ಐಫೆಲ್‌ನ ಕೀರ್ತಿ ಗೋಪುರ

Team Udayavani, Jun 17, 2018, 9:56 AM IST

q-33.jpg

ಪ್ಯಾರಿಸಿಗೆ ಭೇಟಿ ನೀಡಿದವರು ಯಾರೂ ಐಫೆಲ್‌ ಗೋಪುರವನ್ನು ವೀಕ್ಷಿಸದೆ ಮರಳುವುದಿಲ್ಲ. ಕಬ್ಬಿಣದಿಂದ ನಿರ್ಮಿಸಿದ ಈ ಗೋಪುರದ ದೃಶ್ಯ ಅತ್ಯದ್ಭುತ. ಗಸ್ಟೇವ್‌ ಐಫೆಲ್‌ ಎಂಬ ಇಂಜಿನಿಯರ್‌ನ ಸಂಸ್ಥೆ ಇದರ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದುದರಿಂದ ಐಫೆಲ್‌ ಟವರ್‌ ಎಂದು ಪ್ರಖ್ಯಾತಿ ಪಡೆಯಿತು.

1889ರಲ್ಲಿ ಫ್ರೆಂಚ್‌ ಕ್ರಾಂತಿಯ ಶತಮಾನೋತ್ಸವದ ಆಚರಣೆಗೋಸ್ಕರ ಸೈನ್‌ ನದಿಯ ದಂಡೆಯಲ್ಲಿ ಜಾಗತಿಕ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.  ಇದರ ಪೂರ್ವತಯಾರಿಯಲ್ಲಿ ಪ್ರವೇಶ ದ್ವಾರದ ವಿನ್ಯಾಸದ ಅವಕಾಶವನ್ನು ಎರಡು ವರ್ಷದ ಮೊದಲು ಗಸ್ಟೇವ್‌ ಐಫೆಲ್‌ನ  ಸಂಸ್ಥೆ ಪಡೆದಿತ್ತು. ಐಫೆಲ್‌ನ ಜೊತೆಗಿನ ಇಂಜಿನಿಯರ್‌ಗಳಾದ ಮಾರಿಸ್‌ ಕೊಯೆಲಿನ್‌ ಮತ್ತು ಎಮಿಲಿ ನೋರ್ಯ ಸೇರಿಕೊಂಡು ಇದನ್ನು ವಿನ್ಯಾಸಗೊಳಿಸಿದರು.  1887ರ ಜನವರಿ 28ರಂದು ಕಾರ್ಯಾರಂಭವಾಯಿತು. ಬಹಳಷ್ಟು ಜನ ಕಲಾಕಾರರು ಇದರ ನಿರ್ಮಾಣವನ್ನು ವಿರೋಧಿಸಿದರು. ಆಸುಪಾಸಿನಲ್ಲಿರುವ ಪ್ರಸಿದ್ಧ ಚಾರಿತ್ರಿಕ ಕಟ್ಟಡಗಳಿಗೆ ಇದರಿಂದ ಧಕ್ಕೆಯುಂಟಾಗಬಹುದು ಮತ್ತು ಎತ್ತರದ ಕಬ್ಬಿಣದ ಗೋಪುರ ಪ್ಯಾರಿಸ್‌ ನಗರದ ಅಂದಕ್ಕೆ ಮಾರಕವಾಗಬಹುದೆಂಬುದು ಅವರ ಆತಂಕವಾಗಿತ್ತು. ಗಸ್ಟೇವ್‌ ಐಫೆಲನು ತನ್ನ ನಿರ್ಮಾಣದ ನಕ್ಷೆಯನ್ನು ತೋರಿಸಿ,  ಈಜಿಪ್ತಿನ ಪಿರಮಿಡ್‌ಗಳಿಗೆ ಹೋಲಿಸಿದ.  ಇದೂ ಪ್ರಸಿದ್ಧವಾಗುತ್ತದೆಂದು ಭರವಸೆಯನ್ನು ಕೊಟ್ಟ.

