ಐದೇ ಐದು ಗೆರೆಗಳು
Team Udayavani, Apr 30, 2017, 3:45 AM IST
ಮೊನ್ನೆ ಹೋಗಿ ಎ.ಟಿ.ಎಂ.ನ ಬಾಯಿಗೆ ನನ್ನ ಕಾರ್ಡ್ ತುರುಕಿದೆ.
“ನಿನ್ನನ್ನೇ ಕಾಯುತ್ತಾ ಕುಳಿತಿ¨ªೆ’ ಎನ್ನುವಂತೆ ಆ ಎ.ಟಿ.ಎಂ. ನೋಟುಗಳನ್ನು ಹೊರಕ್ಕೆಸೆಯಿತು.
ಎಣಿಸುತ್ತ ಇ¨ªೆ.
ಯಾಕೋ ಬೆರಳು “ಚಕ್’ ಎಂದು ನಿಂತಿತು. ಏನೋ ವ್ಯತ್ಯಾಸ ಇದೆ ಎನ್ನುವುದನ್ನು ನನ್ನ ಮೂಗಿರಲಿ, ಬೆರಳೂ ಗುರುತಿಸುವುದನ್ನು ಕಲಿತಿದೆ.
ಮತ್ತೆ ಎ.ಟಿ.ಎಂ. ಕೋಣೆ ಹೊಕ್ಕೆ. ಎಲ್ಲ ನೋಟುಗಳನ್ನೂ ಒಂದೊಂದೇ ನೋಡುತ್ತ ಹೋದೆ.
ಹೌದು, ಅಲ್ಲಿ ವ್ಯತ್ಯಾಸ ಇತ್ತು.
500ರ ನೋಟುಗಳ ಪೈಕಿ ಕೆಲವಕ್ಕೆ ಗೀಟುಗಳಿದ್ದವು. ಕೆಲವಕ್ಕೆ ಆ ಗೀಟು ಇರಲಿಲ್ಲ. ಪೇಪರ್‌ನಲ್ಲಿ ಈಗ ಎ.ಟಿ.ಎಂ.ನಲ್ಲೂ ಖೋಟಾ ನೋಟುಗಳಿರುತ್ತದೆ ಅಂತ ಓದಿದ್ದವನಿಗೆ ಗೊಂದಲ ಶುರುವಾಯ್ತು.
ಕೆಲವರು ಅದೇನೋ ಆಕಾಶಕ್ಕೆ ಹಿಡಿದು ಇದು ಸಾಚಾ, ಇದು ಖೋಟಾ ಅಂತ ಹೇಳುತ್ತಾರೆ. ನನಗೋ ಆ ವಿದ್ಯೆ ಇದುವರೆಗೂ ಒಲಿದಿಲ್ಲ.
ಸರಿ, ಮನೆಗೆ ಬಂದವನೇ ಗೂಗಲ್ ಮೊರೆ ಹೊಕ್ಕೆ.
stripes on 500 rupee note ಅಂತ ಟೈಪಿಸಿ ಎಂಟರ್ ಒತ್ತಿದೆ.
ಒಂದು ಕ್ಷಣ ಕಣ್ಣಿಗೆ ಕತ್ತಲು ಕವಿದಂತಾಯಿತು.
“ಹೌದು ಕತ್ತಲು. ಆ ಕತ್ತಲಿನÇÉೇ ನಾನು ಲೋಕ ಕಾಣುತ್ತದಾ?’ ಎಂದು ಹುಡುಕಲು ಶುರು ಮಾಡಿದೆ.
ಆ ಹಕ್ಕಿ ಕೂಗು ಕೇಳುತ್ತಿದೆ, ಆದರೆ ಕಾಣುತ್ತಿಲ್ಲ, ಆ ಬಸ್‌ನ ಹೊಗೆ ಮೂಗಿಗೆ ಬಡಿಯುತ್ತಿದೆ, ಆದರೆ ಕಾಣಿಸುತ್ತಿಲ್ಲ.
ಆಕೆಯ ನಡಿಗೆಯ ಮೃದು ಸದ್ದೂ ಅನುಭವವಾಗುತ್ತಿದೆ, ಆದರೆ ಆಕೆ ಕಾಣುತ್ತಿಲ್ಲ. ಕೈಯಲ್ಲಿ ಹೌದು ನೋಟುಗಳಿವೆ, ಆದರೆ ಅದು ಎಷ್ಟರದ್ದು ಎಂದು ಗೊತ್ತಾಗುತ್ತಿಲ್ಲ.
ಹಾಗೆ ಗೊತ್ತಾಗುವುದಿಲ್ಲ ಎನ್ನುವ ಕಾರಣಕ್ಕಾಗಿಯೇ ಆರ್‌ಬಿಐ ನಿರ್ಧರಿಸಿದ್ದು; ಕಣ್ಣು ಕಾಣದವರಿಗೂ ನೋಟು ಎಷ್ಟರದ್ದು ಎಂದು ಗೊತ್ತಾಗಬೇಕು.
