ಸರ್ಕಸ್‌ ಸರ್ಕಸ್‌ ಫಾರೆ ಸರ್ಕಸ್‌


Team Udayavani, Apr 21, 2019, 6:00 AM IST

2

ಕಾಂಬೋಡಿಯಾದ ಈ ಸರ್ಕಸ್‌ ಕೇವಲ ಚಮತ್ಕಾರವಲ್ಲ, ಮಾನವೀಯ ಕಳಕಳಿಯ ಕಲಾಪ್ರದರ್ಶನವೂ ಹೌದು.

ಕಾಂಬೋಡಿಯಾದ ಸಿಯಾಮ್‌ರೀಪ್‌ಗೆ ಪ್ರವಾಸ ಹೋಗುವ ವಾರಕ್ಕೆ ಮುನ್ನವೇ ಅಲ್ಲಿಯ ಸರ್ಕಸ್‌ಗೆ ಟಿಕೆಟ್‌ ಬುಕ್‌ ಮಾಡಬೇಕು ಎಂದಾಗ ಎಲ್ಲಿಲ್ಲದ ಆಶ್ಚರ್ಯವಾಗಿತ್ತು. ರಷ್ಯನ್‌ ಸರ್ಕಸ್‌ಎಂದರೆ ಹೆಸರುವಾಸಿ. ಆದರೆ, ಕಾಂಬೋಡಿಯಾ ದೇಗುಲ, ಕಾಡು, ನದಿ, ಭತ್ತದ ಗ¨ªೆಗಳ ದೇಶ. ಹಾಗಿರುವಾಗ, ಇದೆಲ್ಲಿಯ ಸರ್ಕಸ್‌? ಆದರೆ, ಕಾಂಬೋಡಿಯಾದ ಏಕೈಕ ಸರ್ಕಸ್‌ ಕಂಪೆನಿ, ವಿಶ್ವದಲ್ಲೇ ಪ್ರಸಿದ್ಧವಾದುದು ಮತ್ತು ವಿಶಿಷ್ಟವಾದುದು; ಅದು ಫಾರೆ ಸರ್ಕಸ್‌!

ಬದುಕಿಗೆ ಹೊಸ ಬಣ್ಣ
1970ರಿಂದ 1990 ರವರೆಗೆ ಕಾಂಬೋಡಿಯಾದಲ್ಲಿ ಖ್ಮೆರ್‌ರೂಜ್‌ (ಕೆಂಪು ಖ್ಮೆರ್‌)
ಎಂಬ ಕಮ್ಯೂನಿಸ್ಟ್‌ ಚಳುವಳಿ ಸಕ್ರಿಯವಾಗಿತ್ತು. ಕೆಲಕಾಲ ದೇಶದ ಆಡಳಿತವೂ ಇವರ ¨ªಾಗಿತ್ತು. ಕ್ರಮೇಣ ಅಧಿಕಾರ ಕಳೆದುಕೊಂಡರೂ ಅಲ್ಲಲ್ಲಿ ಹೋರಾಟ ನಡೆಸುತ್ತಿದ್ದು ತೊಂಬತ್ತರ ದಶಕದಲ್ಲಿ ಪ್ರಭಾವ ಸಂಪೂರ್ಣ ಕಡಿಮೆಯಾಯಿತು. ಅಲ್ಲಿಯ ತನಕ ನಿರಾಶ್ರಿತರ ಶಿಬಿರದಲ್ಲಿದ್ದು , ನಂತರ ಮನೆಗೆ ಮರಳಿದ ಸಾಮಾನ್ಯಜನರು ಸಾವಿರಾರು. ಹಾಗೆ ಮನೆಗೆ ಮರಳಿದವರಲ್ಲಿ ಒಂಬತ್ತು ತರುಣರಿದ್ದರು. ಶಿಬಿರದಲ್ಲಿದ್ದಾಗ ದಂಗೆ, ಅವ್ಯವಸ್ಥೆ, ವೈಯಕ್ತಿಕ ನೋವು ಎಲ್ಲದರಿಂದ ಅವರು ತೀವ್ರವಾದ ಮಾನಸಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಆದರೆ, ಪರಿಸ್ಥಿತಿಯನ್ನು ಸಹಿಸದೇ ಬೇರೆ ದಾರಿ ಇರಲಿಲ್ಲ. ಆಗ ಕಂಡುಕೊಂಡ ಮಾಧ್ಯಮ ಕಲೆ.

