ಮತ್ತೆ ಮರಳಲಿ ಜಗದ ಸ್ವಾಸ್ಥ್ಯ


Team Udayavani, Mar 22, 2020, 5:50 AM IST

jagada-swasthya

ಜಗತ್ತಿನಲ್ಲಿ ಹಲವಾರು ವರ್ಷಗಳಿಗೊಮ್ಮೆ ಬರುವ ಮಹಾಮಾರಿಗಳು ಜನಸಮುದಾಯದ ಸ್ವಾಸ್ಥ್ಯವನ್ನು ಅಲ್ಲಾಡಿಸುತ್ತವೆ. ಇಂಥ ಸಂದರ್ಭದಲ್ಲೆಲ್ಲ ಮನುಷ್ಯನ ದೇಹಬಲ, ಹಣಬಲ ಎಲ್ಲವೂ ಹಿಂದಕ್ಕೆ ಸರಿದು “ಎಲ್ಲವೂ ನನ್ನ ಕೈಯಲ್ಲಿಲ್ಲ’ ಎಂಬ ಅರಿವು ಅವನಿಗೆ ಉಂಟಾಗುತ್ತದೆ. ಮನುಷ್ಯನಅಹಂ-ಕಾರವನ್ನು ಕಳೆಯಲೆಂದೇ ಈ ಮಹಾಮಾರಿಗಳು ಬಂದಿವೆ ಎಂಬುದು ಕೊಂಚ ಭಾವುಕ ಹೇಳಿಕೆಯಾದರೂ ಇದನ್ನು ಫಿಲಾಸಫಿಕಲ್‌ ಆಗಿ ಸ್ವೀಕರಿಸುವುದೇ ಹೆಚ್ಚು ಸೂಕ್ತ!

Ringa ringa a rosses,
Pocket full of posies
Husha busha
We all fall down
ಈ ನರ್ಸರಿ ರೈಮ್ಸ್‌ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರಬಹುದು. ಮಕ್ಕಳು ತುಂಬ ಖುಷಿಯಿಂದ ಇದನ್ನು ಹಾಡಿ, ಕುಣಿದು ಸಂಭ್ರಮಿಸುತ್ತಾರೆ. ಆದರೆ, ಇದರ ಹಿಂದೊಂದು ದಾರುಣವಾದ ಕತೆ ಇದೆ ಎಂದು ಎಷ್ಟು ಮಂದಿಗೆ ತಿಳಿದಿದೆ!

ಇದು ಯುರೋಪಿನಲ್ಲಿ ಪ್ಲೇಗ್‌ ಮಹಾಮಾರಿಯ ಮರಣ ಮೃದಂಗಕ್ಕೆ ಅಸಂಖ್ಯಾತ ಜನರು ಬಲಿಯಾಗುತ್ತಿದ್ದಾಗ ಕಟ್ಟಿದ ಹಾಡು! ಕಣ್ಣಿನ ಸುತ್ತ ಕಪ್ಪು ಸುತ್ತುವರಿಯುತ್ತಿದೆ. ದೇಹದ ದುರ್ನಾತವನ್ನು ತಡೆಯಲು ಜೇಬಿನಲ್ಲಿ ಸುಗಂಧ ಪುಷ್ಪವನ್ನಿರಿಸಿಕೊಂಡು ಕೊನೆಗೂ ಸೋಂಕಿಗೆ ಬಲಿಯಾಗುವ ಹಾಡು ಇದಾಗಿದೆ. ಪ್ಲೇಗ್‌ ಕಾಯಿಲೆಯನ್ನು “ಬ್ಲಾಕ್‌ ಡೆಡ್‌’ ಎಂದು ಕರೆಯುತ್ತಿದ್ದರು. ಇದಕ್ಕೆ ಕಾರಣ ಮೈಯಲ್ಲಿ ಕಪ್ಪಾಗುತ್ತ ಹೋಗುತ್ತಿದ್ದುದು! 14ನೆಯ ಶತಮಾನದಲ್ಲಿ ಯುರೋಪಿನ ಮೂರನೆಯ ಒಂದು ಭಾಗದಷ್ಟು ಅಂದರೆ ಸುಮಾರು ಏಳೂವರೆ ಕೋಟಿಯಷ್ಟು ಜನರನ್ನು ಈ ರೋಗ ಬಲಿ ತೆಗೆದುಕೊಂಡಿತ್ತು. ಪ್ಲೇಗ್‌ ಎಂಬ ಹೆಸರು ಕೇಳಿದರೇ ಜನರಲ್ಲಿ ನಡುಕ ಉಂಟಾಗುತ್ತಿತ್ತು.

