ಪ್ರಬಂಧ: ಹೆಸರಿನಲ್ಲೇ ಇದೆ ಎಲ್ಲವೂ!


Team Udayavani, Feb 23, 2020, 5:44 AM IST

ram-13

ಇತ್ತೀಚೆಗೆ ಊರಿನಲ್ಲಿ ನನ್ನ ದೊಡ್ಡ ಮಾವನ ಮರಿಮೊಮ್ಮಗಳಿಗೆ ನಾಮಕರಣವಾಯಿತು. ಏನು ಹೆಸರಿಟ್ಟಿದ್ದಾರೆ? ಎಂದು ಫೋನಾಯಿಸಿದ್ದೆ. “ಅದ್ವಿಕಾ’ ಎಂದು ಉತ್ತರ ಬಂತು. ಹೆಸರಿನ ಅರ್ಥ ಏನು ಎನ್ನುವ ನನ್ನ ಪ್ರಶ್ನೆಗೆ, “ಅರ್ಥಗಿರ್ಥ ಏನೂ ಇಲ್ಲ, ಗಂಡ ಹೆಂಡತಿಯ ಮೊದಲನೆಯ ಅಕ್ಷರಗಳನ್ನು ಸೇರಿಸಿ ಹೊಸ ಹೆಸರು ಮಾಡಿದ್ದಾರೆ’ ಎಂದು ತಿಳಿಯಿತು. ಹೊಸ ಹೆಸರಿನ ಅನ್ವೇಷಣೆಯಲ್ಲಿ ಗಂಡಹೆಂಡತಿಯ ಹೆಸರಿನ ಮೊದಲ ಅಕ್ಷರ, ನಡುವಿನ ಅಕ್ಷರ, ಕೊನೆಯ ಅಕ್ಷರಗಳ ಬೇರೆ ಬೇರೆ ಕಾಂಬಿನೇಶನ್‌ನಿಂದ ಹೊಸ ಹೆಸರನ್ನು ಸೃಷ್ಟಿಸುವುದು ಅಪರೂಪವೇನಲ್ಲ ಬಿಡಿ.

