ಬ್ರಿಟನ್ನಿನಲ್ಲಿ ದೀಪೋತ್ಸವ


Team Udayavani, Nov 5, 2017, 6:25 AM IST

deepotsava.jpg

ಆಂಗ್ಲ ಭಾಷೆಯ ಬೊನ್‌ಫೈರ್‌ (Bonfire) ಎಂಬ ಶಬ್ದವನ್ನು ದೀಪೋತ್ಸವ ಎನ್ನುವುದಾಗಿ ಅನುವಾದಿಸಬಹುದೆಂದು ನಿಘಂಟುಗಳು ಹೇಳುತ್ತವೆ. ಈ ಅರ್ಥದಲ್ಲಿ ನೋಡಿದರೆ ಇವತ್ತು ಬ್ರಿಟನ್ನಿನಲ್ಲಿ ದೀಪೋತ್ಸವ. ಕಳೆದ ಕೆಲವು ಶತಮಾನಗಳಿಂದ ಪ್ರತಿ ನವೆಂಬರ ಐದಕ್ಕೆ ಇಲ್ಲಿನ ದೀಪೋತ್ಸವ. ಬೊನ್‌ಫೈರ್‌ ಎನ್ನುವ ಶಬ್ದದ ಕಿಚ್ಚು ದೀಪೋತ್ಸವದಲ್ಲಿ ಇಲ್ಲ, ದೀಪೋತ್ಸವದ ಆಪ್ತಭಾವ ಮತ್ತು ಕಲರವ ಬೊನ್‌ಫೈರ್‌ನಲ್ಲಿ ಇಲ್ಲ. ಹಾಗಾಗಿ, ಬೊನ್‌ಫೈರ್‌ಅನ್ನು ಬೊನ್‌ಫೈರ್‌ ಎಂದೇ ಕರೆದರೆ ಹೇಗೆ? ಬೊನ್‌ಫೈರ್‌ ದಿನ ಎಂದು ಕರೆಯಲ್ಪಡುವ ನವೆಂಬರ್‌ 5, ಬ್ರಿಟನ್ನಿನ ಊರೂರುಗಳಲ್ಲಿ ಸಂಜೆ ಪಟಾಕಿ ಹೊಡೆಯುವುದಲ್ಲದೆ, ಹಲವು ಕಡೆ ಪಟಾಕಿ ಸಿಡಿಸುವ ಪ್ರದರ್ಶನಗಳ ಮೂಲಕ ಆಚರಿಸಲ್ಪಡುತ್ತದೆ; ಮತ್ತೆ ಇವತ್ತಿನ ಕೆಲವು ಕಡೆಗಳ ಪಟಾಕಿ ಸಿಡಿತದ ವೀಕ್ಷಣೆಗೆ ಟಿಕೆಟ್‌ ಕೊಟ್ಟೂ  ನೋಡಬೇಕಾಗುತ್ತದೆ. ಇವತ್ತು ರಾತ್ರಿ ಲಂಡನ್‌ನ ಬೇರೆ ಬೇರೆ ಕಡೆ ನಡೆಯುವ ಸುಡುಮದ್ದುಗಳ ಪ್ರದರ್ಶನ ಹೆಸರುವಾಸಿಯಾದುದು ಜನಾಕರ್ಷಣೆಯ ವಿಷಯವೂ ಹೌದು. ಲಂಡನ್ನಿನ ಬೇರೆ ಬೇರೆ ಭಾಗಗಳಲ್ಲಿ ಥೇಮ್ಸ್‌ ನದಿಯ ತಟದಲ್ಲಿ  ನಡೆಯುವ ಸುಡುಮದ್ದುಗಳ ಹೊಡೆತವನ್ನು ಸಹಸ್ರ ಸಹಸ್ರ ಸಂಖ್ಯೆಯಲ್ಲಿ  ಜನರು ನೋಡುತ್ತಾರೆ. ಬ್ರಿಸ್ಟಲ್‌ನಲ್ಲೂ    ಪುರಸಭೆಯವರು ಬಯಲಿನಲ್ಲಿ ಸುಡುಮದ್ದು