ದಲೈಲಾಮಾ ಚಿಂತನೆಗಳು ಪ್ರೀತಿ ಮತ್ತು ಕರುಣೆ ಜೀವನದ ತಿರುಳು


Team Udayavani, Mar 11, 2018, 7:30 AM IST

10.jpg

ಪೂಜ್ಯ ದಲೈಲಾಮಾ ವಿಶ್ವದ ಈಗಿರುವ ಗುರುಗಳಲ್ಲಿ  ಪ್ರಮುಖರು. ಅಪಾರವಾದ ಧ್ಯಾನ ಮತ್ತು ಬೌದ್ಧ ತಂತ್ರ-ಮಂತ್ರಗಳ ಆಳವಾದ ಅರಿವಿರುವ ಅವರು ಮಾತನಾಡುವುದನ್ನು ಕೇಳಿದರೆ ಎಷ್ಟು ಸರಳವಾಗಿ, ಏನನ್ನೂ ಉಲ್ಲೇಖೀಸದೆ ಮಾನವೀಯ ಅನುಕಂಪವನ್ನು ನಮಗೆ ದಾಟಿಸುತ್ತಾರೆ ಎಂದು ಅರಿವಾಗುತ್ತದೆ.  ಕೆಳಗೆ ಅವರ ಪ್ರೀತಿ ಮತ್ತು ಕುರುಣೆ ಪುಸ್ತಕದಿಂದ  (ಲವ್‌ ಅಂಡ್‌ ಕಂಪ್ಯಾಷನ್‌) ನಾನು ಅನುವಾದಿಸಿರುವ ಅವರ ಮಾತುಗಳನ್ನು ನೀಡಿದ್ದೇನೆ.

ನನ್ನ ಪ್ರಕಾರ ಪ್ರತಿಯೊಂದು ಮನುಷ್ಯ ಜೀವಿಗೂ ಒಳಗೇ ನಾನು ಎಂಬ ಅರಿವು ಇರುತ್ತದೆ. ಈ ಭಾವನೆ ಏಕಿದೆ ಎಂದು ವಿವರಿಸಲಾಗುವುದಿಲ್ಲ, ಆದರೆ ಅದು ಇದೆ. ಇದರ ಜತೆಗೇ ಸಂತೋಷದ ಬಯಕೆ ಮತ್ತು ದುಃಖ ವನ್ನು ಮೀರುವ ಬಯಕೆ ಬರುತ್ತವೆ. ಇದನ್ನು ಸಾಕಷ್ಟು ಸರಿ ಎಂದು ಸಮರ್ಥಿಸಬಹುದು. ಎಷ್ಟು ಸಾಧ್ಯವೋ ಅಷ್ಟೂ ಸಂತೋಷ ಸಾಧಿಸಲು ನಮಗೆ ಸಹಜವಾದ ಹಕ್ಕಿದೆ ಅದೇ ಥರಾ ದುಃಖವನ್ನು ಮೀರಲು ಸಹ ನಮಗೆ ಹಕ್ಕಿದೆ. 

 ಇಡೀ ಮನುಷ್ಯ ಇತಿಹಾಸವೇ ಈ ಭಾವನೆಯ ಆಧಾರದ ಮೇಲೆ ಬೆಳೆದುಬಂದಿದೆ. ಈ ಭಾವನೆ ಕೇವಲ ಮನುಷ್ಯರಿಗೇ ಸೀಮಿತವಾಗಿಲ್ಲ. ಬೌದ್ಧ ದೃಷ್ಟಿಕೋನದ ಪ್ರಕಾರ ಅತ್ಯಂತ ಸಣ್ಣ ಕ್ರಿಮಿಯಲ್ಲೂ ಈ ಭಾವನೆ ಉಂಟು. ಅದು ಸಂತೋಷ ಗಳಿಸಲು ಮತ್ತು ದುಃಖದ ಪರಿಸ್ಥಿತಿ ನಿವಾರಿಸಿಕೊಳ್ಳಲು ನೋಡುತ್ತಿರುತ್ತದೆ.

