ಮತ್ತೂಬ್ಬಳು ಶ್ರುತಿ
Team Udayavani, Jul 29, 2018, 6:00 AM IST
ಕನ್ನಡ ಚಿತ್ರರಂಗದಲ್ಲಿ ಶ್ರುತಿ, ಶ್ರುತಿ ಹರಿಹರನ್, ಶ್ರುತಿ ರಾಜ್… ಹೀಗೆ ಶ್ರುತಿ ಹೆಸರಿನ ಕೆಲವು ನಾಯಕಿಯರಿದ್ದು, ಈಗ ಆ ಸಾಲಿಗೆ ಹೊಸದಾಗಿ ಶ್ರುತಿ ಗೊರಾಡಿಯ ಎಂಬ ಹೊಸ ನಾಯಕಿ ಸೇರ್ಪಡೆಯಾಗಿದ್ದಾರೆ. ಶ್ರುತಿ ಗೊರಾಡಿಯಾ ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ ಸಂಕಷ್ಟಕರ ಗಣಪತಿ ಮೊನ್ನೆಯಷ್ಟೇ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಶ್ರುತಿ ಅವರ ಅಭಿನಯ ಮತ್ತು ಚೆಲುವಿನ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ.
ಮೂಲತಃ ಗುಜರಾತಿಯ ವರಾದ ಶ್ರುತಿ ಗೊರಾಡಿಯ ನೆಲೆಸಿರುವುದು ಬೆಂಗಳೂರಿನಲ್ಲಿ. ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಅವರು, ಇದೇ ಮೊದಲ ಬಾರಿಗೆ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಚಿತ್ರದಲ್ಲೇ ನಾಯಕಿಯ ಪಾತ್ರ ಸಿಕ್ಕಿದ್ದಕ್ಕೆ ಖುಷಿಪಡುವ ಶ್ರುತಿ, ಆ ಚಿತ್ರಕ್ಕೆ ಸಿಗುತ್ತಿರುವ ಪ್ರಚಾರದ ಬಗ್ಗೆಯೂ ಸಾಕಷ್ಟು ಖುಷಿಪಡುತ್ತಾರೆ.
“”ಈ ಚಿತ್ರದಲ್ಲಿ ನನ್ನದು ಭಾರತದ ಮಾದರಿ ಹುಡುಗಿಯ ಪಾತ್ರ. ಪತ್ರಿಕೆಯೊಂದರಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುತ್ತೇನೆ. ಒಂದು ಹಂತದಲ್ಲಿ ನಾಯಕನ ಪರಿಚಯ ವಾಗುತ್ತದೆ. ನಾಯಕನಿಗೆ ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಎಂಬ ವಿಚಿತ್ರ ಕಾಯಿಲೆ ಇರುತ್ತದೆ. ಹಾಗಂದರೆ, ಅವನ ಎಡಗೈ ಹಿಡಿತ ತಪ್ಪಿರುತ್ತದೆ. ಅವನಿಗೆ ಗೊತ್ತಿಲ್ಲದೆಯೇ ಅವನ ಎಡಗೈ ಸಾಕಷ್ಟು ಸಮಸ್ಯೆ ಕೊಡುತ್ತಿರುತ್ತದೆ. ಇಂತಹ ಸಂದರ್ಭ ದಲ್ಲಿ ನಾನು ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತೇನೆ ಮತ್ತು ಅವನಿಗೆ ಹೇಗೆ ಸಹಾಯವಾಗಿ ನಿಲ್ಲುತ್ತೇನೆ ಎಂಬುದು ಚಿತ್ರದ ಕಥೆ. ನನ್ನದು ಒಂದು ಸ್ವತಂತ್ರ ಹುಡುಗಿಯ ಪಾತ್ರವಷ್ಟೇ ಅಲ್ಲ, ಬಹಳ ಪ್ರಾಕ್ಟಿಕಲ್ ಆಗಿ ಯೋಚಿಸುವ ಪಾತ್ರ” ಎಂದು ವ್ಯಾಖ್ಯಾನಿಸುತ್ತಾರೆ ಶ್ರುತಿ.