ಪ್ರದರ್ಶನದ ವ್ಯವಸ್ಥೆ  ಮಾಡಿ¨ªಾರೆ. ಪಟಾಕಿ ನಾವೇ ಹೊಡೆಯುವ ಮಜಾ ಒಂದು ತರಹದ್ದು, ಪರಿಣಿತ ಸುಡುಮದ್ದುಗಾರರು ಪಟಾಕಿ ಸಿಡಿಸುವುದನ್ನು ಹತ್ತಿರದಿಂದ ನೋಡಿ ಕೇಳುವ ಖುಷಿ ಇನ್ನೊಂದು ತರಹದ್ದು ; ಇವತ್ತಿನ ಮಟ್ಟಿಗೆ ಇಲ್ಲಿ ಎರಡೂ ಜೊತೆಯಾಗುತ್ತವೆ. ಅಕ್ಟೋಬರ್‌ನ ಕೊನೆಯ ವಾರ ಮತ್ತು ನವೆಂಬರ್‌ನ ಮೊದಲ ವಾರಗಳಲ್ಲಿ  ಬ್ರಿಟನ್ನಿನ ಕತ್ತಲೆಯ ಆಕಾಶದಲ್ಲಿ ಬೆಳಕು ಮತ್ತು ಸದ್ದು ಎರಡೂ ಕಲೆಯುತ್ತವೆ. ತಾರೀಕಿನ ಲೆಕ್ಕದಲ್ಲಿ ಪ್ರತಿವರ್ಷವೂ ಅಕ್ಟೋಬರ್‌ 31ರಂದು  ಹ್ಯಾಲೋವೀನ್‌ ಹಬ್ಬ. ನವೆಂಬರ್‌ 5ರಂದು ಬೊನ್‌ಫೈರ್‌ ದಿನ. ದಿನಾಂಕದ ಆಧಾರದಲ್ಲಿ ಬಹಳ ಹತ್ತಿರದಲ್ಲಿ ಬರುವ ಈ ಎರಡು ಆಚರಣೆಗಳು ತಮ್ಮ  ತಮ್ಮ ವ್ಯಕ್ತಿತ್ವಗಳಲ್ಲಿ ಮಾತ್ರ ಬಹಳ ಭಿನ್ನ ಆಗಿವೆ. 

ಹ್ಯಾಲೋವೀನ್‌ ಹಬ್ಬದ ಆಚರಣೆ ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಈಗಿನ ಅಯರ್ಲೆಂಡ್‌, ಬ್ರಿಟನ್‌, ಉತ್ತರ ಫ್ರಾನ್ಸ್‌ ಭಾಗದಲ್ಲಿ ಆರಂಭ ಆಯಿತೆನ್ನುತ್ತಾರೆ. ಆ ಕಾಲದಲ್ಲಿ ನವೆಂಬರ 1ನೆಯ ತಾರೀಕು ಅಧಿಕೃತ ಚಳಿಗಾಲದ ಆರಂಭ ಮತ್ತು ಬೇಸಾಯಗಾರರ ಕೊಯ್ಲಿನ ಮಾಸ ಮುಗಿದು ಹೊಸ ವರ್ಷದ ಆರಂಭವಾಗಿಯೂ ಗುರುತಿಸಲ್ಪಟ್ಟಿತ್ತು. ಬೇಸಿಗೆ ಮುಗಿದು ಕತ್ತಲೆ, ಚಳಿ ಎರಡೂ ಹೆಚ್ಚಾಗಿ, ಭೂತಗಳೂ ಆತ್ಮಗಳೂ ನಮ್ಮನ್ನು ಕಾಡುವುದರ ದ್ಯೋತಕವಾಗಿ ಹ್ಯಾಲೋವೀನ್‌ ಆಚರಿಸಲ್ಪಡುತ್ತಿತ್ತು. ನಮ್ಮ ಮತ್ತು ಪ್ರೇತಾತ್ಮಗಳನ್ನು ನಡುವಿನ ಅಂತರ ಇನ್ನೂ ಕಡಿಮೆ ಆದ ದಿನ ಎಂದು ಅಕ್ಟೋಬರ್‌ ತಿಂಗಳ ಕೊನೆಯ ದಿನವನ್ನು ಪರಿಗಣಿಸಲಾಗುತ್ತಿತ್ತು. ಈಗ ಹ್ಯಾಲೋವೀನ್‌ ಹಬ್ಬದ ಸಂಜೆ ಬ್ರಿಟನ್ನಿನ ಜನವಸತಿಯ ಬೀದಿ ಬೀದಿಗಳಲ್ಲಿ ಮಕ್ಕಳು, ಯುವಕ‌-ಯುವತಿಯರು ಭೂತ-ಪ್ರೇತ ಮಾಟಗಾತಿಯರ ಮುಖವಾಡ, ವೇಷ ಧರಿಸಿ ಮನೆ ಮನೆಯ ಬಾಗಿಲು ತಟ್ಟುತ್ತಾರೆ. ಮತ್ತೆ ಮನೆಯವರು ಮಕ್ಕಳಿಗೆ ಚಾಕಲೇಟ್‌ ಅಥವಾ ಸಿಹಿತಿನಿಸುಗಳನ್ನು ಕೊಟ್ಟು ಕಳಿಸುತ್ತಾರೆ. ದೊಡ್ಡ ಚೀನಿಗುಂಬಳ  ಕಾಯಿಗೆ  ಕಣ್ಣು ಮೂಗು ಬಾಯಿಯಂತೆ ಕಾಣುವ  ತೂತು ಕೊರೆದು, ಒಳಗೆ ದೀಪ ಇಟ್ಟು  ಮನೆಯ ಹೊರಗಿಡುತ್ತಾರೆ. ಗಳಿಗೆ-ಗಳಿಗೆಗೆ ಯಾರೋ ಬಂದು ಬಾಗಿಲು ತಟ್ಟುವ ಮತ್ತೆ ತಟ್ಟಿದ್ದಕ್ಕೆ ತೆರೆಯುವ, ಆಮೇಲೆ ತೆರೆದದ್ದಕ್ಕೆ ಏನೋ ನೀಡುವ ಉಸಾಬರಿ ಬೇಡ ಎಂದು ಕೆಲವರು ಸಂಜೆಯಿಂದಲೇ ಮನೆಯ ದೀಪಗಳನ್ನು ಆರಿಸಿ ಕತ್ತಲೆಯಲ್ಲಿ ಕೂಡುವವರು ಅಥವಾ ಮನೆಯಲ್ಲಿರದೆ ಎÇÉೋ ಹೋಗುವವರೂ ಇ¨ªಾರೆ. ಇನ್ನು ಹ್ಯಾಲೋವೀನ್‌ ಬರುವ ಮೊದಲೇ ಮನೆಯನ್ನು ದೆವ್ವ, ಭೂತ, ಅಸ್ಥಿಪಂಜರ, ಭಯಾನಕ ಆಕೃತಿಗಳಿಂದ ಸಿಂಗರಿಸಿಕೊಳ್ಳುವವರೂ ಇ¨ªಾರೆ. ಕೆಲವರ ಮನೆಯಲ್ಲಿ ವಾರಗಳ ಮೊದಲೇ ಸ್ನೇಹಿತರೋ ಕುಟುಬದವರೋ ಸೇರಿಕೊಂಡು ಪಾರ್ಟಿ ಮಾಡುತ್ತಾರೆ. ಹ್ಯಾಲೋವೀನ್‌ನ ಆಚರಣೆ ಬ್ರಿಟನ್ನಿನ ಯುವ ಜನತೆಯಲ್ಲಿ ಹೆಚ್ಚು ಹೆಚ್ಚು ಜನಪ್ರಿಯವೂ ಆತ್ಮೀಯವೂ ಆಗುತ್ತಿದೆ ಹಾಗೂ  ಚಿಣ್ಣರೂ ಯುವಕರೂ ಹುಡುಗರೂ ಹುಡುಗಿಯರೂ ಒಬ್ಬಂಟಿಗರೂ ಸಂಸಾರಸ್ಥರೂ ಸೇರಿ ಆಚರಿಸುವ ಹಬ್ಬ ಎನ್ನುವ ಹೆಸರೂ ಪಡೆಯುತ್ತಿದೆ.

