ಅಬ್ಬಬ್ಬ ಜಿರಲೆ!
Team Udayavani, Jul 23, 2017, 5:40 AM IST
ನನ್ನ “ತುಂತುರು ಕತೆಗಳು’ ಸಂಕಲನದಲ್ಲಿ ನಾನೇ ಬರೆದ, “ಜಿರಲೆ’ ಎಂಬ ತುಂತುರು ಕತೆಯೊಂದು ಹೀಗಿದೆ:
ಔಷಧಿ ಸಿಂಪರಿಸಿ, ಹೆಚ್ಚಾಗಿರೋ ಜಿರಲೆಗಳನ್ನೆಲ್ಲ ಸಾಯಿಸಿದೆ.
“ಒಂದೂ ಜಿರಲೆಗಳಿಲ್ಲ’ , ವಿಜಯೋತ್ಸವದ ಮೂಡಿನಲ್ಲಿ¨ªೆ.
ನಿರಾಳ ಮನಸ್ಸಿನಿಂದ ಹಳೇ ಪುಸ್ತಕದ ಪೆಟ್ಟಿಗೆ ತೆರೆದು, ಡಾರ್ವಿನ್‌ನ “ವಿಕಾಸವಾದ’ವನ್ನೇಕೋ ಮತ್ತೂಮ್ಮೆ ಓದಬೇಕೆನ್ನಿಸಿತು.
ಪುಸ್ತಕ ಎತ್ತಿದರೆ: “ಜಿರಲೆ’ಇ!
ನಾನಿನ್ನು ಖಡ್ಗವನ್ನೇ ಕೆಳಗಿಟ್ಟಿರಲಿಲ್ಲ. ಅಷ್ಟರÇÉೇ “ಶತ್ರು-ಶೇಷ’ ಕೊಂಕುನಗೆ ಬೀರಿ ಹೇಳಿತು:
“”ಲೋ… ಮನುಷ್ಯ… ಡೈನೋಸಾರಗಿಂತಲೂ ನಾ ಹಿರಿಯ ಕಣೋ… ಹೇಗೆ ಉಳೀಬೇಕು ಅನ್ನೊ ಪಾಠ ನಾನೇ ಹೇಳಿಕೊಡ್ತೀನಿ ನಿಂಗೆ… ಮೊದಲು ಕೈಲಿರುವ ಖಡ್ಗ ಕೆಳಗೆ ಇಡು”
ಹೌದು, ಡೈನೋಸಾರಿನ ಸಮಕಾಲೀನ ಈ ಕೀಟ ಸಾಮಾನ್ಯ ಮಹಿಮೆಯದ್ದಲ್ಲ. ಅಂಥ ದೈತ್ಯದೇಹಿಗಳನ್ನು ನಾಮಾವಶೇಷ ಮಾಡಿದ ಪ್ರಾಕೃತಿಕ ದುರಂತ (ಅಥವಾ ಅದು ಏನೇ ಇರಲಿ) ಈ ಸೋಮಾರಿ ಕೀಟದ ಕೂದಲು, ಅಲ್ಲಲ್ಲ… ಮೀಸೆಯÇÉಾಡಿಸಲಾಗಲಿಲ್ಲವೆಂದರೆ!
ಛೆ!
ಹಾಗೇ ಸುಮ್ಮನೆ ಕಣ್ಣಾಡಿಸಿ. ಪೇಟೆಯಲ್ಲಿ ಅದೆಷ್ಟು ಬಗೆಯ ಜಿರಲೆನಾಶಕಗಳುಂಟು. ಅವೆಲ್ಲ ಅದೆಷ್ಟೋ ಪರಿಣಾಮಕಾರಿಯಾಗಿದ್ದರೂ ಬರೀ ಜಿರಲೆಗಳನ್ನು ಸಾಯಿಸಿರಬಹುದು. ಆದರೆ ಅವುಗಳ ಭಯವನ್ನಲ್ಲ.
ಆಹಾರವಿಲ್ಲದೆ ತಿಂಗಳುಗಟ್ಟಲೆ ಬದುಕಬಲ್ಲವಂತೆ ಇವು. ಇವುಗಳ ಹೊಟ್ಟೆ-ರಚನೆ ಹೇಗಾಗಿರಬಹುದು. ಅದನ್ನಾದರೂ ಈ ವಿಜ್ಞಾನಿಗಳು ಕಂಡುಹಿಡಿದಿದ್ದರೆ, ಬಡರಾಷ್ಟ್ರಗಳ ಬಡವರಿಗೆಲ್ಲ “ಆ ರಚನೆ’ ಅಳವಡಿಸಬಹುದಿತ್ತೇನೋ! ಹಸಿವೆಯನ್ನೇ ಗೆದ್ದ ಚಿರಂಜೀವಿಗಳು ಇವು. ಹೀಗಾಗಿ ನಿಶ್ಚಿಂತೆಯಿಂದ ತಮ್ಮ ವಂಶಾಭಿವೃದ್ಧಿಯಲ್ಲಿ ಮಗ್ನವಾಗಿವೆ.
