ದಿವ್ಯವಾದ ಯಮನ್‌ಕಲ್ಯಾಣ್
Team Udayavani, Jan 21, 2018, 6:10 AM IST
ಯಾವುದೇ ಬಗೆಯ ಸಂಗೀತವನ್ನು ಕೇಳುವಾಗ ಆ ಸಂಗೀತವನ್ನು ನಿಜವಾಗಿ ನಾವು ಆನಂದಿಸಿದ್ದೇವೆ ಅಥವಾ ಆನಂದಿಸುತ್ತಿದ್ದೇವೆ ಎಂಬುದು ತತ್ಕಾಲದ ಸತ್ಯವಾಗಿದ್ದಿರಬಹುದು. ಕೆಲವು ಕಾಲ ಗೆಳೆಯನೊಬ್ಬನಿಗೆ ಮುಕೇಶ ಬಹಳ ಹಿಡಿಸುತ್ತಿದ್ದ. ನಂತರ ಒಂದು ದಿನ ಇದ್ದಕ್ಕಿದ್ದಂತೆ ಆತನಿಗೆ ಮುಕೇಶನ ಹಾಡುಗಳಲ್ಲಿ ಆಸಕ್ತಿಯು ಕ್ಷೀಣವಾಗುತ್ತ ಹೋಗಿ ರಫಿಯ ಹಾಡುಗಳಲ್ಲಿ ರುಚಿ ಹುಟ್ಟತೊಡಗಿತು. ಕಾರಣ ಕೇಳಿದರೆ, “ಎಲ್ಲೂ ಸಲ್ಲದ ಒಂದು ಉಡಾಫೆಯ ಎಲ್ಲ ಹಾಡುಗಳೂ ಒಂದೇ ನಮೂನಿ ಕೇಳಿಸತ್ತೆ ಮಾರಾಯ’ ಎಂಬಂಥ ಉತ್ತರ.
“ಹಾಗಿದ್ದರೆ ರಫಿಯ ಹಾಡುಗಳು?’
“ಬೇರೆ ಬೇರೆ ಬಗೆಯದ್ದು ಇರ್ತದೆ, ಎಲ್ಲ ಬಗೆಯ ಹಾಡುಗಳನ್ನೂ ಹಾಡಿದ್ದಾರೆ ರಫಿ ಸಾಹೇಬರು’
ಆ ಉತ್ತರವನ್ನೊಮ್ಮೆ ಸರೀ ಗಮನಿಸಿದರೆ ನಮಗೆ ಸಿಗುವುದು ಒಂದು ಜನರಲ್ ಆದಂಥ ತೀರ್ಮಾನವೆಂಬಂಥ ಮಾತು. ಆತ ಅÇÉೆÇÉೋ ಪತ್ರಿಕೆಯಲ್ಲಿ, ಯಾವುದೋ ಯೂಟ್ಯೂಬ್ ಚಾನೆಲ್ಲಿನ ಮಹನೀಯರೊಬ್ಬರ ಇಂಟರ್‌ವ್ಯೂನಲ್ಲಿ ಅಥವಾ ಗೆಳೆಯರ ಬಳಗದ ಸುಖಾಸುಮ್ಮನೆ ಕಾಲಕ್ಷೇಪದಲ್ಲಿ ಇಂಥ ಮಾತೊಂದನ್ನು ಕೇಳಿರ್ತಾನೆ ಮತ್ತು ಹಾಗೆ ಕೇಳಿದ್ದನ್ನ ಸತ್ಯವೆಂದು ನಂಬುತ್ತಾನೆ ಮತ್ತು ಆ ಮೂಲಕ ಪಕ್ಕದ ಪಾಪದವನನ್ನೂ ನಂಬಿಸಲು ಯತ್ನಿಸುತ್ತಾನೆ. ತಮಾಷೆಯೆಂದರೆ ನಾಲ್ಕು ತಿಂಗಳು ಕಳೆದರೆ ಆ ಗೆಳೆಯನಿಗೆ ರಫಿ ಸಾಹೇಬರ ಹುಚ್ಚು ಬಿಟ್ಟು ಬಪ್ಪಿ ಲಹಿರಿಯ ಹುಚ್ಚು ಹತ್ತಬಹುದು ಮತ್ತು ನಾಲ್ಕಾರು ತಿಂಗಳು ಉರುಳಿದರೆ ಮುಕೇಶನ ಬಿಟ್ಟರೆ ಮತ್ತೆ ಯಾರೂ ಇಲ್ಲ ಎಂಬಂಥ ನಿರ್ಧಾರವನ್ನೂ ಅವನಿಂದ ಕೇಳಬಹುದು.
