T. N. Seetharam: ಆ ಪಾತ್ರ ನನ್ನನ್ನು ಸಿನಿಮಾ ಜಗತ್ತಿಗೆ ಕರೆದೊಯ್ಯಿತು
Team Udayavani, Dec 10, 2023, 10:53 AM IST
ಕನ್ನಡ ಸಾಹಿತ್ಯ, ರಂಗಭೂಮಿ, ಕಿರುತೆರೆ ಮತ್ತು ಸಿನಿಮಾಗಳಲ್ಲಿ ಬರಹಗಾರನಾಗಿ, ನಿರ್ದೇಶಕನಾಗಿ, ನಟನಾಗಿ ತಮ್ಮದೇ ಆದ ಛಾಪು ಮೂಡಿಸಿದವರು ಟಿ. ಎನ್. ಸೀತಾರಾಮ್. ತಮ್ಮ ಐದು ದಶಕಗಳ ಏಳು-ಬೀಳುಗಳ ಬದುಕಿನ ಚಿತ್ರಣವನ್ನು ಟಿ. ಎನ್. ಸೀತಾರಾಮ್ ತಮ್ಮ “ನೆನಪಿನ ಪುಟಗಳು’ ಕೃತಿಯಲ್ಲಿ ದಾಖಲಿಸಿದ್ದಾರೆ. ನಟನಾಗಿ ತಮ್ಮನ್ನು ಗುರುತಿಸಿದ ಹಿರಿಯ ಸಾಹಿತಿ ಪಿ. ಲಂಕೇಶರ ಜತೆಗಿನ ತಮ್ಮ ಒಡನಾಟದ ಬಗ್ಗೆ ಈ ಕೃತಿಯಲ್ಲಿ ಟಿಎನ್‌ಎಸ್ ಕೆಲ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಒಮ್ಮೆ ನಮ್ಮ ಹಾಸ್ಟೆಲ್ ಕಾರ್ಯಕ್ರಮಕ್ಕೆ ಪಿ. ಲಂಕೇಶ್ ಬಂದದ್ದಿರು. ಅವರನ್ನು ಅಲ್ಲಿಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದು ನಮ್ಮ ಹಾಸ್ಟೆಲಿನಲ್ಲಿದ್ದಿ ಅವರ ಶಿಷ್ಯ ಕವಿ ಬಿ. ಆರ್. ಲಕ್ಷ್ಮಣರಾವ್. ಅವರು ನಮ್ಮ ನಾಟಕ ನೋಡಿದರು. ನಾನು ಅಂದಿನ ನಾಟಕದಲ್ಲಿ ಚೆನ್ನಾಗಿ ನಟಿಸಿದ್ದೆ ಅನ್ನಿಸುತ್ತದೆ. ಅದು ಅವರಿಗೆ ಇಷ್ಟವಾಯಿತು. ಅವರು ಭಾಷಣದಲ್ಲಿ ಮಾತನಾಡುತ್ತಾ, ನನ್ನ ಬಗ್ಗೆ ತುಂಬಾ ಒಳ್ಳೆಯ ಮಾತನಾಡಿದರು. ನನ್ನನ್ನು ಅವರು “ಸಾಯೋ ಆಟ’ ಸಮಯದಲ್ಲಿ ಬಿಟ್ಟರೆ ಬೇರೆ ಸಮಯದಲ್ಲಿ ಮುಖತಃ ಭೇಟಿ ಆಗಿರಲಿಲ್ಲ. ಅವರು ಭಾಷಣ ಮಾಡುತ್ತಾ, ನನ್ನ ಅಭಿನಯವನ್ನು ತುಂಬಾ ಹೊಗಳಿದರು. ಸಮಾರಂಭದ ನಂತರ
ಬಿ. ಆರ್. ಲಕ್ಷ್ಮಣರಾವ್ ಅವರನ್ನು ಕರೆದು “ಆ ಹುಡುಗ ಯಾರು, ಬಹಳ ಚೆನ್ನಾಗಿ ನಟಿಸಿದರು, ಕರೆಯಿರಿ’ ಎಂದರು. ನಾನು ಹೋದೆ. ಅವರು “ಬಹಳ ಚೆನ್ನಾಗಿ ಮಾಡಿದ್ದೀರಿ, ನಾಳೆ ನಮ್ಮ ಮನೆಗೆ ಬನ್ನಿ’ ಎಂದು ಹೇಳಿದರು. ಲಂಕೇಶ್ ನನಗೆ ಸಿಕ್ಕಿದ್ದು ಹಾಗೆ.