ಒಂದಾನೊಂದು ಕಾಲದಲ್ಲಿ ಅಂದರೆ ನಮ್ಮ ತಂದೆ, ಅಜ್ಜ, ಮುತ್ತಜ್ಜರ ಕಾಲದಲ್ಲಿ ಮನೆಯಲ್ಲಿ ಎಲ್ಲಾ ಮಕ್ಕಳಿಗೂ ದೇವರ ಹೆಸರನ್ನು ಇಡುವುದು ಪದ್ಧತಿಯಾಗಿತ್ತು. ಎಲ್ಲರ ಮನೆಯಲ್ಲಿ ಕಡಿಮೆ ಎಂದರೆ ಹತ್ತು-ಹನ್ನೆರಡು ಮಕ್ಕಳು ಇರುತ್ತಿದ್ದುದರಿಂದ ಹೆಚ್ಚು ತಲೆಬಿಸಿ ಮಾಡಿಕೊಳ್ಳದೆ ನಾರಾಯಣ, ಶ್ರೀನಿವಾಸ, ಗಣಪತಿ, ಮಹಾಬಲ, ವಾಸುದೇವ- ಎಂದೆಲ್ಲಾ ಹುಡುಗರಿಗೆ ಮತ್ತು ಸೀತಾ, ಪಾರ್ವತಿ, ಲಕ್ಷ್ಮಿ, ಸರಸ್ವತಿ, ಭಾಗೀರಥಿ ಎನ್ನುವಂತಹ ಹೆಸರುಗಳನ್ನು ಹುಡುಗಿಯರಿಗೆ ಇಡುತ್ತಿದ್ದರು. ಮನೆಯಲ್ಲಿ ಮಕ್ಕಳ ಹೆಸರು ದೇವರ ಹೆಸರಾದರೆ ಅವರನ್ನು ಕರೆಯುವ ನೆಪದಲ್ಲಿ ಭಗವಂತನ ನಾಮಸ್ಮರಣೆ ಆಗುತ್ತದೆ ಎನ್ನುವುದು ಅವರ ವಿಚಾರಧಾರೆಯಾಗಿತ್ತು. ಆದರೆ, ಎಲ್ಲರ ಮನೆಯಲ್ಲಿ ಈ ಹೆಸರುಗಳು ನಾಣಿ, ಚೀನಿ, ಮಾಬ್ಲು, ಗಂಪು, ಪಾರು, ಸರೂ, ಭಾಗೀ ಎಂದೆಲ್ಲಾ ಹ್ರಸ್ವವಾಗುತ್ತಿತ್ತು. ನಾಲ್ಕು ಅಕ್ಷರಗಳ ಹೆಸರನ್ನು ಕರೆಯುವುದು ಕಷ್ಟ ಎನ್ನುವ ದೃಷ್ಟಿಯಿಂದ ಮುಂದಿನ ಪೀಳಿಗೆಗಳಲ್ಲಿ ಮೂರು ಅಥವಾ ಎರಡು ಅಕ್ಷರಗಳ ಹೆಸರುಗಳು ಹೆಚ್ಚು ಜನಜನಿತವಾಗತೊಡಗಿದವು. ಹಾಗಾಗಿ, ಎಲ್ಲರ ಮನೆಯಲ್ಲಿ ಒಂದು ಪೀಳಿಗೆಯಲ್ಲಿ ರಮೇಶ, ಸುರೇಶ, ಸತೀಶ, ನಾಗೇಶ, ಗಿರೀಶ, ದಿನೇಶ, ಪ್ರಕಾಶ ಇಂತಹ ಹೆಸರುಗಳು ಸರ್ವೇಸಾಮಾನ್ಯವಾಗಿದೆ.

ಕುಟುಂಬ ಯೋಜನೆ ಬಂದ ಮೇಲೆ ಎಲ್ಲರ ಮನೆಯಲ್ಲಿ ಮಕ್ಕಳ ಸಂಖ್ಯೆ ನಾಲ್ಕು ಅಥವಾ ಮೂರಕ್ಕೆ ಇಳಿದಿತ್ತು. ಆಗ ಮಕ್ಕಳಿಗೆ ಪ್ರಾಸಭರಿತ ಹೆಸರುಗಳು ತಂದೆತಾಯಂದಿರ ಆಯ್ಕೆಯಾಗಿತ್ತು. ಹುಡುಗಿಯರಿಗೆ ಉಮಾ, ಹೇಮಾ, ಸುಮಾ, ವಿಮಲಾ, ಶ್ಯಾಮಲಾ, ನಿರ್ಮಲಾ ಎಂದೂ, ಹುಡುಗರಿಗೆ ವಸಂತ, ಜಯಂತ, ಪ್ರಶಾಂತ, ಸಚಿನ್‌, ವಿಛಿನ್‌ ಎನ್ನುವ ಅಂತ್ಯಪ್ರಾಸದ ಹೆಸರುಗಳು ಕಂಡುಬಂದವು. ತಾರಾ ಪ್ರೇಮಿಗಳು ಪ್ರಸಿದ್ಧ ಸಿನಿಮಾ ತಾರೆಯರ ಹೆಸರನ್ನು ತಮ್ಮ ಮಕ್ಕಳಿಗೆ ಇಡುವುದು ಮುಂಚಿನಿಂದಲೂ ನೋಡಿದ್ದೇವೆ. ನಟರ ಹೆಸರಿಗಿಂತ ನಟಿಯರ ಹೆಸರೇ ಹೆಚ್ಚು ಜನಪ್ರಿಯವಾಗಿದ್ದದ್ದಂತೂ ನಿಜ. ಪದ್ಮಿನಿ, ರಾಗಿಣಿ ಒಂದು ಕಾಲದಲ್ಲಿ ಅತ್ಯಂತ ಜನಪ್ರಿಯ ಹೆಸರು. ಅಂತೆಯೇ ಮಿನುಗುತಾರೆ ಕಲ್ಪನಾಳನ್ನು ಆರಾಧಿಸುತ್ತಿದ್ದವರ ಮನೆಯಲ್ಲಿ ಒಂದು ಮಗುವಿನ ಹೆಸರು “ಕಲ್ಪನಾ’ ಎಂದೇ ಇರುತ್ತಿತ್ತು! ಸುಶ್ಮಿತಾ ಸೇನ್‌ ಮತ್ತು ಐಶ್ವರ್ಯಾ ರೈ ವಿಶ್ವಸುಂದರಿಯರಾದ ಸಮಯದಲ್ಲಿ ಹುಟ್ಟಿದ ಹೆಣ್ಣುಮಕ್ಕಳಿಗೆ ಬಹಳಷ್ಟು ತಂದೆತಾಯಂದಿರ ಆಯ್ಕೆ ಅದೇ ಆಗಿತ್ತು.

