ಹಾರೋ ಹಕ್ಕಿ


Team Udayavani, Jul 16, 2017, 2:45 AM IST

Tour.jpg

ಹರಿ ಲಿಸನ್‌. ವೇರ್‌ ಇಸ್‌ ಯೂ ಆರ್‌ ಕಾನ್ಸನ್‌ಟ್ರೇಷನ್‌? ಆರ್‌ ಯೂ ಆಲ್‌ರೈಟ್‌?” ಈ ಪ್ರಶ್ನೆಗಳು ನೇರವಾಗಿಯೂ ಖಾರವಾಗಿಯೂ ಹರಿಯನ್ನು ತಲುಪಿದ್ದವು. ತತ್‌ಕ್ಷಣಕ್ಕೆ ಏನೆಂದು ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಕುಳಿತಲ್ಲೇ ಕುರ್ಚಿಗೆ ಸಂಪೂರ್ಣ ದೇಹವನ್ನು ಹಿಂದಕ್ಕೆ ಒರಗಿಸಿ ನಿರಾಳನಾಗಲು ಪ್ರಯತ್ನಿಸಿದ. ಆದರೆ, ಅವನೊಳಗೆ ಅದು ಸಾಧ್ಯವಾಗದಂತೆ ಅವನನ್ನು ಬಾಧಿಸುತ್ತಲೆ ಇತ್ತು. ಇದೇ ಕಾರಣದಿಂದ ಹರಿ ಕಂಪೆನಿಯ ಎÇÉಾ ವ್ಯವಹಾರಗಳಲ್ಲಿ ಆಸಕ್ತಿ ಕಳೆದುಕೊಂಡಿದ್ದ. ಕಂಪೆನಿಗೆ ಇವನ ಮೇಲೆ ಅದೆಷ್ಟು ವಿಶ್ವಾಸವಿತ್ತೆಂದರೆ ಇವನು ಇದೇ ರೀತಿ ಇನ್ನೂ ಮೂರು ತಿಂಗಳು ಮುಂದುವರೆದು ಕಂಪೆನಿಗೆ ಯಾವುದೇ ಲಾಭ ತಂದು ಕೊಡದೇ ಹೋದರೂ ಇವನನ್ನು ಮುಖ್ಯ ಹು¨ªೆಯಿಂದ ಕೆಳಗಿಳಿಸದೆ ಮುಂದುವರೆಸುವ ಉದ್ದೇಶವಿತ್ತು. ಹರಿಯು ಕಂಪೆನಿಗೆ ಆಯ್ಕೆಯಾದ ಹೊಸತರಲ್ಲಿ ತನ್ನ ಪ್ರಾಮಾಣಿಕ ಪ್ರಯತ್ನ ಮತ್ತು ಪರಿಶ್ರಮದಿಂದ ಕಂಪೆನಿಯ ನಿವ್ವಳ ಲಾಭವನ್ನು ತುತ್ತತುದಿಗೆ ಏರಿಸಿದ್ದ. ಅವನ ಕೆಲಸದಲ್ಲಿನ ದಕ್ಷತೆ ಕಂಡವರು ಮೆಚ್ಚಿಕೊಳ್ಳುತ್ತಲೇ, “ಈ ಹುಡುಗನ ತಲೆಯೊಳಗೆ ಅದೆಂಥಾ ಚುರುಕತನ ತುಂಬಿದೆ’ ಎಂದು ಆಶ್ಚರ್ಯ ಪಡುತ್ತಿದ್ದರು. ಹರಿ ತನ್ನ ಕೆಲಸವನ್ನು ಇಟ್ಟ ಗುರಿಯಂತೆ ಸಮರ್ಪಕವಾಗಿ ತಲುಪಲು ಬೇಕಾದ ಎÇÉಾ ತಯಾರಿಗಳ ಮಾಡಿಕೊಂಡವನಂತೆ ಯಶಸ್ವಿಯಾಗುತ್ತಿದ್ದ. ಇದರಿಂದಲೇ ಕಂಪೆನಿ ಒಬ್ಬ ನೌಕರನಾಗಿ ಬಂದ ಇವನ ಕೆಲಸದಲ್ಲಿನ ಕುಶಲತೆಯನ್ನು ಗುರುತಿಸಿ ಭಡ್ತಿಗಳ ನೀಡುತ್ತ ಪ್ರೋತ್ಸಾಹಿಸಿತ್ತು. ಹರಿ ಹೆಚ್ಚಿನ ನಿರೀಕ್ಷೆಯಲ್ಲಿ ತನ್ನ ಕೆಲಸದ ಗುಣಮಟ್ಟವನ್ನು ಕಾಯ್ದಕೊಳ್ಳಲು ಬೇಕಾದ ಎÇÉಾ ಪ್ರಯತ್ನಗಳನ್ನು ಮಾಡುತ್ತಿದ್ದ. ಇನ್ನೂ ತಾನೊಬ್ಬ ಕಲಿಕೆಯ ಹಂತದ ವಿದ್ಯಾರ್ಥಿಯಂತೆ ಮಾರುಕಟ್ಟೆಗೆ ಬರುವ ಪ್ರತಿ ತಂತ್ರಜ್ಞಾನ ಸಂಬಂಧಿ ಪುಸ್ತಕಗಳ ಖರೀದಿಸಿ ಓದುತ್ತಿದ್ದ.