ಅವರ ಮನೆ ಇದ್ದಿದ್ದು ಜೆ. ಸಿ ರಸ್ತೆಯಲ್ಲದ್ದಿ ಭಾರತ್ ಟಾಕೀಸ್‌ನ ಮುಂಭಾಗದ ಜರ್ನಲಿಸ್ಟ್ ಕಾಲೋನಿಯಲ್ಲಿ. ನಂತರ ಅವರು ಗಾಂಧಿ ಬಜಾರಿನ ಗೋವಿಂದಪ್ಪ ರಸ್ತೆಗೆ ಮನೆ ಬದಲಾಯಿಸಿದರು. ಮೊದಲ ಮಹಡಿಯಲ್ಲಿ ಅವರ ಮನೆ. ಅಲ್ಲಿಗೆ ಹೋದಾಗ ಚೆನ್ನಾಗಿ ಮಾತನಾಡಿಸಿ ಕಾಫಿ ಕುಡಿಸಿದರು. ತುಂಬಾ ಹೊತ್ತು ಹರಟೆ ಹೊಡೆದರು. ಹೆರಾಲ್ಡ್ ಪಿಂಟರ್, ಜಾನ್ ಆಸ್ಬಾರ್ನ್ ಮುಂತಾದ ಆಂಗ್ಲ ನಾಟಕಕಾರರ ಬಗ್ಗೆ ನನಗೆ ಹೇಳಿದರು. ಅವರು, ತಾನು “ತೆರೆಗಳು’ ಎನ್ನುವ ನಾಟಕ ಕೂಡ ಬರೆಯುತ್ತಿದ್ದೇನೆ ಎಂದು ಹೇಳಿದರು. ಮುಷ್ಟಿಯಲ್ಲಿ ಸಿಗರೇಟ್ ಇಟ್ಟುಕೊಂಡು ಸೇದುತ್ತಾ ಮಾತನಾಡುತ್ತದ್ದಿ ಲಂಕೇಶ್ ಅವರು ಆ ದಿನ ಒಂದು ಪ್ಯಾಕ್ ಸಿಗರೇಟ್ ಸೇದದ್ದಿರು ಎಂದು ನೆನಪು. ನಂತರದ ದಿನಗಳಲ್ಲಿ ಅವರು ಸಿಗರೇಟು ಬಿಟ್ಟರು ಎಂದು ನೆನಪು. ಅವತ್ತಿನಿಂದ ಅವರ ಮನೆಗೆ ನಾನು ಹೋಗುವುದು ಖಾಯಂ ಆಯಿತು. ಮೆಜೆಸ್ಟಿಕ್‌ಗೆ ಹೋಗಿ ಬಸ್ಸು ಹತ್ತಿ ಐದು ಪೈಸೆ ಕೊಟ್ಟರೆ ಲಂಕೇಶ್ ಮನೆ ಹತ್ತಿರ ಇಳಿಸುತ್ತದ್ದಿರು. ಗೆಳೆಯ ಕಿಟ್ಟಿ ಕೂಡ ನನ್ನ ಜೊತೆ ಅನೇಕ ಸಾರಿ ಬರುತ್ತಿದ್ದಿರು. ನಾವು ಹೋಗಿ ಅವರ ಮಾತುಗಳನ್ನು ಕೇಳುತ್ತಿದ್ದೆವು. ಲಂಕೇಶ್ ಮೇಷ್ಟ್ರು ಒಮ್ಮೊಮ್ಮೆ ಇಂಗ್ಲಿಷ್ ಸಾಹಿತಿಗಳ ಕುರಿತು ಮಾತನಾಡುತ್ತಿದ್ದಿರು. ಟಿ. ಎಸ್. ಎಲಿಯಟ್, ಎಜ್ರಾ ಪೌಂಡ್ ಮುಂತಾದವರ ಕೆಲವು ಪದ್ಯಗಳನ್ನು ನಾನು ಓದುವಂತೆ ಆಗಿದ್ದು ಲಂಕೇಶ್ ಅವರ ಮನೆಯಲ್ಲಿಯೇ. ಒಬ್ಬೊಬ್ಬರ ಒಂದೊಂದು ಸಾಲುಗಳನ್ನು ಹೇಳುತ್ತಾ, ಆ ಸಾಲುಗಳು ಏಕೆ ಮುಖ್ಯ ಎಂದು ಮೇಷ್ಟ್ರು ವಿವರಿಸುತ್ತದ್ದಿರು. ಆ ಕಾಲಕ್ಕೆ ಎಲ್ಲಾ ಪದ್ಯಗಳು ನನಗೆ ಅರ್ಥವಾಗುತ್ತಿತ್ತು ಎಂದಲ್ಲ. ಆದರೆ ನಾನು ಅವರಿಂದಾಗಿ ಸಾಹಿತ್ಯಕ್ಕೆ ಹತ್ತಿರವಾಗುತ್ತಿದ್ದೆ. ಸಾಹಿತಿಗಳ ಜಗತ್ತಿಗೆ ಹತ್ತಿರವಾಗುತ್ತಿದ್ದೆ. ಅವರು ಆಗ ಬರೆದ ಅನೇಕ ಏಕಾಂತ ನಾಟಕಗಳಲ್ಲಿ ನಾನು ಮುಖ್ಯ ಪಾತ್ರವಹಿಸಿ ಬೆಂಗಳೂರಿನ ನಾಟಕ ಲೋಕದಲ್ಲಿ ಹೆಚ್ಚು ಹೆಚ್ಚು ಹೆಸರು ಮಾಡುತ್ತಾ ಹೋದೆ.
ಆಗ ಲಂಕೇಶರು “ಬಿರುಕು’ ಎನ್ನುವ ನಾಟಕ ಬರೆದರು. ಅದು ಅವರ ಅತ್ಯಂತ ಮಹತ್ವದ ನಾಟಕ. ಅದರಲ್ಲಿನ ಮುಖ್ಯ ಪಾತ್ರವಾದ ಬಸವರಾಜನ ಪಾತ್ರವನ್ನು ನಾನು ಮಾಡುವಂತೆ ಮೇಷ್ಟ್ರು ಹೇಳಿದರು. ಅದು ನನ್ನ ರಂಗಭೂಮಿ ಬದುಕಿನ ಅತ್ಯಂತ ಮಹತ್ವದ ಮೆಟ್ಟಿಲು. ಅದೇ ಮುಂದೆ ನನ್ನನ್ನು ಸಿನಿಮಾ ಜಗತ್ತಿಗೂ ಕರೆದುಕೊಂಡು ಹೋಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.