ಷೇಕ್ಸ್‌ಪಿಯರ್‌ನ ರೋಮಿಯೊ ಆ್ಯಂಡ್‌ ಜೂಲಿಯೆಟ್‌ ನಾಟಕದಲ್ಲಿ ಗಾಯಗೊಂಡ ಮರ್ಕುಶಿಯೊ ಕಲಹದಲ್ಲಿದ್ದ ನಿಮ್ಮ ಕುಟುಂಬಕ್ಕೆ “ನಿಮ್ಮ ಮನೆಗೆ ಪ್ಲೇಗ್‌ ರೋಗ ಅಂಟಿಕೊಳ್ಳಲಿ’ ಎಂದು ಶಪಿಸುತ್ತಾನೆ. ಈ ನಾಟಕವನ್ನು ಜನ ಡೈಲಾಗನ್ನು ಕೇಳಿ ನಡುಗುತ್ತಿದ್ದರಂತೆ. ಪ್ಲೇಗ್‌ ರೋಗವನ್ನು ತಡೆಯಲು ಸರಿಯಾದ ಕಾರಣ ತಿಳಿಯಲಾರದೆ ಇಲ್ಲ-ಸಲ್ಲದ ಪ್ರಯತ್ನಗಳನ್ನು ಮಾಡಿದರು.

ಸಿಸಿಲಿ ನಗರದಿಂದ ಬಂದಿದ್ದ ಹಡಗೊಂದರಲ್ಲಿ ಪ್ಲೇಗ್‌ ರೋಗದಿಂದ ಸತ್ತವರು ಅನೇಕರು ಇದ್ದರು. ಹಾಗಾಗಿ, ಬದುಕುಳಿದವರನ್ನು ಕೂಡ ಆ ಹಡಗಿನಿಂದ ಇಳಿಯಲು ಬಿಡಲಿಲ್ಲ. ಆದರೆ, ಹಡಗಿಗೆ ಕಟ್ಟಿದ ಹಗ್ಗದ ಮೂಲಕ ಇಲಿಗಳು ನಗರವನ್ನು ಪ್ರವೇಶಿಸಿ ಇಡೀ ನಗರವನ್ನು ಕಂಗೆಡಿಸಿದವು.
ಪ್ಲೇಗ್‌ ರೋಗ 1347ರಲ್ಲಿ ಕಾನ್‌ಸ್ಟಾಂಟಿನೋಪಲ್‌ನಲ್ಲಿ ಕಂಡುಬಂತು. ಅದು ಬಳಿಕ ಯುರೋಪಿನ ಇತರ ರಾಷ್ಟ್ರಗಳತ್ತ ಹರಡಿತ್ತು. ಅಂದು ಕಾಯಿಲೆ ವರ್ಷಕ್ಕೆ 200ರಿಂದ 400 ಕಿ.ಮೀ. ವೇಗದಲ್ಲಿ ಹರಡಿತ್ತು. ಇಂದು ಕೊರೊನಾ ಸೋಂಕು ಎರಡೂವರೆ ತಿಂಗಳಲ್ಲಿ 164 ದೇಶಗಳಿಗೆ ಹರಡಿ 2 ಲಕ್ಷಕ್ಕೂ ಹೆಚ್ಚು ಜನರಲ್ಲಿ ಸೋಂಕು ಉಂಟುಮಾಡಿದೆ. ಸುಮಾರು ಎಂಟೂವರೆ ಸಾವಿರ ಜನರನ್ನು ಬಲಿ ತೆಗೆದುಕೊಂಡಿದೆ. ಗಂಟೆಗೆ ಸುಮಾರು 500 ಮೈಲು ವಿಮಾನದ ಮೂಲಕ ಹರಡಿಕೊಂಡಿದೆ. ಹೇಳಿಕೇಳಿ ನಮ್ಮದು ನೆಟ್‌ವರ್ಕ್‌ ಯುಗ.

