಸಪ್ನಾ ಬುಕ್‌ ಹೌಸ್‌, ಶೃಂಗಾರ ಪ್ರಕಾಶನ, ಅಭಿನವ, ಅಭಿರುಚಿ, ಸಿರಿವರ ಪ್ರಕಾಶನ, ಪಲ್ಲವ ಪ್ರಕಾಶನ‌, ಲಡಾಯಿ ಪ್ರಕಾಶನ, ಇಳಾ, ಅನುಪಮ ಪ್ರಕಾಶನ, ಛಂದ ಪುಸ್ತಕ ಮುಂತಾದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಈ ಸಂಸ್ಥೆಯ ಸದಸ್ಯತ್ವ ಪಡೆದಿವೆ. 
ಎಫ್ಐಪಿಯ ಸಹಯೋಗದೊಂದಿಗೆ 1995ರಲ್ಲಿ ದಕ್ಷಿಣ ಭಾರತೀಯಮಟ್ಟದ ಎರಡು ದಿನಗಳ ಅಧಿವೇಶ‌ನ ಹಾಗೂ  ಕಾಪಿರೈಟ್‌ ಕಾಯ್ದೆ ಬಗೆಗೆ ಕಮ್ಮಟವನ್ನು ಬೆಂಗಳೂರಿನಲ್ಲಿ ನಡೆಸಿದ ಕೀರ್ತಿ ಈ ಸಂಘದ್ದು. ಜೊತೆಗೆ ವಿಶ್ವಪುಸ್ತಕ ಮೇಳದಲ್ಲಿ ಕನ್ನಡ ಮಳಿಗೆಯನ್ನು ತೆರೆದು ದೆಹಲಿಯ ಓದುಗರು ಮತ್ತು ಅಂತಾರಾಷ್ಟ್ರೀಯ ಗ್ರಂಥಾಲಯಗಳಿಗೆ ಕನ್ನಡ ಪುಸ್ತಕಗಳು ಮುಟ್ಟುವಂತೆ ಮಾಡಿದ ಪ್ರಯತ್ನಗಳು ಕೂಡ ಗಮನೀಯ. ಇದರ ಜೊತೆಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ “ಏಕ ಗವಾಕ್ಷಿ ಯೋಜನೆ’ಯಲ್ಲಿ ಪುಸ್ತಕ ಖರೀದಿ, ಪುಸ್ತಕಗಳ ಬೆಲೆ ನಿಗದಿ, ಕನ್ನಡ ಪುಸ್ತಕ ಪ್ರಾಧಿಕಾರದ ಕೆಲವು ಯೋಜನೆಗಳು ಜಾರಿಗೆ ಬರಲು ಕರ್ನಾಟಕ ಪ್ರಕಾಶಕರ ಸಂಘ ಶ್ರಮಿಸಿದೆ. ಪ್ರತಿವರ್ಷ ವಿಶ್ವ ಪುಸ್ತಕ ದಿನಾಚರಣೆಯ ಅಂಗವಾಗಿ ಹಿರಿಯ ಪ್ರಕಾಶಕರು/ಲೇಖಕರು/ಪುಸ್ತಕ ಪರಿಚಾರಕರನ್ನು ಗೌರವಿಸುತ್ತಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ, ಸಾಹಿತ್ಯ ಅಕಾಡೆಮಿಯ ಸಹಯೋಗಗಳೊಂದಿಗೆ ಪುಸ್ತಕ ಪ್ರಕಾಶನ ಕಾರ್ಯಶಿಬಿರಗಳು, ವಿಚಾರ ಸಂಕಿರಣಗಳನ್ನು ಆಯೋಜಿಸುತ್ತಿದೆ. ಸರ್ಕಾರವೂ ಕೂಡ ಸಂಘದ ಕಾರ್ಯಕ್ಷಮತೆಯನ್ನು ಗುರುತಿಸಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯಲ್ಲಿ ಪ್ರತಿನಿಧಿಯನ್ನಾಗಿ ನಿಯಮಿಸಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಪ್ರತಿನಿಧಿಯನ್ನಾಗಿ ನಿಯಮಿಸುತ್ತದೆ. ಆಗಾಗ ಎದುರಾಗುವ ಪುಸ್ತಕ ಪ್ರಕಾಶಕರ ಸಮಸ್ಯೆಗಳನ್ನು ಹಲವು ವೇದಿಕೆಗಳಲ್ಲಿ ಸಮರ್ಥವಾಗಿ ಮಂಡಿಸಿ ಪುಸ್ತಕೋದ್ಯಮದ ಬೆಳವಣಿಗೆಗೆ ಸಹಕಾರಿಯಾಗಿದೆ.
ಕರ್ನಾಟಕ ಬರಹಗಾರರ ಮತ್ತು ಪ್ರಕಾಶಕರ ಸಂಘ