ಇದೆಲ್ಲ ತೀರ ಹೊಸತಾದ ಸಂಗತಿಗಳೇನಲ್ಲ ಅಥವಾ ಚಲನಚಿತ್ರ ಸಂಗೀತಕ್ಕೆ ಮಾತ್ರ ಸೀಮಿತವಾದ ಘಟನೆಗಳೂ ಅಲ್ಲ. ಆನಂದಿಸುವುದು ಎಂಬ ನಿಜವಾದ ಕಲೆಯ ಧರ್ಮವನ್ನೂ ಮರ್ಮವನ್ನೂ ಬಿಟ್ಟು ವಿಮರ್ಶಿಸುವುದೇ ಆನಂದವಾಗುವ ಸಂದರ್ಭದÇÉೆಲ್ಲ ನಾವು ಇಂಥ ಘಟನೆಗಳಿಗೆ ಸಾಕ್ಷಿಯಾಗುತ್ತ ಹೋಗುತ್ತೇವೆ.
ಘುಲಾಮ್ ಅಲಿಯವರ ಇತನೀ ಮುದ್ದತ್ ಬಾದ್ ಮಿಲೆ ಹೋ, ಕಿನ್ ಸೋಛೋ ಮೇ ಗುಮ್ ರಹತೇ ಹೊ ಎಂಬ ಒಂದು ಗಜಲನ್ನು ಕಾರಣವಿಲ್ಲದೇ ಪ್ರೀತಿಸುವ ಸಂಗೀತಗಾರನಾದ ಗೆಳೆಯನೊಬ್ಬ ಮೊದಲ ಬಾರಿ ಕೇಳಿದಾಗ ಇಲ್ಲಿ ವಿಶೇಷವಾದ ಸಾಂಗೀತಿಕ ಕಸರತ್ತೇನೂ ಇಲ್ಲವೆಂಬ ಮಾತನ್ನು ಹೇಳಿದ್ದ ಮತ್ತು ಅತ್ಯಂತ ಅಚ್ಚರಿಯ ಸಂಗತಿಯೆಂದರೆ ಈ ಘಟನೆಯಾಗಿ ಸುಮಾರು ಎಂಟು ವರ್ಷಗಳ ನಂತರ ಫೇಸ್‌ಬುಕ್ಕಿನ ಲೈವ್ ಕಾರ್ಯಕ್ರಮದಲ್ಲಿ ಆ ಮಿತ್ರ ಅದೇ ಗಜಲನ್ನು ಅಸಾಧಾರಣ ಪ್ರೀತಿಯಿಂದ ಭಯಾನಕ ಭಾವಪೂರ್ಣ ತನ್ಮಯತೆಯಲ್ಲಿ ಹಾಡುತ್ತಿದ್ದ !
ಇದೆಲ್ಲ ಒಂದು ಪ್ರಕ್ರಿಯೆಯಷ್ಟೆ. ಗಜಲುಗಳೆಂಬ ತೀವ್ರಭಾವಗೀತೆಗಳನ್ನು ಆನಂದಿಸುವ ಮುಷಾಯಿರಾಗಳಲ್ಲಿ ಕಳೆದುಹೋಗುವುದು ಎಂಬ ಪ್ರಯೋಗವೊಂದಿದೆ. ಒಂದು ಹಾಡನ್ನು ಅಥವಾ ರಾಗವೊಂದನ್ನು ನಾವು ನಿಜವಾಗಿ ಆನಂದಿಸುತ್ತಿದ್ದೇವೆ ಎಂಬುದಾದರೆ ನಾವು ಅಲ್ಲಿ ಕಳೆದುಹೋಗಿದ್ದೇವೆ ಎಂಬುದು ಅರ್ಥ. ಆನಂದದ ಜೊತೆಗೆ ಈ ಕಳೆದುಹೋಗುವುದು ಎಂಬ ಅತೀ ಸಾಮಾನ್ಯ ಶಬ್ದವು ಸೇರಿ ಹುಟ್ಟಿಸುವ ತನ್ಮಯತೆಗೆ ಕಳೆದುಹೋಗಿಯೇ ನೋಡಿ ತೀರಬೇಕು. ಸೂಫೀ ಹಾಡೊಂದರ ಸಾಲುಗಳು ಹೀಗಿವೆ.