ಕೆಲವು ಪೋಷಕರು ತಮ್ಮ ಮಕ್ಕಳ ಹೆಸರು ಶಾಲೆಯ ರಿಜಿಸ್ಟರ್‌ನಲ್ಲಿ ಮೊದಲನೆಯದಾಗಿರಬೇಕೆಂದು ಇಂಗ್ಲೀಷಿನ “ಎ’ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಇಡುತ್ತಾರೆ. ಹಾಗಾಗಿ, ಒಂದು ತರಗತಿಯಲ್ಲಿ ಕನಿಷ್ಠ ಎಂಟು-ಹತ್ತು ಮಕ್ಕಳಾದರೂ ಅಂಕಿತ್‌, ಅವಿನಾಶ್‌, ಅಪರ್ಣಾ, ಅಭಿನವ್‌… ಎನ್ನುವ ಹೆಸರಿನವರಿರುತ್ತಾರೆ. ಆದರೆ, ಕೆಲವು ತಂದೆತಾಯಂದಿರು “ಎ’ ಅಕ್ಷರದಲ್ಲೂ ಮತ್ತೂ ಮುಂದಿರಬೇಕೆಂದು ಎರಡು “ಎ’ ಅಕ್ಷರಗಳಿರುವ ಹೆಸರನ್ನು ಹುಡುಕುತ್ತಾರೆ. ನೂರಾರು ಹೆಸರುಗಳಿರುವ ಪುಸ್ತಕವಂತೂ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಕೆಲವರು ಹೊಸ ಹೆಸರಿಗಾಗಿ ಆ ಪುಸ್ತಕದ ಮೊರೆ ಹೋಗುತ್ತಾರೆ. ಇತ್ತೀಚೆಗೆ ಗೂಗಲ್‌ ಆ ಕೆಲಸ ನಿರ್ವಹಿಸುತ್ತಿದೆ. ಕೆಲವು ಹೆಸರುಗಳಿಗೆ ಅರ್ಥವೇ ಇಲ್ಲ ಎನ್ನಿಸಿದರೆ, ಪೋಷಕರು ಹೀಬ್ರೂ ಭಾಷೆಯಲ್ಲಿ ಈ ಅರ್ಥ, ಜರ್ಮನಿಯಲ್ಲಿ, ಫ್ರೆಂಚ್‌ ಭಾಷೆಯಲ್ಲಿ, ಸ್ಪ್ಯಾನಿಶ್‌ ಭಾಷೆಯಲ್ಲಿ ಇರುವ ಅರ್ಥಗಳನ್ನೆಲ್ಲ ವಿವರಿಸುತ್ತಾರೆ. ಅಂತೂ ಹೆಸರುಗಳಿಗೂ ಪರದೇಶದ ವ್ಯಾಮೋಹ ತಗುಲಿದೆ.

ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ನನಗೆ ಹೊಸ ತರಗತಿ ಪ್ರವೇಶಿಸಿದಾಗ ಮೊದಲು ಮಕ್ಕಳ ಪರಿಚಯ ಮಾಡಿಕೊಳ್ಳಲು ಅವರ ಹೆಸರು ಕೇಳುವುದು ರೂಢಿಯಾಗಿತ್ತು. ಹೆಸರನ್ನು ಕೇಳಿದ ನಂತರ “ನಿಮ್ಮ ಹೆಸರಿನ ಅರ್ಥವೇನು?’ ಎಂದೂ ಕೇಳುತ್ತಿದ್ದೆ. ಕೆಲವು ಮಕ್ಕಳಿಗೆ ಅರ್ಥ ತಿಳಿದಿರುತ್ತಿತ್ತು. ಹೆಚ್ಚಿನವರು “ಮನೆಯಲ್ಲಿ ಕೇಳಿಕೊಂಡು ಬರುತ್ತೇನೆ’ ಎನ್ನುತ್ತಿದ್ದರು. ನಾನು ಕೆಲಸ ಮಾಡುತ್ತಿದ್ದ ಯಹೂದಿಗಳ ಶಾಲೆಯಲ್ಲಿ ಎಲ್ಲಾ ಮಕ್ಕಳ ಹೆಸರೂ ನನಗೆ ಹೊಸದೇ ಆಗಿತ್ತು. ಹಾಗಾಗಿ, ನೆನಪಿನಲ್ಲೂ ಉಳಿಯುತ್ತಿರಲಿಲ್ಲ. ನನ್ನ ತಪ್ಪು ಉಚ್ಚಾರದಿಂದಾಗಿ ಹಲವು ಬಾರಿ ನಗೆಪಾಟಲಿಗೀಡಾಗಿದ್ದೂ ಉಂಟು. ಕೆಲವು ಮಕ್ಕಳ ವಿಚಿತ್ರ ಹೆಸರುಗಳನ್ನು ಕರೆಯಲು ನನಗೇ ಮುಜುಗರವಾಗುತ್ತಿತ್ತು. ರೀನಲ್‌, ಪೀನಲ್‌, ಪ್ರಾರಬ್ಧ, ಹೇತಾ, ಹೇತ್ವಿ… ಇಂತಹ ಹೆಸರನ್ನು ತಂದೆತಾಯಂದಿರು ಏಕೆ ಆರಿಸಿದ್ದಾರೆ ಎಂದು ಅನ್ನಿಸಿದ್ದುಂಟು. ಆದರೆ, ನಾನು ಎಂದಿಗೂ ಮರೆಯಲಾಗದ ಒಂದು ಹುಡುಗಿಯ ಹೆಸರು “ಜೋನ್‌ಆಫ್ಆರ್‌’. ಶಾಲೆಯಲ್ಲಿ ಕೆಲವು ತಾಯಂದಿರು ಮನೆಯಲ್ಲಿ ಹೊಸ ಮಗುವಿನ ಆಗಮನವಾದಾಗ ಹೆಸರನ್ನು ಹುಡುಕಲೋಸುಗ ಶಾಲೆಯ ಆಫೀಸಿನಲ್ಲಿ ಜಿ.ಆರ್‌. ಪುಸ್ತಕದಿಂದ ಮಕ್ಕಳ ಹೆಸರನ್ನು ಹುಡುಕುತ್ತಿದ್ದುದೂ ಉಂಟು.