ನಿರ್ಮಾಣ ಕಾರ್ಯದ ಅವಧಿಯಲ್ಲಿ ಯಾವುದೇ ಡ್ರಿಲ್ಲಿಂಗ್‌ ಆಗಲಿ, ವೆಲ್ಡಿಂಗ್‌ ಆಗಲಿ ಕಾರ್ಯಸ್ಥಳದಲ್ಲಿ ನಡೆಯಲಿಲ್ಲ. ಕಾರ್ಖಾನೆಯಲ್ಲಿ ತಯಾರಿಸಿದ ಬಿಡಿಭಾಗಗಳನ್ನು ತಂದು ಜೋಡಿಸಲಾಯಿತು. 18,038 ಬಿಡಿಭಾಗಗಳನ್ನು 3.5 ಮಿಲಿಯ ಮೊಳೆಗಳ ಸಹಾಯದಿಂದ ಒಂದುಗೂಡಿಸಲಾಯಿತು.  ಒಟ್ಟು 7,300 ಟನ್ನುಗಳಷ್ಟು ಕಬ್ಬಿಣದ ಉಪಯೋಗವಾಯಿತು.  ಇದರ ನಿರ್ಮಾಣ ಕಾರ್ಯದಲ್ಲಿ ನೂರಾರು ಕಾರ್ಮಿಕರು ದುಡಿದಿದ್ದರು.ಸಾಕಷ್ಟು ಜಾಗರೂಕತೆಗಳನ್ನು ತೆಗೆದುಕೊಂಡ ಕಾರಣ ಹೆಚ್ಚು ಅವಘಡಗಳು ಸಂಭವಿಸಲಿಲ್ಲ. ಮೇಲಕ್ಕೇರಲು ಮೆಟ್ಟಲುಗಳು ಹಾಗೂ ಲಿಫ‌ುrಗಳನ್ನು ಅಳವಡಿಸಲಾಯಿತು.  ಕೆಳಗಿನಿಂದ ಎರಡನೇ ಹಂತದ ವರೆಗಿನವುಗಳನ್ನು ಒಂದು ಫ್ರೆಂಚ್‌ ಕಂಪೆನಿ ಅಳವಡಿಸಿತು. ಲಿಫ್ಟ್ ಅಳವಡಿಸುವಾಗ ಸಂಭವಿಸಿದ ಅವಘಡದಲ್ಲಿ ಒಬ್ಬ ಕಾರ್ಮಿಕ ಮೃತಪಟ್ಟ. ಎರಡರಿಂದ ಮೂರನೇ ಹಂತದವರೆಗಿನ ಲಿಫ್ಟ್ ಅಳವಡಿಸುವುದು ಕಷ್ಟವಾದ ಪ್ರಕ್ರಿಯೆಯಾದುದರಿಂದ ಯಾವ ಫ್ರೆಂಚ್‌ ಕಂಪೆನಿಯೂ ಮುಂದೆ ಬರಲಿಲ್ಲ. ಕೊನೆಗೆ ಓಟಿಸ್‌ ಕಂಪೆನಿಯು ಇದನ್ನು ಪೂರ್ಣಗೊಳಿಸಿತು.

1889ರ ಮಾರ್ಚ್‌ನಲ್ಲಿ  ಕಾಮಗಾರಿ ಪೂರ್ಣಗೊಂಡಿತು.   1889ರ ಮಾರ್ಚ್‌ 31ರಂದು ಉದ್ಘಾಟನೆಗೊಂಡಿತು.  ಈ ಸಮಯದಲ್ಲಿ ಲಿಫ‌ುrಗಳ ಕೆಲಸ  ಪೂರ್ತಿಯಾಗದಿದ್ದರೂ ಜನಸಾಮಾನ್ಯರಿಗೆ ಶಿಖರ ಹಂತವನ್ನು ಏರುವುದು ಪ್ರಿಯವಾಯಿತು. 1710 ಮೆಟ್ಟಲುಗಳನ್ನು 30,000 ಜನರು ತುಳಿದು ಮೇಲೆ ಹತ್ತಿದರು. ಜಾಗತಿಕ ಮೇಳ ಕೊನೆಯಾಗುವ ಮೊದಲು 1,896,785 ಜನ ಶಿಖರ ಹಂತದಿಂದ ಪ್ಯಾರಿಸ್‌ ಪಟ್ಟಣವನ್ನು ವೀಕ್ಷಿಸಿದ್ದರು. ಆ ಕಾಲದಲ್ಲಿ ಮೊದಲನೆಯ ಅಂತಸ್ತಿನಲ್ಲಿ ಉಪಹಾರ ಗೃಹಗಳಿದ್ದವು. ಎರಡನೆಯ ಮಜಲಿನಲ್ಲಿ ಫ್ರೆಂಚ್‌ ವೃತ್ತಪತ್ರಿಕೆಯ ಕಚೇರಿ ಮತ್ತು ಮುದ್ರಣ ಶಾಲೆಗಳಿದ್ದವು.  ಮೇಲಿನ ಅಂತಸ್ತಿನಲ್ಲಿ ಒಂದು ಅಂಚೆ ಕಛೇರಿ ಹಾಗೂ ಕೆಲವು ಪ್ರಯೋಗಾಲಯಗಳಿದ್ದವು.  ಈ ಅಂತಸ್ತಿನ ಒಂದು ಚಿಕ್ಕ ಭಾಗವನ್ನು ಐಫೆಲ್‌ ತನ್ನ ಸ್ವಂತ ಉಪಯೋಗಕ್ಕಾಗಿ ಇರಿಸಿಕೊಂಡಿದ್ದ.  ವೇಲ್ಸ…ನ ರಾಜಕುಮಾರ, ಸಾರಾ ಬನ್ಹಾìರ್ಟ್‌, ಥಾಮಸ್‌ ಎಡಿಸನ್‌ ಇಲ್ಲಿಗೆ ಭೇಟಿ ನೀಡಿದ್ದರು. ಟವರಿನ ಮೇಲಿದ್ದ ಐಫೆಲ್‌ನ ವಾಸಸ್ಥಾನಕ್ಕೆ ಭೇಟಿ ನೀಡಿದ ಎಡಿಸನ್‌ ಅವನಿಗೆ ತನ್ನ ಫೋನೋಗ್ರಾಫ‌ನ್ನು ಉಡುಗೊರೆಯಾಗಿತ್ತು, ತನ್ನ ಮೆಚ್ಚುಗೆ ತಿಳಿಸಿದ.