ನಾನು ನಿನ್ನಲ್ಲಿ ಮತ್ತು ನೀನು ನನ್ನಲ್ಲಿ ಕಳೆದುಹೋಗಿದ್ದೇವೆ!
ಮತ್ತು ಕಳೆದು ಹೋಗುತ್ತ ನಾವು ಇಬ್ಬರು ಒಬ್ಬರಾಗಿದ್ದೇವೆ!
ಈ ಸಾಲುಗಳನ್ನು ಉತ್ಕಟ ಪ್ರೇಮಿಯೊಬ್ಬನ ಮಹತ್ತಾ$Ìಕಾಂಕ್ಷೆಯ ಧ್ವನಿ ಎನ್ನಬಹುದು ಅಥವಾ ಮೀರಾಬಾಯಿಯ ಭಕ್ತಿಯ ಪರಾಕಾಷ್ಠೆ ಎಂದೂ ಹೇಳಬಹುದು. ಈ ಒಂದಾಗುವ ಪ್ರಕ್ರಿಯೆಯನ್ನು ಒಮ್ಮೆ ಅನುಭವಿಸಿದರೆ ಸಾಕು, ಹಾಡೊಂದನ್ನು ನಿಜವಾಗಿ ಸವಿಯುವ ಆನಂದವೇನೆಂದು ತಿಳಿಯುತ್ತ ಹೋಗುತ್ತದೆ. ಇಲ್ಲದಿದ್ದರೆ ಆಜ್ ಜಾನೆ ಕಿ ಜçದ್ ನಾ ಕರೋ ಎಂಬ ತೀರಾ ಸರಳವಾದ ಸಂಗೀತ ಸಂಯೋಜನೆಯುಳ್ಳ (ಬೇಗಮ್ ಅಖ್ತರ್) ಗಜಲ…, ಇಂದು ಗಜಲುಗಳ ನಾಡಗೀತೆಯಾಗುತ್ತಿರಲಿಲ್ಲ. “ಹಠ ಬೇಡ, ಇಂದು ಹೊರಡಬೇಡ’ ಎಂದು ಪ್ರಿಯತಮೆಯೊಬ್ಬಳು ತನ್ನ ಪ್ರಿಯಕರನಿಗೆ ಬಗೆ ಬಗೆಯಾಗಿ ಸರಳವಾದ ಆದರೆ, ಉತ್ಕಟವಾದ ತನ್ನ ಶೃಂಗಾರವಾಂಛೆಯನ್ನು ಹೇಳಿಕೊಳ್ಳುತ್ತ ವಿಪ್ರಲಂಭದ ಕುರಿತಾದ ತನ್ನ ಭಯವನ್ನು ತೋಡಿಕೊಳ್ಳುವ ಗಜಲ್ ಅದು. ಬೇಗಮ್ ಅಖ್ತರ್ ಹಾಡಿದ ಅಷ್ಟು ಹಳೆಯ ಆ ಗಜಲನ್ನು ಇಂದಿನ ಅರ್ಜಿತ್ ಸಿಂಗ್ ಸಹ ಹಾಡಿ¨ªಾನೆ ಮತ್ತು ಎ. ಆರ್. ರೆಹಮಾನ್ ಕೂಡ ಹಾಡಿ¨ªಾರೆ. ಅಂಥ ದಿವ್ಯವಾದ ಯಮನ್‌ಕಲ್ಯಾಣಿದ ಸಂಯೋಜನೆಯದು. ಬಹಳಷ್ಟು ಬಾರಿ ಸಂಗೀತದ ಪ್ರಪಂಚದಲ್ಲಿ ಹೀಗೆ ನಡೆಯುತ್ತದೆ. ಜನರ ಮನಮುಟ್ಟುವ ಮತ್ತು ಜನರ ಮನವನ್ನು ಗೆಲ್ಲುವ ಅದೆಷ್ಟೋ ಸಂಯೋಜನೆಗಳು ತಾಂತ್ರಿಕವಾಗಿ ತೀರಾ ಎಂದರೆ ತೀರಾ ಸರಳವಿರುತ್ತವೆ. ಜೊತೆಗೆ ತೀರಾ ಸರಳವಾದ ಸಾಹಿತ್ಯವೂ. ಆದರೆ, ಜನರ ಮನಮುಟ್ಟುವಲ್ಲಿ ಆ ಅಂಥ ಸಂಯೋಜನೆಗಳು ಬಹಳ ಯಶಸ್ವಿಯಾಗಿಬಿಡುತ್ತವೆ. ನಿಜಕ್ಕೂ ನೋಡಿದರೆ ಸರಳವಾಗಿರುವುದು ಸುಲಭವಲ್ಲ. ಎಲ್ಲವನ್ನೂ ಅತಿಯಾಗಿ ಬಯಸುವ ಅಥವಾ ಎಲ್ಲದರಲ್ಲೂ ಹೊಸತನ್ನು ಬಯಸುವ ಮನಃಸ್ಥಿತಿಗೆ ಸಾಮಾನ್ಯ ರೇಖೆಯಲ್ಲಿ ಆಲೋಚಿಸುವ ಸಹನೆಯೆ ಇರುವುದಿಲ್ಲ.