ಕಷ್ಟದ ಹಾದಿ ಇದೇ ಮೊದಲಲ್ಲ
ಸಾಂಕ್ರಾಮಿಕ ರೋಗಗಳ ಮರಣಮೃದಂಗ ಆರ್ಭಟದಲ್ಲಿ ಸ್ಪಾನಿಷ್‌ ಫ್ಲ್ಯೂವನ್ನು ಮೀರಲು ಇತರ ರೋಗಗಳಿಗೆ ಸಾಧ್ಯವಾಗಿಲ್ಲ. ಮೂರನೆಯ ಮಹಾಯುದ್ಧಕ್ಕೂ ಸತ್ತವರ ಸಂಖ್ಯೆ 2 ಕೋಟಿ ಆದರೆ, ಸ್ಪಾನಿಷ್‌ ಫ್ಲ್ಯೂ , 5ರಿಂದ 10 ಕೋಟಿ ಜನರನ್ನು ಬಲಿ ತೆಗೆದುಕೊಂಡಿದೆ. ಯುದ್ಧದ ಸಾವಿನ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ, ಸ್ಪಾನಿಷ್‌ ಫ್ಲ್ಯೂವಿನ ಅಧ್ವಾನ ಮರೆತೇ ಹೋಗಿದೆ. ಯುರೋಪಿಯನ್ನರ ವಸಾಹತುಶಾಹಿ ಆವಾಂತರಕ್ಕೆ ದೇವರು ಕೊಟ್ಟ ಶಾಪ ಈ ರೋಗ ಎಂದಿದ್ದರು ಮಹಾತ್ಮಾಗಾಂಧಿ. ಆದರೆ, ಅದು ಭಾರತಕ್ಕೆ 1918ರಲ್ಲಿ ಮುಂಬೈಗೆ ಅಪ್ಪಳಿಸಿ 2 ಕೋಟಿ ಜನರನ್ನು ಬಲಿ ತೆಗೆದುಕೊಂಡಿತ್ತು. ಅಂದರೆ ಶೇ. 10ರಷ್ಟು ಭಾಗದ ಜನಸಂಖ್ಯೆ.

ಎಚ್‌ಐವಿ, ಏಡ್ಸ್‌ ಕಾಯಿಲೆ ಜಗತ್ತಿನ 3 ಕೋಟಿ ಜನರನ್ನು ಸಾವಿಗೀಡು ಮಾಡಿದೆ. ಇದು 3 ದಶಕಗಳಿಂದ ಭೂಮಿಯ ಮೇಲೆಯೇ ಇದೆ. ಸುನಾಮಿಯಂತೆ ಒಮ್ಮೆ ಬಂದುಹೋದದ್ದಲ್ಲ. ಇಂಥ ರೋಗವನ್ನು ಎಂಡಮಿಕ್‌ ಕಾಯಿಲೆ ಎನ್ನುತ್ತಾರೆ. ಇವು ನಿರಂತರವಾಗಿ ಕಾಡುವ ಕಾಯಿಲೆಗಳಾಗಿವೆ. ಸ್ಥಳೀಯವಾಗಿ ಅಥವಾ ಒಂದು ಪ್ರದೇಶದ ಒಳಗೆ ಅಥವಾ ಒಂದು ದೇಶದ ಒಳಗೆ ಹರಡುವ ಕಾಯಿಲೆಯನ್ನು ಎಪಿಡಮಿಕ್‌ ಎನ್ನುತ್ತಾರೆ. ಇಡೀ ಜಗತ್ತಿಗೆ ಹರಡುವ ಕಾಯಿಲೆಯನ್ನು ಪ್ಯಾಂಡಮಿಕ್‌ ಎನ್ನುತ್ತಾರೆ. ಈಗ ಕೋವಿಡ್‌-19 ಒಂದು ಪ್ಯಾಂಡಮಿಕ್‌ ಕಾಯಿಲೆ ಆಗಿ ಪರಿಣಮಿಸಿದೆ.

