ಪ್ರಬಂಧ: ಉಪವಾಸ! 


Team Udayavani, Feb 11, 2018, 8:15 AM IST

s-8.jpg

ಸೂಪರ್‌ ಮೂನ್‌, ಬ್ಲಿಡ್‌ ಮೂನ್‌ ಎಂದೆಲ್ಲ ಕರೆಯಿಸಿಕೊಂಡ ಸಂಪೂರ್ಣ ಚಂದ್ರಗ್ರಹಣ ಸಾಂಪ್ರದಾಯಿಕ ನಂಬಿಕೆ ಮತ್ತು ವೈಜ್ಞಾನಿಕತೆಗಳ ನಡುವೆ ಒಂದಿಷ್ಟು ತಿಕ್ಕಾಟಗಳನ್ನು ಉಂಟುಮಾಡಿದ್ದು ಸುಳ್ಳಲ್ಲ. ಗ್ರಹಣ ಬಂತೆಂದರೆ ಸಾಕು, ಟಿವಿಗಳಲ್ಲಿ ಒಂದಿಷ್ಟು ಜ್ಯೋತಿಷಿಗಳ, ವಿಜ್ಞಾನಿಗಳ, ವೈಚಾರಿಕತೆ ಹಿನ್ನಲೆಯುಳ್ಳವರ ಮುಖ ಪರಿಚಯವಾಗತೊಡಗುತ್ತದೆ. ಈ ಸಲದ ಚಂದ್ರ ಗ್ರಹಣವೂ ಇದರಿಂದ ಹೊರತಾಗಲಿಲ್ಲ. ಯಾವ ರಾಶಿಯವರಿಗೆ ಶುಭ ಫ‌ಲ, ಮಿಶ್ರ ಫ‌ಲ, ಅಶುಭ ಫ‌ಲ, ದೋಷ ಪರಿಹಾರಕ್ಕೆ ಮಾಡಬೇಕಾದ ವಿಧಾನಗಳ ಬಗ್ಗೆ ನಾನಾ ರೀತಿಯ ಸಲಹೆ ಸೂಚನೆ, ಒಂದು ರೀತಿಯ ಬಲವಂತದಿಂದ ಮಾಡಲೇಬೇಕು ಅನ್ನುವ ರೀತಿ ಕೊಡುತ್ತಿದ್ದಂತೆ ಕಾಣುತ್ತಿತ್ತು, ಮತ್ತೂಂದು ಮಜಾ ಎಂದರೆ ಒಂದು ಚಾನೆಲ್‌ನಲ್ಲಿ ಕಾಣಿಸಿಕೊಂಡ ಜ್ಯೋತಿಷಿ ಪರಿಹಾರಕ್ಕೆ “ಬಂಗಾರದ ಚಂದ್ರನ ಮಾಡಿಸಿ ದೇವರಿಗೆ ಕಾಣಿಕೆ ನೀಡಿ’ ಎಂದರೆ, ಮತ್ತೂಂದು ಚಾನೆಲ್‌ನ ಜ್ಯೋತಿಷಿ, “ಬೆಳ್ಳಿàದು ಮಾಡಿಸಿದರೆ ಸಾಕು, ಇನ್ನೊಂದರಲ್ಲಿ ಆಕಳಿಗೆ ನವಧಾನ್ಯ ಕೊಟ್ಟರೆ ಸಾಕು’ ಎಂಬಂಥ ನಾನಾ ಸಲಹೆಗಳು ಬಂದು ನಮ್ಮ ಮನೆಯಲ್ಲಿ  ಯಾವುದನ್ನು ಮಾಡಬೇಕೆಂದು ತಿಳಿಯದೇ ಗೊಂದಲಕ್ಕೆ ಈಡಾದರು. ಕೊನೆಗೆ ನಾನೇ “”ಯಾರಿಗೆ ಯಾವ ಚಾನೆಲ್‌ ಇಷ್ಟವೋ ಆ ಚಾನೆಲ್‌ನ ಜ್ಯೋತಿಷಿ ಹೇಳಿದಂತೆ ಮಾಡಿಕೊಳ್ಳಿ” ಎಂದು ಗೊಂದಲಕ್ಕೆ ತೆರೆ ಎಳೆದೆ.