ಆಗ 500 ಹಾಗೂ 1000 ರೂಪಾಯಿಗಳ ನೋಟಿನ ಮೇಲೆ ಆರ್‌ಬಿಐ ಮುಟ್ಟಿದರೆ ಅನುಭವಕ್ಕೆ ಬರುವ ಐದು ಹಾಗೂ ಆರು ಗೆರೆಗಳನ್ನು ಎಳೆಯಿತು.
ಒಂದು ಪುಟ್ಟ ಕೆಲಸ. ಆದರೆ ಎಷ್ಟು ದೊಡ್ಡ ನಿಟ್ಟುಸಿರು.
ತಕ್ಷಣ ನನಗೆ ನನ್ನ ಬಾಲ್ಯದÇÉೇ ಕುಮಾರವ್ಯಾಸ ಭಾರತವನ್ನು ಕಿವಿಯ ಮೂಲಕ ಮೆದುಳಿಗೆ ತಲುಪಿಸಿದ, ಇನ್ನೊಬ್ಬರ ಹೆಗಲ ಸಹಾಯವಿಲ್ಲದೆ ಒಂದು ಹೆಜ್ಜೆ ಮುಂದಿಡಲೂ ಆಗದಿದ್ದ “ಕುಲುª ರಾಮಣ್ಣ’ ನೆನಪಾದರು.
ನನ್ನ ಬಾಲ್ಯಕ್ಕೆ ಕಥೆಗಳ ರಾಶಿಯನ್ನೇ ಸುರಿದ, ಇದ್ದಕ್ಕಿದ್ದಂತೆ ಒಂದು ದಿನ ಕುರುಡರಾಗಿ ಹೋದ ರಾಮಯ್ಯನವರು ನೆನಪಾದರು.
ಒಂದು ದಿನ ಜೋಶ್‌ನಲ್ಲಿ¨ªೆ. ಭಾನುವಾರ ಗೆಳತಿಯ ಜೊತೆ ಸುತ್ತಾಟಕ್ಕೆ ರೆಕ್ಕೆ ಕಟ್ಟುತ್ತಿ¨ªೆ. ಗೆಳೆಯ ಪ್ರವೀಣ್ ಭಾರ್ಗವ್ ಫೋನ್ ಮಾಡಿದರು, “ಬನ್ನೇರು ಘಟ್ಟಕ್ಕೆ ಬನ್ನಿ’ ಅಂತ. “ಓಕೆ’ ಎಂದುಕೊಂಡು ಅಲ್ಲಿಗೆ ತಲುಪಿಕೊಂಡ¨ªಾಯಿತು.
ಅಲ್ಲಿ ಕಾಲಿಟ್ಟವನು ಒಂದು ಕ್ಷಣ ಹಾಗೇ ನಿಂತೆ.
ಅಲ್ಲಿದ್ದದ್ದು ಕತ್ತಲ ನಂಬಿ ಬದುಕುತ್ತಿದ್ದವರ ಲೋಕ. ಪ್ರವೀಣ್ ಅವರಿಗೆ ಪ್ರಕೃತಿ ಶಿಬಿರ ನಡೆಸುತ್ತಿದ್ದರು. ಅದಕ್ಕೆ ನಾನು ಶಾಕ್ ಆದದ್ದು ! ಕಣ್ಣೇ ಇಲ್ಲದವರಿಗೆ ಹಸಿರ ಲೋಕವನ್ನು ಕಾಣಿಸುವುದು ಸಣ್ಣ ಸಂಗತಿಯೆ!
ಒಂದು ನವಿಲು. ಅದನ್ನು ಎದೆಗೊತ್ತಿಕೊಂಡ ಒಬ್ಬನ ಕಣ್ಣಲ್ಲಿ ನೀರು ಧಾರಾಕಾರವಾಗಿ ಸುರಿಯಲಾರಂಭಿಸಿತ್ತು.
“ಯಾಕೊ?’ ಎಂದೆ. “ನವಿಲಿನ ಬಿಸಿ ನನ್ನ ಎದೆಯ ಬಿಸಿಯ ಜೊತೆ ಮಾತನಾಡುತ್ತಿದೆ’ ಎಂದ.
ಅಷ್ಟಕ್ಕೇ ನಿಲ್ಲಿಸಲಿಲ್ಲ. “ಇಷ್ಟು ದಿನದ ಬದುಕಿನಲ್ಲಿ ನನಗೆ ಇಷ್ಟು ಬೆಚ್ಚನೆ ಅನುಭವ ನೀಡಿದವರು ಇನ್ನೊಬ್ಬರಿಲ್ಲ’ ಎಂದ.