ಯಾವಾಗಲೂ ಅತಿವೇಗದಲ್ಲಿ ಕಾರನ್ನು ಚಲಾಯಿಸುವ ಅವಕಾಶವನ್ನು ಹುಡುಕುತ್ತಿರುವ ಮನಸ್ಸಿಗೆ ಪ್ರಯಾಣದಲ್ಲಿ ಅಕ್ಕಪಕ್ಕದ ಪ್ರಕೃತಿಯನ್ನು ಸವಿಯಬೇಕೆಂಬ ಯಾವ ದದೂì ಇರುವುದಿಲ್ಲ ಅಥವಾ ಒಟ್ಟಿನಲ್ಲಿ ಯಾವ ಬಗೆಯ ದದೂì ಇರುವುದಿಲ್ಲ. ಅದೊಂದು ಆ ಹೊತ್ತಿನ ಉನ್ಮಾದವಷ್ಟೆ. ಆ ಉನ್ಮಾದದ ಹಿಂದೆ ಅಥವಾ ಮುಂದೆ ನಿಜವಾದ ಆನಂದದ ದರ್ದಿನ ತಂತಿ ಇಲ್ಲವಾದಲ್ಲಿ ಅಂಥ ಉನ್ಮಾದಕ್ಕೆ ಯಾವ ಮಹಣ್ತೀವೂ ಇರುವುದಿಲ್ಲ.
ಕಳೆದು ಹೋಗುವುದು ಎಂಬುದೊಂದು ಸಿದ್ಧಿ ಮತ್ತು ಅದೊಂದು ಬಹಳ ಸುಲಭದ ಸಿದ್ಧಿಯಲ್ಲದಿದ್ದರೂ ಅಂಥ ದುಬಾರಿಯ ಸಿದ್ಧಿಯೇನಲ್ಲ. ಹೊಸ ಮೊಬೈಲಿನ ಹೊಸ ಗೇಮುಗಳನ್ನು ರಪರಪನೆ ಡೌನ್‌ಲೋಡ್ ಮಾಡಿಕೊಂಡು ದಿನಗಟ್ಟಲೆ ಪಟ್ಟುಹಿಡಿದು ಆ ಆಟಗಳನ್ನು ಕಲಿತು ಸಿದ್ಧಿಸಿಕೊಳ್ಳುವ ನಮಗೆ ಒಂದು ತೀವ್ರಭಾವಗೀತೆಯನ್ನು ಕೇಳುತ್ತ ಕಳೆದುಹೋಗುವುದಕ್ಕೆ ಬೇಕಾಗುವುದು ಹೆಚ್ಚೆಂದರೆ ಹತ್ತು ನಿಮಿಷ. ಅÇÉೊಂದು ಅರ್ಥಾನುಸಂಧಾನವಾಗಬೇಕು, ಅನುಭಾವವನ್ನು ತುಡಿಯುವ ಹುಚ್ಚು ಸ್ವಲ್ಪವಾದರೂ ಬೇಕು ಮತ್ತು ಆ ಹೊತ್ತಿನ ಮನಸ್ಸು ಖಾಲಿಯಾಗಿರಬೇಕಷ್ಟೆ.
– ಕಣಾದ ರಾಘವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.