ಸಹೃದಯ ಕಲಾಬಂಧುಗಳೇ… 


Team Udayavani, Jan 27, 2019, 12:30 AM IST

ww-4.jpg

ಮಾತಿನಲ್ಲೂ ಕತೆಯಲ್ಲೂ ಪದಗಳನ್ನು ತೂಗಿಹೊಂದಿಸುವ ಕತೆಗಾರ ಸಚ್ಚಿದಾನಂದ ಹೆಗಡೆ, ಇಷ್ಟಪಟ್ಟು ಮರೆವಿನ ಬಳ್ಳಿಯನ್ನು ಮೆಟ್ಟಿ ಹಾದಿ ಮರೆತಂತೆ ಮಾತು ಮತ್ತು ಕತೆಗಳಲ್ಲಿ ಎಲ್ಲೆಲ್ಲೋ ಸುತ್ತಿಸುಳಿದು ಗಮ್ಯ ತಲುಪುವವರು. ಕಾರಂತಜ್ಜನಿಗೊಂದು ಪತ್ರ, ಮರೆವಿನ ಬಳ್ಳಿ  ಅವರ ಪ್ರಕಟಿತ ಕಥಾಸಂಕಲನಗಳು. ಕೆರೆಮನೆ ಮಹಾಬಲ ಹೆಗಡೆಯವರ ಜೀವನ ಚರಿತ್ರೆಯ ಸಹ ಲೇಖಕರು. ಸದ್ಯ ದೂರದ ಚೀನಾದ ಬೀಜಿಂಗ್‌ನಲ್ಲಿರುವ ಸಚ್ಚಿದಾನಂದ ಹೆಗಡೆಯವರು ಪ್ರತಿವಾರ ಉದಯವಾಣಿ  “ಸಾಪ್ತಾಹಿಕ ಸಂಪದ’ದ ಓದುಗರನ್ನು ಸಂಧಿಸುವ ಕಾಲಂ- ಸಂಧಿಕಾಲ. 

ಸ್ನಾತಕೋತ್ತರ ಕ್ಲಾಸಿನಲ್ಲಿ ಪ್ರಾಡಕ್ಟ್ ಡಿಸೈನ್‌ ಕ್ಷೇತ್ರದ ಪಿತಾಮಹ ರೇಮಂಡ್‌ ಲೋವಿಯ ಬಗ್ಗೆ ಪ್ರಾಧ್ಯಾಪಕರು ಪಾಠ ಮಾಡುತ್ತಿದ್ದಾಗ ಕಣ್ಣ ಮುಂದೆ ಬಂದಿದ್ದು ಮೇರು ನಟ ಕೆರೆಮನೆ ಶಂಭು ಹೆಗಡೆ ! ನೆನಪಾದದ್ದು ದಪ್ಪ ಪಿವಿಸಿ ಪೈಪ್‌ನಿಂದ ಅವರು ಡಿಸೈನ್‌ ಮಾಡಿದ ಕುರ್ಚಿಯನ್ನು ತೋರಿಸುತ್ತ, “ನೋಡೋ ನಾನೇ ಡಿಸೈನ್‌ ಮಾಡಿದ್ದು’ ಎಂದಿದ್ದು.