“ಜುಗುಪ್ಸೆ’ಗೆ ಇನ್ನೊಂದು ಹೆಸರೇ “ಜಿರಲೆ’ ಅಥವಾ “ಜೊಂಡಿಗ’. ಹೆಂಗಳೆಯರಲ್ಲಿ ಪ್ರತಿಶತ ಎಂಬತ್ತಕ್ಕಿಂತ ಹೆಚ್ಚು ನಾರಿಯರು ಜಿರಲೆಗೆ ಹೆದರುತ್ತಾರಂತೆ. ಇತ್ತೀಚಿಗಿನ ವರದಿಗಳಂತೆ ಈ ವರ್ಗ ಇನ್ನೂ ಹೆಚ್ಚಾಗುತ್ತಲೇ ಇದೆಯಂತೆ!
ಯಾಕೆ? ಈ ಕೀಟದಲ್ಲಿ ಅಂಥದ್ದೇನಿದೆ? ಚಿದಂಬರ ರಹಸ್ಯ!
ಚೇಳಿನಂತೆ ಇದರ ಹಿಂಭಾಗಕ್ಕೆ ವಿಷದ ಲೇಪನವಿಲ್ಲ. ಹಾವಿನಂತೆ ಕಚ್ಚಿ ವಿಷ ಉಗುಳುವ ಹಲ್ಲುಗಳಿಲ್ಲ. ನಿಶ್ಚಿಂತವಾಗಿ ನೀಲಗಗನದಲ್ಲಿ ವಿಹರಿಸಲರ್ಹ ವಿಶಾಲವಾದ ರೆಕ್ಕೆಗಳಿಲ್ಲ. ಅಪಾಯ ಕಂಡಾಗಲೆಲ್ಲ ರೆಕ್ಕೆ ಎಚ್ಚೆತ್ತುಕೊಳ್ಳುತ್ತವಷ್ಟೇ. ಕೆಲವು ಪ್ರಬೇಧಗಳಿಗಂತೂ ಅಷ್ಟೂ ಅಲ್ಲ. ಇವುಗಳ ಮೈಬಣ್ಣವೂ ಅಂಥ ಅರಿಭಯಂಕರವೇನಲ್ಲ. ಹೆಚ್ಚಿನ ಹೆಚ್ಚು ಜಿರಲೆಗಳು ಇರುವುದೇ ಚಾಕಲೇಟ್ ಬಣ್ಣ ಹೊಂದಿಯೇ. ಸದಾ ಹಿಟ್ಟಿನಲ್ಲಿ ಬದುಕು ಕಳೆದ ಕೆಲ ಜಿರಳೆಗಳ ಬಣ್ಣ ಅಚ್ಚಬಿಳಿಯದಾಗಿರಲೂಬಹುದು. ಇಂಥ ವಿಷರಹಿತ, ನಿರುಪದ್ರವಿ ಕೀಟಗಳಿಗೆ ವೀರವನಿತೆಯರೆಲ್ಲ ಹಾರಿ-ಹಾರಿ ಬೀಳುವುದೇಕೆ?
ಸೂಕ್ಷ್ಮವಾಗಿ ಗಮನಿಸಿ: ಒಂದಿಷ್ಟು ಉದ್ದವೇ ಎನ್ನಬಹುದಾದ, ಎರಡೆಂದರೆ ಎರಡೇ ಎರಡು ಮೀಸೆ ಎಳೆಗಳು. ಸೊಟ್ಟ-ಪಟ್ಟ ನಾಲ್ಕಾರು ಕಾಲುಗಳು. ಬಹುಶಃ ಕಾಲು ಮುರಿದರೂ ಅಥವಾ ಒಂದು ಫಳಕ್ಕನೆ ಉದುರಿದರೂ ಪರವಾಗಿಲ್ಲ ಎಂಬಂತೆ ನಡೆದಾಡುತ್ತವೆ. ಇಡೀ ದೇಹದ ಮೇಲೆ ಎದ್ದು ಕಾಣುವುದೇ ಮುಚ್ಚಿ ಕೊಂಡ ಅಥವಾ “ಅಂಜಲಿಬದ್ಧ’ ಎರಡು ಒಣ-ಒಣ ಸೋಗೆ ರೆಕ್ಕೆಗಳು ಮಾತ್ರ. ಅವೇನಾದರೂ ಅಪರೂಪಕ್ಕೆ ಬಿಚ್ಚಿಕೊಂಡು ಅಲ್ಲಿಂದಿಲ್ಲಿಗೆ-ಇಲ್ಲಿಂದಲ್ಲಿಗೆ ಹಾರಲು ತೊಡಗಿದವೆಂದರೆ, ಮಹಿಳೆಯರ ಛೀತ್ಕಾರವಂತೂ ಮುಗಿಲು ಮುಟ್ಟುತ್ತದೆ. ಅವೇನಾದರೂ ಅವರ ಭುಜದ ಮೇಲೆ, ಬೈತಲೆ ನಡುವೆ, ಜಡೆಯ ಹಿಂದೆ ಅವಿತುಕೊಂಡರಂತೂ, ಅವರಿಗೆ ಪ್ರಜ್ಞೆ ತಪ್ಪುವುದೊಂದೇ ಬಾಕಿ. ಬಹುಶಃ ಅಂಥ ಪ್ರಸಂಗದಲ್ಲಿ ಅವಕ್ಕೂ ದಿಗಿಲಾಗುತ್ತದೇನೋ. ಹಾರಾಡಲು ತೊಡಗಿದರೆ ತುಂಬ ಇÇÉಾಜಿಕÇÉಾಗಿ (ಐllಟಜಜಿcಚl) ತರ್ಕರಹಿತವಾಗಿ, ಅಡ್ಡಾದಿಡ್ಡಿಯಾಗಿ ಸುತ್ತತೊಡಗುತ್ತವೆ. ಪ್ರಾಯಶಃ ಮನುಷ್ಯನನ್ನು ಕಂಡರೆ ಅವಕ್ಕೂ ಅಷ್ಟೇ ಜುಗುಪ್ಸೆ, ತಾತ್ಸಾರ, ಹೇವರಿಕೆ, ಹೇಸಿಕೆ ಇರಬಹುದೇನೋ. ಇಣುಕಿ ನೋಡಲು, ತಾವೇ ನಮ್ಮಿಂದ ಮರೆಯಾಗುವ ಸಂಕೋಚಜೀವಿಗಳಿವು. ಜಿರಲೆಗಿಂತಲೂ ಅದೆಷ್ಟೋ ಪಟ್ಟು ವಿಕಾರದ, ಅಪಾಯದ ಜೀವಜಂತುಗಳನ್ನು ಮನುಷ್ಯ ಪಳಗಿಸಿ¨ªಾನೆ. ಆದರೆ ಈ ಚರ-ಪರ ಹರಿದಾಡುವ ಕಂದು ಕೀಟಗಳು ಮನುಷ್ಯನ ಅಪ್ಪಣೆಗೆ ತಲೆಬಾಗಿಲ್ಲ.
ಇವಕ್ಕೆ ಮೋರಿ, ಗಟಾರುಗಳೇ ನೆಚ್ಚಿನ ತಾಣಗಳು. ಅಲ್ಲಿ ಕೂಡಾ ಅಷ್ಟೇನೂ ಚಟುವಟಿಕೆಯಿಂದಿರದೆ, ಒಂಥರಾ ನಶೆಯಲ್ಲಿ ಇದ್ದಂತೆ ಅಷ್ಟಿಷ್ಟು ಹಾರಾಡುತ್ತಿರುತ್ತವೆ, ಮಿಸುಕಾಡುತ್ತಿರುತ್ತವೆ. ಈ ಕ್ರಿಯೆಯಲ್ಲಿ ಅವು, ಮನುಷ್ಯವರ್ಗದಲ್ಲಿರುವ ಕುಡುಕರಿಗೆ ತೀರ ಹತ್ತಿರದ ಸಂಬಂಧಿಗಳು. ನಾನು ಅನೇಕ ಕುಡುಕರನ್ನು ಚರಂಡಿಯಲ್ಲಿ ಕಂಡು ಹೌಹಾರಿದ್ದೇನೆ- ಸತ್ತೇ ಹೋಗಿ¨ªಾನೇನೋ ಎಂದೆಲ್ಲ. ಆಗ ಅವನಿಗೆ ಪಾಠ-ಬೋಧನೆ ಆಗಿರೋದೇ ಈ ಜಿರಲೆ ಮಹಾತ್ಮರುಗಳಿಂದ. ಆಗಾಗ ಅಷ್ಟಿಷ್ಟು ಅಲ್ಲಿಯೇ ಮಿಸುಕುತ್ತಿರಬೇಕು- ನಾನಿನ್ನೂ ಇದ್ದೇನೆ ಎಂಬ ಎಚ್ಚರಿಕೆ ಇದೆ, ಅಲ್ಲಿ.
