ಫಿಟ್‌ನೆಸ್ ಮಂತ್ರ
Team Udayavani, Jan 20, 2019, 12:30 AM IST
ಚುಮುಚುಮು ಚಳಿಯಲ್ಲಿ ವಾಕಿಂಗ್ ಮುಗಿಸಿಕೊಂಡು ಬಂದ ಪಾಂಡು ಸೋಫಾದಲ್ಲಿ ಕುಳಿತು ಕೂಗಿದ, “”ಪಾರೂ, ಬೇಗ ಬಿಸಿಬಿಸಿ ಕಾಫಿ ತೊಗೊಂಡು ಬಾ”ಕಾಫಿ ತಂದ ಪಾರು ಅವನನ್ನು ನೋಡಿ ಕೇಳಿದಳು, “”ಇದೇನ್ರಿ ನಿಮ್ಮ ಅವತಾರ? ಈ ಟೋಪಿ, ಸ್ವೆಟರೂÅ, ಸಾಕ್ಸೂ- ಬಾಣಂತಿ ತರಹ ಕಾಣಾ¤ಯಿದ್ದೀರಾ!”ಸಾಕು ಮಾತುನಿಲ್ಲಿಸು. ಹೊರಗಡೆ ಎಷ್ಟು ಚಳಿ ಇದೇಂತ ನಿನಗೇನು ಗೊತ್ತು?”
ಪಾರು ನಗುತ್ತ ಒಳಗೆ ಹೋದಳು.
“”ಪಾರು ಏನು ತಿಂಡಿ ಮಾಡ್ತಾಯಿದ್ದೀಯಾ?”
“”ನನಗೆ ಅವರೆಕಾಳು ಉಪ್ಪಿಟ್ಟು. ನಿಮಗೆ ಗೊತ್ತೇ ಇದೆಯಲ್ಲಾ- ಕಾರನ್ ಫ್ಲೇಕ್ಸ್”ಪಾಂಡು ಸ್ನಾನ ಮುಗಿಸಿಕೊಂಡು ಬಂದು, ದೇವರಿಗೆ ನಮಸ್ಕಾರ ಮಾಡಿ ಟೇಬಲ್ ಬಳಿಬಂದ. ಪಾರು ಅವನ ಮುಂದೆ ಹಾಲು ಹಾಕಿದ್ದ ಕಾರನ್ ಫ್ಲೇಕ್ಸ್ ಬೌಲ್ ಇಟ್ಟು, ತಾನು ಉಪ್ಪಿಟ್ಟು ತಿನ್ನಲಾರಂಭಿಸಿದಳು. ಪಾಂಡುವಿನ ಮೂಗು ಘಮಘಮ ಎನ್ನುತ್ತಿದ್ದ ಅವರೆಕಾಳಿನ ಪರಿಮಳವನ್ನು ಆಘ್ರಾಣಿಸಿತು.
“”ಪಾರು, ಇದು ನ್ಯಾಯವೇನೆ? ನೀನು ಮಾತ್ರ ಘಮಘಮ ಎನ್ನುವ ಉಪ್ಪಿಟ್ಟು ತಿಂತಾ ಇದ್ದೀ, ನಾನು ಈ ದರಿದ್ರ ತಿನ್ನಬೇಕಾ?”