ಆದರೆ, ಮನುಷ್ಯ ಜೀವಿಗಳಿಗೂ ಮತ್ತು ಇನ್ನಿತರ ಪ್ರಾಣಿಸಂಕುಲಕ್ಕೂ ಕೆಲವು ಮುಖ್ಯವಾದ ವ್ಯತ್ಯಾಸಗಳಿವೆ. ಅದರ ಮೂಲ ಮಾನವರ ಬುದ್ಧಿಶಕ್ತಿ. ನಮಗಿರುವ ಬುದ್ಧಿಶಕ್ತಿಯ ಕಾರಣದಿಂದ ನಾವು ಹೆಚ್ಚು ಮುಂದುವರೆದವರಾಗಿದ್ದೇವೆ ಮತ್ತು ನಮಗೆ ದೊಡ್ಡ ಸಾಮರ್ಥ್ಯವಿದೆ. ನಾವು ಭವಿಷ್ಯದ ಕುರಿತು ದೂರದವರೆಗೆ ಯೋಚಿಸಬಲ್ಲೆವು. ನಮ್ಮನ್ನು ಹಲವಾರು ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗಬಲ್ಲಷ್ಟು ಶಕ್ತಿ ನಮ್ಮ ನೆನಪಿಗೆ ಇದೆ. ಅಲ್ಲದೆ ಅನೇಕ ಶತಮಾನಗಳ ಹಿಂದಿನ ಘಟನೆಗಳನ್ನು ನೆನಪಿಸಬಲ್ಲ ಮೌಖೀಕ ಮತ್ತು ಲಿಖೀತ ಪರಂಪರೆಗಳು ಸಹ ನಮಗೆ ಉಂಟು. ಈಗ, ವಿಜ್ಞಾನದ  ವಿಧಾನಗಳ ಕಾರಣದಿಂದ ಲಕ್ಷಾಂತರ ವರ್ಷಗಳ ಹಿಂದೆ ಘಟಿಸಿದ ಘಟನೆಗಳನ್ನೂ ನಾವು ಪರೀಕ್ಷಿಸಬಲ್ಲೆವು.

ಒಟ್ಟಿನಲ್ಲಿ ನಮ್ಮ ನಮ್ಮ ಬುದ್ಧಿಶಕ್ತಿ ನಮ್ಮನ್ನು ಜಾಣರನ್ನಾಗಿಸಿದೆ. ಆದರೆ ಅದೇ ವೇಳೆಗೆ ಅದೇ ಜಾಣತನದ ಕಾರಣದಿಂದಲೇ, ನಮಗೆ ಅನುಮಾನಗಳು ಹೆಚ್ಚು, ಸಂದೇಹಗಳು ಹೆಚ್ಚು. ಹೀಗಾಗಿ ಭಯವೂ ಹೆಚ್ಚು. ಪ್ರಾಯಃ ಭಯದ ಕಲ್ಪನೆ ಬೇರೆ ಪ್ರಾಣಿಗಳಿಗಿಂತಲೂ ಮನುಷ್ಯರಲ್ಲೇ ಜಾಸ್ತಿ ಬೆಳೆದಿರಬೇಕು. ಇದರ ಜತೆಗೆ ನಮ್ಮ ಬುದ್ಧಿಶಕ್ತಿ ಕಾರಣದಿಂದ ಮಾನವ ಕುಲದೊಳಗೆ, ಮನುಷ್ಯ ಕುಟುಂಬದ ಒಳಗೆ ಸಂಘರ್ಷ ಏರ್ಪಟ್ಟಿದೆ. ಇನ್ನು ಸಮುದಾಯಗಳ ನಡುವಿನ ಸಂಘರ್ಷ, ರಾಷ್ಟ್ರಗಳ ನಡುವಿನ ಸಂಘರ್ಷ, ವ್ಯಕ್ತಿಯ ಒಳಗೇ ನಡೆಯುವ ಸಂಘರ್ಷಗಳ ವಿಷಯ ಹೇಳುವುದೇ ಬೇಡ. ಎಲ್ಲ  ಸಂಘರ್ಷಗಳು ಮತ್ತು ವೈರುಧ್ಯಗಳ ಮೂಲ ನಮ್ಮ ಬುದ್ಧಿಶಕ್ತಿಯ ಸೆಲೆ. ಆದ್ದರಿಂದ ದುರಂತವೆಂದರೆ, ಬುದ್ಧಿಶಕ್ತಿಯು ಕೆಲವು ಸಲ ತುಂಬ ಅಸಂತೋಷದ ಮನಃಸ್ಥಿತಿಯನ್ನು ಸೃಷ್ಟಿಸಬಲ್ಲದು. 

