ವಜ್ರಯಾನಕ್ಕೆ ಶುಭಕರಸಿಂಹರ ಕೊಡುಗೆ


Team Udayavani, Feb 25, 2018, 8:15 AM IST

s-6.jpg

ಟಿಬೆಟ್‌ನಲ್ಲಿ ವಜ್ರಯಾನ ಭಾರತದ ಮೂಲದಿಂದ ಹೋಗಿ ಬೆಳೆಯಿತು. ಇದರಲ್ಲಿ ಎರಡು ಪರಂಪರೆಗಳು ಆದವು. ಇದಕ್ಕೆ ಕಾರಣ, ಎರಡು ಗುರುಪರಂಪರೆಗಳು ಉಂಟಾದದ್ದು. ಒಂದು ಸಂಪ್ರದಾಯಕ್ಕೆ ಕಾಂಗ್ಯರ್‌  ಎಂದೂ, ಮತ್ತೂಂದಕ್ಕೆ ತೆಂಗ್ಯುರ್‌ ಎಂದೂ ಹೆಸರು. ಕ್ರಿ.ಶ. 767ರಲ್ಲಿ ಶಾಂತರಕ್ಷಿತನು ಟಿಬೆಟಿನಲ್ಲಿ ಒಂದು ಬೌದ್ಧ ಧರ್ಮದ ಶಾಖೆಯನ್ನು ಸ್ಥಾಪನೆ ಮಾಡಿದನು. ಇದು ವಜ್ರಯಾನ ಎನಿಸಿಕೊಂಡಿತು. ಮುಂದೆ ಪದ್ಮಸಂಭವನು ಈ ದೇಶದಲ್ಲಿ ವಜ್ರಯಾನ ಬೌದ್ಧಧರ್ಮವನ್ನು ಮತ್ತಷ್ಟು ಪ್ರಚುರಪಡಿಸಿದನು. ಅವನು ಅಲ್ಲಿನ ಜನರ ಪಾಲಿಗೆ ದೇವತೆಯೇ ಆದನು.

 ಮಹಾಅತ್ರಿ ಮತ್ತು ಮಹಾಮುದ್ರ ಇವು ತಂತ್ರದ ಪ್ರಮುಖ ಸಾಧನಾ ಅಂಗಗಳು. ಅವುಗಳಿಗೆ ಕ್ರಮವಾಗಿ ದೊjಗ್‌ಚೆನ್‌ ಮತ್ತು ಛಗ್‌ಛೆನ್‌ ಎಂದು ಹೆಸರು. ಇವು ಬೌದ್ಧಧರ್ಮದ ಕಾರಣದಿಂದ ವಿಕಾಸವಾದವು. ಟಿಬೆಟ್ಟಿನ ಬೌದ್ಧಧರ್ಮ ಮತ್ತು ಷಿಂಗನ್‌ ಬೌದ್ಧಧರ್ಮ ಇವು ವಜ್ರಯಾನದ ಎರಡು ಕವಲುಗಳು. ಈಗ ಷಿಂಗನ್‌ ಬೌದ್ಧಧರ್ಮ ಕುರಿತು ನೋಡೋಣ. ಇದು ಕೂಡ ವಜ್ರಯಾನದ ಒಂದ ಶಾಖೆ. ಇದು ಬೆಳೆದದ್ದು ಹರಡಿದ್ದು ಜಪಾನ್‌ ದೇಶದ ದ್ವೀಪಗಳಲ್ಲಿ. ಸೈಚೂಕೂ ಕಯ್‌, ಹೋನೆನ್‌, ನಿಖೀರೆನ್‌, ಎಇಸೈ, ಇಂಗೆನ್‌ ಮುಂತಾದವರು ಇದನ್ನು ಜಪಾನಿನಲ್ಲಿ ಸ್ಥಾಪಿಸಿದರು, ಬೆಳೆಸಿದರು. ಬೌದ್ಧಧರ್ಮದ ಅನೇಕ ಪ್ರಮುಖ ಶಾಖೆ ಉಪಶಾಖೆಗಳಾಗುವಂತೆ ಇಲ್ಲೂ ಕೂಡ ಷಿಂಗನ್‌ ಬೌದ್ಧಧರ್ಮದಲ್ಲಿ ಕೆಲವು ಉಪಶಾಖೆಗಳಾದವು. ಅವುಗಳನ್ನು