“”ಡಯಟ್ ಮಾಡ್ತಿರೋದು ನೀವಾ, ನಾನಾ?”””ನಾನೂ ಅದೇ ಹೇಳ್ತಾ ಇರೋದು. ನೀನು ಕೊಂಚ ಸಹಕರಿಸಿದರೆ ನಾನೂ ಆರಾಮವಾಗಿ ಡಯಟ್ ಮಾಡಬಹುದು”””ನೋಡ್ರಿ, ನಾನು ಡಯಟ್-ಗಿಯಟ್ ಮಾಡಲ್ಲ. ಮನೆಯಲ್ಲಿ ಕೆಲಸದವಳಿಲ್ಲ. ನಾನೇ ಎಲ್ಲ ಕೆಲಸ ಮಾಡ್ತೀನಿ. ಕಷ್ಟಪಟ್ಟು ಕೆಲಸ ಮಾಡೋದ್ರಿಂದ ಹಸಿವಾಗತ್ತೆ. ಸರಿಯಾಗಿ ಊಟ-ತಿಂಡಿ ಮಾಡ್ತೀನಿ. ನೀವು ಯಾಕೆ ಡಯಟ್ ಮಾಡ್ತಾಯಿದ್ದೀರೋ ನನಗಂತೂ ಅರ್ಥವಾಗ್ತಿಲ್ಲ ”ಡಯಟ್ ಮಾಡೋದು ಆರೋಗ್ಯಕ್ಕೆ ಒಳ್ಳೆಯದು ಕಣೇ'”ನೋಡ್ರಿ, ನಮ್ಮನೆಯಲ್ಲಿ ನನಗಾಗಲಿ, ನಿಮಗಾಗಲಿ ಬಿ.ಪಿ.- ಶುಗರ್ ಇಲ್ಲ. ಆರೋಗ್ಯ ಕಾಪಾಡಿಕೊಳ್ಳಕ್ಕೆ ವಾಕಿಂಗ್ ಮಾಡ್ತೀರ. ನಮ್ಮನೆಯಲ್ಲಿ ನಾವಿಬ್ಬರೂ ಸಿಕ್ಕಾಪಟ್ಟೆ ತಿಂತೀವಾ ಹೇಳಿ?” “”ಮಕ್ಕಳು ಬೇರೆ ಊರಲಿಲ್ಲ ಅಂತ ಸ್ವೀಟ್ಸ್, ಕರಿದ ತಿಂಡಿ, ಬಗೆಬಗೆ ಅಡಿಗೆಗಳನ್ನು ಮಾಡೋದನ್ನೇ ಬಿಟ್ಟುಬಿಟ್ಟಿದ್ದೀಯ”ನನ್ನ ಪ್ರಶ್ನೆಗೆ ಉತ್ತರ ಹೇಳಿ. ಬೆಳಗ್ಗೆ ದೋಸೆ, ಇಡ್ಲಿ, ಉಪ್ಪಿಟ್ಟು, ರೊಟ್ಟಿ, ಅವಲಕ್ಕಿ ಇತ್ಯಾದಿ ಮಾಡ್ತೀನಿ. ಮಧ್ಯಾಹ್ನಕ್ಕೆ ಡಬ್ಬಿಗೆ ಕಲಸನ್ನ ಹಾಕಿಕೊಡ್ತೀನಿ. ರಾತ್ರಿ ಚಪಾತಿ ಮಾಡ್ತೀನಿ. ಇದರಿಂದ ಆರೋಗ್ಯ ಹೇಗೆ ಹಾಳಾಗತ್ತೆ?”””ನೀನು ಮಾಡುವ ವಾಂಗಿಭಾತ್, ಪೊಂಗಲ್, ಬಿಸಿಬೇಳೆಬಾತ್, ನನ್ನ ಸ್ನೇಹಿತರಿಗೆ ತುಂಬಾ ಇಷ್ಟ.”
“”ಮಾತು ಮರೆಸಬೇಡಿ. ನಿಮ್ಮ ಸ್ನೇಹಿತರಲ್ಲಿ ಕೆಲವರು ಮೂರು ಡಬ್ಬಿ ಕ್ಯಾರಿಯರ್‌ನಲ್ಲಿ ಊಟ ತರ್ತಾರೆ, ನೀವು ಒಂದೇ ಡಬ್ಬಿ ತೊಗೊಂಡು ಹೋಗ್ತಿàರ. ತಟ್ಟೆ ಹಾಕಿಕೊಂಡು ಊಟ ಮಾಡುವುದಕ್ಕಿಂತ ಕಡಿಮೆ ಊಟ ಮಾಡ್ತೀರಲ್ವಾ?”””ಹೌದು”””ಸಾಯಂಕಾಲ ಆಫೀಸ್‌ನಿಂದ ಬಂದಮೇಲೆ ಖಾರಾಪುರೀನೋ, ಚೂಡವಲಕ್ಕೀನೋ, ಮಾರೀಬಿಸ್ಕತ್ತೋ ಕೊಡ್ತೀನಿ. ನಿಮ್ಮ ಆರೋಗ್ಯ ಹೇಗೆ ಹಾಳಾಗತ್ತೆ? ನೀವು ಯಾಕೆ ಡಯಟ್ ಮಾಡಬೇಕು?”
