ಕ್ಯೂಕೆನ್‌ ಹಾಫ್ ಟುಲಿಪ್‌ ಹೂಗಳ ಪರಿಷೆ


Team Udayavani, Jun 11, 2017, 4:18 PM IST

koken.jpg

ಇದು ಕೇವಲ ಎಂಟು ವಾರಗಳ ಪುಷ್ಪಲೋಕ. ಉಳಿದಂತೆ ತೋಟ ಬೆಳೆಯುವ ಚಟುವಟಿಕೆಗಳ ಪುಟ್ಟ ಹಳ್ಳಿ. ಈ ಹಳ್ಳಿಯ ಹೆಸರು ಲಿಸ್ಸೆ. ಏಳೆಂಟು ಅಂತಸ್ತಿನ ಹೆಂಚಿನ ಮನೆಗಳಿರುವ ಈ ಗ್ರಾಮ ವಿಶ್ವ ಪ್ರಸಿದ್ಧಿಯ ಕ್ಯೂಕೆನ್‌ ಹಾಫ್ ವಾರ್ಷಿಕ ಪುಷ್ಪ ಉತ್ಸವದ ತಾಣ.

ಇತ್ತೀಚೆಗೆ ಈ ಪ್ರಖ್ಯಾತ ಹೂಗಳ ಜಗತ್ತಿಗೆ ಭೇಟಿ ನೀಡಿದಾಗ ಅದು ಮುಗಿಯಲು ಕೆಲವೇ ದಿನಗಳು ಉಳಿದಿದ್ದವು. ಆದರೆ, ದೈನಂದಿನ ವ್ಯವಸ್ಥೆ-ನಿರ್ವಹಣೆ ಆರಂಭಕ್ಕಿರುವಂತೆಯೇ ಇತ್ತು.

ನೆದರ್‌ಲ್ಯಾಂಡ್‌ನ‌ ನದಿ ಹೇಗ್‌ನಿಂದ ಕ್ಯೂಕೆನ್‌ ಹಾಫ್ ತಲುಪುವ ವೇಳೆಗೆ ಅಲ್ಲಿ ಸೇರಿತ್ತು ಜಾತ್ರೆ. ಅದು ಅಂತಿಂಥ ಪರಿಷೆ ಅಲ್ಲ. ಅಲ್ಲಿ ಸೇರಿದ್ದ ವೀಕ್ಷಕರಲ್ಲಿ ಶೇಕಡ 75ರಷ್ಟು ಮಂದಿ ವಿದೇಶಿಯರು. 68 ವರ್ಷಗಳಿಂದ ಸತತವಾಗಿ ಏರ್ಪಾಡಾಗುತ್ತಿರುವ ಈ ಹಬ್ಬಕ್ಕೆ ಈ ವರ್ಷ ಗೇಟುಗಳು ತೆರೆದುಕೊಂಡಿದ್ದು ಮಾರ್ಚ್‌ 23ರಂದು.

32 ಹೆಕ್ಟೇರುಗಳಷ್ಟು ವಿಶಾಲ ಆವರಣದಲ್ಲಿ ಹರಡಿಕೊಂಡಿದ್ದ ಕ್ಯೂಕೆನ್‌ ಹಾಫ್ ಪುಷ್ಪ ಉತ್ಸವವನ್ನು  ನಡೆದಾಡಿ ನೋಡಬಹುದು. ಸೈಕಲ್‌ಗ‌ಳಲ್ಲಿ ಸುತ್ತಬಹುದು. ಪುಟ್ಟ ದೋಣಿಗಳಲ್ಲೂ ಉತ್ಸವ ವೀಕ್ಷಿಸಲು ಅವಕಾಶವಿದೆ.
ಕಣ್ಣು ಹಾಯಿಸಿದ ಕಡೆಗಳಿಗೆ ನಮಗೆ ಕಾಣಸಿಗುವುದು ಲಕ್ಷ ಲಕ್ಷ ಬಗೆಬಗೆಯ ಹೂಗಳು ಕಣ್ತುಂಬುವ ಹಸಿರು ಸೌಂದರ್ಯ, ವಿವಿಧ ರೀತಿಯ ಉದ್ಯಾನಗಳ ಸಾಲು.