ಫ್ರಾನ್ಸಿನಲ್ಲಿ ಹುಟ್ಟಿ ಅಮೆರಿಕದಲ್ಲಿ ನೆಲೆಸಿದ್ದ ಲೋವಿ, ಹೊಸ ಶೆಲ್‌ ಕಂಪೆನಿ ಲೋಗೋ, ಹೊಸ ರೈಲು, ಸದಾಕಾಲ ಹೊಸದೆಂದೇ ಕಾಣುವ ಅವಂತೇ ಕಾರು, ಕೊಕೊ ಕೋಲಾದ ಫೌಂಟೇನ್‌, ಮುಖ್ಯ ವಿಮಾನಗಳ ಇಂಟೀರಿಯರ್‌ ಡಿಸೈನ್‌ ಮಾಡಿದವರು. ಮೂರು ತಿಂಗಳು ಬಾಹ್ಯಾಕಾಶದಲ್ಲಿದ್ದರೂ ಆ್ಯಸ್ಟ್ರೋನಾಟ್‌ಗಳಿಗೆ ಸಮತೋಲನ ಕಾಯ್ದುಕೊಳ್ಳುವ ಭೂಮಿಯ ತಂಪನ್ನು ಮಾನಸಿಕವಾಗಿ ಕೊಡುವ ಸ್ಪೇಸ್‌ ಶಿಪ್ಪಿನ ಇಂಟೀರಿಯರ್‌ ವಿನ್ಯಾಸಗೊಳಿಸಿದ ಅದ್ಭುತ ವ್ಯಕ್ತಿ ಇವರು. ವಿನ್ಯಾಸ ಮಾಡಿದ ಪರಿಕರವು ಸೌಂದರ್ಯದಲ್ಲಿ ಅತ್ಯಂತ ಸರಳವಾಗೂ, ಕಾರ್ಯಕ್ಷಮತೆಯಲ್ಲಿ (ಫ‌ಂಕ್ಷನ್ಯಾಲಿಟಿ) ನೇರ, ಸದೃಢ ಮತ್ತು ಉಪಯೋಗಿಸಲು ಸುಲಭವಾಗೂ ಇರಬೇಕು ಎಂದು ಪ್ರತಿಪಾದಿಸಿದವರು. 