ಹ್ಯಾಲೋವೀನ್‌ ಹೆಸರಲ್ಲಿ ಸ್ನೇಹಕೂಟಗಳು, ಮೋಜುಗಳು ಮತ್ತೆ ಕೆಟ್ಟ ತಮಾಷೆಗಳೂ ನಡೆಯುತ್ತವೆ. ಚಿಕ್ಕ ಮಕ್ಕಳು ಮನೆ ಮನೆ ತಿರುಗಿ ಒಟ್ಟು ಮಾಡಿಕೊಂಡ ಸಿಹಿತಿನಿಸುಗಳ ಸಂಗ್ರಹವನ್ನು ಪುಂಡ ಯುವಕರು ಕಸಿದುಕೊಂಡು ಓಡುವುದೂ ಇದೆ. ಹ್ಯಾಲೋವೀನ್‌ ನೆಪದಲ್ಲಿ ಅಂಗಡಿಗಳಲ್ಲಿ ತರಹ ತರಹದ ಖರೀದಿಗಳು ನಡೆಯುತ್ತವೆ.

ಹ್ಯಾಲೋವೀನ್‌ ನಿಮಿತ್ತ ಬಟ್ಟೆಗಳ  ಖರೀದಿ, ಪೋಷಾಕುಗಳ ಖರೀದಿ, ಮುಖವಾಡಗಳ ಖರೀದಿ, ಸಿಹಿತಿನಿಸುಗಳ ಮಾರಾಟ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದೇ ಹೊತ್ತಿನಲ್ಲಿ ಯೂರೋಪಿನ ಹಳೆಯ ಇತಿಹಾಸದ ಅಥವಾ ಎಂದೋ ಶುರುವಾಗಿತ್ತೆಂದು ನಂಬಲಾದ ಇವರ ಪುರಾಣ ಕಾಲದ ಹಬ್ಬವೊಂದು ಅಮೆರಿಕೀಕರಣಗೊಳ್ಳುತ್ತಿದೆ ಮತ್ತು ವ್ಯಾಪಾರಗಳನ್ನು ಹೆಚ್ಚಿಸಿಕೊಳ್ಳುವ ಇನ್ನೊಂದು ಸಬೂಬಾಗಿದೆ ಎನ್ನುವ ಕೂಗುಗಳು ಕೇಳಿಸುತ್ತವೆ. ಹಬ್ಬ, ಕ್ರೀಡೆ, ಆಚರಣೆ, ಕಲೆ, ಸಾಹಿತ್ಯ, ಪುರಾಣ ಯಾವ ದೇಶದ್ದೇ ಇರಲಿ, ಯಾವ ಊರಿನದೇ ಇರಲಿ, ಅದರಲ್ಲಿ ವ್ಯಾಪಾರದ ಅವಕಾಶ ಕಂಡರೆ ಅಮೆರಿಕ ತನ್ನ ತಂತ್ರಗಳನ್ನು ಬಳಸಿ ಅವುಗಳನ್ನು ಇನ್ನೂ ಹೆಚ್ಚು ಜನಪ್ರಿಯ ಮತ್ತು ವಾಣಿಜ್ಯೀಕರಣಗೊಳಿಸುವುದು ಹಿಂದಿನಿಂದಲೂ ನಡೆದು ಬಂದದ್ದು ಮತ್ತೆ ಅಂಥ‌ ಅಮೆರಿಕದ ವ್ಯಾಪಾರೀ ಪ್ರಭಾವಕ್ಕೆ  ಬ್ರಿಟನ್‌ ಕೂಡ ಒಳಗಾಗಿದೆ. ಬ್ರಿಟನ್ನಿನ ಯುವಜನತೆ ಅಮೆರಿಕದ ಶೈಲಿಯಲ್ಲಿ  ಹಬ್ಬಗಳನ್ನು ಆಚರಿಸುವುದು ಹೆಚ್ಚಿನ ಆಂಗ್ಲ ಅಜ್ಜ-ಅಜ್ಜಿಯಂದಿರನ್ನು ಅಥವಾ ತಾತ-ಮುತ್ತಾತರಂತೆ ಯೋಚಿಸುವ ಕೆಲವೇ ಕೆಲವು ಹಳೆ ಯೋಚನೆಯ ಹೊಸ ತರುಣ-ತರುಣಿಯರನ್ನು ಚಿಂತೆಗೀಡು ಮಾಡುತ್ತದೆ.   

ವರುಷದಿಂದ ವರುಷಕ್ಕೆ ತನ್ನ ಜನಪ್ರಿಯತೆಯನ್ನು, ಆಚರಣೆಯ ವೈವಿಧ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಹ್ಯಾಲೋವೀನ್‌ ಮೊನ್ನೆ ಮಂಗಳವಾರ ಆಗಿಹೋಗಿದೆ. ಮತ್ತೆ ಇವತ್ತು ಸಂಜೆ ನಡೆಯಲಿರುವ ಬೊನ್‌ಫೈರ್‌ ಆಚರಣೆ 17ನೆಯ ಶತಮಾನದ ಒಂದು ಘಟನೆಯ ನೆನಪನ್ನು ನಮ್ಮೆದುರು ತಂದಿದೆ. ಬ್ರಿಟನ್‌ ಅಲ್ಲಿ ಈಗ ಸಾಮರಸ್ಯ ಸಹಬಾಳ್ವೆ ಇದ್ದರೂ ಹಿಂದೆ ಕ್ಯಾಥೊಲಿಕ್‌, ಪ್ರೊಟೆಸ್ಟೆಂಟ್‌, ಆಂಗ್ಲಿಕನ್‌ ಪಂಥಗಳ ನಡುವಿನ ಘರ್ಷಣೆಯ ದೀರ್ಘ‌ ಇತಿಹಾಸ ಇದೆ.