ಬಿಡುವಿದ್ದರೆ ಕೆಲ ಕೋರ್ಸ್‌ ಗಳಿಗೂ ಹೋಗಿ ತನಗೆ ಬೇಕಾದ ಉಪಯುಕ್ತ ಮಾಹಿತಿಗಳ ಕಲೆ ಹಾಕುತ್ತ ಹೊಸದನ್ನು ಕಲಿಯುತ್ತಿದ್ದ. ಇವನಿಗೆ ಸಾಹಿತ್ಯ, ಆಧ್ಯಾತ್ಮದ ಮೇಲೂ ಪ್ರೀತಿ ಇದೆಯಾದರೂ ಅವುಗಳ ಬಗೆಗಿನ ಪುಸ್ತಕಗಳ ಹಾಳೆ ತಿರುವಿ ಬಹಳ ವರ್ಷಗಳೇ ಕಳೆದಿದೆ. ಕೆಲಸದ ನೆಪದಲ್ಲಿ ವಿದೇಶಕ್ಕೆ ಬಂದವನು ತನ್ನ ವೈಯಕ್ತಿಕ ಬೆಳವಣಿಗೆಯನ್ನೇ ಮುಖ್ಯವಾಗಿಸಿಕೊಂಡಂತೆ ಇವುಗಳಿಂದ ಸ್ವಲ್ಪ ಅಂತರ ಕಾದುಕೊಂಡಿದ್ದ ಕಂಪೆನಿಯು ತನಗೆ ವಹಿಸುವ ಕೆಲಸವನ್ನ ಅಚ್ಚುಕಟ್ಟಾಗಿ ಮಾಡಿ ಮುಗಿಸಿ ಅವರಿಂದ ಪ್ರಶಂಸೆಗೆ ಒಳಗಾಗುವುದೆ ಅವನಿಗೆ ಮುಖ್ಯವಾಗಿತ್ತು. ಎಲ್ಲರ ಬಾಯಿಯಲ್ಲಿಯೂ ಹರಿಯ ಕುರಿತ ಗುಣಗಾನ ಸಾಮಾನ್ಯವಾಗಿದ್ದರೂ ಒಳಗೊಂದು ಸಣ್ಣ ಅಸೂಯೆಯೂ ಕೂಡ ಸುಳಿದಾಡಿತ್ತು. ಎಲ್ಲಿಂದಲೋ ಸಾಗರಗಳ ದಾಟಿ ಬಂದವನ ಈ ಬಗೆಯ ಯಶಸ್ಸುಗಳ ಕಂಡವರಿಗೆ ಈ ಎತ್ತರಕ್ಕೆ ಒಯ್ಯತ್ತಿರುವ ಆ ಅಂತಃಶಕ್ತಿಯಾದರೂ ಯಾವುದೆಂದು ಕಾಡದೇ ಇರಲಿಲ್ಲ. ಅದಕ್ಕೆ ಹರಿಯ ಉತ್ತರವು ಅಷ್ಟೇ ಮೊಟಕಾಗಿತ್ತು. “ಐ ಆಲ್‌ವೇಸ್‌ ಫ್ಲೈ ಲೈಕ್‌ ಎ ಬರ್ಡ್‌’ ಎಂದಿದ್ದ. ಇದಕ್ಕೆ ಇವನ ಕೆಲ ಸಹವರ್ತಿಗಳು ಇದೊಂದು ವಲಸಿಗ ಹಕ್ಕಿ ಎಂದು ಅಣಕಿಸಿದಂತೆ ತಮ್ಮೊಳಗೆ ನಗಾಡಿದ್ದರು.

ಹರಿ ತಂದೆ, ತಾಯಿಗೆ ಒಬ್ಬನೇ ಮಗ. ತಂದೆ ಸದಾಕಾಲ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುತ್ತಿದ್ದರು. ಮನೆಯ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿ ಅಮ್ಮನ ಹೆಗಲೇರಿತ್ತು. ತೋಟದಲ್ಲಿನ ಕೆಲ ಆದಾಯದೊಂದಿಗೆ ಒಂದಷ್ಟು ಸಣ್ಣ-ಪುಟ್ಟ ಹಣಕಾಸುಗಳು ಈ ಕುಟುಂಬಕ್ಕೆ ನೆರವಾಗಿದ್ದವು. ತಂದೆ ವರ್ಷದಲ್ಲಿ ಬಹಳ ತಿಂಗಳುಗಳ ವರೆಗೆ ಹಾಸಿಗೆಯಲ್ಲಿ ಮಲಗಿ ಸುಧಾರಿಸಿಕೊಳ್ಳುತ್ತಿದ್ದರೆ ಇನ್ನೂ ಕೆಲವು ತಿಂಗಳುಗಳು ಒಂದಷ್ಟು ಚೇತರಿಸಿಕೊಂಡಂತೆ ಮನೆ ಹೊರಗಿನ ಜಗುಲಿ ಮೇಲೆ ಕುಳಿತು ಹೋಗೋ, ಬರುವವರ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು. ಅವರಿಗೆ ತಮ್ಮ ಮಗ ಹರಿಯನ್ನು ಕಂಡರೆ ಪ್ರೀತಿ. ತಮ್ಮ ಈ ಕಾಯಿಲೆಯ ನಡುವೆಯೂ ಅವನಿಗೆ ಚೆನ್ನಾಗಿ ಕಲಿತು ಉದ್ಯೋಗದ ನಿಮಿತ್ತ ಎÇÉಾದರೂ ಕೆಲಸ ನೋಡಿಕೊಳ್ಳುವಂತೆ ಹೇಳುತ್ತಿದ್ದರು. ತಮ್ಮ ಬಳಿಯಿದ್ದ ಈ ತುಂಡು ತೋಟ, ಹಳೇ ಕಾಲದ ಮನೆ ಇಲ್ಲಿನ ಬವಣೆಗಳೆಲ್ಲ ತಮ್ಮ ತಲೆಗೆ ಸಾಕೆಂದು ತಂದೆಯ ಭಾವನೆಯಾಗಿತ್ತು. ಆದರೆ, ಹರಿ ಸಣ್ಣವನಾದ್ದರಿಂದ ಇದ್ಯಾವುದೂ ಅವನಿಗೆ ಅರ್ಥವಾಗುತ್ತಿರಲಿಲ್ಲ. ಅವನು ತನ್ನಪ್ಪ ಹಾಸಿಗೆ ಹಿಡಿದ ದಿನಗಳನ್ನೇ ತನ್ನ ಬದುಕಿನಲ್ಲಿ ಹೆಚ್ಚು ಕಂಡಿದ್ದ. ಅಮ್ಮನಂತೂ ಈ ಮನೆಗಾಗಿಯೇ ತನ್ನ ಬದುಕನ್ನು ಮುಡುಪಿಟ್ಟವಳಂತೆ ಹಗಲು, ಇರುಳುಗಳನ್ನು ಕಳೆಯುತ್ತಿದ್ದಳು.