“ಕರ್ನಾಟಕ ಬರಹಗಾರರ ಮತ್ತು ಪ್ರಕಾಶಕರ ಸಂಘ’ವು ಲೇಖಕರು ಮತ್ತು ಸಮರ್ಥ ಸಂಘಟಕರಾದ ನಿಡಸಾಲೆ ಪುಟ್ಟಸ್ವಾಮಯ್ಯನವರ ಅಧ್ಯಕ್ಷತೆಯಲ್ಲಿ ಹಲವಾರು ಹೊಸ ಪ್ರಯತ್ನಗಳಿಗೆ ನಾಂದಿ ಹಾಡಿದೆ. ಮುಖ್ಯವಾಗಿ ಯುವ ಬರಹಗಾರರನ್ನು ಪ್ರೋತ್ಸಾಹಿಸಲು ಸಂಘ ಪ್ರಕಟಿಸಿದ ಪುಸ್ತಕಗಳು ಹಾಗೂ ಅಶಕ್ತ ಬರಹಗಾರರಿಗೆ ನೆರವಿನ ಹಸ್ತ, ಹಿರಿಯ ಲೇಖಕರನ್ನು ಗೌರವಿಸುವ ಕೆಲಸವನ್ನು ಮಾಡುತ್ತಾ ಬಂದಿದೆ. ಮಕ್ಕಳಲ್ಲಿ ಪುಸ್ತಕ ಅಭಿರುಚಿಯನ್ನು ಹೆಚ್ಚಿಸಲು “ನೂರು ಶಾಲೆಗೆ ನೂರು ಪುಸ್ತಕ’ ಎಂಬ ಯೋಜನೆಯನ್ನು ಹಮ್ಮಿಕೊಂಡಿದ್ದು ಒಂದು ಮೈಲುಗಲ್ಲು.  ಸೃಷ್ಟಿ ಪ್ರಕಾಶನ, ವಸಂತ ಪ್ರಕಾಶನ, ದೇಸಿ ಪುಸ್ತಕ, ಅನ್ನಪೂರ್ಣ ಪ್ರಕಾಶನ, ಅಕ್ಷಯ ಪ್ರಕಾಶನ, ಭಾಗ್ಯಲಕ್ಷ್ಮೀ ಪ್ರಕಾಶನ, ಹೇಮಂತ ಸಾಹಿತ್ಯ, ಐಬಿಎಚ್‌ ಪ್ರಕಾಶನ ಮುಂತಾದ ಪ್ರಕಾಶನ ಸಂಸ್ಥೆಗಳು  ಸದಸ್ಯ ಪ್ರಕಾಶನ ಸಂಸ್ಥೆಯಾಗಿವೆ. ಮೈಸೂರಿನ ಸಂವಹನ ಸಂಸ್ಥೆಯ ಮಾಲೀಕರಾದ ಡಿ. ಎನ್‌. ಲೋಕಪ್ಪನವರು ತಮ್ಮ ಗೆಳೆಯರ ಸಹಕಾರದಿಂದ ಪ್ರಕಾಶಕರ ಸಂಘವನ್ನು ಆರಂಭಿಸಿದರಾದರೂ ಮುನ್ನಡೆಸಲು ಸಾಧ್ಯವಾಗದೆ  ಪ್ರಕಾಶಕರ ಸಂಘದ ಜೊತೆ ವಿಲೀನಗೊಳಿಸಿದರು. ಅಷ್ಟೇ ಅಲ್ಲದೆ, ಉತ್ತರಕರ್ನಾಟಕ ಬರಹಗಾರರ ಮತ್ತು ಪ್ರಕಾಶಕರ ಸಂಘವೂ ಅಸ್ತಿತ್ವದಲ್ಲಿದೆ. ಹಾಗೆಯೇ ಬೆಂಗಳೂರು ಪುಸ್ತಕ ಮಾರಾಟಗಾರರ ಮತ್ತು ಪ್ರಕಾಶಕರ ಸಂಘವು ಪ್ರತಿಷ್ಠಿತ ಬೆಂಗಳೂರು ಪುಸ್ತಕೋತ್ಸವವನ್ನು  ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಜೊತೆಗೆ ಎಲ್ಲ ಪ್ರಕಾಶಕರು ಮತ್ತು ಪ್ರಕಾಶಕರ ಸಂಘಟನೆಗಳನ್ನು ಒಂದುಗೂಡಿಸಿ ಎಸ್‌. ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿ¨ªಾಗ ಸರ್ಕಾರ ಪುಸ್ತಕಗಳ ಮೇಲೆ ವಿಧಿಸಿದ ತೆರಿಗೆಯನ್ನು ಹಿಂಪಡೆಯುವಲ್ಲಿ ಯಶಸ್ವಿಯಾಯಿತು. ಶಿರಸಿ ಮತ್ತು ಗುಲಬರ್ಗಾಗಳಲ್ಲಿ ಸಹಕಾರಿ ಪ್ರಕಾಶನ ಸಂಘಗಳು ಇವತ್ತೂ ಶ್ಲಾಘನೀಯ ಕೆಲಸಗಳನ್ನು ಮಾಡುತ್ತಿವೆ.
ಪ್ರಕಾಶಕರ ಸಂಘಗಳ ಉದ್ದೇಶ ಮತ್ತು ಜವಾಬ್ದಾರಿ 