ಇರಲಿ, ಈ ಕೀಟಗಳು ಅಕಸ್ಮಾತ್ ದೇಹದ ಮೇಲೇರಿದಾಗ ಯಾಕಿಷ್ಟು ಹೇವರಿಕೆಯ ಮಹಾಪೂರ? ಬಹುಶಃ ಖಾಲಿ ಮೈಮೇಲೇರಿದಾಗ ಇಡೀ ಮೈಯೇ ಗದಗುಟ್ಟಿಹೋಗು ವುದೇಕೆ? ಜಿರಲೆಯ ಕಡ್ಡಿಯಂಥ ಕಾಲುಗಳ ಅಡಿಗೆ ಕೊಂಚ ಮುಳ್ಳು-ಮುಳ್ಳಾಗಿರುವ ಅಂಗಾಲರಚನೆಗೆ ದೇಹ ಅÇÉೋಲಕÇÉೋಲವೇನೋ. ತಣ್ಣಗಿನ ಸ್ಪರ್ಶ. ಏನೋ ಮೃದುವಾಗಿ(?) ಚುಚ್ಚಿದಂತೆ! ಹಾಗೇ ಅದು ಅಲ್ಲಲ್ಲಿ ಹರಿದಾಡಿದರಂತೂ ನರಕದ ಅರಿವು ತರಿಸುವ ಅಲೆಗಳು ಹರಿಯತೊಡಗಿ ಚಿಟ್ಟನೆ ಚೀರದೇ ಗತ್ಯಂತರವಿಲ್ಲದಾಗುತ್ತದೆ.
ಜಿರಲೆ ಎಂದಾಕ್ಷಣ ಹೇಸಿಕೆಯೆನ್ನಿಸುವುದಕ್ಕೆ ಕಾರಣ, ಅವು ಎದ್ದು ಬಂದಿರಬಹುದಾದ ಮೂಲತಾಣಗಳು. ಕೊಳಕು ಇದ್ದಲ್ಲಿ ಜಿರಲೆ ಎಂದರೂ, ಜಿರಲೆ ಇದ್ದಲ್ಲಿ ಕೊಳಕು ಎಂದರೂ ಎರಡೂ ಒಂದೇ.
ಇವನ್ನು ಕೊಲ್ಲಲು ಬೆಂಬತ್ತುವ ಆಜ್ಞಾಧಾರಕ ಗಂಡಸರಿಗೆ, ಗೆಲುವು ಸುಲಭಸಾಧ್ಯವಲ್ಲ. ಈ ಹುಲು-ಮಾನವ ನಮ್ಮನ್ನು ಬಯಲಲ್ಲಿ ಅಟ್ಟಾಡಿಸಿ ಬಿಡುತ್ತಾನೆ ಎಂಬ ವಿಷಯ ಅವಕ್ಕೆ ಬಹಳೇ ಮನದಟ್ಟು ಆಗಿದೆ. ಕಾರಣ ಕಸಪೊರಕೆ ಹಿಡಿದು ಬೆಂಬತ್ತಿದಿರೋ, ಅವು ಜಾರುವ, ತೂರುವ ತಾಣಗಳೆಂಥವು ಎಂದರೆ, ಅಲ್ಲಿ ಕಸಬರಿಗೆ ಇತ್ಯಾದಿ ಏನೂ ಕೆಲಸಕ್ಕೆ ಬಾರದಂತೆ ಇಣುಕಲಿಕ್ಕೂ ಆಗದಷ್ಟು ಇಕ್ಕಟ್ಟು . “ಛೇ! ತಪ್ಪಿಸ್ಕೋತು’ ಎಂದ್ಹೇಳಿ ಖಾಲಿ ಕೈಲಿ ಹಿಂತಿರುಗುವ ಗಂಡಸರು ಎಂಥ ಪುರುಷಾರ್ಥವನ್ನು ಸಾಧಿಸಿದಂತಾದೀತು? ಚಿರತೆ ಹೊಡೆಯುವುದಕ್ಕಿಂತ ಜಿರಲೆ ಹೊಡೆಯುವುದು ಕಷ್ಟ.