ತಮ್ಮ ತೋಟದಲ್ಲಿ ಬೀಳುವ ಗರಿ, ಕಾಯಿ, ಇತರ ತೆಂಗಿನ ಉತ್ಪನ್ನಗಳನ್ನು ಜೋಪಾನವಾಗಿಯೇ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಳು. ಇನ್ನೂ ತೋಟದಲ್ಲಿ ತಾನೇ ಕೈಯಾರೆ ಬೆಳೆಸಿದ ಹೂವಿನ ಗಿಡಗಳು ಇವಳ ಆರೈಕೆಯಿಂದ ಹೂಗಳ ಬಿಡಲು ಅದನ್ನ ಕೊಯ್ದು  ಮನೆಗೆ ತಂದು ಮಾಲೆ ಮಾಡಿದವಳೇ ಹರಿಯ ಕೈಯಲ್ಲಿ ಅಲ್ಲೇ ನಾಲ್ಕಾರು ಮನೆಗಳಿಗೆ ಮಾರಿಸುತ್ತಿದ್ದಳು. ಹೂ ಸ್ವಲ್ಪ ಹೆಚ್ಚಿಗೆ ಬಿಟ್ಟಿತೆಂದರೂ ಸಾಕು,  ಖುದ್ದು ತಾನೇ ಅದನ್ನ ರಸ್ತೆ ಬದಿಗಳಿಗೆ ಕೊಂಡುಹೋಗಿ ಸಂಜೆಯ ತನಕ ನಿಂತು ಬಿಸಿಲು, ಮಳೆಗಳ ಲೆಕ್ಕಿಸದೆ ಮಾರಾಟ ಮಾಡುತ್ತಿದ್ದಳು. ಅಮ್ಮ ಹಣದ ಖರ್ಚಿನ ವಿಷಯದಲ್ಲಿ ತುಂಬಾ ಜೋಪಾನವಾಗಿದ್ದಳು. ಅವಳಿಗೆ ಅನವಶ್ಯಕ ಖರ್ಚುಗಳೆಂದರೆ ಆಗುತ್ತಿರಲಿಲ್ಲ. ಆದರೂ, ಅವಳು ಹೀಗೇ ಉಳಿಸಿದ ಬಹುತೇಕ ಹಣವೂ ತಂದೆಯ ಔಷಧಿ ಉಪಚಾರಕ್ಕೆಂದು ಕರಗಿ ಬಿಡುತ್ತಿತ್ತು. ಅವಳ ಪುಟ್ಟ ಭರವಸೆಯಾಗಿ ಮಗ ಹರಿಯಿದ್ದ. ಅವನ ಮುಂದಿನ ಭವಿಷ್ಯದ ಮೇಲೆ ಅವಳಿಗೆ ಇನ್ನಿಲ್ಲದ ಕನಸು. ತುಂಬಾ ಚುರುಕಾಗಿದ್ದ ಹುಡುಗ ಸರಿಯಾದ ಆರೈಕೆಯಿಲ್ಲದ ಕಾರಣ ದೇಹದಲ್ಲಿ ಅಂಥ ಕಸುವಿಲ್ಲದೇ ಹೋದರೂ ಬುದ್ಧಿಯಲ್ಲಿ ಮಾತ್ರ ಅಷ್ಟೇ ಮುಂದಿದ್ದ.

ಅಮ್ಮನಿಗೆ ಹೂ ಮಾರಿದ ಲೆಕ್ಕಾRಚಾರ, ಬಿದ್ದ ಗರಿ, ಕಾಯಿಗಳ ಮಾರಾಟದ ಲೆಕ್ಕಾಚಾರ, ಅಪ್ಪನ ಔಷಧಿ, ಮಾತ್ರೆ ಇತರ ಸಂಗತಿಗಳ ಲೆಕ್ಕಾಚಾರವನ್ನು ಅಮ್ಮ ಹೇಳುತ್ತಲೆ ತಪ್ಪಿಲ್ಲದಂತೆ ಕೂಡಿಸಿ, ಕಳೆದು ಇಷ್ಟಿಷ್ಟೆಂದು ಹೇಳಿ ಬಿಡುತ್ತಿದ್ದ. ಅಮ್ಮನಿಗೆ ಮಗನ ಈ ಸ್ವಭಾವವೇ ಅವನ ಕಂಡರೆ ಅಕ್ಕರೆ ಉಂಟು ಮಾಡುವಂತಿತ್ತು. ಇವನು ಬೆಳೆದು ದೊಡ್ಡವನಾಗಿ ತನ್ನ ಈ ದಾರಿದ್ರ್ಯದಿಂದ ಬಿಡುಗಡೆಗೊಳಿಸುತ್ತಾನೆಂದು ಅವಳು ನಂಬಿಕೆಯಿಟ್ಟಿದ್ದಳು. ಇವನ ಬೆಳವಣಿಗೆಯ ಮೂಲಕವೇ ತಮ್ಮ ಮನೆಯ ಈ ಸಕಲೆಂಟು ಸಮಸ್ಯೆಗಳು ನಿವಾರಣೆಯಾಗುವವೆಂದು ಅಮ್ಮ ಹರಿಯ ತಂದೆಯ ಬಳಿ ಸಮಯ ಸಿಕ್ಕಾಗಲೆಲ್ಲ ಹೇಳುತ್ತಿದ್ದಳು. ತಂದೆಯ ಕಣ್ಣಾಲೆಗಳಲ್ಲಿ ನೀರು ತುಂಬಿಕೊಂಡು ಸಂತಸ ಒಂದು ಕಾಣುತ್ತಿತ್ತು. ತಂದೆಗೂ ಮಗನ ಮೇಲೆ ಅದೇ ವಿಶ್ವಾಸ. ಆದರೆ, ಇವೆಲ್ಲದಕ್ಕೂ ಕಾಲವನ್ನು ಕಾಯಬೇಕಾಗಿತ್ತು.