ತೆಂಡೈ, ಶಿಂಗನ್‌, ಶುದ್ಧಭೂಮಿ, ಜೆನ್‌, ನಿಖೀರೆನ್‌ ಇಂಥ ಕೆಲವು ಉಪಶಾಖೆಗಳು. ಇಂದು ಜೆನ್‌ ಬೌದ್ಧಧರ್ಮದ ಅತ್ಯಂತ ಪ್ರಮುಖ ಅಂಗವೆನೋ ಎಂಬಂತೆ ಬೆಳೆದಿದೆ. ಇದಕ್ಕೆ ಅಲನ್‌ ವ್ಯಾಟ್ಸ್‌, ಓಶೋ ರಜನೀಶರಂಥ ಜನಪ್ರಿಯ ಪ್ರವಚನಕಾರರು ಮತ್ತು ಡಿ. ಟಿ. ಸುಜುಕಿಯವರಂಥ ವಿದ್ವಾಂಸರ ಪ್ರಯತ್ನಗಳು ಕಾರಣ.

ಷಿಂಗನ್‌ ಬೌದ್ಧಧರ್ಮಕ್ಕೆ ಕೆಲವು ಬೌದ್ಧ ಪಠ್ಯಗಳು ಮೂಲಾಧಾರ. ಈ ಪಂಥದವರಿಗೆ ಹೃದಯಸೂತ್ರ, ಅನಂತಜೀವನ ಸೂತ್ರ, ಪ್ರಜ್ಞಾಪಾರಮಿತ, ಪದ್ಮಸೂತ್ರ, ಅವತಂಸಕ ಸೂತ್ರ ಇವು ಆಧಾರ. ಅದೇ ರೀತಿ ತಂತ್ರಗ್ರಂಥ ಗಳಾದ ವಜ್ರಶೇಖರ ತಂತ್ರ, ಮಹಾವೈರೋಚನ ತಂತ್ರ ಇವು ಸಹ ನೆಲೆ ಒದಗಿಸಿವೆ. ಸಾಧನೆ ಮಾಡಿ ಶಕ್ತಿಯನ್ನು ಸಂಪಾದಿಸುವುದು ಅದರಿಂದ ಮೋಕ್ಷ ಪಡೆಯುವುದು ಇದರ ತತ್ವ.

ಮಹಾವೈರೋಚನ ಸೂತ್ರದ ಮತ್ತು ವಜ್ರಶೇಖರ ತಂತ್ರದ ಮೂಲಪುರುಷನೆಂದರೆ ಕೂಕಯ್‌. ಇದೊಂದು ವಜ್ರಯಾನ ಬೌದ್ಧಧರ್ಮದ ಗ್ರಂಥ. ಇದನ್ನು ಮಹಾವೈರೋಚನ ಅಭಿಸಂಬೋಧಿನೀ ತಂತ್ರ ಎಂತಲೂ, ಮಹಾವೈರೋಚನ ಅಭಿಸಂಬೋಧಿನೀ ವಿಕುರ್ವಿತ ಅಧಿಷ್ಠಾನತಂತ್ರ ಎಂದೂ ಕರೆಯಲಾಗಿದೆ. ಪುಸ್ತಕಗಳ ರಚನೆ ಈಗಿನಷ್ಟು ಸುಲಭ ಮತ್ತು ಸಟ್ಟಾ ಆಗಿರದಿದ್ದ ಕಾಲದಲ್ಲಿ ತೀರಾ ಲಿಪಿಬದ್ಧ ಮಾಡಬೇಕು ಎಂಬ ಗ್ರಂಥಗಳು ಮಾತ್ರವೇ ಸೃಷ್ಟಿಗೊಳ್ಳುತ್ತಿದ್ದವು. ಈ ಸಂದರ್ಭದಲ್ಲಿ ಜೀವನದಲ್ಲಿ ತಂತ್ರ ಸಾಧನೆಯಲ್ಲಿ ಉಪಯೋಗ-ವಿನಿಯೋಗವಾಗುವ ಕೃತಿಗಳಾದ್ದರಿಂದ ಅವಕ್ಕೆ ಮಹಣ್ತೀ ಬರುತ್ತಿತ್ತು. ಈ ತಂತ್ರವನ್ನು ಟಿಬೆಟ್ಟಿನಲ್ಲಿ ಚಯಾರ್‌ ಸಾಹಿತ್ಯದ ಭಾಗವಾಗಿ ಪರಿಗಣಿಸಲಾಗುತ್ತದೆ. 