ವಿದ್ಯುತ್‌ ಬಲ್ಬ್ ಮಾದರಿಯ ಟುಲಿಪ್‌ ಹೂಗಳೇ ಈ ಪುಷ್ಪ ಜಗತ್ತಿನ ಹೆಗ್ಗಳಿಕೆ. ಪ್ರತಿವರ್ಷ ಪ್ರದರ್ಶನಕ್ಕೆ ಲಭ್ಯವಿರುವ ಟುಲಿಪ್‌ ಹೂಗಳ ಸಂಖ್ಯೆ ಎಷ್ಟು ಗೊತ್ತೆ? 70 ಲಕ್ಷ. ಕಾಮನಬಿಲ್ಲಿನಲ್ಲಿ ಕಾಣುವ ಬಣ್ಣಗಳೆಲ್ಲವನ್ನು ನೋಡಬಹುದಾದ ಟುಲಿಪ್‌ ಹೂಗಳ ಹಬ್ಬ ಇಲ್ಲಿತ್ತು.

ಹಾಲೆಂಡ್‌ನ‌ ಪುಟಾಣಿ ದೇಶವಾದರೂ ಇಲ್ಲಿರುವ ಆಕರ್ಷಣೆಗಳು ಹತ್ತುಹಲವು. ಅವುಗಳಲ್ಲಿ ಬಹು ಪ್ರಸಿದ್ಧವಾದುದು ಹೂಗಳ ಉತ್ಸವ. ಇದು ನೀಡುವ ಅನುಭವಗಳು ಒಂದೆರಡಲ್ಲ. ಕಣ್ಮನ ಸೆಳೆಯುವ ಥರಾವರಿ ಬಣ್ಣಗಳ ಹೂಗಳ ಜೊತೆ ಜೊತೆಗೆ ಮನಸ್ಸು ಮುದಗೊಳಿಸುವ ಸಂಗೀತಸುಧೆ ನಿಮ್ಮ ಕಿವಿಗಳಿಗೆ ತಲುಪುತ್ತಿರುತ್ತವೆ.

ಟುಲಿಪ್‌ ಹೂಗಳದ್ದೇ ಮೇಲುಗೈ
ಈಗ ವಿಶ್ವವಿಖ್ಯಾತವಾಗಿರುವ ಕ್ಯೂಕೆನ್‌ ಹಾಫ್ ಸುಂದರ ಭೂರಮೆ ರೂಪುಗೊಳ್ಳಲು ಹಿಡಿದಿದ್ದು ಬರೋಬರಿ ಒಂದೂವರೆ ಶತಮಾನಕ್ಕೂ ಅಧಿಕ. 1857ರಲ್ಲಿ ಜೋಚರ್‌ ಎಂಬಾತ ಇಲ್ಲಿ ಸಿದ್ಧಪಡಿಸಿದ್ದು ಇಂಗ್ಲಿಷ್‌ ಭೂವಿನ್ಯಾಸದ ಉದ್ಯಾನ. ಆರಂಭದಲ್ಲಿ ಬೇರೆ ಬೇರೆ ಹೂಗಳ ಜೊತೆಗೆ ಟುಲಿಫ್ ಬಲ್ಬ್ ಹೂಗಳೂ ಇರುತ್ತಿದ್ದವು. ಕಳೆದ ಆರೇಳು ದಶಕಗಳಿಂದ ಇಲ್ಲಿ ಟುಲಿಪ್‌ಗ್ಳದ್ದೇ ಮೇಲುಗೈ.