ಕಡೆಯ ವರ್ಷದ ಇಂಜಿನಿಯರಿಂಗ್‌ ಪದವಿಯಲ್ಲಿ ಇ¨ªಾಗ ಹರಿಯ ತಂದೆ ಕಾಲವಾಗಿದ್ದರು. ಅವರ ಉಳಿಸಿಕೊಳ್ಳಲು ಮನೆಯಲ್ಲಿ ಅಮ್ಮನೊಬ್ಬಳು ಮಗನಿಗೆ ತಿಳಿಸದೇ ನಡೆಸಿದ ಹೋರಾಟ ಇತರರ ಬಾಯಿಂದ ಎಷ್ಟೋ ದಿನಗಳ ನಂತರ ಹರಿಗೆ ತಿಳಿದಿತ್ತು. ಉತ್ತಮ ಅಂಕಗಳೊಂದಿಗೆ ಹರಿ ಇಂಜಿನಿಯರಿಂಗ್‌ ಮುಗಿಸುತ್ತಲೇ ಕೆಲಸದ ಅವಕಾಶಗಳು ಅವನ ಕೈಬೀಸಿ ಕರೆದಿದ್ದವು. ಒಳ್ಳೆಯ ಕಂಪೆನಿಗಳು ಅವನ ಪರೀಕ್ಷೆಯ ಫ‌ಲಿತಾಂಶಕ್ಕೂ ಕಾಯದೆ ಆಫ‌ರ್‌ ಲೆಟರ್‌ಗಳನ್ನು ನೀಡಿ ಬರುವಂತೆ ಆಹ್ವಾನಿಸಿದ್ದವು. ಅವನಿಗೆ ತನ್ನ ಅಮ್ಮನ ಒಂಟಿಯಾಗಿ ಬಿಟ್ಟುಹೋಗುವ ಬಗ್ಗೆ ಗೊಂದಲಗಳಿದ್ದವು. ಈಗಾಗಲೇ ಅವನ ಸ್ಮತಿಪಟಲದಲ್ಲಿ ತಂದೆಯ ಸಾವು ಒಂದು ಘಟನೆಯಂತೆ ನಡೆದುಹೋಗಿತ್ತು. ಆದರೆ, ಅದು ಅಷ್ಟು ಕಾಡಿರಲಿಲ್ಲ. ತಂದೆಯ ಉತ್ತರಕ್ರಿಯೆಗೆ ಹೋದವನು ಅಲ್ಲಿ ಎಲ್ಲವನ್ನು ನಿಯಮಾನುಸಾರ ಮಾಡುತ್ತಲೇ ತನ್ನ ಮೇಲೆ ಅಷ್ಟು ಅಪಾರ ಪ್ರೀತಿಯಿಟ್ಟುಕೊಂಡಿದ್ದ ತಂದೆಯ ಅಗಲಿಕೆಗೆ ಕೆಲ ಕಣ್ಣೀರ ಹನಿಗಳ ಹೊರತು ಇನ್ಯಾವ ಪಶ್ಚಾತ್ತಾಪವನ್ನೂ ತೋರ್ಪಡಿಸಿರಲಿಲ್ಲ. ಸದಾ ಹಾಸಿಗೆ ಹಿಡಿದಿದ್ದ ತಂದೆಯ ಮುಖ ಹರಿಯನ್ನ ಅಷ್ಟು ಆವರಿಸಿಕೊಳ್ಳದೆ ಎÇÉಾ ಕಾರ್ಯಗಳ ಮುಗಿಸುತ್ತಲೇ ವಿದ್ಯಾಭ್ಯಾಸದತ್ತ ಮುಖ ಮಾಡಿದ್ದ. ಅಮ್ಮ ಅತೀವ ದುಃಖದಲ್ಲಿದ್ದರೂ ಮಗನ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಅವನು ಹೊರಡುವಾಗ, “”ಇದ್ಯಾವುದೋ ತಲೆಗೆ ಹಚ್ಚಕೋ ಬೇಡ. ಅವ್ರ ನಮ್ಮ ಋಣ ಮುಗೀತು” ಎಂದು ಹೇಳಿದ ಅಮ್ಮನ ಮುಖವನ್ನು ಕುಳಿತ ಬಸ್ಸಿನ ಕಿಟಕಿಯಿಂದ ನೋಡಲು ಹರಿಗೆ ಸಾಧ್ಯವಾಗಲಿಲ್ಲ.

ಕುಳಿತಲ್ಲೇ ತಲೆ ಅÇÉಾಡಿಸಿ ಬಿಟ್ಟಿದ್ದ. ಅಮ್ಮನೊಳಗೆ ಮುಗಿಯದ ರೋದನ ಹಾಗೆಯೇ ಇದ್ದಂತಿತ್ತು. ಅವಳ ಪಾಲಿಗೆ ಹರಿ ಇನ್ನೂ ಸಣ್ಣ ಹುಡುಗನಾಗಿದ್ದ. ಅವನು ತನ್ನ ತಂದೆಯ ಕಳೆದುಕೊಂಡ ದುಃಖ ವನ್ನು ತೋರಿಸಿಕೊಳ್ಳದ ಗಂಭೀರತೆಗೆ ಏನಂಥ ಕಾರಣಗಳಿರಲಿಲ್ಲ. ಮುಂದೆ ಕೆಲಸದ ಸಲುವಾಗಿ ಹರಿ ಹೊಸ ಊರು, ನಗರಗಳಿಗೆ ಹೋಗಲಾರಂಭಿಸಿದ. ಬಿಡುವಿನ ಸಮಯದಲ್ಲಿ ಬಂದು ಭೇಟಿಯಾಗಿ ಹೋಗುತ್ತಿದ್ದ. ಅವಳನ್ನು ಇಲ್ಲಿಂದ ತನ್ನಲ್ಲಿಗೆ ಕರೆಸಿಕೊಳ್ಳಬೇಕೆಂಬ ಆಸೆ ಅವನೊಳಗಿದ್ದರೂ ಅದಕ್ಕೆ ಬೇಕಾದ ತಯಾರಿ ಮಾತ್ರ ಆಗುತ್ತಿರಲಿಲ್ಲ. ಹರಿಯ ಬಹುಮುಖ್ಯ ಕನಸು ವಿದೇಶಕ್ಕೆ ಹೋಗುವುದಾಗಿದ್ದರಿಂದ ಅಮ್ಮನನ್ನು ಇಲ್ಲೇ ಬಿಟ್ಟು ತನ್ನ ಕಾರ್ಯ ಸಾಧಿಸಿಕೊಳ್ಳುವ ಮನಸ್ಸು ಮಾಡಿದ್ದ. ಅಮ್ಮನಿಗೆ ಮಗನ ಮದುವೆ ನೋಡುವ ಕನಸೊಂದಿದ್ದು ಅದಕ್ಕಾಗಿ ಒಂದಷ್ಟು ಬಾರಿ ಒತ್ತಾಯ ಮಾಡಲು ಹರಿ, “”ಅಮ್ಮ ನಾ ಈಗ್ಲೆà ಮದುವೆ ಆಗೋಲ್ಲ. ನಾ ಇನ್ನೂ ಈ ಬದುಕ್ನಲ್ಲಿ ಬೇರೆನನ್ನೂ ಸಾಧಿಸೋದು ಇದೆ. ಅದೆÇÉಾ ಆಗ್ಲಿ ಮುಂದೆ ನೋಡೋಣ” ಎಂದಿದ್ದ. 

ಅಮ್ಮ ಮತ್ತೆ ಹರಿಯನ್ನು ಒತ್ತಾಯ ಮಾಡಲಿಲ್ಲ. ತಾನು ಇದ್ದಲ್ಲೇ ಮಗನ ಬರುವಿಕೆಯ ಕಾಯುತ್ತ ತನ್ನ ಆಯಸ್ಸು ಕಳೆಯುತ್ತಿದ್ದಳು. ಇವನು ಆಗೊಮ್ಮೆ, ಈಗೊಮ್ಮೆ ಫೋನ್‌ ಮಾಡಿ ಆರು ತಿಂಗಳಿಗೊಮ್ಮೆ ಊರಿಗೆ ಬಂದು ವಾರವಿದ್ದು ಹೋಗುತ್ತಿದ್ದ. ಹರಿಗೆ ಈ ನಡುವೆ ಊರು, ಮನೆ, ಅಮ್ಮ ಇವು ಯಾವುದೂ ಅಷ್ಟು ಇಷ್ಟವಾಗುತ್ತಿರಲಿಲ್ಲವೆಂಬುದು ಅವನ ಕೆಲ ವರ್ತನೆಗಳ ಮೂಲಕ ಅಮ್ಮ ಕಂಡುಕೊಂಡಿದ್ದಳು. ಇದಕ್ಕಾಗಿ ಅವನ ಬಳಿ ತೋಟ, ಮನೆ, ಮದುವೆಯ ಪ್ರಸ್ತಾಪವೆತ್ತಲು ನೂರು ಬಾರಿ ಯೋಚಿಸುತ್ತಿದ್ದಳು. ಸ್ವಭಾವತಃ ತುಂಬಾ ಭಾವಜೀವಿಯಾದ ಅಮ್ಮ ಎಲ್ಲವನ್ನೂ ಸಹಿಸಿಕೊಂಡೇ ಅವನ ಏಳಿಗೆಯ ಕಂಡು ಖುಷಿ ಪಡುತ್ತಿದ್ದಳು. ಈ ಹುಡುಗ ಈ ಪರಿಯಾಗಿ ಬದಲಾಗಿ¨ªಾದರೂ ಏಕೆ ಎಂದು ಅವಳೊಳಗೆ ಪ್ರಶ್ನೆಯೊಂದು ಮೂಡಿತ್ತು.

ಬಾನಿನಲ್ಲಿ ರೆಕ್ಕೆ ಬಿಚ್ಚಿ ಹಾರೋ ಹಕ್ಕಿ ಪೆಟ್ಟು ತಿಂದು ಬಿದ್ದಂತೆ ಹರಿಯ ಸ್ಥಿತಿಯಾಗಿತ್ತು. ಯಾರೂ ನಿರೀಕ್ಷಿಸಲಾರದಷ್ಟು ಬದಲಾವಣೆ ಹರಿಯೊಳಗೆ ನಡೆದಿತ್ತು. ಸುಖದ ಉತ್ತುಂಗದಿಂದೊಮ್ಮೆ ಕಣ್ಣು ತೆರೆದವನಿಗೆ ಶೂನ್ಯತೆ ಬಿಟ್ಟು ಬೇರೇನೂ ಕಾಣದಂತೆ ಅವನ ಇಷ್ಟೆÇÉಾ ಯಶಸ್ಸಿನ ನಡುವೆ ಅವನ ಮನಸ್ಸಿಗೆ ಬೇಸರ ಕಾಡುತ್ತಿತ್ತು. ಸಾಲದ್ದಕ್ಕೆ ತನ್ನ ಅಮ್ಮನ ಅನಾರೋಗ್ಯ, ಅದರಿಂದ ಆಕೆಯ ಸಾವು, ಇವೆಲ್ಲವನ್ನು ಹರಿ ಆ ಕ್ಷಣಕ್ಕೆ ಅರಗಿಸಿಕೊಳ್ಳುÛವೆನೆಂಬ ಹುಂಬತನದಲ್ಲಿ ನಂಬಿದವನು, ಅದನ್ನು  ಜೀರ್ಣಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದ. ಅವನಿಗೆ ಈಗ ಈ ಕಂಪೆನಿ, ತನ್ನ ಹು¨ªೆಗಳ ಮೇಲೆ ಅಂಥ ಒಲವಿರಲಿಲ್ಲ. ಮೊದಲು ಇವುಗಳಿಂದ ಬಿಡಿಸಿಕೊಂಡು ಹೋಗಬೇಕೆನ್ನುವ ಯೋಚನೆಗಳು ಬರುತ್ತಿದ್ದವು. ಆದರೆ, ಇಲ್ಲಿಂದ ಮುಂದೆಲ್ಲಿಗೆ ಎಂದರೆ ಇಂಥಾ¨ªೆ ಹಲವು ಕಂಪೆನಿಗಳ ಪಟ್ಟಿ ಕಣ್ಣ ಮುಂದೆ ಬರುತ್ತಿದ್ದವು. ಅದು ಮತ್ತೆ ಅದೇ ಬದುಕಿಗೆ ಮರಳುವ ಕ್ರಿಯೆಯಾದ್ದರಿಂದ ಅವನಿಗದು ಸರಿ ಎನಿಸಲಿಲ್ಲ. ತನ್ನ ಅಮ್ಮನ ಸಾವಿನ ಅಂತ್ಯಕ್ರಿಯೆಯನ್ನು ನೇರ ವೀಡಿಯೋದಲ್ಲಿ ನೋಡಿದವನಿಗೆ ಖುದ್ದು ಅಲ್ಲಿ ಹೋಗಿ ಆ ವಿಧಿ, ವಿಧಾನಗಳ ಪೂರೈಸಿ ಅವಳ ಆತ್ಮಕ್ಕೆ ಶಾಂತಿ ಕೊಡಲಾಗಿರಲಿಲ್ಲ. ಎಲ್ಲವನ್ನು ಕುಳಿತಲ್ಲೇ ಹೊಸ ತಂತ್ರಜ್ಞಾನದೊಂದಿಗೆ ಇಲ್ಲಿಂದಲೇ ಸಂಪರ್ಕ ಸಾಧಿಸಿ ಅಮ್ಮನ ಕಡೆಯ ಕಾರ್ಯಗಳ ಮಾಡಿ ಮುಗಿಸಿದ್ದ. ಹಾಗೆ ಅದಕ್ಕೆ ತಗುಲುವ ಖರ್ಚುವೆಚ್ಚವನ್ನು ಅಲ್ಲಿಯವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿಗೆ ನೀಡಿದ್ದ. ಹರಿಗೆ ತನ್ನ ಈ ವರ್ತನೆ ಬಹಳ ದಿನಗಳ ನಂತರ ವಿಧ್ವಂಸಕ ಕೃತ್ಯದಂತೆ ಕಂಡಿತ್ತು. ತನ್ನ ಹೆತ್ತ ಅಮ್ಮನನ್ನ ಕೆಲಸದ ಒತ್ತಡದಿಂದಾಗಿ ನೋಡಿಕೊಳ್ಳಲು ಊರಿಗೆ ತೆರಳಲಾಗದೆ ಇಲ್ಲಿಂದಲೇ ಒಂದಷ್ಟು ವ್ಯವಸ್ಥೆಗಳ ಮಾಡಿದ್ದ.