ಇವು ಸಹ ತಂತ್ರಕ್ಕೆ ನೆಲೆ ಒದಗಿಸಿವೆ. ಸಾಧನೆ ಮಾಡಿ ಶಕ್ತಿಯನ್ನು ಸಂಪಾದಿಸುವುದು ಅದರಿಂದ ಮೋಕ್ಷ ಪಡೆಯುವುದು ಇದರ ತಣ್ತೀ.
ಮಹಾವೈರೋಚನ ಸೂತ್ರ ಮಹಾವೈರೋಚನ ಅತ್ಯಂತ ಹಳೆಯ ಬೌದ್ಧತಂತ್ರ. ಭಾರತದಲ್ಲಿ ಈಗ ವೈದಿಕಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವ ಹಿಂದೂ ಧರ್ಮವಿದ್ದು ಅದರಲ್ಲಿ ತಂತ್ರಗಳು ಇರುವುದರಿಂದ ಇಡೀ ತಂತ್ರಗಳು ವೈದಿಕ ಮೂಲದವು ಎಂಬ ಭಾವನೆ ಇದೆ. ಇದರಲ್ಲಿ ತಪ್ಪಿಲ್ಲ. ಆದರೆ ತಂತ್ರಗಳ ಸ್ಥಾಪನೆ, ವಿಕಾಸದಲ್ಲಿ ಬೌದ್ಧಧರ್ಮದ, ಬೌದ್ಧ ಚಿಂತಕರ ಪಾತ್ರ ತೆಗೆದುಹಾಕುವಂತಿಲ್ಲ. ಈಗ ಹಿಂದೂಗಳಲ್ಲಿ ಇರುವ ಪರಮಪವಿತ್ರವೆಂದೂ, ಅತ್ಯಂತ ಸಾತ್ತಿಕವೆಂದೂ ಪರಿಗಣಿಸಲ್ಪಟ್ಟ  ಶ್ರೀವಿದ್ಯಾಸಾಧನೆಯ ಮೂಲ ಬೌದ್ಧಧರ್ಮ ಎಂದು ಮಹಾಮಹೋಪಾಧ್ಯಾಯ ರಾ. ಸತ್ಯನಾರಾಯಣ ಹೇಳಿದ್ದಾರೆ. ಇನ್ನು ಮಹಾವೈರೋಚನ ತಾಂತ್ರಿಕ ಬೌದ್ಧರ ಕೈಪಿಡಿ. ಅದರ ರಚನೆಯ ಕಾಲ ಕ್ರಿ.ಶ. 7ನೇ ಶತಮಾನ. ಭಾರತದ ನಲಂದಾ ವಿಶ್ವವಿದ್ಯಾನಿಲಯದಲ್ಲಿ ಇದರ ರಚನೆಯಾಗಿರಬೇಕು. ಇದರ ಮೂಲ ಸಂಸ್ಕೃತ ಕೃತಿ ನಷ್ಟವಾಯಿತು. ಆದರೆ, ಮೂಲದ ಚೀನೀ,  ಟಿಬೆಟ್‌ ಭಾಷೆಗಳ ಅನುವಾದಗಳು ಉಳಿದುಕೊಂಡವು. ಇದೊಂದು ಸಂತಸದ ವಿಷಯ. ಧಾರ್ಮಿಕ ಗ್ರಂಥಗಳ ಅನುವಾದದ ಮಹಣ್ತೀವನ್ನು ಸೂಚಿಸುವ ಘಟನೆಯಾಗಿಯೂ ಇದನ್ನು ನೋಡಬಹುದು. ಚೀನೀ ಅನುವಾದದಲ್ಲಿ ಮೂಲದ ಸಿದ್ಧಂ ಲಿಪಿಯು ಹಾಗೆ ಉಳಿದುಬಂದಿದೆ.

