ಹೆಣ್ಣುಗಳು ಸುರಕ್ಷಿತವಾಗಿರಲಿ
Team Udayavani, Dec 31, 2017, 6:40 AM IST
ನಮ್ಮ ದೇಶ ಬ್ರಿಟಿಷರ ಆಳ್ವಿಕೆಗೆ ಒಳಗಾದ ನಂತರ ಜಾರಿಗೆ ಬಂದ ಕ್ರಿಸ್ತ ಶಕವನ್ನು ನಾವು ಒಪ್ಪಿ ಮುನ್ನೂರು ವರ್ಷಗಳಾಗಿಬಿಟ್ಟಿವೆ. ಇಷ್ಟು ವರ್ಷಗಳ ಕಾಲ ಡಿಸೆಂಬರ್ ಕಳೆದು ಮತ್ತೆ ಜನವರಿ ಪ್ರಾರಂಭವಾಗುವಾಗ ಹೊಸ ವರ್ಷ ಎಂದು ಸಂಭ್ರಮಿಸುವುದು ವಾಡಿಕೆಯಾಗಿಬಿಟ್ಟಿದೆ. ಅದರಲ್ಲಿ ಯಾವ ಜಾತಿ, ಮತ, ಲಿಂಗ ವರ್ಗಗಳ ಭೇದವಿಲ್ಲದೆ ಎಲ್ಲರೂ ಒಪ್ಪಿಕೊಳ್ಳುವ ಅನಿವಾರ್ಯತೆ ಬಂದುಬಿಟ್ಟಿದೆ. ಹಾಗಾಗಿ, ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವುದು ಜನರಿಗೆ ಒಂದು ಹಬ್ಬ.
ಇತ್ತೀಚೆಗೆ ಕೆಲವರು ಜನವರಿ ಒಂದು ನಮ್ಮ ಹಬ್ಬವಲ್ಲ , ಅದನ್ನು ಆಚರಿಸಬಾರದು ಎಂದು ಹುಕುಂ ಹೊರಡಿಸುತ್ತಿರುವುದರ ಬಗ್ಗೆ ನನಗೆ ಸಹಮತವಿಲ್ಲ. ಏಕೆಂದರೆ, ನಾವು ಪಂಚಾಂಗವನ್ನೂ ಕ್ಯಾಲೆಂಡರನ್ನೂ ಹಿಂದಕ್ಕೆ ತಿರುಗಿಸಲಾಗುವುದಿಲ್ಲ. ಜಗತ್ತು ಬಹಳ ಬದಲಾಗಿಬಿಟ್ಟಿದೆ. ಕಾಲ ಬದಲಾಗಿದೆ. ಜನಜೀವನ ಬದಲಾಗಿದೆ. ಹಳೆಯ ಪಳೆಯುಳಿಕೆಗಳು ಇನ್ನೂ ಇದ್ದರೂ ಅವು ಕೇವಲ ಪಳೆಯುಳಿಕೆಗಳಾಗಿ ಇವೆಯೇ ಹೊರತು ಅವುಗಳನ್ನು ಮತ್ತೆ ಜೀವಂತಿಕೆಯ ಜೀವನಕ್ಕೆ ಒಗ್ಗಿಸಿಕೊಳ್ಳುವುದು ಅಸಂಗತ. ಹಠ ಮಾಡಿ ಪಳೆಯುಳಿಕೆಗಳೇ ನಮ್ಮ ಬದುಕು ಎಂದು ಸಾಧಿಸಲು ಹೊರಟರೆ ಅದರಿಂದ ಅವನತಿಯೇ ಹೊರತು ಪ್ರಗತಿ ಆಗುವುದಿಲ್ಲ. ಅದುದರಿಂದ ಹೊಸ ಕ್ಯಾಲೆಂಡರನ್ನು ಕೇವಲ ಕ್ರಿಶ್ಚಿಯನ್ ಕ್ಯಾಲೆಂಡರ್ ಎಂದು ಮಾತ್ರ ನೋಡದೆ ಅದು ಆಧುನಿಕ ಜಗತ್ತಿನ ಜಾಗತಿಕ ಮಾಪಕ ಎಂದು ಪರಿಗಣಿಸಿ ಮುಂದುವರಿಯುವುದು ಒಳ್ಳೆಯ ಲಕ್ಷಣ. ಇಡೀ ಪ್ರಪಂಚ ಒಪ್ಪಿಕೊಂಡ ಕ್ಯಾಲೆಂಡರನ್ನು ಬಿಟ್ಟು ನಾವು ಮತ್ತೆ ಹಳೆಯ ಹಾಗೂ ಕೆಲವು ನಿರ್ದಿಷ್ಟ ಸಮುದಾಯದವರು ಮಾತ್ರ ಒಪ್ಪಿಕೊಳ್ಳುವ ಪಂಚಾಂಗವನ್ನೇ ನಂಬಿ ನಡೆದುಕೊಳ್ಳುತ್ತೇವೆ ಎಂದು ಹೊರಟರೆ ಅದರಿಂದ ಸಮಷ್ಟಿ ಸಮಾಜಕ್ಕೆ ತೊಂದರೆಯೇ.
ಹಾಗಾಗಿ, ನಾವು ಜನವರಿಯನ್ನೇ ಹೊಸ ವರ್ಷ ಎಂದು ಪರಿಗಣಿಸೋಣ ಎಂದು ನನ್ನ ಅನಿಸಿಕೆ.
ಇನ್ನು ಪ್ರತಿ ವರ್ಷ ಪ್ರಾರಂಭವಾದಾಗ ಹಳೆಯ ವರ್ಷದ ನೆನಪುಗಳು ಹೊಸ ವರ್ಷದ ಭರವಸೆಗಳನ್ನು ಒಟ್ಟಿಗೇ ಪುನರಾವಲೋಕಿಸುವುದು ಸಹಜ. 2017 ಅನೇಕ ದುರಂತಗಳನ್ನು ತಂದಿತು, ಜೊತೆಗೆ ಸಂತಸಗಳನ್ನೂ ಕೊಟ್ಟಿತು. ಬರುವ ವರ್ಷ ಇದಕ್ಕಿಂತ ಭಿನ್ನವಾಗಿಯೇನೂ ಇರುವುದಿಲ್ಲ. ಆದರೂ ನಾವು ಈ ವರ್ಷ ಇನ್ನಷ್ಟು ಚೆನ್ನಾಗಿರಲಿ, ಇನ್ನಷ್ಟು ಲಾಭ ತರಲಿ, ಸಂತಸ ಹೆಚ್ಚಲಿ, ಪ್ರಗತಿಯಾಗಲಿ ಎಂದೆಲ್ಲ ಆಶಿಸುತ್ತೇವೆ. ಅದೇ ನಮ್ಮ ಬದುಕಿನ ರಸ ಗಳಿಗೆಗೆ ಕಾರಣ. ಸ್ವಸ್ತಿ ವಾಚನದಲ್ಲಿ ಹೇಳುವಂತೆ, ಲೋಕಾ ಸಮಸ್ತಾ ಸುಖೀನೋ ಭವಂತು ಕಾಲೇ ವರ್ಷತು ಪರ್ಜನ್ಯಃ ಪೃಥುವಿ ಸಸ್ಯಶಾಲಿನೀ ದೇಶೋಯಂ ಕ್ಷೊàಭ ರಹಿತಃ ಎಂದು ಆಶಿಸೋಣ. ದಿನನಿತ್ಯದ ಗೋಳು ಹಿಂಸೆ ಕಡಿಮೆಯಾಗಲಿ. ಹೆಣ್ಣುಗಳು ಸುರಕ್ಷಿತವಾಗಿರಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.