ತಂತ್ರಜ್ಞಾನವನ್ನ ಹರಿ ಅದೆಷ್ಟರ ಮಟ್ಟಿಗೆ ತನ್ನ ಉಪಯೋಗಕ್ಕೆ ಬಳಸಿಕೊಂಡಿದ್ದನೆಂದರೆ ತನ್ನ ಅಮ್ಮನ ಆರೋಗ್ಯ ನೋಡಿಕೊಳ್ಳುವ ಮತ್ತು ಅವರ ಬಳಿಯಿದ್ದು ಸೇವೆ ಮಾಡುವ ಪ್ರತಿಯೊಬ್ಬರನ್ನು ನೇರ ಆನ್‌ಲೈನ್‌ ಮೂಲಕವೇ ಆಯ್ಕೆ ಮಾಡಿಕೊಂಡು ಅವರ ಸೇವೆಗೆ ಇಂತಿಷ್ಟು ಸಂಬಳ ನಿಶ್ಚಯಿಸಿ ಪ್ರತಿದಿನ ಅಮ್ಮನ ಚೇತರಿಕೆಯ ಬಗ್ಗೆ ವರದಿ ಪಡೆಯುತ್ತಿದ್ದ. ಹಾಗೆ ಕೆಲ ಡಾಕ್ಟರ್‌ಗಳನ್ನೂ ಕೂಡ ಕುಳಿತÇÉೆ ಸಂರ್ಪಕಿಸಿ ಅವರು ಅಮ್ಮನ ಗುಣಕ್ಕೆ ಬೇಕಾಗುವ ಎÇÉಾ ಕ್ರಮಗಳನ್ನೂ ಕೈಗೊಂಡು ಕಾರ್ಯ ನಿರ್ವಹಿಸುವಂತೆ ಹೇಳಿದ್ದ. ಹರಿಗೆ ಹಣ ಮತ್ತು ತಂತ್ರಜ್ಞಾನದ ಮೂಲಕ ಇಷ್ಟೆಲ್ಲವನ್ನು ಸಾಧಿಸಿದ ತೃಪ್ತಿಯಿತ್ತು. ಆದರೆ, ಅಮ್ಮನ ನೇರವಾಗಿ ಭೇಟಿ ಮಾಡಿ ಅವಳ ಉಪಚರಿಸುವ ಕ್ರಿಯೆಗೆ ಮಾತ್ರ ಅವನು ಈ ಕೆಲಸದ ಒತ್ತಡದಿಂದ ಬಿಡುವು ಮಾಡಿಕೊಳ್ಳಬೇಕೆಂದು ಚಿಂತಿಸಲಿಲ್ಲ. ಯಾರು ಎಷ್ಟು ಕೇಳಿದರೂ ಕೊಡುವಷ್ಟು ಹಣವಿದ್ದು ಅದರಿಂದಲೇ ಮನೆ ತುಂಬಾ ವ್ಯವಸ್ಥೆ ಮಾಡಿದ್ದ. ಅಮ್ಮನಿಗೆ ಮಗನು ಬಂದು ನೋಡದೇ ಸಬೂಬುಗಳ ಹೇಳುತ್ತಿರುವುದು ವಿಷಾದ ತರಿಸಿತ್ತು. ಮನೆ ತುಂಬಾ ಅವಳ ಆರೈಕೆಗೆ ಆಳು, ಕಾಳುಗಳಿದ್ದರೂ ಅವಳಿಗೆ ಹರಿಯ ಹೊರತು ಬೇರ್ಯಾರೂ ಬೇಕಿರಲಿಲ್ಲ. ಇದನ್ನು ಮನಗಂಡ ಅನೇಕರು ಹರಿಗೆ ಒಮ್ಮೆ ಬಂದು ನೋಡುವಂತೆ ಹೇಳುತ್ತಿದ್ದರು. ವೀಡಿಯೋ ಮೂಲಕ ತನ್ನ ಅಮ್ಮನ ಸ್ಥಿತಿಗತಿಗಳ ಕಂಡವನಿಗೆ ಅಲ್ಲಿಗೆ ಹೋಗಿ ತಾನು ಮಾಡುವುದಾದರೂ ಏನೆಂಬ ಪ್ರಶ್ನೆಗಳು ಕಾಡುತ್ತಿದ್ದವು. ಸಾಲದ್ದಕ್ಕೆ ಅವನ ಕಂಪೆನಿಯು ಬಹಳ ಮುಖ್ಯವಾದ ಆ ದೇಶದ ಆಡಳಿತ ಸರ್ಕಾರ ವಹಿಸಿದ ಕಾರ್ಯ ಒಂದನ್ನು ಅವನ ಹೆಗಲಿಗೆ ಕೊಟ್ಟಿತ್ತು. ಹಾಗೆ ಅವನ ಮೇಲೆ ಇದನ್ನ ಯಶಸ್ವಿಯಾಗಿ ಸಾಧಿಸುವನೆಂಬ ವಿಶ್ವಾಸ ಇರಿಸಿತ್ತು. ಇದು ಸಾಧ್ಯವಾದರೆ ಮುಂದೆ ಹರಿಯ ಬದುಕಿನ ಘಟ್ಟವೇ ಯಾರೂ ನಿರೀಕ್ಷಿಸಲಾಗದ ಒಂದು ಹಂತಕ್ಕೆ ತಲುಪುವುದು ಖಾತ್ರಿಯಾಗಿತ್ತು. ಹರಿ ತನ್ನ ಅಮ್ಮ ಮತ್ತು ಕೆಲಸಗಳ ನಡುವಿನ ಗೊಂದಲದಲ್ಲಿ ಕೊನೆಗೆ ಆಯ್ಕೆ ಮಾಡಿಕೊಂಡಿದ್ದು ಕೆಲಸವನ್ನೇ. ಅಮ್ಮನ ಸಲುವಾಗಿ ಮತ್ತಷ್ಟೂ ಸೇವೆ, ಸೌಲಭ್ಯಗಳ ಒದಗಿಸಿಕೊಟ್ಟು ಇಲ್ಲಿ ತನ್ನ ಕೆಲಸದಲ್ಲಿ ಮುಳುಗಿದ. 