ಈ ಹಿಂದೆ ಹಾಂಕಾಂಗ್‌ನಲ್ಲಿ ಹಾಂಕಾಂಗ್‌ ಫ್ಲ್ಯೂ ಕಾಣಿಸಿಕೊಂಡಿತ್ತು. ಅದರಿಂದ ಸುಮಾರು 7 ಲಕ್ಷ ಜನ ಮೃತಪಟ್ಟಿದ್ದರು. ಅದಕ್ಕೆ ಕಾರಣ ಸರಳ. ಹಾಂಕಾಂಗ್‌ನಲ್ಲಿ ಜನ ಅತ್ಯಂತ ಸಾಂದ್ರವಾಗಿ ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುತ್ತಾರೆ. ಪುಟ್ಟ ಕೊಠಡಿಯಲ್ಲಿ ಅತ್ಯಂತ ಹೆಚ್ಚು ಜನ ಇರುತ್ತಾರೆ. ಸ್ವಚ್ಛತೆ ಕಡಿಮೆ. ಈ ಫ್ಲ್ಯೂವಿಗೆ ಕಾರಣವಾದ ವೈರಸ್‌ ಎಚ್‌3 ಎನ್‌2 ಎಂದು ಹೇಳಲಾಗಿದೆ. ಇತ್ತೀಚೆಗೆ ಎಚ್‌1 ಎನ್‌1, ಎಚ್‌5 ಎನ್‌1, ಎಚ್‌7 ಎನ್‌7, ಎಚ್‌ 7 ಎನ್‌9- ಹೀಗೆ ಸರಣಿ ಮುಂದುವರಿಯುತ್ತದೆ. ಇತ್ತೀಚೆಗೆ ಫಿಲಿಫೈನ್ಸ್‌ ದೇಶದಲ್ಲಿ ಎಚ್‌5 ಎನ್‌6 ಎಂಬ ಹೊಸ ವೈರಾಣುವಿನೊಂದಿಗೆ ಹಕ್ಕಿಜ್ವರ ರೋಗವು ಫಿಲಿಫೈನ್ಸ್‌ ದೇಶದಲ್ಲಿ ಕಾಣಿಸಿಕೊಂಡಿದೆ.