ಮ್ಯಾಕ್ಸಿಂ ಗೋರ್ಕಿ ತನ್ನ ಆತ್ಮಕತೆಯ ಮೊದಲ ಭಾಗವಾದ ನನ್ನ ಬಾಲ್ಯ (ಇಜಜಿlಛಜಟಟಛ) ಎಂಬ ಪುಸ್ತಕದಲ್ಲಿ, ತನ್ನ ಅಜ್ಜಿ ಜಿರಲೆಗೆ ಹೆದರುತ್ತಿದ್ದುದನ್ನು ಚಿತ್ರವತ್ತಾಗಿ ಚಿತ್ರಿಸಿ¨ªಾನೆ:
ಅವಳಿಗೆ (ಅಜ್ಜಿಗೆ) ಅಜ್ಜನನ್ನು ಒಳಗೊಂಡು ಯಾವುದೇ ಜನರ ಭಯ ಇರಲಿಲ್ಲ. ದೆವ್ವಗಳ ಅಥವಾ ಮತ್ತಾವುದೇ ಕರಾಳ ಶಕ್ತಿಗಳ ಭಯವೂ ಇರಲಿಲ್ಲ. ಆದರೆ ಜಿರಳೆಗಳನ್ನು ಕಂಡರೆ ಅವಳಿಗೆ ಪ್ರಾಣವೇ ಹೋಗುವಷ್ಟು ಭಯ. ತುಂಬ ದೂರದಿಂದಲೇ ಅವಳಿಗೆ ಅವುಗಳು ಇದ್ದುದರ ಅರಿವಾಗುತ್ತಿತ್ತು. ಕೆಲವು ವೇಳೆ ಮಧ್ಯರಾತ್ರಿಯಲ್ಲಿ ಅವಳು ನನ್ನನ್ನು ಎಬ್ಬಿಸಿ ಮೆಲ್ಲಗೆ ಉಸುರುತ್ತಿದ್ದಳು: “”ಮುದ್ದು ಕೂಸೇ, ಅÇÉೊಂದು ಜಿರಲೆ ಹೋಗ್ತಾ ಇದೆ. ಅದನ್ನು ಹೊಡೆದು ಹಾಕಪ್ಪ. ಕ್ರಿಸ್ತ ನಿನಗೆ ಒಳ್ಳೇದು ಮಾಡ್ತಾನೆ. ಆತ ನಿನ್ನನ್ನು ಕಾಪಾಡಲಿ”
ನಿ¨ªೆ-ಮಂಪರಿನÇÉೇ ನಾನು ಮೋಂಬತ್ತಿ ಹತ್ತಿಸಿ, ಶತ್ರುವನ್ನು ಹುಡುಕಿಕೊಂಡು ಮಂಡಿಯೂರಿಕೊಂಡೇ ಅಲ್ಲಿ-ಇಲ್ಲಿ ಹರಿದಾಡುತ್ತಿ¨ªೆ. ಆದರೆ, ಯಾವಾಗಲೂ ನನ್ನ ಯತ್ನಗಳೇನೂ ಯಶಸ್ವಿಯಾಗುತ್ತಿರಲಿಲ್ಲ.
“”ಎಲ್ಲೂ ಇಲ್ಲವಲ್ಲ” ನಾನು ಹೇಳುತ್ತಿ¨ªೆ. ಆದರೆ ಅವಳು ತಲೆ ತುಂಬ ಕಂಬಳಿ ಹೊದ್ದುಕೊಂಡು, ನಿಶ್ಚಲಳಾಗಿ ಮಲಗಿದ್ದ ಕಡೆಯಿಂದಲೇ ನಿಟ್ಟುಸಿರು ಬಿಡುತ್ತ ಹೇಳುತ್ತಿದ್ದಳು, “”ಓಹ್! ಇದೆಯಪ್ಪ. ಸ್ವಲ್ಪ ಹುಡುಕಿಕೋ. ನಿನ್ನ ದಮ್ಮಯ್ನಾ ಅಂತೀನಿ. ಬೇಡಿಕೋತೀನಿ. ಅದು ಅÇÉೇ ಇದೆ. ನನಗೆ ಗೊತ್ತು”
ಅವಳು ಹೇಳುತ್ತಿದ್ದುದು ಎಂದೂ ತಪ್ಪಾಗಿರಲಿಲ್ಲ. ನಾನು ಕೊನೆಗೆ ಕಂಡುಹಿಡಿಯುತ್ತಿ¨ªೆ ಜಿರಲೆಯನ್ನು. “”ಎÇÉೋ ಮಂಚದಿಂದ ದೂರದಲ್ಲಿ. ಕೊಂದೆಯಾ? ಸದ್ಯಕ್ಕೆ ದೇವರ ದಯೆ! ನಿನಗೆ ವಂದನೆ” ಎನ್ನುತ್ತಿದ್ದಳು, ಮುಖದ ತುಂಬ ಹೊದ್ದಿದ್ದ ಕಂಬಳಿಯನ್ನು ತೆಗೆದು ಸಂತಸದಿಂದ ನಗುತ್ತ.
ನನಗೆ ಜಿರಲೆ ಸಿಗದೆ ಹೋಗಿದ್ದರೆ, ಅವಳಿಗೆ ಅಂದು ನಿ¨ªೆಯೇ ಬರುತ್ತಿರಲಿಲ್ಲ. ರಾತ್ರಿಯ ನೀರವತೆಯಲ್ಲಿ ಎÇÉೇ ಸ್ವಲ್ಪ ಸರ-ಸರ ಸ¨ªಾದರೂ ಅವಳ ಶರೀರ ಕಂಪಿಸುತ್ತಿದ್ದುದು ನನಗೆ ತಿಳಿದುಬಿಡುತ್ತಿತ್ತು. ಉಸಿರು ಬಿಗಿ ಹಿಡಿದುಕೊಂಡು ಅವಳು ಪಿಸುಗುಟ್ಟುತ್ತಿದ್ದಳು:
ಅದು ಅಲ್ಲಿದೆ, ಬಾಗಿಲ ಬಳಿ… ಈಗ ಪೆಟ್ಟಿಗೆ ಕೆಳಗೆ…
ಯಾಕೆ ಅಜ್ಜಿ ಜಿರಲೆ ಅಂದರೆ ಅಷ್ಟು ಭಯ?