ಈ ಅರ್ಥದಲ್ಲಿ ಅದು ಮಾನವ ಸಂಕಟದ ಮತ್ತೂಂದು ಮೂಲ. ಈ  ದೃಷ್ಟಿಯಿಂದ ಭೂಮಿಯ ಮೇಲಿರುವ ಸಕಲ ಪ್ರಾಣಿ ಮತ್ತು ಸಸ್ಯಕುಲಗಳ ಪೈಕಿ ಬಹಳ ತೊಂದರೆ ಮಾಡುವ ಜೀವಿಯೆಂದರೆ ಮಾನವ ಜೀವಿ. ಇದಂತೂ ಸ್ಪಷ್ಟ. ಭೂಗ್ರಹದ ಮೇಲೆ ಮಾನವರೇ ಇರದಿದ್ದರೆ ಭೂಮಿ ಹೆಚ್ಚು ಸುರಕ್ಷಿತ ಎಂದು ನಾನು ಕಲ್ಪನೆ ಮಾಡಿಕೊಳ್ಳುತ್ತೇನೆ! ಲಕ್ಷಾಂತರ ಮೀನು, ಕೋಳಿ ಮತ್ತಿತರ ಸಣ್ಣ ಪ್ರಾಣಿಗಳು ಒಂದು ಬಗೆಯ ಅಸಲಿ ಮುಕ್ತಿ ಅನುಭವಿಸುವುದಂತೂ ಖಂಡಿತ!

ಆದ್ದರಿಂದ, ಮಾನವರ ಬುದ್ಧಿಶಕ್ತಿಯನ್ನು ರಚನಾತ್ಮಕವಾಗಿ ಬಳಸಿಕೊಳ್ಳುವುದು ಮುಖ್ಯ. ಇದೇ ಕೀಲಿಕೈ. ಈ ಶಕ್ತಿಯನ್ನು ಸರಿಯಾಗಿ ಬಳಸಿಕೊಂಡರೆ ಮಾನವರು ಪರಸ್ಪರ ಹಾನಿಮಾಡಿಕೊಳ್ಳುವುದು ಕಡಿಮೆಯಾಗುವುದು ಮತ್ತು ಭೂಮಿಗೆ ಆಗುವ ಹಾನಿ ಕುಗ್ಗುವುದು ಮಾತ್ರವಲ್ಲ, ಪ್ರತ್ಯೇಕ ಮನುಷ್ಯರು ಕೂಡ ತಮ್ಮೊಳಗೆ ಹೆಚ್ಚು ಸಂತೋಷದಿಂದ ಇರಬಹುದು. ಅದು ನಮ್ಮ ಕೈಯಲ್ಲಿದೆ. ನಮ್ಮ ಬುದ್ಧಿಶಕ್ತಿಯನ್ನು ಸರಿಯಾಗಿ ಅಥವಾ ತಪ್ಪು ದಾರಿಯಲ್ಲಿ ಬಳಸುವುದು ಬಿಡುವುದು ನಮಗೇ ಬಿಟ್ಟ ವಿಷಯ. ಯಾರೂ ಅವರ ಮೌಲ್ಯಗಳನ್ನು ನಮ್ಮ ಮೇಲೆ ಹೇರಲಾರರು. ನಮ್ಮಲ್ಲಿರುವ ಸಾಮರ್ಥ್ಯವನ್ನು ರಚನಾತ್ಮಕವಾಗಿ ಬಳಸಲು ನಾವು ಹೇಗೆ ಕಲಿಯಬಹುದು? ಮೊದಲು ನಾವು ನಮ್ಮ ಸ್ವಭಾವ ಗುರುತಿಸಬೇಕು ಬಳಿಕ ನಮಗೆ ದೃಢನಿರ್ಧಾರ ಇದ್ದದ್ದೇ ಆದರೆ ಮಾನವ ಹೃದಯವನ್ನು ಪರಿವರ್ತಿಸುವಂಥ ಒಂದು ದಿಟವಾದ ಸಾಧ್ಯತೆ ಇದೆ.