ನನಗೆ ಹೆಗಡೆಯವರು ತೋರಿಸಿದ್ದು ಅವರು ಡಿಸೈನ್‌ ಮಾಡಿದ ಎರಡನೆಯ ಕುರ್ಚಿ, ರೇಮಂಡ್‌ ಲೋವಿ ಹೇಳಿದ ಎಲ್ಲ ಗುಣಗಳೂ ಅದಕ್ಕೆ ಇದ್ದಿದ್ದವು. ನೋಡಿದ ನಾನು ಕುರ್ಚಿ ಕೇವಲ ಕುಳಿತುಕೊಳ್ಳುವಾಗ ಸುಲಭವಿದ್ದರೆ ಸಾಲದು, ಅದು ಏಳುವಾಗಲೂ ಸುಲಭವಾಗಿರಬೇಕು. ಹಾಗಾಗಿಯೇ, “ನಿಮ್ಮ ಕುರ್ಚಿ ಚೆನ್ನಾಗಿದೆ’ ಎಂದಿದ್ದೆ. ಆದರೆ, ಇಲ್ಲಿ ತಮಗೆ ಮುಖ್ಯವಾಗಿ ಅವರ ಮೊದಲ ಕುರ್ಚಿಯ ಬಗ್ಗೆ ಹೇಳಬೇಕು – ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ ಎನ್ನುವದರ ಬಗ್ಗೆ ಯಾರಾದರೂ ಮೂಲ ಸಂಶೋಧನೆ ಕೈಗೊಂಡರೆ ಯಕ್ಷಗಾನ ಒಳ್ಳೆಯ ವಿಷಯವಾದೀತು. ಟೆಂಟ್‌ ಮೇಳದವರು ಇಪ್ಪತ್ನಾಲ್ಕು ಗಂಟೆಗಳಲ್ಲಿ ನಿನ್ನೆಯ ಪ್ರದರ್ಶನದ ಊರಿನಿಂದ ತಮ್ಮ ಪೂರ್ತಿ ಮೇಳದ ಟೆಂಟನ್ನು ಕಿತ್ತು ಇಂದು ಆಟದ ಪ್ರದರ್ಶನವಿರುವ ಊರಿನಲ್ಲಿ ಕಟ್ಟುತ್ತಾರೆ. ಟೆಂಟ್‌ ಎಂದರೆ ರಂಗಸ್ಥಳ, ಟಿಕೆಟ್‌ ಪ್ರದರ್ಶನಕ್ಕಾಗಿ ಒಂದು ಕ್ಲೋಸ್ಡ್ ಆವರಣ, ಸಾಲಿನಲ್ಲಿ ಕುರ್ಚಿ ಇಡುವುದು, ಕಲಾವಿದರಿಗೆ ಗ್ರೀನ್‌ ರೂಮ್‌ ವ್ಯವಸ್ಥೆ, ಅಡಿಗೆಗೆ ಜಾಗ ಇತ್ಯಾದಿ. ಎಂಬತ್ತರ ದಶಕದ ಮುಖ್ಯ ಸಮಸ್ಯೆ ಏನೆಂದರೆ ಮೇಳದಲ್ಲಿರುವ ಒಂದೇ ಲಾರಿಯಿಂದ ಟೆಂಟಿನ ಸಾಮಗ್ರಿಗಳನ್ನು ಸಾಗಿಸಲು ಇಂದು ನಡೆಯುವ ಪ್ರದರ್ಶನದ ಊರಿಗೆ ಒಂದು ಟ್ರಿಪ್ಪು ಮತ್ತು ಕೇವಲ ಕುರ್ಚಿಗೆ ಎರಡನೇ ಟ್ರಿಪ್ಪು ಮಾಡಬೇಕಿತ್ತು. ನಿನ್ನೆಯ ಊರಿನಿಂದ ಇಂದು ಪ್ರದರ್ಶನಗೊಳ್ಳುವ ಊರು ದೂರವಿದ್ದರೆ ಬಹಳ ಕಷ್ಟವಾಗುತ್ತಿತ್ತು. ಕೆಲವು ಬಾರಿ ಇದರಿಂದಾಗಿ ಪ್ರದರ್ಶನ ವಿಳಂಬವೂ ಆಗುತ್ತಿತ್ತು. ಇದನ್ನು ಗಮನಿಸಿದ ಶಂಭು ಹೆಗಡೆಯವರು ಎರಡು ದೊಣ್ಣೆಯ ಆರಾಮ್‌ ಕುರ್ಚಿಯಿಂದ ಕಡಿಮೆ ವ್ಯಾಸವಿರುವ, ಕಬ್ಬಿಣದ ಪೈಪಿನಿಂದ ಹೆಚ್ಚು ಮಡಚುವ, ನೇರವಾಗಿ ನೈಲಾಲ್‌ ಬಟ್ಟೆ ಹೊದ್ದ ಕುರ್ಚಿಯನ್ನು ತಯಾರು ಮಾಡಿ, ಅದರ ಒಟ್ಟೂ ಘನ ಅಳತೆ ಕಡಿಮೆ ಮಾಡಿ, ಲಾರಿಯ ಎರಡು ಟ್ರಿಪ್ಪಿನಿಂದ ಒಂದೇ ಟ್ರಿಪ್ಪಿಗೆ ಇಳಿಸಿ, ಕುರ್ಚಿಯನ್ನೂ ಹಿಡಿದು ಎಲ್ಲವನ್ನು ಒಮ್ಮೆಲೇ ತೆಗೆದುಕೊಂಡು ಸಾಗಿಸುವಂತೆ ಮಾಡಿದರು. ಶ್ರಮ, ಸಮಯ ಮತ್ತು ಹಣದ ವಿಚಾರದಲ್ಲಿ ಇದು ಯಕ್ಷಗಾನದಲ್ಲಾದ ಮುಖ್ಯವಾದ ಕ್ರಾಂತಿಯೆನ್ನಬಹುದು. ಹಾಗಾಗಿಯೇ ಲೋಯಿಯವರ ಕುರಿತು  ಪ್ರಸ್ತಾಪಿಸಿದಾಗ ಶಂಭು ಹೆಗಡೆಯವರು ನೆನಪಿಗೆ ಬಂದಿದ್ದು. ಯಕ್ಷಗಾನ ರಂಗಸ್ಥಳವು ಮೊದಲು ಆಯತಾಕಾರವಿದ್ದು ಮುಂದಿನ ಎರಡು ಮೂಲೆಗಳಲ್ಲಿ ಮೇಲಿನ ಛಾವಣಿಯನ್ನು ಹಿಡಿದಿಡುತ್ತಿದ್ದ ಕಬ್ಬಿಣದ ಪೈಪುಗಳು ಪ್ರದರ್ಶನಕ್ಕೆ ಅಡ್ಡ ಬರುತ್ತಿದ್ದವು.