ಗೋಪುರ ಸುತ್ತಲಿನ ಸಂಗತಿಗಳು
ಐಫೆಲ್‌ನಿಗೆ ಕೇವಲ 20 ವರ್ಷಗಳಷ್ಟು ಕಾಲ ಈ ಗೋಪುರವನ್ನು ನಿಲ್ಲಿಸಲು ಅನುಮತಿ ಇತ್ತು. ಇದರ ಪ್ರಕಾರ 1909ರಲ್ಲಿ ಗೋಪುರವನ್ನು ಕೆಡವಬೇಕಿತ್ತು. ಆದರೆ, ಆಗಲೇ ಅದು ಬಹಳ ಜನಪ್ರಿಯವಾಗಿತ್ತು. ಅಲ್ಲದೆ ಆಕಾಶವಾಣಿಯನ್ನು ನಡೆಸಲು ಅತ್ಯಮೂಲ್ಯವಾಗಿತ್ತು.  ಅನುಮತಿ ಮುಗಿದ ನಂತರವೂ ಪ್ಯಾರಿಸ್‌ ನಗರದ ಒಡೆತನದಲ್ಲಿ ಹಾಗೆಯೇ ಉಳಿಯಿತು. ಕಾಲಕ್ರಮೇಣ ದೂರದರ್ಶನದ ಪ್ರಸಾರವನ್ನೂ ಇಲ್ಲಿಂದ ಆರಂಭಿಸಿದರು.  ಮೊದಲನೇ ಮಹಾಯುದ್ಧದಲ್ಲಿ ಇಲ್ಲಿರುವ ರೇಡಿಯೋ ಟ್ರಾನ್ಸಿಸ್ಟರ್‌ ಜರ್ಮನ್‌ ರೇಡಿಯೋ ತರಂಗಗಳಿಗೆ ಅಡ್ಡಿ ಒಡ್ಡಿ ಅವರ ಮುನ್ನಡೆಯನ್ನು ಹತ್ತಿಕ್ಕಿತು. ಎರಡನೆಯ ಮಹಾಯುದ್ಧದಲ್ಲಿ ಜರ್ಮನ್ನರು ಪ್ಯಾರಿಸ್‌ ನಗರ ವಶಪಡಿಸಿಕೊಂಡಾಗ (1940) ಫ್ರೆಂಚರು ಲಿಫ್ಟ್ ಕೇಬಲ್‌ನ್ನು ಕತ್ತರಿಸಿದರು. ಜರ್ಮನ್ನರು ಮೆಟ್ಟಲುಗಳನ್ನು ಹತ್ತಿ ಹೋಗಿ ತಮ್ಮ ಧ್ವಜವನ್ನು ಹಾರಿಸಿದರು. ಹಿಟ್ಲರನು ಮೇಲೆ ಹತ್ತದೆ  ಕೆಳಗಡೆ ಉಳಿದ. ತದನಂತರ ಇಬ್ಬರು ಫ್ರೆಂಚರು ಗುಟ್ಟಾಗಿ ಮೇಲೆ ಹತ್ತಿ ಜರ್ಮನ್‌ ಧ್ವಜವನ್ನು ಕಿತ್ತು ಮತ್ತೆ ಫ್ರೆಂಚ್‌ ಧ್ವಜವನ್ನು ಹಾರಿಸಿದರು.