ಮಾನವರು ವೈಯಕ್ತಿಕವಾಗಿ ಹೇಗೆ ಸಂತೋಷ ಪಡೆಯಬಹುದು ಎಂಬುದರ ಕುರಿತು ನಾನು ಇವುಗಳ ಆಧಾರದ ಮೇಲೆ ಮಾತನಾಡುತ್ತೇನೆ. ಏಕೆಂದರೆ  ವ್ಯಕ್ತಿ ಮಿಕ್ಕೆಲ್ಲಕ್ಕೂ ಮೂಲ ಎಂಬುದು ನನ್ನ ನಂಬಿಕೆ. ಯಾವುದೇ ಸಮುದಾಯದೊಳಗೆ ಬದಲಾವಣೆ ಆಗಬೇಕಾದರೆ ಅದರ ಚಾಲನೆ ಬರುವುದು ವ್ಯಕ್ತಿಯಿಂದ. ವ್ಯಕ್ತಿ ಒಳ್ಳೆಯವರು, ಕೋಪತಾಪ ಇರದವರು, ಶಾಂತವಾಗಿರುವವರು ಆದರೆ ಇದು ಅವನ ಅಥವಾ ಅವಳ ಕುಟುಂಬದಲ್ಲಿ ಒಂದು ಒಳ್ಳೆಯ ವಾತಾವರಣ ತರುತ್ತದೆ. ತಂದೆತಾಯಿ ಮೃದು ಹೃದಯದವರು, ಶಾಂತರು ಮತ್ತು ತಂಪಾದ ವ್ಯಕ್ತಿಗಳಾಗಿದ್ದರೆ ಸಾಮಾನ್ಯವಾಗಿ ಅಂಥವರ ಮಕ್ಕಳು ಸಹ ಅದೇ ಸ್ವಭಾವ ಮತ್ತು ನಡವಳಿಕೆ ಬೆಳೆಸಿಕೊಳ್ಳುತ್ತಾರೆ.

ಅನೇಕ ಸಲ ನಮ್ಮ ಸ್ವಭಾವ ಹೊರಗಿನ ಅಂಶಗಳಿಂದ ತೊಂದರೆಗೆ ಒಳಗಾಗುತ್ತದೆ. ಆದ್ದರಿಂದ ನಿಮ್ಮ ಸುತ್ತಲಿನ ತೊಂದರೆಗಳನ್ನು ಇರುವ ಹಾಗೆ ಮಾಡುವುದು ಒಂದು ಅಂಶ. ಮನಸ್ಸಿನ ಸಂತೋಷ ನೆಲೆಗೊಳಿಸಲು ಪರಿಸರ, ಅಂದರೆ ಸುತ್ತಲಿನ ವಾತಾವರಣ ಬಹಳ ಮುಖ್ಯವಾದ ಅಂಶ. ಆದರೆ ಅದಕ್ಕಿಂತಲೂ ಹೆಚ್ಚು ಮುಖ್ಯ ಅಂಶ ಇದರ ಇನ್ನೊಂದು ಮಗ್ಗುಲು. ಅದೇ ನಮ್ಮ ನಮ್ಮ ಮಾನಸಿಕ ಧೋರಣೆ, ನಡವಳಿಕೆ.

ಸುತ್ತಲಿನ ವಾತಾವರಣ ಅಷ್ಟು ಸಹಕಾರಿ ಆಗದೇ ಇರಬಹುದು, ಅದು ನಮಗೆ ವಿರುದ್ಧವೇ ಆಗಿರಬಹುದು. ಆದರೆ ನಿಮ್ಮ ಅಂತರಂಗದ ಮಾನಸಿಕ ಧೋರಣೆ ಸರಿಯಾಗಿದ್ದರೆ, ಆಗ ಬಹಿರಂಗದ ಪರಿಸರ ನಿಮ್ಮ ಅಂತರಂಗದ ಶಾಂತಿಯನ್ನು ಕದಡುವುದಿಲ್ಲ. ಅದರ ಬದಲು ನಿಮ್ಮ ಧೋರಣೆ ಸರಿಯಿರದಿದ್ದರೆ ನಿಮ್ಮ ಸುತ್ತ ಒಳ್ಳೆಯ ಸ್ನೇಹಿತರಿದ್ದರೂ, ಅತ್ಯುತ್ತಮ ಸೌಲಭ್ಯಗಳಿದ್ದರೂ ನೀವು ಸಂತೋಷದಿಂದ ಇರುವುದಿಲ್ಲ. ಈ ಕಾರಣಕ್ಕೆ ಬಾಹ್ಯ ಪರಿಸರಕ್ಕಿಂತಲೂ ಮಾನಸಿಕ ಧೋರಣೆ ಮುಖ್ಯ. 