ಹೆಗಡೆಯವರು ನಾಟ್ಯದರ್ಪಣ ಮೂಲ ಸೆಲೆಯಿಂದ ಅರ್ಧಚಂದ್ರಾಕೃತಿ ರಂಗಸ್ಥಳ ಮಾಡಿ ಅದರ ವಿಸ್ತೀರ್ಣವನ್ನೂ ಹೆಚ್ಚಿಸಿ ಅಡ್ಡ ಬರುತ್ತಿದ್ದ ಕಬ್ಬಿಣದ ಪೈಪನ್ನೂ ತೆಗೆದರು. ಇದರಿಂದ ಪ್ರೇಕ್ಷಕರು ನೇರವಾಗಿ ಕಲಾವಿದನ ನಟನೆಯ ಸೂಕ್ಷ್ಮತೆಗಳನ್ನು ನೋಡುವಂತಾಯಿತು. ಬಹುಮುಖ್ಯವಾಗಿ ಯಕ್ಷಗಾನ ನೃತ್ಯದ ವೃತ್ತಾಕಾರದ ಚಲನೆಗೆ ಈ ಹೊಸ ರಂಗಸ್ಥಳ ಹೊಂದಿಕೊಂಡಿತ್ತು!  ಈ ತರಹದ ವಿನ್ಯಾಸದ ನೈಪುಣ್ಯಕ್ಕೆ ಕಾರಣವೇನೆಂದು ಹುಡುಕುತ್ತ¤ ಹೋದರೆ ನಮಗೆ ಮುಖ್ಯವಾಗಿ ದೊರಕುವ ಹಾಗೂ ಸ್ವಲ್ಪ ಊಹಿಸಬಹುದಾದ ಕಾರಣ- ಹೆಗಡೆಯವರು ಕಲಾವಿದರಾಗುವ ಮೊದಲು ಶಿಕ್ಷಕರಾಗಿದ್ದವರು. ಚಿತ್ರಕಲೆಯಲ್ಲಿ ಇಂಟರ್‌ಮೀಡಿಯೆಟ್‌ ಪಾಸಾದವರು. ಇವರ ತಮ್ಮ ಗಜಾನನ ಹೆಗಡೆ ಕೂಡ ಕಲಾವಿದರಾಗುವ ಮೊದಲು ಚಿತ್ರಕಲೆಯ ಶಿಕ್ಷಕರಾಗಿದ್ದವರು. ಯಕ್ಷಗಾನದ ಕ್ಯಾಲೆಂಡರ್‌, ಪ್ಲಾಸ್ಟರ್‌ ಆಪ್‌ ಪ್ಯಾರಿಸ್‌ನ ಯಕ್ಷಗಾನ ವೇಷದ ಮೂರ್ತಿ ಇತ್ಯಾದಿಗಳು ಪರಿಣಾಮಕಾರಿಯಾಗಿ ಬಂದಿದ್ದೂ ಹೆಗಡೆಯವರ ಸಮಯದಲ್ಲೇ.

