Fan throated lizard: ಬೀಸಣಿಕೆ ಗಂಟಲ ಹಲ್ಲಿ ಎಂಬ ವಿಸ್ಮಯ


Team Udayavani, Aug 11, 2024, 6:37 PM IST

12334

ಹಿಂದಿನ ಕಾಲುಗಳನ್ನು ಬಳಸಿ ಓಡುವ, ನಿಲ್ಲುವ ಸಾಮರ್ಥ್ಯ ಹೊಂದಿರುವ ಬೀಸಣಿಕೆ ಗಂಟಲಿನ ಹಲ್ಲಿಗಳು ಕುರುಚಲು ಪ್ರದೇಶಗಳು, ಹುಲ್ಲುಗಾವಲು ಅಥವಾ ಬಂಡೆಗಳಿಂದ ಕೂಡಿದ ಬಯಲು ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಹಗಲು ಹೊತ್ತಿನಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ಅತ್ಯುತ್ತಮ ದೃಷ್ಟಿ ಮತ್ತು ಚುರುಕುತನದಿಂದ, ತ್ವರಿತ ಹಠಾತ್‌ ಚಲನೆಗಳನ್ನು ಬಳಸಿಕೊಂಡು ಬೇಟೆಯಾಡುತ್ತವೆ. 

ಮೆಣಸಿನಕಾಯಿಗೆ ಹೆಸರಾದ ಬ್ಯಾಡಗಿಯ ಹೊಲದಲ್ಲಿ, ಶೇಂಗಾ ಬೆಳೆಯುವುದಕ್ಕೆ ಆಗಷ್ಟೇ ಉಳುಮೆ ಮಾಡಿದ ಶುಷ್ಕ ಕಪ್ಪು ಮಣ್ಣಿನ ನೆಲದಲ್ಲಿ ಓಡಾಡುತ್ತಿದ್ದಾಗ, ಸರಸರ ಹರಿದಾಡುತ್ತಿದ್ದ ಓತಿಕ್ಯಾತದಂಥ ಪ್ರಾಣಿ ಕಣ್ಣಿಗೆ ಬಿತ್ತು. ಇದರ ಕತ್ತಿನ ಕೆಳಭಾಗದ ಬಣ್ಣ ಗಮನಿಸಿದಾಗ ಇದು ಓತಿಕ್ಯಾತ ಅಲ್ಲ ಎಂಬುದು ಅರಿವಾಯಿತು. ಮಣ್ಣಿನ ಗುಡ್ಡೆ ಏರಿ ನಿಂತು ಕತ್ತಿನ ಭಾಗವನ್ನು ಪುಷ್‌-ಅಪ್‌ ಮಾಡುತ್ತಿದ್ದಂತೆ ಅದರ ಗಂಟಲಿನ ವರ್ಣಮಯ ಬೀಸಣಿಕೆಯಂತಹ ಭಾಗವೇ ಹೇಳಿತು, ಇದು ಬೀಸಣಿಕೆ ಗಂಟಲಿನ ಹಲ್ಲಿ  (ಫ್ಯಾನ್‌ ತ್ರೋಟೆಡ್‌ ಲಿಜಾರ್ಡ್‌) ಎಂದು.