ಶಿಬಿರದಲ್ಲಿ ಯಾರೋ ಕಲಿಸುತ್ತಿದ್ದ ಚಿತ್ರಕಲೆ ತರಗತಿಗೆ ಸೇರಿ ಮನಸ್ಸಿನ ನೋವು, ಹತಾಶೆಗೆ ಪರಿಹಾರ ಕಂಡುಕೊಂಡಿದ್ದರು. ನಿಜಕ್ಕೂ ಕುಂಚ ಅವರ ಬದುಕಿಗೆ ಹೊಸ ಬಣ್ಣ ತುಂಬಿತ್ತು. 1994ರಲ್ಲಿ ಶಿಬಿರದಿಂದ ಬಟ್ಟಾಂಬ್‌ಬಾಗ್‌ನಲ್ಲಿರುವ ಮನೆಗೆ ಮರಳಿದಾಗ ಅವರಿಗೆ ಕಂಡಿದ್ದು ಬೀದಿ-ಬೀದಿಗಳಲ್ಲಿ ಚಿಂದಿ ಆಯುವ ಮಕ್ಕಳು, ಕಾಡುವ ಬಡತನ. ತಾವು ಕಲಿತ ವಿದ್ಯೆಯನ್ನು ಈ ಮಕ್ಕಳಿಗೆ ಉಚಿತವಾಗಿ ಕಲಿಸಲು ಆರಂಭಿಸಿದರು. ಮಕ್ಕಳ ಪ್ರತಿಭೆ ಮತ್ತು ಉತ್ಸಾಹದಿಂದ ಉತ್ತೇಜನ ಪಡೆದು ಶಾಲಾಶಿಕ್ಷಣದ ಜತೆ ದೃಶ್ಯಕಲೆಗಳಾದ ನಾಟಕ, ಸಂಗೀತ, ನೃತ್ಯ ಮತ್ತು (ಕಲೆಯ ವೈಭವ) ಎಂಬ ಸಂಸ್ಥೆ ಆರಂಭವಾಯಿತು. ಬೆರಳೆಣಿಕೆಯ ಮಕ್ಕಳಿಂದ ಶುರುವಾದ ಈ ಶಾಲೆಯಲ್ಲಿ ಈಗ ಉಚಿತವಾಗಿ ಸಾವಿರದ ಇನ್ನೂರಕ್ಕೂ ಮಕ್ಕಳು ಶಾಲಾ ಶಿಕ್ಷಣ ಮತ್ತು ಐದು ನೂರು ಮಕ್ಕಳು ದೃಶ್ಯ ಕಲೆಗಳಲ್ಲಿ ತರಬೇತಿ ಪಡೆಯುತ್ತಿ¨ªಾರೆ. 2013ರಲ್ಲಿ ಆರ್ಥಿಕ ಸ್ವಾವಲಂಬನೆಯ ಗುರಿ ಹೊತ್ತು ಪ್ರದರ್ಶನ ಗಳನ್ನು ಆರಂಭಿಸಿದ ಈ ಸಂಸ್ಥೆಯ ಪ್ರಮುಖ ಅಂಗ ಫಾರೆ (ಕಜಚrಛಿ) ಸರ್ಕಸ್‌. ಕಲಾವಿದರಿಗೆ ಉದ್ಯೋಗಾವಕಾಶ, ಸಂಸ್ಥೆಗೆ ನಿಶ್ಚಿತ ಆದಾಯ ಮತ್ತು ದೇಶ-ವಿದೇಶಗಳಲ್ಲಿ ಕಾಂಬೋಡಿಯಾದ ವಿಶಿಷ್ಟ ಕಲಾಪ್ರಕಾರಗಳ ಪುನರುಜ್ಜೀವನ ಇದರ ಮುಖ್ಯ ಉದ್ದೇಶ.