ಚಂದ್ರಗ್ರಹಣದ ದಿನ ಬೆಳಿಗ್ಗೆ ಎದ್ದು ಗಡಬಿಡಿಯಲ್ಲಿ ಡ್ನೂಟಿಗೆ ಹೊರಡಲು ಅನುವಾಗುತ್ತಿ¨ªಾಗ ಆಯಿ, “”ಈವತ್ತು ಚಂದ್ರಗ್ರಹಣ, ಮಧ್ಯಾಹ್ನ ಹನ್ನೆರಡರೊಳಗೆ ಊಟ ಮುಗಿಸಬೇಕು ಎಂದು ಟಿವಿಯಲ್ಲಿ ಹೇಳಿ¨ªಾರೆ. ನೀನು ಮಧ್ಯಾಹ್ನ ಬೇಗ ಹೊಟೇಲ್‌ಗೆ ಹೋಗಿ ತಿಂಡಿ ತಿನ್ನು. ಲೇಟಾಗಿ ಹೋದರೆ ಹೊಟೇಲ್‌ ಬಂದ್‌ ಮಾಡಿಯಾರು” ಎಂದಾಗ, “”ಆಯ್ತು” ಎಂದು ಹೇಳಿ ಹೊರಟೆ. ಈಗೀಗ ನಮ್ಮ ನಂಬಿಕೆ, ಆಚರಣೆಗಳನ್ನು ಟಿವಿಯವರು ನಿರ್ಧರಿಸುವಂತಾಗಿದೆ.  ಚಿಕ್ಕವರಿ¨ªಾಗ ಗ್ರಹಣದ ಸಂದರ್ಭದಲ್ಲಿ ಉಪವಾಸ, ನಂತರ ತಣ್ಣೀರ ಸ್ನಾನ, ಮಾಡಲು ಪಡುತ್ತಿದ್ದ ಕಷ್ಟ ಎಲ್ಲ ನೆನಪಾಯಿತು. ಈ ಕಷ್ಟ ನೋಡಿ ಗ್ರಹಣ ಎಂದರೆ ಸಾಕು, ಮಾರುದೂರ ಓಡಿ ಹೋಗುವ ಎನಿಸುತ್ತಿತ್ತು. ಈಗ ಎಷ್ಟೋ ಬೆಟರ್‌. ಗ್ರಹಣದ ಆಚರಣೆ ಮೊದಲಿನಷ್ಟು ಕಷ್ಟ ಇಲ್ಲವಾಗಿ ಸರಳೀಕೃತಗೊಂಡಿದೆಯಾದರೂ ಒಂದಿಷ್ಟು ನಂಬಿಕೆಯ ಆಚರಣೆಗಳು ಹಾಗೇ ಉಳಿದುಕೊಂಡು ಮುಂದುವರೆದಿದೆ. ಆಸ್ಪತ್ರೆಯ ತಲುಪಿ ಡ್ನೂಟಿ ಸಹಿ ಹಾಕಿ ನನ್ನ ಆಫೀಸ್‌ಗೆ ಹೋಗಿ ನನ್ನ ಕಾರ್ಯದಲ್ಲಿ ತೊಡಗಿದೆ. ಗ್ರಹಣದ ಕಾರಣಾನೋ ಏನೋ, ಪೇಶೆಂಟ್‌ಗಳ ಸಂಖ್ಯೆಯು ಕಡಿಮೆ ಇತ್ತು. ಸಹೋದ್ಯೋಗಿ ಸಿಸ್ಟರ್‌ ಒಬ್ಬಳು ಬಂದು, “”ಬ್ರದರ್‌ ನನಗೊಂದು ಹೆಲ್ಪ್ ಆಗಬೇಕಿತ್ತು. ನನ್ನ ರಾಶಿಗೆ ಚಂದ್ರಗ್ರಹಣ ಅಶುಭ ಅಂತೆ. ಹಾಗಾಗಿ, ಬೆಳ್ಳಿ ಚಂದ್ರ ಬಿಂಬ ಬೇಕಾಗಿದೆ. ದೇವರಿಗೆ ಒಪ್ಪಿಸಬೇಕು. ಹೊರಗಡೆ ಹೋದಾಗ ತಂದು ಕೊಡಿ ಪ್ಲೀಸ್‌” ಎಂದಳು. “”ಆಯ್ತು ಸಿಸ್ಟರ್‌, ಊಟಕ್ಕೆ ಹೊರಗೆ ಹೋದಾಗ ತಂದು ಕೊಡ್ತೀನಿ” ಎಂದೆ.  “”ನನಗೆ ಭಟ್ಟರು ಹನ್ನೊಂದು ಗಂಟೆಯೊಳಗೆ ಊಟ ಮಾಡಲಿಕ್ಕೆ ಹೇಳಿ¨ªಾರೆ, ಡಾಕ್ಟರು ಬೇಗ ಊಟ ಮಾಡಿ ಬರಲು ಪರ್ಮಿಷನ್‌ ಕೊಟ್ಟಿ¨ªಾರೆ, ನಿಮಗೆ ಎಷ್ಟು ಗಂಟೆಗೆ ಊಟ ಮಾಡಲು ಹೇಳಿ¨ªಾರೆ?” ಎಂದು ಕೇಳಿದ್ದಳು. “”ನನಗೆ ಜ್ಯೋತಿಷಿ ಹಸಿವಾದಾಗ ಊಟ ಮಾಡು ಎಂದು ಹೇಳಿ¨ªಾರೆ” ಎಂದೆ. ಅವಳಿಗೆ ನಗು ಬಂತು. ಊಟಕ್ಕೆ ಹೋಗಬೇಕೆಂದು ಗಡಿಬಿಡಿಯಲ್ಲಿ ಹೊರಟಳು. ಹನ್ನೊಂದರ ಸುಮಾರಿಗೆ ನಾನು ಸಹೋದ್ಯೋಗಿಗಳಿಬ್ಬರು ಟೀ ಕುಡಿದು ಬರಲು ಹೊರಟಾಗ ಆಸ್ಪತ್ರೆಯ ಕಾರಿಡಾರಿನಲ್ಲಿ ಒಬ್ಬ ಸಿಸ್ಟರುಗಳೂ ಕಾಣಸಿಗಲಿಲ್ಲ. ಎಲ್ಲ ಗ್ರಹಣದ ಕಾರಣ ಊಟಕ್ಕೆ ಹೊರಟಾಗಿತ್ತು. ಟೀ ಮುಗಿಸಿ ಬರುವಾಗ ಇನ್ನೊಬ್ಬ ಸಿಸ್ಟರು ಮಾತಿಗೆ ಸಿಕ್ಕರು. ಅವರಲ್ಲಿಯೂ ಅದೇ ಗ್ರಹಣದ ಮಾತು. “”ಊಟ ಮುಗಿಸಿ ಬಂದೆ. ಇನ್ನು ರಾತ್ರಿ ಹತ್ತರ ನಂತರ ಊಟ. ಅಲ್ಲಿಯವರೆಗೆ ಹಸಿವಾದರೆ ಏನು ಮಾಡೋದು ಗೊತ್ತಾಗುತ್ತಿಲ್ಲ” ಅಂದರು. ನಾನು ಒಂದು ಉಪಾಯ ಸೂಚಿಸಿದೆ. “”ತೀರಾ ಆ ಪರಿ ಹಸಿವಾಯಿತೆಂದರೆ ಸೂಜಿ ಮುಖಾಂತರ ಗ್ಲೂಕೋಸ್‌ ಬಾಟಲಿ ಏರಿಸಿಕೊಳ್ಳಿ. ಬಾಯಿ ಮುಖಾಂತರ ಆಹಾರ ತೆಗೆದುಕೊಳ್ಳಬಾರದೆಂದು ಹೇಳಿ¨ªಾರೆಯೇ ಹೊರತು ಸೂಜಿ ಮುಖಾಂತರ ಬೇಡ ಏನು ಹೇಳಿಲ್ಲವಲ್ಲ” ಎಂದೆ. ಹುಸಿಗೋಪದಿಂದ ಮುಖ ತಿರುಗಿಸಿ ಹೊರಟರು. ಕೆಲಸ ಮುಗಿಸಿ ಊಟಕ್ಕೆ ಹೊರಟಾಗ ಮಧ್ಯಾಹ್ನ ಒಂದೂವರೆ ಗಂಟೆ ನಗರದಲ್ಲಿನ ಹೊಟೇಲುಗಳು ಬಂದಾಗುತ್ತಿವೆ ಎಂದು ಸ್ವಲ್ಪ ದೂರದ ಟೂರಿಷ್ಟ್ ಹೊಟೇಲಿಗೆ ಹೋಗೋಣವೆಂದು  ಟ್ರಿಬಲ್‌ ರೈಡಿಂಗ್‌ನಲ್ಲಿ ಬೈಕ್‌ ಏರಿ ಹೊರೆಟೆವು. ಮಧ್ಯದಲ್ಲಿ ಕುಳಿತ ಸಹೋದ್ಯೋಗಿ ಗ್ರಹಣದ ಸಂದರ್ಭದಲ್ಲಿ ಆಕ್ಸಿಡೆಂಟ್‌ ಹೆಚ್ಚಾಗುತ್ತದೆ ಎನ್ನುವ ಥಿಯರಿಯನ್ನು ವೈಜ್ಞಾನಿಕ ವಿಶ್ಲೇಷಣೆಯೊಂದಿಗೆ  ಬೈಕ್‌ರೈಡ್‌ ಮಾಡುತ್ತಿದ್ದ ಗೆಳೆಯನಿಗೆ ಹೇಳುತ್ತಿದ್ದ. ಹಿಂದೆ ಕುಳಿತ್ತಿದ್ದ ನನಗೆ ಆಗುವಷ್ಟು ಹೆದರಿಕೆ ಆಯ್ತು ಅನ್ನಿ. ಊಟದ ಹೊಟೇಲ್‌ನವರಿಗೂ ಗ್ರಹಣದ ಎಫೆಕ್ಟ್  ಸ್ವಲ್ಪ ಜಾಸ್ತಿಯೇ ಆಗಿತ್ತು ಅಂತ ಕಾಣುತ್ತೆ. ಗಿರಾಕಿಗಳು ಕಡಿಮೆ ಇದ್ದರು. ನಮ್ಮ ಹಾಗೇ ಬಂದ ನಾಲ್ವರು ಹೊಟ್ಟೆಬಾಕರು ಒಂದೆಡೆ ಕುಳಿತು ಭರ್ಜರಿ ಚಿಕನ್‌ ಊಟದ ಬ್ಯಾಟಿಂಗ್‌ ಮಾಡುತ್ತಿದ್ದರು. “”ಸರ್‌, ನೀವು ಗ್ರಹಣ ಆಚರಣೆ ಮಾಡಲ್ವ?” ಎಂದ. ನಾನು ಸೀರಿಯಸ್‌ ಆಗಿ, “”ಇದೆಯಪ್ಪ, ಯಾವುದಕ್ಕೂ ನಮಗೆ ಕೊಡುವ ಊಟಕ್ಕೆ, ಅದರಲ್ಲೂ ಮೀನು ಸಾರಿಗೆ ದರ್ಬೆ, ತುಳಸಿ ಎಲೆಯಿಂದ ನೀರನ್ನು ಪ್ರೋಕ್ಷಣೆ ಮಾಡಿಕೊಂಡು ಬಾ, ಹಾಗೇ ಮಾಡಿಕೊಂಡು ಊಟ ಮಾಡಬಹುದೆಂದು ಎಂದು ಜ್ಯೋತಿಷಿ ಹೇಳಿ¨ªಾರೆ” ಎಂದೆ. “”ಹೌದಾ. ಆಯ್ತು ಸರ್‌” ತುಳಸಿ ಎಲೆ ಹುಡುಕಿ ಹೊರಟ. ಸಹೋದ್ಯೋಗಿಗಳಿಬ್ಬರು ಮುಸಿ ಮುಸಿ ನಗತೊಡಗಿದ್ದರು.