ಸಂಸ್ಕೃತದಿಂದ ಮಹಾವೈರೋಚನ ಸೂತ್ರವನ್ನು ಚೀನೀ ಭಾಷೆಗೆ ಅನುವಾದ ಮಾಡಿದವನು  ಕ್ರಿ.ಶ. 724ರಲ್ಲಿ ಇದ್ದ ಶುಭಕರಸಿಂಹ. ಅವನು ನಲಂದಾದಿಂದ ಚೀನಾ ದೇಶಕ್ಕೆ ಹೋದಂಥ ಒಬ್ಬ ಬೌದ್ಧ ಗುರು, ವಿದ್ವಾಂಸ. ಅವನು ಚೀನಾಕ್ಕೆ ಬೌದ್ಧ ಧರ್ಮ ತೆಗೆದುಕೊಂಡು ಹೋದ. ಅವನ ಬಳಿಕ ಚೀನಾ ದೇಶಕ್ಕೆ  ವಜ್ರಬೋಧಿ ಮತ್ತು ಅಮೋಘವಿಜಯ ಇವರು ಬಂದು ಬೌದ್ಧಧರ್ಮದ ಪ್ರಚಾರ ಮಾಡಿದರು. ಅನೇಕ ಬೌದ್ಧ ಗ್ರಂಥಗಳು ಅಲ್ಲಿ ಪ್ರಾಚುರ್ಯ ಪಡೆದವು. ವಜ್ರಬೋಧಿ ಗುರು, ಅಮೋಘವಿಜಯ ಅವನ ಶಿಷ್ಯ. ಬಾಹುಬಲಿಯು ರಾಜ್ಯತ್ಯಾಗ ಮಾಡಿ, ತಪಸ್ಸಿಗೆ ನಿಂತಂತೆ, ಈ ಶುಭಕರಸಿಂಹ ಕೂಡ ಮಾಡಿದ. ಅವನು ಈಶಾನ್ಯ ಭಾರತದ ರಾಜಮನೆತನದ ಒಬ್ಬ ರಾಜಕುಮಾರ. ತನ್ನ  13ನೇ ವಯಸ್ಸಿಗೇ ಅವನು ರಾಜಸಿಂಹಾಸವೇರಿದ್ದ. ತನ್ನ ಸಹೋದರರ ಮೇಲೆ ವಿಜಯಸಾಧಿಸಿರೂ ರಾಜ್ಯತ್ಯಾಗ ಮಾಡಿ, ಬೌದ್ಧ ಸನ್ಯಾಸಿಯಾದ. ಅವನಲ್ಲಿದ್ದ ಮಾಂತ್ರಿಕ ಶಕ್ತಿಗಳು ಅವನಿಗೆ ಹೆಸರು ತಂದುಕೊಟ್ಟವು. ಅವನು ನಲಂದಾಕ್ಕೆ ಬಂದ. ಅವನಿಗೆ ಧರ್ಮಗುಪ್ತರೆಂಬ ಗುರುಗಳು ದೊರೆತರು. ಗುರುವಿನಿಂದ ದೀಕ್ಷೆ ಪಡೆದ ಮೇಲೆ ಶುಭಕರಸಿಂಹ ಅಲೆಮಾರಿ ಭಿಕ್ಷುವಾದ. ಮುಂದೆ ಗುರುವಿನ ಆಣತಿಯಂತೆ ಚೀನಾ ದೇಶಕ್ಕೆ ಪ್ರಯಾಣ ಬೆಳೆಸಿದ. ಭಾರತದ ಕೀರ್ತಿ, ಮಹಿಮೆಯನ್ನು ಹಿಮಾಲಯದ ಆಚೆಗೆ ತೆಗೆದುಕೊಂಡು ಹೋದ ಪದ್ಮಸಂಭವ, ಅತೀಶ ದೀಪಂಕರರ ಸಾಲಿಗೆ ಸೇರುವವನು ಈ ಶುಭಕರಸಿಂಹ. ಅವನು ಚೀನಾಕ್ಕೆ ಬಂದಾಗಲೇ ಅವನಿಗೆ ಎಂಬತ್ತು ತುಂಬಿತ್ತು. ಅಲ್ಲಿ ಚೀನಾದ  ತಾಂಗ್‌ ವಂಶದ  ಝುವಾನ್‌ಜಾಂಗ್‌ ಅವನಿಗೆ ಆಶ್ರಯ ನೀಡಿದ. ಇಲ್ಲೂ ಅವನ ತಂತ್ರ-ಮಂತ್ರ ವಿದ್ಯೆಗಳು ಜನರನ್ನು ಬಳಿಗೆ ಸೆಳೆದವು. ಈ ಸಮಯದಲ್ಲಿ ಅವನು ಚೀನೀ ಜನರಿಗೋಸ್ಕರ ಮಹಾವೈರೋಚನ ಸೂತ್ರದ ಚೀನೀ ಭಾಷೆಯ ಅನುವಾದ ಮಾಡಿದ. ಭಾರತೀಯ ಬೌದ್ಧ ಸಂಸ್ಕೃತಿ ಚೀನಾದಲ್ಲಿ ಹರಡಲು ಈ ಗ್ರಂಥ ಬಲು ಮಟ್ಟಿಗೆ ಕಾರಣವಾಯಿತು. ಅವನಿಗೆ ಅಲ್ಲಿ ಯಿ ಝಿಂಗ್‌ ಎಂಬ ಸಮರ್ಥ ಶಿಷ್ಯ ದೊರೆತ.
.
ಶುಗೆಂಡೋ ವಜ್ರಯಾನ ಪಂಥ ಜಪಾನನ್ನು ಪ್ರವೇಶಿಸಿದ್ದು ಗ್ಯೋಜ ಎಂಬ ಭಿಕ್ಷು ಇದನ್ನು ಅಲ್ಲಿ ಪ್ರಚುರಪಡಿಸಿದ. ಒಟ್ಟಾರೆ ಹೇಳುವುದಾದರೆ ಜಪಾನ್‌, ಚೀನಾ ಟಿಬೆಟ್‌ನಲ್ಲಿ ಪ್ರವೇಶಿಸಿದ ಬೌದ್ಧಧರ್ಮ ಮೂಲತಃ ತಾಂತ್ರಿಕ ಸ್ವರೂಪದ್ದು. ಅದರ ಸಾಧನಾ ರಹಸ್ಯದಲ್ಲಿ ಕೆಲವು ವ್ಯತ್ಯಾಸಗಳು ಪಂಥದಿಂದ ಪಂಥಕ್ಕೆ, ಗುರು ಪರಂಪರೆಯಿಂದ ಗುರುಪರಂಪರೆಗೆ ಇವೆ. ತೆಂಡೈ ವಜ್ರಯಾನದಲ್ಲಿ ಸಾಧಕನು ಕೆಲವು ರಹಸ್ಯಗಳನ್ನು ಉಳಿಸಿಕೊಂಡು ಸಾಧನೆ, ಅದಕ್ಕ ಸಂಬಂಧಿಸಿದ ಆಚರಣೆಗಳಲ್ಲಿ ತೊಡಗುತ್ತಾನೆ. ಈ ದೀಕ್ಷೆಗೆ ಪ್ರವಿಷ್ಟ ಎಂದು ಹೆಸರು. ಈ ಪ್ರವಿಷ್ಟಕ್ಕೆ ವಜ್ರಯಾನದಲ್ಲಿ ಪದ್ಮಸೂತ್ರ ಮೊದಲಾದ ತಾಂತ್ರಿಕ ಗ್ರಂಥಗಳ ಸೂಚನೆಗಳಷ್ಟೇ ಮಹತ್ವ ಬಂತು. ಬುದ್ಧನು ಅನೇಕ ಅತೀಂದ್ರಿಯ ಅನುಭವಗಳನ್ನು ಪಡೆದು ಅದನ್ನು ಲೋಕಕ್ಕೆ ಉಪದೇಶಿಸಿದ್ದ, ಹೀಗಾಗಿ, ವಜ್ರಯಾನದ ಉಪದೇಶಕ್ಕೆ ಮೂಲಬೌದ್ಧ ಧರ್ಮದಲ್ಲೆ ಸ್ಥಾನವಿದೆ ಎಂಬುದು ವಜ್ರಯಾನದವರ ವಾದ. ಈ ವಾದವನ್ನು ಒಪ್ಪುವ, ಒಪ್ಪದ ಬೌದ್ಧ ವಿದ್ವಾಂಸರು ಇದ್ದಾರೆ. ಅದು ಸದ್ಯಕ್ಕೆ ನಮ್ಮ ಚರ್ಚೆಯ ವಿಷಯವಲ್ಲ. ಬುದ್ಧನು ಹೇಳಿರುವ ತಂತ್ರ ರಹಸ್ಯಗಳನ್ನು ವಜ್ರಯಾನದ ಸಾಧಕನು ತಾನು ಸ್ವತಃ ಅನುಭವಿಸುವುದು ಹೇಗೆ ಎಂಬುದಕ್ಕೆ ವಜ್ರಯಾನದಲ್ಲಿ ಉತ್ತರವಿದೆ. ಮಂತ್ರಜಪ ಮಾಡುವುದು, ಕೆಲವು ವಿಶಿಷ್ಟ ಮುದ್ರಾಭಂಗಿಗಳನ್ನು ಧಾರಣೆ ಮಾಡುವುದು ಇದಕ್ಕೆ ಉಪಾಯಗಳು. ಇದರಿಂದ ಅತೀಂದ್ರಿಯಾನುಭವವಾಗುತ್ತದೆ. ಅಂತರಂಗದಲ್ಲಿ ಜ್ಞಾನೋದಯವಾಗುತ್ತದೆ. ಸಂಬೋಧಿಯು (ಅರಿವು) ಜಾಗೃತವಾಗುತ್ತದೆ ಎಂಬುದು ವಜ್ರಯಾನದ ತಣ್ತೀÌದರ್ಶನ. ಎಲ್ಲಾ ಭಾರತೀಯ ದರ್ಶನಗಳಂತೆ ವಜ್ರಯಾನ ಕೂಡ ಸ್ವತಃ ಮಾಡಿ-ನೋಡಿ ಸ್ವಅನುಭವ ಪಡೆಯುವ ದಾರಿಗೆ ಮಹತ್ವ ನೀಡಿದೆ. ಹೀಗಾಗಿ, ಇಲ್ಲಿ ಎಲ್ಲವೂ ನಂಬಿಕೆಯಿಂದ ಆರಂಭವಾದರೂ, ಅದು ಅಂಧಶ್ರದ್ಧೆಯಾಗಿ ಮಾರ್ಪಡುವುದಿಲ್ಲ. ಇಂಗ್ಲಿಷಿನಲ್ಲಿ ಟ್ರಸ್ಟ್‌, ಟೆಸ್ಟ್‌, ಟೆಲ್‌ ಎಂಬ ಮಾತಿದೆ. ಇದರರ್ಥ ಮೊದಲು ನಂಬು, ಆದರೆ ನಂತರ ಪರೀಕ್ಷಿಸು, ಸರಿ ಎಂದು ಕಂಡುಬಂದರೆ ಬೇರೆಯವರಿಗೂ ಈ ಕುರಿತು ಹೇಳು ಎಂದು.