ಮೇಲೆ ಹೇಳಿದ್ದು ಈ ಮೇರು ಕಲಾವಿದನ ಒಂದು ಗುಣಧರ್ಮವಷ್ಟೆ . ಇವರು ಯಕ್ಷಗಾನವನ್ನು ಕಲಾವಿದನ, ಸಂಘಟಕನ, ಯಜಮಾನನ ಕಣ್ಣುಗಳಿಂದ ನೋಡಿದವರು. ಯಕ್ಷಗಾನದ ಭವಿಷ್ಯ, ಅದಕ್ಕೆ ಸಿಗಬೇಕಾದ ಗೌರವಗಳ ಬಗ್ಗೆ ಆಳವಾಗಿ ಚಿಂತಿಸಿದವರು. ಅವಕ್ಕೆ ಬೇಕಾಗುವ ಪ್ರಯೋಗವನ್ನು ಸ್ವತಃ ಕೈಗೊಂಡವರು. ಹಾಗಾಗಿ ಅವರನ್ನು ಒಂದು ಮ್ಯಾನೇಜರ್‌ಗೆ ಹೋಲಿಸುವಂತಿಲ್ಲ. ಮುಂದಾಲೋಚನೆ, ಮುಂದಾಳತ್ವವನ್ನು ಹೊಂದಿದ ನಾಯಕನಿಗೆ ಹೋಲಿಸಬೇಕಾಗುತ್ತದೆ. 

ನಾಟ್ಯಶಾಸ್ತ್ರ, ಕೊರಿಯೋಗ್ರಫಿ, ಭಾರತೀಯ ಒಟ್ಟೂ ಕಲೆಗಳ ಅರಿವು ಅಧ್ಯಯನದಿಂದಾಗಿ ಹೆಗಡೆಯವರ ಕಲಾಚಿಂತನೆ ಯಕ್ಷಗಾನಕ್ಕೆ ಬಹಳ ಮುಖ್ಯವಾದ ಕೊಡುಗೆ.  ನಲವತ್ತು-ಐವತ್ತು ವರುಷಗಳಿಂದ ಈ ಕಲೆಯಲ್ಲಿ ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಅದರ ಆಹಾರ್ಯದ ಮೇಲೆ, ಇದು ಹೇಗೆ ಶಾಸ್ತ್ರೀಯ ಕಲೆ, ಮಾಧ್ಯಮ ಮತ್ತು ಪರಿಣಾಮದ ಕಲ್ಪನೆ, ನೃತ್ಯದ ಆವರ್ತನ ಕ್ರಮ ಮತ್ತು ಭಾವಾಭಿನಯ, ಕರುಣಾರಸದಲ್ಲಿ ನೃತ್ಯದ ಬಳಕೆ, ಕಾರಂತರು ಯಕ್ಷಗಾನ ನಿರ್ವಹಿಸಿದ ರೀತಿ ಇತ್ಯಾದಿ. ಭಾರತೀಯ ಒಟ್ಟೂ ಕಲೆಯ ಕಲ್ಪನೆ ಮತ್ತು ಯಕ್ಷಗಾನದ ವಿಶಿಷ್ಟತೆಯ ಅರಿವಿನಿಂದಾಗಿ ಈ ಕ್ಲಾಸಿಕ್‌ ಪ್ರಾಬ್ಲಿಮ್‌ಗಳಿಗೆ ಶಂಭು ಹೆಗಡೆಯವರಲ್ಲಿ ನಿಖರವಾದ ಉತ್ತರಗಳಿದ್ದವು. ಹಾಗಾಗಿ ಹೆಗಡೆಯವರ ಇಂತಹ ವಿಚಾರಗಳು ಸಮ್ಮೇಳನದ ಪ್ರಬಂಧಕ್ಕಷ್ಟೇ ಸೀಮಿತವಾಗದೇ ಅವರ ಪ್ರಯೋಗದಲ್ಲಿ ಕಾರ್ಯಗತಗೊಂಡವು. ಕಾರಂತರ ಪ್ರಯೋಗರೀತಿಗೆ ತಮ್ಮ ಸೈದ್ಧಾಂತಿಕ ಭಿನ್ನ ನಿಲುವನ್ನು ಸ್ಪಷ್ಟ ಪಡಿಸಿದವರು.  ಹೆಗಡೆಯವರ ಆವರ್ತನ ಕ್ರಮದ ಬಗ್ಗೆ ಬಹಳ ಚರ್ಚೆ ನಡೆದಿದೆ. ಅದನ್ನು ಮುಂದಿನ ವಾರಗಳಲ್ಲಿ ಶಾಸ್ತ್ರೀಯತೆ ಮತ್ತು ಅದರ ಗ್ರಹಿಕೆಯ ಅಡಿಯಲ್ಲಿ ಚರ್ಚಿಸೋಣ. ಆದರೆ ಒಂದನ್ನು ಪ್ರಸ್ತಾಪಿಸಲೇಬೇಕು. ನೃತ್ಯವೆನ್ನುವುದು ಈ ಕಲೆಯ ಅಂಗ. ಹಾಗಾಗಿ ಎಲ್ಲ ರಸಗಳನ್ನೂ ಈ ಮಾಧ್ಯಮದಲ್ಲಿ ತೋರಿಸಬೇಕು ಎನ್ನುವ ನಿಲುವು ಅವರ¨ªಾಗಿದ್ದು ಹಾಗೇ ಪ್ರಯೋಗಿಸಿದವರೂ ಕೂಡ.   