ರಾತ್ರಿ ಹತ್ತರವರೆಗೆ ಮನೆಯಲ್ಲಿ ಉಪವಾಸ ಇರಬೇಕಾದ ಅನಿವಾರ್ಯತೆ ನೆನಪಾಗಿ ಭರ್ಜರಿ ಊಟ ಮುಗಿಸಿ ಹೊರಡುವಾಗ ಮಧ್ಯಾಹ್ನ ಎರಡೂವರೆ ಗಂಟೆ. ಆಗ ಸಿಸ್ಟರ್‌ ಹೇಳಿದ ಬೆಳ್ಳಿ ಚಂದ್ರಬಿಂಬ ನೆನಪಾಯಿತು. ಚಿನ್ನದ ಅಂಗಡಿ ಶೆಟ್ಟಿ ಊಟಕ್ಕೆ ಹೋಗಿಬಿಟ್ಟರೆ ಕಷ್ಟ ಎಂದು ಪೋನ್‌ ಮಾಡಿದರೆ “”ಇವತ್ತು ಗ್ರಹಣ ಅಲ್ವಾ, ಊಟ ಇಲ್ಲ. ಮನೆಗೆ ಹೋಗ್ತಾ ಇಲ್ಲ. ಅಂಗಡಿಯಲ್ಲಿ ಇದ್ದಿನಿ ಬನ್ನಿ” ಎಂದ. “”ನೋಡಿ, ಇರೋದು ಇದೊಂದೇ ಚಂದ್ರ ಬಿಂಬ ಎÇÉಾ ಖಾಲಿಯಾಗಿದೆ. ಬೆಳಿಗ್ಗೆಯಿಂದ ಇದನ್ನೇ ಕೇಳಿ ತೆಗೆದುಕೊಂಡು ಹೋಗುತ್ತಿ¨ªಾರೆ” ಅಂದ. ಗ್ರಹಣ ಮತ್ತು ಜ್ಯೋತಿಷಿ ಈ ಅಂಗಡಿಯವನಿಗೆ ಶುಭ ಫ‌ಲವನ್ನೇ ನೀಡಿ¨ªಾರೆ ಅನಿಸಿತ್ತು. ಡ್ನೂಟಿ ಮುಗಿಸಿ ಸಂಜೆ ಮನೆಗೆ ಹೊರಡುವಾಗ ಯಾವುದಕ್ಕೂ ಇರಲಿ ಎಂದು ಮುಂಜಾಗ್ರತಾ ಕ್ರಮವಾಗಿ ಭರ್ಜರಿ ಟಿಫಿನ್‌ ಸಮೇತ ಚಹಾ ಕುಡಿದು ಮುಗಿಸಿದೆವು.