ಪ್ರತಿ ಋತುವಿನಲ್ಲೂ ವಿನ್ಯಾಸ ಬದಲಿಸುವ ರಿವಾಜು ಇರುವ ಕ್ಯೂಕೆನ್‌ ಹಾಫ್ ಉದ್ಯಾನದಲ್ಲಿ 40ಕ್ಕೂ ಹೆಚ್ಚು ಬೆಳೆಗಾರರು ಟುಲಿಪ್‌ಗ್ಳನ್ನು ಬೆಳೆಯಲು ಭೂಮಿಯನ್ನು ಕಾದಿರಿಸುತ್ತಾರೆ! ವರ್ಷವರ್ಷವೂ ಹೊಸ ನೋಟಗಳನ್ನು ಸಿದ್ಧಗೊಳಿಸುವುದೇ ಇದರ ಹಿಂದಿನ ರಹಸ್ಯ.

ಹಾಲೆಂಡ್‌ಗೆ ಜಾಗತಿಕ ಮಟ್ಟದಲ್ಲಿ ಹೆಸರು ತಂದುಕೊಟ್ಟಿರುವ ಪುಷ್ಪ ಟುಲಿಪ್‌. ಅದರ ಈ ದೇಶಕ್ಕೆ ಬಂದ ಚಾರಿತ್ರಿಕ ಹಿನ್ನೆಲೆಯನ್ನು ನಿರೂಪಿಸುವ ಉದ್ಯಾನವೂ ಇಲ್ಲಿತ್ತು. ವಿಶೇಷ ಅನುಭೂತಿಯನ್ನು ತಂದುಕೊಡುವ ಹೂ ಉತ್ಸವ ಸ್ಫೂರ್ತಿ ತುಂಬುವ ಅನೇಕ ಉದ್ಯಾನಗಳನ್ನು ವೀಕ್ಷಕರಿಗೆ ಕೊಡುವ ಉತ್ಸವದ ಉದ್ದೇಶ. ಇದರೊಂದಿಗೆ ಉತ್ಸವದಲ್ಲಿ ಮಕ್ಕಳಿಗಾಗಿ ಆಸಕ್ತಿ ತರುವ ಚಟುವಟಿಕೆ, ಹೂಮಾರುಕಟ್ಟೆ , ತಿಂಡಿತಿನಿಸು, ಸಂಗೀತ ಕಾರ್ಯಕ್ರಮ ಇವೆಲ್ಲ ಇದ್ದರೂ ಕಾಲಮಿತಿಯಿಂದ ಇದನ್ನೆಲ್ಲ ತಪ್ಪಿಸಿಕೊಳ್ಳಬೇಕಾಯಿತು. ಇದರಲ್ಲಿ ಪುಷ್ಪಗಳ ಪಥಸಂಚಲನವೂ ಇತ್ತು.

ಹಾಲೆಂಡ್‌ನ‌ ಹೆಸರಾಂತ ಕಲಾವಿದರು ಕ್ಯೂಕೆನ್‌ ಹಾಫ್ ಪ್ರತಿವರ್ಷ ರೂಪಿಸುವುದು ರೂಢಿ. ಇಲ್ಲಿ ಹೀಗಾಗಿ ಚಿತ್ರಕಲಾ ಪುಷೊ³àದ್ಯಾನ. ಶಿಲ್ಪ ಹೂ ಅಂಗಳ, ಮರದ ಬೂಡ್ಸ್‌ಗಳಲ್ಲಿ ಹೂ ಜೋಡಿಸುವುದು, ಇವೆಲ್ಲದರ ಜೊತೆಗೆ ಪುಷ್ಪ ಅಲಂಕೃತ ದೋಣಿಗಳಲ್ಲಿ ಸಾಗಿ ಟುಲಿಪ್‌ ವೈಭವ ವೀಕ್ಷಣೆ ವೀಕ್ಷಕರಿಗೆ ವಿಶಿಷ್ಟ ಅನುಭವ.