ಇಷ್ಟೆಲ್ಲ ಇದ್ದರೂ ಹಲವಾರು ಜನರು ಹೊರಗಿನ ವಾತಾವರಣದ ಬಗೆಗೆ ತಲೆಕೆಡಿಕೊಳ್ಳುತ್ತಾರೆ ಹಾಗೂ ಮನಸ್ಸಿನ ಅಂತರಂಗದ ಧೋರಣೆಯನ್ನು ತಿರಸ್ಕರಿಸುತ್ತಾರೆ. ನಾವು ನಮ್ಮ ಆಂತರಿಕ ಗುಣಗಳಿಗೆ ಹೆಚ್ಚು ಗಮನ ನೀಡಬೇಕೆಂಬುದು ನನ್ನ ಸಲಹೆ.

ಮಾನಸಿಕ ಶಾಂತಿ ಹೇಗೆ?
ಮಾನಸಿಕ ಶಾಂತಿಗೆ ಹಲವಾರು ಗುಣಗಳು ಮುಖ್ಯವಾಗುತ್ತವೆ, ಆದರೆ ನನಗಿರುವ ಅಲ್ಪ ಅನುಭವದ ಪ್ರಕಾರ ಮಾನವ ಕರುಣೆ ಮತ್ತು ಆರೈಕೆ ಮಾಡುವ ಪ್ರವೃತ್ತಿಯ ವಾತ್ಸಲ್ಯ ಇವು ಅತಿ ಮುಖ್ಯ ಅಂಶಗಳೆಂದು ನಾನು ನಂಬಿದ್ದೇನೆ. ಕರುಣೆ ಎಂದರೇನು ಎಂಬುದನ್ನು ವಿವರಿಸುತ್ತೇನೆ. ಸಾಮಾನ್ಯವಾಗಿ ನಮ್ಮ ಸ್ನೇಹಿತರು ಮತ್ತು ಪ್ರಿಯರಾದವರ ಬಗೆಗಿನ ನಿಕಟತೆಯನ್ನು ನಾವು ಕರುಣೆ ಅಥವಾ ಪ್ರೀತಿ ಎಂದು ಕರೆಯುತ್ತೇವೆ. ಕೆಲವು ಸಲ ಕರುಣೆಯಲ್ಲಿ ಅಯ್ಯೋ ಪಾಪ ಎಂಬ ಒಂದು ಭಾವನೆ ಕೂಡ ಸೇರಿರುತ್ತದೆ. ಇದು ತಪ್ಪು- ಬೇರೆಯವರನ್ನು ಕೀಳಾಗಿ ನೋಡುವ ಯಾವುದೇ ಪ್ರೀತಿ ಅಥವಾ ಕರುಣೆ ಅಸಲಿ ಕರುಣೆ ಅಲ್ಲ. ಅಸಲಿ ಆಗಬೇಕಾದರೆ ಬೇರೆಯವರನ್ನು ಕುರಿತ ಗೌರವದ ಆಧಾರದ ಮೇಲೆ ಕರುಣೆ ಇರಬೇಕು ಹಾಗೂ ನಿಮಗಿರುವಂತೆಯೇ ಬೇರೆಯವರಿಗೂ ಸಂತೋಷವಾಗಿರಲು ಮತ್ತು ದುಃಖ ಮೀರಲು ಹಕ್ಕಿದೆ ಎಂಬ ಅರಿವಿನ ಆಧಾರವಿರಬೇಕು. ಈ ಆಧಾರದ ಮೇಲೆ ಬೇರೆಯವರ ಕುರಿತು ನಿಮ್ಮಲ್ಲಿ ಅಸಲಿ ಕಾಳಜಿ ಬೆಳೆಯುತ್ತದೆ.