ವೈರಾಣು ಬೇರೆ, ಬ್ಯಾಕ್ಟೀರಿಯಾ ಬೇರೆ
ಎಚ್‌ ಮತ್ತು ಎನ್‌ ವೈರಾಣುವಿನಲ್ಲಿರುವ ಪ್ರೊಟೀನ್‌ ಆಧಾರದ ಮೇಲೆ ಅವುಗಳನ್ನು ಗುರುತಿಸಲಾಗುತ್ತದೆ. ಸುಮಾರು ಎಚ್‌1ರಿಂದ ಎಚ್‌ 16ರವರೆಗೆ ಲೆಕ್ಕಹಾಕಲಾಗಿದೆ. ಹಾಗೆಯೇ ಎನ್‌ ಪ್ರೊಟೀನ್‌ಅನ್ನು 1ರಿಂದ 9ರ ವರೆಗೆ ಇರುವ ಬಗೆಯನ್ನು ಗಮನಿಸಲಾಗಿದೆ. ಇದರ ಜೊತೆಗೆ ನಡುಕ ಹುಟ್ಟಿಸುವಂಥ ಅದೆಷ್ಟು ರೋಗಾಣುಗಳಿವೆ! ಎಬೋಲಾ, ಝೀಕಾ, ಮರ್ಸ್‌, ಸಿಫಾ, ಹಿಂಡ್ರಾ, ಲೆಸ್ಟ್‌ನೈಲ್‌ ಮತ್ತು ಮಲೆನಾಡಿನಲ್ಲಿ ಕಂಡುಬರುವ ಮಂಗನಕಾಯಿಲೆಯೂ ಅದೇ ರೀತಿಯದ್ದು. ಲೈಮ್‌ ಡಿಸೀಸ್‌ ಅಂತ ಒಂದಿದೆ. ಅದು ಉಣ್ಣಿಯ ಮೂಲಕ ಹರಡುತ್ತದೆ. ಉಣ್ಣಿಗಳು ಬದುಕಿ ಉಳಿಯಲು ಇಲಿಗಳು ಬೇಕು. ಇಲಿಗಳ ಸಂಖ್ಯೆ ಜಾಸ್ತಿ ಇದ್ದಲ್ಲಿ ಉಣ್ಣಿಗಳ ಸಂಖ್ಯೆ ವೃದ್ಧಿಸಿ ರೋಗ ಹರಡುವುದು. ಹಾಗಾಗಿ, ನರಿಗಳ ಸಂಖ್ಯೆ ಅಧಿಕವಿದ್ದಲ್ಲಿ ಇಲಿಗಳ ನಿಯಂತ್ರಣ ಸಾಧ್ಯವಂತೆ! ಯುರೋಪಿನಲ್ಲಿ ಮೋಜಿಗಾಗಿ ನರಿಗಳನ್ನು ಬೇಟೆಯಾಡುವ ಪರಿಪಾಠ ಉಂಟಾಯಿತಂತೆ. ಆಗ ಇಲಿಗಳ ಸಂಖ್ಯೆ ಜಾಸ್ತಿಯಾಗಿ ಯುರೋಪಿನಲ್ಲಿ ಲೈಮ್‌ ರೋಗ ಹರಡಿತ್ತು. ಈಗ ಸಮಸ್ಯೆ ಆಗುತ್ತಿರುವ ಮುಂದಿನ ಕಾಯಿಲೆಯ ಹರಡುವಿಕೆಗೂ ಏನಾದರೂ ಕಾರಣವಿರಬಹುದೆ ಎಂಬುದನ್ನು ಸಂಶೋಧಿಸಲಾಗಿದೆ.

ಕೊರೋನಾ, ಮರ್ಸ್‌, ನಿಫಾದಂಥ ಕಾಯಿಲೆಗಳ ಮೂಲ ಬಾವಲಿ ಎಂಬುದು ಗಮನಾರ್ಹ ವಿಚಾರ. ಬಾವಲಿಗಳು ವೈರಾಣುಗಳಿಗೆ ಆಶ್ರಯವಾದದ್ದು ಒಂದು ಅಚ್ಚರಿಯ ಸಂಗತಿ. ಹಾಗೆಂದು ಈ ಬಾವಲಿಗಳಿಗೆ ಈ ವೈರಾಣುಗಳಿಂದ ರೋಗ ತಟ್ಟದಿರುವುದು ಆಶ್ಚರ್ಯವೇ ಸರಿ.