ಒಂದು ಗಂಟೆ ಅವಧಿಯ ಸರ್ಕಸ್‌
2013ರ ಫೆಬ್ರವರಿಯಲ್ಲಿ ಮೊದಲ ಬಾರಿ ಸಾರ್ವಜನಿಕ ಪ್ರದರ್ಶನ ನೀಡಿದ ಈ ಸರ್ಕಸ್‌ ಮುಖ್ಯವಾಗಿ ಕಾಂಬೋಡಿಯಾದ ಜನಪದ ಕತೆಗಳನ್ನು ತನ್ನ ಪ್ರದರ್ಶನಕ್ಕೆ ಆರಿಸಿಕೊಳ್ಳುತ್ತದೆ. ಸಂಜೆ 6 ಗಂಟೆಯಿಂದ ದಿನವೂ ಎರಡು ಪ್ರದರ್ಶನವಿರುತ್ತದೆ. ಸಿಯಾಮ್‌ರೀಪ್‌ನ ಕೇಂದ್ರಭಾಗದಿಂದ ಸುಮಾರು ಎಂಟು ಕಿ.ಮೀ. ದೂರದಲ್ಲಿ ಹಳೆ ಮಾರ್ಕೆಟ್‌ನ ಸಮೀಪದಲ್ಲಿ ಫಾರೆ ಸರ್ಕಸ್‌ ರಿಂಗ್‌ರೋಡಿನಲ್ಲಿರುವ ಈ ಸ್ಥಳ ದೊಡ್ಡ ಕೆಂಪು ಟೆಂಟ್‌ ಮತ್ತು ಕಲಾವಿದರ ದೊಡ್ಡ ಭಿತ್ತಿಚಿತ್ರಗಳಿಂದ‌ ಗುರುತಿಸಲು ಸುಲಭವಾಗಿದೆ. ಟುಕ್‌ಟುಕ್‌ (ಸೈಕಲ್‌ ರಿಕ್ಷಾ) ನಲ್ಲಿ ಕಾಲು ಗಂಟೆಯ ಪಯಣ. ಸರ್ಕಸ್‌ಗೆ ಪ್ರವೇಶಧನ, ಸಾವಿರದ ಇನ್ನೂರರಿಂದ ಮೂರು ಸಾವಿರದವರೆಗೆ ಇದ್ದು ಹತ್ತಿರದ ಸೀಟು, ಪ್ರವಾಸಿಗರ ಸಂಖ್ಯೆ, ಸಮಯದ ಮೇಲೆ ಅವಲಂಬಿತವಾಗಿದೆ. ಸರ್ಕಸ್‌ನ ಅವಧಿ ಒಂದು ಗಂಟೆ. ಒಮ್ಮೆ ಸುಮಾರು ಮುನ್ನೂರು ಜನರಿಗಷ್ಟೇ ಅವಕಾಶ ಇರುವುದರಿಂದ ಮುಂಚೆಯೇ ಅಂತರ್ಜಾಲದ ಮೂಲಕ ಟಿಕೆಟ್‌ ಬುಕ್‌ ಮಾಡಿಸುವುದು ಉತ್ತಮ. ಇದೇ ಪ್ರಾಂಗಣದಲ್ಲಿ ಕಲಾವಿದರ ಚಿತ್ರ, ಕರಕುಶಲ ವಸ್ತುಗಳನ್ನೂ ಬೊಟಿಕ್‌ನಲ್ಲಿ ಮಾರಾಟಕ್ಕೆ ಇಡಲಾಗಿದೆ. ಹಾಗೆಯೇ ಪ್ರವಾಸಿಗರಿಗೆ ತಿನ್ನಲು-ಕುಡಿಯಲು ಪುಟ್ಟ ಕೆಫೆ ಇದೆ. ಈ ಎಲ್ಲವನ್ನೂ ಮಾರಿ ಬಂದ ಲಾಭದಲ್ಲಿ ಶೇ. 75 ರಷ್ಟು ಮಕ್ಕಳ ಶಾಲೆಗೆ ಸೇರುತ್ತದೆ.