ಅವಳು ವಿವೇಕಯುತವಾಗಿ ಉತ್ತರಿಸುತ್ತಿದ್ದಳು, “”ನನಗೇ ಅರ್ಥವಾಗೋಲ್ಲ. ಅವಾದರೂ ಯಾವ ಪ್ರಯೋಜನಕ್ಕೆ? ಸುಮ್ಮನೆ ಹರಿದಾಡುತ್ತಿರುತ್ತವೆ. ಕಪ್ಪು ದೆವ್ವಗಳು! ದೇವರು ತನ್ನ ಸೃಷ್ಟಿಯಲ್ಲಿ ಸಣ್ಣದಕ್ಕೂ ಏನಾದರೂ ಒಂದು ಉದ್ದೇಶ ನೀಡಿ¨ªಾನೆ. ಸಹಸ್ರಪದಿ ನೆಲದಲ್ಲಿ ತೇವ ಇದೆ ಅಂತ ತೋರಿಸುತ್ತೆ; ತಿಗಣೆಗಳು ಗೋಡೆ ಕೊಳೆ ಯಾಗಿದೆ ಅಂತ ತೋರಿಸುತ್ತವೆ. ಮೈಯಲ್ಲಿ ಕೂರೆ ಸಿಕ್ಕರೆ, ಅಂಥ ವ್ಯಕ್ತಿಯ ಆರೋಗ್ಯ ಕೆಡುತ್ತೆ ಅಂತ ಹೇಳಬಹುದು, ಇವೆಲ್ಲ ಅರ್ಥವಾಗುವಂಥವೆ! ಆದರೆ ಈ ಜಿರಲೆಗಳು. ಯಾರಿಗೆ ಗೊತ್ತು. ಇವುಗಳ ಉದ್ದೇಶ ಏನು? ಇವು ಯಾತಕ್ಕೆ ಜೀವಿಸಿರಬೇಕು ಅಂತ?
ಹೀಗೇ ಈ ಕತೆ ಮುಂದುವರೆಯುತ್ತೆ. ಇರಲಿ.
ತುಂಬ ಉಪಯುಕ್ತವಾದದ್ದಕ್ಕೆ ಅಲ್ಪಾಯುಷ್ಯವಂತೆ. ನಿತ್ಯ ಕಾಲ ಕೆಳಗಿರುವ, ಏನೊಂದೂ ಉಪಯೋಗವಿರದ ನೆಲದ ಮಾಡಿನ ಹೆಂಚಿನ ಚೂರೊಂದು ಸಾವಿರ ವರ್ಷಗಳ ಹಿಂದಿನದು ಇರಬಹುದಾಗಿದೆ. ಹಾಗೇ ಈ ಜಿರಲೆಗಳು ಏನೊಂದು ಉಪಯೋಗವಿರದ್ದಕ್ಕೇ ಅವುಗಳ ಸಂತತಿ ನಿತ್ಯನಿರಂತರವಾಗಿರಬಹುದು.
ಹಾnಂ! ಅಂದ ಹಾಗೆ, ಒಂದಕ್ಕೆ ಸಖತ್ತಾಗಿ ಉಪಯೋಗವಾಗಿದೆ. ಅದೆಂದರೆ, ಹಾಲಿವುಡ್‌ನಲ್ಲಿ ತಯಾರಾಗುವ ಅದ್ದೂರಿ ದೆವ್ವಗಳ ಚಲನಚಿತ್ರಗಳಲ್ಲಿ ಜಿರಲೆಗಳನ್ನು ತುಂಬ (ಅ)ಯೋಗ್ಯವಾಗಿ ಉಪಯೋಗಿಸಿಕೊಂಡಿ¨ªಾರೆ. ಅಲ್ಲಿ ದೆವ್ವದ ಸುಳಿವಿದ್ದರೆ ಅಥವಾ ದೆವ್ವದ ಆಗಮನವಿದ್ದರೆ, ಮೊದಲು ಬುಳು-ಬುಳು ಜಿರಲೆಗಳ ದರ್ಶನ. ಆವಾಗಲೇ ಪ್ರೇಕ್ಷಕರ ಪಕ್ಕೆಗಳಲ್ಲಿ ಭಯದ ತರಂಗಗಳು, ಆಮೇಲೆ ದೆವ್ವದ ಕಂತು-ಕಂತಾಗಿ ಆಗಮನ! ಈ ಪಿಶಾಚಿಗಳಿಗೂ ಈ ಜಿರಲೆಗಳಿಗೂ ಯಾವ ಜನ್ಮದ ಅನುಬಂಧ? ಒಂದು ಚಲನಚಿತ್ರದಲ್ಲಂತೂ ಒಂದು ನಿರ್ಜನ ಪ್ರದೇಶ. ಹಾಳು ಬಂಗಲೆ.