“”ಡಯಟ್ ಮಾಡೋದ್ರಿಂದ ತೂಕ ಕಡಿಮೆಯಾಗತ್ತೆ ಕಣೆ”ನೋಡ್ರಿ ನಿಮಗೀಗ 56 ವರ್ಷ, ನನಗೆ 54 ವರ್ಷ. ಬೇಗ ಮದುವೆಯಾಗಿದ್ದರಿಂದ ಬೇಗ ಮಕ್ಕಳಾದರು. ಮಕ್ಕಳು ಬೇಗ ಸೆಟ್ಲ ಆದರು. ನಾವು ಇನ್ನೊಂದು 4-5 ವರ್ಷ ಆರಾಮವಾಗಿ ತಿಂದೊRಂಡು, ಉಂಡ್ಕೊಂಡು ಇರೋಣ. ವಯಸ್ಸಾದ ಮೇಲೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರಾಯ್ತು”
“”ಬೇಡ ಪಾರು, ಈ ಧೋರಣೆ ಒಳ್ಳೆಯದಲ್ಲ. ನಾಳೆಯಿಂದ ನೀನೂ ನನ್ನ ಜೊತೆ ವಾಕಿಂಗ್ ಬಾ. ವಾರದಲ್ಲಿ ನಾಲಕ್ಕು ದಿನ ಯೋಗಕ್ಲಾಸ್‌ಗೆ ಹೋಗು”
“”ನನಗೆ ಬುದ್ಧಿ ಹೇಳಕ್ಕೆ ಬರಬೇಡಿ. ನಿಮಗಿಷ್ಟ ಬಂದ ಹಾಗೆ ನೀವಿರಿ. ನಾನೂ ನನಗೆ ಯಾವುದು ಸರಿ ಅನ್ನಿಸತ್ತೋ ಅದನ್ನೇ ಮಾಡೋದು”
ದಸರಾ ಶುರುವಾದಾಗ ದಸರಾ ನೋಡಲು ಪಾರುವಿನ ಅಕ್ಕನ ಮಕ್ಕಳು ಬಂದರು. ಪಾರು ಬೆಳಗ್ಗೆ ತಿಂಡಿಗೆ ಪೂರಿ-ಸಾಗು, ಮಸಾಲೆದೋಸೆ, ಕುಚ್ಚಿದ ಕಡಬು, ಇಡ್ಲಿ-ವಡೆ ಸಾಂಬಾರು- ಜೊತೆಯಲ್ಲಿ ಏನಾದರೊಂದು ಸಿಹಿ ಮಾಡತೊಡಗಿದಳು. ಪಾಂಡು ಬಾಯಿಕಟ್ಟಲು ಹೇಗೆ ಸಾಧ್ಯ? ಸಾಯಂಕಾಲ ಅಕ್ಕ ತಂದಿದ್ದ ಚಕ್ಕುಲಿ, ಕೋಡುಬಳೆ, ರವೆಉಂಡೆ, ಕೊಬ್ಬರಿಮಿಠಾಯಿ ಧಾರಾಳವಾಗಿ ಕೊಡುತ್ತಿದ್ದಳು. ಪಾಂಡು ಡಯಟ್ ಮರೆತ.
ಪಾರುವಿನ ಅಕ್ಕ ಊರಿಗೆ ಹೋದ ಮೇಲೆ ಪಾಂಡುವಿನ ತಂಗಿ ತನ್ನ ಮಕ್ಕಳ ಜೊತೆ ಬಂದಳು. ಅವಳ್ಳೋ ಪಾಕ ಪ್ರವೀಣೆ. ಪ್ರೀತಿಯ ಅಣ್ಣನಿಗಾಗಿ ಬಗೆ ಬಗೆ ತಿಂಡಿಗಳನ್ನು ತಂದಿದ್ದಳು. ಪಾಂಡು ಆ ತಿಂಡಿಗಳಿಗೆ ನ್ಯಾಯ ಒದಗಿಸಿದ.
ದಸರಾ ಮುಗಿಯಿತು. ಪಾಂಡು ಕಟ್ಟುನಿಟ್ಟಾಗಿ ಹೆಂಡತಿಗೆ ಹೇಳಿದ, “”ನಾನು ಕೊಡುವ ಟೈಮ್‌ಟೇಬಲ್ ಪ್ರಕಾರಾನೇ ನನಗೆ ತಿನ್ನಕ್ಕೆ ಕೊಡು. ನಾನು ತೂಕ ಇಳಿಸಬೇಕು”ಬೆಳಗ್ಗೆ ಕಾರನ್ ಫ್ಲೇಕ್ಸ್ ಅಥವಾ ರಾಗಿಗಂಜಿ.ಮಧ್ಯಾಹ್ನ ಚಪಾತಿ ಪಲ್ಯ.ಸಾಯಂಕಾಲ ಸೌತೆಕಾಯಿ, ದಾಳಿಂಬೆ, ಮೊಳಕೆ ಕಾಳು.ರಾತ್ರಿ ಬೇಯಿಸಿದ ತರಕಾರಿ.ಪಾರು ಪಟ್ಟಿ ನೋಡಿದಳು ಮಾತಾಡಲಿಲ್ಲ. “”ನಿಮ್ಮ ಹುಚ್ಚು ಬಿಡಿಸಕ್ಕಾಗಲ್ಲ. ಈ ರೀತಿ ಡಯಟ್ ಮಾಡಿದರೆ ಕಾಯಿಲೆ ಬೀಳ್ತೀರ” ಎಂದುಕೊಂಡಳು.
ಪಾಂಡು ಹದಿನೈದು ದಿನಗಳು ಕಟ್ಟುನಿಟ್ಟಾಗಿ ಡಯಟ್ ಮಾಡಿದ. ಮುಖ ಇಳಿಬಿತ್ತು. ದೇಹ ಸೊರಗಿತು. ಕೂತರೆ-ನಿಂತರೆ ಸುಸ್ತು ಅನ್ನತೊಡಗಿದ. ಪಾರು ಬುದ್ಧಿ ಹೇಳಲು ಹೋಗಿ ಬೈಸಿಕೊಂಡಳು. ಒಂದು ತಿಂಗಳು ಕಳೆಯುವಷ್ಟರಲ್ಲಿ ಜ್ವರ ಶುರುವಾಯಿತು.
“”ನಿಮಗೆ ಇದೆಲ್ಲ ಬೇಕಾಗಿತ್ತಾ? ವಾಕಿಂಗ್, ಯೋಗ, ಡಯಟ್- ಎಲ್ಲ ಒಟ್ಟಿಗೆ ಮಾಡಿದ್ರೆ ದೇಹ ಏನಾಗಬೇಕು? ಕಾಯಿಲೆ ಬೀಳ್ತೀರಾ, ಅಷ್ಟೆ”””ಈಗ ಹಾಗನ್ನಿಸಬಹುದು. ಈಗ ಡಯಟ್, ಯೋಗ ಮಾಡೋದ್ರಿಂದ ವಯಸ್ಸಾದಮೇಲೆ ನಮ್ಮ ಆರೋಗ್ಯ ಚೆನ್ನಾಗಿರತ್ತೆ”””ರೀ, ನಮ್ಮ ಅಣ್ಣಾವ್ರು ಕಡಿಮೆ ಯೋಗ ಮಾಡ್ತಿದ್ರಾ? ಅವರಿಗ್ಯಾಕೆ ಮಂಡಿನೋವು ಬಂತು?”
“”ನನಗೇನು ಗೊತ್ತು?”
“”ನಿಮ್ಮ ಕೊಲೀಗ್ ಕೌಸಲ್ಯಾ ಇದ್ದಳಲ್ಲಾ ನೆನಪಿದೆಯಾ?”
“”ನೆನಪಿಲ್ಲದೆ ಏನು? ಅವಳು ವಾಲಂಟರಿ ತೊಗೊಂಡಳಂತೆ”
“”ಅವಳು ಯಾಕೆ ವಾಲಂಟರಿ ತೊಗೊಂಡಳು ಗೊತ್ತಾ?”
“”ನನಗೇನು ಗೊತ್ತು?”