ಈ ಗೋಪುರದ ಎತ್ತರ 300 ಮೀ. ಗಳಷ್ಟು.  ಆಂಟೆನಾ ಮತ್ತೆ 20 ಮೀ. ಇದೆ.  ಬುಡದಿಂದ ಮೇಲಿನವರೆಗೆ ಮೂರು ಅಂತಸ್ತುಗಳಿವೆ. 1660 ಮೆಟ್ಟಲುಗಳಿವೆ. ಕಾಲಕಾಲಕ್ಕೆ ಮೆಟ್ಟಲು ಗಳನ್ನು ಮರು ನಿರ್ಮಿಸಿದ ಕಾರಣ ಸಂಖ್ಯೆ ಮೊದಲು ನಮೂದಿಸಿದ ಸಂಖ್ಯೆಗಿಂತ ಬೇರೆಯಾಗಿದೆ.  8 ಲಿಫ‌ುrಗಳನ್ನು ಅಳವಡಿಸಲಾಗಿದೆ.  ಎರಡನೇ ಅಂತಸ್ತಿನ ನಂತರ ಲಿಫ‌ುrಗಳನ್ನು ಉಪಯೋಗಿಸಿಯೇ ಮೇಲೇರಬೇಕು. ಮೆಟ್ಟಲುಗಳನ್ನು ಹತ್ತಲು ಬಿಡುವುದಿಲ್ಲ. ಲಿಫ‌ುrಗಳನ್ನು ಹಲವಾರು ಬಾರಿ ಬದಲಾಯಿಸಲಾಯಿತು. ನೆಲದಿಂದ ಎರಡನೆಯ ಮಜಲಿಗೆ ಕೊಂಡೊಯ್ಯುವ ಈಗ ಅಳವಡಿಸಲಾಗಿರುವ ಲಿಫ್ಟ್ ಒಂದೇ ಬಾರಿಗೆ 110 ಜನರನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿದೆ. ಎತ್ತರದ ಕಬ್ಬಿಣದ ನಿರ್ಮಿತಿಯಾದುದರಿಂದ ಬಿಸಿಲಿರುವ ಭಾಗ 8 ಸೆ. ಮೀ.ಗಳಷ್ಟು  ಹಿಗ್ಗಲು ಅವಕಾಶವಿತ್ತು ನಿರ್ಮಿಸಿದ್ದಾರೆ.  ತುಕ್ಕು ಹಿಡಿಯ ದಂತೆ ಪ್ರತಿ ಏಳುವರ್ಷಗಳಿಗೊಮ್ಮೆ ಪೇಂಟ್‌ ಬಳಿಯುತ್ತಾರೆ.

ಮೊದಲನೆಯ ಮತ್ತು ಎರಡನೆಯ ಅಂತಸ್ತಿನಲ್ಲಿ ಉಪಹಾರಗೃಹಗಳೂ, ಅಂಗಡಿಗಳೂ ಇವೆ. ಮೇಲಿನ ಹಂತದಲ್ಲಿ ಆಕಾಶವಾಣಿ ಹಾಗೂ ದೂರದರ್ಶನ ಪ್ರಸರಣ ಕಾರ್ಯಗಳು ನೆರವೇರುತ್ತವೆ.  ಐಫೆಲ್‌ನ ಸ್ವಂತ ಕೊಠಡಿಗಳಲ್ಲಿ ಕಿರಿದಾದ ಸಂಗ್ರಹಾಲಯವಿದೆ.  ರಾತ್ರಿಯಲ್ಲಿ  ಇಡೀ ಗೋಪುರ ದೀಪಾಲಂಕಾರದಿಂದ ಸುಂದರವಾಗಿ ಕಾಣಿಸುತ್ತದೆ.  ದೀಪಾಲಂಕೃತ ಟವರಿನ ಚಿತ್ರಕ್ಕೆ ಫ್ರಾನ್ಸ್‌ ದೇಶ ಸ್ವಾಮ್ಯ ಪಡೆದುಕೊಂಡಿದೆ.

ಉಮಾಮಹೇಶ್ವರಿ ಎನ್‌.

ಟಾಪ್ ನ್ಯೂಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.