ದೆವ್ವದ ಆವಾಸಸ್ಥಾನ. ನಮ್ಮ ಸುರಸುಂದರಿ ಹೀರೋಯಿನ್ ಹೆದರುತ್ತಲೇ ಒಳಗೆ ಹೋಗುತ್ತಾಳೆ. ಅಲ್ಲಿ ನಾಲ್ಕಾರು ಪಿಪಾಯಿಗಳು. ಎಲ್ಲವಕ್ಕೂ ಮುಚ್ಚಳ. ಅವುಗಳಲ್ಲಿ ಏನಿರಬಹುದು ಎಂಬ ಜಿಜ್ಞಾಸೆ. ಮುಚ್ಚಳ ತೆಗೆದರೆ ಪಿಪಾಯಿಗಟ್ಟಲೆ ಜಿರಲೆಗಳು. ಬುಳಬುಳನೆ ಕೆಳಗಿಳಿದು ಹರಿದಾಡುತ್ತಲೆ, ಇವಳು ಹೌಹಾರಿ ವಿಕಾರವಾಗಿ ಚೀರಿಕೊಳ್ಳುತ್ತ, ಮೈಮೇಲೇರುವ ನೂರಾರು ಜಿರಲೆಗಳನ್ನು ಕೊಡವಿಕೊಳ್ಳುತ್ತಲೆ, ಧಾವಂತದಲ್ಲಿ ಮತ್ತಷ್ಟು ಪಿಪಾಯಿಗಳನ್ನು ಎಡವುತ್ತ, ತಳ್ಳುತ್ತ ಇವಳ ಹಾರಾಟಕ್ಕೆ ಒಂದೊಂದೇ ಪಿಪಾಯಿಗಳು ಮುಗುಚಿ ಬಿದ್ದು ಅವುಗಳಿಂದಲೂ ಕ್ವಿಂಟಾಲುಗಟ್ಟಲೆ ಜಿರಲೆಗಳ ಪ್ರವಾಹ. ಇನ್ನೊಂದು ಪಿಪಾಯಿ ಬುಡಮೇಲು. ಅದರಿಂದಲೂ ಮತ್ತೂಂದು ಪಿಪಾಯಿ. ಅದರಿಂದಲೂ ಇನ್ನಷ್ಟು ಮತ್ತಷ್ಟು ಹೀಗೇ. ನೋಡುಗರ ಮನಃಸ್ಥಿತಿಯನ್ನು ಕಲಕಿ ಹೌಹಾರಿ ನಾವೇ ಚಿಳ್ಳನೇ ಚೀರಿ ಬೆಚ್ಚುವ ಸರದಿ.
ಬಹುಶಃ ದೆವ್ವದ ಪರಿಣಾಮ ಹಾಗೂ ಜಿರಲೆಯ ಪರಿಣಾಮ ಎರಡೂ ಒಂದೇ. ಚಿಟ್ಟನೆ ಚೀರದೆ ವಿಧಿಯಿಲ್ಲ. ಒಟ್ಟಾರೆ ಸೈತಾನನ ಆತ್ಮ-ಬಂಧುಗಳಂತೆ ಬಾಂಧವ್ಯ ಇಟ್ಟುಕೊಂಡು ಬಂದ ಈ ಸಂತತಿ ಇಂದಿಗೂ ಅದೇ ಪ್ರಭಾವ, ಪರಿಣಾಮವನ್ನು ಉಳಿಸಿಕೊಂಡದ್ದು ಮಾತ್ರ ಗಮನಾರ್ಹ.