ಇನ್ನೊಬ್ಬ ಹುಲಿಯ ಹೆಜ್ಜೆ ಗುರುತುಗಳನ್ನು ಹುಡುಕುತ್ತಿದ್ದ. ಅದರ ತೂಕ ಎಷ್ಟು ಎನ್ನುವುದನ್ನು ಅದು ಹೆಜ್ಜೆ ಊರಿದ ರೀತಿಯÇÉೇ ಕಂಡುಕೊಂಡುಬಿಟ್ಟಿದ್ದ.
ಇನ್ನೂ ಒಬ್ಬನ ಎದೆ ಲಬ್ ಡಬ್ ಬಡಿದುಕೊಳ್ಳುತ್ತಿತ್ತು- ಎಲ್ಲರಿಗೂ ಕೇಳುವಂತೆ. ಆತನ ಮುಖವಂತೂ ಬೆರಗಿನ ತವರು ಮನೆಯಾಗಿ ಹೋಗಿತ್ತು.
ಆತ ಮೊದಲ ಬಾರಿಗೆ ಜಂಪ್ ಮಾಡಿದ್ದ. “ಸಾರ್, ನಾನು ನೆಲದಲ್ಲಿ ಮಾತ್ರ ಓಡಾಡಬೇಕು, ಎತ್ತರ ಎನ್ನುವುದೇ ನನಗೆ ಗೊತ್ತಿರಲಿಲ್ಲ’ ಎಂದ. ಅವನ ದನಿ ಆಗತಾನೆ ವಸಂತಕ್ಕೆ ಕಾಲಿಡುತ್ತಿದ್ದ ತರುಣನಂತಿತ್ತು.
ಪ್ರವೀಣ್ ಅವನಿಗೆ ಮೊದಲ ಬಾರಿಗೆ ಜಿಗಿಯುವುದರ ಆಟ ಆಡಿಸಿದ್ದ. ಆನಂತರ ನಾನು ಕೀನೋ ಥಿಯೇಟರ್ ಬಳಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿ¨ªೆ. ಕೀನೋ ಥಿಯೇಟರ್‌ನಿಂದ ರೈಲ್ವೆ ಹಳಿಗಳ ಬಳಿ ಇರುವ ಸ್ಲಮ್‌ಗೆ ಹೋಗುವ ದಾರಿಯಿದೆ. ಅಲ್ಲಿ ಎಡಕ್ಕೆ ಇರುವ ಕಟ್ಟಡ ನನ್ನದಾಗಿ ಹೋಗಿತ್ತು.
ಏಕೆಂದರೆ, ಅಲ್ಲಿ ಕುವೆಂಪು ಕೃತಿಗಳನ್ನು ಬ್ರೇಲ್ ಲಿಪಿಗೆ ಅಳವಡಿಸುತ್ತಿದ್ದರು. ಹಗಲೂ ರಾತ್ರಿ ಕುವೆಂಪು ಅಕ್ಷರಗಳ ಬದಲು ಚುಕ್ಕಿಗಳಾಗಿ ಬದಲಾಗುತ್ತಿದ್ದರು.
ಕುವೆಂಪು ಕಂಡ ಆ ಮಲೆನಾಡು, ಗುತ್ತಿ ಐತ ಪಿಂಚಲು, ಹುಲಿಕಲ್ ನೆತ್ತಿ, ಜಲಗಾರ ಹೀಗೆ …
ಎಲ್ಲರೂ ಕತ್ತಲನ್ನೇ ತಮ್ಮೆದುರು ಹರಡಿಕೊಂಡಿದ್ದವರ ಲೋಕದಲ್ಲಿ ನಡೆಯಲಾರಂಭಿಸಿದ್ದರು.
ನಾನು ಅವರ ಜೊತೆ ಹೆಜ್ಜೆ ಹಾಕುತ್ತಾ, ಅವರ ಲೈಬ್ರರಿಯಲ್ಲಿರುವ ಕಾದಂಬರಿ ಯಾವುದು, ಕಥೆ ಯಾವುದು ಎನ್ನುವುದನ್ನು ಗೊತ್ತು ಮಾಡಿಕೊಳ್ಳುತ್ತಾ…
ಅವರ “ವೈಟ್ ಕೇನ್’ ಜೊತೆಗೆ ಹೆಜ್ಜೆ ಹಾಕುತ್ತ ನಡೆದೆ.
ಐದು ಗೆರೆ, ಐದೇ ಐದು ಗೆರೆ ನನ್ನ ಲೋಕವನ್ನು ಅಲುಗಾಡಿಸಿಬಿಟ್ಟಿತ್ತು.
– ಜಿ. ಎನ್. ಮೋಹನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.