ನಿ¨ªೆಯಿಂದ ಎದ್ದವನು ಕಣ್ಣು ಬಿಟ್ಟು ನೋಡಲು ಅವನ ಸಣ್ಣ ಲ್ಯಾಪ್‌ಟಾಪ್‌ ಪರದೆ ಮೇಲೆ ಅಮ್ಮನ ಅಂತ್ಯಕ್ರಿಯೆ ದೃಶ್ಯಗಳೆಲ್ಲವೂ ಮುಗಿದು ಹೋಗಿದ್ದವು. ಅಲ್ಲಿಂದ ಎದ್ದು ಆಫೀಸ್‌ಗೆ ಸ್ನಾನ ಮಾಡಿ ಹೊರಟವನೇ ರಾತ್ರಿ ಅರೆನಿ¨ªೆಯಲ್ಲಿ ಕಂಡ ಅಮ್ಮನ ಮುಖ ನೆನಪಾಗುತ್ತಿತ್ತು. ಈ ವಾರ ಅವನ ಪ್ರಾಜೆಕ್ಟ್ ಕೆಲಸ ಪೂರ್ತಿ ಮುಗಿಯುತ್ತದೆ. ಇಲ್ಲಿಯ ತನಕ ತನ್ನ ಈ ಕಾರ್ಯದಲ್ಲಿ ಯಾವ ಲೋಪವಿರದೆ ಕಾರ್ಯ ನಿರ್ವಹಿಸಿದ ಹರಿಗೆ ಸಮಾಧಾನವಿತ್ತು. ಅದಕ್ಕೆ ಮೆಚ್ಚುcಗೆ, ಪ್ರಶಂಸೆಗಳ ಸುರಿಮಳೆಯಾಗುತ್ತಲೇ ಹರಿಯು ತನ್ನ ಅಮ್ಮನ ಶವ ಸಂಸ್ಕಾರದ ದೃಶ್ಯವನ್ನು ಮತ್ತೆ, ಮತ್ತೆ ರೀವೈಂಡ್‌ ಮಾಡಿ ನೋಡತೊಡಗಿದ. ಅವನು ಇದರಿಂದ ತಪ್ಪಿಸಿಕೊಳ್ಳ ಬೇಕೆಂದು ಎಷ್ಟು ಪ್ರಯತ್ನಿಸಿದರೂ ಅದು ಅವನಿಗೆ ಬೇರೆ ಬೇರೆ ರೀತಿಗಳಲ್ಲಿ ಕಾಡುತ್ತ ತನ್ನ ಅಮ್ಮನ ಸಾವಿಗೆ ತಾನು ತೋರಿದ ಪ್ರತಿಕ್ರಿಯೆಗೆ ಬೇಸರಗೊಳ್ಳತೊಡಗಿದ. 

ಅಲ್ಲಿನ ಪ್ರತಿಯೊಬ್ಬರಿಗೆ ಆನ್‌ಲೈನ್‌ ಮೂಲಕವೇ ಪೇಮೆಂಟ್‌ ಮಾಡಿದ್ದರಿಂದ ಅಮ್ಮನ 11 ದಿನಗಳ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದ್ದರು. ಹರಿಯೊಳಗೆ ಯಾವುದೋ ಇನ್ನಿಲ್ಲದ ನೋವೊಂದು ಆವರಿಸಿಕೊಂಡು ಅವನ ಬದುಕಿನ ಲಯವನ್ನೆ ಬದಲಾಯಿಸಿ ಬಿಟ್ಟಿತ್ತು. ಯಾವುದರಲ್ಲೂ ಆಸಕ್ತಿಯಿರದೆ ಕಂಪೆನಿಯ ಮುಖ್ಯ ಮೀಂಟಿಗ್‌ಗಳಲ್ಲಿ ಅಧೀರನಾಗಿ ಕುಳಿತು ಕಾಲ ಕಳೆದು ಬರುತ್ತಿದ್ದ. ಹರಿಯ ಆಪ್ತ ಸ್ನೇಹಿತನೊಬ್ಬ ಇವನ ಈ ವರ್ತನೆಗಳ ಕಂಡು, “”ಮೊದುÉ ನೀ ಈ ದೇಶ ಬಿಟ್ಟು ಹೊರಡು. ನಿನೆY ನುಂಗ್ಲಿಕ್ಕೆ ಸುಲಭವಾದಷ್ಟು ಜೀರ್ಣಿಸಿಕೊಳ್ಳೋದಕ್ಕೆ ಆಗಲಿಲ್ಲ. ಹಕ್ಕಿ, ಹಾರಾಟ ಅಂತ ಏನೇನೋ ಸಿದ್ಧಾಂತಗಳನ್ನು  ಇಟ್ಟುಕೊಂಡರೂ ಕೊನೆಗೆ ನೆಲಕ್ಕೆ ಇಳಿಯೋದು ತಪ್ಪಲಿಲ್ಲ ನೋಡು” ಎಂದು ಆತ ಮಾತುಗಳನ್ನು ಆಡುತ್ತಿದ್ದರೆ ಹರಿ ಅದರ ಪರಿವೆ ಇರದಂತೆ ಅಲ್ಲಿಂದ ಸುಮ್ಮನೆ ನಡೆದು ದೂರ ಬಂದಿದ್ದ. ಅವನ ಬಯಸಿ ಬರುತ್ತಿದ್ದ ಕೆಲವು ಹೆಣ್ಣು ಮಕ್ಕಳು ಕೂಡ ತೃಣಗಳಂತೆ ಕಂಡರು. ಹರಿ ಎಂದೋ ಓದಿದ ಕೆಲ ಸಾಹಿತ್ಯದ ಪುಸ್ತಕಗಳ ನೆನಪು ಮಾಡಿಕೊಂಡವನೇ ಮತ್ತೆ ಓದಲೆಂದು ತರಿಸಿಕೊಂಡ. ಈಗ ಅವನ ಬಹುತೇಕ ಸಮಯ ಮನೆಯಲ್ಲಿ ಓದುವುದರೊಂದಿಗೆ, ಬೀದಿಗಳ ಸುತ್ತುತ್ತ ಹೊಸ ಜನಗಳ ಜೀವನಕ್ರಮಗಳ ನೋಡುವುದರೊಂದಿಗೆ ಕಳೆಯುತ್ತಿತ್ತು. ತನ್ನ ಕಂಪೆನಿಗೆ ರೆಸಿಗ್‌ನೇಶನ್‌ ಲೆಟರ್‌ ಒಂದನ್ನು ಕಳುಹಿಸಿದ್ದ. ಆದರೆ, ಕಂಪೆನಿ ಅದನ್ನು  ಒಪ್ಪಿಕೊಂಡಿರದೆ ಪೆನಿxಂಗ್‌ನಲ್ಲಿ ಇರಿಸಿತ್ತು. 