ಒಂದು ದಿನ ಮಧ್ಯರಾತ್ರಿ, ಒಂದೇ ಒಂದು ಜಿರಲೆ ಅದೆಲ್ಲಿಂದಲೋ ಪ್ರತ್ಯಕ್ಷವಾಗಿದ್ದು ನನ್ನ ಪುಟ್ಟ ಮಗಳ ಸೊಳ್ಳೆಪರದೆ ಮೇಲೆ. ಒಳ್ಳೆ ಸ್ಪೈಡರ್‌ಮನ್‌ನಂತೆ ಫೋಸು ಕೊಡುತ್ತಿದ್ದುದನ್ನು ಮೊದಲು ಕಂಡವಳೇ ಸ್ವತಃ ನನ್ನ ಮಗಳೇ “”ಅಯ್ಯೋ… ಅಮ್ಮಾ…” ಎಂದು ಚೀರಿಕೊಂಡದ್ದಕ್ಕೆ ಅಮ್ಮನೂ ಚೀರಿಕೊಳ್ಳಬೇಕೆ. ಸೊಳ್ಳೆ ಪರದೆ ಒಳಗೆ ಬರೀ ಕೈ-ಸನ್ನೆ… ಬಾಯಿಸನ್ನೆಯಿಂದ ತೋರಿದ ಕಡೆ ನೋಡಿದರೆ, ಜಿರಲೆ ಮಹಾಶಯ! ನಿಶ್ಚಿಂತ ವಿಹಾರ. ಹಳೆ ಕಸಬರಿಗೆಯಿಂದ, ಸೊಳ್ಳೆಪರದೆ ಝಾಡಿಸಿ, ಮಹಾಶಯನನ್ನು ಕೆಳಗೆ ಬೀಳಿಸಿ ಬೆಂಬತ್ತಿ ಹೊಡೆಯಲು, ಎನ್‌ಕೌಂಟರ್ ಸ್ಪೆಶಲಿಸ್ಟ್‌ನಂತೆ ನಾನು ಏದುಸಿರುಬಿಡುತ್ತಿದ್ದರೆ, ಅಮ್ಮ, ಮಗಳು ಇಬ್ಬರೂ ಮಂಚದ ಮೇಲೆ ಅಡರಿ ಎದ್ದು ನಿಂತು ಪರಸ್ಪರ ಅವುಚಿಕೊಂಡು ಗಡ-ಗಡ ನಡುಗುತ್ತಿ¨ªಾರೆ!
“”ಅಯ್ಯೋ! ಕಿತ್ತೂರ ರಾಣಿ ಚೆನ್ನಮ್ಮ, ಒನಕೆ ಓಬವ್ವ, ಕೆಳದಿ ಚನ್ನಮ್ಮ, ಝಾನ್ಸಿ ರಾಣಿಯರು ಹುಟ್ಟಿದ ಈ ಭರತಖಂಡದಲ್ಲಿ ನೀವೆಂಥವರೇ ಹುಟ್ಟಿದಿರಿ?” ಎಂದು ನಾನು ಹಂಗಿಸಿದೆ. ನಾನು ಜಿರಲೆ ಹೆಣವನ್ನು ಕಿಟಕಿಯಾಚೆ ಬಿಸಾಕಿದ ಮೇಲೂ, ತಾಯಿ-ಮಗಳಿಬ್ಬರೂ ಭಾರೀ ಭೂಕಂಪದ ನಂತರ ಅವುಚಿ ಮಲಗಿದ್ದಂತೆ ಮಲಗಿದ್ದರು.
ಎÇÉಾ ಆ ಒಂದೇ ಇಂಚಿನ ಕೀಟ ಮಹಿಮೆ.
ಗಂಡನ ಯಾವ ಕ್ರಿಯೆಗೆ ಹೆಂಡತಿ ಅಂಜುತ್ತಾಳೆ ಹೇಳಿ. ಗಂಡ ಒಂದು ಬೈದರೆ, ಹೆಂಡತಿ ಪ್ರತಿಯಾಗಿ ಬೈಗುಳದ ಮಾಲೆಯನ್ನೇ ತೊಡಿಸಿಯಾಳು. ನಿನ್ನ ತವರುಮನೆಯವರು ಇಂಥವರು ಎಂದಿರೋ, ನಿಮ್ಮ ವಂಶ-ನಾಮಾವಳಿಗಳ ನಿರ್ವಂಶ ಖಂಡಿತ. “”ಈ ತಿಂಗಳು ಸಂಬಳಪೂರ್ತಿ ಬಂದಿಲ್ಲ” ಎಂದಿರೋ, “”ಅದೆÇÉಾ ನನಗೆ ಗೊತ್ತಿಲ್ಲ… ನನಗೆ ಬೇಕು ಅಷ್ಟೇ” ಎಂದಾರು. ಹೆಂಡತಿಯನ್ನು ಹೆದರಿಸುವುದು ಅಷ್ಟು ಸುಲಭದ ಮಾತಲ್ಲ.
ಅದಕ್ಕೇ ನನಗೆ ಪದೆ ಪದೆ ಅನ್ನಿಸುತ್ತೆ- ಗಂಡನಾಗೋದಕ್ಕಿಂತ ಜೋಂಡಿಗನಾಗೋದು ಲೇಸು… ಹೆಂಡತಿಯನ್ನಾದರೂ ಗಡ ಗಡ ನಡುಗಿಸಬಹುದು, ಒಂದಷ್ಟು ನೆಮ್ಮದಿ ಪಡೀಬಹುದು.
ನಿಮಗೇನನ್ನಿಸುತ್ತೆ?
– ರಾಮಚಂದ್ರ ಎಸ್. ಕುಲಕರ್ಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.