ಈ ಸಾಧನೆಯಿಂದ ಜೀವನದಲ್ಲಿ ಮತ್ತು ಸಾಧನೆಯಲ್ಲಿ ಶ್ರದ್ಧೆ ಉಂಟಾಗುತ್ತದೆ. ವಜ್ರಯಾನ ಮಾನವನ ಶ್ರದ್ಧೆಗೆ ಮಹತ್ವ ನೀಡುತ್ತದೆ. ಶ್ರದ್ಧೆ ಆಧರಿಸಿ ಸಾಧನೆ ಮಾಡುವುದರಿಂದ, ದೀಕ್ಷಿತನಾಗಿರುವುದರಿಂದ ಈ ಜನ್ಮದಲ್ಲೇ ಸಾಧಕನು ಪರಮಜ್ಞಾನಿಯಾಗಬಹುದು. ಇದು ತೆಂಡೈ ವಜ್ರಯಾನದ ಉಪದೇಶ. ನಮ್ಮ ದೇಶದಲ್ಲಿ ಏನಾಗಿದೆ ಎಂದರೆ ನಾವು ಬೌದ್ಧ ಧರ್ಮ ಮತ್ತು ಬುದ್ಧನ ಬಗ್ಗೆ ತಿಳಿಯುವುದು ಕಡಿಮೆ. ತಿಳಿದುಕೊಂಡರೂ ಇಂಗ್ಲಿಷ್‌, ಜರ್ಮನ್‌, ಫ್ರೆಂಚ್‌ ಭಾಷೆಗಳಲ್ಲಿ ಇರುವ ವಿದೇಶಿಯರು ಬರೆದ ಪುಸ್ತಕ, ಲೇಖನ, ಜಾಲತಾಣಗಳಿಂದ ಮಾಹಿತಿ ಸಂಗ್ರಹಿಸುತ್ತೇವೆ. ಇದರಿಂದ ಅವರಿಗೆ ಯಾವುದು ವಿಷಯವೋ ಅದು ನಮಗೆ ಅನುಭವ- ಎಂಬ ಈ ಪ್ರಮುಖ ವಿಭಿನ್ನತೆ ಮರೆತುಹೋಗುತ್ತದೆ. ಪ್ರಮುಖವಾಗಿ ದಕ್ಷಿಣಭಾರತದಲ್ಲಿ ಟಿಬೆಟ್‌, ನೇಪಾಳಿ, ಚೀನೀ, ಜಪಾನಿ ಭಾಷೆಗಳನ್ನು ಚೆನ್ನಾಗಿ ಕಲಿಸುವ ಕೇಂದ್ರಗಳೂ ಸ್ಥಾಪನೆ ಆಗಬೇಕು. ಅಲ್ಲಿ ಸಂಸ್ಕೃತ-ಪಾಲಿಯಿಂದ ಈ ಹಿಮಾಲಯದ ಕಡೆಗಿನ ದೇಶಗಳಿಗೆ ಹೋಗಿರುವ ಬೌದ್ಧ ಸಾಹಿತ್ಯದ ಅನುಸಂಧಾನ ನಡೆಯಬೇಕು. ಆಗ ಭಾರತ ಈ ದೇಶಗಳಿಗೆ ಬೌದ್ಧಧರ್ಮದ ಮೂಲಕ, ಅದರಲ್ಲೂ ವಜ್ರಯಾನದ ಮೂಲಕ ಎಷ್ಟೊಂದು ಸಾಹಿತ್ಯ, ಜೀವನ ವಿಧಾನ ಮತ್ತು ಧ್ಯಾನಪದ್ಧತಿಗಳನ್ನು ನೀಡಿದೆ ಎಂಬುದರ ಅಂದಾಜು ಲೆಕ್ಕ ದೊರೆಯುತ್ತದೆ. ಇದರಿಂದ ದಕ್ಷಿಣ ಭಾರತವೂ ಸೇರಿದಂತೆ ಈ ದೇಶ ಎಷ್ಟೊಂದು ಬೌದ್ಧಚಿಂತಕರಿಗೆ ಜನ್ಮ ನೀಡಿದೆ ಎಂಬ ಅರಿವು ನಮ್ಮದಾಗುತ್ತದೆ. ಶೈವ ಸಂಕೇತವಾಗಿರುವ ಹಿಮಾಲಯ ಪ್ರಾಂತ, ಬೌದ್ಧ ಸಂಕೇತವೂ ಹೌದು ಎಂಬ ಅರಿವಿನ ಜಾಗರಣೆ ಈ ಕಾಲದ ಅಗತ್ಯ ಕೂಡ.

ಜಿ. ಬಿ. ಹರೀಶ

ಟಾಪ್ ನ್ಯೂಸ್

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.