ಅಸಾಧಾರಣ ಕಲಾವಿದನ ಸರಳ ಮುಖ
ಒಂದು ಎಕಡೆಮಿಕ್‌ ದೃಷ್ಟಿಯಿಂದ ಹೆಗಡೆಯವರನ್ನು ನಾವು ಗಮನಿಸಿದಾಗ ನಮಗೆ ಹೆಗಡೆಯವರು ಹೀಗೆ ಕಂಡರೆ, ಸಾಮಾನ್ಯನಿಗೆ ಕಾಣುವ ಇವರ ಇನ್ನೊಂದು ಮುಖವಿದೆ. ವಯಸ್ಸಾದಂತೇ ಅವರು ಜನರಿಂದ ದೂರ ಸರಿಯಲಿಲ್ಲ. ಹಾಗೆ ನೋಡಲು ಹೋದರೆ ಅವರು ಜನರಿಂದ ಯಾವತ್ತೂ ದೂರವಿದ್ದವರೇ ಅಲ್ಲ. ಕಾರಣ ಅವರ ಆಸಕ್ತಿ ಸಮಾಜದ ಎಲ್ಲ ಸಾಧಾರಣ-ಅಸಾಧಾರಣ ವಿಷಯಗಳ ಮೇಲೆ ಇತ್ತು. ಅವರು ನಮಗೆ ಕೆಲವು ಬಾರಿ ಬ್ಯಾಂಕಿನಲ್ಲಿ ಸಿಕ್ಕರೆ, ಇನ್ನು ಕೆಲವು ಬಾರಿ ಕಾರ್‌ ಗರಾಜಿನಲ್ಲಿ, ದೇವಸ್ಥಾನದಲ್ಲಿ, ಅಂಗಡಿ ಮುಂಗಟ್ಟಲ್ಲಿ, ಚಹಾದ ಹೊಟೇಲಿನಲ್ಲಿ ಸಿಗುತ್ತಿದ್ದರು. ಅಲ್ಲಿ ಅವರ ಸಾಧಕ- ಭಾದಕಗಳ ಬಗ್ಗೆ ಅವರ ಎದುರಿರುವವರ ಮಟ್ಟದಲ್ಲೇ ಮಾತನಾಡುತ್ತಿದ್ದುದರಿಂದ ಯಾರಿಗೂ ಯಾವುದೇ ಇರಿಸು ಮುರಿಸು ಆಗುತ್ತಿರಲಿಲ್ಲ. ರೋಡಿನಲ್ಲಿ ಗುರುತಿದ್ದವರು ಯಾರು ಸಿಕ್ಕಿದರೂ ಕಾರನ್ನು ನಿಲ್ಲಿಸಿ ಅವರನ್ನು ಕರೆದು ಕೊಂಡು ಹೋಗುತ್ತಿದ್ದರು. ಅವರಿಗೆ ಅಭಿಮಾನಿಗಳು ಬಹಳ. 