ಮನೆ ಸೇರೋ ಹೊತ್ತಿಗೆ ಎಲ್ಲರೂ ಟಿವಿ ಮುಂದೆ ಪ್ರತಿಷ್ಠಾಪನೆಗೊಂಡಿದ್ದರು. ಚಂದ್ರ ಕಪ್ಪಾದ, ಬೆಳ್ಳಗಾದ ಎಂದು ಬ್ರೇಕಿಂಗ್‌ ನ್ಯೂಸ್‌ ಕೊಡುತ್ತಿದ್ದರು. ಎಲ್ಲರ ಮುಖದಲ್ಲಿಯೂ ಉಪವಾಸದ ಬಳಲಿಕೆ ಎದ್ದು ಕಾಣುತ್ತಿತ್ತು. ಮೂರೂವರೆ ವರ್ಷದ ಮಗಳು ನನ್ನ ಕಂಡ ಕೂಡಲೇ ಓಡಿ ಬಂದು, “”ಪಪ್ಪಾ ತಿನ್ನುಕ್ಕೆ” ಎನ್ನುತ್ತ ಬ್ಯಾಗೆಲ್ಲ ಜಾಲಾಡತೊಡಗಿದ್ದಳು. “”ಇವತ್ತು ಗ್ರಹಣ ಅಲ್ವಾ ಅಂಗಡಿ ಎಲ್ಲ ಬಂದ್‌ ಆಗಿದೆ” ಎಂದೆ. “”ಪಪ್ಪಾ, ಇವತ್ತು ಉಪವಾಸ. ಅದಕ್ಕೆ ಊಟ ಮಾಡಿಲ್ಲ”  ಎಂದಳು. “”ಹಸಿವಾಗಿಲ್ಲವಾ?” ಎಂದು ಕೇಳಿದೆ. “”ಇÇÉಾ ಚಂದಮಾಮನ ಹತ್ತಿರ ಕ್ಷಮಿಸು ಎಂದು ಬರೀ ಬಿಸ್ಕಿಟ್‌, ಚಾಕಲೇಟ್‌ ಮಾತ್ರ ತಿಂತಾ ಇದ್ದಿನಿ” ಎಂದು ತನ್ನದೇ ಮುದ್ದು ಭಾಷೆಯಲ್ಲಿ ಹೇಳಿದ್ದಳು. ಬಾಪರೆ, ಮಗಳೇ ಉಪವಾಸದ ವಿಷಯದಲ್ಲಿ  ನನ್ನನ್ನು  ಮೀರಿಸಿದಳು ಅನಿಸಿತು. ಸುಮ್ಮನೆ ನಾನು ಮತ್ತು ಮಗಳು ಮನೆ ಹೊರಗಡೆ ಬಂದು ಆಕಾಶದಲ್ಲಿ ಚಂದ್ರನ ಹುಡುಕತೊಡಗಿ¨ªೆವು. ತೆಂಗಿನ ಮರದ ಗರಿಗಳ ಮರೆಯಲಿ ಸ್ವಲ್ಪ ಸ್ವಲ್ಪ ಕಾಣಿಸುತ್ತಿತ್ತು. ಅರ್ಧ ಕಪ್ಪು, ಅರ್ಧ ಬಿಳುಪುನೊಂದಿಗೆ ಹೊಳೆಯುತ್ತಿದ್ದ ಚಂದ್ರ ದಿನಕ್ಕಿಂತ ದೊಡ್ಡದಾಗಿ ಕಾಣುತ್ತಿದ್ದ ಚಂದ್ರನ ಕಂಡ ಕೂಡಲೇ ಮಗಳು, “”ಕ್ಷಮಿಸು ಚಂದಮಾಮ, ಹಸಿವಾಯ್ತು. ಬಿಸ್ಕಿಟ್‌ ತಿಂದೆ” ಎಂದು ಹೇಳಿ ಮನೆಯ ಒಳಗೆ ಹೋಗಿ ಮತ್ತೆ ಬಿಸ್ಕಿಟ್‌ ತಿನ್ನತೊಡಗಿದ್ದಳು. ಅಲ್ಲಿ ಚಂದ್ರ ಬೆಳಕು ಮತ್ತು ಕತ್ತಲಿನ ಜೊತೆ ಆಡುತ್ತ ಇದ್ದರೆ, ಇಲ್ಲಿ ಮಗಳು ಗ್ರಹಣದ ನೆಪದಲ್ಲಿ ತಿಂಡಿ ತಿನ್ನುವ ಆಟ ಆಡುತ್ತಿದ್ದಳು. ಪದೇ ಪದೇ “ಚಂದಮಾಮ ಕ್ಷಮಿಸು’ ಅನ್ನೋದು ಬಿಸ್ಕಿಟ್‌-ಚಾಕಲೇಟ್‌ ತಿನ್ನೋದು. ಕೊನೆಗೆ ಚಂದ್ರ ಗ್ರಹಣ ಬಿಟ್ಟ ಮೇಲೆಯೇ ಮಗಳು ಬಿಸ್ಕಿಟ್‌ ಚಾಕಲೇಟ್‌ ತಿನ್ನೋದ್ದನ್ನು ಬಿಟ್ಟಿದ್ದು! 