ಸಾಮಾನ್ಯವಾಗಿ ಈ ಜಾತಿಯ ಹಲ್ಲಿಗಳು ಒಣ ಕುರುಚಲು ಪ್ರದೇಶಗಳು, ಹುಲ್ಲುಗಾವಲು ಅಥವಾ ಬಂಡೆಗಳಿಂದ ಕೂಡಿದ ಬಯಲು ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಇದು ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಮೊದಲಾದ ದಕ್ಷಿಣ ಏಷ್ಯಾದ  ಭಾಗಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಣ್ಣ ಹಲ್ಲಿಗಳ ಜಾತಿ. ಇದರ ವೈಜ್ಞಾನಿಕ ಹೆಸರು ಸಿತಾನಾ ಪಾಂಟಿಸೆರಿಯಾನಾ.  ಗಂಟಲಿನ ಕೆಳಗಡೆ ಇರುವ ಬೀಸಣಿಕೆ ಆಕಾರದ ಚರ್ಮದ ಮಡಿಕೆ (ಡ್ಯೂಲಾಪ್‌) ಇದರ ವಿಶೇಷತೆ. ಗಂಡು ಹಲ್ಲಿಗಳ ಗಂಟಲಿನ ಕೆಳಭಾಗ ಸಡಿಲವಾದ ಚರ್ಮದ ಹೊದಿಕೆ ಹೊಂದಿದ್ದು, ಬಂಡೆಯ ಮೇಲೆ ಓಡುವಾಗ ನಾಗರ ಭಂಗಿಯಲ್ಲಿ  ಹೆಡೆ ಎತ್ತಿ ನಿಲ್ಲುತ್ತವೆ. ಎದೆಯುಬ್ಬಿಸಿ ನಿಂತಾಗ ಕಪ್ಪು, ಕಿತ್ತಳೆ ಮತ್ತು ನೀಲಿ ಬಣ್ಣದ ಬೀಸಣಿಕೆಯಾಕಾರದ ವರ್ಣರಂಜಿತ ಚರ್ಮದ ಹೊದಿಕೆ ಎದ್ದು ಕಾಣುತ್ತದೆ.

ಗಂಡು ಹಲ್ಲಿಯೇ ಆಕರ್ಷಣೀಯ…

ಇವು ಸುಮಾರು 26 ಮಿಲಿಯನ್‌ ವರ್ಷಗಳ ಹಿಂದೆಯೇ ಭೂಮಿಯಲ್ಲಿ ಕಾಣಿಸಿಕೊಂಡ ಸರೀಸೃಪಗಳು ಎನ್ನಲಾಗುತ್ತದೆ. ತಮ್ಮ ಹತ್ತಿರದ ಸಂಬಂಧಿಗಳಾದ ಕಾಂಗರೂ ಹಲ್ಲಿಗಳಿಂದ ಬೇರ್ಪಟ್ಟು ರೂಪಾಂತರಗೊಂಡ ಜೀವಿಗಳು. ಎರಡು ಗುಂಪುಗಳು ಲಕ್ಷಾಂತರ ವರ್ಷಗಳ ಹಿಂದೆ ತೇವಾಂಶವುಳ್ಳ ಕಾಡುಗಳಲ್ಲಿ ವಾಸಿಸುತ್ತಿದ್ದ ತಮ್ಮ ಪೂರ್ವಜರ ರೂಪದಿಂದ ವಿಕಸನಗೊಂಡು ಈ ರೂಪ ಪಡೆದಿವೆ ಎಂದು ನಂಬಲಾಗಿದೆ. ಭಾರತದಲ್ಲಿ ಕನಿಷ್ಠ 15 ಹಾಗೂ ಉಪಖಂಡದಲ್ಲಿ 18 ಕ್ಕೂ ಹೆಚ್ಚಿನ ಹಲ್ಲಿ ಜಾತಿಗಳಿವೆ. ಬೀಸಣಿಕೆ ಗಂಟಲಿನ ಹಲ್ಲಿಗಳು ಸೀತಾನಾ ಹಾಗೂ ಸರದಾ ಎಂಬ ಎರಡು ಕುಲಗಳಿಗೆ ಸೇರಿವೆ. ಇವು 5 ರಿಂದ 10 ಸೆಂ.ಮೀ.ಗಳಷ್ಟು ಉದ್ದವಾದ ದೇಹ ಹೊಂದಿದ್ದು, ದೇಹಕ್ಕಿಂತ ಉದ್ದವಾದ ತೆಳುವಾದ ಬಾಲವನ್ನು ಹೊಂದಿರುತ್ತವೆ. ಲೈಂಗಿಕ ದ್ವಿರೂಪತೆಯನ್ನು ಪ್ರದರ್ಶಿಸುವ ಈ ಜಾತಿಯಲ್ಲಿ ಗಂಡು ಹೆಚ್ಚು ವರ್ಣರಂಜಿತ. ಅದರ ಕೊರಳಿನ ಸುತ್ತ ಇರುವ ಚರ್ಮದ ಪ್ಲಾಪ್‌ ಕಪ್ಪು, ಕೆಂಪು, ನೀಲಿ ಬಣ್ಣಗಳ ಸಂಯೋಜನೆಯಿಂದಾಗಿ ಬಹಳ ಆಕರ್ಷಕವಾಗಿ ಕಾಣುತ್ತವೆ. ಹೆಣ್ಣು  ಹಲ್ಲಿಗಳು ಸಾಮಾನ್ಯವಾಗಿ ಮಂದವಾದ ಬಣ್ಣ ಹೊಂದಿರುತ್ತವೆ.