ಅವರೆಲ್ಲ ಸುಸಂಸ್ಕೃತರು, ಕಲೆಯ ಬಗ್ಗೆ ಕಾಳಜಿ ಇದ್ದವರು. ತಮ್ಮ ಅಭಿಪ್ರಾಯವನ್ನು ತಿಳಿಸಲು ಅವಕಾಶವನ್ನು ಇಟ್ಟುಕೊಂಡವರು. ಬಹಳಷ್ಟು ಅಭಿಮಾನಿಗಳು ಅವರ ಹರಿಶ್ಚಂದ್ರ, ಕರ್ಣ, ಕೌರವ ಪಾತ್ರ ನೋಡಿ ಅತ್ತಿದ್ದಲ್ಲದೇ ಆಟ ಮುಗಿಸಿ ನಂತರ ಚೌಕಿಮನೆಯಲ್ಲೂ ಬಂದು ಅತ್ತು ಹೋಗುತ್ತಿದ್ದರು. (ಚೌಕಿ ಮನೆಯ ಮಾತು ಬಂತು. ಒಂದು ಚೌಕಿಯ ಸ್ಥಿತಿ ಅಲ್ಲಿನ ಒಟ್ಟೂ ಆಸಕ್ತಿ, ಸಂಸ್ಕಾರ, ಅವರು ಇಂದು ಉಣಬಡಿಸುವ ಕಲೆಯ ಮಟ್ಟವನ್ನು ಹೇಳಬಲ್ಲದು.  ಕೆರೆಮನೆ ಮೇಳದ ಚೌಕಿಮನೆಗೆ ಒಂದು ದೇವಸ್ಥಾನದ ಗರ್ಭಗುಡಿಯ ಪಾವಿತ್ರ್ಯ! ಇಂದಿಗೂ ಅವರ ಮಗ ಇದನ್ನು ನಡೆಸಿಕೊಂಡು ಹೋಗುತ್ತಿ¨ªಾರೆ. ಅಲ್ಲಿಯೂ ಇಡಗುಂಜಿಯ ಗಣಪತಿ ನೆಲೆಸಿ¨ªಾನೆ ಎನ್ನುವ ನಂಬಿಕೆ ಮೇಳದ ಅಭಿಮಾನಿಗಳಿಗಿದೆ. ಆಟ ನೋಡಲು ಬಂದ ಪ್ರೇಕ್ಷಕರು ಚೌಕಿಗೂ ಬಂದು ಕಲಾವಿದರನ್ನು ಭೇಟಿಮಾಡಿ ಅಲ್ಲಿರುವ ಗಣಪತಿಗೂ ನಮಸ್ಕರಿಸಿ ಪ್ರಸಾದ ಸ್ವೀಕರಿಸಿ ಹೋಗುವುದು ಇಂದಿಗೂ ಮುಂದುವರಿದಿದೆ. ಹಾಗಾಗಿ ಅದನ್ನು ಕೇವಲ ಆಟವೆಂದು ಹೇಳುವುದು ಕಷ್ಟ ಅಥವಾ ನಿಜವಾದ ಆಟವೆಂದರೆ ಇವೆಲ್ಲವೂ ಹೌದು ಎಂದು ಹೇಳಬಹುದು) ನಮ್ಮೆಲ್ಲರ ಯಕ್ಷಗಾನ ಆಸಕ್ತಿಯೂ ಅವರ ಹರಿಶ್ಚಂದ್ರನನ್ನು ನೋಡಿ ಅತ್ತ ನಂತರವೇ ಪ್ರಾರಂಭವಾಗಿದ್ದು! ಅವರಿಗೆ ಜನರ ಅಪಾರ ಪ್ರೀತಿ-ಅಭಿಮಾನ ಇದ್ದಿದ್ದರಿಂದ ಅವರ ಜೀವಿತಾವಧಿಯಲ್ಲಿ ಎಷ್ಟು ಜನರ ನಡುವಿನ ಜಗಳ ಪರಿಹರಿಸಿದ್ದರೋ, ಅವರ ರೆಕಮಂಡೇಶನ್‌ನಿಂದಾಗಿ ಇನ್ನೆಷ್ಟು ಜನರಿಗೆ ಕೆಲಸ ದೊರಕಿ ಇಂದಿಗೂ ಮನೆಯ ದೀಪ ಬೆಳಗುತ್ತಿದೆಯೊ! 