ಬೀದಿ ಮಕ್ಕಳ ಪ್ರತಿಭೆ
ಬಟ್ಟಾಂಬ್‌ಬಾಗ್‌ನ ಶಾಲೆಯಲ್ಲಿ ಎಂಟರಿಂದ ಹತ್ತು ವರ್ಷಗಳ ಕಾಲ ಕಠಿಣ ತರಬೇತಿ ಪಡೆದು ಪಳಗಿದ ಮಕ್ಕಳು/ಕಲಾವಿದರು ಇಲ್ಲಿ ಪ್ರದರ್ಶನ ನೀಡುವುದರಿಂದ ಪ್ರತಿಯೊಂದು ನಡೆ, ಚಲನೆಯೂ ನಿಖರ. ಹಗ್ಗದಿಂದ ತೂಗುವುದು, ಕೋಲು- ಕುರ್ಚಿ-ಚೆಂಡು-ರಿಂಗ್‌-ಸೈಕಲ್‌ ವಿವಿಧ ವಸ್ತುಗಳ ಬಳಕೆ, ದೈಹಿಕ ಕಸರತ್ತು, ನೃತ್ಯ, ಹಾಡು, ಮಾತು, ಅಭಿನಯ, ಪ್ರಸಾಧನ- ಹೀಗೆ ಕತೆಯನ್ನು ವೈವಿಧ್ಯಮಯವಾಗಿ ಪ್ರಸ್ತುತಪಡಿಸುವ ರೀತಿ ಕಣ್ಮನಗಳಿಗೆ ಹಬ್ಬವೇ ಸರಿ. ಬೆಂಕಿ, ನೀರು, ಗಾಳಿಯನ್ನೂ ಉಪಯೋಗಿಸುವುದರ ಜತೆ ಪ್ರದರ್ಶನ ಪ್ರೇಕ್ಷಕರಿಗೆ ಅತ್ಯಂತ ಸನಿಹದಲ್ಲಿರುವುದರಿಂದ ಮೈ ನವಿರೇಳುತ್ತದೆ. ಇಡೀ ಪ್ರದರ್ಶನದಲ್ಲೆಲ್ಲೂ ಪ್ರಾಣಿಗಳ ಬಳಕೆ ಇಲ್ಲ.

ಎಲ್ಲೋ ಬೀದಿಯಲ್ಲಿ ಕಸದಗುಡ್ಡದ ನಡುವೆ ಹೇಳಹೆಸರಿಲ್ಲದೇ ಅಲೆಯುತ್ತಿದ್ದ ಮಕ್ಕಳಿಗೆ ಸರಿಯಾದ ತರಬೇತಿ ನೀಡಿ ಅವರಿಗೊಂದು ನೆಲೆ ಕಲ್ಪಿಸುತ್ತಿರುವ ಈ ಸಂಸ್ಥೆಯ ಬಗ್ಗೆ ಮೆಚ್ಚುಗೆ ಮೂಡುತ್ತದೆ! ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಸರ್ಕಸ್‌ ಹೆಸರು ಮಾಡಿರು ವುದು ಮಕ್ಕಳ-ತರಬೇತುದಾರರ ಪ್ರತಿಭೆ ಮತ್ತು ಪರಿಶ್ರಮಕ್ಕೆ ಸಾಕ್ಷಿ. ಈಗಾಗಲೇ ಆಲ್‌ಜಜೀರಾ, ಬಿಬಿಸಿ ಮತ್ತು ಸಿಎನ್‌ಎನ್‌ಗಳಲ್ಲಿ ಇದರ ಬಗ್ಗೆ ಕಾರ್ಯಕ್ರಮ ಪ್ರಸಾರವಾಗಿರುವುದರಿಂದ ವಿದೇಶಿ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿದೆ.