ಮೊದಲ ಚಿತ್ರ ಅಷ್ಟೊಂದು ಸುಲಭವಾಗಿರುತ್ತದೆ ಎಂದು ಅವರು ನಿರೀಕ್ಷಿಸಿರಲಿಲ್ಲವಂತೆ. “”ನಿಜ ಹೇಳಬೇಕೆಂದರೆ, ನಾನು ಬಹಳ ಲಕ್ಕಿ ಎಂದರೆ ತಪ್ಪಿಲ್ಲ. ಮೊದಲ ಚಿತ್ರದಲ್ಲೇ ಒಂದು ವಿಭಿನ್ನವಾದ ಪಾತ್ರ ಸಿಕ್ಕಿದೆ. ಅಷ್ಟೇ ಅಲ್ಲ, ಅಚ್ಯುತ್ ಕುಮಾರ್, ಮನ್‌ದೀಪ್ ರಾಯ್, ಮಂಜುನಾಥ ಹೆಗಡೆ ಮುಂತಾದ ಹಿರಿಯರ ಜೊತೆಗೆ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿತು. ಇನ್ನು ಇಡೀ ಚಿತ್ರದ ಪ್ರಯಾಣ ಸಹ ಬಹಳ ಸೂ¾ತ್ ಆಗಿತ್ತು. ನನ್ನ ಮೊದಲ ಚಿತ್ರ ಇಷ್ಟು ಸುಲಭವಾಗಿ ಮುಗಿಯಬಹುದು ಎಂದು ನಾನು ಯಾವತ್ತೂ ನಿರೀಕ್ಷಿಸಿರಲಿಲ್ಲ. ಒಟ್ಟಾರೆ ಒಂದು ಅದ್ಭುತ ಅನುಭವ” ಎನ್ನುತ್ತಾರೆ ಶ್ರುತಿ.
ಇನ್ನು ಮೊದಲ ಚಿತ್ರ ಬಿಡುಗಡೆಯಾಗುವುದಕ್ಕಿಂತ ಮುನ್ನವೇ, ಶ್ರುತಿಗೆ ಇನ್ನೊಂದು ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಆದರೆ, ಅದ್ಯಾವ ಚಿತ್ರ ಎಂಬ ವಿಷಯವನ್ನು ಶ್ರುತಿ ಬಹಿರಂಗಪಡಿಸುತ್ತಿಲ್ಲ. “”ನನ್ನ ಮೊದಲ ಚಿತ್ರ ಸಂಕಷ್ಟಕರ ಗಣಪತಿ ಬಿಡುಗಡೆಯಾಗುವುದಕ್ಕಿಂತ ಮುನ್ನವೇ ಇನ್ನೊಂದು ಸಿನೆಮಾ ಸಿಕ್ಕಿತು. ಆ ನಿಟ್ಟಿನಲ್ಲಿ ನಾನು ಲಕ್ಕಿ. ಆದರೆ, ಆದ್ಯಾವ ಸಿನೆಮಾ ಎಂದು ಬಹಿರಂಗಪಡಿಸುವ ಹಾಗಿಲ್ಲ. ಏಕೆಂದರೆ, ಆ ತಂಡದವರೇ ಸದ್ಯದಲ್ಲೇ ಮಾಧ್ಯಮದವರ ಮುಂದೆ ಬಂದು ಚಿತ್ರದ ಬಗ್ಗೆ ಮಾತನಾಡುತ್ತಾರೆ” ಎನ್ನುತ್ತಾರೆ ಶ್ರುತಿ.
ಅಲ್ಲಿಗೆ ಶ್ರುತಿ ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಒಳಗೆ ಬಂದಿದ್ದಾರೆ. ಈ ಹಿಂದೆ ಶ್ರುತಿ ಹೆಸರಿನ ನಾಯಕಿಯರೆಲ್ಲ ಸಾಕಷ್ಟು ಜನಪ್ರಿಯತೆ ಮತ್ತು ಯಶಸ್ಸು ಕಂಡಿದ್ದಾರೆ. ಶ್ರುತಿ ಗೊರಾಡಿಯಾ ಸಹ ಯಶಸ್ವಿ ಮತ್ತು ಜನಪ್ರಿಯ ರಾಗುತ್ತಾರಾ? ಕಾದು ನೋಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.