“”ಏನೋ ರೋಗವಂತೆ! ಐವತ್ತು ಕೆ.ಜಿ. ದಾಟಿದರೆ ಐದು ದಿನ ಉಪವಾಸ ಮಾಡ್ತಿದು. ಪ್ರತಿಯೊಂದರಲ್ಲೂ ಅತಿ ಶಿಸ್ತು. ಅವಳಿಗ್ಯಾಕೆ ಕಾಯಿಲೆ ಬಂತು?”ಪಾಂಡು ಉತ್ತರಕೊಡಲಿಲ್ಲ.
“”ಇನ್ನು ನಮ್ಮ ತಂದೆ ಸಿಹೀಂದ್ರೆ ಮಾರು ದೂರ ಓಡೋರು. ಅವರು ಯಾಕೆ ಸಕ್ಕರೆ ಕಾಯಿಲೆ ಅನುಭವಿಸುತ್ತಿದ್ದಾರೆ?”
“”ನೀನು ಇದನ್ನೆಲ್ಲಾ ನನ್ನ ಹತ್ತಿರ ಯಾಕೆ ಹೇಳ್ತಿದ್ದೀಯಾ?”
“”ನೋಡ್ರಿ, ನಮ್ಮ ಹಣೆಯಲ್ಲಿ ಏನು ಬರೆದಿರತ್ತೋ ಅದೇ ಆಗೋದು. ಹಾಗಂತ ವಾಕಿಂಗೊØàಗೋದು, ಡಯಟ್ ಮಾಡೋದು ತಪ್ಪೂಂತ ನಾನು ಹೇಳ್ತಿಲ್ಲ. ಪ್ರತಿಯೊಂದೂ ಲಿಮಿಟ್‌ನಲ್ಲಿರಬೇಕು. ಈ ಡಯಟ್ ಹುಚ್ಚು ನಿಮಗೆ ಹಿಡಿಸಿದವರ್ಯಾರು?”
“”ನಮ್ಮ ಸುಬ್ಬು ಕಣೆ. ಅವನು ಮಧ್ಯಾಹ್ನ ಊಟ ತರೋದೇ ಬಿಟ್ಟುಬಿಟ್ಟಿದ್ದಾನೆ. ಅವನು, ಅವನ ಹೆಂಡತಿ ಇಬ್ಬರೂ ಡಯಟ್ ಮಾಡ್ತಾರಂತೆ”
“”ಅವರ ಹೆಂಡತಿ ಪದ್ದು ಅಲ್ವಾ? ನಾನು ನಾಳೇನೇ ಅವರ ಮನೆಗೆ ಹೋಗಿ ಬರಿ¤àನಿ. ಪದ್ದು ಡಯಟ್ ಮಾಡ್ತಿದ್ದರೆ, ಖಂಡಿತ ನಾನೂ ಮಾಡ್ತೀನಿ. ಇಲ್ಲದಿದ್ದರೆ ನೀವು ನಾನು ಹೇಳಿದ ಹಾಗೆ ಕೇಳಬೇಕು”
ಪಾಂಡು ಒಪ್ಪಿದ. ಮರುದಿನ ಪಾರು ಡಬ್ಬಿಗೆ ಚಪಾತಿ ಮಾಡಿಕೊಡಲಿಲ್ಲ. “”ಮಧ್ಯಾಹ್ನ ಹೊಟೇಲ್‌ನಲ್ಲೇ ಚಪಾತಿ ತಿನ್ನಿ” ಅಂದಳು.
ಮಧ್ಯಾಹ್ನ ಪಾಂಡು ಆಫೀಸ್‌ಗೆ ಹತ್ತಿರವಿದ್ದ ಉಡುಪಿ ಕೃಷ್ಣಮಂದಿರಕ್ಕೆ ನುಗ್ಗಿದ. ಏನಾಶ್ಚರ್ಯ? ಸುಬ್ಬು ಬೆಣ್ಣೆಮಸಾಲೆ ತಿನ್ನುತ್ತ ಕುಳಿತಿದ್ದಾನೆ! ಅವನಿಗೆ ಕಾಣದಂತೆ ಒಳಗೆ ಹೋಗಿ ತಾನೂ ಬೆಣ್ಣೆಮಸಾಲೆ, ಜಾಮೂನು ತಿಂದ. ಅವನು ಸಾಯಂಕಾಲ ಮನೆಗೆ ಬಂದಾಗ ಪಾರು ಇರಲಿಲ್ಲ. ಅವನು ಕಾಫಿ ಬೆರೆಸಿ ಕುಡಿಯುತ್ತಿದ್ದಾಗ ಪಾರು ಬಂದಳು.