ಹದಿನೇಳನೆಯ ಶತಮಾನದಲ್ಲಿ ಇಂಗ್ಲೆಂಡ್‌ನ‌ ಅರಸೊತ್ತಿಗೆ  ಪೊಟೆಸ್ಟಂಟ್‌ ಕ್ರೈಸ್ತರ ಕೈಯಲ್ಲಿತ್ತು. ಅಂದಿನ ಅಧಿಕಾರಶಾಹಿ ಪ್ರೊಟೆಸ್ಟೆಂಟ್‌ರು ಕ್ಯಾಥೊಲಿಕ್‌ ಕ್ರೈಸ್ತರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು. ತಮಗಾಗುತ್ತಿರುವ ಅನ್ಯಾಯ-ಅಕ್ರಮಗಳನ್ನು ವಿರೋಧಿಸುವ ಬಗ್ಗೆ ಕೆಲವು ಕ್ರಾಂತಿಕಾರಿ ಕ್ಯಾಥೋಲಿಕರು ಸೇರಿ  ಲಂಡನ್‌ಲ್ಲಿರುವ ಸಂಸತ್‌ ಭವನವನ್ನು  ಸುಡುಮದ್ದಿನ ಪುಡಿಗೆ ಬೆಂಕಿ ಹಚ್ಚಿ ಸ್ಫೋಟಿಸುವ ಸಂಚಿನಲ್ಲಿದ್ದರು. ಸಂಸತ್ತು ಕಟ್ಟಡದ ನೆಲಮಾಳಿಗೆಯಲ್ಲಿ 36 ಭರಣಿಗಳ ತುಂಬಾ  ಸುಡುಮದ್ದುಗಳನ್ನು ಶೇಖರಿಸಿಟ್ಟರು. ಬೆಂಕಿ ತಾಗಿಸಿದರೆ ತಮ್ಮ ಸುತ್ತಮುತ್ತಲಿನ ಒಂದು ಕಿ.ಮೀ. ಪ್ರದೇಶವನ್ನು ನಾಶಮಾಡಬಲ್ಲ ಶಕ್ತಿ ಆ ಸುಡುಮದ್ದಿನ ಸಂಗ್ರಹಕ್ಕೆ ಇತ್ತಂತೆ. ಸಂಚಿನ ರೂವಾರಿ ಅಲ್ಲದಿದ್ದರೂ ಸಂಚಿನ‌ಭಾಗವಾಗಿದ್ದ ಗೆಫಾಕ್ಸ್‌ ಎಂಬಾತ 1605ರ ನವೆಂಬರ್‌ 5ರಂದು ಸಿಕ್ಕಿಬಿದ್ದ ಮತ್ತು ಆಗ ಸಂಚು ಬಯಲಾಯಿತು.

ಗೈಫಾಕ್ಸ್‌ ಸಂಗಡಿಗರ ಯೋಜನೆ ಯಶಸ್ವಿ ಆಗಲಿಲ್ಲ ಮತ್ತು ಬಂಧಿಸಲ್ಪಟ್ಟ  ಗೈಫಾಕ್ಸ್‌ನ ವಿಚಾರಣೆ ನಡೆಸಿ ಆತನಿಗೆ ಮರಣದಂಡನೆ ವಿಧಿಸಲಾಯಿತು. ಅಂದಿನಿಂದ  ಸಂಚು ಬಯಲಾದ ನ. 5ರ ಸ್ಮರಣೆಯಲ್ಲಿ  ಬೊನ್‌ಫೈರ್‌ ದಿನವನ್ನು ಆಚರಿಸುತ್ತಾರೆ. ಕೆಲವು ಕಡೆ ಗೈಫಾಕ್ಸ್‌ನ ಪ್ರತಿಕೃತಿ ದಹನವೂ ನಡೆದು ಸುಡುಮದ್ದುಗಳು ಗುಡುಗಿ ಮಿಂಚುತ್ತವೆ.  

