ಸಿನೆಮಾ ಸಮಾಚಾರ: ಶುಭಾಶಯ


Team Udayavani, Apr 1, 2018, 7:30 AM IST

1.jpg

ಬಹುಶಃ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ಅತೀ ಹೆಚ್ಚು ವರ್ಷಗಳ ಕಾಲ ಯಾರಾದರೂ ನಟಿ ಇದ್ದಾರೆಂದರೆ, ಅದು ಶುಭಾ ಪೂಂಜ. ಇತ್ತೀಚೆಗಷ್ಟೇ ಅವರ ಅಭಿನಯದ ಗೂಗಲ್‌ ಎಂಬ ಚಿತ್ರ ಬಿಡುಗಡೆಯಾಗಿ, ಅವರ ಅಭಿನಯದ ಬಗ್ಗೆ ಒಂದಿಷ್ಟು ಒಳ್ಳೆಯ ಮಾತು ಕೇಳಿ ಬಂದಿತ್ತು. ಅದಲ್ಲದೆ, ಶುಭಾ ಕೈಯಲ್ಲಿ ಜಯಮಹಲ್‌, ನರಗುಂದ ಭಂಡಾಯ  ಸೇರಿದಂತೆ ಒಂದಿಷ್ಟು ಚಿತ್ರಗಳಿವೆ ಮತ್ತು ಆ ಪೈಕಿ ಜಯಮಹಲ್‌ ಎಂಬ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಒಂದು ಕಾಲದಲ್ಲಿ ಶುಭಾ ಪೂಂಜಾ ಎಂದರೆ ಮೊದಲು ನೆನಪಿಗೆ ಬರುತ್ತಿದ್ದುದು ಗ್ಲಾಮರ್‌ ಹುಡುಗಿ ಎಂದು. ಗ್ಲಾಮರ್‌ ವಿಷಯದಲ್ಲಿ ಹೆಚ್ಚು ಸುದ್ದಿಯಾದ ಕನ್ನಡದ ಕೆಲವೇ ಕೆಲವು ನಟಿಯರಲ್ಲಿ ಶುಭಾ ಕೂಡಾ ಒಬ್ಬರು. ಈ ಬಗ್ಗೆ ಶುಭಾಗೆ ಬೇಸರವೇನಿಲ್ಲ. ಅದರ ಬದಲು ಖುಷಿ ಇದೆ. “”ವೈಯಕ್ತಿಕವಾಗಿ ನನಗೆ ಗ್ಲಾಮರಸ್‌ ಆಗಿರಲು ಬಹಳ ಇಷ್ಟ. ಚಿಕ್ಕಂದಿನಿಂದಲೂ ನಾನು ಬಾಲಿವುಡ್‌ ನಟಿಯರನ್ನು ನೋಡಿ ಬೆಳೆದವಳು. ನಾನೂ ಈ ತರಹ ಕಾಸ್ಟೂéಮ್‌ ಹಾಕಬೇಕೆಂದು ಕನಸು ಕಂಡವಳು. ನಟಿಯಾಗಿ ಆ ಆಸೆಯನ್ನು ಈಡೇರಿಸಿಕೊಂಡಿದ್ದೇನೆ. ನಾನು ಚಿತ್ರರಂಗಕ್ಕೆ ಬಂದ ಕೆಲವು ವರ್ಷಗಳ ಕಾಲ ಗ್ಲಾಮರಸ್‌ ಆಗಿ ಕಾಣಿಸಿಕೊಂಡೆ. ಈಗಲೂ ಗ್ಲಾಮರಸ್‌ ಆಗಿ ಕಾಣಿಸಿಕೊಂಡರೆ ಅದರಲ್ಲಿ ಅರ್ಥವಿಲ್ಲ. ಯಾವ ಸಮಯದಲ್ಲಿ ಏನು ಮಾಡಬೇಕೋ ಅದನ್ನು ಮಾಡಬೇಕು. ಹಾಗಾಗಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡೆ ಮತ್ತು ಜನ ಕೂಡ ಇಷ್ಟಪಟ್ಟರು. ಒಂದು ವಯಸ್ಸು ದಾಟಿದ ನಂತರ ಹೇಗಿರಬೇಕೋ ಹಾಗಿರಬೇಕು. ಅದೇ ಕಾರಣಕ್ಕೆ ನಾನು ಅಭಿನಯಕ್ಕೆ ಹೆಚ್ಚು ಒತ್ತಿರುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೀನಿ” ಎನ್ನುತ್ತಾರೆ ಶುಭಾ ಪೂಂಜಾ.