ನಾವು ಬಹಳಷ್ಟು ಬಾರಿ ಜನರ ಬಗ್ಗೆ ಓದುತ್ತೇವೆ, ಕೇಳುತ್ತೇವೆ. ಈ ನಿರ್ದಿಷ್ಟ ವ್ಯಕ್ತಿ ತೀರಿಕೊಂಡದ್ದು ಈ ಕ್ಷೇತ್ರಕ್ಕೆ ತುಂಬಲಾಗದ ನಷ್ಟ , ಇವರು ಭೌತಿಕವಾಗಿ ನಮ್ಮೊಂದಿಗಿರದಿದ್ದರೂ, ಮಾನಸಿಕವಾಗಿ ನಮ್ಮೊಂದಿಗೇ ಇದ್ದಾರೆ . ಶಂಭು ಹೆಗಡೆಯವರ ವಿಷಯದಲ್ಲಿ  ನನಗೆ ನಿಜವಾಗಲೂ ಇದು ಅನಿಸುತ್ತದೆ- ಅವರು ನಮ್ಮೊಂದಿಗೆ ಇದ್ದಾರೆ; ಗುಣವಂತೆ ಪಾಸಾಗುವಾಗ ಅವರೂ ಕಾರಿನಲ್ಲಿ ಪಾಸಾಗಬಹುದು, ಮುಂದೊಂದು ದಿನ ಅಂಗಡಿ ಅಥವಾ ಇಡಗುಂಜಿ ದೇವಸ್ಥಾನದಲ್ಲಿ ಸಿಕ್ಕಿ ಹಿಂದಿಂದ ಬಂದು, “ಇಲ್ಲೆಲ್ಲೋ ನೀನು’ ಎಂದು ಕೇಳಬಹುದು ಅಥವಾ ನಾಳೆ ನಡೆಯುವ ಮೇಳದ ಆಟ ಮುಗಿಯುತ್ತಿದ್ದಂತೆ ಮೈಕಿನ ಮುಂದೆ ಬಂದು ಅವರ ಮಾಸ್ಟರ್‌ ಸ್ಟ್ರೋಕ್‌ ಆದ, “ಸಹೃದಯ ಕಲಾ ಬಂಧುಗಳೇ’ ಎನ್ನಬಹುದು- ಎಂದು.

(ಮುಂದುವರಿಯುವುದು)

ಸಚ್ಚಿದಾನಂದ ಹೆಗಡ

ಟಾಪ್ ನ್ಯೂಸ್

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

Henley Passport Index: Singapore tops: How strong is India’s passport?

Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?

12-protest

Trasi: ಸಾಂಪ್ರದಾಯಿಕ ‌ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ,‌ ಗೋಪಾಲ ಪೂಜಾರಿ ಭಾಗಿ

Trump ಹೆಬ್ಬಯಕೆ: ಗ್ರೀನ್ ಲ್ಯಾಂಡ ಖರೀದಿಸಲು ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?

Trump ಹೆಬ್ಬಯಕೆ: ಗ್ರೀನ್ ಲ್ಯಾಂಡ್ ಖರೀದಿಸಲು ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?

Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ

Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

11

Manipal: ಡಂಪಿಂಗ್‌ ಯಾರ್ಡ್‌ ಆದ ಮಣ್ಣಪಳ್ಳ!

10

Udupi: ಒಂದೇ ವೃತ್ತ; ಪೊಲೀಸ್‌ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ

13-bng

Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.