ದೊಡ್ಡವಳಾದ ಮೇಲೆ ಇವಳು ನನಗಿಂತ ಚೆನ್ನಾಗಿ ಉಪವಾಸ ಮಾಡ್ತಾಳೆ ಅನ್ನಿಸಿತ್ತು. ಹಸಿವಿನಿಂದ ಕಂಗೆಟ್ಟ ಮುಖಗಳು ಮನೆ ಸ್ವತ್ಛಗೊಳಿಸಿ, ಸ್ನಾನ ಮಾಡಿ ಊಟ ತಯಾರಿ, ದೇವರ ಪೂಜೆಗೆ ಅನುವಾಗತೊಡಗಿದ್ದರು.
ಚಂದ್ರನ ಬೆಳಕಿನಾಟದ ಮೇಲಿನ ವೈಜ್ಞಾನಿಕ ಮತ್ತು ವೈಚಾರಿಕ ನಂಬಿಕೆಗಳು ಒಟ್ಟೊಟ್ಟಿಗೆ ಸಾಗುತ್ತಿರಲಿ. 

ವಿನಾಯಕ ಎಲ್‌. ಪಟಗಾರ

ಟಾಪ್ ನ್ಯೂಸ್

Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ

Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ

ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ

ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ

ESI ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಸಂಕಷ್ಟ:ಸಂಸದ ಬ್ರಿಜೇಶ್‌ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು

ESI ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಸಂಕಷ್ಟ:ಸಂಸದ ಬ್ರಿಜೇಶ್‌ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್‌ ಆಸ್ಪತ್ರೆ

Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್‌ ಆಸ್ಪತ್ರೆ

Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ

Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ

ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ

ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ

ESI ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಸಂಕಷ್ಟ:ಸಂಸದ ಬ್ರಿಜೇಶ್‌ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು

ESI ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಸಂಕಷ್ಟ:ಸಂಸದ ಬ್ರಿಜೇಶ್‌ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.