ಸಂಯಮ ಕಲಿಸುತ್ತಿರುವ ಕೋವಿಡ್-19
ಇದೀಗ ಕೋವಿಡ್-19 ಎಂಬ ಮಹಾಮಾರಿ ಭಯ ಹುಟ್ಟಿಸುತ್ತಿದೆ. ಆದರೆ, ಮುನ್ನೆಚ್ಚರಿಕೆ ಕ್ರಮಗಳನ್ನು ಕಂಡು ಭಯ ಬೀಳುವ ಅಗತ್ಯವೇನೂ ಇಲ್ಲ. ಹಾಗೆಂದು ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ಲಕ್ಷಿಸುವುದೂ ಸರಿಯಲ್ಲ.  ಕೋವಿಡ್-19 ಮೂಲಕ ಹರಡುವ ರೋಗವಾದ್ದರಿಂದ ಅದರ ಸ್ವಭಾವವನ್ನು ಅರಿತು ಔಷಧಿಯನ್ನು ಕಂಡುಹಿಡಿಯುವುದು ಸುಲಭವಲ್ಲ. ಅದಾಗ್ಯೂ ಔಷಧಿಯನ್ನು ಕಂಡುಹಿಡಿದರೂ, ಅವುಗಳನ್ನು ಇತರ ಜೀವಿಗಳ ಮೇಲೆ ಪ್ರಯೋಗಿಸಿ, ಯಶಸ್ವಿಯಾದರೆ ಮೊದಲ ಹಂತದಲ್ಲಿ ಮನುಷ್ಯನ ಮೇಲೆ ಪ್ರಯೋಗಿಸಿ, ಯಶಸ್ವಿಯಾದ ಮೇಲಷ್ಟೇ ಸಾರ್ವಜನಿಕ ಮಾರುಕಟ್ಟೆಗೆ ಅವುಗಳನ್ನು ಸರಬರಾಜು ಮಾಡಬಹುದು. ಇದು ಬಹಳ ದೀರ್ಘ‌ವಾದ ಪ್ರಕ್ರಿಯೆ. ಔಷಧಿ ಕಂಡುಹಿಡಿಯುವ ವೇಳೆಗೇ ಈ ರೋಗ ಜಗತ್ತಿನಿಂದ ಮಾಯವಾಗಲೂಬಹುದು ಅಥವಾ ಅದು ಬೇರೆಯದೇ ಸ್ವರೂಪವನ್ನೂ ಪಡೆದುಕೊಳ್ಳಬಹುದು. ಆದ್ದರಿಂದಲೇ ಮುನ್ನೆಚ್ಚರಿಕೆ ಕ್ರಮವೇ ಉತ್ತಮ ಔಷಧಿ. ಯಾಕೆಂದರೆ ಕೊರೊನಾ ವೈರಸ್‌ ಅತ್ಯಂತ ದುರ್ಬಲವಾದುದು. ಗಾಳಿಯಲ್ಲಿ ಹೆಚ್ಚು ಹೊತ್ತು ಬಾಳಲಾರದು. ರೋಗನಿರೋಧಕ ಶಕ್ತಿ ಸಮರ್ಥವಾಗಿದ್ದಾಗ ಅದು ದೇಹವನ್ನು ಘಾಸಿ ಮಾಡುವುದಿಲ್ಲ. ಇತರ ಮಾರಣಾಂತಿಕ ರೋಗಗಳು ದೇಹದ ಎಲ್ಲ ಅಂಗಗಳನ್ನು ಏಕಕಾಲಕ್ಕೆ ಘಾಸಿ ಮಾಡಿದಂತೆ, ಕೊರೋನಾ ದೇಹದ ಎಲ್ಲ ಅಂಗಗಳ ಮೇಲೆ ಧಾಳಿ ಮಾಡುವುದಿಲ್ಲ. ಅದು ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ಆದರೆ, ಉತ್ತಮ ರೋಗನಿರೋಧಕ ಶಕ್ತಿ ಇದ್ದರೆ, ಅದು ಔಷಧಿಯಿಂದ ಗುಣವಾಗಬಲ್ಲದು. ಸಾಮಾನ್ಯ ವಾಗಿ ಭಾರತೀಯರಲ್ಲಿ ರೋಗನಿರೋಧಕ ಶಕ್ತಿ ತುಸು ಹೆಚ್ಚೇ ಎನ್ನಬಹುದು. ಸದ್ಯಕ್ಕೆ ಧೈರ್ಯವೇ ನಮ್ಮ ಮುಂದಿರುವ ಸಾಧನ.

ಕೆ. ಸಿ. ರಘು

ಟಾಪ್ ನ್ಯೂಸ್

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.