ಬಾಲವೇ ವಿಶೇಷ..!

ಇರುವೆಗಳು, ಜೀರುಂಡೆಗಳು ಮತ್ತಿತರ ಸಣ್ಣ ಕೀಟಗಳೇ ಇವುಗಳ ಮುಖ್ಯ ಆಹಾರ.  ಅತ್ಯುತ್ತಮ ದೃಷ್ಟಿ ಮತ್ತು ಚುರುಕುತನದಿಂದ, ತ್ವರಿತ ಹಠಾತ್‌ ಚಲನೆಗಳನ್ನು ಬಳಸಿಕೊಂಡು ಬೇಟೆಯಾಡುತ್ತವೆ. ಹಿಂದಿನ ಕಾಲುಗಳನ್ನು ಬಳಸಿ ಓಡುವ, ನಿಲ್ಲುವ ಸಾಮರ್ಥ್ಯ ಹೊಂದಿವೆ. ಹಗಲು ಹೊತ್ತಿನಲ್ಲಿ ಇವು ಹೆಚ್ಚು ಸಕ್ರಿಯವಾಗಿರುತ್ತವೆ. ತಮ್ಮ ಮರೆಮಾಚುವಿಕೆ ತಂತ್ರ, ವಿಷಸ್ರಾವ ಮಾಡುವುದು, ತಮ್ಮ ಬಾಲಗಳನ್ನೇ ಕಳಚಿ ಪರಭಕ್ಷಕಗಳಿಂದ ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತವೆಯಾ­ದರೂ, ತೆರೆದ ಪ್ರದೇಶ, ಬಯಲುಗಳಲ್ಲಿಯೇ ಹೆಚ್ಚು ಓಡಾಡುತ್ತಿರುವುದರಿಂದ ಒಮ್ಮೊಮ್ಮೆ ಹಾವು, ಗಿಡುಗವೇ ಮೊದಲಾದ ಪರಭಕ್ಷಕಗಳಿಗೆ ಆಹಾರವಾಗಿ ಬಿಡುತ್ತವೆ. ಒಮ್ಮೆ ಕಳಚಿದ ಇವುಗಳ ಬಾಲ ಎಲ್ಲ  ಹಲ್ಲಿಗಳಂತೆ ಮತ್ತೆ ಬೆಳೆಯುವುದೊಂದು  ವಿಶೇಷ.