ವರ್ಷವರ್ಷವೂ ಹೊಸ ವಿನ್ಯಾಸ
ವರ್ಷಂಪ್ರತಿ ಇಡೀ ಉತ್ಸವದ ವಿನ್ಯಾಸ ಬದಲಾಗುತ್ತದೆ. ಈ ವರ್ಷ “ಡಚ್‌ ವಿನ್ಯಾಸ’ವಿತ್ತು. ಡಚ್‌ ಜನರ ಹೂಬೆಳೆಯ ಆಸಕ್ತಿ-ಪ್ರೇರಣೆಗಳಿಗೆ ಅನುಸಾರವಾಗಿ ನಡೆದಿದ್ದು ಎಲ್ಲರ ಆಕರ್ಷಣೆಯ ಕೇಂದ್ರಬಿಂದು.

ಕ್ಯೂಕೆನ್‌ ಹಾಫ್ನ ಮುಖ್ಯಗುರಿ ಹಾಲೆಂಡ್‌ನ‌ ಹೂ ಉದ್ಯಮದ ಇಂದು-ಮುಂದುಗಳ ಪ್ರಸ್ತುತಿ. ಇದು ಅಂತಾರಾಷ್ಟ್ರೀಯ ಹಾಗೂ ಸ್ವತಂತ್ರ ಚಟುವಟಿಕೆಯಾಗಿರಬೇಕೆಂಬುದು ಇನ್ನೊಂದು ಆಶಯ. ವಿದ್ಯುತ್‌ ಬಲ್ಬ್ಗಳನ್ನೇ ಹೋಲುವ ಟುಲಿಪ್‌ಗ್ಳ ಭವಿಷ್ಯದ ಹಾದಿಯನ್ನು ಸದೃಢವಾಗಿ ಮುನ್ನಡೆಸುವುದಕ್ಕೆ ಪ್ರವಾಸಿ ಮತ್ತು ವ್ಯವಹಾರ ಎರಡನ್ನು ಬೆಸುಗೆ ಮಾಡಿಕೊಂಡಿರುವುದು ಪ್ರತಿ ಹಂತದಲ್ಲೂ ಇದೆ. ನೀರೆತ್ತಲು, ಗೋಧಿಹಿಟ್ಟು ಮಾಡಲು ಗಾಳಿಯಂತ್ರಗಳನ್ನು ನೂರಾರು ವರ್ಷಗಳಿಂದ ಉಪಯೋಗಿಸುತ್ತಿರುವ ದೇಶ ಹಾಲೆಂಡ್‌. ಗಾಳಿಯಂತ್ರ ಈ ದೇಶದ ಪ್ರಮುಖ ಸಂಕೇತ. ಇದನ್ನೇ ಮರದಿಂದ ನಿರ್ಮಿಸಿ ಉತ್ಸವದಲ್ಲಿ ಸ್ಥಾಪಿಸಿರುವುದು ಬಹುಮುಖ್ಯ ಆಕರ್ಷಣೆ. ಈ ಉತ್ಸವ ಪ್ರಮುಖವಾಗಿ ಪ್ರವಾಸಿಗಳನ್ನು ಸೆಳೆಯಲು ಏರ್ಪಡಿಸುವಂತೆ ಕಂಡರೂ ವ್ಯಾಪಾರ-ವಹಿವಾಟು, ವಲಯಗಳಿಗೆ ಇಲ್ಲಿದೆ ಒತ್ತು. ಹತ್ತು ಲಕ್ಷ ಪ್ರವಾಸಿಗರ ಭೇಟಿ ನೀಡುವ ಕ್ಯೂಕೆನ್‌ ಹಾಫ್ಗೆ ನೂರಕ್ಕೂ ಹೆಚ್ಚು ದೇಶಗಳ ಮಂದಿ ಬರುವರು.

ಚಿತ್ರ, ಬರಹ: ಎನ್‌. ಜಗನ್ನಾಥ ಪ್ರಕಾಶ್‌

ಟಾಪ್ ನ್ಯೂಸ್

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.