ಹಗ್ಗದ ಮೇಲಿನ ಸರ್ಕಸ್‌
ಪ್ರತೀ ಆರು ತಿಂಗಳಿಗೊಮ್ಮೆ ಸರ್ಕಸ್‌ನಲ್ಲಿ ಅಭಿನಯಿಸುವ ಕತೆ ಬದಲಾಗುತ್ತದೆ. ಅದರಲ್ಲೊಂದು, ಜನರಿಂದ ಬಿಳಿ ಬಂಗಾರ ಎಂದೇ ಕರೆಯಲ್ಪಡುವ ಅಕ್ಕಿಯ ಕುರಿತ ಕತೆಯನ್ನು ಆಧರಿಸಿದ ಪ್ರದರ್ಶನ ವೈಟ್‌ಗೊಲ್ಡ್‌ ! ಅಕ್ಕಿ ಎನ್ನುವುದು ಕಾಂಬೋಡಿಯಾದ ಪಾಲಿಗೆ ಧಾನ್ಯ ಮಾತ್ರವಲ್ಲ, ದೇವತ್ವಾರೂಪಿ. ಭತ್ತದ ಗದ್ದೆಗಳಲ್ಲಿಯೇ ಅಲ್ಲಿನ ಜನರ ಹುಟ್ಟು, ಬದುಕು, ಕೆಲಸ ಮತ್ತು ಸಾವು. ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಹೀಗೆ ಮೂರೂ ಹೊತ್ತೂ ಅಕ್ಕಿಯ ಖಾದ್ಯವೇ. ಅಕ್ಕಿ, ಕಾಂಬೋಡಿಯಾದ ಶ್ರೀಮಂತಿಕೆಯನ್ನು ಬಿಂಬಿಸುತ್ತದೆ ಮತ್ತು ಹೊರಗಿನ ಪ್ರಪಂಚದಿಂದ ದೌರ್ಜನ್ಯಕ್ಕೆ ಒಳಗಾಗಿದ್ದೂ ಇದೇ ಅಕ್ಕಿಯ ಕಾರಣಕ್ಕಾಗಿ ! ಅಕ್ಕಿಯನ್ನು ಪೂಜ್ಯ ಭಾವನೆಯಿಂದ ಕಾಣುವ ಜನರ ಸಂಭ್ರಮದ ಆಚರಣೆಯೊಂದಿಗೆ ಸರ್ಕಸ್‌ ಆರಂಭಗೊಳ್ಳುತ್ತದೆ.

ಸರ್ಕಸ್‌ನಲ್ಲಿ ಭಾಗವಹಿಸಿದ್ದ ಹದಿನಾರರ ಜೊರಾನಿ, ಶೋ ನಂತರ ಪ್ರೇಕ್ಷಕರ ಜತೆ ಮಾತನಾಡಿದ್ದಳು. ಎಲ್ಲರಿಗೂ ಕೈ ಮುಗಿದು, “ನಾನು ಮತ್ತು ನನ್ನಂಥವರ ಜೀವನ ಹಗ್ಗದ ಮೇಲಿನ ಸ‌ರ್ಕಸ್‌ ! ನಮ್ಮ ಶೋಗೆ ನಿಮ್ಮ ದುಡ್ಡು, ನಾವು ಕೆಳಗೆ ಬೀಳದಂತೆ ಮತ್ತು ಗಟ್ಟಿಯಾಗಿ ನೆಲದ ಮೇಲೆ ಕಾಲೂರಿ ನಿಲ್ಲಲು ಆಧಾರ’ ಎಂದಳು. ಮನಸ್ಸು ತುಂಬಿ ಬಂದಿತ್ತು !

ಕೆ. ಎಸ್‌. ಚೈತ್ರಾ

ಟಾಪ್ ನ್ಯೂಸ್

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

4(1)

Mudbidri: ರಸ್ತೆಯಲ್ಲೆಲ್ಲ ಹೊಂಡಗಳು ಸಾರ್‌ ಹೊಂಡಗಳು!

Anthamthana Kannada Movie: ಶೂಟಿಂಗ್‌ನತ್ತ ಅಣ್ತಮ್ತನ

Anthamthana Kannada Movie: ಶೂಟಿಂಗ್‌ನತ್ತ ಅಣ್ತಮ್ತನ

45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!

45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.