ಶುಭಾ ಹೇಳುವಂತೆ ಈಗ ಅವರ ಪಾತ್ರಗಳ ಆದ್ಯತೆ ಬದಲಾಗಿದೆ. ಬಹುಶಃ ಕೋಟಿಗೊಂದ್‌ ಲವ್‌ಸ್ಟೋರಿ ಎಂಬ ಚಿತ್ರದಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದು ಬಿಟ್ಟರೆ, ಮಿಕ್ಕಂತೆ ಇತ್ತೀಚಿನ ಚಿತ್ರಗಳಲ್ಲಿ ಬೇರೆ ರೀತಿಯ ಪಾತ್ರಗಳ ಹುಡುಕಾಟದಲ್ಲಿದ್ದಾರೆ ಎಂದರೆ ತಪ್ಪೇನಿಲ್ಲ.  ಗೂಗಲ್‌ನಲ್ಲಿ ಗ್ಲಾಮರ್‌ ಇಲ್ಲದ ಸೀರಿಯಸ್‌ ಪಾತ್ರ ಮಾಡಿರುವ ಶುಭಾ, ಈಗ ನರಗುಂದ ಬಂಡಾಯದಲ್ಲೂ ಗಂಭೀರ ಪಾತ್ರ ಮಾಡಿದ್ದಾರೆ. ಮುಂದೆ ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡುವ ಆಲೋಚನೆಯೂ ಅವರಿಗಿದೆಯಂತೆ.

ಇನ್ನು ಶುಭಾ ತಮ್ಮ ಮುಂಬರುವ ಚಿತ್ರಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳುವುದರ ಜೊತೆಗೆ, ಇನ್ನೊಂದಿಷ್ಟು ಒಳ್ಳೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂದು ಎದರುನೋಡುತ್ತಿದ್ದಾರೆ. “”ನಾನು ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ನಾಯಕಿಯರಿಗೆ ಭವಿಷ್ಯ ಕಡಿಮೆ ಎಂದು ಹೇಳುತ್ತಿದ್ದರು. ಆದರೆ, ನನಗೆ ನನ್ನ ಮೇಲೆ ವಿಶ್ವಾಸವಿತ್ತು. ಕಲಾವಿದರಿಗೆ ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಮೇಲೆ ವಿಶ್ವಾಸವಿರಬೇಕು. ಒಂದೆರಡು ಸಿನಿಮಾ ಸೋತ ಕೂಡಲೇ ಕೆರಿಯರ್‌ ಮುಗಿದೇ ಹೋಯಿತು ಎಂದು ಸುಮ್ಮನಿರಬಾರದು. ಆ ವಿಷಯದಲ್ಲಿ ನಾನು ಬಂದಿದ್ದನ್ನು ಬಂದಂತೆ ಸ್ವೀಕರಿಸುತ್ತ ಸಾಗಿದೆ. ಅದರ ಪರಿಣಾಮವೇ ಇಷ್ಟೆಲ್ಲಾ ಚಿತ್ರಗಳಲ್ಲಿ ನಟಿಸುವುದಕ್ಕೆ ಸಾಧ್ಯವಾಗುತ್ತಿದೆ’ ಎನ್ನುತ್ತಾರೆ ಶುಭಾ ಪೂಂಜ.

ಟಾಪ್ ನ್ಯೂಸ್

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

12(2)

Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ

11

Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

23-bng

Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?

10

Kaup ಒಳಚರಂಡಿ ಸಮಸ್ಯೆ ಪರಿಹಾರಕ್ಕೆ ವಿಶೇಷ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.