ಹಳೆಯ ಆಂಗ್ಲರಿಗೆ ಬೊನ್‌ಫೈರ್‌ ದಿನ ಪ್ರಿಯವಾದದ್ದು ಮತ್ತೆ ಅವರ ಮನಸ್ಸಿನಲ್ಲಿ ಅದೊಂದು ಅಪ್ಪಟ ಇಂಗ್ಲಿಷ್‌ ಇತಿಹಾಸದ ಸಂಸ್ಮರಣೀಯ ದಿನ. 17ನೆಯ ಶತಮಾನದಲ್ಲಿ ತಮ್ಮ ದೇಶದಲ್ಲಿ ನಡೆಯಬಹುದಾಗಿದ್ದ ಬಹುದೊಡ್ಡ ಭಯೋತ್ಪಾದಕ ಕೃತ್ಯ ಅಥವಾ  ಜಗತ್ತಿನ ಆತಂಕವಾದದ ಮೊದಮೊದಲ ಘಟನೆ ಎಂದೆಲ್ಲ ಆಂಗ್ಲ ಇತಿಹಾಸಕಾರರು ಗೈಫಾಕ್ಸ್‌ನ ವಿಫ‌ಲ ಸಂಚಿನ ದಿನದ ಬಗ್ಗೆ ಹೆಮ್ಮೆಯಿಂದ ಬರೆದಿಟ್ಟಿ¨ªಾರೆ. ಇತಿಹಾಸದ ದಾಖಲೆಗಳ ಪುಟವಾಗಿ ಉಳಿದಿರುವ ಹಾಗೂ ವರುಷಗಟ್ಟಲೆಯಿಂದ ಪಾಲಿಸಿಕೊಂಡು ಬಂದಿರುವ ಒಂದೇ ತರಹದ ಆಚರಣಾ ಪದ್ಧತಿಯಿಂದ ಬ್ರಿಟನ್ನಿನ ಎಳೆಯರನ್ನು  ಸೆಳೆಯಲು ವಿಫ‌ಲವಾಗಿರುವ ನ. 5ನೆಯ ತಾರೀಕು ನಿಧಾನವಾಗಿ ಆಕರ್ಷಣೆಯನ್ನು  ಕಳೆದುಕೊಳ್ಳುತ್ತಿದೆ. ಇವತ್ತು ರಾತ್ರಿ ಲಂಡನ್‌ ಅಲ್ಲಿ ದೊಡ್ಡ ಪ್ರಮಾಣದ ಸುಡುಮದ್ದುಗಳ ಪ್ರದರ್ಶನ ಹಿಂದಿನ ವರ್ಷಗಳಂತೆ  ಮುಂದುವರಿದಿದ್ದರೂ ಹೊಸ ಜನಾಂಗದ ಮನಸ್ಸಲ್ಲಿ ಈ ಬೊನ್‌ಫೈರ್‌ ಡೇ ಸಂಚಲನ ಮೂಡಿಸಲು ಹೆಣಗಾಡುತ್ತಿದೆ; ಹ್ಯಾಲೋವೀನ್‌ ತೋರಣಗಳು ಎÇÉೆಲ್ಲೂ ಕಂಡು, ಹ್ಯಾಪಿ ಹ್ಯಾಲೋವೀನ್‌ ಶುಭಾಶಯಗಳು ಎÇÉೆಲ್ಲೂ ಕೇಳಿ ಹ್ಯಾಪಿ ಬೊನ್‌ಫೈರ್‌ ಡೇ ಒಂದೋ, ಎರಡು ರಾತ್ರಿಗಳ ಪಟಾಕಿ ಹೊಡೆಯುವುದಕ್ಕೆ ಸೀಮಿತವಾಗಿದೆ. ಐದು ದಿನಗಳ ಅಂತರದಲ್ಲಿ ಬಂದು ಹೋಗುವ ಬ್ರಿಟನ್ನಿನ ಎರಡು ಮುಖ್ಯ ಆಚರಣೆಗಳಾದ  ಹ್ಯಾಲೋವೀನ್‌ ಮತ್ತು ಬೊನ್‌ಫೈರ್‌ ದಿನಗಳು ತಮ್ಮ ತಮ್ಮ ಹಿಂದಿರುವ ಇತಿಹಾಸ ಪುರಾಣಗಳನ್ನು ನೆನಪಿಸುವ ಜೊತೆಗೆ ಬ್ರಿಟನ್ನಿನ ಹಳೆಬೇರು ಹೊಸಚಿಗುರುಗಳ ನಡುವಿನ ಸಂಘರ್ಷದ ಬಗೆಗೂ ತಿಳಿಸುತ್ತಿವೆ.

– ಯೋಗೀಂದ್ರ ಮರವಂತೆ ಬ್ರಿಸ್ಟಲ್‌, ಇಂಗ್ಲೆಂಡ್‌

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.