 ಅದೃಷ್ಟದ ಸಂಕೇತ…

ಏಪ್ರಿಲ್, ಮೇ ತಿಂಗಳು ಬೀಸಣಿಕೆ ಗಂಟಲಿನ ಹಲ್ಲಿಗಳ ಸಂತಾನೋತ್ಪತ್ತಿಯ ಸಮಯ. ಹೆಣ್ಣನ್ನು ಆಕರ್ಷಿಸಲು ಗಂಡು ತನ್ನ ಗಂಟಲಿನ ಚರ್ಮವನ್ನು ಉಬ್ಬಿಸಿ ಬಣ್ಣದ ಬೀಸಣಿಕೆ ತೋರಿಸಿ ಆಕರ್ಷಿಸುತ್ತದೆ. ಯಶಸ್ವಿ ಸಂಯೋಗದ ನಂತರ ಹೆಣ್ಣು ಹಲ್ಲಿ, ಮಣ್ಣಿನ ಚಿಕ್ಕ ಚಿಕ್ಕ ಬಿಲಗಳಲ್ಲಿ ಮೊಟ್ಟೆಗಳನ್ನಿಟ್ಟು ಹಲವಾರು ವಾರಗಳ ಕಾಲ ಕಾವು ಕೊಡುತ್ತದೆ. ನಂತರದಲ್ಲಿ ಮರಿಗಳು ಹೊರಬಂದು ಹೊಸ ಜೀವನ ಆರಂಭಿಸುತ್ತವೆ. ರೈತಾಪಿ ಜನ ಬೀಸಣಿಕೆ ಗಂಟಲಿನ ಹಲ್ಲಿಯನ್ನು ಅದೃಷ್ಟದ ಸಂಕೇತವೆಂದು ನಂಬುತ್ತಾರೆ. ಇವು ಮಳೆಯ ಮುನ್ಸೂಚನೆ ನೀಡುತ್ತವೆ ಎಂದು ಭಾವಿಸುತ್ತಾರೆ. ಹೊಲ, ಗದ್ದೆಗಳಲ್ಲಿ ಕೀಟಗಳ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಇವು ಸಹಕಾರಿಯಾದ್ದರಿಂದ ರೈತರ ಪಾಲಿನ ಮಿತ್ರನೂ ಹೌದು.

ಚಿತ್ರ-ಲೇಖನ: ಜಿ. ಆರ್‌. ಪಂಡಿತ್‌, ಸಾಗರ

ಟಾಪ್ ನ್ಯೂಸ್

Viral: ಸೆ**ಕ್ಸ್ ಗಾಗಿ 65ರ ಮುದಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್

Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Why KKR Dropped IPL Champion Captain Iyer?: CEO Answers

IPL ಚಾಂಪಿಯನ್‌ ಕ್ಯಾಪ್ಟನ್‌ ಅಯ್ಯರ್‌ ನನ್ನು ಕೆಕೆಆರ್‌ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ

16-kadaba

Kadaba: ಶಸ್ತ್ರಚಿಕಿತ್ಸೆ ವೇಳೆ ಹೃದಯಾಘಾತ; ಯುವಕ ಸಾವು

Waqf Issue: BJP protest against the Congress government across the state on November 4

Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ

Hong Kong Sixes 2024: ಒಂದೇ ಓವರ್‌ ನಲ್ಲಿ 37 ರನ್‌ ಬಿಟ್ಟುಕೊಟ್ಟ ರಾಬಿನ್‌ ಉತ್ತಪ್ಪ

Hong Kong Sixes 2024: ಒಂದೇ ಓವರ್‌ ನಲ್ಲಿ 37 ರನ್‌ ಬಿಟ್ಟುಕೊಟ್ಟ ರಾಬಿನ್‌ ಉತ್ತಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

9

Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

Kannada Rajyotsava: ಕರ್ನಾಟಕಕ್ಕೆ ಬಂದಿದ್ದೇ ಒಂದು ಪವಾಡ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Viral: ಸೆ**ಕ್ಸ್ ಗಾಗಿ 65ರ ಮುದಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್

Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

INDvsNZ; ಗಿಲ್‌, ಪಂತ್‌, ವಾಷಿಂಗ್ಟನ್‌ ಬ್ಯಾಟಿಂಗ್‌ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Why KKR Dropped IPL Champion Captain Iyer?: CEO Answers

IPL ಚಾಂಪಿಯನ್‌ ಕ್ಯಾಪ್ಟನ್‌ ಅಯ್ಯರ್‌ ನನ್ನು ಕೆಕೆಆರ್‌ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ

17-katapady

Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.