“”ಎಲ್ಲಿಗೆ ಹೋಗಿದ್ದೆ ಪಾರು?”
“”ಪದ್ದುಮನೆಗೆ ಹೋಗಿದ್ದೆ. ಅವಳು ಡಯಟ್ ಟೈಮ್‌ಟೇಬಲ್ ಕೊಟ್ಟಿದ್ದಾಳೆ ನೋಡಿ”ಪಾಂಡು ನೋಡಿದ.
ಬೆಳಗ್ಗೆ ತಿಂಡಿಗೆ ಉಪ್ಪಿಟ್ಟು,ದೋಸೆ, ಇಡ್ಲಿ, ವಡೆ- ಸಾಂಬಾರ್, ರೊಟ್ಟಿ, ಖಾರಾಭಾತ್, ಅವಲಕ್ಕಿ ಜೊತೆಯಲ್ಲಿ ಏನಾದರೊಂದು ಸಿಹಿ- ಸಜ್ಜಿಗೆ, ಪಾಯಸ, ಕೇಸರಿಭಾತ್, ಕ್ಯಾರೆಟ್ ಹಲ್ವಾ- ಇತ್ಯಾದಿ. ಮಧ್ಯಾಹ್ನ ಹೊಟೇಲ್‌ನಲ್ಲಿ ಬಿಸಿಬಿಸಿ ಉಪಾಹಾರ. ರಾತ್ರಿ ಅನ್ನ-ಹುಳಿ, ಅನ್ನ-ಸಾರು, ಪಲ್ಯ ಜೊತೆಯಲ್ಲಿ ಹಪ್ಪಳ, ಸಂಡಿಗೆ, ಬಾಳಕದ ಮೆಣಸಿನಕಾಯಿ. ಭಾನುವಾರಗಳಲ್ಲಿ ಸ್ಪೆಷಲ್ ಅಡುಗೆಗಳು- ಕೂಟು, ಮಜ್ಜಿಗೆಹುಳಿ, ಹುರುಳಿಸಾರು, ಅವಿಯಲ್, ತೊವ್ವೆ.
“”ಇದೇನೇ ಪಾರು?”
“”ಸುಳ್ಳೇ ನಿಮ್ಮ ಸುಬ್ಬುವಿನ ಮನೆ ದೇವರು. ಅವರ ಮಾತು ನಂಬಿ¤àರಲ್ಲಾ? ವಾಕಿಂಗ್ ಹೋಗಿ. ಆದರೆ, ಅಚ್ಚುಗಟ್ಟಾಗಿ ಊಟ-ತಿಂಡಿ ಮಾಡಿ. ಪದ್ದು ಕೋಡುಬಳೆ, ರವೆಉಂಡೆ ಕೊಟ್ಟಿದ್ದಾಳೆ, ತಿನ್ನಿ”ಮರುದಿನ ಮಧ್ಯಾಹ್ನ ಪಾಂಡು ಉಡುಪಿ ಕೃಷ್ಣಮಂದಿರದಲ್ಲಿ ಪೂರಿ-ಸಾಗು ತಿನ್ನುತ್ತಿದ್ದಾಗ ಸುಬ್ಬು ಬಂದ.
“”ಇದೇನೋ ಪಾಂಡು? ಏನಾಯ್ತು ನಿನ್ನ ಡಯಟ್?”
“”ನನ್ನ ಹೆಂಡತಿ ಕದ್ದು-ಮುಚ್ಚಿ ಬೆಣ್ಣೆಮಸಾಲೆ ತಿನ್ನುವುದಕ್ಕಿಂತ ರಾಜಾರೋಷವಾಗಿ ಎಲ್ಲ ತಿನ್ನಿ ಅಂದಿದ್ದಾಳೆ.
ನೀನೇನಂತೀಯಾ?”
ಸುಬ್ಬು ಎದುರು ಕುರ್ಚಿಯಲ್ಲಿ ಕುಳಿತು, “”ನನಗೂ ಮಸಾಲೆದೋಸೆ ಹೇಳ್ಳೋ” ಎಂದ.
– ಸಿ. ಎನ್. ಮುಕ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.