ನಮ್ಮ ಸ್ನೇಹಿತರ ಕುರಿತ ನಿಕಟತೆ ಬಗೆಗೆ ಹೇಳುವುದಾದರೆ ಅದು ಕರುಣೆಗಿಂತ ಹೆಚ್ಚಾಗಿ ವ್ಯಾಮೋಹವಾಗಿದೆ. ಅಸಲಿ ಕರುಣೆ ದ್ವಂದ್ವರಹಿತವಾಗಿರಬೇಕು. ನಾವು ಕೇವಲ ನಮ್ಮ ಸ್ನೇಹಿತರಿಗೆ ಮಾತ್ರ ನಿಕಟವಾಗಿದ್ದು ನಮ್ಮ ಶತ್ರುಗಳ ವಿಷಯಕ್ಕೆ ಹಾಗಿರದಿದ್ದರೆ ಅಥವಾ ವೈಯಕ್ತಿಕವಾಗಿ ನಮಗೆ ಗೊತ್ತಿರದ ಅಸಂಖ್ಯಾತ ಜನರ ವಿಷಯದಲ್ಲಿ ನಾವು ಯಾವುದೇ ಭಾವನೆ ಹೊಂದಿರದಿದ್ದರೆ ಆಗ ನಮ್ಮ ಕರುಣೆ ಕೇವಲ ಪಕ್ಷಪಾತದ್ದು ಅಥವಾ ದ್ವಂದ್ವದಿಂದ ಕೂಡಿದ ಕರುಣೆ ಎನಿಸುತ್ತದೆ.

ನಿಮ್ಮಂತೆ ಬೇರೆಯವರಿಗೂ ಸಂತೋಷ ಪಡಲು ಹಕ್ಕಿದೆ ಮತ್ತು ಆದ್ದರಿಂದಲೇ ಒಬ್ಬ ಮನುಷ್ಯ ಜೀವಿಯಾಗಿ ನಿಮ್ಮ ಶತ್ರುವಿಗೂ ನಿಮ್ಮ ಹಾಗೇ ಸಂತೋಷಪಡಲು ಅದೇ ರೀತಿಯ ಬಯಕೆ ಇದೆ, ಅದೇ ರೀತಿ ಹಕ್ಕೂ ಇದೆ ಎಂಬುದನ್ನು ಗುರುತಿಸುವುದರ ಮೇಲೆ ನಿಜವಾದ ಕರುಣೆ ನಿಂತಿದೆ ಎಂದು ಆಗಲೇ ಹೇಳಿದೆ. ಈ ಆಧಾರದ ಮೇಲೆ ಬೆಳೆದ ಒಂದು ಕಾಳಜಿಯ ಭಾವನೆಯನ್ನು ನಾವು ಕರುಣೆ ಎನ್ನುತ್ತೇವೆ. ನಿಮ್ಮನ್ನು ಕುರಿತು ಒಬ್ಬ ವ್ಯಕ್ತಿಯ ಧೋರಣೆ ದ್ವೇಷದ್ದೇ ಅಥವಾ ಪ್ರೇಮದ್ದೇ ಎಂಬುದನ್ನು ಮೀರಿ ಅದು ಎಲ್ಲರಿಗೂ ಹಬ್ಬುವಂಥದ್ದು.

ಕಾಳಜಿಯಿಂದ ಕೂಡಿದ ಜವಾಬ್ದಾರಿ ಈ ರೀತಿಯ ಕರುಣೆಯ ಒಂದು ಆಯಾಮ. ನಾವು ಆ ಥರದ ಪ್ರೇರಣೆ ಬೆಳೆಸಿಕೊಂಡಾಗ ನಮ್ಮ ಸ್ವಯಂ ವಿಶ್ವಾಸ ಸಹಜವಾಗಿ ಹೆಚ್ಚುತ್ತದೆ. ಇದರಿಂದ ಭಯ ಕಮ್ಮಿಯಾಗುತ್ತದೆ. ಇದು ಗಟ್ಟಿ ನಿರ್ಧಾರಕ್ಕೆ ನೆಲೆ ಒದಗಿಸುತ್ತದೆ. ಒಂದು ಕಠಿಣ ಕೆಲಸ ಮಾಡಿಮುಗಿಸಲು ನೀವು ಮೊದಲೇ ನಿರ್ಧಾರ ಮಾಡಿದ್ದರೆ ನೀವು ಒಂದು, ಎರಡು ಮೂರನೇ ಸಲ ಸೋತರೂ ಅದು ಅಮುಖ್ಯ. ನಿಮಗೆ ನಿಮ್ಮ ಗುರಿ ಸ್ಪಷ್ಟವಿದೆ. ಹೀಗಾಗಿ ನೀವು ಪ್ರಯತ್ನ ಪಡುವುದನ್ನು ಮುಂದುವರಿಸುತ್ತೀರಿ. ಇಂಥ ಆಶಾವಾದ ಮತ್ತು ನಿರ್ಧಾರದ ಧೋರಣೆ ಯಶಸ್ಸಿಗೆ ಪ್ರಮುಖ ಕಾರಣವಾಗುತ್ತದೆ.

ಕರುಣೆ ಒಂದು ಆಂತರಿಕ ಶಕ್ತಿಯನ್ನು ಸಹ ಉಂಟುಮಾಡುತ್ತದೆ. ಒಂದು ಬಾರಿ ಅದು ಬೆಳೆದರೆ ಸ್ವಾಭಾವಿಕವಾಗಿ ಅದು ಒಳಬಾಗಿಲು ತೆರೆಯುತ್ತದೆ. ಅದರ ಮೂಲಕ ನಾವು ಸಹ ಮಾನವ ಜೀವಿಗಳೊಂದಿಗೆ ಮತ್ತು ಸಂವೇದನೆ ಇರುವ ಇತರ ಜೀವಿಗಳ ಜತೆ  ಸುಲಭವಾಗಿ ಹೃದಯ ಸಂವಾದ ಸಾಧಿಸಬಹುದು. ಹಾಗಲ್ಲದೆ ನಿಮಗೆ ಬೇರೆಯವರ ಬಗೆಗೆ ದ್ವೇಷ ಮತ್ತು ಕೆಟ್ಟಭಾವನೆ ಇದ್ದರೆ ಅವರಿಗೂ ನಿಮ್ಮನ್ನು ಕುರಿತು ಅದೇ ಭಾವನೆಗಳು ಬರಬಹುದು. ಇದರಿಂದಾಗಿ ಅನುಮಾನ, ಭಯ ಉಂಟಾಗಿ ಅದು ನಿಮ್ಮ ನಡುವೆ ದೂರ ಸೃಷ್ಟಿಸಿ, ಸಂವಾದವನ್ನು ಕಠಿಣ ಮಾಡುತ್ತದೆ. ಆಗ ನೀವು ಒಂಟಿತನ ಮತ್ತು ಪ್ರತ್ಯೇಕತೆ ಅನುಭವಿಸುವಿರಿ. ನಿಮ್ಮ ಬಳಗದ ಎಲ್ಲಾ ಸದಸ್ಯರಿಗೂ ನಿಮ್ಮ ಬಗೆಗೆ ಋಣಾತ್ಮಕ ಭಾವನೆ ಇರುವುದಿಲ್ಲ ಆದರೆ, ನಿಮಗಿರುವ ಭಾವನೆಗಳ ಕಾರಣದಿಂದಾಗಿ ಅವರು ನಿಮ್ಮ ಬಗೆಗೆ ಅಂಥ ಭಾವನೆ ಹೊಂದಬಹುದು. 

ಯಾವುದೇ ಧರ್ಮ ಆಚರಣೆ, ಅನುಷ್ಠಾನಕ್ಕೆ ಒತ್ತು ಕೊಡುತ್ತದೆ. ಅದರ ಸಾರವನ್ನು ಪೂಜ್ಯ ದಲೈ ಲಾಮಾ ಸರಳವಾಗಿ ನಮಗಾಗಿ ವಿವರಿಸಿದ್ದಾರೆ.

ಜಿ. ಬಿ. ಹರೀಶ

ಟಾಪ್ ನ್ಯೂಸ್

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Gove-CM-Meet

Governer Meet CM: ಸಿ.ಟಿ.ರವಿ ಪ್ರಕರಣ: ಮುಖ್ಯಮಂತ್ರಿ ವರದಿ ಕೇಳಿದ ರಾಜ್ಯಪಾಲ ಗೆಹ್ಲೋಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

courts

Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.