ಹರಿಯ ಸ್ಮತಿಪಟಲದಲ್ಲಿ ಈಗ ಅಮ್ಮ, ಅಪ್ಪ ಬಾಲ್ಯದ ದಿನಗಳ ನೆನಪುಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದವು. ತಾನು ತೋರಿದ ಅಸಡ್ಡೆಗಳೆಲ್ಲ ಒಂದೊಂದೇ ನೆನಪಿಗೆ ಬರಲು ಅವನ ಕಣ್ಣುಗಳು ಒ¨ªೆಯಾಗುತ್ತಿದ್ದವು. ತಾನು ಏನನ್ನು ಬಯಸಿ ಅಲ್ಲಿಂದ ಇಲ್ಲಿಗೆ ಬಂದೇನೋ ಅವೆಲ್ಲವನ್ನು ಸಾಧಿಸಿದಂತೆ ಈಗ ಅವನ ಕಣ್ಣಮುಂದೆ ಏನೆಂಬ ಪ್ರಶ್ನೆಗೆ ತನ್ನ ಊರಿನ ಹಳೇ ಮನೆ, ಪಾಳು ಬಿದ್ದಿರಬಹುದಾದ ತುಂಡು ತೋಟಗಳು ಎದುರಾಗುತ್ತಿದ್ದವು. ಮದುವೆಗೆಂದು ಎರಡು, ಮೂರು ದೊಡ್ಡ ಪ್ರಪೋಸಲ್‌ಗ‌ಳು ಬಂದಿದ್ದರೂ ಅವುಗಳ ಮೇಲೆ ಹರಿಗೆ ಆಸಕ್ತಿ ಇರಲಿಲ್ಲ. ಅವನು ಮತ್ತೇನೋ ಹುಡುಕುವ ಸ್ಥಿತಿಯಲ್ಲಿದ್ದ. ತನ್ನ ಅಮ್ಮನ ಅನಾರೋಗ್ಯದ ಕಡೆಯ ದಿನಗಳಲ್ಲಿ ಅವನು ನೀಡಿದ ಸೇವೆ, ಸೌಲಭ್ಯ, ಸವಲತ್ತುಗಳೆಲ್ಲ ತಾನು ಸಾಧಿಸಿಕೊಂಡ ದರ್ಪದ ಸಂಕೇತದಂತೆ ತೋರುತ್ತಿತ್ತು. ತನ್ನ ಅಮ್ಮ ಅಪಾರವಾಗಿ ತನ್ನನ್ನು ಪ್ರೀತಿಸುವಾಗ ತಾನು ಕ್ಷಣವೂ ಕರಗದೆ ಈ ಅಧಿಕಾರ, ಯಶಸ್ಸುಗಳ ಬೆನ್ಹತ್ತಿದ್ದು ತೀರಾ ಕ್ಷುಲಕವೆನಿಸಿತ್ತು. ಇನ್ನೂ ನೇರ ಚಿತ್ರೀಕರಣದ ಮೂಲಕ ತನ್ನ ಅಮ್ಮನ ಶವಸಂಸ್ಕಾರದ ದೃಶ್ಯಗಳ ನೋಡಿದ್ದು ತನ್ನ ಬೌದ್ಧಿಕತನದ ದಿವಾಳಿಯಂತೆ ಕಂಡುಬಂತು. ಹರಿ ಪ್ರಯತ್ನಪೂರ್ವಕವಾಗಿ ಎಷ್ಟೇ ಸರ್ಮರ್ಥಿಸಿಕೊಳ್ಳಲು ಹೊರಟರೂ ಅದು ಅವನ ಅಪರಾಧಿ ಸ್ಥಾನಕ್ಕೆ ತಂದು ನಿಲ್ಲಿಸಿತ್ತು. ಇದು ಅವನೊಳಗಿನ ಭ್ರಮೆ ಎಂದು ಭಾವಿಸಿಕೊಂಡು ಮುನ್ನೆಡೆಯಲು ಹೊರಟರೂ ಸದ್ಯದ ಮಟ್ಟಕ್ಕೆ ಅವನು ಈ ಪ್ರಪಂಚದಲ್ಲಿ ಒಂಟಿಯಾಗಿದ್ದ. ಇದರಿಂದ ತಪ್ಪಿಸಿಕೊಳ್ಳುವ ಏಕೈಕ ಮಾರ್ಗವಾಗಿ ಹರಿ ಮತ್ತೆ ತನ್ನ ಅಮ್ಮನ ಚಿತಾಭಸ್ಮವನ್ನು ಎÇÉಾ ಅಪರಕರ್ಮಗಳೊಂದಿಗೆ ನದಿಗೆ ಬಿಡಲು ತೀರ್ಮಾನಿಸಿದ. 

ಇನ್ನು ಆತ್ಮತೃಪ್ತಿಗೆ ಕೆಲಸಗಳನ್ನು ಮಾಡುವುದೆಂದು ಹರಿ ನಿಶ್ಚಯಿಸುತ್ತಲೇ ತನ್ನ ದೇಶಕ್ಕೆ ತೆರಳುವ ಫ್ಲೈಟ್‌ ಟಿಕೆಟ್‌ ಬುಕ್‌ ಆಗಿತ್ತು. ಮುಂದೆ ಅಲ್ಲಿ ಏನು, ಹೇಗೆಂಬ ಯಾವ ಪ್ರಶ್ನೆಗಳೂ ಅವನನ್ನು ಕಾಡಲಿಲ್ಲ.

– ಆರ್‌. ಪವನ್‌ಕುಮಾರ್‌

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

D. R. Bendre: ಹೀಗಿದ್ದರು ಬೇಂದ್ರೆ…

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

11

Shopping Time: ಶಾಪಿಂಗ್‌ ಎಂಬ ಸಿಹಿಯಾದ ಶಾಪ!

10

Badami Banashankari Festival: ಬನಶಂಕರಿ ಜಾತ್ರ್ಯಾಗ ನಾಟಕಗಳ ಸುಗ್ಗಿ ಜಾತ್ರೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.