ಪುಸ್ತಕ ಪ್ರಕಾಶನ ಸಂಸ್ಥೆಗಳಿಗೆ ಹಲವು ಜವಾಬ್ದಾರಿಗಳಿವೆ. ಆಗಾಗ  ಸರ್ಕಾರ ಹಲವಾರು ಕಾಯಿದೆಗಳನ್ನು, ನೀತಿ ನಿಯಮಾವಳಿಗಳನ್ನು ರೂಪಿಸಿಬಿಡುತ್ತದೆ. ಅವು ಎಷ್ಟೋ ಬಾರಿ ಪುಸ್ತಕೋದ್ಯಮದ ಹಿನ್ನೆಡೆಗೆ ಕಾರಣವಾಗಬಹುದು. ಅಂಥ ಸಂದರ್ಭದಲ್ಲಿ ಪ್ರಕಾಶಕರ ಸಂಘಗಳು ಸರ್ಕಾರದ ಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಕಾಯ್ದೆಗಳ ಲೋಪದೋಷಗಳನ್ನು ವಿವರಿಸುವುದು ಆದ್ಯ ಕರ್ತವ್ಯ. ಕರ್ನಾಟಕ ಸರಕಾರವು ಗ್ರಂಥಾಲಯ ಅಧಿನಿಯಮವನ್ನು ರಚಿಸಿ ಅರ್ಧ ದಶಕ ಕಳೆದಿದ್ದರೂ ಅದನ್ನು ತಿದ್ದುಪಡಿ ಮಾಡುವ ಗೋಜಿಗೆ ಹೋಗಿಲ್ಲ, ಚಿ. ಶ್ರೀನಿವಾಸರಾಜು ಅವರ ಕನಸಿನ ಕೂಸಾದ -ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಎಸ್‌. ಜಿ. ಸಿದ್ಧರಾಮಯ್ಯನವರು ಅಧ್ಯಕ್ಷರಾಗಿ¨ªಾಗ ಸರ್ಕಾರಕ್ಕೆ ಸಲ್ಲಿಸಲಾದ ಪುಸ್ತಕ ನೀತಿಯನ್ನು ಸರ್ಕಾರ ಇನ್ನೂ ಅಂಗೀಕರಿಸಿಲ್ಲ. ಅಷ್ಟೇ ಏಕೆ, ಪ್ರಕಾಶ‌ಕರ ಸಂಘಗಳ ಒತ್ತಾಯದ ಮೇರೆಗೆ ಕನ್ನಡ ಪುಸ್ತಕಗಳಿಗೆ ಬೆಲೆ ನಿಗದಿ ಮಾಡಿ ಹತ್ತು ವರ್ಷಗಳು ಕಳೆದಿದ್ದರೂ ಅದನ್ನು ಪರಿಷ್ಕರಿಸುವ ಪ್ರಯತ್ನವನ್ನೂ ಸರ್ಕಾರ ಮಾಡಿಲ್ಲ. ಕನ್ನಡ ಪುಸ್ತಕ ಪ್ರಕಾಶನಕ್ಕೆ ಅನುಕೂಲವಾಗುವ ಮತ್ತು ಸುಲಭವಾದ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಲು ಇನ್ನೂ ಸಾಧ್ಯವಾಗಿಲ್ಲ. ಎÇÉೆಡೆ ಇ-ಪುಸ್ತಕಗಳ (ಡಿಜಿಟಲ್‌ ಪಬ್ಲಿಷಿಂಗ್‌) ಬಗ್ಗೆ ಮಾತುಗಳು ಕೇಳಿಬರುತ್ತಿದ್ದರೂ ಇ-ಪುಸ್ತಕಗಳನ್ನು ಖರೀದಿಸುವ ಮತ್ತು ವಿತರಿಸುವ ಬಗೆಗೆ ಯಾವುದೇ ನೀತಿ-ನಿಯಮಾವಳಿಗಳು ರೂಪಿತವಾಗಿಲ್ಲ.  ಇಂಥ ಸಮಸ್ಯೆಗಳ ಬಗ್ಗೆ ಎಲ್ಲ ಪ್ರಕಾಶನ ಸಂಸ್ಥೆಗಳು, ಲೇಖಕರು, ಪ್ರಕಾಶಕರು ಒಟ್ಟಾಗಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಿದೆ.
ಪ್ರಕಾಶಕರ ಸಂಘದ ಮತ್ತೂಂದು ಮುಖ್ಯ ಕೆಲಸವೆಂದರೆ ಪುಸ್ತಕ ಮೇಳಗಳನ್ನು ಆಯೋಜಿಸುವುದು. ಆ ಮೂಲಕ ಓದುಗ ಮತ್ತು ಪ್ರಕಾಶಕರ ಮಧ್ಯೆ ಸಂಬಂಧವೇರ್ಪಡುವಂತೆ ಮಾಡುವುದು. ಕರ್ನಾಟಕ ಪ್ರಕಾಶಕರ ಸಂಘವು ಅರಮನೆಯ ಬೆಂಗಳೂರು ಪುಸ್ತಕ ಮೇಳ ಮತ್ತು ಹಲವು ಕಡೆಗಳಲ್ಲಿ ನಡೆಯುವ ಪುಸ್ತಕ ಮೇಳಗಳಲ್ಲಿ ಕನ್ನಡ ಪುಸ್ತಕಗಳಿಗೆ ಮಾನ್ಯತೆ ಸಿಗುವ ಹಾಗೆ ಮಾಡಿದ್ದು ಕೂಡ ಒಂದು ಉತ್ತಮ ಪ್ರಯತ್ನ. ಸಾಹಿತ್ಯ ಪರಿಷತ್ತಿನ ಘಟಕಗಳನ್ನು ಸಮರ್ಥವಾಗಿ ಬಳಸಿಕೊಂಡು  ಕರ್ನಾಟಕದ ಎಲ್ಲ  ಜಿÇÉೆ ಮತ್ತು ತಾಲ್ಲೂಕುಗಳಲ್ಲೂ ಪುಸ್ತಕ ಮೇಳಗಳನ್ನು ಆಯೋಜಿಸಲು ಅವಕಾಶವಿದ್ದು ಪ್ರಕಾಶಕರ ಸಂಘಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಬೇಕಿದೆ.

ನ. ರವಿಕುಮಾರ

ಟಾಪ್ ನ್ಯೂಸ್

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Exam

SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ

Pratika Rawal’s brilliant batting: A good start to the series against Ireland

INDWvsIREW: ಪ್ರತಿಕಾ ರಾವಲ್‌ ಭರ್ಜರಿ ಬ್ಯಾಟಿಂಗ್‌; ಐರ್ಲೆಂಡ್‌ ವಿರುದ್ದ ಸರಣಿ ಶುಭಾರಂಭ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

Mega Concert: Black ಮಾರ್ಕೆಟ್‌ ಟಿಕೆಟ್‌ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್‌ ವಜಾ

RSS is responsible for BJP’s victory in Maharashtra Assembly: Sharad Pawar

Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್‌ ಕಾರಣ: ಶರದ್‌ ಪವಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-poco

POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?

UP-Ma-ki-rasoi

Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!

Auto Draft

Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ

Sachin Panchal Case: CID interrogation of five including Raju Kapnoor

Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ

1-modi

Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.