ಕೆಲವು ಭಾವವಾಚಕ ಶಬ್ದಗಳು ಹುಡುಗರಿಗೆ ಮತ್ತು ಹುಡುಗಿಯರಿಗೆ ಇಬ್ಬರಿಗೂ ಒಪ್ಪುತ್ತದೆ. ಕೆಲವೊಮ್ಮೆ ಅಂತಹ ಹೆಸರುಗಳು ಗೊಂದಲಕ್ಕೀಡು ಮಾಡುವುದೂ ಉಂಟು. ನನ್ನ ಮಗಳ ಗೆಳತಿ ಅಂಕುರ್‌ ತನ್ನ ಹೆಸರು ಹುಡುಗರ ಹೆಸರಿನಂತೆ ಇದೆ ಎಂದು ತುಂಬಾ ಸಂಕೋಚಪಡುತ್ತಿದ್ದಳು. ಒಮ್ಮೆ ಆಕೆ ಟ್ರೈನ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಆಕೆಯ ಸಹ ಪ್ರಯಾಣಿಕ ಆಕೆಯ ಹೆಸರನ್ನು ಕೇಳಿ ನಸುನಕ್ಕು “ನನ್ನ ಹೆಸರು ಶಶಿ’ ಎಂದು ಹೇಳಿದ್ದನಂತೆ. ಅದನ್ನು ಕೇಳಿ ಇಬ್ಬರೂ ಹೊಟ್ಟೆತುಂಬಾ ನಕ್ಕಿದ್ದರಂತೆ.

ಗಂಡುಮಗು ಬೇಕೆಂಬ ಆಸೆಯಲ್ಲಿದ್ದ ತಂದೆತಾಯಿ ಮಗುವಿಗೆ ಅಂಕುರ್‌ಎಂದೂ, ಹುಡುಗಿಯ ನಿರೀಕ್ಷೆಯಲ್ಲಿದ್ದ ಪಾಲಕರು ಶಶಿ ಎಂದು ಹೆಸರಿಟ್ಟಿದ್ದರೂ ಮಕ್ಕಳಿಗೆ ಅದು ಮುಜುಗರದ ವಿಷಯವಾಗಿತ್ತು. ತಂದೆತಾಯಂದಿರು ಪ್ರೀತಿಯಿಂದ ಇಟ್ಟ ಕೆಲವು ಹೆಸರುಗಳು ಮಕ್ಕಳು ದೊಡ್ಡವರಾದ ಮೇಲೆ ಅವರಿಗೆ ಒಪ್ಪದೇ ಹೋಗುವುದೂ ಉಂಟು. ಉದ್ದ ತೋರ ಭರ್ತಿ ಇರುವ ಟೈನಿ, ಮಿನಿ…, ದಪ್ಪ ಸ್ವರದ ಕೋಕಿಲಾ, ಅಚ್ಚ ಬಿಳಿ ಬಣ್ಣದ ನಿಶಾ, ರಜನಿ, ಶ್ಯಾಮಲಾ… ಹೀಗೆ ಹುಡುಕುತ್ತಾ ಹೋದರೆ ಪ್ರತಿ ಹೆಸರಿನ ಹಿಂದೆಯೂ ಒಂದು ಸ್ವಾರಸ್ಯಕರ ಸಂಗತಿ ಇದ್ದೇ ಇರುತ್ತದೆ.

ಹೆಸರಿನಲ್ಲೇನಿದೆ? ಗುಲಾಬಿಯನ್ನು ಯಾವ ಹೆಸರಿನಿಂದ ಕರೆದರೂ ಅದು ಸುಂದರವೇ ಎಂದು ಹೇಳಿದರೂ, ಕೆಲವು ಹೆಸರುಗಳು ಆ ವ್ಯಕ್ತಿಯ ವ್ಯಕ್ತಿತ್ವದಿಂದಾಗಿ ನಮಗೆ ಅತ್ಯಂತ ಪ್ರಿಯವಾಗುವುದಂತೂ ನಿಜ.

ರಮಾ ಉಡುಪ

ಟಾಪ್ ನ್ಯೂಸ್

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

2

Uppinangady: ನೇಜಿಕಾರ್‌ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

1(1

Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.